ಬಿಗ್ ನ್ಯೂಸ್
G.L. Acharya Jewellers-ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಚಿನ್ನಾಭರಣ. ವಜ್ರದ ಆಭರಣ ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆ; ಇನ್ನು ಕೊನೆಯ 3 ದಿನಗಳು ಮಾತ್ರ
ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲಸ್‌ರ್ ನಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲು “ದೀಪಾವಳಿ ವಿಶೇಷ ಕೊಡುಗೆಯನ್ನು ಸಂಸ್ಥೆ ಪ್ರಕಟಿಸಿದೆ. ಈ ಆಫರ್ ಇನ್ನು ಕೇವಲ 3 ದಿನಗಳು ಮಾತ್ರ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲಸ್‌ರ್ ನಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲು “ದೀಪಾವಳಿ ವಿಶೇಷ ಕೊಡುಗೆಯನ್ನು ಸಂಸ್ಥೆ ಪ್ರಕಟಿಸಿದೆ. ನವೆಂಬರ್ 5ರಿಂದ 11ರವರೆಗೆ ಗ್ರಾಹಕರಿಗೆ ಚಿನ್ನಾಭರಣಗಳ VA ಶುಲ್ಕದ ಮೇಲೆ 30% ನೇರ ರಿಯಾಯಿತಿ. ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ ಗೆ ರೂ.8000/- ನೇರ ರಿಯಾಯಿತಿ ಅಲ್ಲದೆ ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ರೂ.8000/- ನೇರ ರಿಯಾಯಿತಿ ನೀಡಲಾಗುವುದು.
ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ನಗದು ಪಾವತಿಸಿ ಚಿನ್ನಾಭರಣ ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಅತ್ಯಂತ ಸೂಕ್ತ ಸಮಯವಾಗಿದ್ದು, ಚಿನ್ನ ಖರೀದಿಸಲು ಇದೊಂದು ಸುವರ್ಣಾವಕಾಶವಾಗಿದೆ. ಯಾವುದೇ ಜ್ಯುವೆಲ್ಲರ್ಸ್‌ನಿಂದ ಖರೀದಿಸಿದ ಹಳೆಯ 91.6% ಚಿನ್ನಾಭರಣಗಳ ಎಕ್ಸ್‌ಚೇಂಜ್ ದರದ ಮೇಲೆ 0% ಕಡಿತ. ಹಬ್ಬದ ಸಂದರ್ಭದಲ್ಲಿ ಹೊಸ ವಿನ್ಯಾಸದ ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಈ ಕೊಡುಗೆ ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಗ್ರಾಹಕರು ಚಿನ್ನದ ಉಳಿತಾಯ ಯೋಜನೆಗೆ ಸೇರ್ಪಡೆಯಾಗುವ ಅವಕಾಶವೂ ಇದೆ. ಯೋಜನೆಗೆ ಸೇರ್ಪಡೆಯಾಗಿ ನಿಗದಿತ ಅವಧಿ ಪೂರ್ಣಗೊಳಿಸಿದ ಬಳಿಕ ಮುಂದಿನ ವರ್ಷ ಇದೇ ಹಬ್ಬದ ಸಂಭ್ರಮದ ಸಮಯದಲ್ಲಿ ಚಿನ್ನಾಭರಣ ಖರೀದಿಸಲು ಅವಕಾಶವಿದ್ದು, ಹಬ್ಬದ ಸಂದರ್ಭದಲ್ಲಿ ಉಳಿತಾಯದೊಂದಿಗೆ ಚಿನ್ನ ಖರೀದಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸಲಾಗಿದೆ.
ಗ್ರಾಹಕರ ಉತ್ತಮ ಸ್ಪಂದನೆ ಗಳಿಸಿದ್ದು ನಮ್ಮ ಎಲ್ಲಾ ಶಾಖೆಗಳಾದ ಸುಳ್ಯ. ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿ ಲಭ್ಯವಿದೆ. ಈ ಆಫರ್ ಇನ್ನು ಕೇವಲ 3 ದಿನಗಳು ಮಾತ್ರ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ
Pradeep Poojari case-ಪ್ರದೀಪ್ ಪೂಜಾರಿ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು: ಮೂರು ಪ್ರಕರಣಗಳ ತನಿಖೆ ಸಿಐಡಿಗೆ ವರ್ಗಾವಣೆ
ಪೆರ್ಡೂರು ಮೂಲದ ಪ್ರದೀಪ್ ಪೂಜಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ (ಸಿಐಡಿ) ವರ್ಗಾಯಿಸಲಾಗಿದೆ. ಡಿಜಿ ಮತ್ತು ಐಜಿಪಿ ಅವರ ಆದೇಶದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೋಮವಾರ ತಿಳಿಸಿದ್ದಾರೆ.
ಉಡುಪಿ: ಪೆರ್ಡೂರು ಮೂಲದ ಪ್ರದೀಪ್ ಪೂಜಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ (ಸಿಐಡಿ) ವರ್ಗಾಯಿಸಲಾಗಿದೆ. ಡಿಜಿ ಮತ್ತು ಐಜಿಪಿ ಅವರ ಆದೇಶದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೋಮವಾರ ತಿಳಿಸಿದ್ದಾರೆ.
ಪ್ರದೀಪ್ ಪೂಜಾರಿ ಸಾವಿನ ಪ್ರಕರಣ ಕರಾವಳಿ ಭಾಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣದ ತನಿಖೆಯ ಬಗ್ಗೆ ಮೃತನ ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳು ಹಲವು ಅನುಮಾನಗಳನ್ನು ವ್ಯಕ್ತಪಡಿಸಿ, ತನಿಖೆಯನ್ನು ಸಿಐಡಿ ಅಥವಾ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು. ಸಿಐಡಿ ತನಿಖೆಗೆ ವಹಿಸದಿದ್ದರೆ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು.
ಇದರ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಕರ್ತವ್ಯ ಲೋಪದ ಬಗ್ಗೆಯೂ ವಿಚಾರಣೆ ನಡೆಸಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ನಡೆದ ತನಿಖೆಯ ವರದಿ ಆಧರಿಸಿ ಹಿರಿಯಡ್ಕ ಪೊಲೀಸ್ ಠಾಣೆಯ ಪಿಎಸ್‌ಐ ಅವರನ್ನು ಪಶ್ಚಿಮ ವಲಯದ ಡಿಐಜಿ ಕಚೇರಿಗೆ ಲಗತ್ತಿಸಲಾಗಿತ್ತು. ಅಲ್ಲದೆ, ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಮಧ್ಯಪ್ರದೇಶ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು.
ಅಂತರ ರಾಜ್ಯ
Astrologer-2029ರಲ್ಲೂ ಮೋದಿ ಪ್ರಧಾನಿ, ಮುಂದಿನ 15 ವರ್ಷ ಬಿಜೆಪಿ ಆಡಳಿತ? ಜ್ಯೋತಿಷಿ ಆಸ್ಟ್ರೋ ಶರ್ಮಿಷ್ಠಾ ಭವಿಷ್ಯವಾಣಿ ಭಾರೀ ಚರ್ಚೆ..!
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿ ಮುಂದುವರಿಯಲಿದ್ದು, 2029ರ ಲೋಕಸಭಾ ಚುನಾವಣೆಯಲ್ಲೂ ಅವರ ನಾಯಕತ್ವದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಅಷ್ಟೇ ಅಲ್ಲ, ಮುಂದಿನ 14ರಿಂದ 15 ವರ್ಷಗಳ ಕಾಲ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿರಲಿದೆ ಎಂದು ಜ್ಯೋತಿಷಿ ಆಸ್ಟ್ರೋ ಶರ್ಮಿಷ್ಠಾ ಭವಿಷ್ಯ ನುಡಿದಿದ್ದಾರೆ.
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿ ಮುಂದುವರಿಯಲಿದ್ದು, 2029ರ ಲೋಕಸಭಾ ಚುನಾವಣೆಯಲ್ಲೂ ಅವರ ನಾಯಕತ್ವದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಅಷ್ಟೇ ಅಲ್ಲ, ಮುಂದಿನ 14ರಿಂದ 15 ವರ್ಷಗಳ ಕಾಲ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿರಲಿದೆ ಎಂದು ಜ್ಯೋತಿಷಿ ಆಸ್ಟ್ರೋ ಶರ್ಮಿಷ್ಠಾ ಭವಿಷ್ಯ ನುಡಿದಿದ್ದಾರೆ. ದೇಶದ ರಾಜಕೀಯ ಹಾಗೂ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಕುರಿತು ಅವರು ನೀಡಿರುವ ಈ ಭವಿಷ್ಯವಾಣಿ ಇದೀಗ ರಾಜಕೀಯ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
‘ಇಂಡಿಯಾ ಟುಡೇ’ ಜಾಲತಾಣದ ‘ಅನ್‌ಪಾಲಿಟಿಕ್ಸ್’ ದೀಪಾವಳಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಆಸ್ಟ್ರೋ ಶರ್ಮಿಷ್ಠಾ, ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯದ ಕುರಿತು ತಮ್ಮ ವಿಶ್ಲೇಷಣೆ ಹಂಚಿಕೊಂಡಿದ್ದಾರೆ.
