Connect with us

ಶಿಕ್ಷಣ

Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳ ಮೆಕ್ಯಾನಿಕಲ್ ಮಾದರಿಗಳ ಪ್ರದರ್ಶನ ಮೆಕ್‌ಸ್ಪಾರ್ಕ್-2026

Published

on



Ad Widget

Ad Widget

Ad Widget

Ad Widget

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗದ ಆಶ್ರಯದಲ್ಲಿ ನಡೆದ ಪದವಿಪೂರ್ವ ವಿದ್ಯಾರ್ಥಿಗಳ ಮೆಕ್ಯಾನಿಕಲ್ ಸಂಬಂಧಿತ ಪ್ರಾಜೆಕ್ಟ್ಗಳ ಪ್ರದರ್ಶನ ಮತ್ತು ಸ್ಪರ್ಧೆ ಮೆಕ್‌ಸ್ಪಾರ್ಕ್-2026ಕ್ಕೆ ಚಾಲನೆ ನೀಡಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರತಿಷ್ಟಿತ ಮರ್ಸಿಡಿಸ್ ಬೆಂಜ್ ಸಂಸ್ಥೆಯ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಚೈತ್ರಾ ಸಾಲಿಯಾನ್ ಮಾತಾಡಿದರು.

Ad Widget

Ad Widget

Ad Widget

ಪುತ್ತೂರು: ಕಲಿಕೆ ಎನ್ನುವುದು ಪದವಿಯಿಂದ ಮುಕ್ತಾಯವಾಗುವುದಲ್ಲ ಬದಲಾಗಿ ಕಲಿಕೆ ಪ್ರಾರಂಭವಾಗುವುದೇ ಅಲ್ಲಿಂದ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರತಿಷ್ಟಿತ ಮರ್ಸಿಡಿಸ್ ಬೆಂಜ್ ಸಂಸ್ಥೆಯ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಚೈತ್ರಾ ಸಾಲಿಯಾನ್ ಹೇಳಿದರು.

Ad Widget

Ad Widget alt="Ad Widget"/>

Ad Widget

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ವಿಭಾಗದ ಆಶ್ರಯದಲ್ಲಿ ನಡೆದ ಪದವಿಪೂರ್ವ ವಿದ್ಯಾರ್ಥಿಗಳ ಮೆಕ್ಯಾನಿಕಲ್ ಸಂಬಂಧಿತ ಪ್ರಾಜೆಕ್ಟ್ಗಳ ಪ್ರದರ್ಶನ ಮತ್ತು ಸ್ಪರ್ಧೆ ಮೆಕ್‌ಸ್ಪಾರ್ಕ್-2026ಕ್ಕೆ ಚಾಲನೆ ನೀಡಿ ಮಾತಾಡಿದರು.

Ad Widget

Ad Widget <> Ad Widget

ಪ್ರತಿಯೊಬ್ಬರಿಗೂ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ ಹೀಗಾಗಿ ಪಠ್ಯ ಪುಸ್ತಕಗಳ ವಿಷಯಕ್ಕೆ ಮತ್ತು ಪರೀಕ್ಷೆಗಳಿಗೆ ಕಲಿಕೆ ಮುಗಿದು ಹೋಗಬಾರದು ಎಂದರು. ಯಾವುದೇ ಹಿಂಜರಿಕೆ ಇಲ್ಲದೆ ಗೊತ್ತಿಲ್ಲದ ವಿಷಯಗಳ ಬಗ್ಗೆ ಪ್ರಶ್ನೆಯನ್ನು ಮಾಡುತ್ತಾ ಹೋಗಬೇಕು ಹಾಗಾದರೆ ಮಾತ್ರ ನಿಜವಾದ ಹೊಸತನವನ್ನು ಕಂಡುಹಿಡಿಯುವುದಕ್ಕೆ ಸಾಧ್ಯ ಎಂದರು.



Ad Widget

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಪದವಿಪೂರ್ವ ತರಗತಿಗಳ ವಿದ್ಯಾರ್ಥಿಗಳು ಓದಿನಲ್ಲಿ ಕಳೆದು ಹೋಗುತ್ತಾರೆ ಎನ್ನುವ ಮಾತಿದೆ ಪ್ರಸಕ್ತ ಸನ್ನಿವೇಶದಲ್ಲಿ ಅದು ಅನಿವಾರ್ಯವೂ ಹೌದು. ಆದರೆ ನಿಮ್ಮ ಯೋಚನೆಗಳನ್ನು ಯೋಜನೆಯನ್ನಾಗಿಸಿ ಅದಕ್ಕೆ ರೂಪಕೊಟ್ಟು ಇಲ್ಲಿ ಪ್ರದಶಿಸುತ್ತಿರುವುದು ಆನಂದವನ್ನುಂಟುಮಾಡಿದೆ ಎಂದರು. ಪ್ರತಿಯೊಬ್ಬರಲ್ಲಿಯೂ ಅವರದ್ದೇ ಆದ ಯೋಚನೆಗಳಿರುತ್ತವೆ ಅದಕ್ಕೆ ಸೂಕ್ತ ವೇದಿಕೆ ಸಿಕ್ಕಾಗ ಅದು ಅನಾವರಣಗೊಳ್ಳುತ್ತದೆ. ಅಂತಹ ಪ್ರತಿಭಾ ಪ್ರದರ್ಶನಕ್ಕೆ ನಮ್ಮ ಸಂಸ್ಥೆಯು ಯಾವಾಗಲೂ ಪ್ರೋತ್ಸಾಹವನ್ನು ನೀಡುತ್ತದೆ ಎಂದರು.

Ad Widget

Ad Widget

ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್, ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ದೀಪಕ್.ಕೆ.ಬಿ, ಕಾರ್ಯಕ್ರಮ ಸಂಯೋಜಕರಾದ ಪ್ರೊ.ಸುದರ್ಶನ್.ಎಮ್.ಎಲ್ ಮತ್ತು ಪ್ರೊ.ನವೀನ್.ಎಸ್.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೊ.ಸುದರ್ಶನ್.ಎಮ್.ಎಲ್ ಸ್ವಾಗತಿಸಿ, ಪ್ರೊ.ನವೀನ್.ಎಸ್.ಪಿ ವಂದಿಸಿದರು. ವಿದ್ಯಾರ್ಥಿನಿ ಕೆ.ಪಿ.ವೈಷ್ಣವಿ ಕಾರ್ಯಕ್ರಮ ನಿರ್ವಹಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ ಮನೋಹರ್ ಶಿಂಧೆ ಬಹುಮಾನ ವಿತರಿಸಿದರು. ವಿಜೇತರಿಗೆ ಫಲಕದ ಜತೆಗೆ ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಒಟ್ಟು 14 ತಂಡಗಳು ಇದರಲ್ಲಿ ಭಾಗವಹಿಸಿದ್ದವು.

ಬಹುಮಾನ ವಿಜೇತರು:
ಅತ್ಯುತ್ತಮ ನವೀನ ಮಾದರಿ ಪ್ರಶಸ್ತಿಯು ರಾಮಕುಂಜದ ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಆದಂ ಸಲಿತ್, ಧನುಶ್, ಕುಮಾರ, ಕೌಶಿಕ್ ಮತ್ತು ಜೀವನ್ ಇವರು ನಿರ್ಮಿಸಿದ ಇಕೋ ವಾಲ್ಟ್ ಎನ್ನುವ ಮಾದರಿಗೆ ಲಭಿಸಿದೆ.

ನಾವೀನ್ಯತೆಯ ವಿಶೇಷ ಮನ್ನಣೆ ಪ್ರಶಸ್ತಿಯು ಪುತ್ತೂರಿನ ಸುದಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಖದೀಜತ್ ಅಫ್ನ, ಖದೀಜತ್ ಅಸೀಮ, ಸನೂಫ, ಆಯಿಶ ಅಷ್ಫಾನಾ, ಏತನ್ ರೋಡ್ರಿಗಸ್ ಮತ್ತು ಮಹಮ್ಮದ್ ತಾಝೀನ್ ಇಕ್ಬಾಲ್ ಇವರು ಅಭಿವೃದ್ಧಿಪಡಿಸಿದ ತೃತೀಯ ನೇತ್ರಂ ಎನ್ನುವ ಮಾದರಿಗೆ ಸಿಕ್ಕಿದೆ.

Ad Widget
Click to comment

Leave a Reply

ಶಿಕ್ಷಣ

Vivekananda-ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿವೇಕ ಸ್ಮೃತಿ ಕಾರ್ಯಕ್ರಮ

Published

on



Ad Widget

Ad Widget

Ad Widget

Ad Widget

ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಹಾಗೂ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಇದರ ಸಹಯೋಗದಲ್ಲಿ ನಡೆದ ‘ವಿವೇಕ ಸ್ಮೃತಿ ಸಂಚಿಕೆ-34’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲದ ಟಿಎಪಿಎಂಐ ನ ಪ್ರೊ. ನಂದನ್ ಪ್ರಭು ಮಾತನಾಡಿದರು.

Ad Widget

Ad Widget

Ad Widget

ಪುತ್ತೂರು: ನಮ್ಮಲ್ಲಿರುವ ತಪ್ಪು ವಿಚಾರವನ್ನು ತೊಡೆದು ಹಾಕುವುದೇ ಆಧ್ಯಾತ್ಮವಾಗಿದೆ. ತರ್ಕದ ಭಾಷೆಯಲ್ಲಿ ಆಧ್ಯಾತ್ಮವನ್ನು ಜಗತ್ತಿನ ಮುಂದಿಡಬೇಕು. ಆಗ ಜಗತ್ತಿಗೆ ಅಧ್ಯಾತ್ಮದ ಸಾರ ಪ್ರಕಟವಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರ. ವಿಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಅನ್ವೇಷಣೆಗಳು ನಡೆಯುತ್ತವೆ. ಅಂತೆಯೇ ಜಗತ್ತಿನಲ್ಲಿ ಬರುವಂತಹ ವಿನೂತನ ವಿಚಾರವನ್ನು ನಮ್ಮ ಕಲಿಕೆಯಲ್ಲೂ ಅಳವಡಿಸಿಕೊಳ್ಳಬಹುದು. ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆಯ ಜೊತೆಗೆ ನಮ್ಮ ಹೊಸ ಆಲೋಚನೆಗಳನ್ನು ಬಳಸಿಕೊಳ್ಳುವುದರ ಮೂಲಕ ಬದಲಾವಣೆ ತರಲು ಸಾಧ್ಯ ಎಂದು ಮಣಿಪಾಲದ ಟಿಎಪಿಎಂಐ ನ ಪ್ರೊ. ನಂದನ್ ಪ್ರಭು ಹೇಳಿದರು.

Ad Widget

Ad Widget alt="Ad Widget"/>

Ad Widget

ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಹಾಗೂ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ಇದರ ಸಹಯೋಗದಲ್ಲಿ ನಡೆದ ‘ವಿವೇಕ ಸ್ಮೃತಿ ಸಂಚಿಕೆ-34’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

Ad Widget

Ad Widget <> Ad Widget

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ನಿರ್ದೇಶಕಿ ವೇದ ಲಕ್ಷಿö್ಮÃಕಾಂತ ಆಚಾರ್ಯ ಮಾತನಾಡಿ, ವಿವೇಕಾನಂದರು ಕೇವಲ ಆಧ್ಯಾತ್ಮಿಕ ಗುರುಗಳಾಗಿರದೆ, ಜಗತ್ತಿಗೆ ಭಾರತದ ಸಂಸ್ಕೃತಿ, ಆಧ್ಯಾತ್ಮಿಕ ಶಕ್ತಿ ಜೊತೆಗೆ ಮಾನವೀಯತೆಯನ್ನು ಪರಿಚಯಿಸಿದವರು. ಯುವ ಜನತೆ ದೇಶದ ಶಕ್ತಿ ಎನ್ನುವುದು ವಿವೇಕಾನಂದರ ನಂಬಿಕೆಯಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಜೀವನವನ್ನು ಬೆಳೆಸಿಕೊಳ್ಳುವುದರೊಂದಿಗೆ ದೇಶಕ್ಕೆ ತಮ್ಮಿಂದಾಗುವ ಸಹಾಯವನ್ನು ಮಾಡಬೇಕು ಎಂದು ತಿಳಿಸಿದರು.



Ad Widget

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ವರದರಾಜ್ ಚಂದ್ರಗಿರಿ ಹಾಗೂ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪುರುಷೋತ್ತಮ ಚಿಪ್ಪಾರ್ ಕಾಲೇಜಿನ ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್, ವಿವೇಕಾನಂದ ಉಪಸ್ಥಿತರಿದ್ದರು.

Ad Widget

Ad Widget

ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ವಿಜಯ ಸರಸ್ವತಿ ಬಿ ಸ್ವಾಗತಿಸಿ, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಎಐ ಮತ್ತು ಮಷಿನ್ ಲರ್ನಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಜಯ್ ವಂದಿಸಿ, ತೃತೀಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿದ್ಯಾರ್ಥಿ ಕೃಷ್ಣ ಪ್ರಸಾದ್ ನಿರೂಪಿಸಿದರು.

Ad Widget
Continue Reading

ಶಿಕ್ಷಣ

Excel-ಎಕ್ಸೆಲ್ ಗುರುವಾಯನಕೆರೆ: ರಾಷ್ಟ್ರ ಮಟ್ಟದ ಸಿಎಸ್‌ಇಇಟಿ ಫಲಿತಾಂಶದಲ್ಲಿ- ಮಹೋನ್ನತ ಸಾಧನೆ; ವಾಣಿಜ್ಯ ವಿಭಾಗದ 23 ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆ

Published

on



Ad Widget

Ad Widget

Ad Widget

Ad Widget

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಸಿಎಸ್‌ಇಇಟಿ ಫಲಿತಾಂಶ ಪ್ರಕಟಗೊಂಡಿದೆ. ಗುರುವಾಯನಕೆರೆ ಎಕ್ಸೆಲ್‌ ಪಿ ಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. 23 ವಿದ್ಯಾರ್ಥಿಗಳು ಸಿ ಎಸ್ ಎಕ್ಸಿಕ್ಯೂಟಿವ್ ಲೆವೆಲ್ ಗೆ ಆಯ್ಮೆಯಾಗಿ ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

Ad Widget

Ad Widget

Ad Widget

ಗುರುವಾಯನಕೆರೆ: ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಸಿಎಸ್‌ಇಇಟಿ ಫಲಿತಾಂಶ ಪ್ರಕಟಗೊಂಡಿದೆ. ಗುರುವಾಯನಕೆರೆ ಎಕ್ಸೆಲ್‌ ಪಿ ಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. 23 ವಿದ್ಯಾರ್ಥಿಗಳು ಸಿ ಎಸ್ ಎಕ್ಸಿಕ್ಯೂಟಿವ್ ಲೆವೆಲ್ ಗೆ ಆಯ್ಮೆಯಾಗಿ ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ಆಯ್ಕೆಗೊಂಡ ವಿದ್ಯಾರ್ಥಿಗಳು
ಕೆ ಆರ್‌ ಧನುಷ್‌ – 274 ಅಂಕ
ದಿತೀಕ್ಷ್‌ ಹೆಗ್ಡೆ – 266
ನೀಲ್‌ ವಿಶ್ವನಾಥ್‌ – 257
ನಿಕ್ಷಯ್‌ ವಿ ಎ – 254
ಮೊಹಮ್ಮದ್‌ ನವೀದ್‌ – 257
ಎ ಶೀತಲ್‌ ಸಿಂಗ್‌ – 246
ಧನಂಜಯ್‌ ಕುಮಾರ್‌ ಎಂ.ಪಿ 244
ಮೋನಿಶಾ ಕೆ ಎಸ್‌ – 243
ರಿಧಿ ಶೆಟ್ಟಿ – 240
ಪ್ರನವ್‌ ಭಕ್ತ – 233
ದೇದಾಕ್ಷ – 227
ಕೆ ಜೆ ದಿಗಂತ್‌ ಜೈನ್‌ 220
ಅನ್ವಿತಾ ಎಂ ಆರ್‌ 219
ಮನ್ವಿತ್‌ ಜೆ – 212
ವಿದ್ಯಾ – 210
ಪ್ರವೀಣ್‌ ಪಿ ಆರ್‌ 208
ಯಶಸ್‌ ಎಸ್‌ 208
ಶ್ರಯಾಂತ್‌ ಕೆ ಗೌಡ 203
ಆಯಿಷತ್ತುಲ್‌ ಮಿಶ್ರಿಯಾ 202
ಮೊಹಮ್ಮದ್‌ ಶಾಜ್‌ 201
ಧನ್ವಿತ್‌ ಶೆಟ್ಟಿ 200
ಪಂಚಮಿ ಜೆ ಎನ್‌ 200
ಯತೀಶ್‌ ಎಸ್‌ 200

Ad Widget

Ad Widget <> Ad Widget

ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.



Ad Widget

ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್‌ ಕುಮಾರ್‌ ಜೈನ್‌, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.

Continue Reading

ಶಿಕ್ಷಣ

Philomena-ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಶೈಕ್ಷಣಿಕ ವಿಭಾಗದ ಉಪಕುಲಸಚಿವ ವಿಪಿನ್ ನಾಯ್ಕ್ ಅವರಿಗೆ ಭೌತಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ

Published

on



Ad Widget

Ad Widget

Ad Widget

Ad Widget

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕರಾದ ವಿಪಿನ್ ನಾಯ್ಕ್ ಎನ್. ಎಸ್. ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಪದವಿ ಪಡೆದಿದ್ದಾರೆ.

Ad Widget

Ad Widget

Ad Widget

ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕರಾದ ವಿಪಿನ್ ನಾಯ್ಕ್ ಎನ್. ಎಸ್. ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅವರು ಸಲ್ಲಿಸಿದ ‘ಸ್ಟಡಿ ಆಫ್ ಹೆವಿ ಮೆಸಾನ್ ಸ್ಪೆಕ್ಟ್ರಮ್ ಅಂಡ್ ಡೀಕೇಸ್ ಇನ್ ದಿ ಫ್ರೇಮ್ವರ್ಕ್ ಆಫ್ ಕ್ವಾರ್ಕ್ ಮೋಡೆಲ್ಸ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಈ ಪದವಿ ಲಭಿಸಿದೆ.

Ad Widget

Ad Widget alt="Ad Widget"/>

Ad Widget

ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಬಿ. ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಸೈದ್ಧಾಂತಿಕ ಸಂಶೋಧನೆ ನಡೆಸಿರುವ ಇವರು, ಭೌತಶಾಸ್ತ್ರ ವಿಷಯದಲ್ಲಿ NET ಹಾಗೂ KSET ಅರ್ಹತೆ ಕೂಡ ಪಡೆದಿದ್ದಾರೆ.

Ad Widget

Ad Widget <> Ad Widget

ಅಂತಾರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ 6 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವುದರ ಜೊತೆಗೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ 25ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ನಾಳದ ಸತೀಶ್ ನಾಯ್ಕ್ ಮತ್ತು ಉಷಾ ದಂಪತಿಯ ಪುತ್ರ.



Ad Widget

ಪ್ರಸ್ತುತ ಡಾ.ವಿಪಿನ್ ನಾಯ್ಕ್ ಕಾಲೇಜಿನ ಶೈಕ್ಷಣಿಕ ವಿಭಾಗದ ಉಪಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!