Connect with us

ರಾಜಕೀಯ

BIG Political FACEOFF : ಪೂಂಜಾ ರಣವೀಳ್ಯ ಸ್ವೀಕರಿಸಿದ ಅಶೋಕ್ ರೈ: ಡೆವಲಪ್‌ಮೆಂಟ್ ಚರ್ಚೆಗೆ ಪುತ್ತೂರಿನಲ್ಲಿ ಮುಹೂರ್ತ ಫಿಕ್ಸ್! ; ಪೂಂಜಾ ಪಾಲಿಗೆ ಈಗ ಪ್ರತಿಷ್ಠೆಯ ಪ್ರಶ್ನೆ; ಸವಾಲು ಸ್ವೀಕರಿಸದೆ ವಿಧಿಯಿಲ್ಲವೇ?

Published

on



Ad Widget

Ad Widget

Ad Widget

Ad Widget

ಪುತ್ತೂರು, ನ.15: ಅಡಿಕೆ ಹಾಗೂ ಕಾಳುಮೆಣಸು ಬೆಳೆ ವಿಮೆ ವಿಚಾರವಾಗಿ ಆರಂಭವಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಡುವಿನ ವಾಕ್ಸಮರ ಇದೀಗ ಅಭಿವೃದ್ಧಿಯ ಅಂಕಿಅಂಶಗಳ ಬಹಿರಂಗ ಸಮರಕ್ಕೆ ತಿರುಗಿದೆ. ಪರಸ್ಪರ ರಾಜಕೀಯ ಟೀಕೆ, ಸವಾಲು ಮತ್ತು ಪ್ರತಿ ಸವಾಲುಗಳ ಮೂಲಕ ಕಾವೇರಿದ್ದ ಇಬ್ಬರು ಶಾಸಕರ ನಡುವಿನ ಮಾತಿನ ಸಮರಕ್ಕೆ ಇದೀಗ ಪುತ್ತೂರಿನಲ್ಲಿ ವೇದಿಕೆ ಸಿದ್ಧವಾಗಿದೆ. ಅಶೋಕ್ ರೈ ಅವರು ಹರೀಶ್ ಪೂಂಜಾ ಅವರಿಗೆ ನೇರ ಆಹ್ವಾನ ನೀಡಿದ್ದು, ಸೋಮವಾರ ಮಧ್ಯಾಹ್ನ 12 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಲ್ಲಿ ಅಭಿವೃದ್ಧಿ ಹಾಗೂ ಅನುದಾನದ ಲೆಕ್ಕಪತ್ರ ಮಂಡಿಸಲು ಸಿದ್ಧ ಎಂದು ಘೋಷಿಸಿದ್ದಾರೆ. ಈಗ ಎಲ್ಲರ ಕಣ್ಣು ಹರೀಶ್ ಪೂಂಜಾ ಅವರ ಮುಂದಿನ ನಡೆ ಮೇಲೆ ನೆಟ್ಟಿದೆ.

Ad Widget

Ad Widget

Ad Widget

ಬೆಳೆ ವಿಮೆ ವಿಚಾರದಿಂದ ಶುರುವಾದ ವಾಕ್ಸಮರ!

Ad Widget

Ad Widget alt="Ad Widget"/>

Ad Widget

ಅಡಿಕೆ ಹಾಗೂ ಕಾಳುಮೆಣಸು ಬೆಳೆ ವಿಮೆ ಪರಿಹಾರದ ಮೊತ್ತ ರೈತರ ಖಾತೆಗೆ ಕಡಿಮೆ ಜಮೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮಂಗಳೂರಿನಲ್ಲಿ ಸಹಕಾರಿ ಸಂಘಗಳ ಸದಸ್ಯರ ಬೃಹತ್ ಸಮಾವೇಶ ಆಯೋಜಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ರೈತರಿಗೆ ಅನ್ಯಾಯವಾಗಲು ರಾಜ್ಯ ಸರ್ಕಾರ ಟರ್ಮ್ ಶೀಟ್ ಬದಲಾಯಿಸಿರುವುದೇ ಕಾರಣ ಎಂದು ಆರೋಪಿಸಿದ್ದರು.

Ad Widget

Ad Widget <> Ad Widget

ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದ್ದರೂ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ ಎಂದು ಟೀಕಿಸಿದ್ದ ಅವರು, ಸದಾ ಶರ್ಟ್‌ ನಲ್ಲಿ ಮೇಲಿನಿಂದ ಕೆಳಗಿನವರೆಗೆ ಮೈಕ್ ಸಿಕ್ಕಿಸಿಕೊಂಡು ನಾನು ಹುಟ್ಟಿಸಿದ ಮಗುವಿಗೆ ನಾನೇ ಅಪ್ಪ ಎಂದು ಹೇಳುವ ಪುತ್ತೂರು ಶಾಸಕ ಅಶೋಕ್ ರೈ ಅವರು ಈ ವಿಚಾರದಲ್ಲಿ ಏಕೆ ಮಾತನಾಡುತ್ತಿಲ್ಲ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು.



Ad Widget

ರೈ ತಿರುಗೇಟು !

Ad Widget

Ad Widget

ಇದಕ್ಕೆ ಅಶೋಕ ಜನಮನ ಕಾರ್ಯಕ್ರಮದ ಚಪ್ಪರ ಮುಹೂರ್ತದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಅಶೋಕ್ ರೈ, ಹರೀಶ್ ಪೂಂಜಾ ಅವರ ಟೀಕೆಗೆ ವ್ಯಂಗ್ಯಭರಿತ ತಿರುಗೇಟು ನೀಡಿದ್ದರು.

“ಹೌದು, ನಾನು ಹುಟ್ಟಿಸಿದ್ದಕ್ಕೆ ನಾನೇ ಅಪ್ಪ. ಬೇರೆಯವರು ಹುಟ್ಟಿಸುವುದಕ್ಕೆ ನಾನು ಅಪ್ಪ ಎಂದು ಹೇಳಿಕೊಳ್ಳುವುದು ಅವರು” ಎಂದು ಹೇಳುವ ಮೂಲಕ ಮಾತಿನ ಸಮರಕ್ಕೆ ಹೊಸ ತಿರುವು ನೀಡಿದ್ದರು. ಇದೇ ವೇಳೆ ಮೊದಲು ಉಪ್ಪಿನಂಗಡಿ–ಗುರುವಾಯನಕೆರೆ ನಡುವಿನ ರಸ್ತೆಯನ್ನು ದುರಸ್ತಿ ಮಾಡಲಿ ಎಂದು ಸವಾಲು ಹಾಕಿದ್ದರು.

ಉಪ್ಪಿನಂಗಡಿಯಲ್ಲಿ ಪೂಂಜಾ ಹಾಕಿದ ಅಭಿವೃದ್ಧಿಯ ಸವಾಲು!

ಇದರ ಮುಂದುವರಿದ ಭಾಗವಾಗಿ ಉಪ್ಪಿನಂಗಡಿಯಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಹರೀಶ್ ಪೂಂಜಾ, ಅಶೋಕ್ ರೈ ವಿರುದ್ಧ ಮತ್ತಷ್ಟು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದರು.

“ಅಶೋಕ್ ರೈಗೆ ಕತ್ತೆಯ ಪ್ರಾಯ ಆಗಿರಬಹುದು. ಆದರೆ ನನ್ನಷ್ಟು ಅನುಭವ ನಿಮ್ಮಲ್ಲಿ ಇಲ್ಲ ಸ್ವಾಮಿ. ನೀವು ಏನು ಮಾಡುತ್ತಿದ್ದೀರಿ ಎಂದು ನಮಗೆ ಗೊತ್ತು.. ಬಿಜೆಪಿ ಸರ್ಕಾರ ಇದ್ದಾಗ ಬೆಂಗಳೂರಿನ ಮೂರನೇ ಮಹಡಿಯಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ನೀವು ನಮಗೆ ಹೇಳಲು ಬರಬೇಡಿ. ಪುತ್ತೂರು ಅಥವಾ ನಿಮ್ಮ ಕಚೇರಿಯಲ್ಲಿ ನನಗೆ ಆಹ್ವಾನ ನೀಡಿ. ಚರ್ಚೆಗೆ ಬರಲು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದ್ದರು.

ತಮ್ಮ ಆಡಳಿತಾವಧಿಯಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ ತಂದಿರುವ ಅನುದಾನಗಳ ದಾಖಲೆಗಳನ್ನು ಮುಂದಿಡಲು ಸಿದ್ಧವಿದ್ದು, ಅಶೋಕ್ ರೈ ಕೂಡ ತಮ್ಮ ಮೂರೂವರೆ ವರ್ಷದ ಆಡಳಿತದಲ್ಲಿ ತಂದಿರುವ ಅನುದಾನದ ವಿವರಗಳನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದರು.

ಪೂಂಜಾ ಸವಾಲಿಗೆ ಅಶೋಕ್ ರೈ ಪ್ರತಿ ಸವಾಲು!

ಹರೀಶ್ ಪೂಂಜಾ ಅವರ ಸವಾಲಿಗೆ ಇದೀಗ ಅಶೋಕ್ ರೈ ನೇರವಾಗಿಯೇ ಉತ್ತರ ನೀಡಿದ್ದಾರೆ. ಪುತ್ತೂರು ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುದಾನದ ವಿವರಗಳನ್ನು ಇಬ್ಬರೂ ಶಾಸಕರು ಮಾಧ್ಯಮಗಳ ಮುಂದೆ ಜಂಟಿಯಾಗಿ ಮಂಡಿಸೋಣ ಎಂದು ಆಹ್ವಾನಿಸಿದ್ದಾರೆ.

ಶನಿವಾರ ಸಂಜೆ ಸಂಪ್ಯದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ‘ಗ್ರಾಮ ಮಟ್ಟದ ಜನಾಂದೋಲನ ಸಭೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಹರೀಶ್ ಪೂಂಜಾ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಈ ಆಹ್ವಾನ ನೀಡುತ್ತಿದ್ದೇನೆ ಎಂದರು.

“ನಾನು ಸೋಮವಾರ (ನ.16) ಮಧ್ಯಾಹ್ನ 12 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಲ್ಲಿ ನನ್ನ ಕ್ಷೇತ್ರದ ಸಾಧನೆ ಮತ್ತು ಅನುದಾನದ ಸಂಪೂರ್ಣ ವಿವರಗಳೊಂದಿಗೆ ಸಿದ್ಧನಿರುತ್ತೇನೆ. ಹರೀಶ್ ಪೂಂಜಾ ಅವರೂ ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನದ ದಾಖಲೆಗಳನ್ನು ತೆಗೆದುಕೊಂಡು ಬರಲಿ. ಇಬ್ಬರೂ ನಮ್ಮ ಸಾಧನೆಗಳನ್ನು ಮಾಧ್ಯಮಗಳ ಮುಂದೆ ಇಡೋಣ. ನಮ್ಮ ನಡುವೆ ಯಾವುದೇ ವಾಗ್ವಾದ ಬೇಡ. ಮಾಧ್ಯಮದವರು ಮತ್ತು ಜನರೇ ಸತ್ಯಾಸತ್ಯತೆಯನ್ನು ನಿರ್ಧರಿಸಲಿ. ಬಳಿಕ ಒಟ್ಟಿಗೆ ಕಾಫಿ ಕುಡಿದು ತೆರಳೋಣ” ಎಂದು ಅಶೋಕ್ ರೈ ಆಹ್ವಾನ ನೀಡಿದ್ದಾರೆ.

‘ಪೂಂಜಾ ಹೊಡೆದು ಓಡುವವರು’ ಎಂದ ಅಮಳ ರಾಮಚಂದ್ರ!

ಇನ್ನೂ ಶನಿವಾರ ಬೆಳಿಗ್ಗೆ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯ ವಕ್ತಾರ ಅಮಳ ರಾಮಚಂದ್ರ, ಹರೀಶ್ ಪೂಂಜಾ ಅವರು ಕೇವಲ ಬಾಯಲ್ಲಿ ಸವಾಲು ಹಾಕುತ್ತಾರೆ. ಪುತ್ತೂರಿಗೆ ಬಂದು ಚರ್ಚೆ ಎದುರಿಸಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಪೂಂಜಾ ಪಾಲಿಗೆ ಈಗ ಪ್ರತಿಷ್ಠೆಯ ಪ್ರಶ್ನೆ; ಸವಾಲು ಸ್ವೀಕರಿಸದೆ ವಿಧಿಯಿಲ್ಲವೇ?

ಹರೀಶ್ ಪೂಂಜಾ ಅವರೇ ಬಹಿರಂಗವಾಗಿ ಚರ್ಚೆಗೆ  ಬರುವಂತೆ  ಅಶೋಕ್ ರೈ ಅವರಿಗೆ ಸವಾಲು ಹಾಕಿದ್ದರು. ಇದೀಗ ಅದೇ ಸವಾಲನ್ನು ಅಶೋಕ್ ರೈ ಸ್ವೀಕರಿಸಿದ್ದು ಮಾತ್ರವಲ್ಲದೆ, ಒಂದು ಹೆಜ್ಜೆ ಮುಂದೆ ಹೋಗಿ ದಿನಾಂಕ, ಸಮಯ ಹಾಗೂ ಸ್ಥಳವನ್ನೂ ನಿಗದಿಪಡಿಸಿ ಬಹಿರಂಗ ಆಹ್ವಾನ ನೀಡಿದ್ದಾರೆ. ಹೀಗಾಗಿ ರಾಜಕೀಯ ಅಖಾಡದಲ್ಲಿ ಸವಾಲು ಹಾಕಿದ್ದ ಹರೀಶ್ ಪೂಂಜಾ ಅವರೇ ಈಗ ಅದನ್ನು ಎದುರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ರಾಜಕೀಯದಲ್ಲಿ ಎದುರಾಳಿಗೆ ಸವಾಲು ಹಾಕುವುದು ಒಂದು ವಿಚಾರವಾದರೆ, ಎದುರಾಳಿ ಆ ಸವಾಲನ್ನು ಸ್ವೀಕರಿಸಿದಾಗ ಅದನ್ನು ಎದುರಿಸುವುದು ಮತ್ತೊಂದು ವಿಚಾರ. ಅದರಲ್ಲೂ ತಮ್ಮ ಕ್ಷೇತ್ರದ ಅಭಿವೃದ್ಧಿ, ಅನುದಾನ ಹಾಗೂ ಕಾಮಗಾರಿಗಳ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಸಿದ್ಧ ಎಂದು ಹೇಳಿದ್ದ ಪೂಂಜಾ ಅವರಿಗೆ ಇದೀಗ ಹಿಂದೆ ಸರಿಯುವುದು ಸುಲಭದ ನಿರ್ಧಾರವಾಗಲಾರದು. ಪುತ್ತೂರಿಗೆ ಬಂದು ಚರ್ಚೆ ಎದುರಿಸಿದರೆ ತಮ್ಮ ಕ್ಷೇತ್ರದ ಸಾಧನೆಗಳನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಬಾರದಿದ್ದರೆ, ತಾವೇ ಹಾಕಿದ ಸವಾಲಿನಿಂದ ಹಿಂದೆ ಸರಿದರು ಎಂಬ ಟೀಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಅಶೋಕ್ ರೈ ಅವರು ಕೇವಲ ಬಾಯಿಮಾತಿನ ಆಹ್ವಾನ ನೀಡಿಲ್ಲ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಲ್ಲಿ ದಾಖಲೆಗಳೊಂದಿಗೆ ಸಿದ್ಧನಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇಬ್ಬರ ನಡುವೆ ವಾಗ್ವಾದ ಬೇಡ, ಮಾಧ್ಯಮಗಳು ಮತ್ತು ಜನರೇ ಅಭಿವೃದ್ಧಿಯ ಲೆಕ್ಕಾಚಾರವನ್ನು ನಿರ್ಧರಿಸಲಿ ಎಂಬ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ. ಇದು ಪೂಂಜಾ ಅವರಿಗೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಮುಕ್ತ ಅವಕಾಶ ನೀಡಿದಂತಾಗಿದೆ.

ಇನ್ನೊಂದೆಡೆ, ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಅವರ ‘ಹೊಡೆದು ಓಡುವವರು’ ಎಂಬ ಟೀಕೆಯೂ ರಾಜಕೀಯ ಒತ್ತಡವನ್ನು ಹೆಚ್ಚಿಸಿದೆ. ಈ ಟೀಕೆಗೆ ಉತ್ತರ ನೀಡಬೇಕಾದರೂ ಪೂಂಜಾ ಅವರು ಪುತ್ತೂರಿನ ವೇದಿಕೆಗೆ ಆಗಮಿಸಿ ತಮ್ಮ ದಾಖಲೆಗಳನ್ನು ಮುಂದಿಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಒಂದು ವೇಳೆ ಪೂಂಜಾ ಅವರು ಪುತ್ತೂರಿಗೆ ಆಗಮಿಸಿ ಚರ್ಚೆಯಲ್ಲಿ ಪಾಲ್ಗೊಂಡರೆ, ಅದು ಅವರ ಪಾಲಿಗೆ ತಮ್ಮ ರಾಜಕೀಯ ಸಾಮರ್ಥ್ಯ ಮತ್ತು ಕ್ಷೇತ್ರದ ಅಭಿವೃದ್ಧಿಯನ್ನು ಸಮರ್ಥಿಸಿಕೊಳ್ಳುವ ಅವಕಾಶವಾಗಲಿದೆ. ಆದರೆ ಆಹ್ವಾನವನ್ನು ನಿರ್ಲಕ್ಷಿಸಿದರೆ, ವಿರೋಧಿಗಳಿಗೆ ರಾಜಕೀಯ ಅಸ್ತ್ರವೊಂದನ್ನು ತಾವೇ ಒದಗಿಸಿದಂತಾಗಬಹುದು. ವಿಶೇಷವಾಗಿ, ಜಿಲ್ಲೆಯ ರಾಜಕೀಯದಲ್ಲಿ ತಮ್ಮ ಸವಾಲಿನ ಮಾತುಗಳಿಗೆ ಎಷ್ಟು ಗಂಭೀರತೆ ಇದೆ ಎಂಬ ಪ್ರಶ್ನೆಯೂ ಎದುರಾಗಬಹುದು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಇದು ಕೇವಲ ಅಶೋಕ್ ರೈ ಮತ್ತು ಹರೀಶ್ ಪೂಂಜಾ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಸಮರವಲ್ಲ. ಪುತ್ತೂರು ಮತ್ತು ಬೆಳ್ತಂಗಡಿ ಕ್ಷೇತ್ರಗಳಿಗೆ ಕಳೆದ ಹಲವು ವರ್ಷಗಳಲ್ಲಿ ಬಂದಿರುವ ಅನುದಾನ, ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು, ಗ್ರಾಮೀಣ ರಸ್ತೆಗಳು, ವೆಂಟೆಡ್ ಡ್ಯಾಂಗಳು, ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ಮೂಲಸೌಕರ್ಯ ಯೋಜನೆಗಳ ವಾಸ್ತವಿಕ ಚಿತ್ರಣವನ್ನು ಜನರ ಮುಂದಿಡುವ ಅವಕಾಶವೂ ಹೌದು.

ಹೀಗಾಗಿ ಹರೀಶ್ ಪೂಂಜಾ ಅವರಿಗೆ ಈಗ ರಾಜಕೀಯವಾಗಿ ಆಯ್ಕೆ ಸುಲಭವಿಲ್ಲ. ತಾವೇ ಹಾಕಿದ ಸವಾಲಿಗೆ ತಾವೇ ಉತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪುತ್ತೂರಿಗೆ ಬಂದು ದಾಖಲೆಗಳೊಂದಿಗೆ ಮಾತನಾಡುತ್ತಾರೆಯೇ? ಅಥವಾ ಸವಾಲು ಹಾಕಿದ ವೇಗದಲ್ಲೇ ಚರ್ಚೆಯ ವೇದಿಕೆಯಿಂದ ದೂರ ಉಳಿಯುತ್ತಾರೆಯೇ? ಎಂಬುದು ಕುತೂಹಲದ ಸಂಗತಿ.

ಒಟ್ಟಿನಲ್ಲಿ, ಅಶೋಕ್ ರೈ ಹಾಕಿರುವ ಪ್ರತಿ ಸವಾಲು ಈಗ ಹರೀಶ್ ಪೂಂಜಾ ಅವರ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಸವಾಲು ಹಾಕಿದವರು ಪೂಂಜಾ; ಸವಾಲನ್ನು ಸ್ವೀಕರಿಸಿ ವೇದಿಕೆ ಸಿದ್ಧಪಡಿಸಿದವರು ಅಶೋಕ್ ರೈ. ಈಗ ಚೆಂಡು ಪೂಂಜಾ ಅವರ ಅಂಗಳದಲ್ಲಿದೆ. ಪುತ್ತೂರಿನ ವೇದಿಕೆಗೆ ಬಂದು ಅಭಿವೃದ್ಧಿಯ ಲೆಕ್ಕ ಕೊಡುತ್ತಾರಾ? ಅಥವಾ ರಾಜಕೀಯ ಟೀಕೆಗಳಿಗೆ ಅವಕಾಶ ಮಾಡಿಕೊಡುತ್ತಾರಾ? ಸೋಮವಾರದ ಬೆಳವಣಿಗೆ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ಚರ್ಚೆಗೆ ನಾಂದಿ ಹಾಡುವ ಸಾಧ್ಯತೆಯಿದೆ.

Ad Widget
Click to comment

Leave a Reply

ರಾಜಕೀಯ

Ashok Rai-ಪುತ್ತೂರು ವಿಧಾನಸಭಾ ಕ್ಷೇತ್ರದ 3 ಮಸೀದಿಗಳಿಗೆ ರಾಜ್ಯ ವಖ್ಫ್ ಇಲಾಖೆಯಿಂದ ಅನುದಾನ ಬಿಡುಗಡೆ : ಶಾಸಕ ಅಶೋಕ್ ರೈ

Published

on



Ad Widget

Ad Widget

Ad Widget

Ad Widget

ಪುತ್ತೂರು ವಿಧಾನಸಭಾ ಕ್ಷೇತ್ರದ ಮೂರು ಮಸೀದಿಗಳಿಗೆ ವಕಫ್ ಇಲಾಖೆಯಿಂದ 55 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget

ಪುತ್ತೂರು ವಿಧಾನಸಭಾ ಕ್ಷೇತ್ರದ ಮೂರು ಮಸೀದಿಗಳಿಗೆ ವಕಫ್ ಇಲಾಖೆಯಿಂದ 55 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ತಿಳಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ಪುತ್ತೂರು ವಿಧಾನಸಭಾಕ್ಷೇತ್ರದ ಬಂಟ್ವಾ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಬದ್ರಿಯಾ ಜುಮ್ಮಾಮಸೀದಿ ಪುನರ್ ನಿರ್ಮಾಣ ಕಾಮಗಾರಿಗೆ ರೂ 30 ಲಕ್ಷ , ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಹಳೇನೇರಂಕಿ ಮುಹಿಯುದ್ದೀನ್ ಜುಮ್ಮಾ ಮಸೀದಿ ನವೀಕರಣಕ್ಕೆ 15ಲಕ್ಷ
ವಿಟ್ಲ ಮುಡ್ನೂರ್ ಗ್ರಾಮದ ಕುಂಡಡ್ಕ ಅಲ್ ಮದ್ರಸತುಲ್ ಇಸ್ಲಾಮಿಯ ಜುಮ್ಮಾ ಮಸೀದಿ ಮತ್ತು ಮದ್ರಸ ದುರಸ್ಥಿ ಕಾಮಗಾರಿಗೆ 10 ಲಕ್ಷ ರೂಪಾಯಿ ಅನುದಾನವನ್ನು ವಕಫ್ ಇಲಾಖೆಯಿಂದ ಬಿಡುಗಡೆಯಾಗಿದೆ. ಈ ಮೂರು ಮಸೀದಿಯವರು ಮಸೀದಿ ಪುನರ್ ನಿರ್ಮಾಣಕ್ಕೆ ಅನುದಾನ ಕೋರಿ ಶಾಸಕ ಅಶೋಕ್ ರೈ ಯವರಲ್ಲಿ ಅರ್ಜಿ ಸಲ್ಲಿಸಿದ್ದರು. ಶಾಸಕರ ಶಿಫಾರಸ್ಸಿನಂತೆ ಈ ಅನುದಾನ ಮಂಜೂರಾಗಿದೆ.

Ad Widget

Ad Widget <> Ad Widget

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಧರ್ಮದವರಿಗೆ ಸೇರಿದ ಆರಾಧನ ಕೇಂದ್ರಗಳಿಗೆ ಸರಕಾರ ಅನುದಾನವನ್ನು ಮಂಜೂರು ಮಾಡುತ್ತಿದೆ. ಯಾವುದೇ ತಾರತಮ್ಯವಿಲ್ಲದೆ ದೇವಸ್ಥಾನ, ದೈವಸ್ಥಾನ, ಮಸೀದಿ, ಬಸದಿ, ಚರ್ಚುಗಳಿಗೆ ಸರಕಾರ ಅನುದಾನವನ್ನು ನೀಡುತ್ತಿದ್ದು ಜನರ ಧಾರ್ಮಿಕ ಕೇಂದ್ರಗಳ ಶ್ರೇಯಸ್ಸಿಗೆ ಸರಕಾರದ ಸ್ಪದಂನೆ ಅಭಿನಂದನೀಯವಾಗಿದೆ. ಈ ಹಿಂದೆಯೂ ಕ್ಷೇತ್ರ ವ್ಯಾಪ್ತಿಯ ಅನೇಕ ಮಸೀದಿಗೆ ಅನುದಾನ ವಕಫ್ ಇಲಾಖೆಯ ಮೂಲಕ ಮಂಜೂರಗೊಂಡಿದೆ. ಮೂರು ಮಸೀದಿಗೆ 55 ಲಕ್ಷ ಅನುದಾನ ಈ ಬಾರಿ ಬಿಡುಗಡೆಯಾಗಿದೆ.



Ad Widget

ಅಶೋಕ್ ರೈ, ಶಾಸಕರು ಪುತ್ತೂರು

Ad Widget

Ad Widget

ಶಾಸಕರ ಶಿಫಾರಸ್ಸಿನಂತೆ ಅನುದಾನ ದೊರೆತಿದೆ: ನಾಸಿರ್ ಕೋಲ್ಪೆ
ನಮ್ಮ ಮಸೀದಿ ಪುನರ್ ನಿರ್ಮಾಣಕ್ಕೆ ಅನುದಾನ ಕೋರಿ ನಾವು ಅರ್ಜಿ ಹಾಕಿದ್ದೆವು, ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ 30 ಲಕ್ಷ ಅನುದಾನ ಬಂದಿದೆ. ಹಳೆ ನೇರಂಕಿ ಮಸೀದಿಗೆ ಈ ಹಿಂದೆ 15 ಲಕ್ಷ ಅನುದಾನ ನೀಡಲಾಗಿತ್ತು. ಇದೀಗ ಎರಡನೇ ಬಾರಿ 15 ಲಕ್ಷ ವಕಫ್ ಇಲಾಖೆಯ ಮೂಲಕ ಮಂಜೂರಾಗಿದೆ. ಶಾಸಕ ಅಶೋಕ್ ರೈ ಅವರ ಮೂಲಕ ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳೂ ಅಭಿವೃದ್ದಿಯಾಗುತ್ತಿರುವುದು ಸಂತೋಷದ ವಿಚಾರವಾಗಿದೆ
ನಾಸಿರ್ ಕೋಲ್ಪೆ, ಕೋಲ್ಪೆ ಮಸೀದಿ

Ad Widget
Continue Reading

ರಾಜಕೀಯ

MLA Ashok Rai-ಪುತ್ತೂರು ನಗರಸಭೆ ಹಾಗೂ ವಿಟ್ಲ ಪಟ್ಟಣಪಂಚಾಯತ್‌ಗೆ ಭರ್ಜರಿ ಗಿಫ್ಟ್ ನೀಡಿದ ಶಾಸಕ ಅಶೋಕ್ ರೈ; ಪುತ್ತೂರು ನಗರಸಭಾ ವ್ಯಾಪ್ತಿಗೆ 6.50 ಕೋಟಿ, ವಿಟ್ಲ ಪಟ್ಟಣಪಂಚಾಯತ್‌ಗೆ 3.50 ಕೋಟಿ ಅನುದಾನ ಬಿಡುಗಡೆ

Published

on



Ad Widget

Ad Widget

Ad Widget

Ad Widget

ಪುತ್ತೂರು ನಗರಸಭಾ ವ್ಯಾಪ್ತಿ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಟ್ಟು 10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಎರಡು ವ್ಯಾಪ್ತಿಗೆ ಶಾಸಕ ಅಶೋಕ್ ರೈ ಭರ್ಜರಿ ಗಿಫ್ಟ್ ನೀಡಿದ್ದಾರೆ. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 93 ವಿವಿಧ ಕಾಮಗಾರಿಗಳಿಗೆ ಈ ಅನುದಾನ ಬಿಡುಗಡೆಯಾಗಿದೆ ಈ ಪೈಕಿ ಬಹುತೇಕ ಅನುದಾನ ರಸ್ತೆ ಅಭಿವೃದ್ದಿಗೆ ಮೀಸಲಿಡಲಾಗಿದೆ.

Ad Widget

Ad Widget

Ad Widget

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಟ್ಟು 10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಎರಡು ವ್ಯಾಪ್ತಿಗೆ ಶಾಸಕ ಅಶೋಕ್ ರೈ ಭರ್ಜರಿ ಗಿಫ್ಟ್ ನೀಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 93 ವಿವಿಧ ಕಾಮಗಾರಿಗಳಿಗೆ ಈ ಅನುದಾನ ಬಿಡುಗಡೆಯಾಗಿದೆ ಈ ಪೈಕಿ ಬಹುತೇಕ ಅನುದಾನ ರಸ್ತೆ ಅಭಿವೃದ್ದಿಗೆ ಮೀಸಲಿಡಲಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 43 ಕಾಮಗಾರಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು ಇದರಲ್ಲಿಯೂ ರಸ್ತೆ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪುತ್ತೂರು ನನಗರಸಭಾ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಒಳ ರಸ್ತೆಗಳು, ಸಂಪರ್ಕ ರಸ್ತೆಗಳು ಅಭಿವೃದ್ದಿಯಾಗದೇ ಬಾಕಿ ಇದ್ದು ಅನುದಾನಕ್ಕಾಗಿ ನೂರಾರು ಅರ್ಜಿಗಳು ಗ್ರಾಮಸ್ಥರಿಂದ ಹಾಗೂ ನಗರಸಭಾ ನಿವಾಸಿಗಳಿಂದ ಬಂದಿದ್ದವು. ಈ ಅರ್ಜಿಗಳ ಪೈಕಿ ಅಗತ್ಯವಾಗಿ ಕೈಗೊಳ್ಳಬೇಕಾದ ಕಡೆ ಅನುದಾನ ಹಂಚಿಕೆ ಮಾಡಲಾಗಿದ್ದು ಉಳಿದ ಅರ್ಜಿಗಳಿಗೆ ಮುಂದಿನ ದಿನಗಳಲ್ಲಿ ಅನುದಾನ ಹಂಚಿಕೆ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.

Ad Widget

Ad Widget <> Ad Widget

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಡೆಯಲಿರುವ ಕಾಮಗಾರಿಗಳು:
ಪುತ್ತೂರು ನಗರ ಸಭೆ ವ್ಯಾಪ್ತಿಯಕ ರ್ಕುಂಜ – ನೆಲ್ಲಿ ಗುಂಡಿ ರಸ್ತೆ ಅಭಿವೃದ್ಧಿ 10 ಲಕ್ಷ, ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಜಂಕ್ಷಣ್ ನಿಂದ ಅಬ್ದುಲ್ ಕರಿಮ್ ಮನೆ ವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ . ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆ ಅಬುಬ್ಬಕ್ಕರ್ ರವರ ಮನೆಯಿಂದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಅಭಿವೃದ್ಧಿ 5 ಲಕ್ಷ ಲಕ್ಷ, ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಜಂಕ್ಷಣ್ ನಿಂದ ಅಬುಬ್ಬಕ್ಕರ್ ಮನೆ ವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ, ಉರ್ಲಾಂಡಿ ಯಶ್ವಿನ್ ಸರ್ವಿಸ್ ಸ್ಟೇಷನ್ ಬದಿ ರಸ್ತೆ ಅಭಿವೃದ್ಧಿ 5 ಲಕ್ಷ, ಉಲಾಂಡಿ ಯಶ್ವಿನ್ ಸರ್ವಿಸ್ ಸ್ಟೇಷನ್ ಬದಿ ಚರಂಡಿ ನಿರ್ಮಾಣ 5 ಲಕ್ಷ, ಶ್ರೀದೇವಿ ನಿಲಯ ಸದ್ಯಾಳ ಚಿಕ್ಕಮುಡ್ನೂರು ಗ್ರಾಮ ಎಂಬಲ್ಲಿ ಚರಂಡಿ ರ್ಮಾಣ 5 ಲಕ್ಷ, ಕೂರ್ನಡ್ಕ ಪೀಲೋಮಿನಾ ಲೇಡಿಸ್ ಹಾಸ್ಟಲ್ ಬಳಿ ತಾಹಿರ ಮನೆ ವರೆಗೆರಸ್ತೆಅಭಿವೃದ್ಧಿ 5 ಲಕ್ಷ, ಅರ್‌ಬ್ಬಿ ರಸ್ತೆ ಬದಿ ಚರಂಡಿ ನಿರ್ಮಾಣ 5 ಲಕ್ಷ, ತೆಂಕಿಲ ಆದಿನಾಗಬ್ರಹ್ಮದೇವಸ್ಥಾನ ಬಳಿ ಚರಂಡಿ ನಿರ್ಮಾಣ 5 ಲಕ್ಷ, ಬಪ್ಪಳಿಗೆ ನೆಲ್ಲಿಗುಂಡಿ ರಸ್ತೆ ಅಭಿವೃದ್ಧಿ 10 ಲಕ್ಷ, ಚಿಕ್ಕಮುಡ್ನೂರು ಗ್ರಾಮ ಕೆ.ಆರ್‌ಆಚಾರ್ಯ ಹಾಲ್ ಸಿದ್ಯಾಳ ಎಂಬಲ್ಲಿ ರಸ್ತೆಅಭಿವೃದ್ಧಿ 10 ಲಕ್ಷ, ಚಿಕ್ಕಮುಡ್ನೂರು ಗ್ರಾಮ ಕುಂಟ್ಯಾನ ಹೋಗುವ ರಸ್ತೆ ಅಭಿವೃದ್ಧಿ 5 ಲಕ್ಷ, ದರ್ಬೆ ಕೆ.ವಿ ಶೆಣೈ ಇವರ ಮನೆ ಬಳಿ ಚರಂಡಿ ರ್ಮಾಣ 12 ಲಕ್ಷ, ಕೆಮ್ಮಾಯಿ ಬಡಾವು ಎಂಬಲ್ಲಿ ಚರಂಡಿ ನಿರ್ಮಾಣ 5 ಲಕ್ಷ, ಹೆಬ್ಬಾರ ಬೈಲು ಎ.ಪಿ ಎಂ.ಸಿ ಎಂಬಲ್ಲಿ ರಸ್ತೆಅಭಿವೃದ್ಧಿ 5 ಲಕ್ಷ, ಚಿಕ್ಕಮುಡ್ನೂರು ಗ್ರಾಮದ ಬಡಾವು ಎಂಬಲ್ಲಿ ಮುಕಾಂಬಿಕ ದೇವಸ್ಥಾನದ ಬಳಿ ಚರಂಡಿ ಅಭಿವೃದ್ಧಿ 5 ಲಕ್ಷ, ವಾರ್ಡ್ ನಂಬರ್ 13 ರ ಚೆಲುವಮ್ಮನ ಕಟ್ಟೆ ಬಳಿ ರಸ್ತೆ ಅಭಿವೃದ್ಧಿ 10 ಲಕ್ಷ, ಬೊಳುವಾರು ಬೈಲು ಎಂಬಲ್ಲಿ ರಸ್ತೆಅಭಿವೃದ್ಧಿ 15 ಲಕ್ಷ, ಬೃರಿಕಟೆ ಕರ್ಮಲ ಸನ್ನಿದಿ ಲೇಔಟ್ ಗೋಪಿನಾಥ ಶೆಟ್ಟಿ ಇವರ ಮನೆ ಬಳಿ ರಸ್ತೆಅಭಿವೃದ್ಧಿ 5 ಲಕ್ಷ, ತೋಟಗಾರಿಕಾ ಇಲಾಖೆ ಕಛೇರಿ ಸಂಪರ್ಕ ರಸ್ತೆ ಅಭಿವೃದ್ಧಿ 5 ಲಕ್ಷ, ಮುಕ್ರಂಪ್ಪಾಡಿ ಪುತ್ತೂರಾಯ ಲೇಔಟ್ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ಬಲ್ನಾಡು ಗ್ರಾಮದ ಉಜ್ರುಪಾದೆ ದರ್ಖಾಸು ಎಂಬಲ್ಲಿ ರಸ್ತೆಅಭಿವೃದ್ಧಿ 15 ಲಕ್ಷ, ಉರ್ಲಾಂಡಿ ಬೈಪಾಸ್ ಯೂನಿಟಿ ಸುಪಾರಿ ಯಿಂದ ಸೀತಾರಾಮ ಹೆಗಡೆ ಇವರ ಮನೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ನೆಲ್ಲಿಕಟ್ಟೆ ಬರೆಕೆರೆ ಹಾಲ್ ಬದಿಯಲ್ಲಿ ರಸ್ತೆ ಅಭಿವೃದ್ಧಿ 5 ಲಕ್ಷ, ಕೊಡ್ಡಿಪ್ಪಾಡಿರಸ್ತೆ ಬದಿ ಇರುವ ಷಣ್ಮುಖ ನಗರ ಎಂಬಲ್ಲಿ ರಸ್ತೆ ಅಭಿವೃದ್ಧಿ 10 ಲಕ್ಷ, ತೆಂಕಿಲ ಅಂಗನವಾಡಿ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ತೆಂಕಿಲ ಶಿವನಗರ ಎಂಬಲ್ಲಿ ರಸ್ತೆ ಅಭಿವೃದ್ಧಿ 5 ಲಕ್ಷ, ಸೂತ್ರಬೆಟ್ಟು ಎಂಬಲ್ಲಿ ರಸ್ತೆ ಅಭಿವೃದ್ಧಿ 10 ಲಕ್ಷ, ದರ್ಬೆಆಕಾಶ್ ಪೂಟ್‌ವೇರ್ ಬಳಿಯಿಂದ ವಿಶ್ವಕಲಾ ಆರ್ಟ್ಸ್ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ಪಡ್ಡಾಯೂರು ಪಳ್ಳ ರಸ್ತೆ ಅಭಿವೃದ್ಧಿ 5 ಲಕ್ಷ, ಪಡ್ಡಾಯೂರು ಜನತಾ ಕಾಲೋನಿ ರಸ್ತೆ ಅಭಿವೃದ್ಧಿ 5 ಲಕ್ಷ,, ಪಡ್ಡಾಯೂರು ಮಾಲ್ತೋಟ್ಟು ರಸ್ತೆ ಅಭಿವೃದ್ಧಿ 5 ಲಕ್ಷ, ಬಲ್ನಾಡು ಗ್ರಾಮದ ಮಡಿವಾಳ ರಸ್ತೆ ಅಭಿವೃದ್ಧಿ 5 ಲಕ್ಷ, ವಾರ್ಡ್ ಸಂ 29 ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ನೆಕ್ಕರೆಗೋವಿಂದ ಮೇಸ್ತಿç ಮನೆ ವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ, ರೋಟರಿ ಪುರಚಿದಾನ್ ಮನೆ ಬಳಿಯಿಂದ ತೋಮಸ್ ಮನೆ ಬಳಿ ರಸ್ತೆಅಭಿವೃದ್ಧಿ 5 ಲಕ್ಷ, ಚಿಕ್ಕಮುಡ್ನೂರು ಗ್ರಾಮದ ದಾರಂದಕುಕ್ಕು ಹೊಸವಕ್ಲು ರಸ್ತೆಅಭಿವೃದ್ಧಿ 5 ಲಕ್ಷ, ಬಪ್ಪಳಿಗೆ ಮೋಹನ್ ಹೊಳ್ಳ ಮನೆ ಬಳಿಯಿಂದ ದರಕಾಸ್ತು ಅಣೆಕಟ್ಟಿನ ವರೆಗೆ ರಸ್ತೆಅಭಿವೃದ್ಧಿ 7 ಲಕ್ಷ, ಪಂಬತದತ ಮಜಲು ಕೃಷ್ಣಪ್ಪ ನಾಯ್ಕ ಮನೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ಬಪ್ಪಳಿಗೆ ಶ್ರೀನಗರ ಕಾಲೋನಿ ರಸ್ತೆಅಭಿವೃದ್ಧಿ 5 ಲಕ್ಷ, ವಾರ್ಡ್ 20 ಮಚ್ಚಿಮಲೆ ಬೊಳ್ಳಾಣ ಬಿ ನಾಗೇಶ್‌ಇವರ ಮನೆ ಬಳಿ ರಸ್ತೆಅಭಿವೃದ್ಧಿ 5 ಲಕ್ಷ, ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಮಸೀದಿ ಎದರು ಅಭಿವೃದ್ಧಿ 5 ಲಕ್ಷ, ಬನ್ನೂರು ಜೈನರಗುರಿ ಕುಮೇರಡ್ಕ ರಸ್ತೆಅಭಿವೃದ್ಧಿ 10 ಲಕ್ಷ, ಬನ್ನೂರು ಗ್ರಾಮದ ಬನ್ನೂರು ಶಾಲಾ ಬಳಿ ಇರುವ ಜನತಾ ಕಾಲೋನಿ ಬಳಿ ಚರಂಡಿ ಅಭಿವೃದ್ಧಿ10 ಲಕ್ಷ, ಬನ್ನೂರು ಆನೆಮಜಲು ಬಿ.ಸಿ.ಎಂ ಲೇಡಿಲ್ ಹಾಸ್ಟಲ್ ಬಳಿ ಚರಂಡಿ ನಿರ್ಮಾಣ 5 ಲಕ್ಷ, ಬನ್ನೂರು ಗ್ರಾಮ ಆನೆಮಜಲು ಜೋಡುಕಟ್ಟೆ ಎಂಬಲ್ಲಿ ರಸ್ತೆ ಅಭಿವೃದ್ಧಿ 20 ಲಕ್ಷ, ನೆಕ್ಕಿಲು ಸಂಪರ್ಕ ರಸ್ತೆಗೆ ಚರಂಡಿ ನಿರ್ಮಾಣ 10 ಲಕ್ಷ, ಸಿಂಹವನ ಪಂಜಲ ಎಂಬಲ್ಲಿ ಚರಂಡಿ ನಿರ್ಮಾಣ 8 ಲಕ್ಷ, ಮೊಟ್ಟೆತಡ್ಕ ಉಸ್ಮಾನ್ ಮನೆ ಬಳಿಯಿಂದ ಮಣಿಯವರ ಮನೆ ವರೆಗೆ ಚರಂಡಿ ನಿರ್ಮಾಣ 10 ಲಕ್ಷ, ಮುಕ್ರಂಪ್ಪಾಡಿ ಅಬ್ದುಲ್ ಅಜೀಜ್ ಮನೆ ಬಳಿಯಿಂದ ಐವನ್ ಮನೆ ವರೆಗೆಚರಂಡಿ 5 ಲಕ್ಷ, ಕೆಮ್ಮಾಯಿ ಗ್ರಮ ಮೊಟ್ಟೆತಡ್ಕ ಎಂಬಲ್ಲಿ 30ನೇ ವಾರ್ಡ್ ವನ ಶಿವಕೃಪಾ ಅಂಗಡಿ ಬದಿಯಿಂದ ಬಲ ಬದಿಯಲ್ಲಿ 1ನೇ ಮತ್ತು 2ನೇ ಕ್ರಾಸ್ ಸಂಪರ್ಕ ರಸ್ತೆಯ ಅಭಿವೃಧ್ಧಿ 10 ಲಕ್ಷ, ಸಾಲ್ಮರದ ಮುದ್ದೋಡಿಯಿಂದ ಸಂಜೀವ ರೈ ಯವರ ಮನೆಗೆ ಹಾಗೂ ಇತರ ಮನೆಗಳಿಗೆ ಹೋಗುವ ರಸ್ತೆ ಅಭಿವೃಧ್ಧಿ 5 ಲಕ್ಷ, ಕೆಮ್ಮಾಯಿ ಬಡಾವು ಪರಿಸರದಲ್ಲಿ ರಸ್ತೆಅಭಿವೃದ್ಧಿ 10 ಲಕ್ಷ, ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ರಸ್ತೆಅಭಿವೃದ್ಧಿ 10 ಲಕ್ಷ, ಶಿಂಗಾಣಿ ಕೃಷ್ಣಪ್ಪ ಪ್ರಸಾದ್ ರವರ ಮನೆಯಿಂದ ಗಿರಿಧರ ಗೌಡ ಎಸ್. ಅವರ ಮನೆ ವರೆಗೆ ರಸ್ತೆಅಭಿವೃದ್ಧಿ 10 ಲಕ್ಷ, ಕನಕದಾಸ ಕಾಲೋನಿಯಲ್ಲಿ ರಸ್ತೆಅಭಿವೃದ್ಧಿ 5 ಲಕ್ಷ, ಬನ್ನೂರು ಕೆ.ಇ.ಬಿ ಗೆ ಹಾದು ಹೊಗುವ ರಸ್ತೆ ಹಾಗೂ ಬನ್ನೂರು ಜುಮ್ಮಮಸೀದಿಯ ಮುಂಬಾಗ ರಸ್ತೆಅಭಿವೃದ್ಧಿ 10 ಲಕ್ಷ, ಉಜ್ರುಪಾದೆ(ವಿನಾಯಕ ನಗರ) ಜನತಾ ಕಾಲೋನಿ ಬಲ್ನಾಡು ಇಲ್ಲಿ ರಸ್ತೆಅಭಿವೃದ್ಧಿ 4 ಲಕ್ಷ, ದರ್ಖಾಸ್ತು (121ನೇ ಬೂತ್) ಬಳಿಯ ರಸ್ತೆ ಅಭಿವೃದ್ಧಿ 3 ಲಕ್ಷ, ಪುಣ್ಯಕುಮಾರ ರಸ್ತೆಯ ಮೂಲಕ ಹೋಗುವ ಕಲ್ಲೇಗ ರಸ್ತೆಅಭಿವೃದ್ಧಿ 3 ಲಕ್ಷ, ಪಡ್ನೂರು ಗ್ರಾಮದ ಮೂವಪ್ಪು ನಿಂದ ಗುರುಂಪುನಾರ್ ಹಾದು ಹೋಗುವ ರಸ್ತೆಅಭಿವೃದ್ಧಿ 10 ಲಕ್ಷ, ಕರ್ಮಲ ಕೆ.ಎಂ. ಸ್ಟೋರ್ ನ ಪಕ್ಕದ ರಸ್ತೆ ಉಳಿಕೆ ಬಾಗದಲ್ಲಿ ರಸ್ತೆಅಭಿವೃದ್ಧಿ 5 ಲಕ್ಷ, ಕರ್ಮಲ ಬೈರಿಕಟ್ಟೆ ಪರಿಶಿಷ್ಟ ಜಾತಿ ಕಲೋನಿಯ ಶ್ರೀ ಮಹಮ್ಮಾಯಿ ಮಾರಿಯಮ್ಮ ದೇವಾಸ್ಥಾನದ ಬಳಿ ರಸ್ತೆಅಭಿವೃದ್ಧಿ 5 ಲಕ್ಷ, ಕೆಮ್ಮಾಯಿ ಯ ಮಸೀದಿಯ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ಪಾಂಗಲಾಯಿ-ದರ್ಬೆ ಪ್ರದೇಶದಲ್ಲಿ ರಸ್ತ್ತೆಅಭಿವೃದ್ಧಿ 10 ಲಕ್ಷ, ಮುಕ್ರಂಪಾಡಿ ಸುಭದ್ರ ಸಭಾ ಮಂದಿರದ ಎದುರಿನ ರಸ್ತೆಯ ಬಳಿ ರಸ್ತ್ತೆಅಭಿವೃದ್ಧಿ 10 ಲಕ್ಷ, ಆರ್ಯಾಪು ಗ್ರಾಮದ ಸಂಪ್ಯದ 5ನೇ ವಾರ್ಡಿನ ವಾಗ್ಲೆ ಎಂಬಲ್ಲಿ ರಸ್ತ್ತೆಅಭಿವೃದ್ಧಿ 5 ಲಕ್ಷ, ಕಬಕ ಗ್ರಾಮದ ಗಡಿಯಾರ್ ಎಂಬಲ್ಲಿ ರಸ್ತ್ತೆಅಭಿವೃದ್ಧಿ 10 ಲಕ್ಷ, ಕಬಕ ಗ್ರಾಮದ ನೆಹರು ನಗರ ಎಂಬಲ್ಲಿ ರಸ್ತ್ತೆಅಭಿವೃದ್ಧಿ 5 ಲಕ್ಷ, ಬನ್ನೂರು ಗ್ರಾಮದ ಗೋಳ್ತಲದಿಂದ ಕುಂಟ್ಯಾನ ಸದಾಶಿವ ದೇವಸ್ಥಾನ ದ ಬಳಿ ರಸ್ತ್ತೆಅಭಿವೃದ್ಧಿ 10ಲಕ್ಷ, ಸಾಲ್ಮರ ಬೆದ್ರಾಳ ರಸ್ತೆ ದಾಮೋದರ್ ಮನೆ ಬಳಿ ರಸ್ತ್ತೆಅಭಿವೃದ್ಧಿ 5 ಲಕ್ಷ, ಕೆಮ್ಮಿಂಜೆ ಗ್ರಾಮದ ಜೆ.ಕೆ ಪಟಟ್ರೋಲ್ ಪಂಪ್ ಬಳಿ ರಸ್ತೆ ಅಭಿವೃದ್ಧಿ 10ಲಕ್ಷ, ಕುಮೆರಡ್ಕ ದಿಂದ ಜೈನರ ಗುಡಿಯವರೆಗೆ ರಸ್ತೆ ಅಭಿವೃದ್ಧಿ 20 ಲಕ್ಷ, ಶ್ರೀ ಮಹಾಲಿಂಗೇಶ್ವರ ಕಟ್ಟೆಯವರೆಗೆ ರಸ್ತೆ ಅಭಿವೃದ್ಧಿ 10 ಲಕ್ಷ, ಕೆಮ್ಮಿಂಜೆ ಗ್ರಾಮದ ಮರೀಲು ಎಂಬಲ್ಲಿ ರಸ್ತೆ ಅಭಿವೃದ್ಧಿ 10 ಲಕ್ಷ, ಬಾಲಏಸು ಮಂದಿರದ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ಮಂಜಲ್ಪಡ್ಪು ಕೊಡಿಪ್ಪಾಡಿ ರಸ್ತೆಯ ಕಾರ್ಜಲು ಎಂಬಲ್ಲಿ ರಸ್ತೆ ಅಭಿವೃದ್ಧಿ 5 ಲಕ್ಷ, ನಗರಸಭೆ ವ್ಯಾಪ್ತಿಯ 2ನೇಅಡ್ಡ ರಸ್ತೆ ಅಭಿವೃದ್ಧಿ 5 ಲಕ್ಷ, ಬಲ್ನಾಡು ಗ್ರಾಮದ ಸುಂಕಮೂಲೆ ಎಂಬಲ್ಲಿ ರಸ್ತೆ ಅಭಿವೃದ್ಧಿ 5 ಲಕ್ಷ, ಬಲ್ನಾಡು ಗ್ರಾಮದ ಲಾಯಿ ಗೊಡಿಪದವು ರಸ್ತೆ ಅಭಿವೃದ್ಧಿ 5 ಲಕ್ಷ, ಬಲ್ನಾಡು ಗ್ರಾಮದ ಜನತಾ ಕಾಲೋನಿ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ಕಸಬಾ ಗ್ರಾಮದ ಉರ್ಲಾಂಡಿ ನಾಯರಡ್ಕ ಎಂಬಲ್ಲಿ ರಸ್ತೆ ಅಭಿವೃದ್ಧಿ 5 ಲಕ್ಷ, ಕಸಬಾ ಗ್ರಾಮದ ತಂಕಿಲ ಅಂಗನವಾಡಿ ಕೇಂದ್ರದಿಂದ ಪ್ರೇಮಲತಾ ಅವರ ಮನೆವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ, ತಾರಿಗುಡ್ಡೆ ಟಿ ಕಿಶೋರ್ ರವರ ಮನೆಯಿಂದ ತಾರಿಗುಡ್ಡೆ ಜಯಕ್ಕರವರ ಮನೆಯ ತನಕ ರಸ್ತೆ ಅಭಿವೃದ್ಧಿ 5 ಲಕ್ಷ, ತಾರಿಗುಡ್ಡೆ ಫಾರೂಕ್ ಮನೆಯ ಕಡೆಯಿಂದ ಆಪೆ ಕಾಸಿಂ ರವರ ಮನೆಯ ತನಕ ರಸ್ತೆ ಅಭಿವೃದ್ಧಿ 5 ಲಕ್ಷ, ಕಬಕ ಗ್ರಾಮದ ನೆಹರು ನಗರದ ಗಣೇಶ್ ಬಾಗ್ ಎಂಬಲ್ಲಿ ಚರಂಡಿ ವ್ಯವಸ್ಥೆ 3 ಲಕ್ಷ, ಗಣೇಶ್ ಭಮಡಾರ್ಕರ್ ಮನೆಯಿಂದ ತಾರಿಗುಡ್ಡೆ ನೀರಿನ ಟ್ಯಾಂಕ್‌ಗೆ ಹೋಗುವ ರಸ್ತೆ ಅಭಿವೃದ್ಧಿ 5 ಲಕ್ಷ, ಚಿಕ್ಕಮುಡ್ನೂರು ಗ್ರಾಮದ ಮೂಡಾರಾಯ ಕಡೆಗಡ ಸಂಪರ್ಕ ಕಲಿಸುವ ರಸ್ತೆ ಅಭಿವೃದ್ಧಿ 5 ಲಕ್ಷ, ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಬೀರತ್ನಹಿತ್ತಲು ಅಲ್ಲಿಂದ ಬಡವು ಭರತಪುರ ರಸ್ತೆ ಅಭಿವೃದ್ಧಿ 5 ಲಕ್ಷ, ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಬೀರತ್ನಹಿತ್ತಲು ಅಲ್ಲಿಂದ ಭರತಪುರ ಪಂಚಮುಖಿ ಆಂಜನೇಯ ದೇವಾಸ್ಥಾನ ರಸ್ತೆ ಅಭಿವೃದ್ಧಿ 5 ಲಕ್ಷ, ಬನ್ನೂರು ನೆಕ್ಕಿಲ ಸಂಪರ್ಕ ರಸ್ತೆ ಅಭಿವೃದ್ಧಿ 10 ಲಕ್ಷ, ಸಿಟಿಗುಡ್ಡೆ ರಸ್ತೆ ಅಭಿವೃದ್ಧಿ 10 ಲಕ್ಷ, ಹಾಗೂ ಪೆರಿಯತ್ತೋಡಿ ಆಶ್ರಯ ಕಾಲೋನಿನ ರಸ್ತೆ ಅಭಿವೃದ್ಧಿ 10 ಲಕ್ಷ ಅನುದಾನ ಬಿಡುಗಡೆಯಾಗಿದೆ.



Ad Widget

ವಿಟ್ಲ ಪಟ್ಟಣಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗೆ 3.50 ಕೋಟಿ ಅನುದಾನ: ಕಾಮಗಾರಿಯ ವಿವರ
ಬಂಟ್ವಾಳ ತಾಲೂಕು ವಿಟ್ಲ ಪಟ್ಟಣ ಪಂಚಾಯತ್ 8ನೇ ವಾರ್ಡಿನ ಅನಂತೇಶ್ವರ ದೇವಾಸ್ಥಾನದ ಬಳಿಯಿಂದ ವಿಟ್ಲ ನಾಲ್ಕು ಮಾರ್ಗ ಸೇರುವ ಜಂಕ್ಷನ್ ತನಕದ ಪೇಟೆಯ ಮಧ್ಯದಲ್ಲಿ ರಸ್ತೆ ಅಭಿವೃದ್ಧಿ 10 ಲಕ್ಷ, 15ನೇ ವಾರ್ಡಿನ ಅವೆತ್ತಿಕಲ್, ರಕ್ತೇಶ್ವರಿ ದೇವಾಸ್ಥಾನದ ಬಳಿ ರಸ್ತೆ ಅಭಿವೃದ್ಧಿ 10 ಲಕ್ಷ, 10ನೇ ವಾರ್ಡಿನ ರಸ್ತೆ ಅಭಿವೃದ್ಧಿ 5 ಲಕ್ಷ, ಜೋಗಿಮಠ ತಿರುವಿನಿಂದ ಪದ್ಮಾವತಿ ಯವರ ಮನೆಯವರೆಗೆ ರಸ್ತೆ ಅಭಿವೃದ್ಧಿ 10 ಲಕ್ಷ, 13ನೇ ವಾರ್ಡಿನ ಒಕ್ಕೆತ್ತೂರು-ಊರುದಂಗಡಿ ರಸ್ತೆಯ ಬಳಿ ಚರಂಡಿ ಅಭಿವೃದ್ಧಿ 10 ಲಕ್ಷ, 5ನೇ ವಾರ್ಡಿನ ವಿಟ್ಲದಿಂದ ಕೋಡಪದವಿ ವರೆಗೆ ರಸ್ತೆ ಅಭಿವೃಧ್ದಿ 10 ಲಕ್ಷ, 10ನೇ ವಾರ್ಡಿನ ಜೋಗಿಮಠ ಬಾಲಕೃಷ್ಣ ಗೌಡ ಎಂಬವರ ಮನೆಯಿಂದ ಮುನೀರ್ ಅವರ ಮನೆವರೆಗೆ ರಸ್ತೆ ಅಭಿವೃದ್ದಿ 10 ಲಕ್ಷ, 18ನೇ ವಾರ್ಡಿನ ನೆಲ್ಲಿಗುಡ್ಡೆ ಕಾಲೋನಿಗೆ ರಸ್ತೆ ಅಭಿವೃದ್ಧಿ 10 ಲಕ್ಷ, 8ನೇ ವಾರ್ಡಿನ ಶ್ರೀಮಾತ್ ಅನಂತೇಶ್ವರ ದೇವಾಸ್ಥಾನದ ಬಳಿಯಿಂದ ವಿಟ್ಲದ ಪ್ರವಾಸಿ ಮಂದಿರದ ವರೆಗೆ ರಸ್ತೆ ಅಭಿವೃಧ್ದಿ 10 ಲಕ್ಷ, 18ನೇ ವಾರ್ಡಿನ ದಾಸರಬೆಟ್ಟು ಕಾಲೋನಿಗೆ ರಸ್ತೆ ಅಭಿವೃದ್ಧಿ 10 ಲಕ್ಷ, ಬೊಬ್ಬೆಕೇರಿ ಕ್ವಾಲಿಟಿ ಬೇಕರಿಯಿಂದ ರಾಘವ ವಿಟ್ಲ ಅವರ ಮನೆವರೆಗೆ ರಸ್ತೆ ಅಭಿವೃದ್ಧಿ 10 ಲಕ್ಷ, 13ನೇ ವಾರ್ಡಿನ ಒಕ್ಕೆತ್ತೂರು ಲತೀಫ್ ಅವರ ಮನೆಯಿಂದ ಇಸ್ಮಾಯಿಲ್ ಅವರ ಮನೆ ವರೆಗೆ ರಸ್ತೆ ಅಭಿವೃದ್ಧಿ 10 ಲಕ್ಷ, ಬೂತ್ ನ.6 ಒಕ್ಕೆತ್ತೂರು ಮೂಲೆ ಎಮ್,ಕೆ ಮೂಸ ರವರ ಮನೆಯಿಂದ ಚಂದಪ್ಪ ಪೂಜಾರಿ ಯವರ ಮನೆವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ, ವಿಟ್ಲ ಪೇಟೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹಿಂಬದಿ ಯಿಂದ ಒಕ್ಕೆತ್ತೂರು ಹೊಳೆ ಸೇರುವ ರಾಜಕಾಲುವೆ ವರೆಗೆ ಚರಂಡಿ ಅಭಿವೃಧ್ದಿ 20 ಲಕ್ಷ, ಕೂಜಪ್ಪಾಡಿ ಪೊಯ್ಯೆ ಇಲ್ಲಿನ ರಸ್ತೆ ಅಭಿವೃದ್ಧಿ 5 ಲಕ್ಷ, 13ನೇ ವಾರ್ಡಿನ ರ‍್ದಂಗಡಿ ಎಮ್.ಕೆ ಮೂಸರವರ ಮನೆಯಿಂದ ಹಮೀದ್ ರವರ ಮನೆವರೆಗೆ ರಸ್ತೆ ಅಭಿವೃದ್ಧಿ 10ಲಕ್ಷ, 18ನೇ ವಾರ್ಡಿನ ನೆಲ್ಲಿಗುಡ್ಡೆ ಪರಿಶಿಷ್ಟ ಕಾಲೊನಿಗೆ ರಸ್ತೆ ಅಭಿವೃಧ್ದಿ 5 ಲಕ್ಷ, ಸರಕಾರಿ ಪದವಿ ಕಾಲೇಜಿನ ಬಳಿಯ ದಿ. ಜಿನ್ನಪ್ಪ ರವರ ಮನೆಯಿಂದ ಕೃಷ್ಣಪ್ಪ ರವರ ಮನೆವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ, 16 ನೇ ವಾರ್ಡಿನ ಚರಂಡಿ ಅಭಿವೃದ್ಧಿ 10 ಲಕ್ಷ, ವಿಟ್ಲ ಪಟ್ಟಣ ಪಂಚಾಯತ್ ನ ನೆಲ್ಲಿಗುಡ್ಡೆ- ಕೊಳಂಬೆ ಇಲ್ಲಿ ರಸ್ತೆ ಅಭಿವೃದ್ಧಿ 5 ಲಕ್ಷ, 18ನೇ ವಾರ್ಡ್ನ ನೆಲ್ಲಿಗುಡ್ಡೆ ಜಿನ್ನಪ್ಪ ಶೆಟ್ಟಿ ಅವರ ಮನೆಯಿಂದ ನೌಫಲ್ ಬಶೀರ್ ರವರ ಮನೆವರೆಗೆ ರಸ್ತೆ ಅಭಿವೃದ್ಧಿ 10ಲಕ್ಷ, 8ನೇ ಬೂತ್‌ನ ನೀರvಕಣಿಯ ಶರತಿ ಮಠ ಎಂಬಲ್ಲಿ ಮಾಗ್ದಲನ್ ಗೊನ್ಸಾಲಿಸ್ ರವರ ಮನೆಯಿಂದ ಕುಂಞಣ್ಣ ಹಾಗೂ ವ.ಕೆ ಅಮ್ಮು ಅವರ ಮನೆವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ, 8ನೇ ಬೂತ್‌ನ ದಿವಂಗತ ರಮೇಶ ಆಚಾರ್ಯ ರವರ ಮನೆಯಿಂದ ಶೇಖ್ ಇಬ್ರಾಹಿಂ ಅವರ ಮನೆವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ,
7 ನೇ ಬೂತ್‌ನ ಮಾರ್ನೆಮಿಗುಡ್ಡೆ ಬಾಬು ಮೂಲ್ಯ ಮತ್ತು ಸಂತೋಷ್ ಇವರ ಮನೆಯ ಬಳಿ ರಸ್ತೆ ಅಭಿವೃದ್ಧಿ 10 ಲಕ್ಷ, 12ನೇ ವಾರ್ಡಿನ ರಾಜೇಶ್ ನಾಯ್ಕ್ ಅನ್ನಮೂಲೆ ಅವರ ಮನೆಯಿಂದ ಈಶ್ವರ ನಾಯ್ಕ್ ಅವರ ಮನೆವರೆಗೆ ರಸ್ತೆ ಅಭಿವೃದ್ಧಿ 10 ಲಕ್ಷ, 17ನೇ ವಾರ್ಡಿನ ನೆಲ್ಲಿಗಡ್ಡೆ- ಪಳೇರಿ- ಕಾಮಟ ಎಂಬಲ್ಲಿ ರಸ್ತೆ ಅಭಿವೃದ್ಧಿ 10 ಲಕ್ಷ, ವಿಠಲ ಎಜುಕೇಶನ್ ಸೊಸೈಟಿಯ (ರಿ) ವಿಟ್ಲ ವಿದ್ಯಾಕೇಂದ್ರದ ಬಳಿ ಚರಂಡಿ ಅಭಿವೃಧ್ದಿ 5 ಲಕ್ಷ, ಗಮಿಯಾಗಿ ಅಂಗಾರಕೋಡಿ ವರೆಗೆ ರಸ್ತೆ ಅಭಿವೃದ್ಧಿ 15 ಲಕ್ಷ, ಉಕ್ಕುಡ ದರ್ಬೆ ಮಾಣಿಕ್ಯ ರವರ ಮನೆವರೆಗೆ ರಸ್ತೆ ಅಭಿವೃದ್ಧಿ 5 ಲಕ್ಷ, 13ನೇ ವಾರ್ಡ್ನ ಒಕ್ಕೆತ್ತೂರು- ಊರುದಂಗಡಿ ರಸ್ತೆಯ ಬಳಿ ಚರಂಡಿ ಅಭಿವೃದ್ಧಿ 5 ಲಕ್ಷ, ಮಾರ್ನಮಿ ಗುಡ್ಡೆ ಮೂಲಾಮೂಲೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ಗಾಲಿಹಿತ್ತಲು ಕೊರಗ ತನಿಯ ಕ್ಷೇತ್ರ ಅಡ್ಡ ರಸ್ತೆ ಅಭಿವೃದ್ಧಿ 10
ಗಾಲಿಹಿತ್ತಲು ಬಳಿ ಚರಂಡಿ ಅಭಿವೃದ್ಧಿ 5 ಲಕ್ಷ, ಶಿವಪ್ಪ ನಾಯ್ಕ ಮನೆ ಬಳಿಯಿಂದ ಜೋಗಿಮಠ ಅಡ್ಡ ರಸ್ತೆ ಅಭಿವೃದ್ಧಿ 5 ಲಕ್ಷ, 7 ನೇ ವಾರ್ಡ್ ಅಪ್ಪೇರಿ ಪಾದೆ ಎಂಬಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಜಳಕಕ್ಕೆ ಹೋಗುವ ರಸ್ತೆ ಅಭಿವೃದ್ಧಿ 10 ಲಕ್ಷ, ಕಾಶಿಮಠ ಕಳುವಾಜೆ ರಸ್ತೆ ಅಭಿವೃದ್ಧಿ 5 ಲಕ್ಷ, ಒಕ್ಕೆತ್ತೂರು ಮಂಗಳಪದವು ಮುಖ್ಯ ರಸ್ತೆಯಿಂದ ಇಸ್ಮಾಲ್ ಸೂಪರ್ ಲೈಮ್ ಇವರ ಮನೆ ವರೆಗೆ ರಸ್ತೆ ಅಭಿವೃದ್ಧಿ10 ಲಕ್ಷ, ಸೂರುಳಿಮೂಲೆ ಪರಮೇಶ್ವರ ಗೌಡ ಎಂಬವರ ಮನೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ವಾರ್ಡ್ 4 ರ ಕಲ್ಲಕಟ್ಟೆ ಬಳಿ ರಸ್ತೆ ಅಭಿವೃದ್ಧಿ 5 ಲಕ್ಷ, ಚಂದಳಿಕೆ ಕುರುಂಬಳ ಮಾಣಿವೆಟ್ಟು ಎಂಬಲ್ಲಿ ರಸ್ತೆ ಅಭಿವೃದ್ಧಿ 5 ಲಕ್ಷ, ಕಾಮಠ ಎಂಬಲ್ಲಿ ನಾಗರಾಜ ಜನನನಿ ಗೌಡ ಮನೆ ಬಳಿಯಿಂದ ನಾಗಣ ಕಟ್ಟೆ ಬಳಿ ರಸ್ತೆ ಅಭಿವೃದ್ಧಿ 10 ಲಕ್ಷ, ಕೋಡಿ-ಮಡ್ತೇಲು ಸಂಪರ್ಕ ರಸ್ತೆ ಅಭಿವೃದ್ಧಿ 10 ಲಕ್ಷ ಅನುದಾನ ಬಿಡುಗಡೆಯಾಗಿದೆ.

Ad Widget

Ad Widget

ಜನರ ಬೇಡಿಕೆಗೆ ಮನ್ನನೆ ನೀಡಲಾಗಿದೆ. ನೂರಾರು ರಸ್ತೆಗಳ ಬೇಡಿಕೆ ಇದೆ ಅವುಗಳ ಪ್ಯಕಿ ಅಗತ್ಯ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ ಬಾಕಿ ಇರುವ ಅರ್ಜಿಗಳಿಗೂ ಅನುದಾನವನ್ನು ಒದಗಿಸಲಾಗುವುದು. ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯವನ್ನು ಮಾಡಿಲ್ಲ. ಎಲ್ಲಾ ವಾರ್ಡುಗಳಿಗೂ ಸಮಾನ ಪ್ರಮಾಣದಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ಈ ಕಾಮಗಾರಿ ನಡೆಯಲಿದೆ. ಕರ್ನಾಟಕ ಕಾಂಗ್ರೆಸ್ ಸರಕಾರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅನುದಾನವನ್ನು ನೀಡುತ್ತಿದೆ. ಪುತ್ತೂರು ನಗರಸಭೆ ಹಾಗೂ ವಿಟ್ಲ ಪ.ಪಂ ಗೆ ಹೆಚ್ಚಿನ ಅನುದಾನ ನೀಡುವಂತೆ ಪೌರಾಡಳಿತ ಹಾಗೂ ನಗರಾಭಿವೃದ್ದಿ ಸಚಿವರಿಗೆ ಮನವಿ ಸಲ್ಲಿಸಿದ್ದೆ. ಸರಕಾರ 10 ಕೋಟಿ ಅನುದಾನವನ್ನು ಒದಗಿಸಿದೆ. ಮನವಿಯನ್ನು ಮಾನ್ಯ ಮಾಡಿ ಅನುದಾನ ನೀಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಅಶೋಕ್ ರೈ, ಶಾಸಕರು ಪುತ್ತೂರು

Ad Widget
Continue Reading

ರಾಜಕೀಯ

Puttur-ಪುತ್ತೂರು ಕ್ಷೇತ್ರಕ್ಕೆ ₹654 ಕೋಟಿಗೂ ಅಧಿಕ ಗ್ಯಾರಂಟಿ ಸೌಲಭ್ಯ: ಬಿಜೆಪಿ ಟೀಕೆಗೆ ಉಮಾನಾಥ ಶೆಟ್ಟಿ ಪೆರ್ನೆ ತಿರುಗೇಟು

Published

on



Ad Widget

Ad Widget

Ad Widget

Ad Widget

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂಬ ಬಿಜೆಪಿ ಆರೋಪಕ್ಕೆ ಅಂಕಿಅಂಶಗಳ ಮೂಲಕ ಉತ್ತರಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ₹654 ಕೋಟಿಗೂ ಅಧಿಕ ಮೊತ್ತದ ಗ್ಯಾರಂಟಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

Ad Widget

Ad Widget

Ad Widget

ಪುತ್ತೂರು: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂಬ ಬಿಜೆಪಿ ಆರೋಪಕ್ಕೆ ಅಂಕಿಅಂಶಗಳ ಮೂಲಕ ಉತ್ತರಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ₹654 ಕೋಟಿಗೂ ಅಧಿಕ ಮೊತ್ತದ ಗ್ಯಾರಂಟಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

Ad Widget

Ad Widget alt="Ad Widget"/>

Ad Widget

ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಸೇತುವೆ ನಿರ್ಮಾಣವಲ್ಲ. ಪ್ರತಿಯೊಂದು ಕುಟುಂಬದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ತರುವುದೂ ಅಭಿವೃದ್ಧಿಯ ಭಾಗವಾಗಿದೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದು, ಅರ್ಹ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ತಲುಪಿಸಲಾಗುತ್ತಿದೆ ಎಂದರು.

Ad Widget

Ad Widget <> Ad Widget

ಗೃಹಜ್ಯೋತಿ ಯೋಜನೆಯಡಿ ಪುತ್ತೂರು ಮತ್ತು ವಿಟ್ಲ ಭಾಗಗಳಲ್ಲಿ 80,371 ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 46,176 ಕುಟುಂಬಗಳಿಗೆ ₹293.91 ಕೋಟಿ ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 37 ಸಾವಿರಕ್ಕೂ ಅಧಿಕ ಕುಟುಂಬಗಳು ಸೌಲಭ್ಯ ಪಡೆಯುತ್ತಿವೆ. ಶಕ್ತಿ ಯೋಜನೆಯಡಿ 4.11 ಕೋಟಿಗೂ ಅಧಿಕ ಮಹಿಳಾ ಪ್ರಯಾಣಗಳು ನಡೆದಿದ್ದು, ಟಿಕೆಟ್ ಮೌಲ್ಯ ₹102.36 ಕೋಟಿ ಆಗಿದೆ. ಯುವನಿಧಿ ಯೋಜನೆಯಡಿ 1,005 ಮಂದಿಗೆ ಸುಮಾರು ₹2.50 ಕೋಟಿ ವಿತರಿಸಲಾಗಿದೆ ಎಂದು ವಿವರಿಸಿದರು.



Ad Widget

ಗೃಹಲಕ್ಷ್ಮೀ ಯೋಜನೆಯ ಹಣ ಉಳಿತಾಯ ಮಾಡಿ ಹೈನುಗಾರಿಕೆ ಆರಂಭಿಸಿರುವ ಹಿರೇಬಂಡಾಡಿನ ಸುಂದರಿ ಅವರ ಉದಾಹರಣೆಯನ್ನು ಉಲ್ಲೇಖಿಸಿದರು. ಏಳು ದನಗಳನ್ನು ಹೊಂದಿರುವ ಅವರು ದಿನಕ್ಕೆ 50ರಿಂದ 60 ಲೀಟರ್ ಹಾಲು ಉತ್ಪಾದಿಸಿ, ತಿಂಗಳಿಗೆ ಸುಮಾರು ₹60 ಸಾವಿರ ಆದಾಯ ಗಳಿಸುತ್ತಿದ್ದಾರೆ.

Ad Widget

Ad Widget

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದ್ದು, ಫಲಾನುಭವಿಗಳ ಸಮಸ್ಯೆಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಸ್ಪಂದಿಸುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಅಬೂ ನವಗ್ರಾಮ ಮತ್ತು ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!