2027ರಲ್ಲಿ ಪ್ರಧಾನಿ ಮೋದಿ ಹಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೂ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ. 2029ರ ಲೋಕಸಭಾ ಚುನಾವಣೆಯಲ್ಲಿಯೂ ಅವರ ನಾಯಕತ್ವದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
ಮುಂದಿನ 15 ವರ್ಷ ಬಿಜೆಪಿ ಆಡಳಿತ?
ಬಿಜೆಪಿ ಪಕ್ಷದ ಜಾತಕವನ್ನು ಪರಿಶೀಲಿಸಿರುವುದಾಗಿ ಹೇಳಿರುವ ಶರ್ಮಿಷ್ಠಾ, ಮುಂದಿನ 14ರಿಂದ 15 ವರ್ಷಗಳ ಕಾಲ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾಗುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ.
ಇರಾನ್ ಒಳಗೊಂಡಿರುವ ಅಂತಾರಾಷ್ಟ್ರೀಯ ಸಂಘರ್ಷವು 2027ರ ಅಂತ್ಯದವರೆಗೂ ಮುಂದುವರಿಯಬಹುದು. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಮತ್ತು ಹಲವು ಸವಾಲುಗಳು ಎದುರಾದರೂ ಭಾರತದ ಆರ್ಥಿಕತೆ ತುಲನಾತ್ಮಕವಾಗಿ ಸದೃಢವಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯೋಗಿ ಆದಿತ್ಯನಾಥ್ ರಾಷ್ಟ್ರ ರಾಜಕಾರಣಕ್ಕೆ?
ಮುಂಬರುವ ವಿಧಾನಸಭಾ ಚುನಾವಣೆಗಳ ಬಗ್ಗೆಯೂ ಆಸ್ಟ್ರೋ ಶರ್ಮಿಷ್ಠಾ ಭವಿಷ್ಯ ನುಡಿದಿದ್ದಾರೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಕೇಂದ್ರ ಸಚಿವ ಸಂಪುಟ ಸೇರುವ ಸಾಧ್ಯತೆಯಿದ್ದು, ಅವರಿಗೆ ರಕ್ಷಣಾ ಸಚಿವಾಲಯದ ಜವಾಬ್ದಾರಿ ದೊರೆಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ಆಸ್ಟ್ರೋ ಶರ್ಮಿಷ್ಠಾ ಅವರ ಭವಿಷ್ಯವಾಣಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ಹೇಳಿಕೆಯನ್ನು ಸ್ವಾಗತಿಸಿದರೆ, ಇನ್ನು ಕೆಲವರು ಜ್ಯೋತಿಷ್ಯದ ಆಧಾರದಲ್ಲಿ ಇಂತಹ ರಾಜಕೀಯ ಭವಿಷ್ಯ ನುಡಿಯಲು ಯಾವ ಲೆಕ್ಕಾಚಾರ ಬಳಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಡಾ. ಗೌತಮ್ ಘೋಷ್ ಎಂಬವರು, ಬಿಜೆಪಿ ಮುಂದಿನ 14 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ ಎಂಬುದನ್ನು ಜ್ಯೋತಿಷ್ಯದ ದೃಷ್ಟಿಯಿಂದ ಸಾಬೀತುಪಡಿಸುವ ಲೆಕ್ಕಾಚಾರಗಳನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದ್ದಾರೆ. ಇಂತಹ ಭವಿಷ್ಯವಾಣಿಗೆ ನಿಜವಾದ ಲೆಕ್ಕಾಚಾರಗಳಿದ್ದರೆ ಅದನ್ನು ಚರ್ಚೆಯಲ್ಲಿಯೇ ಮಂಡಿಸುವಂತೆ ಅವರು ಆಗ್ರಹಿಸಿದ್ದಾರೆ.
ಟೀಕಾಕಾರರಿಗೆ ಆಸ್ಟ್ರೋ ಶರ್ಮಿಷ್ಠಾ ತಿರುಗೇಟು
ತಮ್ಮ ಭವಿಷ್ಯವಾಣಿಯನ್ನು ಟೀಕಿಸಿದವರಿಗೆ ಆಸ್ಟ್ರೋ ಶರ್ಮಿಷ್ಠಾ ಎಕ್ಸ್ ಖಾತೆಯ ಮೂಲಕ ತಿರುಗೇಟು ನೀಡಿದ್ದಾರೆ.
