Connect with us

ಕಾರ್ಯಕ್ರಮಗಳು

Sri Mahalingeshwara-ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ಗೆ ಶ್ರೀ ಮಹಾಲಿಂಗೇಶ್ವರ ದೇವರ ಸವಾರಿ

Ad Widget

Ad Widget

Ad Widget

Ad Widget

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣಕ್ಕೆ ಶನಿವಾರ ಶ್ರೀ ಮಹಾಲಿಂಗೇಶ್ವರ ದೇವರ ಸವಾರಿ ಆಗಮಿಸಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ದಂಪತಿ ಹಾಗೂ ಪುತ್ರ ಶ್ರೀಕೃಷ್ಣ ನಟ್ಟೋಜ ದೇವರನ್ನು ಬರಮಾಡಿಕೊಂಡರು. ನಂತರ ದೇವರಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಟ್ಟೆಪೂಜೆ ನಡೆಯಿತು.

Ad Widget

Ad Widget

Ad Widget

Ad Widget

ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಪ್ರಾಚಾರ್ಯೆ ಮಾಲತಿ ಡಿ, ಕ್ಯಾಂಪಸ್ ಮ್ಯಾನೇಜರ್ ರಾಜೇಂದ್ರ ಪ್ರಸಾದ್, ವಿದ್ಯಾಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ವೃಂದ, ವಿದ್ಯಾರ್ಥಿ ಸಮೂಹ, ಹೆತ್ತವರು, ಸಾರ್ವಜನಿಕರು ಹಾಗೂ ಭಕ್ತಾದಿಗಳು ಹಾಜರಿದ್ದರು.

Ad Widget

Ad Widget

Ad Widget

Ad Widget

ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಪೂಜೆ ನಿಮಿತ್ತ ಅಂಬಿಕಾ ವಿದ್ಯಾರ್ಥಿಗಳಿಂದ ಭಜನೆ, ಭಕ್ತಿಗೀತೆಗಳ ಗಾಯನ, ಕುಣಿತ ಭಜನೆ ಆಯೋಜನೆಗೊಂಡಿತು. ದೇವರ ಆಗಮನದ ಹಿನ್ನೆಲೆಯಲ್ಲಿ ಅಂಬಿಕಾ ಕ್ಯಾಂಪಸ್ ಅನ್ನು ಸಿಂಗರಿಸಲಾಗಿತ್ತು.

Ad Widget

Ad Widget

Ad Widget

Ad Widget
Click to comment

Leave a Reply

ಕಾರ್ಯಕ್ರಮಗಳು

Mandovi-ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯಿಂದ ಮೇ 17, 18ರಂದು ಮೆಗಾ ಎಕ್ಸ್‌ಚೇಂಜ್, ಲೋನ್ ಮೇಳ

Ad Widget

Ad Widget

Ad Widget

Ad Widget

ಪ್ರತ್ತೂರು: ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ವತಿಯಿಂದ ಮೆಗಾ ಎಕ್ಸ್ ಚೇಂಜ್ ಮತ್ತು ಲೋನ್ ಮೇಳ ಮೇ 17 ರಂದು‌ ಗೂಡ್ಸ್‌ ಲಾರಿ ಮಾಲಕ ಚಾಲಕ ಸಂಘ ದರ್ಬೆ ಇದರ ಬಳಿ ಹಾಗೂ ಪುರುಷರಕಟ್ಟೆ ಜಂಕ್ಷನ್ ನಲ್ಲಿ ಉದ್ಘಾಟನೆಗೊಂಡಿತು. ಮಾರುತಿ ಸುಜುಕಿ ವಾಹನಗಳ ಅಧಿಕೃತ ವಿತರಕರಾಗಿರುವ ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ಎಕ್ಸ್‌ಚೇಂಜ್ ಹಾಗೂ ಲೋನ್ ಮೇಳವು ಮೇ 18 ರಂದು ಕೊನೆಗೊಳ್ಳಲಿದೆ. ಸುಲಭ ದಾಖಲೆಯೊಂದಿಗೆ ಕಡಿಮೆ ಬಡ್ಡಿದರದಲ್ಲಿ ತ್ವರಿತವಾಗಿ ಮಾರುತಿ ಸುಝುಕಿ ಸಾಲ ಸೌಲಭ್ಯ ದೊರೆಯಲಿದೆ.

