Connect with us

ರಾಜಕೀಯ

D.V. S.-ಕಾಂಗ್ರೆಸ್ ಸಂಪರ್ಕಿಸಿದೆ, ನಿರ್ಧಾರ ನಾಳೆ ಪ್ರಕಟ; ಮಾಜಿ ಸಿಎಂ ಡಿ.ವಿ. ಎಸ್.

Ad Widget

Ad Widget

Ad Widget

Ad Widget

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಸಂಸದ ಡಿ.ವಿ.ಸದಾನಂದ ಗೌಡ ಅವರನ್ನು ಕಾಂಗ್ರೆಸ್ ಸಂಪರ್ಕಿಸಿದ್ದು, ತಮ್ಮ ನಿರ್ಧಾರವನ್ನು ನಾಳೆ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.‘ಈ ಬಾರಿ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದ ಡಿ.ವಿ.ಸದಾನಂದ ಗೌಡ ಅವರನ್ನು ಬಿಜೆಪಿಯ ಕೆಲವು ನಾಯಕರೇ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ತಾವೂ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.

Ad Widget

Ad Widget

Ad Widget

Ad Widget

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಘೋಷಿಸಿದ ಬೆನ್ನಲ್ಲೇ ಸದಾನಂದ ಗೌಡರು ಮುನಿಸಿಕೊಂಡಿದ್ದಾರೆ. ‘ತಮಗೆ ಟಿಕೆಟ್ ತಪ್ಪಿದ ಕಾರಣ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ‘ ಎಂದು ದೂರಿದ್ದ ಗೌಡರು, ಇದೀಗ ತಮ್ಮ ಮುಂದಿನ ರಾಜಕೀಯ ನಡೆಯನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ.

Ad Widget

Ad Widget

Ad Widget

Ad Widget

‘ಬಿಜೆಪಿ ನಾಯಕರು ನಿನ್ನೆ ನನ್ನ ಮನೆಗೆ ಬಂದಿದ್ದರು. ನನ್ನ ಮನವೊಲಿಸಲು ಪ್ರಯತ್ನಿಸಿದರು. ನನ್ನ ಕುಟುಂಬದ ಸದಸ್ಯರ ಜತೆ ಚರ್ಚೆ ನಡೆಸಬೇಕಾಗಿದೆ. ಕಾಂಗ್ರೆಸ್ ನಾಯಕರೂ ನನ್ನನ್ನು ಸಂಪರ್ಕಿಸಿದ್ದರು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು

Ad Widget

Ad Widget

Ad Widget

Ad Widget
Click to comment

Leave a Reply

ಅಂತರ ರಾಜ್ಯ

PM Modi-ಮಾಧ್ಯಮಗಳು ಮೊದಲಿನಂತೆ ಪತ್ರಿಕಾ ಧರ್ಮ ಪಾಲಿಸುತ್ತಿಲ್ಲ..! ಹಾಗಾಗಿ ನಾನು 10 ವರ್ಷಗಳಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ : ನರೇಂದ್ರ ಮೋದಿ

Ad Widget

Ad Widget

Ad Widget

Ad Widget

ನವದೆಹಲಿ: ಕೇಂದ್ರದಲ್ಲಿ ಪ್ರಧಾನಿಯಾಗಿ 10 ವರ್ಷಗಳಾದರೂ ನರೇಂದ್ರ ಮೋದಿಯವರು ಇಲ್ಲಿಯವರೆಗೆ ಒಂದಾದರೂ ಸುದ್ದಿಗೋಷ್ಠಿಯನ್ನು ನಡೆಸಿಲ್ಲ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ವಿಪಕ್ಷಗಳು ಮಾಧ್ಯಮಗಳಿಗೆ ಒಮ್ಮೆಯಾದರೂ ಮುಖಾಮುಖಿಯಾಗದೇ ಇರುವಂಥ ಪ್ರಧಾನಿಯನ್ನು ನಾವೆಂದೂ ಹಿಂದೆಂದೂ ನೋಡಿರಲಿಲ್ಲ ಎಂದು ಸತತವಾಗಿ ಮಾಡುತ್ತಿದ್ದ ಟೀಕೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಕೊಟ್ಟಿದ್ದಾರೆ.

Ad Widget

Ad Widget

Ad Widget

Ad Widget

ಮೋದಿಯವರು ಆಜ್ ತಕ್ ಹಿಂದಿ ಸುದ್ದಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿ, “ಮಾಧ್ಯಮಗಳು ಈಗ ಮೊದಲಿನಂತೆ ಪತ್ರಿಕಾ ಧರ್ಮವನ್ನು ಪಾಲಿಸುತ್ತಿಲ್ಲ. ಪ್ರತಿಯೊಬ್ಬ ಪತ್ರಕರ್ತನೂ ತನ್ನದೇ ದೃಷ್ಟಿಕೋನವನ್ನ ತನ್ನ ಪತ್ರಿಕಾ ವೃತ್ತಿಯಲ್ಲಿ ಬೆರೆಸುತ್ತಿದ್ದಾನೆ. ಅದರಿಂದಾಗಿ, ಆತನ ವಿಚಾರಗಳೇ ಆತನ ವರದಿಗಳಲ್ಲಿ ಮೇಳೈಸುತ್ತವೆಯೇ ಹೊರತು ಅನ್ಯರ ವಿಚಾರಗಳಿಗೆ ಅಲ್ಲಿ ಪ್ರಾಮುಖ್ಯತೆಯಾಗಲೀ, ಬೆಲೆಯಾಗಲೀ ಸಿಗುತ್ತಿಲ್ಲ. ನಿಷ್ಪಕ್ಷಪಾತ ಪತ್ರಿಕೋದ್ಯಮ ಈಗ ಇಲ್ಲ. ಹಾಗಾಗಿಯೇ ನಾನು ಯಾವುದೇ ಸುದ್ದಿಗೋಷ್ಠಿಗಳನ್ನು ನಡೆಸುತ್ತಿಲ್ಲ’’ ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಮೊದಲು ಪತ್ರಿಕೆಗಳಾಗಲೀ ಮಾಧ್ಯಮಗಳಾಗಲೀ ತಮ್ಮ ಸಿದ್ಧಾಂತಗಳನ್ನು ಜನರ ಮೇಲೆ ಹೇರುತ್ತಿರಲಿಲ್ಲ. ಜನರೂ ಅಷ್ಟೇ ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ನೋಡುತ್ತಿದ್ದರಷ್ಟೇ ಅವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗಿನ ಜನ ಮೊದಲಿನಂತಿಲ್ಲ. ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬರುವುದನ್ನು ಹೆಚ್ಚಾಗಿ ನಂಬುತ್ತಾರೆ. ಈ ಸಂದರ್ಭಗಳನ್ನು ಬಳಸಿಕೊಳ್ಳುತ್ತಿರುವ ಮಾಧ್ಯಮಗಳು, ತಮ್ಮ ಸಿದ್ಧಾಂತಗಳನ್ನು ಜನರ ಮೇಲೆ ಹೇರುವಂಥ ಪ್ರಯತ್ನಗಳನ್ನು ಮಾಡುತ್ತಿವೆ. ನಿಷ್ಪಕ್ಷಪಾತ ಪತ್ರಿಕೋದ್ಯಮವನ್ನು ಇಂದು ನಿರೀಕ್ಷೆ ಮಾಡುವಂತಿಲ್ಲ. ಹಾಗಾಗಿಯೇ ನಾನು ಸುದ್ದಿಗೋಷ್ಠಿಗಳಿಂದ ದೂರ ಉಳಿದಿದ್ದೇನೆ ಎಂದು ಅವರು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಮೋದಿಯವರು ಪತ್ರಿಕೋದ್ಯಮದ ಇಂದಿನ ಸ್ವರೂಪದ ಬಗ್ಗೆ ಮಾತನಾಡಿ, ಮೊದಲು ಪತ್ರಿಕೋದ್ಯಮ ಕಚೇರಿಗಳಲ್ಲಿ ಪತ್ರಕರ್ತರು ಒಗ್ಗೂಡಿ ಕೆಲಸ ಮಾಡುತ್ತಿದ್ದರು. ಈಗ ಪತ್ರಿಕಾ ಕಚೇರಿಗಳಲ್ಲಿ ಪತ್ರಕರ್ತರಿಗೂ ಮೇಲಿನ ಹಂತದಲ್ಲಿ ಪತ್ರಿಕೋದ್ಯಮ ನಿರ್ವಹಣೆಗಾಗಿಯೇ ಒಂದು ಪ್ರತ್ಯೇಕ ವಿಭಾಗ ಕೆಲಸ ಮಾಡುತ್ತಿದೆ. ಅಲ್ಲಿಂದ ಬರುವ ಸೂಚನೆಗಳನ್ನಷ್ಟೇ ಪತ್ರಕರ್ತರು ಅನುಷ್ಠಾನಗೊಳಿಸುವಂತಾಗಿದೆ. ಇದೂ ಸಹ ನನ್ನನ್ನು ಮಾಧ್ಯಮಗಳಿಂದ ವಿಮುಖವನ್ನಾಗಿಸಲು ಇರುವ ಬೇರೊಂದು ಕಾರಣ ಎಂದು ಹೇಳಿದರು.

Ad Widget

Ad Widget

Ad Widget

ಪ್ರಧಾನಿ ನರೇಂದ್ರ ಮೋದಿ ತಾವು ಪ್ರಧಾನಿಯಾದ ನಂತರ ಪ್ರಧಾನಿಯ ಕಾರ್ಯವೈಖರಿಯಲ್ಲೇ ಹೊಸತನ ತಂದಿರುವುದು ಕೂಡ ನನ್ನನ್ನು ಸುದ್ದಿಗೋಷ್ಠಿಗಳಿಂದ ವಿಮುಖನನ್ನಾಗಿ ಮಾಡಿದೆ ಎಂದು ತಿಳಿಸಿದರು. “ನಾನು ಪ್ರಧಾನಿಯಾಗಿ ಕೇವಲ ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿಕೊಂಡು, ವಿದೇಶ ಪ್ರವಾಸಗಳನ್ನು ಮಾಡಿಕೊಂಡು ಕೂರಬಹುದಾಗಿತ್ತು. ಆದರೆ, ನಾನು ಹಾಗೆ ಮಾಡುತ್ತಿಲ್ಲ. ಈ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಯು ನನ್ನ ಜವಾಬ್ದಾರಿ. ಜನಪರ ಯೋಜನೆಗಳ ಕರಾರುವಾಕ್ ಅನುಷ್ಠಾನ ನನ್ನ ಜವಾಬ್ದಾರಿ. ಹಾಗಾಗಿ, ಈ ದೇಶದ ಮೂಲೆಯಲ್ಲಿರುವ ರಾಜ್ಯದಲ್ಲಿ ಚಿಕ್ಕ ಹಳ್ಳಿಯಲ್ಲಿ ಜಾರಿಗೊಂಡಿರುವ ಯೋಜನೆಗೂ ನಾನು ಹೋಗುತ್ತೇನೆ. ನನಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುವುದಕ್ಕಿಂತ ಕೆಲಸ ಮಾಡುವುದೇ ಹೆಚ್ಚು ಇಷ್ಟ. ನನ್ನೀ ಕಾರ್ಯವೈಖರಿಯನ್ನು ಇಷ್ಟಪಡುವುದು, ಬಿಡುವುದು ನಮ್ಮ ದೇಶದ ಮಾಧ್ಯಮಗಳಿಗೆ ಬಿಟ್ಟಿದ್ದು’’ ಎಂದು ಅವರು ಹೇಳಿದರು.

Continue Reading

ರಾಜಕೀಯ

HD Devegowda | ಈ ಬಾರಿ ಹುಟ್ಟು ಹಬ್ಬ ಆಚರಿಸುತ್ತಿಲ್ಲ – ಹಾಸನ ಮಣ್ಣಿನ ಮಗ ಮಾಜಿ ಪ್ರಧಾನಿ ಹೆಚ್.ಡಿ‌.ದೇವೇಗೌಡರಿಂದ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ ಏನೀದೆ..?

Ad Widget

Ad Widget

Ad Widget

Ad Widget

ಹಾಸನ: ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣ ದೇಶಾದ್ಯಂತ ಸುದ್ದಿಯಾಗಿರುವ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ (HD Devegowda) ತಮ್ಮ ಹುಟ್ಟುಹಬ್ಬ ಆಚರಣೆ ಮಾಡುವುದಿಲ್ಲ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ , ಅಭಿಮಾನಿಗಳು ಹಾಗೂ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರಲ್ಲಿ ನನ್ನ ವಿನಂತಿ.ಇದೇ ತಿಂಗಳ 18 ರಂದು ನಾನು 91 ವರ್ಷ ಪೂರೈಸಿ 92ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು, ಕಾರಣಾಂತರಗಳಿಂದ ನಾನು ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ.

Ad Widget

Ad Widget

Ad Widget

Ad Widget

ಹೀಗಾಗಿ ತಾವೆಲ್ಲರೂ ಇದ್ದಲ್ಲಿಯೇ ಹಾರೈಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ.ಪ್ರಸಕ್ತ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ (ಎನ್.ಡಿ.ಎ) ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಹಾಗೂ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕೋರುತ್ತೇನೆ.

Ad Widget

Ad Widget

Ad Widget

Ad Widget

ನಿಮ್ಮೆಲ್ಲರ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ.ವಂದನೆಗಳೊಂದಿಗೆ, (ಹೆಚ್.ಡಿ. ದೇವೇಗೌಡ) ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Ad Widget

Ad Widget

Ad Widget
Continue Reading

ಉಡುಪಿ

Raghupathi Bhat-ಕಲ್ಕುಡ ದೈವ ಆಶೀರ್ವಾದ ನನಗೆ ಸಿಕ್ಕಿದೆ : ಬಿಜೆಪಿ ಪಕ್ಷದ ಕಾರ್ಯಕರ್ತರ ಅಭ್ಯರ್ಥಿಯಾಗಿ ಮೇ.16ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ: ಜನಸಂಘದ ಕಾಲದಲ್ಲಿ ಪಕ್ಷ ಕಟ್ಟಿದವರು ನನ್ನ ಚುನಾವಣ ಕಚೇರಿ ಉದ್ಘಾಟಿಸಲಿದ್ದಾರೆ: ರಘುಪತಿ ಭಟ್ ಘೋಷಣೆ

Ad Widget

Ad Widget

Ad Widget

Ad Widget

ಉಡುಪಿ: ಬಿಜೆಪಿ ನಾಯಕ, ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್‌ರವರು ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಅವರು ಜನ ಸಂಘದ ಕಾಲದಿಂದ ಪಕ್ಷ ಕಟ್ಟಿದವರು ನನ್ನ ಚುನಾವಣೆ ಕಚೇರಿ ಉದ್ಘಾಟಿಸಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ಮಈ. ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂಬುದಕ್ಕೆ ಇದೆ ಸ್ಪಷ್ಟ ಸಂಖ್ಯಾತ ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ನಾನು ಕಣದಿಂದ ಹಿಂದೆ ಸರಿಯುತ್ತೇನೆ ಎಂಬ ಸಂಶಯ ಯಾರಿಗೂ ಬೇಡ. ನಾಳೆ ಮೈಸೂರಿನಲ್ಲಿ ಮಧ್ಯಾಹ್ನ 1.30 ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. 28 ವಿಧಾನಸಭಾ ಕ್ಷೇತ್ರದಿಂದ ಬೆಂಬಲಿಗರು ಮೈಸೂರಿಗೆ ಬರುತ್ತಾರೆ. ಜನಸಂಘದ ಪ್ರಮುಖರು ಬಂದಿರುವುದರಿಂದ ಆತ್ಮಸ್ಥೈರ್ಯ ಹೆಚ್ಚಿದೆ. ಪ್ರಧಾನಿ ಮೋದಿ ನನ್ನ ಆದರ್ಶ. ಅವರ ಅಭಿಮಾನಿಯಾಗಿ ಮೋದಿ ಫೋಟೋ ಹಾಕಿಕೊಳ್ಳುವ ಅರ್ಹತೆ ನನಗೆ ಇದೆ. ಲೋಕಸಭಾ ಚುನಾವಣೆಯಲ್ಲಿ ಮೋದಿಗಾಗಿ ಶಿವಮೊಗ್ಗದಲ್ಲಿ ಹಗಲಿರುಳು ಕೆಲಸ ಮಾಡಿದ್ದೇನೆ. ಡಾ‌‌. ವಿ. ಎಸ್ ಆಚಾರ್ಯ, ಕರಂಬಳ್ಳಿ ಸಂಜೀವ ಶೆಟ್ಟಿ ನನ್ನ ರಾಜಕೀಯದ ಪ್ರೇರಕರು ಎಂದು ಹೇಳಿದರು.

Ad Widget

Ad Widget

Ad Widget

Ad Widget

ಪ್ರತಿ ವರ್ಷ ನಮ್ಮ ಮನೆಯಲ್ಲಿ ದೈವ ಕೋಲ ನಡೆಯುತ್ತದೆ ಹಾಗೂ ಮನೆಯ ಗೃಹಪ್ರವೇಶದ ಪ್ರಯುಕ್ತ ಕೋಲ ಮಾಡಿಸಿದ್ದೇವೆ. ನನಗೆ ಕಲ್ಕುಡ ದೈವದ ಆಶೀರ್ವಾದ ಸಿಕ್ಕಿದೆ. ನಿನ್ನ ನಿಲುವು ಸರಿ ಇದೆ ನೂರಕ್ಕೆ ನೂರು ಗೆದ್ದು ಬರುತ್ತಿ ಎಂಬ ಅಭಯ ದೈವಗಳು ನೀಡಿದೆ. ನಾನು ದೈವವನ್ನು ಬಹಳ ನಂಬುತ್ತೇನೆ. ಇದರಿಂದಾಗಿ ನನಗೆ ಹುಮ್ಮಸ್ಸು ಬಂದಿದೆ ಎಂದು ಹೇಳಿದರು.

Ad Widget

Ad Widget

Ad Widget

Ad Widget

ಪಕ್ಷದಲ್ಲಿ ದುಡಿದವರಿಗೆ ಕಾರ್ಯಕರ್ತರಿಗೆ ಬೆಲೆ ಇಲ್ಲ. ಲೋಕಸಭೆ, ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆಯನ್ನು ಹಿಂದೆ ಹಿಂದೆ ಬೂತ್ ಮಟ್ಟದಲ್ಲಿ ಅಭಿಪ್ರಾಯ ಕೇಳಿ ನಿರ್ಧಾರ ಮಾಡುತ್ತಿದ್ದರು. ವಿಧಾನಸಭಾ ಅಭ್ಯರ್ಥಿಗಾಗಿ ವೋಟಿಂಗ್ ಮಾಡಿದರು ಆ ವೋಟನ್ನು ಲೆಕ್ಕವೇ ಮಾಡಿಲ್ಲ. ಹಿರಿಯ ಕಾರ್ಯಕರ್ತರನ್ನು ಬಿಟ್ಟು ಚಮಚಾಗಿರಿ ಮಾಡುವವರಿಗೆ ಟಿಕೆಟ್ ಕೊಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Ad Widget

Ad Widget

Ad Widget

ನಾನು ಯಾವುದೇ ನಾಯಕರ ಮನೆ ಬಾಗಿಲಿಗೆ ಹೋಗುವ ಸ್ವಭಾವದವನಲ್ಲ. ನಾನು ಕಾರ್ಯಕರ್ತರ ಜೊತೆ ಇರುತ್ತೇನೆ ಹಾಗಾಗಿ ಪ್ರತಿ ಬಾರಿ ಟಿಕೆಟ್ ನಿರಾಕರಣೆ ಆಗುತ್ತದೆ. ನಾನು ಚಮಚಾಗಿರಿ ಮಾಡಲ್ಲ.. ಚಮಚಾಗಿರಿ ಮಾಡಿದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಪಕ್ಷಕ್ಕಾಗಿ ದುಡಿದ ಎಲ್ಲಾ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಉಡುಪಿಯಲ್ಲಿ ಬಿಜೆಪಿ ನಾಯಕ ರಘುಪತಿ ಭಟ್ ಹೇಳಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading