ಆರೋಗ್ಯ
Allergy test-ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ Alex 2 Allergy Explorer ಮೆಷಿನ್ ಆಳವಡಿಕೆ : 300ಕ್ಕೂ ಹೆಚ್ಚು ವಿಧದ ಅಲರ್ಜಿ ಟೆಸ್ಟ್ ..! ಇದು ದಕ್ಷಿಣ ಕರ್ನಾಟಕದಲ್ಲೇ ಪ್ರಥಮ – ಕೋಹ್ಲಿಯಂತಹ ಸಿಲೆಬ್ರಿಟಿಗಳು ಬಳಸುವ ಈ ಉಪಕರಣ ನೀಡುತ್ತೆ ನಿಖರ ಫಲಿತಾಂಶ : ಅಲರ್ಜಿ ಟೆಸ್ಟ್ ಹೇಗೆ..? ಯಾಕೇ..? ಇಲ್ಲಿದೆ ಮಾಹಿತಿ
ಅಲರ್ಜಿ ಬಹುತೇಕರನ್ನು ಕಾಡುವ ಖಾಯಿಲೆ. ಬಹಳಷ್ಟು ಮಂದಿಗೆ ಇದೊಂದು ಸರಳ ಹಾಗೂ ಸಾಮಾನ್ಯ ಖಾಯಿಲೆ ಎಂಬ ಉಡಾಫೆಯ ಧೋರಣೆ ಇದೆ. ಆಗಾಗ ಧುತ್ತೆಂದು ಬಂದು, ಒಂದಷ್ಟು ಔಷಧಿ ಪಡೆದೋ ಅಥವಾ ಪಡೆಯದೆಯೋ ತನ್ನಷ್ಟಕ್ಕೆ ಮಾಯವಾಗುವ ಖಾಯಿಲೆ ಎಂಬ ಭಾವನೆ ಇದೆ. ಹೀಗಾಗಿ ಇದರ ಚಿಕಿತ್ಸೆಯ ಕುರಿತಾಗಿ ಬಹಳಷ್ಟು ಮಂದಿ ಅಷ್ಟೊಂದು ಸೀರಿಯಸ್ಸಾಗಿ ಇರುವುದಿಲ್ಲ. ಹಾಗಾಗಿ ಈ ಖಾಯಿಲೆಯ ವಿಸ್ತೃತ ತಪಾಸಣೆ ಮಾಡಿಸಲು ಹೋಗುವುದಿಲ್ಲ.
ಪುತ್ತೂರು: ಅಲರ್ಜಿ ಬಹುತೇಕರನ್ನು ಕಾಡುವ ಖಾಯಿಲೆ. ಬಹಳಷ್ಟು ಮಂದಿಗೆ ಇದೊಂದು ಸರಳ ಹಾಗೂ ಸಾಮಾನ್ಯ ಖಾಯಿಲೆ ಎಂಬ ಉಡಾಫೆಯ ಧೋರಣೆ ಇದೆ. ಆಗಾಗ ಧುತ್ತೆಂದು ಬಂದು, ಒಂದಷ್ಟು ಔಷಧಿ ಪಡೆದೋ ಅಥವಾ ಪಡೆಯದೆಯೋ ತನ್ನಷ್ಟಕ್ಕೆ ಮಾಯವಾಗುವ ಖಾಯಿಲೆ ಎಂಬ ಭಾವನೆ ಇದೆ. ಹೀಗಾಗಿ ಇದರ ಚಿಕಿತ್ಸೆಯ ಕುರಿತಾಗಿ ಬಹಳಷ್ಟು ಮಂದಿ ಅಷ್ಟೊಂದು ಸೀರಿಯಸ್ಸಾಗಿ ಇರುವುದಿಲ್ಲ. ಹಾಗಾಗಿ ಈ ಖಾಯಿಲೆಯ ವಿಸ್ತೃತ ತಪಾಸಣೆ ಮಾಡಿಸಲು ಹೋಗುವುದಿಲ್ಲ.
ಆದರೇ ಹಲವು ಬಾರಿ ಈ ಕಾಯಿಲೆಗಳು ಮಾರಣಾಂತಿಕವು ಆಗಬಹುದು. ಇತ್ತೀಚೆಗೆ ಮೃತಪಟ್ಟ ಮಂಗಳೂರಿನ ಉಪನ್ಯಾಸಕಿ ಇದಕ್ಕೆ ತಾಜಾ ಉದಾಹರಣೆ.
ಒಂದೊಮ್ಮೆ ಅಲರ್ಜಿ ಪೀಡಿತರು ಈ ರೋಗದ ತಪಾಸಣೆ ಮಾಡಬಯಸಿದರೂ, ಪುತ್ತೂರು ಹಾಗೂ ಆಸುಪಾಸಿನ ತಾಲೂಕುಗಳಲ್ಲಿ ಇದನ್ನು ತಪಾಸಣೆಗೆ ಒಳಪಡಿಸಿ ನಿಖರವಾದ ಫಲಿತಾಂಶ ನೀಡಬಲ್ಲ ಲ್ಯಾಬೋರೇಟರಿಗಳಿಲ್ಲ. ಇದನ್ನು ಮನಗಂಡು ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯವರು ದಕ್ಷಿಣ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿ ಎಲ್ಲ ವಿಧದ ಅಲರ್ಜಿಯನ್ನು ಪರೀಕ್ಷೆ ಮಾಡುವ Alex 2 Allergy Explorer ಉಪಕರಣವನ್ನು ಆಳವಡಿಸಿದ್ದಾರೆ.
ದಕ್ಷಿಣ ಕರ್ನಾಟಕದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಲ್ಯಾಬೋರೇಟರಿ
ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವೈದ್ಯರುಗಳ ಅತ್ಯಂತ ವಿಶ್ವಾಸರ್ಹ ಹಾಗೂ ಅಸಂಖ್ಯಾತ ರೋಗಿಗಳ ನಂಬಿಕೆಯ, ನಿಖರ ಹಾಗೂ ತ್ವರಿತ ಫಲಿತಾಂಶಕ್ಕೆ ಹತ್ತೂರಿನಲ್ಲೂ ಪ್ರಸಿದ್ದಿ ಪಡೆದಿರುವ, ತಾಲೂಕು ಜಿಲ್ಲೆ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ.
ಚೇತನ್ ಪ್ರಕಾಶ್ ಕಜೆ ಅವರ ಮುಂದಾಳತ್ವದ ಸಂಪೂರ್ಣ ಸ್ವಯಂಚಾಲಿತ ರಕ್ತ ತಪಾಸಣಾ ಕೇಂದ್ರದಲ್ಲಿ ಇದೀಗ ಹೊಸ ಪೀಳಿಗೆಯ ಸುಮಾರು 300 ವಿಧದ ಅಲರ್ಜಿಯನ್ನುಂಟು ಮಾಡುವ ಅಂಶಗಳ ಸಂಪೂರ್ಣ ಹಾಗೂ ನೈಜ ಅಲರ್ಜಿ ಪರೀಕ್ಷೆ ಮಾಡುವ ಹೈಟೆಕ್ ಉಪಕರಣವನ್ನು ನೂತನವಾಗಿ ಆಳವಡಿಸಲಾಗಿದೆ.
ವಿಯೆನ್ನಾ, ಅಸ್ಟ್ರೀಯಾದಿಂದ ಆಮದಿತವಾಗಿರುವ ಈ ಉಪಕರಣವು ದಕ್ಷಿಣ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಳವಡಿಸಲಾಗಿದೆ. ರಕ್ತ ಪರೀಕ್ಷೆಯ ಮೂಲಕ ಈ ಅತ್ಯಾಧುನಿಕ ಉಪಕರಣದ ಸಹಾಯದಿಂದ ಯಾವ ವಸ್ತು ಯಾ ಅಂಶದಿಂದ ಅಲರ್ಜಿ ಆಗುತ್ತಿದೆ ಎಂದು ನಿಖರವಾಗಿ ತಿಳಿಯಬಹುದಾಗಿದೆ. ಬಹಳ ಸಮಯದಿಂದ ಅಲರ್ಜಿಯಿಂದ ಬಳಲುತ್ತಿರುವವರು ಯಾವ ಕಾರಣದಿಂದ ಅಲರ್ಜಿ ಆಗುತ್ತಿದೆ ಎಂದು ತಿಳಿಯಬೇಕಿದ್ದರೇ ಈ ಲ್ಯಾಬೋರೇಟರಿಗೆ ಭೇಟಿ ನೀಡಬಹುದು.
ವಿರಾಟ್ ಕೋಹ್ಲಿಯಂತಹ ಆಟಗಾರರು ತಮ್ಮ ಫಿಟ್ನೆಸ್ ಪರೀಕ್ಷೆ ಸಂದರ್ಭ ಅಲರ್ಜಿ ಪರೀಕ್ಷೆಗೆ ಉಪಯೋಗಿಸುವುದು ಕೂಡ Alex 2 Allergy Explorer ಮೆಷಿನ್ ಎನ್ನುವುದು ಪ್ರಮುಖ ಅಂಶವಾಗಿದೆ.
ಅಲರ್ಜಿ ಪರೀಕ್ಷೆಗೆ ನಿಮ್ಮ ಮಾರ್ಗದರ್ಶಿ :
ಅಲರ್ಜಿ ಪರೀಕ್ಷೆಯು ನಿಮ್ಮ ದೇಹವು ತಿಳಿದಿರುವ ವಸ್ತುವಿಗೆ ಅಲರ್ಜಿಯ ಪ್ರತಿಕ್ರಿಯೆಯನ್ನು ಹೊಂದಿದೆಯೇ ಎಂದು ನಿರ್ಧರಿಸಲು ತರಬೇತಿ ಪಡೆದ ಅಲರ್ಜಿ ತಜ್ಞರು ನಡೆಸುವ ಪರೀಕ್ಷೆಯಾಗಿದೆ. ರೋಗ ನಿರೋಧಕ ಶಕ್ತಿಯು ನಮ್ಮ ದೇಹದ ನೈಸರ್ಗಿಕ ರಕ್ಷಣೆಯಾಗಿದೆ. ನಮ್ಮ ರೋಗ ನಿರೋಧಕ ಶಕ್ತಿಯನ್ನು ಮೀರಿ ನಮ್ಮ ದೇಹವು ಪರಿಸರದಲ್ಲಿನ ಯಾವುದಕ್ಕಾದರೂ ಅತಿಯಾಗಿ ಪ್ರತಿಕ್ರಿಯಿಸಿದರೇ ಅದು ಅಲರ್ಜಿ. ಉದಾಹರಣೆಗೆ, ಸಾಮಾನ್ಯವಾಗಿ ನಿರುಪದ್ರವಿಯಾದ ಪರಾಗವು ರೋಗ ನಿರೋಧಕ ಶಕ್ತಿಯನ್ನು ಮೀರಿ ಪುನಾರವರ್ತಿತ ಸೀನಿನಂತಹ ಪ್ರತಿಕ್ರಿಯೆಗೆ ಕಾರಣವಾಗಬಹುದು. ಇದೆ ಅಲರ್ಜಿ
ನನಗೆ ಅಲರ್ಜಿ ಪರೀಕ್ಷೆ ಏಕೆ ಬೇಕು?
ನಿಮ್ಮ ವೈದ್ಯರು ಸೂಚಿಸಿದರೆ ಅಥವಾ ಅಲರ್ಜಿಯ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಕಂಡು ಬಂದರೇ ಅಲರ್ಜಿ ಪರೀಕ್ಷೆ ಮಾಡಿಸಿಕೊಂಡ್ರೆ, ಅಲರ್ಜಿಗೆ ಕಾರಣವಾಗುವ ಅಂಶಗಳನ್ನು ನಿಖರವಾಗಿ ಪತ್ತೆ ಹಚ್ಚಬಹುದು.
ರೋಗ ಲಕ್ಷಣಗಳು:
ಸೀನುವುದು, ತುರಿಕೆ, ಕಣ್ಣುಗಳು
ಕೆಲವು ವಸ್ತುಗಳಿಗೆ ಪ್ರತಿಕ್ರಿಯೆಯಾಗಿ ದದ್ದುಗಳು, ಉಸಿರಾಟದ ತೊಂದರೆ, ಕೆಮ್ಮು, ಉಬ್ಬಸ, ಅತಿಸಾರ, ವಾಕರಿಕೆ ಮತ್ತು ವಾಂತಿ
ಅಲರ್ಜಿ ಪರೀಕ್ಷೆಯು ನೋವಿನಿಂದ ಕೂಡಿದೆಯೇ?
ಇಲ್ಲ, ಚರ್ಮದ ಚುಚ್ಚು ಪರೀಕ್ಷೆಯು ಚರ್ಮದ ಮೇಲ್ಮೈಯನ್ನು ಭೇದಿಸುವುದಿಲ್ಲ ಮತ್ತು ಅದು ಸಂಪೂರ್ಣವಾಗಿ ನೋವುರಹಿತವಾಗಿರುತ್ತದೆ. ಇದು ಆಕ್ರಮಣಶೀಲವಲ್ಲದ ಪರೀಕ್ಷೆಯಾಗಿದೆ. ನಿಮ್ಮ ಚರ್ಮವನ್ನು ಚುಚ್ಚುವ ಸೂಜಿ ಸೌಮ್ಯದಿಂದ ಮಧ್ಯಮ ಅಸ್ವಸ್ಥತೆಯನ್ನು ಹೊರತುಪಡಿಸಿ ಏನನ್ನೂ ಅನುಭವಿಸುವುದಿಲ್ಲ.
ಧನ್ವಂತರಿ ಲ್ಯಾಬೊರೇಟರಿ ಬಗ್ಗೆ
ಪುತ್ತೂರು ದರ್ಬೆ ಧನ್ವಂತರಿ ಕಾಂಪ್ಲೆಕ್ಸ್ ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಧನ್ವಂತರಿ ಲ್ಯಾಬೋರೇಟರಿ ಸಂಸ್ಥೆಯು ರಕ್ತ ತಪಾಸಣೆಯಲ್ಲಿ ಹಲವು ಹೊಸ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ರಕ್ತಪರೀಕ್ಷಾ ಇತಿಹಾಸದಲ್ಲೇ ಹೊಸ ಆಯಾಮವನ್ನೇ ಸೃಷ್ಟಿಸಿ ದಕ್ಷಿಣಕನ್ನಡದ ಎರಡನೇ ಅತೀದೊಡ್ಡ ಲ್ಯಾಬೋರೇಟರಿ ಎಂಬ ಹೆಗ್ಗಳಿಕೆ ಪಡೆದಿದೆ. ದಿನದ 24 ಗಂಟೆ, ವಾರದ 7 ದಿನಗಳ ನಿರಂತರ, ನಿಖರ, ತ್ವರಿತ, ಪಾರದರ್ಶಕ ಸೇವೆಯಿಂದ ವೈದ್ಯರ, ಅಸಂಖ್ಯಾತ ಜನರ ಪ್ರಶಂಸೆಗೆ ಪಾತ್ರವಾಗಿದೆ. ಇದು ಪುತ್ತೂರಿನ ದರ್ಬೆ, ಬೊಳ್ವಾರು, ಸುಳ್ಯ, ಮಾಡಾವು, ಈಶ್ವರಮಂಗಲ ಮತ್ತು ವಿಟ್ಲದಲ್ಲಿ ಶಾಖೆಗಳನ್ನು ಹೊಂದಿದೆ ಹಾಗು ಅತೀ ಶೀಘ್ರದಲ್ಲಿ ನೆಹರುನಗರದಲ್ಲಿ ಶಾಖೆ ಪ್ರಾರಂಭಗೊಳ್ಳಲಿದೆ.
ಸಂಪೂರ್ಣ ಸ್ವಯಂಚಾಲಿತ ತಂತ್ರಜ್ಞಾನದ ಉಪಕರಣಗಳಿಂದ ಫಲಿತಾಂಶ, ಫಲಿತಾಂಶದ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಂದು ಉಪಕರಣಗಳಲ್ಲಿ ಇಂಟರ್ನಲ್ ಕ್ವಾಲಿಟಿ ಚೆಕಿಂಗ್ ಅಳವಡಿಕೆ ಹಾಗೂ ಎಕ್ಸ್ಟರ್ನಲ್ ಕ್ವಾಲಿಟಿ ಚೆಕಿಂಗ್ (ರಾಂಡಾಕ್ ಡಯಾಗ್ನೋಸ್ಟಿಕ್ ಇಂಗ್ಲೆಂಡ್ ಇದರ ಸಹಭಾಗಿತ್ವದೊಂದಿಗೆ), ಲಿಪಿಡ್ ಪ್ರೊಫೈಲ್, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ನೊಂದಿಗೆ ವಿಟ್ಲ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಡೈರೆಕ್ಟ್ ಹೆಚ್ಡಿಎಲ್ ಹಾಗು ಡೈರೆಕ್ಟ್ ಎಲ್ಡಿಎಲ್ ನ ಅಳವಡಿಕೆ, ಮೈಕ್ರೋಬಯೋಲಜಿಯಲ್ಲಿ ಅಟೋಮೇಷನ್ ಅಳವಡಿಸಿದ ದಕ್ಷಿಣ ಕನ್ನಡದ 2ನೇ ಸಂಸ್ಥೆ.
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನೀವಿರುವಲ್ಲೇ 5 ನಿಮಿಷದಲ್ಲಿ ಬ್ಲಡ್ಗ್ಯಾಸ್ ತಪಾಸಣೆ, ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಉಪಕರಣ ‘ಹೈಬಯೋಮ್ ಎಇ 180 ಸಹಿತ ಇತರ ಉಪಕರಣಗಳನ್ನು ಅಳವಡಿಸಿಕೊಂಡ ಕೀರ್ತಿಯೂ ಈ ಸಂಸ್ಥೆಗೆ ಸಲ್ಲುತ್ತದೆ. ಬೆಂಗಳೂರು, ಮುಂಬೈ, ದೆಹಲಿ ಮುಂತಾದ ಮೆಟ್ರೋ ಸಿಟಿಗಳಲ್ಲಿ ಲಭ್ಯವಾಗುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪುತ್ತೂರಿಗೆ ಪರಿಚಯಿಸಿದ ಹೆಗ್ಗಳಿಕೆಯೊಂದಿಗೆ ಅನುಭವಿ ಹಾಗೂ ವೃತ್ತಿಪರ ಸಿಬ್ಬಂದಿಗಳು ಸಂಸ್ಥೆಯಲ್ಲಿ ಉತ್ತಮ ಸೇವೆ ನೀಡುತ್ತಿದ್ದಾರೆ.
ಆರೋಗ್ಯ
Puttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ
ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಬೆನ್ನು ನೋವು, ಮೊಣಕಾಲು ನೋವು, ಸೊಂಟ ನೋವು ಹಾಗೂ ಸ್ನಾಯು ನೋವು ಮುಂತಾದ ಸಮಸ್ಯೆಗಳು ಮೂಳೆ ಸವೆತ ಅಥವಾ ಮುಂದಿನ ದಿನಗಳಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ BMD ಶಿಬಿರವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸೇವಾ ವಿಭಾಗದ ಇಂಡ್‌ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಭಾಸ್ಕರ್ ಎಸ್. (D’Ortho), ಆಡಳಿತ ನಿರ್ದೇಶಕರು, ಪುತ್ತೂರು ಸಿಟಿ ಆಸ್ಪತ್ರೆ ಇವರು ತಪಾಸಣೆ ಹಾಗೂ ಸಲಹೆ ನೀಡಿದರು.
ಇನ್ನರ್ ವೀಲ್ ಕ್ಲಬ್ ನ ನಿರ್ದೇಶಕಿ ಮಂಜುಳ ಭಾಸ್ಕರ್, ಅಧ್ಯಕ್ಷೆ ಮನೋರಮಾ ಸೂರ್ಯ, ಖಜಾಂಜಿ ಕವಿತಾ ಕೊಳತ್ತಾಯ, ಕಾರ್ಯದರ್ಶಿ ಶ್ರುತಿ ಎಸ್. ಬಂಗೇರ ಶಿಬಿರದಲ್ಲಿ ಉಪಸ್ಥಿತರಿದ್ದರು.
ಆರೋಗ್ಯ
‘Ritu Taare’ scheme-35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯಕ್ಕೆ ‘ಋತು ತಾರೆ’ ಯೋಜನೆ; ದ.ಕ.ದಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ..! ನಟಿ ರಮ್ಯಾ ರಾಯಭಾರಿ
35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ‘ಋತು ತಾರೆ’ ಎಂಬ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮದ ರಾಯಭಾರಿಯಾಗಿ ಚಿತ್ರನಟಿ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ.
ಬೆಂಗಳೂರು: 35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ‘ಋತು ತಾರೆ’ ಎಂಬ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಈ ಹಂತದ ಅನುಭವದ ಆಧಾರದಲ್ಲಿ ಬಳಿಕ ರಾಜ್ಯದಾದ್ಯಂತ ವಿಸ್ತರಿಸಲು ಸರಕಾರ ಉದ್ದೇಶಿಸಿದೆ.
ಮಹಿಳೆಯರ ಆರೋಗ್ಯವು ಕೇವಲ ತಾಯ್ತನಕ್ಕೆ ಸೀಮಿತವಾಗಿಲ್ಲ. ಮೆನೋಪಾಸ್ ಹಂತದಲ್ಲಿ ನಿದ್ರಾಹೀನತೆ, ದೇಹದಲ್ಲಿ ಏಕಾಏಕಿ ಬಿಸಿಯ ಅನುಭವ, ಕೀಲು ನೋವು, ಮೂಳೆಗಳ ದುರ್ಬಲತೆ, ಆತಂಕ ಹಾಗೂ ಮಾನಸಿಕ ಏರುಪೇರು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ವಯಸ್ಸಿನ ಸಹಜ ಬದಲಾವಣೆ ಎಂದು ನಿರ್ಲಕ್ಷಿಸದೆ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಸರಕಾರ ತಿಳಿಸಿದೆ.
‘ಋತು ತಾರೆ’ ಯೋಜನೆಯಡಿ ಮಹಿಳೆಯರಿಗಾಗಿ ಪ್ರತ್ಯೇಕ ಕ್ಲಿನಿಕ್‌ಗಳನ್ನು ತೆರೆಯಲಾಗುತ್ತದೆ. ಇಲ್ಲಿ ಸಮಗ್ರ ಆರೋಗ್ಯ ತಪಾಸಣೆ, ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಅಗತ್ಯವಿರುವವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಒದಗಿಸುವುದರ ಜೊತೆಗೆ, ಆರೋಗ್ಯದ ವಿವರಗಳನ್ನು ದಾಖಲಿಸಲು ‘ಮಿಡ್-ಲೈಫ್ ಹೆಲ್ತ್ ಕಾರ್ಡ್’ ವಿತರಿಸಲಾಗುತ್ತದೆ.
ಈ ಕಾರ್ಯಕ್ರಮದ ರಾಯಭಾರಿಯಾಗಿ ಚಿತ್ರನಟಿ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ. ಮೆನೋಪಾಸ್ ಹಾಗೂ ಮಧ್ಯವಯಸ್ಕ ಮಹಿಳೆಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಕಾರ್ಯಕ್ರಮದ ಸಂದೇಶವನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸಲು ಅವರು ಸಹಕರಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ ಪೂರ್ಣಗೊಂಡ ಬಳಿಕ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಮಹಿಳೆಯರ ಬದುಕಿನ ಪ್ರತಿಯೊಂದು ಹಂತದಲ್ಲೂ ಉತ್ತಮ ಆರೋಗ್ಯ ಸೇವೆ, ಸೂಕ್ತ ಆರೈಕೆ ಮತ್ತು ಘನತೆಯ ಬದುಕು ದೊರೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸರಕಾರ ತಿಳಿಸಿದೆ.
ಆರೋಗ್ಯ
Puttur-ಸೆ.29: ವಿಶ್ವ ಹೃದಯ ದಿನ: ಪುತ್ತೂರಿನ ಮೆಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಹೃದಯ ತಪಾಸಣಾ ಶಿಬಿರ
ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪುತ್ತೂರು: ವಿಶ್ವ ಹೃದಯ ದಿನದ ಅಂಗವಾಗಿ ಪುತ್ತೂರಿನ ಸಂಪ್ಯದಲ್ಲಿರುವ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ.29, ಮಂಗಳವಾರದಂದು ಸಂಜೆ ಗಂಟೆ 3ರಿಂದ ವಿಶೇಷ ಹೃದಯ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಇ.ಸಿ.ಜಿ., ಇಕೋ (ECHO), ಟಿ.ಎಂ.ಟಿ. (TMT) ಸೇರಿದಂತೆ ಅಗತ್ಯ ತಪಾಸಣೆಗಳನ್ನು ನಡೆಸಲಾಗುವುದು. ತಪಾಸಣೆಯ ಬಳಿಕ ಹೃದ್ರೋಗ ತಜ್ಞ ವೈದ್ಯರಿಂದ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವೂ ದೊರೆಯಲಿದೆ.
ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಲು ಶಿಬಿರವು ಸಾರ್ವಜನಿಕರಿಗೆ ಉಪಯುಕ್ತ ಅವಕಾಶವಾಗಲಿದೆ. ವಿಶೇಷವಾಗಿ ಎದೆನೋವು, ಉಸಿರಾಟದ ತೊಂದರೆ, ಹೃದಯ ಬಡಿತದಲ್ಲಿ ವ್ಯತ್ಯಾಸ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ ಹೊಂದಿರುವವರು ಶಿಬಿರದ ಪ್ರಯೋಜನ ಪಡೆಯುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
ಹೃದಯದ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹಾಗೂ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಆಸ್ಪತ್ರೆ ತಿಳಿಸಿದೆ.
-
ರಾಜಕೀಯ24 hours agoPuttur-Big Breaking: ನಾಳೆ ಪುತ್ತೂರಿಗೆ ಬಿಜೆಪಿ ಘಟಾನುಘಟಿ ನಾಯಕರ ದಂಡು; ವಿಜಯೇಂದ್ರ, ಆರ್. ಅಶೋಕ್ ಸಹಿತ ಹಲವು ಹಿರಿಯ ನಾಯಕರ ಭೇಟಿ
-
ಬಿಗ್ ನ್ಯೂಸ್7 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
Uncategorized6 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್8 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ಮಂಗಳೂರು7 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
ರಾಜಕೀಯ6 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಶಿಕ್ಷಣ23 hours agoNarendra-ನರೇಂದ್ರ ಪ.ಪೂ. ಕಾಲೇಜಿನಲ್ಲಿ ಕರ್ನಾಟಕದ ಏಕೀಕರಣ ಕುರಿತಾಗಿ ವಿದ್ಯಾರ್ಥಿಗಳಿಂದ ವಿಚಾರಗೋಷ್ಠಿ
-
ಅಂತರ ರಾಜ್ಯ5 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!















