ದಕ್ಷಿಣ ಕನ್ನಡ
ಬಂಟ್ವಾಳ : ಹಣ ವಾಪಸ್ ಕೇಳಿದ್ದಕ್ಕೆ ಚೂರಿ ಇರಿತ ಆರೋಪ: ಆರೋಪಿ ಪೊಲೀಸ್ ವಶಕ್ಕೆ

ಬಂಟ್ವಾಳ: ಹಣದ ವಿಚಾರವಾಗಿ ಉಂಟಾದ ವಿವಾದದಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳದ ಅಜಿತ್ ಕುಮಾರ್ ಶೆಟ್ಟಿ (28) ವಶಕ್ಕೆ ಪಡೆಯಲಾದ ವ್ಯಕ್ತಿ
ಪೊಲೀಸ್ ಮೂಲಗಳ ಪ್ರಕಾರ, ಬಂಟ್ವಾಳ ಬಿ ಮೂಡಾ ಗ್ರಾಮದ ಉದಯ್ ಎಂಬವರಿಂದ ಆರೋಪಿಯು ಹಣ ಪಡೆದಿದ್ದು, ಅದನ್ನು ಪಾವತಿಸಲು ಬಾಕಿಯಿತ್ತು. ಈ ಹಣವನ್ನು ವಾಪಸ್ ನೀಡುವಂತೆ ಉದಯ್ ಕೇಳುತ್ತಿದ್ದರು ಎನ್ನಲಾಗಿದೆ. ಅ. 17ರ ರಾತ್ರಿ ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿದ ಆರೋಪಿ, ಉದಯ್ ಅವರನ್ನು ಪಲ್ಲಮಜಲಿಗೆ ಬರುವಂತೆ ಹೇಳಿದ್ದಾನೆ.
ಅದರಂತೆ ಉದಯ್ ಹಣ ಪಡೆಯುವ ಸಲುವಾಗಿ ಪಲ್ಲಮಜಲು ಜಂಕ್ಷನ್ಗೆ ತೆರಳಿದ್ದು, ತನ್ನ ಸಹೋದರ ಲೋಕೇಶ್ (27) ಅವರನ್ನೂ ಸ್ಥಳಕ್ಕೆ ಬರುವಂತೆ ತಿಳಿಸಿದ್ದರು. ಲೋಕೇಶ್ ಸ್ಥಳಕ್ಕೆ ತಲುಪಿದಾಗ ಆರೋಪಿ ಅಜಿತ್ ಉದಯ್ ಅವರಿಗೆ ಚೂರಿಯಿಂದ ಇರಿಯುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಈ ವೇಳೆ ತಡೆಯಲು ಮುಂದಾದ ಲೋಕೇಶ್ ಅವರನ್ನು ಆರೋಪಿ ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಸ್ಥಳೀಯರು ಗಾಯಗೊಂಡ ಉದಯ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 118(2), 109(1) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ
ಪುತ್ತೂರು ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ

ಪುತ್ತೂರು: ನಗರದ ಲಾಡ್ಜ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಮೂವರು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ನಿವಾಸಿ ಮಹಮ್ಮದ್ ರಿಫಾಯಿ (27) ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.
