Connect with us

ಅಂತರ ರಾಜ್ಯ

Cyclone-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಿಗೆ ಚಂಡಮಾರುತದ ಎಚ್ಚರಿಕೆ..!

Published

on



Ad Widget

Ad Widget

Ad Widget

Ad Widget

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ನವೆಂಬರ್ 17ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಈ ಹವಾಮಾನ ಬದಲಾವಣೆಯ ಪರಿಣಾಮವಾಗಿ ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳು, ಪುದುಚೇರಿ ಹಾಗೂ ಕಾರೈಕಲ್ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Ad Widget

Ad Widget

Ad Widget

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ನವೆಂಬರ್ 17ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

Ad Widget

Ad Widget alt="Ad Widget"/>

Ad Widget

ಈ ಹವಾಮಾನ ಬದಲಾವಣೆಯ ಪರಿಣಾಮವಾಗಿ ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳು, ಪುದುಚೇರಿ ಹಾಗೂ ಕಾರೈಕಲ್ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Ad Widget

Ad Widget <> Ad Widget

ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಭಾನುವಾರ ಮತ್ತಷ್ಟು ತೀವ್ರಗೊಳ್ಳಲಿದ್ದು, ವಾಯುವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿದೆ. ನವೆಂಬರ್ 16ರಂದು ದಕ್ಷಿಣ ಹಾಗೂ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಸಮೀಪ ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.



Ad Widget

ಬಳಿಕ ನವೆಂಬರ್ 17ರಂದು ಇದು ತೀವ್ರ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯಿದ್ದು, ಇದರ ಪ್ರಭಾವದಿಂದ ತಮಿಳುನಾಡಿನ ಹಲವು ಭಾಗಗಳಲ್ಲಿ ಮಳೆಯಾಗಬಹುದು ಎಂದು ಐಎಂಡಿ ಎಚ್ಚರಿಸಿದೆ.

Ad Widget

Ad Widget

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಚೆಂಗಲ್‌ಪಟ್ಟು, ಚೆನ್ನೈ, ಕಾಂಚೀಪುರಂ ಹಾಗೂ ಕನ್ಯಾಕುಮಾರಿ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.

Ad Widget
Click to comment

Leave a Reply

ಅಂತರ ರಾಜ್ಯ

Arrested-ಲವ್ ಬ್ರೇಕಪ್ ನಿಂದ ಮನನೊಂದು ಮಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಕಲ್ಲೆಸೆದ ಯುವಕ ಅರೆಸ್ಟ್

Published

on



Ad Widget

Ad Widget

Ad Widget

Ad Widget

ಲವ್ ಬ್ರೇಕಪ್ ಆಗಿದಕ್ಕೆ ಮನ ನೊಂದು ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೆಸೆದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಆಲುವಾದಲ್ಲಿ ನಡೆದಿದೆ. ಸುಜಿತ್ ಸುರೇಶ್ (19) ಬಂಧಿತ ಆರೋಪಿ.

Ad Widget

Ad Widget

Ad Widget

ಕೇರಳ: ಲವ್ ಬ್ರೇಕಪ್ ಆಗಿದಕ್ಕೆ ಮನ ನೊಂದು ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೆಸೆದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಆಲುವಾದಲ್ಲಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಸುಜಿತ್ ಸುರೇಶ್ (19) ಬಂಧಿತ ಆರೋಪಿ. ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಮೂರು ಬಾರಿ ಕಲ್ಲು ಎಸೆದಿದ್ದಾನೆ. ಇದರ ಪರಿಣಾಮವಾಗಿ ರೈಲಿನ ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ.

Ad Widget

Ad Widget <> Ad Widget

ಈತನ ಪ್ರೇಯಸಿಯ ಮನೆಯು ರೈಲ್ವೆ ಹಳಿಗಳ ಸಮೀಪದಲ್ಲೇ ಇದ್ದು, ಆಕೆ ತನ್ನನ್ನು ಬಿಟ್ಟು ಹೋಗಿದ್ದಾಳೆಂಬ ಕೋಪ ಮತ್ತು ಪ್ರೇಮ ವೈಫಲ್ಯದ ಬೇಸರದಿಂದ ರೈಲಿನ ಮೇಲೆ ಕಲ್ಲೆಸೆದಿರುವುದಾಗಿ ಪೊಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾನೆ.



Ad Widget

ರೈಲ್ವೇ ಹಳಿಗಳ ಸಮೀಪ ಪದೇ ಪದೇ ಸುಳಿದಾಡುತ್ತಿದ್ದ ಈತನನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ರೈಲ್ವೆ ಪೊಲೀಸರು ಗುರುತಿಸಿ ಬಂಧಿಸಿದ್ದಾರೆ. ರೈಲ್ವೆ ಪೊಲೀಸರು ಈತನ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆ 153ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Continue Reading

ನಿಧನ ವಾರ್ತೆ

S.M. Srinivasan-ತಿರುಪತಿ ತಿಮ್ಮಪ್ಪನ ಪ್ರಸಿದ್ಧ ಚಿತ್ರಗಳಿಗೆ ಜೀವ ತುಂಬಿದ ಖ್ಯಾತ ಕಲಾವಿದ ಎಸ್.ಎಂ. ಶ್ರೀನಿವಾಸನ್ ನಿಧನ

Published

on



Ad Widget

Ad Widget

Ad Widget

Ad Widget

ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ಪ್ರಸಿದ್ಧ ವರ್ಣಚಿತ್ರಗಳ ಮೂಲಕ ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ದೇಶದಾದ್ಯಂತ ಮನೆಮಾತಾಗಿದ್ದ ಖ್ಯಾತ ಕಲಾವಿದ ಎಸ್.ಎಂ. ಶ್ರೀನಿವಾಸನ್ (86) ನಿಧನರಾಗಿದ್ದಾರೆ.

Ad Widget

Ad Widget

Ad Widget

ಚೆನ್ನೈ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ಪ್ರಸಿದ್ಧ ವರ್ಣಚಿತ್ರಗಳ ಮೂಲಕ ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ದೇಶದಾದ್ಯಂತ ಮನೆಮಾತಾಗಿದ್ದ ಖ್ಯಾತ ಕಲಾವಿದ ಎಸ್.ಎಂ. ಶ್ರೀನಿವಾಸನ್ (86) ನಿಧನರಾಗಿದ್ದಾರೆ.

Ad Widget

Ad Widget alt="Ad Widget"/>

Ad Widget

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿಯ ಮಂಡಿತೊಪ್ಪು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Ad Widget

Ad Widget <> Ad Widget

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಚಿರಪರಿಚಿತವಾಗಿರುವ ಎರಡು ಪ್ರಸಿದ್ಧ ಚಿತ್ರಗಳನ್ನು ರಚಿಸಿದ ಕೀರ್ತಿ ಶ್ರೀನಿವಾಸನ್ ಅವರಿಗೆ ಸಲ್ಲುತ್ತದೆ. ಒಂದು ಚಿತ್ರದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಸಾಂಪ್ರದಾಯಿಕ ಆಭರಣಗಳಿಂದ ಅಲಂಕೃತರಾಗಿದ್ದರೆ, ಮತ್ತೊಂದು ಚಿತ್ರದಲ್ಲಿ ಆಭರಣಗಳಿಲ್ಲದ ದಿವ್ಯ ರೂಪವನ್ನು ಚಿತ್ರಿಸಲಾಗಿದೆ.



Ad Widget

1970ರ ದಶಕದ ಆರಂಭದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನೀಡಿದ ವಿಶೇಷ ಆಹ್ವಾನದ ಮೇರೆಗೆ ಅವರು ಈ ಚಿತ್ರಗಳನ್ನು ರಚಿಸಿದ್ದರು. ಈ ಸಂದರ್ಭದಲ್ಲಿ ಗರ್ಭಗುಡಿಯೊಳಗೆ ತೆರಳಿ ಮೂಲವಿರಾಟ್ ದೇವರ ಮೂರ್ತಿಯನ್ನು ಹತ್ತಿರದಿಂದ ವೀಕ್ಷಿಸುವ ವಿಶೇಷ ಅವಕಾಶವನ್ನೂ ಅವರಿಗೆ ಕಲ್ಪಿಸಲಾಗಿತ್ತು. ದೇವರ ದಿವ್ಯ ರೂಪವನ್ನು ಅತ್ಯಂತ ನಿಖರತೆ ಹಾಗೂ ಭಕ್ತಿಭಾವದಿಂದ ತಮ್ಮ ಕುಂಚದಲ್ಲಿ ಅವರು ಸೆರೆಹಿಡಿದಿದ್ದರು.

Ad Widget

Ad Widget

ಈ ಚಿತ್ರಗಳಿಗೆ ಟಿಟಿಡಿ ಅನುಮೋದನೆ ನೀಡಿದ ಬಳಿಕ ಕ್ಯಾಲೆಂಡರ್‌ಗಳು, ಪೋಸ್ಟರ್‌ಗಳು ಹಾಗೂ ಫ್ರೇಮ್ ಮಾಡಿದ ಚಿತ್ರಗಳ ರೂಪದಲ್ಲಿ ದೇಶಾದ್ಯಂತ ಮುದ್ರಿಸಿ ವಿತರಿಸಲಾಯಿತು. ಹೀಗಾಗಿ ತಿರುಪತಿ ತಿಮ್ಮಪ್ಪನ ಪರಿಚಿತ ಮುಖಭಾವವನ್ನು ಭಕ್ತರು ಶ್ರೀನಿವಾಸನ್ ಅವರ ಕಲೆಯೊಂದಿಗೆ ಗುರುತಿಸುವಂತಾಯಿತು.

ತಿರುಮಲಕ್ಕೆ ಆಗಾಗ್ಗೆ ಭೇಟಿ ನೀಡಲು ಸಾಧ್ಯವಾಗದ ಲಕ್ಷಾಂತರ ಭಕ್ತರಿಗೆ ಈ ಚಿತ್ರಗಳು ಮನೆಯಲ್ಲಿಯೇ ದೇವರ ದರ್ಶನ ಪಡೆದ ಅನುಭವ ನೀಡಿದವು. ದೇಶದ ಅಸಂಖ್ಯಾತ ಮನೆಗಳ ಗೋಡೆಗಳಲ್ಲಿ ಅವರ ಚಿತ್ರಗಳು ಪೂಜಿಸಲ್ಪಡುವ ಮೂಲಕ ಅವರ ಕಲೆಗೆ ವಿಶೇಷ ಸ್ಥಾನ ದೊರೆಯಿತು.

ಕೋವಿಲ್‌ಪಟ್ಟಿಯಲ್ಲಿ ಜನನ, ಕೊಂಡಯ್ಯ ರಾಜು ಬಳಿ ಕಲಾ ತರಬೇತಿ
ಕೋವಿಲ್‌ಪಟ್ಟಿಯಲ್ಲಿ ಜನಿಸಿದ ಶ್ರೀನಿವಾಸನ್ ಅವರು ಹತ್ತನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದರು. ಬಳಿಕ ಖ್ಯಾತ ಕಲಾವಿದ ಕೊಂಡಯ್ಯ ರಾಜು ಅವರ ಬಳಿ ಸಾಂಪ್ರದಾಯಿಕ ಚಿತ್ರಕಲೆಯ ತರಬೇತಿ ಪಡೆದರು. ಹಿಂದೂ ದೇವರು ಹಾಗೂ ದೇವತೆಗಳನ್ನು ಚಿತ್ರಿಸುವ ವಿಧಾನಗಳು ಮತ್ತು ಕಲಾ ತಂತ್ರಗಳನ್ನು ಅವರಿಂದ ಕಲಿತಿದ್ದರು.

ತಿರುಮಲ ವೆಂಕಟೇಶ್ವರ ಸ್ವಾಮಿಯ ಚಿತ್ರಗಳಲ್ಲದೆ, ಹಿಂದೂ ದೇವರು ಮತ್ತು ದೇವತೆಗಳ ಹಲವು ಚಿತ್ರರೂಪಗಳನ್ನೂ ಅವರು ರಚಿಸಿದ್ದರು. ತಮ್ಮ ಕಲಾಕೃತಿಗಳಲ್ಲಿನ ನಿಖರತೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಭಕ್ತರು ಮತ್ತು ಸಹ ಕಲಾವಿದರ ವಲಯದಲ್ಲಿ ಅಪಾರ ಗೌರವ ಸಂಪಾದಿಸಿದ್ದರು.

ಐದು ದಶಕಗಳ ಹಿಂದೆ ಅವರು ರಚಿಸಿದ ಚಿತ್ರಗಳು ಇಂದಿಗೂ ಲಕ್ಷಾಂತರ ಮನೆಗಳಲ್ಲಿ ಪೂಜಿಸಲ್ಪಡುತ್ತಿವೆ. ಕ್ಯಾಲೆಂಡರ್‌ಗಳಲ್ಲಿನ ಅವರ ಕಲಾಕೃತಿಗಳು ಹೊಸ ತಲೆಮಾರಿನ ಭಕ್ತರಿಗೂ ಪರಿಚಿತವಾಗಿವೆ.

ಶ್ರೀನಿವಾಸನ್ ಅವರ ನಿಧನದೊಂದಿಗೆ ತಿರುಮಲದ ಭಕ್ತಿಪರ ಕಲಾ ಇತಿಹಾಸದ ಒಂದು ಮಹತ್ವದ ಅಧ್ಯಾಯ ಅಂತ್ಯಗೊಂಡಂತಾಗಿದೆ. ಅವರ ನಿಧನಕ್ಕೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ರಾಜಕೀಯ ನಾಯಕರು ಹಾಗೂ ಭಕ್ತರು ಸಂತಾಪ ಸೂಚಿಸಿದ್ದಾರೆ.

Ad Widget
Continue Reading

ಅಂತರ ರಾಜ್ಯ

Dog Box-ಸಾಕುಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್: ವಂದೇ ಭಾರತ್ ಸ್ಲೀಪರ್‌ನಲ್ಲಿ ‘ಡಾಗ್ ಬಾಕ್ಸ್’ ಸೌಲಭ್ಯ

Published

on



Ad Widget

Ad Widget

Ad Widget

Ad Widget

ಪ್ರವಾಸ ಅಥವಾ ದೂರದ ಊರಿಗೆ ಪ್ರಯಾಣಿಸುವಾಗ ಮನೆಯ ಮುದ್ದಿನ ಸಾಕುನಾಯಿಯನ್ನು ಎಲ್ಲಿ ಬಿಟ್ಟು ಹೋಗುವುದು ಎಂಬ ಚಿಂತೆ ಸಾಕುಪ್ರಾಣಿ ಪ್ರಿಯರನ್ನು ಕಾಡುವುದು ಸಾಮಾನ್ಯ. ಇದೀಗ ಸಾಕುನಾಯಿಗಳನ್ನೂ ತಮ್ಮೊಂದಿಗೆ ರೈಲಿನಲ್ಲಿ ಕರೆದೊಯ್ಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ನಾಯಿಗಳಿಗಾಗಿ ಪ್ರತ್ಯೇಕ ‘ಡಾಗ್ ಬಾಕ್ಸ್’ ಸೌಲಭ್ಯ ಪರಿಚಯಿಸಲಾಗಿದೆ ಎಂದು ವರದಿಯಾಗಿದೆ.

Ad Widget

Ad Widget

Ad Widget

ನವದೆಹಲಿ: ಪ್ರವಾಸ ಅಥವಾ ದೂರದ ಊರಿಗೆ ಪ್ರಯಾಣಿಸುವಾಗ ಮನೆಯ ಮುದ್ದಿನ ಸಾಕುನಾಯಿಯನ್ನು ಎಲ್ಲಿ ಬಿಟ್ಟು ಹೋಗುವುದು ಎಂಬ ಚಿಂತೆ ಸಾಕುಪ್ರಾಣಿ ಪ್ರಿಯರನ್ನು ಕಾಡುವುದು ಸಾಮಾನ್ಯ. ಇದೀಗ ಸಾಕುನಾಯಿಗಳನ್ನೂ ತಮ್ಮೊಂದಿಗೆ ರೈಲಿನಲ್ಲಿ ಕರೆದೊಯ್ಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ನಾಯಿಗಳಿಗಾಗಿ ಪ್ರತ್ಯೇಕ ‘ಡಾಗ್ ಬಾಕ್ಸ್’ ಸೌಲಭ್ಯ ಪರಿಚಯಿಸಲಾಗಿದೆ ಎಂದು ವರದಿಯಾಗಿದೆ.

Ad Widget

Ad Widget alt="Ad Widget"/>

Ad Widget

ಈ ಹಿಂದೆ ರೈಲಿನಲ್ಲಿ ಸಾಕುನಾಯಿಗಳನ್ನು ಕರೆದೊಯ್ಯಲು ಹಲವು ನಿರ್ಬಂಧಗಳಿದ್ದವು. ಪ್ರಥಮ ದರ್ಜೆ ಎಸಿ ಬೋಗಿಯಲ್ಲಿ ಸಂಪೂರ್ಣ ಕ್ಯಾಬಿನ್ ಅಥವಾ ಕೂಪೆ ಕಾಯ್ದಿರಿಸಿದಾಗ ಮಾತ್ರ ನಾಯಿಗಳನ್ನು ಮಾಲೀಕರೊಂದಿಗೆ ಕರೆದೊಯ್ಯಲು ಅವಕಾಶವಿತ್ತು. ಇದರಿಂದ ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುತ್ತಿತ್ತು.

Ad Widget

Ad Widget <> Ad Widget

ಹೊಸ ವ್ಯವಸ್ಥೆಯಲ್ಲಿ ನಾಯಿಗಳಿಗಾಗಿ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಗಾಳಿ-ಬೆಳಕಿನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಮೂಲ ವರದಿ ತಿಳಿಸಿದೆ.



Ad Widget

ಬುಕಿಂಗ್ ಮಾಡುವುದು ಹೇಗೆ?
ಸಾಕುನಾಯಿಗಳಿಗಾಗಿ ಈ ಸೌಲಭ್ಯ ಪಡೆಯಲು ಪ್ರಯಾಣಿಕರು ಮೊದಲು ತಮ್ಮ ರೈಲು ಟಿಕೆಟ್ ಖಚಿತಪಡಿಸಿಕೊಳ್ಳಬೇಕು. ಬಳಿಕ ರೈಲು ಹೊರಡುವ ಕೆಲವು ಗಂಟೆಗಳ ಮುನ್ನ ನಿಲ್ದಾಣದ ಪಾರ್ಸೆಲ್ ಕಚೇರಿಯನ್ನು ಸಂಪರ್ಕಿಸಿ, ನಾಯಿಯ ತೂಕ ಮತ್ತು ಗಾತ್ರಕ್ಕೆ ಅನುಗುಣವಾಗಿ ನಿಗದಿತ ಶುಲ್ಕ ಪಾವತಿಸಿ ಬುಕ್ಕಿಂಗ್ ಮಾಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

Ad Widget

Ad Widget

ಪ್ರಯಾಣದ ವೇಳೆ ಸಾಕುನಾಯಿಯ ಆರೋಗ್ಯ ಪ್ರಮಾಣಪತ್ರ ಹಾಗೂ ಮಾಲೀಕರ ಗುರುತಿನ ಚೀಟಿ ಹೊಂದಿರುವುದು ಅಗತ್ಯವೆಂದು ಹೇಳಲಾಗಿದೆ.

ಒಟ್ಟಿನಲ್ಲಿ, ಸಾಕುಪ್ರಾಣಿಗಳನ್ನೂ ಕುಟುಂಬದ ಸದಸ್ಯರಂತೆ ಕಾಣುವ ಪ್ರಾಣಿ ಪ್ರಿಯರಿಗೆ ಇಂತಹ ಸೌಲಭ್ಯ ಅನುಕೂಲಕರವಾಗಲಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!