ಶಿಕ್ಷಣ
Akshaya College-ಅಕ್ಷಯ ಕಾಲೇಜಿನ ಎನ್ ಎಸ್ ಎಸ್ ಘಟಕಕ್ಕೆ ‘ಮಜ್ಜಾರಡ್ಕ ಶ್ರೀ ವಿಷ್ಣು ಯುವಸಿರಿ ಸಾಂಘಿಕ ಪ್ರಶಸ್ತಿ-2026ʼ
ಅಕ್ಷಯ ಕಾಲೇಜು, ಸಂಪ್ಯ ಇದರ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕವು ತನ್ನ ಐದು ವರ್ಷಗಳ ನಿರಂತರ ಸಮಾಜಮುಖಿ ಸೇವಾ ಚಟುವಟಿಕೆಗಳ ಗುರುತಿಗಾಗಿ ಪ್ರತಿಷ್ಠಿತ ‘ಮಜ್ಜಾರಡ್ಕ ಶ್ರೀ ವಿಷ್ಣು ಯುವಸಿರಿ ಸಾಂಘಿಕ ಪ್ರಶಸ್ತಿ-2026’ಗೆ ಭಾಜನವಾಗಿದೆ.
ಪುತ್ತೂರು: ಅಕ್ಷಯ ಕಾಲೇಜು, ಸಂಪ್ಯ ಇದರ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕವು ತನ್ನ ಐದು ವರ್ಷಗಳ ನಿರಂತರ ಸಮಾಜಮುಖಿ ಸೇವಾ ಚಟುವಟಿಕೆಗಳ ಗುರುತಿಗಾಗಿ ಪ್ರತಿಷ್ಠಿತ ‘ಮಜ್ಜಾರಡ್ಕ ಶ್ರೀ ವಿಷ್ಣು ಯುವಸಿರಿ ಸಾಂಘಿಕ ಪ್ರಶಸ್ತಿ-2026’ಗೆ ಭಾಜನವಾಗಿದೆ.
ಕಳೆದ ಐದು ವರ್ಷಗಳಿಂದ ಕಾಲೇಜಿನ NSS ಘಟಕವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಸೇವಾ ಮನೋಭಾವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಸುಮಾರು 1000ಕ್ಕೂ ಅಧಿಕ ಸ್ವಯಂಸೇವಕರ ಭಾಗವಹಿಸುವಿಕೆಯೊಂದಿಗೆ ವೃದ್ಧಾಶ್ರಮ ಸೇವೆ, ಅನ್ನದಾನ, ಸ್ವಚ್ಛತಾ ಅಭಿಯಾನ, ರಕ್ತದಾನ, ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ, ಗಿಡ ನೆಡುವಿಕೆ, ರಸ್ತೆ ಸುರಕ್ಷತಾ ಜಾಗೃತಿ, ಅಂಗನವಾಡಿ ಚಟುವಟಿಕೆಗಳು ಹಾಗೂ ಗ್ರಾಮೀಣ ಸೇವಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವಲ್ಲಿ NSS ಘಟಕವು ಮಹತ್ವದ ಪಾತ್ರ ವಹಿಸಿದೆ. ಈ ಎಲ್ಲಾ ಸೇವಾ ಚಟುವಟಿಕೆಗಳಿಗೆ ಸಂದಿರುವ ಪ್ರಶಸ್ತಿಯು ಕಾಲೇಜಿನ NSS ಘಟಕದ ಸಂಘಟಿತ ಪ್ರಯತ್ನ, ಕಾರ್ಯಕ್ರಮಾಧಿಕಾರಿಗಳ ಮಾರ್ಗದರ್ಶನ ಹಾಗೂ ಸ್ವಯಂಸೇವಕರ ನಿಸ್ವಾರ್ಥ ಸೇವೆಗೆ ಸಂದ ಗೌರವವಾಗಿದೆ.
ನವೆಂಬರ್ 1ರಂದು ಮಜ್ಜಾರಡ್ಕದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು.