ಅ. 17ರಂದು ರಾತ್ರಿ ರಿಫಾಯಿ ಅವರು ಪುತ್ತೂರಿನ ಲಾಡ್ಜ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಫಾರೂಕ್, ಸೋನು ಹಾಗೂ ಇಷಾನ್ ಎಂಬವರು ಅಲ್ಲಿಗೆ ಬಂದು ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ರಿಫಾಯಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023ರ ಕಲಂ 126(2), 352, 351(2) ಹಾಗೂ 115(2)ರಂತೆ ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಅಪರಾಧ
ಸೌತಡ್ಕ ದೇವಸ್ಥಾನದ ಹೂವಿನ ಅಂಗಡಿ ವಿಚಾರದಲ್ಲಿ ಮಾರಾಮಾರಿ; ಮಹಿಳೆಯರ ಮೇಲೆ ಹಲ್ಲೆ ಆರೋಪ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹೊರಭಾಗದಲ್ಲಿರುವ ಅಂಗಡಿಯ ವಿಚಾರವಾಗಿ ಹೂವಿನ ವ್ಯಾಪಾರಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ವರದಿಯಾಗಿದೆ. ಈ ವೇಳೆ ಮಹಿಳೆಯರ ಮೇಲೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದೇವಸ್ಥಾನದ ಟ್ರಸ್ಟ್ಗೆ ಸೇರಿದ ಅಂಗಡಿಗಳ ಏಲಂ ಪ್ರಕ್ರಿಯೆಯ ಮೂಲಕ ರಾಘವ ಎಂಬವರು ಹೂವಿನ ಸ್ಟಾಲ್ ಪಡೆದಿದ್ದರು ಎನ್ನಲಾಗಿದೆ. ಆದರೆ, ಏಲಂ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಈ ಹಿಂದೆ ಅಂಗಡಿ ನಡೆಸುತ್ತಿದ್ದ ವ್ಯಾಪಾರಿ ಅಂಗಡಿಯನ್ನು ತೆರವುಗೊಳಿಸದೆ ಮುಂದುವರಿದಿದ್ದರು ಎಂದು ತಿಳಿದುಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಘವ ಭಂಡಾರಿ ಎಂಬವರು ಅಂಗಡಿಗೆ ಏಕಾಏಕಿ ಪ್ರವೇಶಿಸಿದ ಸಂದರ್ಭದಲ್ಲಿ ಎರಡೂ ಕಡೆಯ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಅದು ಮಾರಾಮಾರಿಗೆ ತಿರುಗಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಮಹಿಳೆಯರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದಂತೆ ರಾಘವ ಭಂಡಾರಿ ಅವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣದ ಕುರಿತು ಪೊಲೀಸರ ಮುಂದಿನ ಕ್ರಮದ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.
ಕಾರ್ಯಕ್ರಮಗಳು
Praveen Capital-ಪ್ರವೀಣ್ ಕ್ಯಾಪಿಟಲ್ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ: 2030ರ ವೇಳೆಗೆ 100 ಶಾಖೆ ಸ್ಥಾಪನೆಯ ಗುರಿ; ಸತ್ಯ ಶಂಕರ್ ಅವರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಉಲ್ಲೇಖಿಸುತ್ತೇನೆ – ಅಶೋಕ್ ರೈ
1994ರಿಂದ ಹಣಕಾಸು ಸೇವಾ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿ ಅ.16ರಂದು ಪುತ್ತೂರಿನ ಕಲ್ಲಾರೆಯ ಶ್ರೀ ಗಣೇಶ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು. ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಬೆಳಗಿಸಿ ನವೀಕೃತ ಕಚೇರಿಯನ್ನು ಉದ್ಘಾಟಿಸಿದರು.
ಪುತ್ತೂರು: 1994ರಿಂದ ಹಣಕಾಸು ಸೇವಾ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ ಪ್ರವೀಣ್ ಕ್ಯಾಪಿಟಲ್ ಸಂಸ್ಥೆಯ ನವೀಕೃತ ಪ್ರಧಾನ ಕಚೇರಿ ಅ.16ರಂದು ಪುತ್ತೂರಿನ ಕಲ್ಲಾರೆಯ ಶ್ರೀ ಗಣೇಶ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು. ಶಾಸಕ ಅಶೋಕ್ ಕುಮಾರ್ ರೈ ಅವರು ದೀಪ ಬೆಳಗಿಸಿ ನವೀಕೃತ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುತ್ತೂರಿನ ಉದ್ಯಮಿಯೊಬ್ಬರು ಸುಮಾರು 3,500 ಕೋಟಿ ರೂ. ವ್ಯವಹಾರ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯ ಶಂಕರ್ ಅವರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಉಲ್ಲೇಖಿಸುತ್ತೇನೆ. ನಡೆದು ಬಂದ ಹಾದಿಯನ್ನು ಮರೆಯದೆ ಮುನ್ನಡೆಯುತ್ತಿರುವ ಅವರು ಪುತ್ತೂರಿನಲ್ಲಿ ಇನ್ನೂ 1,000 ಮಂದಿಗೆ ಉದ್ಯೋಗ ನೀಡಬೇಕು ಎಂಬುದು ನನ್ನ ಕನಸು. ಯುವಜನರು ರಾಜಕೀಯಕ್ಕೆ ಪ್ರವೇಶಿಸಿ ಬದಲಾವಣೆ ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು. ಪ್ರವೀಣ್ ಕ್ಯಾಪಿಟಲ್ ಸಂಸ್ಥೆ ಇನ್ನಷ್ಟು ದೊಡ್ಡದಾಗಿ ಬೆಳೆದು ಸಾವಿರಾರು ಜನರಿಗೆ ಉದ್ಯೋಗ ಹಾಗೂ ಬದುಕಿಗೆ ಆಸರೆಯಾಗಲಿ ಎಂದು ಶುಭ ಹಾರೈಸಿದರು.
ಕಮಿಟ್ಮೆಂಟ್ ಇದ್ದಾಗ ಸಂಸ್ಥೆ ಉತ್ತಮವಾಗಿ ಮುನ್ನಡೆಯುತ್ತದೆ
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನ ಆಡಳಿತ ನಿರ್ದೇಶಕ ಜಿ.ಎಲ್. ಬಲರಾಮ ಆಚಾರ್ಯ ಮಾತನಾಡಿ, ಸಂಸ್ಥೆಯು ಸಿಬ್ಬಂದಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ ಆಹ್ಲಾದಕರ ಕೆಲಸದ ವಾತಾವರಣ ನಿರ್ಮಿಸಿರುವುದು ಶ್ಲಾಘನೀಯ. ಹಣಕಾಸು ಕ್ಷೇತ್ರದಲ್ಲಿ ನೀಡಿದ ಸಾಲ ಮರುಪಾವತಿಯಾದಾಗ ಮಾತ್ರ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ಸತ್ಯ ಶಂಕರ್ ಅವರು ವ್ಯವಹಾರದ ಬಗ್ಗೆ ನಿರಂತರವಾಗಿ ಚಿಂತಿಸುವ ಬದ್ಧತೆಯುಳ್ಳ ವ್ಯಕ್ತಿ. ಬದ್ಧತೆ ಇದ್ದಾಗ ಸಂಸ್ಥೆ ಉತ್ತಮವಾಗಿ ಮುನ್ನಡೆಯುತ್ತದೆ. ಪ್ರವೀಣ್ ಕ್ಯಾಪಿಟಲ್ ದೇಶಾದ್ಯಂತ ಶಾಖೆಗಳನ್ನು ಹೊಂದಿ ಪ್ರಥಮ ಸ್ಥಾನಕ್ಕೇರಲಿ ಎಂದು ಹಾರೈಸಿದರು.
ಸಾವಿರಾರು ಮಂದಿಯ ಮಂದಿಯ ಜೀವನೋಪಾಯಕ್ಕೆ ಆಸರೆ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಗೋಸೇವೆಯಿಂದ ಆರಂಭಿಸಿ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡು ದೇಶದಾದ್ಯಂತ ಗುರುತಿಸಿಕೊಂಡಿರುವ ಸತ್ಯ ಶಂಕರ್ ಅವರು ಉದ್ಯಮದಲ್ಲಿ ಪ್ರಾಮಾಣಿಕತೆಗೆ ಮಹತ್ವ ನೀಡಿದ್ದಾರೆ. ಉದ್ಯಮಗಳ ಬೆಳವಣಿಗೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಬಿಂದು ಸಂಸ್ಥೆ ಸಾವಿರಾರು ಮಂದಿಯ ಜೀವನೋಪಾಯಕ್ಕೆ ಆಸರೆಯಾಗಿದೆ. ಸಮಾಜಕ್ಕೆ ಸದ್ದಿಲ್ಲದೆ ನೆರವು ನೀಡುವ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.
1994ರಲ್ಲಿ ಆರಂಭ, ಇಂದು 25 ಶಾಖೆಗಳು
ಎಸ್.ಜಿ. ಗ್ರೂಪ್ನ ಆಡಳಿತ ನಿರ್ದೇಶಕ ಸತ್ಯ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, 1994ರಲ್ಲಿ ಪ್ರವೀಣ್ ಫೈನಾನ್ಸ್ ಕಾರ್ಪೊರೇಷನ್ ಹೆಸರಿನಲ್ಲಿ ಸಂಸ್ಥೆಯನ್ನು ಆರಂಭಿಸಲಾಯಿತು. ಆಗ ಬ್ಯಾಂಕ್ಗಳಿಂದ ಸಾಲ ಪಡೆಯುವುದು ಕಷ್ಟವಾಗಿದ್ದ ಹಿನ್ನೆಲೆಯಲ್ಲಿ ವಾಹನ ಖರೀದಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ಸಂಸ್ಥೆ ಕಾರ್ಯಾರಂಭಿಸಿತು. ಇಂದು ಕರ್ನಾಟಕದಾದ್ಯಂತ 25 ಶಾಖೆಗಳನ್ನು ಹೊಂದಿದ್ದು, ತಿಂಗಳಿಗೆ ಸುಮಾರು 400 ಗ್ರಾಹಕರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಒಟ್ಟು 8,000 ಗ್ರಾಹಕರು ಸಂಸ್ಥೆಯೊಂದಿಗೆ ವ್ಯವಹರಿಸುತ್ತಿದ್ದಾರೆ. ಪ್ರಸಕ್ತ ವರ್ಷ 550 ಕೋಟಿ ರೂ. ವ್ಯವಹಾರದ ಗುರಿ ಹೊಂದಿದ್ದು, 200ಕ್ಕೂ ಅಧಿಕ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
1987ರ ಅವಧಿಯಲ್ಲಿ ಆಟೋಮೊಬೈಲ್ ಮತ್ತು ಟೈರ್ ವ್ಯಾಪಾರ ಆರಂಭಿಸಿದ ಅನುಭವದಿಂದ ವಾಹನ ಚಾಲಕರು ಹಾಗೂ ಮಾಲೀಕರ ಹಣಕಾಸಿನ ಅಗತ್ಯಗಳನ್ನು ಅರಿತುಕೊಳ್ಳಲಾಯಿತು. ಬಳಿಕ 1994ರಲ್ಲಿ ಹಳೆಯ ಹಾಗೂ ಸೆಕೆಂಡ್ಹ್ಯಾಂಡ್ ವಾಹನಗಳಿಗೆ ಸಾಲ ನೀಡುವ ಉದ್ದೇಶದಿಂದ ಪ್ರವೀಣ್ ಫೈನಾನ್ಸ್ ಕಾರ್ಪೊರೇಷನ್ ಸ್ಥಾಪಿಸಲಾಯಿತು. 2008ರಲ್ಲಿ ಸಂಸ್ಥೆಯನ್ನು ವಿಸ್ತರಿಸುವ ಉದ್ದೇಶದಿಂದ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಆಗಿ ಪರಿವರ್ತಿಸಲಾಯಿತು ಎಂದು ಅವರು ಸಂಸ್ಥೆಯ ಬೆಳವಣಿಗೆಯ ಹಾದಿಯನ್ನು ವಿವರಿಸಿದರು.