Ad Widget

Ad Widget

Ad Widget

Ad Widget

ವಿಶೇಷ ರಿಯಾಯಿತಿ: ಕೋ-ಆಪರೇಟಿವ್ ಸೊಸೈಟಿ ಸದಸ್ಯರಿಗೆ, ಕೃಷಿಕರಿಗೆ, ಸರಕಾರಿ ನೌಕರರಿಗೆ ವಿಶೇಷ ರಿಯಾಯಿತಿ ಸೌಲಭ್ಯವಿದೆ.

Ad Widget

Ad Widget

Ad Widget

Ad Widget

ಹೆಚ್ಚಿನ ಮಾಹಿತಿಗಾಗಿ ಮನೋಹರ್ ಎಂ. 6366389644, ಹರಿಕಿರಣ್‌ ರೈ ಎಸ್. 7259 014047, ಸುಮಿತ್‌ ಎನ್. 7259014043, ಆಕಾಂಶ 7795034056, ಇಬ್ರಾಹಿಂ ನಬೀಲ್ 7022126707 ಅವರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Ad Widget

Ad Widget

Ad Widget

Ad Widget

ಮಾರುತಿ ಸುಜುಕಿಯವರ ಹೊಸ ಕಾರು ದ ಎಪಿಕ್‌ ನ್ಯೂ ಸ್ವಿಫ್ಟ್‌ ಕಾರು ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು ಇದರ ಬುಕ್ಕಿಂಗ್‌ ಆರಂಭಗೊಂಡಿದೆ.

Ad Widget

Ad Widget

Ad Widget
Continue Reading

ಕಾರ್ಯಕ್ರಮಗಳು

Farewell-ಕಳೆದ ಎರಡೂವರೆ ದಶಕಗಳಿಂದ ಅಮೂಲ್ಯ ಸೇವೆ ಸಲ್ಲಿಸಿದ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ; ಸಮಾಜಕ್ಕಾಗಿ ದುಡಿಯುವ ತುಡಿತ, ಏನು ಮಾಡಬೇಕೆಂಬುದು ಜ್ಞಾನವಿರಬೇಕು: ಡಾ.ಹೆಗ್ಗಡೆ

Ad Widget

Ad Widget

Ad Widget

Ad Widget

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಡಾ.ಎಲ್. ಎಚ್.ಮಂಜುನಾಥ್ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಮೇ.11ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.

Ad Widget

Ad Widget

Ad Widget

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಡಾ.ಎಲ್.ಎಚ್ ಮಂಜುನಾಥರವರು ಅದ್ಬುತ ಕೆಲಸಗಳ ಮೂಲಕ ಜನರ ಪ್ರೀತಿ ವಿಶ್ವಾಸ ನಂಬಿಕೆ ಗಳಿಸಿದ್ದಾರೆ. ನಮ್ಮಲ್ಲಿ ಸಮಾಜಕ್ಕಾಗಿ ದುಡಿಯುವ ತುಡಿತವಿರಬೇಕು, ಏನೂ ಮಾಡಬೇಕೆಂಬುದರ ಬಗ್ಗೆ ಜ್ಞಾನವೀರಬೇಕು ಎಂದರು.

Ad Widget

Ad Widget

Ad Widget

Ad Widget

ಡಾ.ಎಲ್.ಎಚ್ ಮಂಜುನಾಥ್ ಅವರು ಮಾತನಾಡಿ ಡಾ ಹೆಗ್ಗಡೆಯವರು ನನಗೆ ದೇವರಿದ್ದಾಗೆ. ಕಳೆದ 23 ವರ್ಷಗಳ ಕಾಲ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಪೂಜ್ಯರಿಗೆ ಕೃತಜ್ಞತೆ ಅರ್ಪಿಸಿದರು.

Ad Widget

Ad Widget

Ad Widget

Ad Widget

ಭಾರತೀಯ ಜೀವ ವಿಮಾ ನಿಗಮದ ಮುಂಬೈ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಎಂ. ಜಗನ್ನಾಥ್ ವಿಶೇಷ ಆಹ್ವಾನಿತರಾಗಿ ಭಾಗವಹಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟಿಗಳು, ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಡಾ.ಹೇಮಾವತಿ ವೀ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾ‌ರ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟಿಗಳಾದ ಡಿ.ಸುರೇಂದ್ರ ಕುಮಾರ್, ವೈ ನಾಗೇಶ್ವರ ರಾವ್, ಸಂಪತ್ ಸಾಮ್ರಾಜ್ಯ, ಉದಯಕುಮಾ‌ರ್ ಶೆಟ್ಟಿ, ಶ್ಯಾಮ್ ಭಟ್, ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಆರ್.ಪೈ,ಡಾ.ಎಲ್.ಎಚ್ ಮಂಜುನಾಥ್ ಅವರ ಧರ್ಮಪತ್ನಿ ನಳಿನಿ, ಪುತ್ರ ಡಾ.ರೋಹನ್ ಉಪಸ್ಥಿತರಿದ್ದರು.

Ad Widget

Ad Widget

Ad Widget

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ದಾ ಅಮಿತ್ ಹಾಗೂ ಯೋಜ‌ನೆಯ ವಿವಿಧ ವಿಭಾಗದ ಅಧಿಕಾರಿಗಳು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

ಡಾ.ಎಲ್.ಎಚ್ ಮಂಜುನಾಥ್ ದಂಪತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಯೋಜನೆಯ ಪ್ರಾದೇಶಿಕ ಕಚೇರಿ,ಕೇಂದ್ರ ಕಚೇರಿ ಹಾಗೂ ಎಸ್.ಡಿ.ಎಂ ನ ವಿವಿಧ ವಿಭಾಗಗಳಿಂದ ಗೌರವಿಸಲಾಯಿತು.

ಯೋಜನೆ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಪೂಜಾ ಪಕ್ಕಳ, ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ವಿಭಾಗದ ಅಭಿವೃದ್ಧಿ ಅಧಿಕಾರಿ ಆನಂದ ಸುವರ್ಣ ವಂದಿಸಿದರು.

Continue Reading

ಕಾರ್ಯಕ್ರಮಗಳು

Akshaya Tritiya-ಅಕ್ಷಯ ತೃತೀಯ ಭರ್ಜರಿ ಖರೀದಿ : ಕರ್ನಾಟಕದಲ್ಲಿ ಬರೋಬ್ಬರಿ 2050 ಕೆಜಿ ಚಿನ್ನ, 1900 ಕೆಜಿ ಬೆಳ್ಳಿ ಮಾರಟ

Ad Widget

Ad Widget

Ad Widget

Ad Widget

ಅಕ್ಷಯ ತೃತೀಯ ದಿನವಾದ ಶುಕ್ರವಾರ ರಾಜ್ಯಾದ್ಯಂತ ಬರೋಬ್ಬರಿ ಎರಡು ಸಾವಿರ ಕೆ.ಜಿ.ಗೂ ಅಧಿಕ ಚಿನ್ನ ಮತ್ತು 1900 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮಾರಾಟವಾಗಿದ್ದು, ಸಾವಿರ ಕೋಟಿಗಿಂತ ಹೆಚ್ಚು ವಹಿವಾಟು ಆಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.18ರಷ್ಟು ಹೆಚ್ಚುವರಿ ವ್ಯಾಪಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ತಿಳಿಸಿದೆ.

Ad Widget

Ad Widget

Ad Widget

Ad Widget

ರಾಜ್ಯಾದ್ಯಂತ ಈ ಬಾರಿಯ ಅಕ್ಷಯ ತೃತೀಯದಲ್ಲಿ 2050 ಕೆ.ಜಿ.ಗೂ ಅಧಿಕ ಚಿನ್ನ ಹಾಗೂ 1900 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮಾರಾಟವಾಗಿದೆ. ಮಂಗಳಕರವಾದ ಶುಕ್ರವಾರವೇ ಅಕ್ಷಯ ತೃತೀಯಾ ಬಂದಿ ರುವ ಹಿನ್ನೆಲೆಯಲ್ಲಿ ಚಿನ್ನಾಭರಣಗಳ ಖರೀದಿ ಸಂಭ್ರಮ ಜೋರಾಗಿ ನಡೆದಿದೆ.

Ad Widget

Ad Widget

Ad Widget

Ad Widget

ಬೆಂಗಳೂರು, ದಾವಣಗೆರೆ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಆಭರಣ ಮಳಿಗೆಗಳ ಮುಂದೆ ಚಿನ್ನಾಭರಣ ಖರೀದಿಗಾಗಿ ಜನಸಾಗರವೇ ನೆರೆದಿತ್ತು. ದೊಡ್ಡ ಮತ್ತು ಸಣ್ಣಮಳಿಗೆಗಳು ಎಂಬ ಭೇದವಿಲ್ಲದೆ ಎಲ್ಲ ಆಭರಣಗಳ ಅಂಗಡಿಗಳ ಮುಂದೆಯೂ ನಿರೀಕ್ಷೆಗೂ ಮೀರಿಗ್ರಾಹಕರು ಆಭರಣ ಖರೀದಿಯಲ್ಲಿ ತೊಡಗಿದ್ದರು. ಶುಕ್ರವಾರ ಬೆಳಗ್ಗೆಯಿಂದಲೇ ಆಭರಣ ಮಳಿಗೆಗಳನ್ನು ತೆರೆಯಲಾಗಿತ್ತು. ಕೆಲ ಮಳಿಗೆಗಳು ರಾತ್ರಿ 10-11 ಗಂಟೆವರೆಗೆ ವಹಿವಾಟು ನಡೆಸಿದವು.