ಶಿಕ್ಷಣ
Vivekananda-ಅಂಚೆ ಇಲಾಖೆ ನಡೆಸಲ್ಪಟ್ಟ ಆಶುಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಿಗೆ ಬಹುಮಾನ
ಭಾರತೀಯ ಅಂಚೆ ಇಲಾಖೆ ಹಾಗೂ ಅಂಚೆ ಅಧೀಕ್ಷಕರ ಕಚೇರಿ, ಪುತ್ತೂರು ಇವರ ಪ್ರಾಯೋಜಕತ್ವದಲ್ಲಿ ಜಾಗೃತಿ ಸಪ್ತಾಹದ ಅಂಗವಾಗಿ “ಪ್ರಾಮಾಣಿಕತೆಯಿಂದ ಸಮೃದ್ಧಿ” ಎಂಬ ವಿಷಯದ ಕುರಿತು ನಡೆಸಲ್ಪಟ್ಟ ಆಶುಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಇವರಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ದೀಪ್ತಿ ಕುಬಣುರಾಯ (ಸುಧಾಕರ ಕುಬಣುರಾಯ ಮತ್ತು ಸವಿತಾ ಸಾವಿತ್ರಿ ದಂಪತಿಗಳ ಪುತ್ರಿ ) ಇವರು ದ್ವಿತೀಯ ಬಹುಮಾನ ಹಾಗೂ ಕುಮಾರಿ ವೈಷ್ಣಿ ರೈ (ಜಗನ್ನಾಥ ಎಂ ಮತ್ತು ಸೀಮಾ ಜೆ ರೈ ದಂಪತಿಗಳ ಪುತ್ರಿ ) ಇವರು ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ.
ಶಿಕ್ಷಣ
Narendra-ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ “ ವ್ಯವಹಾರ “ ಕ್ಲಬ್ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಮಾರುಕಟ್ಟೆಯು ವಿವಿಧ ರೀತಿಯ ಉತ್ಪನ್ನಗಳು ಮತ್ತು ವ್ಯವಹಾರ ಕಲ್ಪನೆಗಳಿಂದ ತುಂಬಿರುವಾಗ, ಹೊಸತನವನ್ನು ಮಾಡಲು ಮತ್ತು ವಿಶಿಷ್ಟವಾದ ಮತ್ತು ಉತ್ತಮವಾದದ್ದನ್ನು ಮಾಡಲು ಯಾವಾಗಲೂ ಅವಕಾಶವಿರುತ್ತದೆ. ವ್ಯವಹಾರದ ಯಶಸ್ಸು ಯೋಜನೆ ಮತ್ತು ಕಠಿಣ ಪರಿಶ್ರಮವನ್ನು ಅವಲಂಬಿಸಿರುತ್ತದೆ. ಅದ್ಭುತವಾದ ವ್ಯವಹಾರ ಕಲ್ಪನೆಯನ್ನು ಹೊಂದಿರುವುದು ಒಂದು ವಿಷಯ, ಆದರೆ ವ್ಯವಹಾರದ ಯಶಸ್ಸು ಕಲ್ಪನೆಯ ಕಾರ್ಯಗತಗೊಳಿಸುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಎಂದು ಪುತ್ತೂರಿನ ಉದ್ಯಮಿಗಳಾದ ಮತ್ತು ಮರಿಕೆ ಹೋಂ ಇಂಡಸ್ಟ್ರಿ ಇದರ ಮಾಲಕರಾದ ಸುಹಾಸ್ ಮರಿಕೆ ಇವರು ಹೇಳಿದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಉದ್ಯಮ ಕ್ಷೇತ್ರದ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸುವ ರಿಟೈಲ್ ಬ್ಯುಸಿನೆಸ್ ತರಬೇತಿ ಕರ‍್ಯಕ್ರಮ “ ವ್ಯವಹಾರ “ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವ್ಯವಹಾರದ ಯಶಸ್ಸಿಗಾಗಿ ಮುಖ್ಯವಾದ ಅದರ ಸ್ವರೂಪದ ಬಗ್ಗೆ ವಿವರಿಸುತ್ತಾ, ಅವರು ಮಾತನಾಡಿದರು.
ವ್ಯವಹಾರದ ಯಶಸ್ಸಿಗೆ ಉತ್ತಮ ಯೋಜನೆ ಅಥವಾ ಕಾರ್ಯತಂತ್ರವನ್ನು ರೂಪಿಸುವುದು ಅತ್ಯಗತ್ಯ. ವ್ಯವಹಾರದ ಗುರಿಗಳು ಮತ್ತು ಉದ್ದೇಶಗಳು ಮತ್ತು ಅವುಗಳನ್ನು ಸಾಧಿಸುವ ಮಾರ್ಗಗಳನ್ನು ವಿವರಿಸುವ ಸಮಗ್ರ ವ್ಯಾಪಾರ ಯೋಜನೆಯ ಬಗ್ಗೆ ತಿಳಿಸಿದರು.ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿ ಕೆಲವು ಸಲಹೆಗಳನ್ನು ನೀಡಿದರು.
ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಮತ್ತು ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ‍್ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಸಾನ್ವಿ ಸ್ವಾಗತಿಸಿ ವಂದಿಸಿದರು.
ಶಿಕ್ಷಣ
Ambika-ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿಕನ್ನಡ ರಾಜ್ಯೋತ್ಸವ
ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ ಕನ್ನಡ ಭಾಷೆಯು ನಮ್ಮ ನಾಡಿನ ಹೆಮ್ಮೆ ಮತ್ತು ಅಸ್ಮಿತೆಯ ಪ್ರತೀಕವಾಗಿದ್ದು, ಅದರ ಉಳಿವು ಮತ್ತು ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಪಾತ್ರವು ಮಹತ್ವದ್ದಾಗಿದೆ ಎಂದು ಹೇಳಿ, ಕನ್ನಡ ಭಾಷೆಯನ್ನು ಕೇವಲ ಸಂವಹನದ ಮಾಧ್ಯಮವಾಗಿ ಮಾತ್ರವಲ್ಲದೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿ ಕಾಣಬೇಕು. ವಿದ್ಯಾರ್ಥಿಗಳು ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ನಡೆಸಲ್ಪಟ್ಟ ಬಾಲಸಾಹಿತಿಗಳ ಸಮಾವೇಶದಲ್ಲಿ ಭಾಗವಹಿಸಿದ ಸಂಸ್ಥೆಯ ಬಾಲ ಸಾಹಿತಿಗಳು ಸ್ವರಚಿತ ಕವನ, ಪ್ರವಾಸ ಕಥನ ಹಾಗೂ ನನ್ನ ಆಪ್ತಮಿತ್ರೆ ಲೇಖನಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಅನರ್ಘ್ಯಶ್ರೀ ಹೆಚ್ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು.10ನೇ ತರಗತಿಯ ಅದಿತಿ ಎನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಶಿಕ್ಷಕಿಯರಾದ ಪ್ರಿಯಾಶ್ರೀ ಕೆ ಎಸ್ ಮತ್ತು ದಿವ್ಯಾರವರು ಕಾರ್ಯಕ್ರಮವನ್ನು ನಿರ್ವಹಿಸಿದರು.
-
ನಿಧನ ವಾರ್ತೆ10 hours ago
ಪುತ್ತೂರಿನ ಖ್ಯಾತ ಉದ್ಯಮಿ ಸಂತೋಷ್ ಕುಮಾರ್ ಎ. ನಿಧನ
-
ನಿಧನ ವಾರ್ತೆ15 hours agoSuicide-ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!
-
ಅಪರಾಧ18 hours ago
ಪುತ್ತೂರು : ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು
-
ರಾಜಕೀಯ16 hours agoAishwarya Hegde-ಸಿಎಂ ಮುಂದೆಯೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಿಚ್ಚಿಟ್ಟ ಪುತ್ರಿ ಐಶ್ವರ್ಯಾ ಹೆಗ್ಡೆ..!
-
ಸ್ಥಳೀಯ15 hours agoAddahole-ಅಡ್ಡಹೊಳೆಯಲ್ಲಿ ಕಾರಿನ ಮೇಲೆ ಮಗುಚಿಬಿದ್ದ ಕಂಟೈನರ್ ಲಾರಿ: ದಂಪತಿ, ಮಕ್ಕಳು ಪವಾಡಸದೃಶ ಪಾರು..!
-
ಉಡುಪಿ15 hours agoAnil Kumar-ಬಾಳೆಕುದ್ರು ಶ್ರೀಗಳು ಪರಾರಿಯಾಗಿಲ್ಲ, ವಿಗ್ರಹಗಳೂ ಕಳವಾಗಿಲ್ಲ: ಆಡಳಿತಾಧಿಕಾರಿ ಅನಿಲ್ ಕುಮಾರ್ ಸ್ಪಷ್ಟನೆ
-
ಬಿಗ್ ನ್ಯೂಸ್14 hours agoChatGPT- ಪತ್ನಿಗೆ ಹತ್ಯೆ ಸಂಚು ರೂಪಿಸಲು ಸಲಹೆ ನೀಡಿದ ಆರೋಪ: ಚಾಟ್ಜಿಪಿಟಿ ವಿರುದ್ಧ ಪತಿ ಕಾನೂನು ದಾವೆ..!
-
ಅಂತರ ರಾಜ್ಯ15 hours agoArrested-ನಿವೃತ್ತ ಐಎಎಸ್ ಅಧಿಕಾರಿ ಕೊಲೆ ಪ್ರಕರಣ: ಒಂದು ತಿಂಗಳ ಬಳಿಕ ರೈಲಿನಲ್ಲಿ ಪರಾರಿಯಾಗಿದ್ದ ಕೇರ್ಟೇಕರ್ ಅರೆಸ್ಟ್..!


















