Connect with us

ಬಿಗ್ ನ್ಯೂಸ್

Puttur-ಪುತ್ತೂರಿನಲ್ಲಿ ಕೃಷಿಗೆ ಹೊಸ ಪ್ರಯೋಗ: ಗಿಡಗಳ ಬುಡಕ್ಕೇ ತಲುಪಲಿದೆ ಸಾವಯವ ಸ್ಲರಿ ಗೊಬ್ಬರ: ಕೃಷ್ಣ ಮುಳಿಯ ಗ್ರೀನ್ ಎನರ್ಜಿ–ಪಿಂಗಾರ ಸಂಸ್ಥೆ ಒಡಂಬಡಿಕೆ

Published

on



Ad Widget

Ad Widget

Ad Widget

Ad Widget

ಆಹಾರ ತ್ಯಾಜ್ಯದಿಂದ ಉತ್ಪಾದಿಸಲಾಗುವ ಪೋಷಕಾಂಶಭರಿತ ಸಾವಯವ ಸ್ಲರಿ ಗೊಬ್ಬರವನ್ನು ಕೃಷಿಕರ ತೋಟಗಳಿಗೆ ನೇರವಾಗಿ ತಲುಪಿಸುವ ನೂತನ ಪ್ರಯತ್ನಕ್ಕೆ ಪುತ್ತೂರಿನಲ್ಲಿ ಚಾಲನೆ ದೊರೆತಿದೆ. ಈ ನಿಟ್ಟಿನಲ್ಲಿ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಹಾಗೂ ಕೃಷಿಕರ ಒಡನಾಡಿ ಸಂಸ್ಥೆಯಾದ ಪಿಂಗಾರ ನಡುವೆ ಒಡಂಬಡಿಕೆ ಏರ್ಪಟ್ಟಿದೆ. ಈ ಕುರಿತು ನಡೆದ ಕಾರ್ಯಕ್ರಮದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ಸ್ಲರಿ ಗೊಬ್ಬರ ಪೂರೈಕೆಗಾಗಿ ಟ್ಯಾಂಕ್‌ ಅನ್ನು ಪಿಂಗಾರ ಸಂಸ್ಥೆಗೆ ಹಸ್ತಾಂತರಿಸಲಾಯಿತು.

Ad Widget

Ad Widget

Ad Widget

ಪುತ್ತೂರು: ಆಹಾರ ತ್ಯಾಜ್ಯದಿಂದ ಉತ್ಪಾದಿಸಲಾಗುವ ಪೋಷಕಾಂಶಭರಿತ ಸಾವಯವ ಸ್ಲರಿ ಗೊಬ್ಬರವನ್ನು ಕೃಷಿಕರ ತೋಟಗಳಿಗೆ ನೇರವಾಗಿ ತಲುಪಿಸುವ ನೂತನ ಪ್ರಯತ್ನಕ್ಕೆ ಪುತ್ತೂರಿನಲ್ಲಿ ಚಾಲನೆ ದೊರೆತಿದೆ.

Ad Widget

Ad Widget alt="Ad Widget"/>

Ad Widget

ಈ ನಿಟ್ಟಿನಲ್ಲಿ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಹಾಗೂ ಕೃಷಿಕರ ಒಡನಾಡಿ ಸಂಸ್ಥೆಯಾದ ಪಿಂಗಾರ ನಡುವೆ ಒಡಂಬಡಿಕೆ ಏರ್ಪಟ್ಟಿದೆ. ಈ ಕುರಿತು ನಡೆದ ಕಾರ್ಯಕ್ರಮದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ಸ್ಲರಿ ಗೊಬ್ಬರ ಪೂರೈಕೆಗಾಗಿ ಟ್ಯಾಂಕ್‌ ಅನ್ನು ಪಿಂಗಾರ ಸಂಸ್ಥೆಗೆ ಹಸ್ತಾಂತರಿಸಲಾಯಿತು.

Ad Widget

Ad Widget <> Ad Widget

ಪ್ರತಿದಿನ ಸುಮಾರು 15,000ಕ್ಕೂ ಅಧಿಕ ಲೀಟರ್ ಸಾವಯವ ಸ್ಲರಿ ಲಭ್ಯವಿದ್ದು, ಪಿಂಗಾರ ಸಂಸ್ಥೆಯ ಸಂಪೂರ್ಣ ನೇತೃತ್ವದಲ್ಲಿ ಇದನ್ನು ಕೃಷಿಕರ ತೋಟಗಳಿಗೆ ತಲುಪಿಸಲಾಗುವುದು ಎಂದು ಕೃಷ್ಣ ನಾರಾಯಣ ಮುಳಿಯ ತಿಳಿಸಿದರು.



Ad Widget

ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಜಾರಾಮ್ ಸಿ.ಜಿ. ಬಲಿಪಗುಳಿ ಮಾತನಾಡಿ, ಈ ಸಾವಯವ ಸ್ಲರಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿದ್ದು, ಅತ್ಯಂತ ಕಡಿಮೆ ದರದಲ್ಲಿ ಕೃಷಿಕರಿಗೆ ಒದಗಿಸಲಾಗುತ್ತದೆ. ಇದರಿಂದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗೊಬ್ಬರವನ್ನು ಕೇವಲ ತೋಟಗಳಿಗೆ ತಲುಪಿಸುವುದಷ್ಟೇ ಅಲ್ಲದೆ, ಗಿಡಗಳ ಬುಡದವರೆಗೂ ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದರು.

Ad Widget

Ad Widget

ಈ ಒಡಂಬಡಿಕೆಯು ಕೃಷಿಕರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಗರಪಾಲಿಕೆ ಆಯುಕ್ತೆ ವಿದ್ಯಾ ಕಾಳೆ, ಈ ವಿಶೇಷ ಸಹಭಾಗಿತ್ವವು ಕೃಷಿ ಸಮುದಾಯಕ್ಕೆ ಹೆಚ್ಚಿನ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.

ಕಳೆದ ಒಂದು ವರ್ಷದಿಂದ ಕೆಲವು ಅಡಿಕೆ ಹಾಗೂ ತೆಂಗಿನ ತೋಟಗಳಲ್ಲಿ ಈ ಸ್ಲರಿ ಗೊಬ್ಬರವನ್ನು ಬಳಕೆ ಮಾಡಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

ಸಾವಯವ ಸ್ಲರಿ ಗೊಬ್ಬರವನ್ನು ಪಡೆಯಲು ಆಸಕ್ತ ಕೃಷಿಕರು ಪಿಂಗಾರ ಸಂಸ್ಥೆಯನ್ನು ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆ: 9845955799

ಈ ಸಂದರ್ಭದಲ್ಲಿ ಪಿಂಗಾರ ಸಂಸ್ಥೆಯ ಸಿಇಒ ಪ್ರದೀಪ್ ಎಸ್., ನಿರ್ದೇಶಕರಾದ ರಾಮಕಿಶೋರ್ ಕೆ., ಶ್ಯಾಮಸುಂದರ್ ಎನ್., ಪ್ರಕಾಶ್ ವಿ., ಜಯಪ್ರಕಾಶ್ ನಾಯಕ್, ಸಾಯಿಗೀತಾ ಸಿ.ಎಚ್., ಗಣೇಶ್ ಕೆ.ಎಂ., ಪುತ್ತೂರು ನಗರಪಾಲಿಕೆಯ ಪರಿಸರ ವಿಭಾಗದ ಅಧಿಕಾರಿ ಶಬರಿನಾಥ್ ರೈ ಹಾಗೂ ಸಲಹೆಗಾರ ವೇಣು ಶರ್ಮ ಉಪಸ್ಥಿತರಿದ್ದರು.

Ad Widget
Click to comment

Leave a Reply

ಸ್ಥಳೀಯ

Soujanya murder case-BIG Breaking: ಸೌಜನ್ಯ ಕೊಲೆ ಪ್ರಕರಣ – ಮಣ್ಣ ಸಂಕಕ್ಕೆ ಆಗಮಿಸಿದ ಮೆಡಿಕಲ್ ಬೋರ್ಡ್ ತಂಡ ಮೂವರು FSL ತಜ್ಞ ವೈದ್ಯರಿಂದ ಪರಿಶೀಲನೆ

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳ ಗ್ರಾಮದ ಕು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಘಟನಾ ಸ್ಥಳದ ವೈಜ್ಞಾನಿಕ ಪರಿಶೀಲನೆಗೆ ಮುಂದಾಗಿದೆ. ಎಫ್‌ಎಸ್‌ಎಲ್ ವಿಭಾಗದ ತಜ್ಞ ವೈದ್ಯರನ್ನೊಳಗೊಂಡ ಮೆಡಿಕಲ್ ಬೋರ್ಡ್ ತಂಡ ನ.17ರಂದು ಸಂಜೆ ಧರ್ಮಸ್ಥಳ ಗ್ರಾಮದ ಮಣ್ಣಸಂಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Ad Widget

Ad Widget

Ad Widget

ಬೆಳ್ತಂಗಡಿ: ರಾಜ್ಯಾದ್ಯಂತ ಗಮನ ಸೆಳೆದಿರುವ ಧರ್ಮಸ್ಥಳ ಗ್ರಾಮದ ಕು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ಘಟನಾ ಸ್ಥಳದ ವೈಜ್ಞಾನಿಕ ಪರಿಶೀಲನೆಗೆ ಮುಂದಾಗಿದೆ. ಇದರ ಭಾಗವಾಗಿ ಎಫ್‌ಎಸ್‌ಎಲ್ ವಿಭಾಗದ ತಜ್ಞ ವೈದ್ಯರನ್ನೊಳಗೊಂಡ ಮೆಡಿಕಲ್ ಬೋರ್ಡ್ ತಂಡ ನ.17ರಂದು ಸಂಜೆ ಧರ್ಮಸ್ಥಳ ಗ್ರಾಮದ ಮಣ್ಣಸಂಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Ad Widget

Ad Widget alt="Ad Widget"/>

Ad Widget

ಸೌಜನ್ಯ ಪ್ರಕರಣದ ಮರುತನಿಖೆಯ ಹಿನ್ನೆಲೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರ ನೇತೃತ್ವದಲ್ಲಿ ಮೆಡಿಕಲ್ ಬೋರ್ಡ್ ರಚಿಸಲಾಗಿದ್ದು, ಬೆಂಗಳೂರು, ಬೆಳಗಾವಿ ಹಾಗೂ ಹಾವೇರಿ ಭಾಗದ ಮೂವರು ನುರಿತ ಎಫ್‌ಎಸ್‌ಎಲ್ ತಜ್ಞ ವೈದ್ಯರನ್ನು ತಂಡದಲ್ಲಿ ಸೇರ್ಪಡೆಗೊಳಿಸಲಾಗಿದೆ. ತಂಡದಲ್ಲಿ ಓರ್ವ ಮಹಿಳಾ ವೈದ್ಯೆ ಹಾಗೂ ಇಬ್ಬರು ಪುರುಷ ವೈದ್ಯರು ಇದ್ದಾರೆ.

Ad Widget

Ad Widget <> Ad Widget

ನ.17ರಂದು ಸಂಜೆ ಸುಮಾರು 4 ಗಂಟೆಗೆ ಇಬ್ಬರು ಎಸ್‌ಐಟಿ ಅಧಿಕಾರಿಗಳೊಂದಿಗೆ ಮಣ್ಣಸಂಕಕ್ಕೆ ಆಗಮಿಸಿದ ಮೂವರು ತಜ್ಞ ವೈದ್ಯರು, ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ ಹಾಗೂ ಪೊಲೀಸ್ ಸಿಬ್ಬಂದಿಯೂ ಉಪಸ್ಥಿತರಿದ್ದರು.



Ad Widget

ಹಳೆಯ ಫೋಟೋ, ವಿಡಿಯೋಗಳ ಪರಿಶೀಲನೆ
ಘಟನಾ ಸ್ಥಳದ ಪರಿಶೀಲನೆಯ ಜೊತೆಗೆ ಸೌಜನ್ಯ ಅವರ ಮೃತದೇಹ ಪತ್ತೆಯಾದ ದಿನದ ಛಾಯಾಚಿತ್ರಗಳು ಹಾಗೂ ವಿಡಿಯೋ ದಾಖಲೆಗಳನ್ನೂ ಮೆಡಿಕಲ್ ಬೋರ್ಡ್ ಪರಿಶೀಲಿಸಲಿದೆ ಎಂದು ತಿಳಿದುಬಂದಿದೆ. ಲಭ್ಯವಿರುವ ದಾಖಲೆಗಳು ಮತ್ತು ಸ್ಥಳದಲ್ಲಿನ ಭೌತಿಕ ಅಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಘಟನೆ ನಡೆದ ಸ್ಥಳದ ಕುರಿತು ನಿಖರವಾದ ಅಭಿಪ್ರಾಯವನ್ನು ಎಸ್‌ಐಟಿ ಅಧಿಕಾರಿಗಳಿಗೆ ಸಲ್ಲಿಸುವುದು ತಜ್ಞರ ತಂಡದ ಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ.

Ad Widget

Ad Widget

ಈ ಪರಿಶೀಲನೆಯಿಂದ ಪ್ರಕರಣದ ಮರುತನಿಖೆಗೆ ಯಾವ ರೀತಿಯ ಹೊಸ ವೈಜ್ಞಾನಿಕ ಮಾಹಿತಿ ಲಭ್ಯವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ತಜ್ಞ ವೈದ್ಯರ ಪರಿಶೀಲನೆ ಹಾಗೂ ವರದಿಯ ಆಧಾರದ ಮೇಲೆ ಎಸ್‌ಐಟಿ ಮುಂದಿನ ತನಿಖಾ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.

Ad Widget
Continue Reading

ಬಿಗ್ ನ್ಯೂಸ್

Venkatesh Prasad-ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಂಸ್ಕ್ರತ ಶಿಕ್ಷಕ ವೆಂಕಟೇಶ್ ಪ್ರಸಾದ್ ದರ್ಬೆತ್ತಡ್ಕ ರಾಷ್ಟ್ರಮಟ್ಟಕ್ಕೆ

Published

on



Ad Widget

Ad Widget

Ad Widget

Ad Widget

ಧಾರವಾಡ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಧಾರವಾಡ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನ.14 ಮತ್ತು ನ.15 ರಂದು ನಡೆದ ಕರ್ನಾಟಕ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ದರ್ಬೆತ್ತಡ್ಕ ವೆಂಕಟೇಶ್ ಪ್ರಸಾದ್ ಇವರು 50+ ವಯೋಮಾನದ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಹಾಗೂ 100ಮೀ ಹರ್ಡಲ್ಸ್ ನಲ್ಲಿ ಕಂಚಿನ ಪದಕ ಜಯಿಸಿರುತ್ತಾರೆ.

Ad Widget

Ad Widget

Ad Widget

ಧಾರವಾಡ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಧಾರವಾಡ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ನ.14 ಮತ್ತು ನ.15 ರಂದು ನಡೆದ ಕರ್ನಾಟಕ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ದರ್ಬೆತ್ತಡ್ಕ ವೆಂಕಟೇಶ್ ಪ್ರಸಾದ್ ಇವರು 50+ ವಯೋಮಾನದ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಹಾಗೂ 100ಮೀ ಹರ್ಡಲ್ಸ್ ನಲ್ಲಿ ಕಂಚಿನ ಪದಕ ಜಯಿಸಿರುತ್ತಾರೆ.

Ad Widget

Ad Widget alt="Ad Widget"/>

Ad Widget

ಅಲ್ಲದೇ 5 ಕಿ. ಮೀ. ವೇಗದ ನಡಿಗೆಯಲ್ಲಿ 5ನೇ ಸ್ಥಾನ ಗಳಿಸಿ, ಮುಂದಿನ ವರ್ಷ ಜನವರಿಯಲ್ಲಿ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Ad Widget

Ad Widget <> Ad Widget

ಇವರು ದರ್ಬೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೆರ್ನಾಜೆ ಶ್ರೀ ಸೀತಾರಾಘವ ವಿದ್ಯಾ ಸಂಸ್ಥೆಗಳು, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



Ad Widget

Continue Reading

ಸುಳ್ಯ

Black pepper-ಕಾಳುಮೆಣಸು ದರದಲ್ಲಿ ಭರ್ಜರಿ ಏರಿಕೆ: ₹750ರ ಗಡಿ ತಲುಪಿದ ಕಪ್ಪು ಚಿನ್ನ

Published

on



Ad Widget

Ad Widget

Ad Widget

Ad Widget

ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡಿದ್ದು, ನಿರಂತರವಾಗಿ ಏರಿಕೆಯಾಗುತ್ತಾ ಇದೀಗ ನ.16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Ad Widget

Ad Widget

Ad Widget

ಸುಳ್ಯ: ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತಿ ಕೆ.ಜಿ.ಗೆ ₹750ರ ಗಡಿಯನ್ನು ತಲುಪಿದೆ. ನಿರಂತರ ದರ ಏರಿಕೆಯಿಂದ ಕಾಳುಮೆಣಸು ಬೆಳೆಗಾರರಲ್ಲಿ ಸಂತಸ ಮೂಡಿದೆ.

Ad Widget

Ad Widget alt="Ad Widget"/>

Ad Widget

ಕ್ಯಾಂಪ್ಕೋ ಮಂಗಳೂರು (ಸುಳ್ಯ ಶಾಖೆ) ದರ ಮಾಹಿತಿಯ ಪ್ರಕಾರ, ಕಳೆದ ಅಕ್ಟೋಬರ್ 19ರ ವೇಳೆಗೆ ಕಾಳುಮೆಣಸಿನ ಧಾರಣೆ ₹700ರ ಗಡಿ ದಾಟಿತ್ತು. ಅಕ್ಟೋಬರ್ 29ರ ವೇಳೆಗೆ ₹730ಕ್ಕೆ ಏರಿಕೆಯಾಗಿತ್ತು. ಬಳಿಕ ಕೊಂಚ ಇಳಿಕೆ ಕಂಡು ನವೆಂಬರ್ ತಿಂಗಳ ಆರಂಭದಲ್ಲಿ ₹710ಕ್ಕೆ ತಲುಪಿತ್ತು.

Ad Widget

Ad Widget <> Ad Widget

ಆದರೆ, ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡ ಧಾರಣೆ ನಿರಂತರವಾಗಿ ಏರಿಕೆಯಾಗುತ್ತಾ ಸಾಗಿದೆ. ಇದೀಗ ನವೆಂಬರ್ 16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.



Ad Widget

ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಇತ್ತೀಚಿನ ದಿನಗಳಲ್ಲಿ ಕೊಳೆರೋಗ, ಹಳದಿ ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಬಾಧೆಗಳಿಂದ ಇಳುವರಿ ಕುಂಠಿತಗೊಳ್ಳುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಳುಮೆಣಸಿನ ಧಾರಣೆಯಲ್ಲಿನ ಏರಿಕೆ ಕೃಷಿಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಆಸರೆಯಾಗುವ ನಿರೀಕ್ಷೆಯಿದೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!