2030ರ ವೇಳೆಗೆ 100 ಶಾಖೆಗಳ ಗುರಿ
ಪ್ರವೀಣ್ ಕ್ಯಾಪಿಟಲ್ ಪ್ರಸ್ತುತ ಕರ್ನಾಟಕದಲ್ಲಿ 25 ಶಾಖೆಗಳನ್ನು ಹೊಂದಿದ್ದು, ವಾಹನ ಸಾಲ, ಆಸ್ತಿ ಅಡಮಾನ ಸಾಲ, ಚಿನ್ನದ ಸಾಲ ಹಾಗೂ ಎಂಎಸ್ಎಂಇ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಿಗೆ ಜಾಲ ವಿಸ್ತರಿಸುವುದರ ಜತೆಗೆ ದಕ್ಷಿಣ ಭಾರತದ ಇತರ ರಾಜ್ಯಗಳಿಗೂ ಕಾರ್ಯಾಚರಣೆ ವಿಸ್ತರಿಸುವ ಯೋಜನೆ ಹೊಂದಿದೆ.
2030ರ ವೇಳೆಗೆ ಕರ್ನಾಟಕದಲ್ಲಿ 100 ಶಾಖೆಗಳನ್ನು ಸ್ಥಾಪಿಸಿ 1,500 ಕೋಟಿ ರೂ. ವ್ಯವಹಾರ ಸಾಧಿಸುವ ಗುರಿ ಹೊಂದಲಾಗಿದೆ. ದೊಡ್ಡ ಗುರಿಗಳನ್ನು ಇಟ್ಟುಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು, ವ್ಯವಹಾರದಲ್ಲಿ ನಿರಂತರತೆ ಕಾಪಾಡುವುದು, ಉದ್ಯೋಗಿಗಳಿಗೆ ಭದ್ರತೆ ಒದಗಿಸುವುದು ಹಾಗೂ ಸಾಮಾಜಿಕ ಸೇವೆಗೆ ಆದ್ಯತೆ ನೀಡುವುದರಿಂದ ಸಂಸ್ಥೆಯ ಬೆಳವಣಿಗೆ ಸಾಧ್ಯವಾಗಿದೆ ಎಂದು ಸತ್ಯ ಶಂಕರ್ ತಿಳಿಸಿದರು.
ಎಸ್.ಜಿ.ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್, ಮೇಘಾ ಶಂಕರ್, ಮಹಿಮಾ ಶಂಕರ್, ಮನಸ್ವಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಕಛೇರಿಯ ಸಿವಿಲ್ ಕೆಲಸ ನಿರ್ವಹಿಸಿರುವ ಸುದರ್ಶನ್, ಇಂಟೀರಿಯರ್ ಕೆಲಸ ನಿರ್ವಹಿಸಿರುವ ಪೂರ್ಣಿಮಾ, ಸಂಖ್ಯೆ ಆನಂದಾಶ್ರಮ ಸೇವಾ ಟ್ರಸ್ಟ್ನ ಅಧ್ಯಕ್ಷೆ ಡಾ.ಗೌರಿಪೈ, ಉದ್ಯಮಿ ಶಿವರಾಮ ಆಳ್ವ ಕುರಿಯ, ಎಸ್ಡಿಪಿ ರೆಮಿಡೀಸ್ನ ರೂಪಲೇಖ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ ಹಾಗೂ ಗ್ರಾಹಕರಾದ ಅಬ್ದುಲ್ ರಝಾಕ್, ಸಂಜೀವ ಕಲ್ಲೇರಿ, ಅಬ್ದುಲ್ ಖಾದರ್ ಹಾಗೂ ಜಗದೀಶ್ ಅಮೀನ್ ರವರನ್ನು ಗೌರವಿಸಲಾಯಿತು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ಜಿ.ಎಲ್. ಆಚಾರ್ಯ ಜ್ಯುವೆರ್ಲ್ಸನ ನಿರ್ದೇಶಕರಾದ ಲಕ್ಷ್ಮೀಕಾಂತ ಆಚಾರ್ಯ, ಸುಧನ್ವ ಆಚಾರ್ಯ, ಎಸ್ಡಿಪಿ ರೆಮಿಡೀಸ್ನ ಡಾ.ಹರಿಕೃಷ್ಣ ಪಾಣಾಜೆ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಶಿವಶಂಕರ್ ಭಟ್ ಬೋನಂತಾಯ, ಗೋವಿಂದರಾಜ್ ಪಿ., ಹರಿಕೃಷ್ಣವಾಟೆ, ರಮೇಶ್ ಭಟ್, ಡಾ.ಕೃಷ್ಣಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಮುಖ್ಯ ಲೆಕ್ಕಪತ್ರ ಅಧಿಕಾರಿ ಹೇಮಂತ್ ಪೈ, ಡಿಜಿಎಂ ಶ್ರೀವತ್ಸರಾಜ್ ಎಮ್.ಜಿ., ಎಜಿಎಮ್ ಕಾರ್ತಿಕ್ ಎಸ್.ಎನ್. ಸೇರಿದಂತೆ ಸಿಬ್ಬಂದಿಗಳು ಸಹಕರಿಸಿದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೆಳ್ಳಿಪ್ಪಾಡಿ ಅವೋಘ್ ಜೆ. ರೈ ವಂದಿಸಿದರು. ಚೇತನ್ ಶೆಟ್ಟಿ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಪ್ರವೀಣ್ ಕ್ಯಾಪಿಟಲ್ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ
‘ಪ್ರವೀಣ್ ಕ್ಯಾಪಿಟಲ್’ ಸಂಸ್ಥೆಯು 1994ರಲ್ಲಿ ಪ್ರಾರಂಭಗೊಂಡಿದ್ದು, ‘ಯುವರ್ ಡ್ರೀಮ್, ಅವರ್ ಕ್ಯಾಪಿಟಲ್’ ಅಂದರೆ ‘ನಿಮ್ಮ ಕನಸು ನಮ್ಮ ಬಂಡವಾಳ’ ಎನ್ನುವ ಧೈಯವಾಕ್ಯದೊಂದಿಗೆ ಕಾರ್ಯಾಚರಿಸುತ್ತಿದೆ. ಆರ್ ಬಿಐನಿಂದ ಅಧಿಕೃತ ಅನುಮೋದನೆ ಪಡೆದಿರುವ ಎನ್ಬಿಎಫ್ಸಿ ಸಂಸ್ಥೆಯಾಗಿದ್ದುಕೊಂಡು ನಿರಂತರವಾಗಿ ಗ್ರಾಹಕರ ನಂಬಿಕೆ, ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡು ಬೆಳೆಯುತ್ತಾ ಬಂದಿದೆ. ಸಂಸ್ಥೆಯ ಪ್ರಧಾನ ಕಚೇರಿಯು ಪುತ್ತೂರಿನಲ್ಲಿದ್ದು, ನೋಂದಾಯಿತ ಕಚೇರಿಯು ಮಂಗಳೂರಿನಲ್ಲಿದೆ. ಸದ್ಯ ಕರ್ನಾಟಕದಲ್ಲಿ 25 ಶಾಖೆಗಳಿದ್ದು, ವಾಹನ ಸಾಲ, ಆಸ್ತಿ ಅಡಮಾನ ಸಾಲ, ಚಿನ್ನದ ಸಾಲದ ಜೊತೆಗೆ ಎಂಎಸ್ ಎಂಇ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಸದ್ಯ ಪ್ರತೀ 70 ಕಿ.ಮೀ. ಗೆ ಒಂದರಂತೆ ಶಾಖೆಗಳನ್ನು ಹೊಂದಿದ್ದು, ಮುಂದಕ್ಕೆ ದಕ್ಷಿಣ ಭಾರತದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರದಲ್ಲಿ ವಿಸ್ತರಿಸಲು ಯೋಜನೆ ಇದೆ. ಉತ್ತಮ ನಿಯಮಬದ್ದ ಕಾರ್ಯನಿರ್ವಹಣೆ, ಕ್ಷಮತೆಯ ಮೂಲಕ ‘ಎನ್ಸಿಡಿ’ ಪ್ರೈವೇಟ್ ಪ್ಲೇಸ್ಮೆಂಟ್ ಮಾಡಿರುವ “ಜಿಲ್ಲೆಯ ಮೊದಲ ಖಾಸಗಿ ಹಣಕಾಸು ಸಂಸ್ಥೆ ಎನ್ನುವ ಹೆಗ್ಗಳಿಕೆಯೂ ‘ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ನದ್ದು.
ಪ್ರವೀಣ್ ಕ್ಯಾಪಿಟಲ್ಸ್ ಬೆಳೆದು ಬಂದ ಹಾದಿ..
‘1987ರ ಅವಧಿಯಲ್ಲಿ ಪುತ್ತೂರಿನಲ್ಲಿ ಆಟೋಮೊಬೈಲ್ ಶಾಪ್ ಮತ್ತು ಟೈರ್ ಶಾಪ್ನ್ನು ಆರಂಭಿಸಿದ್ದೆವು. ಆ ಸಮಯದಲ್ಲಿ ವಾಹನಗಳ ಚಾಲಕರು ಮತ್ತು ಮಾಲಕರುಗಳಿಗೆ ಹಣಕಾಸಿನ ಅವಶ್ಯಕತೆಗಳು ಇರುತ್ತಿದ್ದವು. ಇಂತಹ ಸಂದರ್ಭದಲ್ಲಿ ವಾಹನ ಚಾಲಕರಿಗೆ, ಮಾಲಕರಿಗೆ ವಾಹನದ ಬಿಡಿಭಾಗಗಳು ಮತ್ತು ಟೈರು ಸಾಲದ ರೂಪದಲ್ಲಿ ನೀಡುತ್ತಿದ್ದೆವು. ಇದೇ ಪರಿಕಲ್ಪನೆಯಲ್ಲಿ 1994ರಲ್ಲಿ ಪ್ರವೀಣ್ ಫೈನಾನ್ಸ್ ಕಾರ್ಪೊರೇಷನ್’ ಎಂದು ಖಾಸಗಿ ಹಣಕಾಸು ಸಂಸ್ಥೆಯನ್ನು ಆರಂಭಿಸಿದ್ದೆವು. ಈ ಮೂಲಕ ಹಳೆಯ/ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಸಾಲ ಸೌಲಭ್ಯ ನೀಡುವ ವ್ಯವಸ್ಥೆಯನ್ನು ಪುತ್ತೂರಿನಲ್ಲಿ ಆರಂಭಿಸಿದೆವು. 2008ರಲ್ಲಿ ‘ಪ್ರವೀಣ್ ಫೈನಾನ್ಸ್ ಕಾರ್ಪೊರೇಷನ್’ನ್ನು ಮತ್ತಷ್ಟು ಅಭಿವೃದ್ಧಿ, ವಿಸ್ತರಣೆ ಮಾಡುವ ಉದ್ದೇಶದಿಂದ ಎನ್ಬಿಎಫ್ಸಿ ಸಂಸ್ಥೆ ‘ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ನಾಗಿ ಪರಿವರ್ತಿಸಿದೆವು. ಈಗ ‘ಪ್ರವೀಣ್ ಕ್ಯಾಪಿಟಲ್ನ 25 ಶಾಖೆಗಳಿವೆ. 200ಕ್ಕೂ ಅಧಿಕ ಮಂದಿ ಉದ್ಯೋಗ ಪಡೆಯುವ ಮೂಲಕ ಜೀವನೋಪಾಯ ಕಂಡುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರವೀಣ್ ಕ್ಯಾಪಿಟಲ್ನ ಜಾಲವನ್ನು ವಿಸ್ತರಿಸುವ ಚಿಂತನೆ ಇದೆ. 2030ಕ್ಕೆ 100 ಶಾಖೆಗಳು ಕರ್ನಾಟಕದಲ್ಲಿ ಮತ್ತೆ 1,500 ಕೋಟಿ ರೂ.ಗಳ ವ್ಯವಹಾರದ ಗುರಿಯನ್ನು ಇಟ್ಟುಕೊಂಡಿದ್ದೇವೆ” ಎನ್ನುವುದು ಎಸ್.ಜಿ. ಗ್ರೂಪ್ನ ಆಡಳಿತ ನಿರ್ದೇಶಕರಾದ ಸತ್ಯ ಶಂಕರ್ ಅವರ ಮಾತು.
ದೊಡ್ಡ ಗುರಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ:
2030ಕ್ಕೆ ಕರ್ನಾಟಕದಾದ್ಯಂತ 100 ಶಾಖೆಗಳನ್ನು ಮಾಡುವ ಯೋಚನೆ ಇದ್ದು 1500 ಕೋಟಿ ರೂ. ವ್ಯವಹಾರ ಮಾಡುವ ಗುರಿ ಹೊಂದಿದ್ದೇವೆ. ದೊಡ್ಡ ಗುರಿ ಇಟ್ಟುಕೊಂಡರೆ ಯಾವುದೇ ಸಂಸ್ಥೆ ಯಶಸ್ಸು ಕಾಣಲು ಸಾಧ್ಯ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದು ಅಗತ್ಯ. ವ್ಯವಹಾರದಲ್ಲಿ ನಿರಂತರತೆ ಹಾಗೂ ಉದ್ಯೋಗಿಗಳಿಗೆ ಭದ್ರತೆ ಮುಖ್ಯ. ಅಲ್ಲದೆ ಸಾಮಾಜಿಕ ಸೇವೆ, ಜನರ ಸಹಕಾರ ಮುಖ್ಯ. ಇದನ್ನು ಅಳವಡಿಸಿಕೊಂಡ ಕಾರಣ ನಮ್ಮ ಸಂಸ್ಥೆ ಅಭಿವೃದ್ಧಿ ಹೊಂದಿದೆ.
-ಸತ್ಯ ಶಂಕರ್, ಆಡಳಿತ ನಿರ್ದೇಶಕರು, ಎಸ್.ಜಿ. ಗ್ರೂಫ್
ದಸರಾ, ದೀಪಾವಳಿ ಪ್ರಯುಕ್ತ ವಿಶೇಷ ಆಫರ್
ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಸಂಸ್ಥೆಯಲ್ಲಿ ವಿಶೇಷ ಆಫರ್ ಆಯೋಜಿಸಲಾಗಿದೆ. ಅಕ್ಟೋಬರ್ 1 ರಿಂದ ನವೆಂಬರ್ 30ರವರೆಗೆ ಆಫರ್ ಲಭ್ಯವಿದ್ದು ಗರಿಷ್ಠ ಹಣಕಾಸಿನ ನೆರವು, ಸುಲಭ ಸಾಲ ಸೌಲಭ್ಯ, ಶೀಘ್ರ ಅನುಮೋದನೆ ವ್ಯವಸ್ಥೆ ಗ್ರಾಹಕರಿಗೆ ದೊರೆಯಲಿದೆ. ಜತೆಗೆ ಅದೃಷ್ಟ ಕೂಪನ್ ದೊರೆಯಲಿದೆ. ಲಕ್ಕಿ ಡ್ರಾದಲ್ಲಿ ಸ್ಟಾರ್ಟ್ ಟಿವಿ, ಫ್ರಿಡ್ಜ್, ಮುಂತಾದ ಅನೇಕ ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಬಹುದು ಎಂದು ಸಂಸ್ಥೆಯ ಸಿಇಒ ಹೇಳಿದರು.


















