ಸ್ಥಳೀಯ
SDM-ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಗೌರವ
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನವೆಂಬರ್ 11ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ–2026 ಹಾಗೂ ಸನ್ಮಾನ ಸಮಾರಂಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಾಧನೆ ಮತ್ತು ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನವೆಂಬರ್ 11ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ–2026 ಹಾಗೂ ಸನ್ಮಾನ ಸಮಾರಂಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಾಧನೆ ಮತ್ತು ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಭಾರತದ ಪ್ರಥಮ ಕೇಂದ್ರ ಶಿಕ್ಷಣ ಸಚಿವರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಸ್ಮರಣಾರ್ಥ ಆಯೋಜಿಸಲಾದ ಈ ಸಮಾರಂಭದಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅವರು ಸಂಸ್ಥೆಯ ಪರವಾಗಿ ಗೌರವವನ್ನು ಸ್ವೀಕರಿಸಿದರು.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರು ಡಿ. ಸುರೇಂದ್ರ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಶ್ರೇಷ್ಠತೆ, ಗುಣಮಟ್ಟದ ಶಿಕ್ಷಣದ ಲಭ್ಯತೆ, ಸಮಾನ ಅವಕಾಶಗಳ ಕಲ್ಪನೆ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಜೊತೆಗೆ ಆರೋಗ್ಯ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿವೆ.
ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ದೊರೆತ ಈ ಗೌರವವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸೇವೆ ಹಾಗೂ ಸಾಮಾಜಿಕ ಬದ್ಧತೆಗೆ ಸಂದ ಮತ್ತೊಂದು ಮಹತ್ವದ ಮನ್ನಣೆಯಾಗಿದೆ.
ಸ್ಥಳೀಯ
Soujanya murder case-BIG Breaking: ಸೌಜನ್ಯ ಕೊಲೆ ಪ್ರಕರಣ – ಮಣ್ಣ ಸಂಕಕ್ಕೆ ಆಗಮಿಸಿದ ಮೆಡಿಕಲ್ ಬೋರ್ಡ್ ತಂಡ ಮೂವರು FSL ತಜ್ಞ ವೈದ್ಯರಿಂದ ಪರಿಶೀಲನೆ
ಧರ್ಮಸ್ಥಳ ಗ್ರಾಮದ ಕು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಘಟನಾ ಸ್ಥಳದ ವೈಜ್ಞಾನಿಕ ಪರಿಶೀಲನೆಗೆ ಮುಂದಾಗಿದೆ. ಎಫ್‌ಎಸ್‌ಎಲ್ ವಿಭಾಗದ ತಜ್ಞ ವೈದ್ಯರನ್ನೊಳಗೊಂಡ ಮೆಡಿಕಲ್ ಬೋರ್ಡ್ ತಂಡ ನ.17ರಂದು ಸಂಜೆ ಧರ್ಮಸ್ಥಳ ಗ್ರಾಮದ ಮಣ್ಣಸಂಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬೆಳ್ತಂಗಡಿ: ರಾಜ್ಯಾದ್ಯಂತ ಗಮನ ಸೆಳೆದಿರುವ ಧರ್ಮಸ್ಥಳ ಗ್ರಾಮದ ಕು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೀಗ ಘಟನಾ ಸ್ಥಳದ ವೈಜ್ಞಾನಿಕ ಪರಿಶೀಲನೆಗೆ ಮುಂದಾಗಿದೆ. ಇದರ ಭಾಗವಾಗಿ ಎಫ್‌ಎಸ್‌ಎಲ್ ವಿಭಾಗದ ತಜ್ಞ ವೈದ್ಯರನ್ನೊಳಗೊಂಡ ಮೆಡಿಕಲ್ ಬೋರ್ಡ್ ತಂಡ ನ.17ರಂದು ಸಂಜೆ ಧರ್ಮಸ್ಥಳ ಗ್ರಾಮದ ಮಣ್ಣಸಂಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸೌಜನ್ಯ ಪ್ರಕರಣದ ಮರುತನಿಖೆಯ ಹಿನ್ನೆಲೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರ ನೇತೃತ್ವದಲ್ಲಿ ಮೆಡಿಕಲ್ ಬೋರ್ಡ್ ರಚಿಸಲಾಗಿದ್ದು, ಬೆಂಗಳೂರು, ಬೆಳಗಾವಿ ಹಾಗೂ ಹಾವೇರಿ ಭಾಗದ ಮೂವರು ನುರಿತ ಎಫ್‌ಎಸ್‌ಎಲ್ ತಜ್ಞ ವೈದ್ಯರನ್ನು ತಂಡದಲ್ಲಿ ಸೇರ್ಪಡೆಗೊಳಿಸಲಾಗಿದೆ. ತಂಡದಲ್ಲಿ ಓರ್ವ ಮಹಿಳಾ ವೈದ್ಯೆ ಹಾಗೂ ಇಬ್ಬರು ಪುರುಷ ವೈದ್ಯರು ಇದ್ದಾರೆ.
ನ.17ರಂದು ಸಂಜೆ ಸುಮಾರು 4 ಗಂಟೆಗೆ ಇಬ್ಬರು ಎಸ್‌ಐಟಿ ಅಧಿಕಾರಿಗಳೊಂದಿಗೆ ಮಣ್ಣಸಂಕಕ್ಕೆ ಆಗಮಿಸಿದ ಮೂವರು ತಜ್ಞ ವೈದ್ಯರು, ಸೌಜನ್ಯ ಅವರ ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ ಹಾಗೂ ಪೊಲೀಸ್ ಸಿಬ್ಬಂದಿಯೂ ಉಪಸ್ಥಿತರಿದ್ದರು.
ಹಳೆಯ ಫೋಟೋ, ವಿಡಿಯೋಗಳ ಪರಿಶೀಲನೆ
ಘಟನಾ ಸ್ಥಳದ ಪರಿಶೀಲನೆಯ ಜೊತೆಗೆ ಸೌಜನ್ಯ ಅವರ ಮೃತದೇಹ ಪತ್ತೆಯಾದ ದಿನದ ಛಾಯಾಚಿತ್ರಗಳು ಹಾಗೂ ವಿಡಿಯೋ ದಾಖಲೆಗಳನ್ನೂ ಮೆಡಿಕಲ್ ಬೋರ್ಡ್ ಪರಿಶೀಲಿಸಲಿದೆ ಎಂದು ತಿಳಿದುಬಂದಿದೆ. ಲಭ್ಯವಿರುವ ದಾಖಲೆಗಳು ಮತ್ತು ಸ್ಥಳದಲ್ಲಿನ ಭೌತಿಕ ಅಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಘಟನೆ ನಡೆದ ಸ್ಥಳದ ಕುರಿತು ನಿಖರವಾದ ಅಭಿಪ್ರಾಯವನ್ನು ಎಸ್‌ಐಟಿ ಅಧಿಕಾರಿಗಳಿಗೆ ಸಲ್ಲಿಸುವುದು ತಜ್ಞರ ತಂಡದ ಪರಿಶೀಲನೆಯ ಪ್ರಮುಖ ಉದ್ದೇಶವಾಗಿದೆ.
ಶಿಕ್ಷಣ
Sahyadri-ಸಹ್ಯಾದ್ರಿ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ‘DevHack 2026’ ಯಶಸ್ವಿ ಸಮಾರೋಪ
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನ ಸಹ್ಯಾದ್ರಿ ಓಪನ್ ಸೋರ್ಸ್ ಕಮ್ಯುನಿಟಿ (SOSC) ವತಿಯಿಂದ ಆಯೋಜಿಸಲಾದ EG DevHost 2026ರ ಪ್ರಮುಖ 36 ಗಂಟೆಗಳ ಹ್ಯಾಕಥಾನ್ ‘DevHack 2026’ ಶನಿವಾರ ನಡೆದ ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಮಂಗಳೂರು, ನ. 14: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನ ಸಹ್ಯಾದ್ರಿ ಓಪನ್ ಸೋರ್ಸ್ ಕಮ್ಯುನಿಟಿ (SOSC) ವತಿಯಿಂದ ಆಯೋಜಿಸಲಾದ EG DevHost 2026ರ ಪ್ರಮುಖ 36 ಗಂಟೆಗಳ ಹ್ಯಾಕಥಾನ್ ‘DevHack 2026’ ಶನಿವಾರ ನಡೆದ ಅದ್ಧೂರಿ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಈ ಕಾರ್ಯಕ್ರಮಕ್ಕೆ ದೇಶಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1,300ಕ್ಕೂ ಹೆಚ್ಚು ವೈಯಕ್ತಿಕ ನೋಂದಣಿಗಳು ಹಾಗೂ 444ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಕರ್ನಾಟಕದಿಂದ 383 ತಂಡಗಳು, ತಮಿಳುನಾಡಿನಿಂದ 17, ಕೇರಳದಿಂದ 9, ಮಹಾರಾಷ್ಟ್ರದಿಂದ 7, ಗೋವಾ ಮತ್ತು ಉತ್ತರ ಪ್ರದೇಶಗಳಿಂದ ತಲಾ 3, ಉತ್ತರಾಖಂಡ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಜಾರ್ಖಂಡ್‌ಗಳಿಂದ ತಲಾ 2 ತಂಡಗಳು ಹಾಗೂ ಬಿಹಾರ, ದೆಹಲಿ, ಹರಿಯಾಣ, ಒಡಿಶಾ ಮತ್ತು ಪಂಜಾಬ್‌ನಿಂದ ತಲಾ ಒಂದು ತಂಡ ನೋಂದಾಯಿಸಿಕೊಂಡಿದ್ದವು. ಆರಂಭಿಕ ಆಯ್ಕೆ ಸುತ್ತಿನಲ್ಲಿ 350 ತಂಡಗಳು ತಮ್ಮ ಯೋಜನಾ ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ಅತ್ಯುತ್ತಮ 30 ತಂಡಗಳನ್ನು ಕಾಲೇಜು ಆವರಣದಲ್ಲಿ ನಡೆದ ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು.

ನವೆಂಬರ್ 12ರಂದು ನಡೆದ ಉದ್ಘಾಟನಾ ಸಮಾರಂಭದೊಂದಿಗೆ ಹ್ಯಾಕಥಾನ್‌ಗೆ ಚಾಲನೆ ನೀಡಲಾಯಿತು. NVIDIA ಸಂಸ್ಥೆಯ New Age Technologies ವಿಭಾಗದ ಸಹಾಯಕ ಉಪಾಧ್ಯಕ್ಷರಾದ ಡಾ. ಸಂಪತ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ EG India ಸಂಸ್ಥೆಯ Principal Data Scientist ಹಾಗೂ Data & AI ವಿಭಾಗದ ಹಿರಿಯ ವ್ಯವಸ್ಥಾಪಕರಾದ ಡಾ. ಪ್ರಕ್ಯಾತ್ ರೈ, NinetronTech ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು CEO ಅಬ್ದುಲ್ ಶಮೀರ್, ಸಹ್ಯಾದ್ರಿ ಕಾಲೇಜಿನ ಟ್ರಸ್ಟಿ ಹಾಗೂ ಆಡಳಿತಾಧಿಕಾರಿ ಕೃಷ್ಣ ಹೆಗ್ಡೆ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಾಗನೇರಿ ಉಪಸ್ಥಿತರಿದ್ದರು.
ಈ 36 ಗಂಟೆಗಳ ನಿರಂತರ ಕೋಡಿಂಗ್ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ 30 ತಂಡಗಳು EG India ಸಂಸ್ಥೆಯು ರೂಪಿಸಿದ್ದ ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಏಳು ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸವಾಲನ್ನು ಎದುರಿಸಿದವು. AI ಏಜೆಂಟ್‌ಗಳು, ಮಾಧ್ಯಮಗಳ ಸತ್ಯಾಸತ್ಯತೆ ಪರಿಶೀಲನೆ, ವಿಪತ್ತು ಪರಿಹಾರ ಕಾರ್ಯಗಳು ಹಾಗೂ ಆರೋಗ್ಯ ದಾಖಲೆಗಳ ನಿರ್ವಹಣೆ ಸೇರಿದಂತೆ ಮಹತ್ವದ ಕ್ಷೇತ್ರಗಳನ್ನು ಒಳಗೊಂಡ ಈ ಹ್ಯಾಕಥಾನ್‌ನಲ್ಲಿ ಮೂರು ದಿನಗಳ ಕಾಲ ತೀವ್ರ ಸ್ಪರ್ಧೆ, ತಂಡದ ಸಹಯೋಗ, ಮಾದರಿ ಉತ್ಪನ್ನಗಳ ಅಭಿವೃದ್ಧಿ ಹಾಗೂ ತಜ್ಞರ ಮಾರ್ಗದರ್ಶನ ನಡೆಯಿತು.

ಎರಡು ಹಂತಗಳ ಕಠಿಣ ಮೌಲ್ಯಮಾಪನದ ಬಳಿಕ ಆಯ್ಕೆಯಾದ ಎಂಟು ಅತ್ಯುತ್ತಮ ತಂಡಗಳು ಅಂತಿಮ ಸುತ್ತಿನಲ್ಲಿ ಉದ್ಯಮ ಕ್ಷೇತ್ರದ ತಜ್ಞರ ಸಮಿತಿಯ ಮುಂದೆ ತಾವು ಅಭಿವೃದ್ಧಿಪಡಿಸಿದ ಕಾರ್ಯನಿರ್ವಹಣಾ ಮಾದರಿಗಳನ್ನು ಪ್ರಸ್ತುತಪಡಿಸಿದವು. ತಾಂತ್ರಿಕ ಅನುಷ್ಠಾನ, ನಾವೀನ್ಯತೆ ಹಾಗೂ ನೈಜ ಜಗತ್ತಿನಲ್ಲಿ ಅವುಗಳ ಬಳಕೆಯ ಸಾಧ್ಯತೆಗಳನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಯಿತು.
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನ Team Horizon ಪ್ರಥಮ ಸ್ಥಾನ ಪಡೆದು ₹50,000 ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಮಂಗಳೂರಿನ St. Joseph Engineering Collegeನ Team Black Lotus ₹30,000 ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಗಳಿಸಿತು. ಚೆನ್ನೈನ SRM Institute of Science and Technologyನ Team Cantina ₹20,000 ನಗದು ಬಹುಮಾನದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. EG India ಸಂಸ್ಥೆಯ R&D Digital Welfare ವಿಭಾಗದ ಅಮಿತಾ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. EG India ಸಂಸ್ಥೆಯ R&D, Retail & Supply Chain ವಿಭಾಗದ ತಂಡದ ವ್ಯವಸ್ಥಾಪಕರಾದ ಗಗನ್ ಸಾಗರ್, ACIC Sahyadri Foundationನ CEO ದಿನು ಆನಂದ್, WiZdom Ed ಸಂಸ್ಥೆಯ Application and Operations ವಿಭಾಗದ ಮುಖ್ಯಸ್ಥರಾದ ಶವನ್ ಸಾಲ್ಯಾನ್ ಹಾಗೂ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನ ಶೈಕ್ಷಣಿಕ ವಿಭಾಗದ ಡೀನ್ ಡಾ. ಶಮಂತ್ ರೈ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಗಣ್ಯರು ವಿಜೇತ ತಂಡಗಳಿಗೆ ನಗದು ಬಹುಮಾನಗಳನ್ನು ವಿತರಿಸಿ ಗೌರವಿಸಿದರು. ಹ್ಯಾಕಥಾನ್ ಯಶಸ್ವಿಯಾಗಿ ನಡೆಯಲು ಶ್ರಮಿಸಿದ ತೀರ್ಪುಗಾರರು, ಮಾರ್ಗದರ್ಶಕರು ಹಾಗೂ ಶೀರ್ಷಿಕೆ ಪ್ರಾಯೋಜಕರಾದ EG India ಮತ್ತು ಸಹ ಪ್ರಾಯೋಜಕರಾದ Winman, ACIC Sahyadri ಹಾಗೂ WiZdom Ed ಸಂಸ್ಥೆಗಳ ಕೊಡುಗೆಯನ್ನು ಗಣ್ಯರು ಶ್ಲಾಘಿಸಿದರು.
ರಾಷ್ಟ್ರೀಯ ಮಟ್ಟದ ಈ ಹ್ಯಾಕಥಾನ್ ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ, ನಾವೀನ್ಯತೆಯ ಚಿಂತನೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹಾಗೂ ಉದ್ಯಮ ಕ್ಷೇತ್ರಕ್ಕೆ ಅಗತ್ಯವಿರುವ ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಪ್ರತಿಭೆಗೆ ಉತ್ತಮ ವೇದಿಕೆಯಾಯಿತು.
ರಾಜಕೀಯ
Tausif-‘ಮೊದಲು ನಿಮ್ಮ ಕ್ಷೇತ್ರದ ರಸ್ತೆ ಸರಿಪಡಿಸಿ, ಆಮೇಲೆ ಅಶೋಕ್ ರೈ ಬಗ್ಗೆ ಮಾತನಾಡಿ..!’ – ಪೂಂಜಾಗೆ ತೌಸೀಫ್ ತಿರುಗೇಟು
ಉಪ್ಪಿನಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ ಅವರು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗದ ಶಾಸಕ ಹರೀಶ್ ಪೂಂಜಾ ಅವರು ತಮ್ಮ ವೈಫಲ್ಯವನ್ನು ಮರೆಮಾಚಲು ಪುತ್ತೂರು ಶಾಸಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಉಪ್ಪಿನಂಗಡಿ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಜನಪ್ರಿಯತೆ, ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ರಾಜ್ಯಮಟ್ಟದಲ್ಲಿ ಅವರು ಗಳಿಸಿರುವ ಗುರುತಿಸುವಿಕೆಯನ್ನು ಕಂಡು ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿ ಕಾಡತೊಡಗಿದೆ. ಹೀಗಾಗಿಯೇ ಶಾಸಕ ಹರೀಶ್ ಪೂಂಜಾ ಅವರು ಅಶೋಕ್ ಕುಮಾರ್ ರೈ ವಿರುದ್ಧ ಕೀಳುಮಟ್ಟದ ಅಪಪ್ರಚಾರ ಹಾಗೂ ಆಧಾರರಹಿತ ಆರೋಪಗಳಿಗೆ ಇಳಿದಿದ್ದಾರೆ ಎಂದು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ ತೀವ್ರ ವಾಗ್ದಾಳಿ ನಡೆಸಿದರು.
ಉಪ್ಪಿನಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗದ ಶಾಸಕ ಹರೀಶ್ ಪೂಂಜಾ ಅವರು ತಮ್ಮ ವೈಫಲ್ಯವನ್ನು ಮರೆಮಾಚಲು ಪುತ್ತೂರು ಶಾಸಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಬನ್ನಿ, ದಾಖಲೆ ಸಹಿತ ಮಾತನಾಡೋಣ!
ರಾಜಕೀಯದಲ್ಲಿ ಟೀಕೆಗಳು ಸಹಜ. ಆದರೆ ವೈಯಕ್ತಿಕ ಮಟ್ಟಕ್ಕೆ ಇಳಿದು ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಹರೀಶ್ ಪೂಂಜಾ ಅವರ ಇಂತಹ ರಾಜಕೀಯ ನಡವಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಪುತ್ತೂರು ಶಾಸಕರಿಗೆ ಹರೀಶ್ ಪೂಂಜಾ ಅವರು ಹಾಕಿರುವ ಸವಾಲನ್ನು ಅಶೋಕ್ ಕುಮಾರ್ ರೈ ಸ್ವೀಕರಿಸಿದ್ದಾರೆ. ಹರೀಶ್ ಪೂಂಜಾ ಅವರು ತಮ್ಮ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಬರಲಿ. ನಮ್ಮ ಶಾಸಕರ ಸಮ್ಮುಖದಲ್ಲಿ ಬಹಿರಂಗ ಚರ್ಚೆ ನಡೆಸಲು ನಾವು ಸಂಪೂರ್ಣ ಸಿದ್ಧರಿದ್ದೇವೆ ಎಂದು ತೌಸೀಫ್ ನೇರ ಸವಾಲು ಹಾಕಿದರು.
ಪುತ್ತೂರಿನಲ್ಲಿ ಅಭಿವೃದ್ಧಿಯ ಪರ್ವ: ಕಾಂಗ್ರೆಸ್ ನಾಯಕರ ಪ್ರತಿಪಾದನೆ
ಪುತ್ತೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಕಾರ್ಯ ಕೆಲವೇ ದಿನಗಳಲ್ಲಿ ಸಾಕಾರಗೊಳ್ಳಲಿದೆ. ದೇವಸ್ಥಾನಗಳ ಅಭಿವೃದ್ಧಿ, ಮೆಡಿಕಲ್ ಕಾಲೇಜು, ಆರ್‌ಟಿಒ ಟ್ರ್ಯಾಕ್, ಕ್ರೀಡಾಂಗಣ ಸೇರಿದಂತೆ ನೂರಾರು ಮಹತ್ವದ ಯೋಜನೆಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಮುತುವರ್ಜಿ ವಹಿಸಿದ್ದಾರೆ.
ಅಲ್ಲದೆ, 94ಸಿ ಅಡಿಯಲ್ಲಿ ನಿವೇಶನ ಮಂಜೂರಾತಿ ಹಾಗೂ ಅಕ್ರಮ-ಸಕ್ರಮ ಪ್ರಕ್ರಿಯೆಗಳೂ ನಡೆಯುತ್ತಿವೆ. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ ಅಪಪ್ರಚಾರದ ಮೂಲಕ ಜನರ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಜನರು ದಡ್ಡರಲ್ಲ, ಅವರಿಗೆ ನೈಜಾಂಶ ಏನೆಂಬುದು ತಿಳಿದಿದೆ ಎಂದು ತೌಸೀಫ್ ಹೇಳಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಮೆಡಿಕಲ್ ಕಾಲೇಜು ನೆನಪಾಗಲಿಲ್ಲವೇ?
ಬಿಜೆಪಿ ವಿರುದ್ಧವೂ ಪ್ರಶ್ನೆಗಳ ಸುರಿಮಳೆಗೈದ ತೌಸೀಫ್, ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಪಾಲು ಬಿಜೆಪಿ ಶಾಸಕರಿದ್ದಾಗ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದಲ್ಲಿದ್ದಾಗ ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಚಿಂತನೆ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಕ್ಷೇತ್ರಕ್ಕೆ ತಂದಿರುವುದಾಗಿ ಹೇಳಲಾಗುತ್ತಿರುವ 3,400 ಕೋಟಿ ರೂಪಾಯಿ ಅನುದಾನದ ನಡುವೆಯೂ ಉಪ್ಪಿನಂಗಡಿ-ಕುಪ್ಪೆಟ್ಟಿ ರಸ್ತೆ ದುರಸ್ತಿಯಾಗದಿರುವುದೇಕೆ? ಕ್ಷೇತ್ರದ ಪ್ರಮುಖ ರಸ್ತೆಗಳ ಸ್ಥಿತಿಗತಿಯ ಬಗ್ಗೆ ಉತ್ತರ ನೀಡಬೇಕು. ಅಭಿವೃದ್ಧಿಗೆ ಅಗತ್ಯ ಅನುದಾನ ತರಲು ಸಾಧ್ಯವಾಗದಿದ್ದರೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸಹಾಯವನ್ನಾದರೂ ಕೇಳಬಹುದು ಎಂದು ತೌಸೀಫ್ ವ್ಯಂಗ್ಯವಾಡಿದರು.
ಒಟ್ಟಿನಲ್ಲಿ, ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಟೀಕೆ ಮಾಡುವ ಬದಲು ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂಬ ಕಾಂಗ್ರೆಸ್ ನಾಯಕರ ಸವಾಲು ಇದೀಗ ಪುತ್ತೂರು-ಬೆಳ್ತಂಗಡಿ ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆ ಸೃಷ್ಟಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಡಾ. ರಾಜಾರಾಮ್ ಉಪಸ್ಥಿತರಿದ್ದರು.
-
ನಿಧನ ವಾರ್ತೆ8 hours agoPuttur-ಪುತ್ತೂರು: ಬೈಕ್ ಡಿಕ್ಕಿಯಾಗಿ ಹರಿಪ್ರಸಾದ್ ಹೋಟೆಲ್ ಸಪ್ಲೈಯರ್ ಸಾವು
-
ಅಂತರ ರಾಜ್ಯ5 hours agoVande Bharat train-ವಂದೇಭಾರತ್ ಟ್ರೈನ್ ಗೆ ಸಂಬಂಧಿಕರನ್ನು ಬಿಡಲು ಹೋಗಿ ಅಟೋಮೆಟಿಕ್ ಡೋರ್ ನಲ್ಲಿ 12 ಮಂದಿ ಲಾಕ್..! 36 ಸಾವಿರ ದಂಡ..!
-
ಬಿಗ್ ನ್ಯೂಸ್9 hours agoProtest-ಮೇನಾಲ ಕೋಳಿ ತ್ಯಾಜ್ಯ ಘಟಕ ತೆರವಿಗೆ ಆಗ್ರಹ: ನ.17ರಂದು ಬೃಹತ್ ಪ್ರತಿಭಟನೆಗೆ ಕರೆ
-
ಸ್ಥಳೀಯ8 hours agoComplaint-ಪುಂಜಲಾಕಟ್ಟೆ ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ದ್ವೇಷ ಭಾಷಣ : ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಯುವ ಕಾಂಗ್ರೆಸ್ ನಿಂದ ದೂರು ದಾಖಲು
-
ಅಂತರ ರಾಜ್ಯ7 hours agoArrested-ಆರು ಪವನ್ ಚಿನ್ನಕ್ಕಾಗಿ ಮಹಿಳೆಯ ಕೊಲೆ: 30 ವರ್ಷಗಳ ಬಳಿಕ ಎಐ ತಂತ್ರಜ್ಞಾನ ಬಳಸಿ ಆರೋಪಿಯ ಬಂಧನ..!
-
ಅಂತರ ರಾಜ್ಯ7 hours agoRAC ticket system-ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್? RAC ಟಿಕೆಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ರೈಲ್ವೆ ಚಿಂತನೆ..!
-
ಮಂಗಳೂರು7 hours agoMangalore-ಮಂಗಳೂರು: ಟೇಕಾಫ್ ಸಂದರ್ಭ ಇಂಡಿಗೋ ವಿಮಾನದ ಇಂಜಿನ್ ನಲ್ಲಿ ದೋಷ : ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ – 236 ಮಂದಿ ಪ್ರಯಾಣಿಕರು ಪಾರು
-
ನಿಧನ ವಾರ್ತೆ2 hours agoCar crash-ಮರಕ್ಕೆ ಅಪ್ಪಳಿಸಿದ ಕಾರು: ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರ ಬದುಕು ಅಂತ್ಯ; ನಾಲ್ವರು ಆಸ್ಪತ್ರೆಗೆ ದಾಖಲು















