Connect with us

ರಾಜಕೀಯ

Israel election-ಇಸ್ರೇಲ್ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ: ನೆತನ್ಯಾಹು ಮೈತ್ರಿಕೂಟಕ್ಕೆ ಬಹುಮತದ ಕೊರತೆ

Published

on



Ad Widget

Ad Widget

Ad Widget

Ad Widget

ಇಸ್ರೇಲ್‌ನ 120 ಸದಸ್ಯ ಬಲದ ಸಂಸತ್ತಿನ ಚುನಾವಣೆಯ ಅಂತಿಮ ಫಲಿತಾಂಶವನ್ನು ಸೆಂಟ್ರಲ್ ಇಲೆಕ್ಷನ್ಸ್ ಕಮಿಟಿ (ಸಿಇಸಿ) ಶುಕ್ರವಾರ (ಅ.30) ಪ್ರಕಟಿಸಿದೆ. ನೆತನ್ಯಾಹು ನೇತೃತ್ವದ ಲಿಕುಡ್ ಮೈತ್ರಿಕೂಟ 53 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತಕ್ಕಿಂತ 8 ಸ್ಥಾನಗಳ ಕೊರತೆ ಎದುರಿಸಿದೆ.

Ad Widget

Ad Widget

Ad Widget

Ad Widget

ಜೆರುಸಲೇಂ: ಇಸ್ರೇಲ್‌ನ 120 ಸದಸ್ಯ ಬಲದ ಸಂಸತ್ತಿನ ಚುನಾವಣೆಯ ಅಂತಿಮ ಫಲಿತಾಂಶವನ್ನು ಸೆಂಟ್ರಲ್ ಇಲೆಕ್ಷನ್ಸ್ ಕಮಿಟಿ (ಸಿಇಸಿ) ಶುಕ್ರವಾರ (ಅ.30) ಪ್ರಕಟಿಸಿದೆ. ನೆತನ್ಯಾಹು ನೇತೃತ್ವದ ಲಿಕುಡ್ ಮೈತ್ರಿಕೂಟ 53 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತಕ್ಕಿಂತ 8 ಸ್ಥಾನಗಳ ಕೊರತೆ ಎದುರಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಮತ್ತೊಂದೆಡೆ, ವಿಪಕ್ಷ ಐಸೆನ್‌ಕೋಟ್ ನೇತೃತ್ವದ ಮೈತ್ರಿಕೂಟ 48 ಸ್ಥಾನಗಳನ್ನು ಗಳಿಸಿದೆ. ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಅತಂತ್ರ ಸಂಸತ್ತು ನಿರ್ಮಾಣವಾಗಿದೆ. ಈ ಚುನಾವಣೆಯಲ್ಲಿ ಅರಬ್ ಬೆಂಬಲಿತ ಪಕ್ಷಗಳು ಗಮನಾರ್ಹ ಸಂಖ್ಯೆಯ ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Ad Widget

Ad Widget <> Ad Widget

ಅಂತಿಮ ಫಲಿತಾಂಶದ ಪ್ರಕಾರ, ಲಿಕುಡ್ 27, ಯಶಾರ್ 21, ಬಿ’ಯಾಚಾದ್ 12, ಜಾಯಿಂಟ್ ಲಿಸ್ಟ್ 11, ದಿ ಡೆಮೋಕ್ರಾಟ್ಸ್ 8, ರಾಮ್ 8, ಇಸ್ರಾಯೆಲ್ ಬೇಟೆನು 7, ಯುನೈಟೆಡ್ ತೋರಾ ಜುದಾಯಿಸಂ 7, ಒಟ್ಟಾ ಯೆಹುದಿತ್ 7, ಶಾಸ್ 6 ಹಾಗೂ ರಿಲಿಜಿಯಸ್ ಜಿಯೋನಿಸಂ 6 ಸ್ಥಾನಗಳನ್ನು ಪಡೆದಿವೆ.



Ad Widget

ಸರ್ಕಾರ ರಚಿಸಲು 120 ಸದಸ್ಯ ಬಲದ ಸಂಸತ್ತಿನಲ್ಲಿ ಕನಿಷ್ಠ 61 ಸ್ಥಾನಗಳ ಅಗತ್ಯವಿದೆ. ಅರಬ್ ನೇತೃತ್ವದ ಪಕ್ಷಗಳು ಒಟ್ಟು 19 ಸ್ಥಾನಗಳನ್ನು ಗೆದ್ದಿವೆ ಎಂದು ವರದಿ ತಿಳಿಸಿದ್ದು, ಇತರ ಪಕ್ಷಗಳೊಂದಿಗೆ ಅವುಗಳ ಸ್ಥಾನಗಳನ್ನು ಸೇರಿಸಿ 19+11+8 ಎಂದು ಉಲ್ಲೇಖಿಸಲಾಗಿದೆ.

Ad Widget

Ad Widget

ಐಸೆನ್‌ಕೋಟ್ ಮೈತ್ರಿಕೂಟದ 48 ಸ್ಥಾನಗಳಿಗೆ ಅರಬ್ ಮೈತ್ರಿಕೂಟದ ಬೆಂಬಲ ದೊರೆತರೆ, ಸರ್ಕಾರ ರಚನೆಗೆ ಅಗತ್ಯವಾದ ಸಂಖ್ಯಾಬಲ ಸಿಗಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿದೆ. ನೆತನ್ಯಾಹು ವಿರೋಧಿ ಪಕ್ಷಗಳು ಒಗ್ಗೂಡುತ್ತವೆಯೇ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಗೆ ನಿರ್ಣಾಯಕವಾಗಲಿದೆ.

Ad Widget
Click to comment

Leave a Reply

ರಾಜಕೀಯ

Ashok Rai-NIKHARA POLITICAL EXCLUSIVE: ಶಾಸಕ ಅಶೋಕ್‌ ರೈ ವಿರುದ್ಧ ತೊಡೆತಟ್ಟಿದ್ದ ಹಕೀಂ ಕೂರ್ನಡ್ಕ ಈಗ ದೋಸ್ತಿ?! ತೆರೆಮರೆಯಲ್ಲಿ ನಡೆದಿದ್ದೇನು ?

Published

on



Ad Widget

Ad Widget

Ad Widget

Ad Widget

ಶಾಸಕ ಅಶೋಕ್‌ ರೈ ಅವರ ಕಾರ್ಯವೈಖರಿಯನ್ನು ನಿರಂತರವಾಗಿ ಟೀಕಿಸುತ್ತಾ, ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತ ಹಕೀಂ ಕೂರ್ನಡ್ಕ ಹಾಗೂ ಅಶೋಕ್‌ ರೈ ಅವರ ನಡುವಿನ ಮುನಿಸಿಗೆ ಕೊನೆಗೂ ತೆರೆ ಬಿದ್ದಿದೆಯೇ? ಇಬ್ಬರ ನಡುವೆ ರಾಜಿ ಸಂಧಾನ ನಡೆದಿದ್ದು, ಮತ್ತೆ ಒಂದಾಗುವ ಸೂಚನೆಗಳು ಕಾಣಿಸಿಕೊಂಡಿವೆ. ಈ ಕುರಿತು ನಿಖರ ನ್ಯೂಸ್‌ಗೆ Exclusive ಮಾಹಿತಿ ಲಭಿಸಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಶಾಸಕ ಅಶೋಕ್‌ ರೈ ಅವರ ಕಾರ್ಯವೈಖರಿಯನ್ನು ನಿರಂತರವಾಗಿ ಟೀಕಿಸುತ್ತಾ, ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತ ಹಕೀಂ ಕೂರ್ನಡ್ಕ ಹಾಗೂ ಅಶೋಕ್‌ ರೈ ಅವರ ನಡುವಿನ ಮುನಿಸಿಗೆ ಕೊನೆಗೂ ತೆರೆ ಬಿದ್ದಿದೆಯೇ? ಇಬ್ಬರ ನಡುವೆ ರಾಜಿ ಸಂಧಾನ ನಡೆದಿದ್ದು, ಮತ್ತೆ ಒಂದಾಗುವ ಸೂಚನೆಗಳು ಕಾಣಿಸಿಕೊಂಡಿವೆ. ಈ ಕುರಿತು ನಿಖರ ನ್ಯೂಸ್‌ಗೆ Exclusive ಮಾಹಿತಿ ಲಭಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಕಾಂಗ್ರೆಸ್‌ನ ಮೂಲ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಹಕೀಂ ಕೂರ್ನಡ್ಕ, ಒಂದು ಕಾಲದಲ್ಲಿ ಅಶೋಕ್‌ ರೈ ಅವರ ಬೆಂಬಲಿಗರಾಗಿದ್ದರು ಎನ್ನಲಾಗಿದೆ . ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಶೋಕ್‌ ರೈ ಪರವಾಗಿ ಕೆಲಸ ಮಾಡಿದ್ದಾಗಿ ಹಲವು ಬಾರಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ, ಅಶೋಕ್‌ ರೈ ಶಾಸಕರಾಗಿ ಆಯ್ಕೆಯಾದ ಬಳಿಕ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು.

Ad Widget

Ad Widget <> Ad Widget

ಶಾಸಕರಾಗಿ ಒಂದು ವರ್ಷ ಕಳೆಯುವಷ್ಟರಲ್ಲಿ ಇಬ್ಬರ ನಡುವಿನ ಭಿನ್ನಾಭಿಪ್ರಾಯ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಹಕೀಂ ಕೂರ್ನಡ್ಕ ಅವರು ಅಶೋಕ್‌ ರೈ ಅವರ ಕಟು ಟೀಕಾಕಾರರಾಗಿ ಗುರುತಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅಶೋಕ್‌ ರೈಯವರನ್ನು ಟೀಕಿಸಲು ಬಿಜೆಪಿ ಹಾಗೂ ಪುತ್ತಿಲ ಪರಿವಾರದವರು ಹಿಂದೇಟು ಹಾಕುತ್ತಿದ್ದರು . ಆ ಕಾಲದಲ್ಲಿ ಅಶೋಕ್‌ ರೈ ವಿರೋಧಿಗಳ ಪಾಲಿಗೆ ಹಕೀಂ ಕೂರ್ನಡ್ಕ “ಓಯಸೀಸ್‌” ನಂತೆ ಗೋಚರಿಸಿದ್ದರು.



Ad Widget

ಆಗ ಹಕೀಂ ಅವರು ಶಾಸಕರ ಕಾರ್ಯವೈಖರಿಯನ್ನು ಪ್ರಶ್ನಿಸಿ ಮಾಧ್ಯಮ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ವಾಯ್ಸ್‌ ಮೆಸೇಜ್‌ಗಳು ಹಾಗೂ ವಿವಿಧ ಆರೋಪಗಳ ಮೂಲಕ ನಿರಂತರ ವಾಗ್ದಾಳಿ ನಡೆಸುತ್ತಿದ್ದರು. ಅಶೋಕ್‌ ರೈ ಅವರನ್ನು” ಆರ್‌ಎಸ್‌ಎಸ್‌ ಬೆಂಬಲಿಗ” ಹಾಗೂ “ಮುಸ್ಲಿಂ ವಿರೋಧಿ” ಎಂಬಂತೆ ಬಿಂಬಿಸುವ ಪ್ರಯತ್ನವನ್ನೂ ತಮ್ಮ ಹೇಳಿಕೆಗಳಲ್ಲಿ ಮಾಡುತ್ತಿದ್ದರು.