Ad Widget

Ad Widget

Ad Widget

Ad Widget

ಚಿನ್ನದ ಕಾಯಿನ್ ಖರೀದಿ ಜೋರು: ಅಕ್ಷಯ ತೃತೀಯಕ್ಕೆ ಚಿನ್ನಾಭರಣಗಳ ಖರೀದಿಗಿಂತ ಹೂಡಿಕೆ ಸಲುವಾಗ್ನಿಗೋಲ್ಡ್ ಕಾಯಿನ್‌ಗಳ ಖರೀದಿ ಹೆಚ್ಚಾಗಿತ್ತು. 1 ರಿಂದ 100 ಗ್ರಾಂವರೆಗೂ ಕಾಯಿನ್‌ಗಳು ಲಭ್ಯವಿದ್ದು, ಹಲವರು ಖರೀದಿಸಿದರು.

Ad Widget

Ad Widget

Ad Widget

ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ : ಅಕ್ಷಯ ತೃತೀಯ ದಿನವೇ ಪ್ರತಿ ಗ್ರಾಂ ಚಿನ್ನದ ಬೆಲೆ 100 ರು. ಏರಿಕೆ ಆಗಿದೆ. ಇದೀಗ ಗ್ರಾಮ್‌ಗೆ 6,700 ರು.ಇದೆ. ಬೆಳ್ಳಿ ಗ್ರಾಮ್‌ಗೆ 82 ರು. ಇದ್ದು, ಇದರ ದರವೂ ಜಾಸ್ತಿಯಾಗಿದೆ. ಕಳೆದ ವರ್ಷಕ್ಕಿಂತ ವಹಿವಾಟು ಕಡಿಮೆ ಆಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆದಿಲ್ಲ. ಚುನಾವಣೆ ನಂತರ ಚಿನ್ನಾಭರಣ ದರ ಕಡಿಮೆ ಆಗಬಹುದು, ಆಗ ಖರೀದಿ ಮಾಡೋಣ ಎಂಬ ನಿರೀಕ್ಷೆಯಲ್ಲಿ ಗ್ರಾಹಕರು ಇದ್ದಿರಬಹುದು.- ಶ್ರೀಕಾಂತ್ ಕರಿ ಅಧ್ಯಕ್ಷ, ಕರ್ನಾಟಕ ಸ್ಟೇಟ್ ಜ್ಯುವೆಲ್ಲರಿ ಫೆಡರೇಷನ್

ಶೇ.18ರಷ್ಟು ವಹಿವಾಟು ಹೆಚ್ಚಳ
ಕಳೆದ ವರ್ಷಕ್ಕಿಂತ ಚಿನ್ನಾಭರಣ ಮಾರಾಟ ಶೇ.18ರಷ್ಟು ಹೆಚ್ಚಾಗಿದೆ. ಒಂದೇ ದಿನದಲ್ಲಿ ಸಹಸ್ರ ಕೋಟಿಗೂ ಮೀರಿದ ವಹಿವಾಟು ನಡೆದಿದೆ. ಈ ಬಾರಿ ಬೆಳ್ಳಿ ಕಾಯಿನ್‌ಗಳು ಹೆಚ್ಚು ಮಾರಾಟವಾದವು. ಬೆಳ್ಳಿ ಕಾಯಿನ್‌ಗಳಲ್ಲಿ ಒಂದು ಬದಿಗೆ ಅಯೋಧ್ಯೆಯ ಬಾಲರಾಮ ಚಿತ್ರ, ಮತ್ತೊಂದು ಬದಿಗೆ ಲಕ್ಷ್ಮೀಯ ಚಿತ್ರವನ್ನು ಒಳಗೊಂಡ ಕಾಯಿನ್‌ಗಳ ಖರೀದಿ ಹೆಚ್ಚಾಗಿತ್ತು. – ಡಾ.ಬಿ.ರಾಮಾಚಾರಿ ಪ್ರ.ಕಾರ್ಯದರ್ಶಿ, ರಾಜ್ಯ ಆಭರಣ ವರ್ತಕರ ಒಕ್ಕೂಟ

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading