ಅಂತರ ರಾಜ್ಯ
Dog Box-ಸಾಕುಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್: ವಂದೇ ಭಾರತ್ ಸ್ಲೀಪರ್‌ನಲ್ಲಿ ‘ಡಾಗ್ ಬಾಕ್ಸ್’ ಸೌಲಭ್ಯ
ಪ್ರವಾಸ ಅಥವಾ ದೂರದ ಊರಿಗೆ ಪ್ರಯಾಣಿಸುವಾಗ ಮನೆಯ ಮುದ್ದಿನ ಸಾಕುನಾಯಿಯನ್ನು ಎಲ್ಲಿ ಬಿಟ್ಟು ಹೋಗುವುದು ಎಂಬ ಚಿಂತೆ ಸಾಕುಪ್ರಾಣಿ ಪ್ರಿಯರನ್ನು ಕಾಡುವುದು ಸಾಮಾನ್ಯ. ಇದೀಗ ಸಾಕುನಾಯಿಗಳನ್ನೂ ತಮ್ಮೊಂದಿಗೆ ರೈಲಿನಲ್ಲಿ ಕರೆದೊಯ್ಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ನಾಯಿಗಳಿಗಾಗಿ ಪ್ರತ್ಯೇಕ ‘ಡಾಗ್ ಬಾಕ್ಸ್’ ಸೌಲಭ್ಯ ಪರಿಚಯಿಸಲಾಗಿದೆ ಎಂದು ವರದಿಯಾಗಿದೆ.
ನವದೆಹಲಿ: ಪ್ರವಾಸ ಅಥವಾ ದೂರದ ಊರಿಗೆ ಪ್ರಯಾಣಿಸುವಾಗ ಮನೆಯ ಮುದ್ದಿನ ಸಾಕುನಾಯಿಯನ್ನು ಎಲ್ಲಿ ಬಿಟ್ಟು ಹೋಗುವುದು ಎಂಬ ಚಿಂತೆ ಸಾಕುಪ್ರಾಣಿ ಪ್ರಿಯರನ್ನು ಕಾಡುವುದು ಸಾಮಾನ್ಯ. ಇದೀಗ ಸಾಕುನಾಯಿಗಳನ್ನೂ ತಮ್ಮೊಂದಿಗೆ ರೈಲಿನಲ್ಲಿ ಕರೆದೊಯ್ಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ನಾಯಿಗಳಿಗಾಗಿ ಪ್ರತ್ಯೇಕ ‘ಡಾಗ್ ಬಾಕ್ಸ್’ ಸೌಲಭ್ಯ ಪರಿಚಯಿಸಲಾಗಿದೆ ಎಂದು ವರದಿಯಾಗಿದೆ.
ಈ ಹಿಂದೆ ರೈಲಿನಲ್ಲಿ ಸಾಕುನಾಯಿಗಳನ್ನು ಕರೆದೊಯ್ಯಲು ಹಲವು ನಿರ್ಬಂಧಗಳಿದ್ದವು. ಪ್ರಥಮ ದರ್ಜೆ ಎಸಿ ಬೋಗಿಯಲ್ಲಿ ಸಂಪೂರ್ಣ ಕ್ಯಾಬಿನ್ ಅಥವಾ ಕೂಪೆ ಕಾಯ್ದಿರಿಸಿದಾಗ ಮಾತ್ರ ನಾಯಿಗಳನ್ನು ಮಾಲೀಕರೊಂದಿಗೆ ಕರೆದೊಯ್ಯಲು ಅವಕಾಶವಿತ್ತು. ಇದರಿಂದ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುತ್ತಿತ್ತು.
ಹೊಸ ವ್ಯವಸ್ಥೆಯಲ್ಲಿ ನಾಯಿಗಳಿಗಾಗಿ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಗಾಳಿ-ಬೆಳಕಿನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಮೂಲ ವರದಿ ತಿಳಿಸಿದೆ.
ಬುಕಿಂಗ್ ಮಾಡುವುದು ಹೇಗೆ?
ಸಾಕುನಾಯಿಗಳಿಗಾಗಿ ಈ ಸೌಲಭ್ಯ ಪಡೆಯಲು ಪ್ರಯಾಣಿಕರು ಮೊದಲು ತಮ್ಮ ರೈಲು ಟಿಕೆಟ್ ಖಚಿತಪಡಿಸಿಕೊಳ್ಳಬೇಕು. ಬಳಿಕ ರೈಲು ಹೊರಡುವ ಕೆಲವು ಗಂಟೆಗಳ ಮುನ್ನ ನಿಲ್ದಾಣದ ಪಾರ್ಸೆಲ್ ಕಚೇರಿಯನ್ನು ಸಂಪರ್ಕಿಸಿ, ನಾಯಿಯ ತೂಕ ಮತ್ತು ಗಾತ್ರಕ್ಕೆ ಅನುಗುಣವಾಗಿ ನಿಗದಿತ ಶುಲ್ಕ ಪಾವತಿಸಿ ಬುಕ್ಕಿಂಗ್ ಮಾಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಂತರ ರಾಜ್ಯ
Fire-ಕೇರಳದಲ್ಲಿ ಕಾರಿಗೆ ಬೆಂಕಿ: ಕರ್ನಾಟಕದ ಆರು ಮಂದಿ ಕೂದಲೆಳೆ ಅಂತರದಲ್ಲಿ ಪಾರು..!
ಕೇರಳದಲ್ಲಿ ಅಪಘಾತಕ್ಕೀಡಾದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕರ್ನಾಟಕದ ಆರು ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಕೋಯಿಕ್ಕೋಡ್ ಜಿಲ್ಲೆಯ ವಡಗರ ಸಮೀಪದ ಕುಂಜಿಪ್ಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸುಮಾರು 7 ಗಂಟೆಗೆ ಈ ಘಟನೆ ಸಂಭವಿಸಿದೆ.
ಕೋಯಿಕ್ಕೋಡ್: ಕೇರಳದಲ್ಲಿ ಅಪಘಾತಕ್ಕೀಡಾದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕರ್ನಾಟಕದ ಆರು ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಕೋಯಿಕ್ಕೋಡ್ ಜಿಲ್ಲೆಯ ವಡಗರ ಸಮೀಪದ ಕುಂಜಿಪ್ಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸುಮಾರು 7 ಗಂಟೆಗೆ ಈ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅದೃಷ್ಟವಶಾತ್, ಕಾರಿನಲ್ಲಿದ್ದ ಆರು ಮಂದಿ ತಕ್ಷಣವೇ ಹೊರಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ಬಳಿಕ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದವರು ಕರ್ನಾಟಕದವರಾಗಿದ್ದು, ಗುರುವಾಯೂರು ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಕಾರು ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂತರ ರಾಜ್ಯ
Commander-ನಗ್ನ ಚಿತ್ರಗಳ ಆಮಿಷಕ್ಕೆ ಬಲಿಯಾದ ವಾಯುಪಡೆ ವಿಂಗ್ ಕಮಾಂಡರ್: ಪಾಕ್ ಏಜೆಂಟ್‌ಗೆ ರಹಸ್ಯ ಯುದ್ಧ ಮಾಹಿತಿ ಸೋರಿಕೆ..!
ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ ಏಜೆಂಟ್ ಕಳುಹಿಸುತ್ತಿದ್ದ ನಗ್ನ ಚಿತ್ರಗಳ ಆಮಿಷಕ್ಕೆ ಒಳಗಾಗಿ ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್ ಒಬ್ಬರು ದೇಶದ ಅತ್ಯಂತ ಸೂಕ್ಷ್ಮ ರಕ್ಷಣಾ ಮತ್ತು ಯುದ್ಧ ಕಾರ್ಯಾಚರಣೆಗಳ ಮಾಹಿತಿಯನ್ನು ಸೋರಿಕೆ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಹೊಸದಿಲ್ಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ ಏಜೆಂಟ್ ಕಳುಹಿಸುತ್ತಿದ್ದ ನಗ್ನ ಚಿತ್ರಗಳ ಆಮಿಷಕ್ಕೆ ಒಳಗಾಗಿ ಭಾರತೀಯ ವಾಯುಪಡೆಯ (IAF) ವಿಂಗ್ ಕಮಾಂಡರ್ ಒಬ್ಬರು ದೇಶದ ಅತ್ಯಂತ ಸೂಕ್ಷ್ಮ ರಕ್ಷಣಾ ಮತ್ತು ಯುದ್ಧ ಕಾರ್ಯಾಚರಣೆಗಳ ಮಾಹಿತಿಯನ್ನು ಸೋರಿಕೆ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಅಧಿಕೃತ ರಹಸ್ಯ ಕಾಯ್ದೆಯಡಿ ಬಂಧಿತನಾಗಿರುವ ವಿಂಗ್ ಕಮಾಂಡರ್ ಕಳೆದ ಐದು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. 2026ರ ಜನವರಿ 12ರಿಂದ ಏಪ್ರಿಲ್ 1ರವರೆಗೆ ವಾಟ್ಸ್‌ಆ್ಯಪ್ ಮೂಲಕ ಪಾಕ್ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದ ಆತ, ಹಲವು ಸೂಕ್ಷ್ಮ ಮಿಲಿಟರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ.
ಏಪ್ರಿಲ್ 1ರಂದು ಕಚೇರಿಯೊಳಗೆ ಸ್ಮಾರ್ಟ್‌ಫೋನ್ ತೆಗೆದುಕೊಂಡು ಹೋಗಿದ್ದ ವೇಳೆ ನಡೆದ ತಪಾಸಣೆಯಲ್ಲಿ ಈ ಕೃತ್ಯ ಬಯಲಾಗಿದೆ. ಪಾಕ್ ಏಜೆಂಟ್ ಕಳುಹಿಸುತ್ತಿದ್ದ ಪ್ರತಿ ನಗ್ನ ಚಿತ್ರಕ್ಕೆ ಪ್ರತಿಯಾಗಿ ವಾಯುಪಡೆಯ ರಹಸ್ಯ ಯುದ್ಧ ಯೋಜನೆಯ ಒಂದೊಂದು ಪುಟವನ್ನು ಕಳುಹಿಸುವ ಒಪ್ಪಂದ ಮಾಡಿಕೊಂಡಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಸೋರಿಕೆಯಾದ ರಹಸ್ಯ ಮಾಹಿತಿಗಳೇನು?
ವಾಯುಪಡೆಯ ರಹಸ್ಯ ಡ್ರೋನ್ ಘಟಕದ ಸಾಮರ್ಥ್ಯ, ಕಾರ್ಯಾಚರಣೆಯ ವಿಧಾನ, ಹಾರಾಟದ ಅವಧಿ, ಶಸ್ತ್ರಾಸ್ತ್ರಗಳ ಗುರಿ ವ್ಯವಸ್ಥೆ ಹಾಗೂ ಯುದ್ಧದ ಸಂದರ್ಭದಲ್ಲಿ ಡ್ರೋನ್‌ಗಳನ್ನು ನಿಯೋಜಿಸಬಹುದಾದ ಸ್ಥಳಗಳ ಮಾಹಿತಿಯನ್ನು ಆರೋಪಿ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದರ ಜೊತೆಗೆ ಲೇಹ್‌ನಲ್ಲಿ ನಿಯೋಜಿಸಲಾಗಿರುವ ಯುದ್ಧ ವಿಮಾನಗಳ ವಿವರ, ರಾಜಸ್ಥಾನದ ಸೂರತ್‌ಗಢದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ನಡೆದ ಮಿಲಿಟರಿ ಸಮರಾಭ್ಯಾಸದ ಮಾಹಿತಿ ಹಾಗೂ ಸೂಕ್ಷ್ಮ ಸೇನಾ ನೆಲೆಗಳ ವಿವರಗಳನ್ನೂ ಪಾಕ್ ಏಜೆಂಟ್‌ಗೆ ನೀಡಿದ್ದಾನೆ ಎನ್ನಲಾಗಿದೆ.
ಐವರು ಅಧೀನ ಅಧಿಕಾರಿಗಳ ಮೊಬೈಲ್‌ಗಳಿಗೂ ಸ್ಪೈವೇರ್!
ಈ ಪ್ರಕರಣದ ಮತ್ತೊಂದು ಗಂಭೀರ ಅಂಶವೆಂದರೆ, ಪಾಕ್ ಏಜೆಂಟ್ ಕಳುಹಿಸಿದ್ದ ಮಾಲ್‌ವೇರ್ ಮತ್ತು ಸ್ಪೈವೇರ್ ಹೊಂದಿರುವ ಲಿಂಕ್‌ಗಳು ಹಾಗೂ ಆ್ಯಪ್‌ಗಳನ್ನು ತನ್ನ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಐವರು ಅಧಿಕಾರಿಗಳ ಮೊಬೈಲ್‌ಗಳಲ್ಲಿ ಅಳವಡಿಸಲು ಆರೋಪಿ ಸಹಕರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಈ ಮೂಲಕ ಅಧಿಕಾರಿಗಳ ಮೊಬೈಲ್‌ಗಳಲ್ಲಿದ್ದ ಗೌಪ್ಯ ಮಾಹಿತಿ ಹಾಗೂ ಹಿರಿಯ ಅಧಿಕಾರಿಗಳೊಂದಿಗಿನ ಸಂವಹನವನ್ನು ಕದಿಯಲು ಸೈಬರ್ ಗೂಢಚರ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
3,008 ಸಂದೇಶಗಳು, 65 ಫೋಟೋಗಳ ವಿನಿಮಯ
ಆರೋಪಿ ಮತ್ತು ಪಾಕ್ ಏಜೆಂಟ್ ನಡುವಿನ ವಾಟ್ಸ್‌ಆ್ಯಪ್ ಸಂವಹನವನ್ನು ಪರಿಶೀಲಿಸಿದಾಗ ಒಟ್ಟು 3,008 ಪಠ್ಯ ಸಂದೇಶಗಳು, 65 ಫೋಟೋಗಳು, 42 ಧ್ವನಿ ಕರೆಗಳು, 4 ವಿಡಿಯೋ ಕರೆಗಳು ಹಾಗೂ 6 URL ಲಿಂಕ್‌ಗಳ ವಿನಿಮಯ ನಡೆದಿರುವುದು ಪತ್ತೆಯಾಗಿದೆ.
ಈ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಇನ್ನಷ್ಟು ರಹಸ್ಯ ಮಾಹಿತಿ ಸೋರಿಕೆಯಾಗಿದೆಯೇ? ಈ ಪಿತೂರಿಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ಕುರಿತು ದಿಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಂತರ ರಾಜ್ಯ
Sonia Gandhi-ಸೋನಿಯಾ ಗಾಂಧಿ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ: ತೆಲುಗಿನಲ್ಲಿ ತೆರೆಗೆ ಬರಲಿದೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’..!
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನ ಹಾಗೂ ರಾಜಕೀಯ ಪಯಣವನ್ನು ಆಧರಿಸಿದ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ತೆಲುಗು ಚಲನಚಿತ್ರವಾಗಿ ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ. ಈ ಕುರಿತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಘೋಷಣೆ ಮಾಡಿದ್ದಾರೆ.
ಹೈದರಾಬಾದ್: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನ ಹಾಗೂ ರಾಜಕೀಯ ಪಯಣವನ್ನು ಆಧರಿಸಿದ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ತೆಲುಗು ಚಲನಚಿತ್ರವಾಗಿ ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ. ಈ ಕುರಿತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಘೋಷಣೆ ಮಾಡಿದ್ದಾರೆ.
ಗುರುವಾರ ಸಂಗಾರೆಡ್ಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚಿತ್ರದ ನಿರ್ಮಾಣಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೈಜೋಡಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜುಲಕಂಟಿ ಆಂಜನೇಯಲು ಅವರು ಸಿನಿಮಾ ನಿರ್ಮಾಣಕ್ಕಾಗಿ ₹2 ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಚಿತ್ರದ ಆರಂಭಿಕ ನಿರ್ಮಾಣ ಕಾರ್ಯಗಳ ಮೇಲ್ವಿಚಾರಣೆಗಾಗಿ 50 ಸದಸ್ಯರ ಸಮಿತಿ ರಚಿಸಲು ಜಗ್ಗಾ ರೆಡ್ಡಿ ಪ್ರಸ್ತಾಪಿಸಿದ್ದಾರೆ. ಗಾಂಧಿ ಭವನದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರಿಪ್ರಸಾದ್ ಸಮಿತಿಯ ಚಟುವಟಿಕೆಗಳನ್ನು ನಿರ್ವಹಿಸಲಿದ್ದಾರೆ.
“ನೀವೆಲ್ಲರೂ ಚುನಾವಣೆಗೆ ಹಣ ಖರ್ಚು ಮಾಡುತ್ತೀರಲ್ಲವೇ? ಇದನ್ನೂ ಅಂತಹದ್ದೇ ಒಂದು ಖರ್ಚು ಎಂದು ಪರಿಗಣಿಸಿ. ನಾವೆಲ್ಲರೂ ಸೇರಿ ಬಜೆಟ್ ಸಂಗ್ರಹಿಸಿ, ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡೋಣ” ಎಂದು ಜಗ್ಗಾ ರೆಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಅಗತ್ಯ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಟಿಪಿಸಿಸಿ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರನ್ನು ಆಹ್ವಾನಿಸಿ ಚಿತ್ರದ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಸೋನಿಯಾ ಗಾಂಧಿ ಅವರ ಜೀವನದ ಅನುಭವಗಳು ಮತ್ತು ರಾಜಕೀಯ ಪಯಣವನ್ನು ಕಾರ್ಯಕರ್ತರು ತಿಳಿದುಕೊಳ್ಳಲು ಅನುಕೂಲವಾಗುವಂತೆ ಅವರ ಆತ್ಮಕಥೆಯ ಪ್ರತಿಗಳನ್ನು ತರಿಸಿ ವಿತರಿಸುವುದಾಗಿಯೂ ಹೇಳಿದ್ದಾರೆ.
ಸೋನಿಯಾ ಗಾಂಧಿ ಜೀವನದ ಪ್ರಮುಖ ಘಟ್ಟಗಳು ಚಿತ್ರದಲ್ಲಿ ಅನಾವರಣ
ಉದ್ದೇಶಿತ ಸಿನಿಮಾದಲ್ಲಿ ಸೋನಿಯಾ ಗಾಂಧಿ ಅವರು ಗಾಂಧಿ ಕುಟುಂಬದೊಂದಿಗೆ ಬೆಸೆದುಕೊಂಡ ದಿನಗಳಿಂದ ಹಿಡಿದು ದೇಶದ ಪ್ರಮುಖ ರಾಜಕೀಯ ನಾಯಕಿಯಾಗಿ ಬೆಳೆದ ಹಾದಿಯನ್ನು ಚಿತ್ರಿಸುವ ಉದ್ದೇಶವಿದೆ ಎಂದು ಜಗ್ಗಾ ರೆಡ್ಡಿ ತಿಳಿಸಿದ್ದಾರೆ.
ಇಂದಿರಾ ಗಾಂಧಿ ಅವರ ಸೊಸೆಯಾಗಿ, ರಾಜೀವ್ ಗಾಂಧಿ ಅವರ ಪತ್ನಿಯಾಗಿ ಹಾಗೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ತಾಯಿಯಾಗಿ ಸೋನಿಯಾ ಗಾಂಧಿ ಅವರ ಜೀವನದ ವಿವಿಧ ಮಜಲುಗಳು ಚಿತ್ರದಲ್ಲಿ ಮೂಡಿಬರಲಿವೆ.
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ ಕುಟುಂಬ ಎದುರಿಸಿದ ಸಂಕಷ್ಟಗಳು, ಸೋನಿಯಾ ಗಾಂಧಿ ಅವರ ಮುಂದಿನ ರಾಜಕೀಯ ಸವಾಲುಗಳು ಹಾಗೂ ರಾಜಕೀಯ ಜವಾಬ್ದಾರಿಗಳ ನಡುವೆ ಮಕ್ಕಳನ್ನು ಬೆಳೆಸಿದ ರೀತಿ ಸೇರಿದಂತೆ ಹಲವು ಪ್ರಮುಖ ಘಟನೆಗಳು ಸಿನಿಮಾದಲ್ಲಿ ಇರಲಿವೆ ಎಂದು ವರದಿಯಾಗಿದೆ.
ಭಾರತದಂತಹ ವಿವಿಧ ಧರ್ಮ, ಜಾತಿ ಮತ್ತು ಭಾಷೆಗಳ ವೈವಿಧ್ಯಮಯ ದೇಶದಲ್ಲಿ ಸೋನಿಯಾ ಗಾಂಧಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ ಎಂದು ಜಗ್ಗಾ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
ಸ್ಥಳೀಯ19 hours agoMandya-ಕೊಲೆಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆ 6 ವರ್ಷಗಳ ಬಳಿಕ ಜೀವಂತ ಪ್ರತ್ಯಕ್ಷ..! ಮಾಡದ ತಪ್ಪಿಗೆ ಎರಡೂವರೆ ವರ್ಷ ಜೈಲಿನಲ್ಲಿದ್ದ ವ್ಯಕ್ತಿ
-
ಲೇಖನಗಳು17 hours agoRahu-Ketu-18 ತಿಂಗಳ ಬಳಿಕ ರಾಹು-ಕೇತು ರಾಶಿ ಬದಲಾವಣೆ; 12 ರಾಶಿಗಳ ಭವಿಷ್ಯ ಹೇಗಿರಲಿದೆ?
-
ಸ್ಥಳೀಯ20 hours agoMurder-26 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಕೊಲೆ ಆರೋಪಿ..!
-
ಕ್ರೈಂ19 hours agoMurder-7 ಮಂದಿಯ ಹತ್ಯೆ ಪ್ರಕರಣ: ಶವದ ಜೊತೆ ಖಾರದ ಪುಡಿ, ಒಣಮೆಣಸಿನಕಾಯಿ ತುಂಬಿಸುತ್ತಿದ್ದ ಹಂತಕ..!
-
ಅಂತರ ರಾಜ್ಯ18 hours agoCommander-ನಗ್ನ ಚಿತ್ರಗಳ ಆಮಿಷಕ್ಕೆ ಬಲಿಯಾದ ವಾಯುಪಡೆ ವಿಂಗ್ ಕಮಾಂಡರ್: ಪಾಕ್ ಏಜೆಂಟ್‌ಗೆ ರಹಸ್ಯ ಯುದ್ಧ ಮಾಹಿತಿ ಸೋರಿಕೆ..!
-
Uncategorized14 hours agoSoujanya case-Big Breaking: ಸೌಜನ್ಯ ಪ್ರಕರಣ: ಎಸ್ಐಟಿ ಕಚೇರಿಯಲ್ಲಿ ಕೊನೆಯದಾಗಿ ನೋಡಿದ್ದ ಐವರು ಸಾಕ್ಷಿಗಳ ಹೇಳಿಕೆ ದಾಖಲು
-
ಆರೋಗ್ಯ18 hours ago‘Ritu Taare’ scheme-35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯಕ್ಕೆ ‘ಋತು ತಾರೆ’ ಯೋಜನೆ; ದ.ಕ.ದಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ..! ನಟಿ ರಮ್ಯಾ ರಾಯಭಾರಿ
-
ಸ್ಥಳೀಯ14 hours agoDharmasthala-ಧರ್ಮಸ್ಥಳ ಸ್ನಾನಘಟ್ಟದ ಬಳಿ ತಲೆಬುರುಡೆ : ತನಿಖೆ ಯಾರು ಮಾಡಬೇಕು..? ಪೊಲೀಸರಲ್ಲೇ ಗೊಂದಲ…!