Ad Widget

Ad Widget

ಯು.ಟಿ ಖಾದರ್‌ ಮಧ್ಯಸ್ಥಿಕೆಯಲ್ಲಿ ಈ ಹಿಂದೆಯೂ ಸಂಧಾನ:
ಈ ನಡುವೆ ಹಕೀಂ ಕೂರ್ನಡ್ಕ ಹಾಗೂ ಸಚಿವ ಯು.ಟಿ ಖಾದರ್‌ ಅವರ ನಡುವೆ ಆತ್ಮೀಯ ಒಡನಾಟವಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ, ಸುಮಾರು ಒಂದೂವರೆ ವರ್ಷದ ಹಿಂದೆ ಇಬ್ಬರ ನಡುವಿನ ಸಂಘರ್ಷ ತಾರಕಕ್ಕೇರಿದ್ದ ಸಂದರ್ಭದಲ್ಲಿ ಕೂರ್ನಡ್ಕ ಮಸೀದಿಗೆ ಭೇಟಿ ನೀಡಿದ್ದ ಖಾದರ್‌, ಅಶೋಕ್‌ ರೈ ಹಾಗೂ ಹಕೀಂ ಕೂರ್ನಡ್ಕ ಅವರ ನಡುವೆ ಹಸ್ತಲಾಘವ ಮಾಡಿಸಿ ಸಂಧಾನಕ್ಕೆ ಮುಂದಾಗಿದ್ದರು. ಆ ಬಳಿಕ ಸುಮಾರು ಒಂದು ವರ್ಷದವರೆಗೆ ಹಕೀಂ ಅವರು ಅಶೋಕ್‌ ರೈ ವಿರುದ್ಧ ಯಾವುದೇ ಬಹಿರಂಗ ಟೀಕೆಗಳನ್ನು ಮಾಡಿರಲಿಲ್ಲ.

ಆದರೆ, ಈ ಮೌನ ಹೆಚ್ಚು ಕಾಲ ಮುಂದುವರಿಯಲಿಲ್ಲ. ಮತ್ತೆ ತಮ್ಮ ಟೀಕಾ ಪ್ರವೃತ್ತಿಯನ್ನು ಆರಂಭಿಸಿದ ಹಕೀಂ, ಪತ್ರಿಕಾಗೋಷ್ಠಿ ಹಾಗೂ ಸಾಮಾಜಿಕ ಜಾಲತಾಣಗಳ ವಾಯ್ಸ್‌ ಮೆಸೇಜ್‌ಗಳ ಮೂಲಕ ಶಾಸಕರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದರು.

ಪ್ರೆಸ್‌ ಕ್ಲಬ್‌ ಎದುರಿನ ಗಲಾಟೆ ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು
ತಿಂಗಳ ಹಿಂದೆ ಪುತ್ತೂರು ಪ್ರೆಸ್‌ ಕ್ಲಬ್‌ ಮುಂಭಾಗ ಹಕೀಂ ಕೂರ್ನಡ್ಕ ಹಾಗೂ ಅಶೋಕ್‌ ರೈ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು, ಅದು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಘಟನೆಗೆ ಸಂಬಂಧಿಸಿದಂತೆ ಅಶೋಕ್‌ ರೈ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಕೀಂ ಕೂರ್ನಡ್ಕ ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣವೂ ದಾಖಲಾಗಿತ್ತು. ಅಷ್ಟೇ ಅಲ್ಲದೆ, ತಮ್ಮನ್ನು ಕೊಲ್ಲಿಸುವ ಉದ್ದೇಶದಿಂದಲೇ ಅಶೋಕ್‌ ರೈ ಅವರು ಬೆಂಬಲಿಗರನ್ನು ಪ್ರೆಸ್‌ ಕ್ಲಬ್‌ ಬಳಿ ಕಳುಹಿಸಿದ್ದರು ಎಂಬ ಗಂಭೀರ ಆರೋಪವನ್ನೂ ಹಕೀಂ ಮಾಡಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ಕೂಡ ಹಕೀಂ ಅವರ ಬೆಂಬಲಕ್ಕೆ ಪರೋಕ್ಷವಾಗಿ ನಿಂತಿತ್ತು.

ನಿರೀಕ್ಷಣಾ ಮಂದಿರದಲ್ಲಿ ಒಂದೂವರೆ ಗಂಟೆ ಮಾತುಕತೆ!
ಇಷ್ಟೆಲ್ಲ ರಾಜಕೀಯ ಸಂಘರ್ಷಗಳ ನಡುವೆಯೇ ಇದೀಗ ಇಬ್ಬರ ನಡುವೆ ಸಂಧಾನದ ಮಾತುಗಳು ಕೇಳಿಬರುತ್ತಿವೆ. ಪುತ್ತೂರಿನ ಹಿರಿಯ ಕಾಂಗ್ರೆಸ್‌ ಮುಖಂಡರೊಬ್ಬರ ಮಧ್ಯಸ್ಥಿಕೆಯಲ್ಲಿ ಅಶೋಕ್‌ ರೈ ಹಾಗೂ ಹಕೀಂ ಕೂರ್ನಡ್ಕ ನಡುವೆ ರಾಜಿ ಮಾತುಕತೆ ನಡೆದಿದೆ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ನಡೆಯುತ್ತಿದೆ.

ಪಕ್ಷದ ಮೂಲಗಳು ನಿಖರ ನ್ಯೂಸ್‌ಗೆ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಶನಿವಾರ ಪುತ್ತೂರಿನ ನಿರೀಕ್ಷಣಾ ಮಂದಿರದಲ್ಲಿ ಅಶೋಕ್‌ ರೈ ಹಾಗೂ ಹಕೀಂ ಕೂರ್ನಡ್ಕ. ಮುಚ್ಚಿದ ಕೋಣೆಯೊಳಗೆ ಇಬ್ಬರೇ ಕೂತು ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿ ಭಿನ್ನಾಭಿಪ್ರಾಯಕ್ಕೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದ್ದಾರೆ ಎನ್ನಲಾಗಿದೆ ಈ ವೇಳೆ, ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಕೂರ್ನಡ್ಕ ಪ್ರೀಮಿಯರ್‌ ಲೀಗ್‌ಗೆ ಅಶೋಕ್‌ ರೈ ಆಹ್ವಾನ!
ಇಬ್ಬರ ನಡುವಿನ ಸಂಬಂಧ ಸುಧಾರಿಸಿರುವುದಕ್ಕೆ ಮತ್ತೊಂದು ಬೆಳವಣಿಗೆಯೂ ಸಾಕ್ಷಿಯಾಗಿದೆ. ಹಕೀಂ ಕೂರ್ನಡ್ಕ ಪ್ರತಿವರ್ಷ ಆಯೋಜಿಸುವ ‘ಕೂರ್ನಡ್ಕ ಪ್ರೀಮಿಯರ್‌ ಲೀಗ್‌ – ನಾಡ ಹಬ್ಬ‘ ಕ್ರಿಕೆಟ್‌ ಪಂದ್ಯಾವಳಿಗೆ ಈ ಬಾರಿ ಸಚಿವ ಯುಟಿ ಖಾದರ್‌ ಅವರೊಂದಿಗೆ ಶಾಸಕ ಅಶೋಕ್‌ ರೈ ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಇಂದು (ಶನಿವಾರ) ಪುತ್ತೂರು ಶಾಸಕರ ಕಚೇರಿಗೆ ಭೇಟಿ ನೀಡಿದ ಹಕೀಂ ಕೂರ್ನಡ್ಕ, ಅಶೋಕ್‌ ರೈ ಅವರನ್ನು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಈ ಬೆಳವಣಿಗೆ ಇಬ್ಬರ ನಡುವಿನ ಹಿಂದಿನ ಕಹಿ ಘಟನೆಗಳನ್ನು ಮರೆತು ಮತ್ತೆ ಸೌಹಾರ್ದ ಸಂಬಂಧ ಬೆಳೆಸುವ ಪ್ರಯತ್ನ ನಡೆಯುತ್ತಿರುವುದರ ಸ್ಪಷ್ಟ ಸೂಚನೆಯಾಗಿ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಒಟ್ಟಿನಲ್ಲಿ, ನಿರಂತರ ಟೀಕೆ, ಆರೋಪ-ಪ್ರತ್ಯಾರೋಪ ಹಾಗೂ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದ ರಾಜಕೀಯ ಸಂಘರ್ಷಕ್ಕೆ ಈಗ ಸಂಧಾನದ ಮೂಲಕ ವಿರಾಮ ಸಿಗಲಿದೆಯೇ ಎಂಬ ಕುತೂಹಲ ಪುತ್ತೂರಿನ ಕಾಂಗ್ರೆಸ್‌ ವಲಯದಲ್ಲಿ ಮೂಡಿದೆ. ಈ ಸಂಧಾನ ಎಷ್ಟು ಕಾಲ ಮುಂದುವರಿಯಲಿದೆ? ಹಕೀಂ ಕೂರ್ನಡ್ಕ ಅವರು ಇನ್ನು ಮುಂದೆ ಅಶೋಕ್‌ ರೈ ವಿರುದ್ಧದ ಟೀಕಾಸ್ತ್ರಗಳನ್ನು ಕೆಳಗಿಡಲಿದ್ದಾರೆಯೇ? ಅಥವಾ ಇದು ತಾತ್ಕಾಲಿಕ ರಾಜಕೀಯ ಕದನ ವಿರಾಮವೇ? ಎಂಬುದನ್ನು ಕಾದು ನೋಡಬೇಕಿದೆ.

Ad Widget
Continue Reading

ಮೈಸೂರು

H. Vishwanath-ʻಬಾಂಬೆ ಡೇಸ್ʼ ಪುಸ್ತಕ ಬಿಡುಗಡೆಯಾದರೆ ರಾಜ್ಯ ರಾಜಕೀಯದಲ್ಲಿ ಸಂಚಲನ: ಎಚ್‌. ವಿಶ್ವನಾಥ್

Published

on



Ad Widget

Ad Widget

Ad Widget

Ad Widget

ʻಬಾಂಬೆ ಡೇಸ್ʼ ಪುಸ್ತಕ ಬಿಡುಗಡೆಯಾದರೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಲಿದೆ. ಹೀಗಾಗಿ, ಪುಸ್ತಕ ಬರವಣಿಗೆ ಪೂರ್ಣಗೊಂಡಿದ್ದರೂ ಅದನ್ನು ಪ್ರಕಟಿಸದಿರಲು ನಿರ್ಧರಿಸಿದ್ದೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್‌. ವಿಶ್ವನಾಥ್ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಮೈಸೂರು: ʻಬಾಂಬೆ ಡೇಸ್ʼ ಪುಸ್ತಕ ಬಿಡುಗಡೆಯಾದರೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಲಿದೆ. ಹೀಗಾಗಿ, ಪುಸ್ತಕ ಬರವಣಿಗೆ ಪೂರ್ಣಗೊಂಡಿದ್ದರೂ ಅದನ್ನು ಪ್ರಕಟಿಸದಿರಲು ನಿರ್ಧರಿಸಿದ್ದೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್‌. ವಿಶ್ವನಾಥ್ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈಗಾಗಲೇ ಜನರು ರಾಜಕೀಯದ ಬಗ್ಗೆ ಸಾಕಷ್ಟು ಅಸಹ್ಯಪಟ್ಟುಕೊಂಡಿದ್ದಾರೆ. ನನ್ನ ಪುಸ್ತಕ ಬಿಡುಗಡೆಯಾದರೆ ರಾಜಕೀಯದ ಬಗ್ಗೆ ಜನರಲ್ಲಿ ಮತ್ತಷ್ಟು ಅಸಹ್ಯ ಮೂಡುವ ಸಾಧ್ಯತೆಯಿದೆ” ಎಂದು ಹೇಳಿದರು.

Ad Widget

Ad Widget <> Ad Widget

ಯತೀಂದ್ರ ಇತಿಹಾಸ ತಿಳಿದು ಮಾತನಾಡಲಿ
ರಾಜವಂಶಸ್ಥರ ಕುರಿತು ಸಚಿವ ಡಾ. ಯತೀಂದ್ರ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಶ್ವನಾಥ್, “ಅನುಭವ ಇಲ್ಲದವರಿಗೆ ಜವಾಬ್ದಾರಿ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ರಾಜವಂಶಸ್ಥರ ಕುರಿತು ಯತೀಂದ್ರ ಮಾತನಾಡಿರುವ ಹಗುರವಾದ ಹೇಳಿಕೆಯೇ ಸಾಕ್ಷಿ. ಸಿದ್ದರಾಮಯ್ಯ ಮತ್ತು ಅವರ ಪುತ್ರ ಮೈಸೂರು ರಾಜಮನೆತನದ ಇತಿಹಾಸ ಹಾಗೂ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು” ಎಂದು ಹೇಳಿದರು.



Ad Widget

“ಚಾಮುಂಡೇಶ್ವರಿ ಉಪಚುನಾವಣೆಯ ಪ್ರಚಾರಕ್ಕೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಆಗಮಿಸದೇ ಇದ್ದಿದ್ದರೆ ಸಿದ್ದರಾಮಯ್ಯ ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ” ಎಂದು ಎಚ್‌. ವಿಶ್ವನಾಥ್ ಟೀಕಿಸಿದರು.

Continue Reading

ರಾಜಕೀಯ

Yatnal-ಬಿಜೆಪಿ ಸೇರ್ಪಡೆಗೆ ಯತ್ನಾಳ್‌ರಿಂದ ಎರಡು ಷರತ್ತು? ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದೇನು?

Published

on



Ad Widget

Ad Widget

Ad Widget

Ad Widget

ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಪಕ್ಷಕ್ಕೆ ಮರಳಲಿದ್ದಾರೆ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ತೀವ್ರಗೊಂಡಿದೆ. ಈ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಯತ್ನಾಳ್‌ರೊಂದಿಗೆ ನಡೆದ ಮಾತುಕತೆ ಹಾಗೂ ಪಕ್ಷಕ್ಕೆ ಮರಳಲು ಅವರು ಮುಂದಿಟ್ಟಿರುವ ಎರಡು ಷರತ್ತುಗಳ ಕುರಿತು ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಪಕ್ಷಕ್ಕೆ ಮರಳಲಿದ್ದಾರೆ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ತೀವ್ರಗೊಂಡಿದೆ. ಈ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಯತ್ನಾಳ್‌ರೊಂದಿಗೆ ನಡೆದ ಮಾತುಕತೆ ಹಾಗೂ ಪಕ್ಷಕ್ಕೆ ಮರಳಲು ಅವರು ಮುಂದಿಟ್ಟಿರುವ ಎರಡು ಷರತ್ತುಗಳ ಕುರಿತು ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಹುಬ್ಬಳ್ಳಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮುಖಾಮುಖಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರು ನಾಯಕರು ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಇದಾದ ಬಳಿಕ ದೆಹಲಿಯಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲೂ ಯತ್ನಾಳ್ ಭಾಗವಹಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Ad Widget

Ad Widget <> Ad Widget

ವಿಜಯೇಂದ್ರ ಅಧ್ಯಕ್ಷ ಸ್ಥಾನ ತ್ಯಜಿಸಬೇಕು, 10 ವರ್ಷ ಸಿಎಂ ಆಗಬಾರದು!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸೇರ್ಪಡೆಗೆ ಎರಡು ಷರತ್ತುಗಳನ್ನು ವಿಧಿಸಿದ್ದಾರೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.



Ad Widget

ಯತ್ನಾಳ್ ಮುಂದಿಟ್ಟಿರುವ ಷರತ್ತುಗಳೆಂದರೆ:

Ad Widget

Ad Widget
  1. ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು.
  2. ಮುಂದಿನ 10 ವರ್ಷಗಳ ಕಾಲ ಮುಖ್ಯಮಂತ್ರಿ ಆಗುವುದಿಲ್ಲ ಎಂದು ವಿಜಯೇಂದ್ರ ಲಿಖಿತವಾಗಿ ಬರೆದುಕೊಡಬೇಕು.

ಈ ಕುರಿತು ಮಾತನಾಡಿದ ವಿಜಯೇಂದ್ರ, ಯತ್ನಾಳ್ ಅವರ ಷರತ್ತುಗಳಿಗೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಎಲ್ಲ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಬೇಕೆಂಬ ಸಂದೇಶವನ್ನು ಯತ್ನಾಳ್ ನೀಡಿದ್ದಾರೆ. ಅವರ ಷರತ್ತುಗಳಿಗೆ ತಾನು ಒಪ್ಪಿಕೊಂಡಿದ್ದು, ಮೊದಲ ದಿನದಿಂದಲೇ ಅದೇ ರೀತಿಯಲ್ಲಿ ನಡೆದುಕೊಳ್ಳುವುದಾಗಿ ವಿಜಯೇಂದ್ರ ಹೇಳಿದ್ದಾರೆ.

ಯತ್ನಾಳ್‌ರಿಂದ ದೆಹಲಿಯಲ್ಲಿ ಬಿಜೆಪಿ ನಾಯಕರ ಭೇಟಿ
ವಿಜಯೇಂದ್ರ ಅವರೊಂದಿಗಿನ ಮಾತುಕತೆಯ ಬಳಿಕ ಯತ್ನಾಳ್ ಅವರು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೂ ಚರ್ಚೆ ನಡೆಸಿದ್ದರು. ನಂತರ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ದೆಹಲಿಗೆ ತೆರಳಿದ್ದ ಯತ್ನಾಳ್, ಬಿಜೆಪಿ ನಾಯಕರನ್ನು ಹಾಗೂ ಸಚಿವರನ್ನು ಭೇಟಿಯಾಗಿದ್ದರು.

ಮೊದಲಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರ ನಿವಾಸದಲ್ಲಿ ಮಾತುಕತೆ ನಡೆದಿದ್ದು, ಬಳಿಕ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಅವರ ದೆಹಲಿ ನಿವಾಸದಲ್ಲಿ ಭೋಜನಕೂಟದ ಸಭೆ ನಡೆದಿತ್ತು ಎನ್ನಲಾಗಿದೆ.

ಇದೇ ವೇಳೆ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರೂ ಬಿಜೆಪಿಗೆ ಮರಳುವ ಕುರಿತು ಚರ್ಚೆಗಳು ನಡೆಯುತ್ತಿವೆ. ಯಡಿಯೂರಪ್ಪ ಕುಟುಂಬದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಯತ್ನಾಳ್ ಮತ್ತು ಈಶ್ವರಪ್ಪ ಅವರ ಪಕ್ಷ ಮರುಸೇರ್ಪಡೆ ವಿಚಾರ ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಎಲ್ಲಾ ರಾಜಕೀಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿವೆ ಎಂಬ ಕುತೂಹಲ ಮೂಡಿದ್ದು, ಮುಂದಿನ ಒಂದು ತಿಂಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!