ದಕ್ಷಿಣ ಕನ್ನಡ
Harsha Kumar Madavu : ಹರ್ಷಾಕುಮಾರ್ ರೈ ಮಾಡಾವು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ |ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಮಾಜಸೇವೆ ಹಾಗೂ ರಸ್ತೆ ಸುರಕ್ಷತಾ ಜಾಗೃತಿಯಲ್ಲಿ ವಿಶಿಷ್ಟ ಕೊಡುಗೆ

ಮಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಬಾರಿ ಪುತ್ತೂರು ತಾಲ್ಲೂಕಿನ ಮಾಡಾವು ಗ್ರಾಮದ ಹರ್ಷಾಕುಮಾರ್ ರೈ ಅವರಿಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ಕಾರ್ಭಾರಿ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಹಾಗೂ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 54 ಸಂಘ ಸಂಸ್ಥೆಗಳು ಹಾಗೂ 120 ಮಂದಿಯನ್ನು ಸನ್ಮಾನಿಸಲಾಯಿತು.
ಪುತ್ತೂರು ತಾಲ್ಲೂಕಿನ ಮಾಡಾವು ಗ್ರಾಮದ ಹರ್ಷಾಕುಮಾರ್ ರೈ ಅವರು ವೃತ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕ್ಷೇತ್ರದ ಆರ್ಕಿಟೆಕ್ಟ್ ಆಗಿದ್ದು, ತಾಂತ್ರಿಕ ಸಾಧನೆಯ ಜತೆಗೆ ಕನ್ನಡ ಭಾಷೆ, ಕಲೆ, ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಜನ್ಮ ಫೌಂಡೇಶನ್ ಟ್ರಸ್ಟ್ ಸ್ಥಾಪಿಸುವ ಮೂಲಕ ಕಳೆದ 12 ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಎಂಜಿನಿಯರಿಂಗ್‌ನಲ್ಲಿ ರಾಜ್ಯಮಟ್ಟದ ರ‍್ಯಾಂಕ್ ಪಡೆದಿರುವ ಇವರು, ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಉನ್ನತ ಪದವಿ ಪೂರೈಸಿದ್ದಾರೆ. ಸೌದಿ ಅರೇಬಿಯಾ, ಓಮನ್ ಹಾಗೂ ಯುಎಇ ರಾಷ್ಟ್ರಗಳಲ್ಲಿ ರಸ್ತೆ ಮತ್ತು ಮೂಲಸೌಕರ್ಯ ತಂತ್ರಜ್ಞರಾಗಿ ಸೇವೆ ಸಲ್ಲಿಸಿದ ಬಳಿಕ ಸ್ವದೇಶಕ್ಕೆ ಮರಳಿ ಬೈಟ್‌ವೇ ಇಂಡಿಯಾ ತಾಂತ್ರಿಕ ಸಂಸ್ಥೆ ಸ್ಥಾಪಿಸಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ವಿವಿಧ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 14 ವರ್ಷಗಳಿಂದ ಕೆಯ್ಯೂರು ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಹಾಗೂ ಪುತ್ತೂರು ತಾಲ್ಲೂಕಿನ 32 ಗ್ರಾಮಗಳಲ್ಲಿ ಸಾಹಿತ್ಯ ಸಂಭ್ರಮ ಆಯೋಜಿಸುವ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ.
ದೇಶಭಕ್ತಿ ಸಾರುವ ಕನ್ನಡ ಕಿರುಚಿತ್ರಗಳು ಹಾಗೂ ಗೀತೆಗಳ ನಿರ್ಮಾಣ, ಭಕ್ತಿಗೀತೆಗಳ ಧ್ವನಿಮುದ್ರಿಕೆ ತಯಾರಿಕೆ, ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ವೈದ್ಯಕೀಯ ಶಿಬಿರಗಳ ಆಯೋಜನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ.
ರೋಟರಿ ರಸ್ತೆ ಸುರಕ್ಷತೆ ಮತ್ತು ಜಾಗೃತಿ ವಿಭಾಗದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಅಧ್ಯಕ್ಷರಾಗಿ 180ಕ್ಕೂ ಅಧಿಕ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಈಗಾಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ 20ಕ್ಕೂ ಅಧಿಕ ಪ್ರಶಸ್ತಿ ಮತ್ತು ಗೌರವಗಳು ಲಭಿಸಿವೆ.
ತಾಂತ್ರಿಕ ಕ್ಷೇತ್ರದ ವೃತ್ತಿಪರ ಸಾಧನೆಯ ಜತೆಗೆ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಮಾಜಸೇವೆಯಲ್ಲಿ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಹರ್ಷಾಕುಮಾರ್ ರೈ ಮಾಡಾವು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಪುತ್ತೂರು
‘ಶ್ರೀಧರ್ ಭಟ್ ಬ್ರದರ್ಸ್ ಫರ್ನಿಚರ್’ ಶೋರೂಂನಲ್ಲಿ ದೀಪಾವಳಿ ವಿಶೇಷ ಸೇಲ್ – ಈಗ ಖರೀದಿಸಿ ಹಲವು ಗಿಫ್ಟ್ ಪಡೆಯಿರಿ
ಪುತ್ತೂರು: ಸೋಫಾ, ಟೇಬಲ್, ಕುರ್ಚಿಗಳು ಪ್ರತೀ ಮನೆ ಮತ್ತು ಕಚೇರಿಗಳ ಅತ್ಯಗತ್ಯತೆಯೂ ಹೌದು. ವೈವಿಧ್ಯಮಯ ಮತ್ತು ದೀರ್ಘಬಾಳಿಕೆಯ ವಿಚಾರದಲ್ಲಿ ಪುತ್ತೂರು ಭಾಗದವರ ಅನೇಕ ವರ್ಷಗಳ ನಂಬಿಕೆಯ ಶೋರೂಂ ಆಗಿರುವ ಶ್ರೀಧರ್ ಭಟ್ ಬ್ರದರ್ಸ್ ಈ ಬಾರಿಯ ದೀಪಾವಳಿ ವಿಶೇಷ ಸೇಲ್ ನ.02ರಿಂದ ನ. 14ರವರೆಗೆ ನಡೆಯಲಿದೆ.
ಈಗಾಗಲೇ, ಎಲ್ಲಾ ವರ್ಗದ ಗ್ರಾಹಕರ ಮನಸ್ಸಿಗೊಪ್ಪುವಂತಹ ಫರ್ನಿಚರ್‌ಗಳು ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. ಬೆಡ್ ಖರೀದಿಯೊಂದಿಗೆ ಪಿಲ್ಲೋ ಮತ್ತು ಬೆಡ್‌ಶೀಟ್ ಉಚಿತವಿದ್ದು, ಗ್ರಾಹಕರು ತಾವು ನೀಡುವ ಹಣಕ್ಕೆ ಉತ್ತಮ ಮೌಲ್ಯವನ್ನು ಪಡೆದುಕೊಳ್ಳಬಹುದು.
ಇನ್ನುಳಿದಂತೆ, ಟಿವಿಸ್ಟ್ಯಾಂಡ್ ಮತ್ತು ಇನ್ನಿತರ ಫರ್ನಿಚರ್ ಉತ್ಪನ್ನಗಳು ಹಾಗೂ ಎಲ್ಲಾ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಇದೆ. ಗ್ರಾಹಕರು ಈ ಎಲ್ಲಾ ಆಫರ್‌ಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಶೈಕ್ಷಣಿಕ
Vivekananda Autonomous College Puttur Rank Holders 2026: ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ರ‍್ಯಾಂಕ್ ಪಟ್ಟಿ ಪ್ರಕಟ

Vivekananda Autonomous College Puttur Rank Holders 2026: ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಒಟ್ಟು 10 ರ‍್ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
2023-26ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಎಂಟು ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ. ಬಿ.ಎ ವಿಭಾಗದಲ್ಲಿ ವಾಮನ ಆಚಾರ್ಯ ಮತ್ತು ಸುಮಿತಾ ದಂಪತಿಯ ಪುತ್ರಿ ಸುಮನಾ (95.41%) ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಬಿಎಸ್ಸಿ ವಿಭಾಗದಲ್ಲಿ ಜಿ. ಪುರುಷೋತ್ತಮ ಪ್ರಭು ಮತ್ತು ಜಿ. ವಿದ್ಯಾ ಪ್ರಭು ದಂಪತಿಯ ಪುತ್ರಿ ಅನುಶ್ರೀ ಜಿ. ಪ್ರಭು (96.38%) ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಬಿಬಿಎ ವಿಭಾಗದಲ್ಲಿ ಪ್ರದೀಪ್ ಮತ್ತು ಗೀತಾ ಬಿ. ದಂಪತಿಯ ಪುತ್ರಿ ಅನುಶ್ರೀ (94.21%) ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಬಿಕಾಂ ವಿಭಾಗದಲ್ಲಿ ರಾಮಚಂದ್ರ ವಿ. ಮತ್ತು ವಾಣಿ ರಾಮಚಂದ್ರ ದಂಪತಿಯ ಪುತ್ರಿ ಶರಣ್ಯ ವಿ.ಆರ್. (98.79%) ಪ್ರಥಮ ರ‍್ಯಾಂಕ್ ಗಳಿಸಿದರೆ, ಶ್ರೀಪತಿ ವಿ. ಮತ್ತು ವೀಣಾ ಶ್ರೀಪತಿ ದಂಪತಿಯ ಪುತ್ರಿ ಸಿಂಧೂರ ವಿ.ಎಸ್. (98.29%) ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
ಬಿಸಿಎ ವಿಭಾಗದಲ್ಲಿ ಜಯರಾಮ ಹೆಗ್ಡೆ ಮತ್ತು ಗಾಯತ್ರಿ ದೇವಿ ಪಿ. ದಂಪತಿಯ ಪುತ್ರಿ ಮಹಿ ಜೆ. ಹೆಗ್ಡೆ (96.13%) ಪ್ರಥಮ ರ‍್ಯಾಂಕ್, ಗೋವಿಂದ ಪ್ರಸಾದ್ ಮತ್ತು ವಿದ್ಯಾ ದಂಪತಿಯ ಪುತ್ರ ಶ್ರೀನಿಧಿ ಎ. (95.3%) ದ್ವಿತೀಯ ರ‍್ಯಾಂಕ್ ಹಾಗೂ ಶೇಖರ ಪೂಜಾರಿ ಮತ್ತು ಸುಮಿತ್ರ ಬಿ.ಕೆ. ದಂಪತಿಯ ಪುತ್ರಿ ಸಮೃದ್ಧಿ (94.96%) ತೃತೀಯ ರ‍್ಯಾಂಕ್ ಗಳಿಸಿದ್ದಾರೆ.
ಇನ್ನು 2024-26ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿಯೂ ಕಾಲೇಜಿನ ವಿದ್ಯಾರ್ಥಿಗಳು ಎರಡು ಪ್ರಥಮ ರ‍್ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.
ಎಂ.ಕಾಂ ವಿಭಾಗದಲ್ಲಿ ರಘು ಮತ್ತು ಸುನಿತಾ ದಂಪತಿಯ ಪುತ್ರ ಪವನ್ ರಾಜ್ (9.05 ಸಿಜಿಪಿಎ) ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಎಂ.ಎ. ಜೆಎಂಸಿ ವಿಭಾಗದಲ್ಲಿ ವೆಂಕಟರಮಣ ಭಟ್ ಬಿ. ಮತ್ತು ಗುಣಶ್ರೀ ದಂಪತಿಯ ಪುತ್ರಿ ಪಂಚಮಿ ಕುಮಾರಿ ಬಿ. (8.09 ಸಿಜಿಪಿಎ) ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಶ್ರೀಕೃಷ್ಣ ಗಣರಾಜ ಭಟ್ ಎಸ್. ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರಕಾಶ್ ಕುಮಾರ್ ಪಿ. ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ನಿಧನ ವಾರ್ತೆ
ಪುತ್ತೂರಿನ ಖ್ಯಾತ ಉದ್ಯಮಿ ಸಂತೋಷ್ ಕುಮಾರ್ ಎ. ನಿಧನ

ಪುತ್ತೂರು: ಪುತ್ತೂರಿನ ಪ್ರಸಿದ್ಧ ಉದ್ಯಮಿ, ಶಿವಾನಿ ಬಾಟ್ಲಿಂಗ್ (ಮಹೇಶ್ವರ ಬಾಟ್ಲಿಂಗ್ ಕಂಪನಿ) ಹಾಗೂ ಸಂತೋಷ್ ವೈನ್ಸ್ ಸಂಸ್ಥೆಗಳ ಮಾಲೀಕ, ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್ ಎ. (69) ಅವರು ನ. 7ರಂದು ನಿಧನರಾದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾಗಿಯೂ, ಪರಿವಾರ ಬಂಟರ ಸಂಘ ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಉದ್ಯಮ ಕ್ಷೇತ್ರದ ಜತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದ ಅವರು ಪುತ್ತೂರಿನ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು.
ಮಂಗಳೂರಿನಲ್ಲಿ ನ. 4ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಅವರು, ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ನೆಹರೂನಗರ ಕಾಯರ್ ಮಜಲು ನಿವಾಸಿಯಾಗಿದ್ದ ಅವರು ಪತ್ನಿ ನಿಶಾ, ಪುತ್ರಿಯರಾದ ನೇಹಾ ಸಂದೀಪ್ ನಾಯಕ್, ಸಮೀಕ್ಷಾ ಸುಶಿತ್ ನಾಯಕ್, ಪುತ್ರ ರಾಹುಲ್, ಸಹೋದರ ನವೀನ್ ನಾಯಕ್, ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ನ. 9ರಂದು ಅಂತ್ಯಸಂಸ್ಕಾರ
