ತಮ್ಮ 100 ಭವಿಷ್ಯವಾಣಿಗಳ ಪೈಕಿ ತಪ್ಪಾಗಿರುವ ಮೂರು ಭವಿಷ್ಯವಾಣಿಗಳನ್ನು ಮಾತ್ರ ಮುಂದಿಟ್ಟುಕೊಂಡು ಕೆಲವರು ಟ್ರೋಲ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಭವಿಷ್ಯವಾಣಿಗಳು ತಪ್ಪಾಗುವ ಸಾಧ್ಯತೆಯಿದ್ದು, ಅದರಲ್ಲೂ ನಿಖರವಾದ ದತ್ತಾಂಶಗಳನ್ನು ಸಂಗ್ರಹಿಸುವುದು ಕಷ್ಟವಾಗಿರುವ ಸಂದರ್ಭಗಳಲ್ಲಿ ಇಂತಹ ವ್ಯತ್ಯಾಸಗಳು ಸಹಜ ಎಂದು ಹೇಳಿದ್ದಾರೆ.
ತಾವು ಈ ಹಿಂದೆ ತಮ್ಮ ಪೋಸ್ಟ್‌ಗಳಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಹಿರಂಗವಾಗಿ ಶ್ಲಾಘಿಸಿದ್ದರೂ ಟೀಕಾಕಾರರು ಅದನ್ನು ಉಲ್ಲೇಖಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ತಮ್ಮನ್ನು ಟೀಕಿಸುವವರಿಂದಲೇ ಪ್ರಚಾರ ಹೆಚ್ಚಾಗುತ್ತಿದೆ ಎಂದು ವ್ಯಂಗ್ಯವಾಡಿದ್ದು, ಟೀಕೆಗಳನ್ನು ತಾನು ಆನಂದಿಸುತ್ತಿರುವುದಾಗಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಹಿಂದೆಯೂ ನೀಡಿದ್ದರು ರಾಜಕೀಯ ಭವಿಷ್ಯವಾಣಿ
ಇದಕ್ಕೂ ಮೊದಲು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೇರುವುದಿಲ್ಲ ಎಂದು ಆಸ್ಟ್ರೋ ಶರ್ಮಿಷ್ಠಾ ಭವಿಷ್ಯ ನುಡಿದಿದ್ದರು. ಇದೀಗ ಪ್ರಧಾನಿ ಮೋದಿ, ಬಿಜೆಪಿ ಹಾಗೂ ವಿವಿಧ ರಾಜ್ಯಗಳ ರಾಜಕೀಯ ಭವಿಷ್ಯದ ಕುರಿತು ಅವರು ನೀಡಿರುವ ಹೇಳಿಕೆಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.
ಬಿಗ್ ನ್ಯೂಸ್
ChatGPT- ಪತ್ನಿಗೆ ಹತ್ಯೆ ಸಂಚು ರೂಪಿಸಲು ಸಲಹೆ ನೀಡಿದ ಆರೋಪ: ಚಾಟ್‌ಜಿಪಿಟಿ ವಿರುದ್ಧ ಪತಿ ಕಾನೂನು ದಾವೆ..!
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನನ್ನು ಹತ್ಯೆ ಮಾಡುವಂತೆ ಪರಿತ್ಯಕ್ತ ಪತ್ನಿಗೆ ಸಲಹೆ ನೀಡಿದೆ ಎಂದು ಆರೋಪಿಸಿ ಅಮೆರಿಕದ ನಾರ್ತ್ ಕೆರೊಲಿನಾ ಮೂಲದ ಜೇಮ್ಸ್ ಗೇಟ್ಸ್ ಎಂಬವರು ಎಐ ಆಧಾರಿತ ಚಾಟ್‌ಬಾಟ್ ಚಾಟ್‌ಜಿಪಿಟಿ ವಿರುದ್ಧ ಕಾನೂನು ದಾವೆ ಹೂಡಿದ್ದಾರೆ.
ವಾಷಿಂಗ್ಟನ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನನ್ನು ಹತ್ಯೆ ಮಾಡುವಂತೆ ಪರಿತ್ಯಕ್ತ ಪತ್ನಿಗೆ ಸಲಹೆ ನೀಡಿದೆ ಎಂದು ಆರೋಪಿಸಿ ಅಮೆರಿಕದ ನಾರ್ತ್ ಕೆರೊಲಿನಾ ಮೂಲದ ಜೇಮ್ಸ್ ಗೇಟ್ಸ್ ಎಂಬವರು ಎಐ ಆಧಾರಿತ ಚಾಟ್‌ಬಾಟ್ ಚಾಟ್‌ಜಿಪಿಟಿ ವಿರುದ್ಧ ಕಾನೂನು ದಾವೆ ಹೂಡಿದ್ದಾರೆ.
2025ರಲ್ಲಿ ತಮಗೆ ನಿಗೂಢ ಕಾಯಿಲೆ ಕಾಣಿಸಿಕೊಂಡಿತ್ತು. ವೈದ್ಯರಿಂದಲೂ ಕಾಯಿಲೆಯ ಕಾರಣ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಪತ್ನಿಯ ಪರ್ಸ್‌ನಲ್ಲಿ ಆಕೆ ಬರೆದಿಟ್ಟಿದ್ದ ಚೀಟಿಯೊಂದು ಸಿಕ್ಕಿತ್ತು ಎಂದು ಜೇಮ್ಸ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಊಟದಲ್ಲಿ ಕಣಗಿಲೆ ಗಿಡದ ರಸ ಬೆರೆಸುವುದು ಸೇರಿದಂತೆ ಪತಿಯನ್ನು ಹತ್ಯೆ ಮಾಡುವ ವಿವಿಧ ವಿಧಾನಗಳ ಬಗ್ಗೆ ಆ ಚೀಟಿಯಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಈ ಆಯ್ಕೆಗಳನ್ನು ಚಾಟ್‌ಜಿಪಿಟಿ ನೀಡಿದ ಸಲಹೆಯ ಮೇರೆಗೆ ಸಿದ್ಧಪಡಿಸಲಾಗಿದೆ ಎಂದು ಜೇಮ್ಸ್ ಆರೋಪಿಸಿದ್ದಾರೆ.
ಚಾಟ್‌ಜಿಪಿಟಿಯ ಸಲಹೆಯಿಂದಾಗಿ ತನ್ನ ಜೀವಕ್ಕೆ ಅಪಾಯ ಉಂಟಾಗಿದೆ ಎಂದು ಆರೋಪಿಸಿರುವ ಅವರು, ಸಂಸ್ಥೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
-
ಪುತ್ತೂರು21 hours agoPuttur-ಪುತ್ತೂರಿನಲ್ಲಿ ಮಹಿಳೆಯ ಹಿಂಬಾಲಿಸಿ ಅನುಚಿತ ವರ್ತನೆ ಆರೋಪ: ಯುವಕನ ಬಂಧನ
-
ಅಂತರ ರಾಜ್ಯ18 hours agoAstrologer-2029ರಲ್ಲೂ ಮೋದಿ ಪ್ರಧಾನಿ, ಮುಂದಿನ 15 ವರ್ಷ ಬಿಜೆಪಿ ಆಡಳಿತ? ಜ್ಯೋತಿಷಿ ಆಸ್ಟ್ರೋ ಶರ್ಮಿಷ್ಠಾ ಭವಿಷ್ಯವಾಣಿ ಭಾರೀ ಚರ್ಚೆ..!
-
ಅಪರಾಧ20 hours agoNMC ಹೆಲ್ತ್ಕೇರ್ ಬಹುಕೋಟಿ ವಂಚನೆ ಪ್ರಕರಣ: ಬಿ.ಆರ್. ಶೆಟ್ಟಿ, ಪ್ರಶಾಂತ್ ಮಂಗಾಟ್ಗೆ ಕೋರ್ಟ್ ಶಾಕ್; 5.397 ಬಿಲಿಯನ್ ಡಾಲರ್ ಹೊಣೆಗಾರಿಕೆ ನಿಗದಿ..!
-
ಅಪರಾಧ21 hours agoKanyana-ಕನ್ಯಾನದಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ಪತ್ತೆ: ಲಾರಿ ವಶಕ್ಕೆ
-
ದಿನ ಭವಿಷ್ಯ17 hours agoDaily Horoscope-ದಿನ ಭವಿಷ್ಯ : 12 ರಾಶಿಗಳ ಇಂದಿನ ರಾಶಿಫಲ ಹೀಗಿದೆ..!
-
ಅಪರಾಧ18 hours agoPuttur-ಪುತ್ತೂರು: ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಪೋಕ್ಸೋ ಆರೋಪಿಗೆ ಜಾಮೀನು
-
ಉಡುಪಿ18 hours agoUdupi: ಉಡುಪಿ: ಪೆಟ್ರೋಲ್ ಬಂಕ್ನಲ್ಲಿ ಮದ್ಯಪಾನ; ಆಕ್ಷೇಪಿಸಿದ ಮಾಲಕರ ಸಂಬಂಧಿಗೆ ಐವರಿಂದ ಹಲ್ಲೆ
-
ಮಂಗಳೂರು11 hours ago
ಮಂಗಳೂರು : ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ : ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ ವಿರುದ್ಧ ಮತ್ತೊಂದು ಕೇಸ್
















