ಲೇಖನಗಳು
Ashoka Janamana | ಟೀಕಿಸುವ ಭರದಲ್ಲಿ ಶ್ಲಾಘಿಸಬೇಕಾದ ವಿಚಾರಗಳು ಮರೆಯಾಗಬಾರದು..! ರಾಕೇಶ್ ಕುಮಾರ್ ಕಮ್ಮಜೆ ಲೇಖನ
ಪುತ್ತೂರಿನಲ್ಲಿ ನಡೆದ ಅಶೋಕ ಜನ ಮನ (Ashoka Janamana) ಕಾರ್ಯಕ್ರಮ ಹಿಂದೆಂದಿಗಿಂತಲೂ ಹೆಚ್ಚು ಸುದ್ದಿಯಾಗಿದೆ. ಅದಕ್ಕೆ ಕಾರಣಗಳು ಎರಡು. ಮೊದಲನೆಯದ್ದು ನಾಡಿನ ಮುಖ್ಯಮಂತ್ರಿಗಳನ್ನೇ ಕರೆಸಿಕೊಂಡದ್ದು. ಎರಡನೆಯದು ಹನ್ನೊಂದು ಜನ ಅಸ್ವಸ್ಥರಾದದ್ದು. ಆದರೆ ಎರಡನೆಯ ಕಾರಣದ ಗದ್ದಲಗಳಲ್ಲಿ ಮೊದಲನೆಯ ಕಾರಣ ಸದ್ದಿಲ್ಲದೆ ಬದಿಗೆ ಸರಿದಿದೆ!
ನಿಜ, ಕಾರ್ಯಕ್ರಮವೊಂದನ್ನು ಆಯೋಜನೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಅಂಗಣವೊಂದರಲ್ಲಿ ಸೇರಬಹುದಾದ ಜನಸಂಖ್ಯೆ. ಅದನ್ನು ನಿಭಾಯಿಸಬೇಕಾದ ರೀತಿ, ಎದುರಾಗಬಹುದಾದ ಸವಾಲುಗಳು ಇವೆಲ್ಲವನ್ನೂ ಪೂರ್ವಯೋಜನೆ ಮಾಡಿಕೊಳ್ಳಲೇಬೇಕು. ಅಶೋಕ ಜನಮನದಲ್ಲಿ ಅವೆಲ್ಲವೂ ಆಗಿತ್ತು. ಆದರೆ ಮಳೆಯಿಂದಾಗಬಹುದಾದ ಸವಾಲುಗಳನ್ನೆದುರಿಸುವ ಬಗೆಗಿನ ಯೋಜನೆ ಸರಿಯಾಗಿ ಮಾಡಿಕೊಳ್ಳದಿದ್ದದ್ದೇ ಅಥವ ಮಾಡಿಕೊಂಡಿದ್ದ ಯೋಚನೆಯಂತೆ ನಿಭಾಯಿಸಲು ಅಸಾಧ್ಯವಾದದ್ದೇ ಒಟ್ಟು ಗೊಂದಲಗಳಿಗೆ ಕಾರಣವಾಗಿದೆ. ಸುದೈವದಿಂದ ಯಾರ ಪ್ರಾಣಕ್ಕೂ ಕುತ್ತು ಬಂದಿಲ್ಲ. ಕಾಳ್ತುಳಿತ ಘಟಿಸಿಲ್ಲ. ಇಬ್ಬರಿಗೆ ತುಸು ಹೆಚ್ಚು ಅನಿಸುವಂತಹ ಅಸ್ವಸ್ಥತೆ ಕಾಡಿದರೆ ಉಳಿದ ಒಂಬತ್ತೂ ಮಂದಿ ಶೀಘ್ರವಾಗಿ ಮತ್ತು ಕ್ಷೇಮವಾಗಿ ಮನೆ ತಲಪಿದ್ದಾರೆ.
ವಿರೋಧ ಪಕ್ಷದವರು ಅದರಲ್ಲೂ ವಿಶೇಷವಾಗಿ ಭಾಜಪ ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅದು ಸಹಜ ಕೂಡ. ತಮಗೆ ಸಿಗಬಹುದಾದ ಸಣ್ಣ ಸಣ್ಣ ಸವಕಾಶಗಳನ್ನೂ ಸದ್ವಿನಿಯೋಗ ಮಾಡಿಕೊಳ್ಳಬೇಕಾದದ್ದು ವಿರೋಧ ಪಕ್ಷದ ಲಕ್ಷಣ. ಹಾಗೆ ನೋಡಿದರೆ ವಿಧಾನ ಸಭೆಯಲ್ಲಿನ ಭಾಜಪ ನಾಯಕರಿಗಿಂತ ಪುತ್ತೂರಿನ ನೇತಾರರು ಎಷ್ಟೋ ವಾಸಿ. ಸಿಕ್ಕ ಅವಕಾಶವನ್ನು ಗಟ್ಟಿ ಧ್ವನಿಯಲ್ಲೇ ಮಂಡಿಸಿದ್ದಾರೆ. ಅಷ್ಟರಮಟ್ಟಿಗೆ ಅವರ ಕೆಲಸ ಅವರು ನಿಭಾಯಿಸಿದ್ದಾರೆ ಎಂದು ಪುತ್ತೂರಿನ ನಾಯಕತ್ವದ ವಿಚಾರದಲ್ಲಿ ರೋಸಿಹೋಗಿರುವ ಕಾರ್ಯಕರ್ತರು ತುಸು ಖುಷಿ ಪಡಬಹುದು.! ಈ ನಡುವೆ ಸಾಮಾಜಿಕ ಮಾಧ್ಯಮದಲ್ಲೂ ಕೆಲವರು ಸಿಕ್ಕಿದ್ದೇ ಚಾನ್ಸು ಅನ್ನುವಂತೆ ಅಶೋಕ್ ರೈ ಅವರ ಮೇಲೆ ಮುಗಿಬೀಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಹೋದವರನ್ನೂ ಮೂದಲಿಸುತ್ತಿದ್ದಾರೆ.
ಆದರೆ ಅಶೋಕ ಜನಮನ ಕಾರ್ಯಕ್ರಮದಲ್ಲಿ ಗಮನಿಸಲೇಬೇಕಾದ ಕೆಲವೊಂದು ಸಕಾರಾತ್ಮಕ ಅಂಶಗಳೂ ಘಟಿಸಿವೆ. ಗದ್ದಲದ ಮಧ್ಯೆ ಆ ಸಂಗತಿಗಳು ಮಾಸಿಹೋಗಬಾರದು. ಅಶೋಕ್ ರೈ ಅವರು ತಮ್ಮ ಟ್ರಸ್ಟ್‌ನ ದೀಪಾವಳಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಕರೆಸಿದ್ದು ತನ್ನ ಪ್ರತಿಷ್ಟೆ ಮೆರೆಯುವುದಕ್ಕಿಂತಲೂ, ಬಜೆಟ್‌ನಲ್ಲಿ ಮಂಡನೆಯಾದ ಮೆಡಿಕಲ್ ಕಾಲೇಜು ಯಾವ ಕಾರಣಕ್ಕೂ ಕೈತಪ್ಪಿಹೋಗಬಾರದೆಂಬುದಕ್ಕೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಪತ್ರಿಕೆಯ ಜಾಹೀರಾತುಗಳಲ್ಲಿ ‘ಮೆಡಿಕಲ್ ಕಾಲೇಜು ನೀಡಿದ ಮುಖ್ಯಮಂತ್ರಿ’ ಎಂಬ ಉಲ್ಲೇಖಗಳಿರಬಹುದು, ಮುಖ್ಯಮಂತ್ರಿ ವೇದಿಕೆಗೆ ಬರುವಾಗ ‘ಪುತ್ತೂರಿಗೆ ಮೆಡಿಕಲ್ ಕಾಲೇಜು ನೀಡಿದ…’ ಎಂದು ಮೆಡಿಕಲ್ ಕಾಲೇಜನ್ನೇ ಒತ್ತಿ ಒತ್ತಿ ಹೇಳುತ್ತಾ ಸಿದ್ದರಾಮಯ್ಯನವರನ್ನು ಶ್ಲಾಘಿಸಿದ್ದಿರಬಹುದು. ವೇದಿಕೆಯ ತುಂಬಾ ‘ಮೆಡಿಕಲ್ ಕಾಲೇಜು ನೀಡಿದ ಧೀಮಂತ ನಾಯಕ, ಮೆಡಿಕಲ್ ಕಾಲೇಜು ಸರದಾರ’ ಎಂಬ ಹೋರ್ಡಿಂಗ್ಸ್ ಹಾಕಿದ್ದಿರಬಹುದು, ಅಶೋಕ್ ರೈ ಅವರು ತಮ್ಮ ಭಾಷಣದಲ್ಲಿ ‘ಮೆಡಿಕಲ್ ಕಾಲೇಜು ನೀಡಿದ ಮುಖ್ಯಮಂತ್ರಿ’ ಎಂದು ಮತ್ತೆ ಮತ್ತೆ ಉಲ್ಲೇಖಿಸಿದ್ದಿರಬಹುದು ಇವೆಲ್ಲವೂ ಮೆಡಿಕಲ್ ಕಾಲೇಜಿನ ಭರವಸೆ ಈಡೇರಿಕೆಗಾಗಿ ಅಶೋಕ್ ರೈ ಇಟ್ಟ ಜಾಣ ನಡೆಗಳು. ಹೀಗೆ ಮುಖ್ಯಮಂತ್ರಿಗಳು ಕಣ್ಣು ಬಿಟ್ಟಲ್ಲಿ,
ಕಿವಿ ಕೊಟ್ಟಲ್ಲೆಲ್ಲಾ ‘ಮೆಡಿಕಲ್ ಕಾಲೇಜು ನೀಡಿದ. ಮೆಡಿಕಲ್ ಕಾಲೇಜು ನೀಡಿದ’ ಎಂದು ಕಾಣುವಂತೆ, ಕೇಳುವಂತೆ ಮಾಡಿ ಕೊನೆಗೆ ಸ್ವತಃ ಮುಖ್ಯಮಂತ್ರಿ ತನ್ನ ಭಾಷಣದಲ್ಲಿ ‘ಮೆಡಿಕಲ್ ಕಾಲೇಜು ಕೊಟ್ಟೆ ಕೊಡುತ್ತೇನೆ’ ಎಂದು ಹೇಳುವಂತೆ ಮಾಡಿದ್ದು ಅಶೋಕ್ ರೈ ಸಾಧನೆಯಲ್ಲದೆ ಇನ್ನೇನು?
ಬಹುಶಃ ಮೆಡಿಕಲ್ ಕಾಲೇಜು ಬಗೆಗೆ ಮಾತುಕೊಡದೆ ಬೇರೆ ದಾರಿಯೇ ಇಲ್ಲ ಎಂದು ಮುಖ್ಯಮಂತ್ರಿಗಳಿಗೂ ಅನ್ನಿಸಿರಬಹುದು. ಅಂತಹ ವಾತಾವರಣ ನಿರ್ಮಿಸಿದ್ದಕ್ಕೆ, ಪುತ್ತೂರಿಗೆ ಮೆಡಿಕಲ್ ಕಾಲೇಜು ಬರುವ ಸಾಧ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಕ್ಕೆ ಅಶೋಕ್ ರೈ ಅವರಿಗೊಂದು ಅಭಿನಂದನೆಗಳನ್ನಾದರೂ ಹೇಳಬಾರದೇ?
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಮೆಡಿಕಲ್ ಕಾಲೇಜು ಒದಗಿಸಿಕೊಡುವ ಮಾತುಗಳನ್ನಾಡುವಾಗ ಅಶೋಕ್ ರೈ ಅತ್ಯಂತ ಹೆಚ್ಚು ಖುಷಿಪಟ್ಟದ್ದು, ಇಡೀ ಜನಸಮುದಾಯವನ್ನುದ್ದೇಶಿಸಿ ಎರಡೂ ಕೈಎತ್ತಿ ಚಪ್ಪಾಳೆ ತಟ್ಟಿ ಎಲ್ಲರೂ ಸಂಭ್ರಮಿಸುವಂತೆ ಸೂಕ್ಷ್ಮವಾಗಿ ಕರೆಕೊಟ್ಟಿದ್ದೆಲ್ಲ, ಅವರಿಗೆ ಮೆಡಿಕಲ್ ಕಾಲೇಜಿನ ಬಗೆಗಿರುವ ಬದ್ಧತೆಯನ್ನು ತೋರಿಸಿದೆ.
ಅಷ್ಟಕ್ಕೂ ಅಶೋಕ್ ರೈ ನಿರಂತರ ಶ್ರಮವಹಿಸುತ್ತಿರುವುದು. ಎಷ್ಟೇ ಕಷ್ಟವಾದರೂ ಸಾಧಿಸಿಯೇ ಸಾಧಿಸುತ್ತೇನೆ ಎಂದು ಹೊರಟಿರುವುದು ತನ್ನ ವೈಯಕ್ತಿಕ ಕೆಲಸಕ್ಕಲ್ಲ. ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕೆನ್ನುವ ಕಾರಣಕ್ಕೆ. ಹಿಂದಿನ ಯಾವ ಶಾಸಕರಿಗೂ ಆಗದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮ ವೈಯಕ್ತಿಕ ಕಾರ್ಯಕ್ರಮವನ್ನೂ ತನ್ನ ಕ್ಷೇತ್ರದ ಮೆಡಿಕಲ್ ಕಾಲೇಜಿನ ಸಾಕಾರಕ್ಕಾಗಿ ಮುಡಿಪಾಗಿಟ್ಟಿದ್ದಾರೆ.
ಕೆಲವೊಂದು ಸಂಗತಿಗಳು ಬಜೆಟ್ ನಲ್ಲಿ ಸೇರಿಕೊಂಡರೂ ಅನೇಕ ಸಲ ನಾನಾ ಕಾರಣಗಳಿಗಾಗಿ, ಮುಖ್ಯಮಂತ್ರಿಯ ಬದಲಾದ ಭಾವನೆಗಳಿಂದಾಗಿ ನಂತರದ ದಿನಗಳಲ್ಲಿ ಸಾಕಾರಗೊಳ್ಳದೇ ಇರುವ ಸಾಧ್ಯತೆಯೂ ಇರುತ್ತದೆ. ಹೀಗಿರುವಾಗ ಬಜೆಟ್‌ನಲ್ಲಿ ಘೋಷಿಸಿದ್ದಕ್ಕೆ ಬದ್ಧವಾಗಿರುವ ಅನಿವಾರ್ಯತೆಯನ್ನು ಮುಖ್ಯಮಂತ್ರಿಗೆ ತಂದೊಡ್ಡುವ ಕಾರ್ಯವನ್ನು ಮೊದಲ ಬಾರಿ ಶಾಸಕರಾಗಿರುವ ಅಶೋಕ್ ರೈ ಸೊಗಸಾಗಿಯೇ ಮಾಡಿದ್ದಾರೆ. ಈ ರೀತಿಯ ಬೆನ್ನತ್ತುವ ಗುಣವೇ ಅಶೋಕ್ ರೈ ಅವರನ್ನು ಇತರ ನಾಯಕರಿಗಿಂತ ಭಿನ್ನವಾಗಿಸಿದೆ.
ಕಾರ್ಯಕ್ರಮದ ತರುವಾಯ ಮುಖ್ಯಮಂತ್ರಿಗಳು ಅಶೋಕ್ ರೈ ಅವರಿಗೆ ಕರೆಮಾಡಿ ಕಾರ್ಯಕ್ರಮದ ಬಗೆಗೆ, ಸೇರಿರುವ ಅಪಾರ ಜನಸ್ತೋಮದ ಬಗೆಗೆ ಶ್ಲಾಘನೆ ವ್ಯಕ್ತಪಡಿಸಿರುವುದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಎಂಬಲ್ಲಿಗೆ ಮುಖ್ಯಮಂತ್ರಿ ಒಳ್ಳೆ ಮೂಡ್‌ನಲ್ಲೇ ಮರಳಿದ್ದಾರೆ ಎಂಬುದು ಸ್ಪಷ್ಟ. ಪುತ್ತೂರಿಗೆ ಮೆಡಿಕಲ್ ಕಾಲೇಜು ಬರುವ ಸಾಧ್ಯತೆ ಮತ್ತಷ್ಟು ಗಾಢವಾದದ್ದೂ ಸತ್ಯ.! ಹಾಗೆ ನೋಡಿದರೆ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿಗಳು ಪುತ್ತೂರಿಗೆ ಬರುವಷ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಖಾಸಗಿ ಕಾರ್ಯಕ್ರಮ ಮಾಡಿರುವುದೇ ಮೆಚ್ಚತಕ್ಕ ವಿಚಾರ. ಯಾಕೆಂದರೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಕುಳಿತು ಯಾವುದೋ ಒಂದು ಕ್ಷೇತ್ರದ ಬಗೆಗೆ ಭರವಸೆಯೊಂದನ್ನು ನೀಡುವುದಕ್ಕೂ ಆ ಕ್ಷೇತ್ರಕ್ಕೇ ಹೋಗಿ ಸಹಸ್ರ ಸಹಸ್ರ ಮಂದಿಯ ಮಧ್ಯೆ ‘ಮಾಡಿಯೇ ತೀರುತ್ತೇನೆ’ ಎಂದು ಮಾತು ಕೊಡುವುದಕ್ಕೂ ವ್ಯತ್ಯಾಸವಿದೆ. ಜತೆಗೆ, ಮುಖ್ಯಮಂತ್ರಿಗಳು ಬಂದಾಗ, ಹಾಗೆ ಬಂದಿರುವ ಪ್ರದೇಶಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗೆಗೆ ಅವರ ಗಮನ ಸೆಳೆಯುವುದಕ್ಕೆ, ಅನುದಾನ ಪೀಕುವುದಕ್ಕೂ ಅನುಕೂಲವೆನಿಸುತ್ತದೆ.
ಅಶೋಕ್ ರೈ ಅವರನ್ನು ಟೀಕಿಸುವುದಕ್ಕೆ ರಾಜಕೀಯವಾಗಿ ಹತ್ತಾರು ಕಾರಣಗಳಿರಬಹುದು. ಆದರೆ ಮೆಡಿಕಲ್ ಕಾಲೇಜಿನ ಕುರಿತಾದ ಅವರ ಪ್ರಾಮಾಣಿಕತೆ, ಅಭಿವೃದ್ಧಿ ಹಾಗೂ ಜನಸಾಮಾನ್ಯರ
ಕುರಿತಾದ ವಿಚಾರಗಳೆಡೆಗಿನ ಅವರ ಭಾವನಾತ್ಮಕ ಅಂತರಂಗ ಅನುಮಾನಾಸ್ಪದವೆನಿಸುತ್ತಿಲ್ಲ. ಅಶೋಕ ಜನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇತ್ತೀಚೆಗೆ ಸೇಡಿಯಾಪಿನಲ್ಲಿ ಹೆಚ್ಚೇನು ದಾಳಿಗೊಳಗಾಗಿ ಜೀವಕಳೆದುಕೊಂಡ ಮುಗ್ಧ ಹುಡುಗಿಯೊಬ್ಬಳ ಕುರಿತು ಪ್ರಸ್ತಾವನೆಗೈದು, ಅದೇ ವೇದಿಕೆಯಲ್ಲಿ ಮುಖ್ಯಮಂತ್ರಿಗಳು ತನ್ನ ಪರಿಹಾರ ನಿಧಿಯಿಂದ ಐದು ಲಕ್ಷ ಒದಗಿಸಿಕೊಡುವ ಘೋಷಣೆ ಮಾಡುವಂತೆ ಮಾಡಿಸಿದ್ದೂ ಒಬ್ಬ ಶಾಸಕನಾಗಿ ಅವರ ಜನಪರ ಕಾಳಜಿಗೆ ಉದಾಹರಣೆ.!
ಕಾರ್ಯಕ್ರಮದಲ್ಲಾದ ಗೊಂದಲಗಳಿಗೆ ಸ್ವತಃ ಅಶೋಕ್ ರೈ ಕ್ಷಮೆಯಾಚಿಸಿದ್ದಾರೆ. ಆಸ್ಪತ್ರೆಗೆ ಹೋಗಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇಬ್ಬರ ಆಸ್ಪತ್ರೆ ಖರ್ಚನ್ನೂ ಭರಿಸಿದ್ದಾರೆ. ಸುರಿದ ಮಳೆಯಲ್ಲಿ ಉಂಟಾದ ಉದ್ವಿಗ್ನತೆಯ ಸಂದರ್ಭದಲ್ಲಿ ತಾನೇ ಮಳೆಯಲ್ಲಿ ನೆನೆಯುತ್ತಾ, ಪಿಕಪ್ ಏರಿ ತನ್ನ ಕೈಲಾಗಬಹುದಾದ ಅಷ್ಟೂ ಪ್ರಯತ್ನ ನಡೆಸಿದ್ದಾರೆ. ಯಾವ ಸಂದರ್ಭದಲ್ಲೂ ಅಶೋಕ್ ರೈ ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ. ಮತ್ತೊಬ್ಬರ ಮೇಲೆ ಗೂಬೆ ಕೂರಿಸಿಲ್ಲ. ಇದಕ್ಕಿಂತ ಹೆಚ್ಚು ಅವರಿನ್ನೇನು ಮಾಡಬಹುದು? ಏನು ಮಾಡಬೇಕಿತ್ತು?
ಈ ನಡುವೆ ಕಾರ್ಯಕ್ರಮಕ್ಕೆ ಬಂದವರೆಲ್ಲರೂ ‘ಬಟ್ಟಲಿನಾಸೆಗೆ ಬಂದಿದ್ದಾರೆ’ ಎಂದು ಪುತ್ತೂರಿನ ಜನರನ್ನು ಸಾಮಾಜಿಕ ಮಾಧ್ಯಮದಲ್ಲಿ ಅವಮಾನಿಸುವುದು ಒಪ್ಪತಕ್ಕಂತಹದ್ದಲ್ಲ. ನಿಜ, ಉಚಿತವಾಗಿ ದೊರೆಯುವುದರ ಬಗೆಗೆ ಪುತ್ತೂರು ಅಂತಲ್ಲ, ಇಡಿಯ ಭಾರತದಲ್ಲೇ ಆಸಕ್ತಿ ಇದೆ. ಆ ಆಸಕ್ತಿಗೆ ಬಡವ ಬಲ್ಲಿದನೆಂಬ ವ್ಯತ್ಯಾಸವೇನೂ ಇಲ್ಲ. ‘ಎರಡು ಸೋಪಿನೊಂದಿಗೆ ಪೆನ್ನು ಉಚಿತ’ ಎಂದರೆ ಅದೇ ಸೋಪನ್ನು ಕೊಳ್ಳುವ ಬಹುದೊಡ್ಡ ವರ್ಗ ಇದೆ. ಅದರರ್ಥ ಅವರ ಮನೆಯಲ್ಲಿ ಪೆನ್ನಿಗೂ ಗತಿ ಇಲ್ಲ ಎಂದಲ್ಲ, ‘ಉಚಿತ’ದ ಬಗೆಗೆ ಇರುವ ಮೋಹ!
ಇಂದು ಪುತ್ತೂರಿನಲ್ಲೇ ರಿಲಯನ್ಸ್ ಮೋರ್‌ನಂತಹ ಮಳಿಗೆಗಳಲ್ಲಿ ಜನಸಂದಣಿಯಾಗುತ್ತಿರುವುದಕ್ಕೆ ಕೇವಲ ಗುಣಮಟ್ಟವೊಂದೇ ಕಾರಣವಲ್ಲ, ಅದರ ಜತೆಗೆ ಹಲವು ವಸ್ತು ಕೊಳ್ಳುವಾಗ ಯಾವುದೋ ಒಂದಕ್ಕೆ ಇನ್ನೊಂದು ಉಚಿತ ಸಿಗುತ್ತದೆ. ಭಾರೀ ದರ ಕಡಿತ ಇರುತ್ತದೆ ಎಂಬುದೂ ಹೌದು! ಮನೆಗಳಲ್ಲಿ ಇನ್ನೂರು ಯೂನಿಟ್ ವರೆಗೆ ವಿದ್ಯುತ್ ಉಚಿತ ಎಂದಾಗ ಪಕ್ಷಾತೀತವಾಗಿ ಬಹುತೇಕರು ಮಾಡಿಸಿಕೊಂಡದ್ದು, ನಿರ್ಗತಿಕರು ಎಂಬ ಕಾರಣಕ್ಕಲ್ಲ, ‘ಉಚಿತ’ದ ಕುರಿತಾದ ಆಸಕ್ತಿಯಿಂದಾಗಿ!
ಮದುವೆ, ಮುಂಜಿಯಂತಹ ಹಲವು ಕಾರ್ಯಕ್ರಮಗಳಿಗೆ, ಸಾಹಿತ್ಯ, ಧಾರ್ಮಿಕ ಸಮ್ಮೇಳನಗಳಿಗೆ ಹೋಗಿ ‘ಉಚಿತ’ ಊಟ ಮಾಡಿಯೇ ಹೊರಬರುವುದು. ಹಾಗೆಂದು ‘ಊಟಕ್ಕಾಗಿ ಹೋದರು’ ಎಂಬುದು ಎಷ್ಟು ಬಾಲಿಶವೆನಿಸುತ್ತದೋ, ‘ಬಟ್ಟಲಿಗಾಗಿ ಹೋದರು’ ಎನ್ನುವುದೂ ಅಷ್ಟೇ ಬಾಲಿಶ. ಮುಖ್ಯಮಂತ್ರಿಗಳ ಭಾಷಣದಲ್ಲೂ ‘ನಿರ್ಗತಿಕ’ ಪದ ಬಂದಿರುವ ಬಗೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಆಕ್ಷೇಪ ಸತ್ಯವೂ ಹೌದು. ಯಾಕೆಂದರೆ ಅಶೋಕ ಜನಮನಕ್ಕೆ ಬಂದವರು ಯಾರೂ ನಿರ್ಗತಿಕರಲ್ಲ. ಬದಲಾಗಿ ಅಶೋಕ್ ರೈ, ಸಿದ್ಧರಾಮಯ್ಯ ಅಥವ ತಮ್ಮ ನೇತಾರರನ್ನು ಕಾಣಲು ಬಂದಿರುವ ಅಭಿಮಾನಿಗಳು, ಸಾರ್ವಜನಿಕರು ಅಷ್ಟೆ.
ಕೇಂದ್ರ ಸರ್ಕಾರ ಕೃಷಿಕರಿಗೆ ನೀಡುವ ಕಿಸಾನ್ ಸಮ್ಮಾನ್ ನಿಧಿಯೂ ‘ಉಚಿತ’ವೇ, ರಾಜ್ಯಸರ್ಕಾರ ಕೊಡುವ ಗೃಹಲಕ್ಷ್ಮಿಯೂ ‘ಉಚಿತ’ವೇ! ಅವರು ಬಿಹಾರದಲ್ಲಿ ಘೋಷಿಸಿದ ಹತ್ತು ಸಾವಿರವೂ ‘ಉಚಿತ’, ಇವರು ಇಲ್ಲಿ ನೀಡುತ್ತಿರುವ ಬಸ್ ಪ್ರಯಾಣವೂ ‘ಉಚಿತ. ಸರ್ಕಾರಗಳೇ ಹೀಗೆ ‘ಉಚಿತ’ ಪರಿಕಲ್ಪನೆಯನ್ನು ಮನೆಮನೆಗೆ ತಲಪಿಸುತ್ತಿರುವಾಗ, ಅಶೋಕ್ ರೈ ತಾನು ಶಾಸಕನಾಗುವುದಕ್ಕಿಂತಲೂ ಎಷ್ಟೋ ಪೂರ್ವದಿಂದ ತನ್ನ ಟ್ರಸ್ಟ್ ಮೂಲಕ ನಡೆಸಿಕೊಂಡು ಬಂದ ಕಾರ್ಯಕ್ರಮವನ್ನು ಈಗ
ಮುಂದುವರೆಸಿ, ಹಿಂದಿನಂತೆ ಉಚಿತ ಗಿಫ್ಟ್ ನೀಡಿದರೆ ಅದರಲ್ಲಿ ಆಕ್ಷೇಪಿಸುವಂತಹದ್ದೇನೂ ಇಲ್ಲ.
ಕಾರ್ಯಕ್ರಮಕ್ಕೆ ಹೋದವರನ್ನು ನಿಂದಿಸುವುದೂ ಸಲ್ಲ.
ಈ ಗಿಪ್ಟ್ ಕಾರ್ಯಕ್ರಮದಿಂದ ಅಶೋಕ್ ರೈಯವರು ರಾಜಕೀಯವಾದ ಲಾಭ ಪಡೆಯುತ್ತಿದ್ದಾರೆ ಎನ್ನುವವರೂ ಇದ್ದಾರೆ. ಉಚಿತ ಕೊಡುವುದು ಅಕಸ್ಮಾತ್ ರಾಜಕೀಯ ಲಾಭವಾಗಿ ಪರಿಣಮಿಸುತ್ತದೆ ಎನ್ನುವುದಾದರೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ. ಹಾಗೆ ಹೇಳುವವರೆಲ್ಲಾ ತಮ್ಮ ತಮ್ಮ ಪಕ್ಷ ಹಾಗೂ ಅಭ್ಯರ್ಥಿಗಳ ಪರವಾಗಿ ಕಿಲ್ಲೆ ಮೈದಾನದ ಬಳಿ ನಿಂತು, ಹೋಗುವವರಿಗೆ ಬರುವವರಿಗೆ ಉಚಿತ ಗಿಫ್ಟ್ ಕೊಡಬಹುದು. ಹೇಗೂ ರಾಜಕೀಯ ಲಾಭ ಆಗುತ್ತದಲ್ಲಾ?!
ಶಾಸಕರೋ, ಮಂತ್ರಿಗಳೋ ತಪ್ಪೆಸಗಿದಾಗ ಅದನ್ನು ಸಾತ್ವಿಕವಾಗಿ ಖಂಡಿಸುವ ಅಧಿಕಾರ ಎಲ್ಲರಿಗೂ ಇದೆ. ಅಶೋಕ್ ರೈ ಕೂಡ ತಪ್ಪು ಹೆಜ್ಜೆ ಇಟ್ಟರೆ ಇಂತಹ ಖಂಡನೆಗೆ ಒಳಗಾಗಲೇಬೇಕು.
ಹಾಗೆಂದು ಒಳ್ಳೆಯ ಸಂಗತಿಗಳನ್ನು ಹೇಳದೆ ಅಥವ ಪ್ರಜ್ಞಾಪೂರ್ವಕವಾಗಿ ಮರೆತು, ತಪ್ಪನ್ನಷ್ಟೇ ಗುರುತಿಸುವುದು ಟೀಕೆಯ ಮೌಲ್ಯಗಳನ್ನು ಕಡಿಮೆಯಾಗಿಸುತ್ತದೆ.
ಮೆಡಿಕಲ್ ಕಾಲೇಜು ಅಶೋಕ್ ರೈ ಅವರ ಆದ್ಯತೆ, ಪುತ್ತೂರಿನ ಅವಶ್ಯಕತೆ. ಪುತ್ತೂರಿಗರ ಕನಸು. ಅದರ ಸಾಕಾರಕ್ಕಾಗಿ ಬಗೆಬಗೆಯ ಪ್ರಯತ್ನದಲ್ಲಿ ಶಾಸಕರು ತೊಡಗಿಸಿಕೊಂಡಿದ್ದಾರೆ. ನಮ್ಮೆಲ್ಲರ ಪ್ರತಿನಿಧಿಯಾಗಿ ಮೆಡಿಕಲ್ ಕಾಲೇಜಿಗಾಗಿ ಎಡೆಬಿಡದೆ ಹೋರಾಡುವುದಕ್ಕೆ ಒಬ್ಬಾತ ನೇತಾರ ಸಿಕ್ಕಿದ್ದಾನೆ. ಓಡುವಾಗ ಗಮ್ಯ ತಲಪುವ ಧಾವಂತದಲ್ಲಿ ಶಾಸಕ ರೈ ಅವರು ತುಸು ಜಾರಿದರೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕೇ ವಿನಃ ಕೈತಟ್ಟಿ ನಗಬಾರದು! ಅಷ್ಟಕ್ಕೂ ಈ ಬಾರಿಯ ಆಶೋಕ ಜನಮನ ಕಾರ್ಯಕ್ರಮ ಮೆಡಿಕಲ್ ಕಾಲೇಜಿನ ಸಾಕಾರವನ್ನೇ ಲಕ್ಷ್ಯವಾಗಿರಿಸಿಕೊಂಡಿತ್ತೆಂಬುದು ಅನೇಕರ ಗಮನಕ್ಕೂ ಬಂದಿರುತ್ತದೆ.
ಒಟ್ಟಿನಲ್ಲಿ, ಪುತ್ತೂರಿನಲ್ಲೊಂದು ಮೆಡಿಕಲ್ ಕಾಲೇಜು ಆಗಬೇಕು ಎನ್ನುವ ಹಲವರ ಸದ್ಭಾವದ ಮಧ್ಯೆ, ಮೆಡಿಕಲ್ ಕಾಲೇಜು ಆಗಿಬಿಟ್ಟರೆ ಆ ಕೀರ್ತಿ ಅಶೋಕ್ ರೈ ಪಾಲಾಗುತ್ತದಲ್ಲಾ ಎಂಬ ಕೆಲವರ ನೋವು ಸಾರ್ವಜನಿಕರಿಗೆ ಭರಪೂರ ಮನರಂಜನೆ ಒದಗಿಸುತ್ತಿದೆ..!
ರಾಕೇಶ ಕುಮಾರ್ ಕಮ್ಮಜೆ , ಪ್ರಾಂಶುಪಾಲರು
Leave a Reply
ಲೇಖನಗಳು
Mercury-ಬುಧನ ನಕ್ಷತ್ರ ಬದಲಾವಣೆ: ಈ 5 ರಾಶಿಯವರಿಗೆ ಇಂದಿನಿಂದ ‘ರಾಜಯೋಗ’, ಅದೃಷ್ಟದ ಬಾಗಿಲು ಓಪನ್..!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ‘ಬುಧ’ ಇಂದು ತನ್ನ ನಕ್ಷತ್ರವನ್ನು ಬದಲಾಯಿಸುತ್ತಿದ್ದಾನೆ. ಸದ್ಯ ಪೂರ್ವಫಲ್ಗುಣಿ ನಕ್ಷತ್ರದಲ್ಲಿರುವ ಬುಧನು ಇಂದು (ಶನಿವಾರ) ಸಂಜೆ 4:31ಕ್ಕೆ ಸೂರ್ಯನ ಅಧಿಪತ್ಯದ ‘ಉತ್ತರಾಫಲ್ಗುಣಿ’ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ.
ಈ ನಕ್ಷತ್ರ ಬದಲಾವಣೆಯು ಮುಂದಿನ 13 ದಿನಗಳ ಕಾಲ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದರೂ, 5 ರಾಶಿಯವರಿಗೆ ಮಾತ್ರ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಉದ್ಯೋಗ, ವ್ಯವಹಾರ ಮತ್ತು ಆರ್ಥಿಕವಾಗಿ ಲಾಭ ಪಡೆಯಲಿರುವ ಆ ಅದೃಷ್ಟದ ರಾಶಿಗಳು ಇಲ್ಲಿವೆ:
ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ವೃತ್ತಿಜೀವನದಲ್ಲಿ ಬಹುದಿನಗಳಿಂದ ಎದುರು ನೋಡುತ್ತಿದ್ದ ಅವಕಾಶಗಳು ಸಿಗುವ ಸಾಧ್ಯತೆಯಿದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ದೊರೆಯುವುದರಿಂದ ನಿಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಮುಂದಕ್ಕೆ ಕೊಂಡೊಯ್ಯಬಹುದು. ಇದರಿಂದ ವೃತ್ತಿಯಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗಬಹುದು. ಉದ್ಯೋಗದ ಜೊತೆಗೆ ಕುಟುಂಬದ ವಿಚಾರದಲ್ಲೂ ಈ ಅವಧಿ ಖುಷಿ ನೀಡಬಹುದು. ಕುಟುಂಬದವರೊಂದಿಗೆ ಪ್ರವಾಸ ಅಥವಾ ಮಕ್ಕಳೊಂದಿಗೆ ವಿಶೇಷ ಸಮಯ ಕಳೆಯುವ ಅವಕಾಶ ಸಿಗಬಹುದು. ಒಟ್ಟಿನಲ್ಲಿ, ಕೆಲಸದಲ್ಲಿ ಪ್ರಗತಿ ಮತ್ತು ಕುಟುಂಬದಲ್ಲಿ ಸಂತೋಷ ಎರಡೂ ಒಟ್ಟಿಗೆ ಸಿಗುವ ಆಹ್ಲಾದಕರ ದಿನಗಳು ನಿಮ್ಮದಾಗಬಹುದು.
ಮಿಥುನ ರಾಶಿ
ಬುಧನ ಬದಲಾವಣೆ ಮಿಥುನ ರಾಶಿಯವರಿಗೆ ಹಣದ ವಿಚಾರದಲ್ಲಿ ಹೊಸ ದಾರಿ ತೋರಿಸಬಹುದು. ವ್ಯಾಪಾರದಲ್ಲಿ ತೊಡಗಿರುವವರಿಗೆ ಹೊಸ ಯೋಜನೆಗಳು ಮತ್ತು ಪ್ರಮುಖ ಒಪ್ಪಂದಗಳನ್ನು ಅಂತಿಮಗೊಳಿಸುವ ಅವಕಾಶ ಸಿಗಬಹುದು. ಈಗ ಮಾಡಿಕೊಳ್ಳುವ ಕೆಲವು ವ್ಯವಹಾರ ಸಂಪರ್ಕಗಳು ಮುಂದಿನ ದಿನಗಳಲ್ಲಿ ದೊಡ್ಡ ಲಾಭ ತಂದುಕೊಡುವ ಸಾಧ್ಯತೆಯಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಸಮಯ ಇದಾಗಿದ್ದು, ಆದಾಯ ಗಳಿಸಲು ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಹಣಕಾಸಿನ ಪರಿಸ್ಥಿತಿಯಲ್ಲೂ ಸುಧಾರಣೆ ಕಂಡುಬರಬಹುದು. ವ್ಯವಹಾರ ವಿಸ್ತರಣೆ ಜೊತೆಗೆ ಆದಾಯ ಹೆಚ್ಚಿಸಿಕೊಳ್ಳುವ ಅವಕಾಶವೂ ಒಟ್ಟಿಗೆ ಒಲಿದುಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದಿನಿಂದಲೇ ಶುಭ ಸುದ್ದಿಗಳ ನಿರೀಕ್ಷೆ. ಸೂರ್ಯನ ಅಧಿಪತ್ಯದ ಸಿಂಹ ರಾಶಿಯವರಿಗೆ ಬುಧನ ನಕ್ಷತ್ರ ಬದಲಾವಣೆ ವಿಶೇಷವಾಗಿರಬಹುದು. ವಿಶೇಷವಾಗಿ ಸೆಪ್ಟೆಂಬರ್ 13ರವರೆಗಿನ ಅವಧಿ ಹಲವು ವಿಚಾರಗಳಲ್ಲಿ ಅನುಕೂಲಕರವಾಗಿರಬಹುದು. ನೀವು ಅಂದುಕೊಂಡ ಕೆಲಸಗಳು ನಿರೀಕ್ಷೆಯಂತೆ ನಡೆಯುವ ಸಾಧ್ಯತೆಯಿದ್ದು, ಮನಸ್ಸಿನಲ್ಲೂ ಹೊಸ ಉತ್ಸಾಹ ಮೂಡಬಹುದು. ಮನೆಯ ವಾತಾವರಣ ಸಂತೋಷದಿಂದ ಕೂಡಿರಲಿದ್ದು, ಕುಟುಂಬದವರಿಂದ ಉತ್ತಮ ಬೆಂಬಲ ಸಿಗಬಹುದು. ಹಣಕಾಸಿನ ವಿಚಾರಗಳಲ್ಲೂ ಸ್ಥಿರತೆ ಹೆಚ್ಚಾಗುವ ಸಾಧ್ಯತೆಯಿದೆ. ಹಣದ ಚಿಂತೆ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ, ಕೆಲಸದಲ್ಲಿ ಸ್ಪಷ್ಟತೆ ಸಿಗುವ ದಿನಗಳು ಆರಂಭವಾಗಬಹುದು.
ವೃಶ್ಚಿಕ ರಾಶಿ
ಮುಂದಿನ ದಿನಗಳು ವೃಶ್ಚಿಕ ರಾಶಿಯವರಿಗೆ ಹೊಸ ಅನುಭವಗಳ ಜೊತೆಗೆ ನೆಮ್ಮದಿಯನ್ನೂ ತರಬಹುದು. ಇಂದಿನಿಂದ ಸೆ.13ರವರೆಗಿನ ಅವಧಿ ನಿಮಗೆ ವಿಶೇಷವಾಗಿರಬಹುದು. ಹೊಸ ವಿಷಯಗಳನ್ನು ಕಲಿಯಲು ಮತ್ತು ನಿಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಉತ್ತಮ ಅವಕಾಶಗಳು ಸಿಗಬಹುದು. ಕುಟುಂಬದವರೊಂದಿಗೆ ಪ್ರವಾಸಕ್ಕೆ ಯೋಜನೆ ರೂಪಿಸುವ ಸಾಧ್ಯತೆಯಿದ್ದು, ಬಹುದಿನಗಳಿಂದ ಬಯಸುತ್ತಿದ್ದವರೊಂದಿಗೆ ಗುಣಮಟ್ಟದ ಸಮಯ ಕಳೆಯಬಹುದು. ಇದೇ ಸಮಯದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳತ್ತ ಆಸಕ್ತಿ ಹೆಚ್ಚಾಗಬಹುದು. ಕುಟುಂಬದ ಸಂತೋಷ, ಹೊಸ ಕಲಿಕೆ ಮತ್ತು ಮನಸ್ಸಿನ ನೆಮ್ಮದಿ-ಮೂರೂ ಒಂದೇ ಸಮಯದಲ್ಲಿ ಸಿಗುವ ಸಾಧ್ಯತೆಯಿದೆ.
ಧನು ರಾಶಿ
ಬುಧನ ನಕ್ಷತ್ರ ಬದಲಾವಣೆ ಧನು ರಾಶಿಯವರಿಗೆ ಪ್ರಗತಿಯ ಹೊಸ ಬಾಗಿಲು ತೆರೆಯಬಹುದು. ಉದ್ಯೋಗದಲ್ಲಿರುವವರಿಗೆ ತಮ್ಮ ಕ್ಷೇತ್ರದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ದೊರೆಯಬಹುದು. ವ್ಯವಹಾರಸ್ಥರಿಗೂ ಹೊಸ ಅವಕಾಶಗಳು ಸಿಗುವ ಸಾಧ್ಯತೆಯಿದ್ದು, ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು ಕಾಣಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆಯಿದ್ದು, ಆರ್ಥಿಕ ಲಾಭವೂ ದೊರೆಯಬಹುದು. ಯಶಸ್ಸಿನ ಅನುಭವದಿಂದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಕೆಲಸದಲ್ಲಿ ಯಶಸ್ಸು, ಹಣದಲ್ಲಿ ಲಾಭ ಮತ್ತು ಆತ್ಮವಿಶ್ವಾಸದ ಹೆಚ್ಚಳ-ಧನು ರಾಶಿಯವರಿಗೆ ಶುಭ ದಿನಗಳು ಆರಂಭವಾಗಬಹುದು.
ಲೇಖನಗಳು
Shani Dev-ರೇವತಿ ನಕ್ಷತ್ರಕ್ಕೆ ಶನಿ ಪ್ರವೇಶ; ಈ 4 ರಾಶಿಯವರಿಗೆ ಶುಕ್ರದೆಸೆ ಆರಂಭ..!
ಗ್ರಹಗಳ ಚಲನೆಯಲ್ಲಿ ನ್ಯಾಯದ ದೇವತೆ ಎಂದು ಕರೆಯಲ್ಪಡುವ ಶನಿ ಮಹಾತ್ಮನ ಸಂಚಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾದ ಶನಿಯು ಶೀಘ್ರದಲ್ಲೇ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದು, ಈ ಬದಲಾವಣೆಯು ಕೆಲವು ರಾಶಿಯವರ ಬದುಕಿನಲ್ಲಿ ಸುಖವನ್ನು ತರಲಿದೆ.
ಜ್ಯೋತಿಷ್ಯ ಲೋಕ: ಗ್ರಹಗಳ ಚಲನೆಯಲ್ಲಿ ನ್ಯಾಯದ ದೇವತೆ ಎಂದು ಕರೆಯಲ್ಪಡುವ ಶನಿ ಮಹಾತ್ಮನ ಸಂಚಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾದ ಶನಿಯು ಶೀಘ್ರದಲ್ಲೇ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದು, ಈ ಬದಲಾವಣೆಯು ಕೆಲವು ರಾಶಿಯವರ ಬದುಕಿನಲ್ಲಿ ಸುಖವನ್ನು ತರಲಿದೆ.
ರೇವತಿ ನಕ್ಷತ್ರಕ್ಕೆ ಶನಿ ಪಾದಾರ್ಪಣೆ:
ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಆಗಸ್ಟ್ 20, 2026ರ ಸಂಜೆ 07:45ಕ್ಕೆ ಶನಿಯು ರೇವತಿ ನಕ್ಷತ್ರದ ಮೊದಲ ಪಾದಕ್ಕೆ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 09, 2026ರವರೆಗೆ ಶನಿಯು ಇದೇ ನಕ್ಷತ್ರದಲ್ಲಿ ವಿರಾಜಮಾನನಾಗಿರುತ್ತಾನೆ. ಈ ಅವಧಿಯಲ್ಲಿ ಶನಿ ದೇವನು ನಾಲ್ಕು ರಾಶಿಯವರಿಗೆ ವಿಶೇಷ ಆಶೀರ್ವಾದ ನೀಡಲಿದ್ದಾನೆ.
ಯಾರಿಗೆ ಅದೃಷ್ಟ?
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಸಿಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ದೀರ್ಘಕಾಲದ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ.
ಸಿಂಹ ರಾಶಿ: ಅಕ್ಟೋಬರ್ ವರೆಗಿನ ಸಮಯವು ಸಿಂಹ ರಾಶಿಯವರಿಗೆ ‘ಸುವರ್ಣ ಅವಧಿ’ಯಾಗಲಿದೆ. ನೀವು ಕೈಹಾಕಿದ ಪ್ರಮುಖ ಕೆಲಸಗಳಲ್ಲಿ ಭರ್ಜರಿ ಯಶಸ್ಸು ಸಿಗಲಿದೆ. ಹಳೆಯ ಹೂಡಿಕೆಗಳಿಂದ ದೊಡ್ಡ ಲಾಭ ದೊರೆಯಲಿದ್ದು, ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲವಿದು.
ಕನ್ಯಾ ರಾಶಿ: ಈ ರಾಶಿಯವರು ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲಿದ್ದಾರೆ. ಉದ್ಯೋಗದಲ್ಲಿ ಬಡ್ತಿ (Promotion) ಸಿಗುವ ಸಾಧ್ಯತೆ ದಟ್ಟವಾಗಿದೆ. ನಿಮ್ಮ ಕಾರ್ಯಕ್ಷಮತೆಯನ್ನು ಮೇಲಧಿಕಾರಿಗಳು ಶ್ಲಾಘಿಸಲಿದ್ದು, ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದೀರಿ.
ಮಕರ ರಾಶಿ: ಶನಿಯ ನಕ್ಷತ್ರ ಬದಲಾವಣೆಯು ಮಕರ ರಾಶಿಯವರ ಕೌಟುಂಬಿಕ ಜೀವನದಲ್ಲಿ ಸಂತೋಷ ತರಲಿದೆ. ಮನೆಯಲ್ಲಿ ಮದುವೆಯಂತಹ ಶುಭ ಕಾರ್ಯಗಳು ಜರುಗಲಿವೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದ್ದು, ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತವೆ. ಬಾಕಿ ಉಳಿದಿದ್ದ ಕಾನೂನು ಕೆಲಸಗಳಲ್ಲಿ ಜಯ ಸಿಗಲಿದೆ.
ಒಟ್ಟಾರೆಯಾಗಿ, ಶನಿ ದೇವನ ಈ ನಕ್ಷತ್ರ ಪರಿವರ್ತನೆಯು ಈ ನಾಲ್ಕು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.
ಲೇಖನಗಳು
Lakshmi Rajyoga-ಶುಕ್ರ-ಚಂದ್ರ ಸಂಯೋಗ: ಸೆ.13ರಿಂದ ಈ 5 ರಾಶಿಯವರಿಗೆ ಒಲಿಯಲಿದೆ ‘ಲಕ್ಷ್ಮಿ ರಾಜಯೋಗ’..!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟಕ್ಕೆ ವಿಶೇಷ ಮಹತ್ವವಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಅಪರೂಪದ ಗ್ರಹ ಸಂಯೋಗ ನಡೆಯಲಿದ್ದು, ಇದು ಹಲವು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟಕ್ಕೆ ವಿಶೇಷ ಮಹತ್ವವಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಅಪರೂಪದ ಗ್ರಹ ಸಂಯೋಗ ನಡೆಯಲಿದ್ದು, ಇದು ಹಲವು ರಾಶಿಯವರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.
ಸೆ.13ರಂದು ಸೃಷ್ಟಿಯಾಗಲಿದೆ ಲಕ್ಷ್ಮಿ ರಾಜಯೋಗ
ಸೆಪ್ಟೆಂಬರ್ 13 ರಂದು ಕಲೆ, ಪ್ರೀತಿ ಮತ್ತು ವೈಭವದ ಕಾರಕನಾದ ಶುಕ್ರ ಹಾಗೂ ಮನಸ್ಸಿನ ಕಾರಕನಾದ ಚಂದ್ರ ತುಲಾ ರಾಶಿಯಲ್ಲಿ ಒಂದಾಗಲಿದ್ದಾರೆ. ಈ ಎರಡು ಪ್ರಬಲ ಗ್ರಹಗಳ ಮಿಲನದಿಂದಾಗಿ ‘ಲಕ್ಷ್ಮಿ ರಾಜಯೋಗ’ ಸೃಷ್ಟಿಯಾಗಲಿದೆ. ಈ ಯೋಗವು ಸೃಜನಶೀಲತೆ ಮತ್ತು ಉತ್ಸಾಹವನ್ನು ಹೆಚ್ಚಿಸುವುದಲ್ಲದೆ, ಕೆಲವು ರಾಶಿಗಳಿಗೆ ಆರ್ಥಿಕವಾಗಿ ಅಪಾರ ಲಾಭವನ್ನು ತಂದುಕೊಡಲಿದೆ. ಆ ಅದೃಷ್ಟವಂತ 5 ರಾಶಿಗಳು ಇಲ್ಲಿವೆ:
ಕಟಕ ರಾಶಿ
ಇನ್ನೊಂದು ತಿಂಗಳಲ್ಲಿ ಕಟಕ ರಾಶಿಯವರ ಬಾಳು ಬೆಳಗುವುದು. ಕಟಕ ರಾಶಿಯವರ ಆತ್ಮ ವಿಶ್ವಾಸ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲಿದೆ. ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬಲವಾದ ಪ್ರಭಾವ ಬೀರುವುದು. ಕಚೇರಿಯಲ್ಲಿ ನಿಮ್ಮ ಮೇಲಿನ ಗೌರವ ಹೆಚ್ಚಾಗಬಹುದು. ಕೆಲವರಿಗೆ ಹೊಸ ಜವಾಬ್ದಾರಿಗಳನ್ನು ನೀಡಬಹುದು. ಬಡ್ತಿಗೆ ಅವಕಾಶಗಳು ಸಿಗಲಿವೆ. ಅಲ್ಲದೆ ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ನೀವು ಕಾಣುವಿರಿ. ವಿವಾಹಿತ ದಂಪತಿಗಳ ನಡುವೆ ಅನ್ಯೋನ್ಯತೆ ದ್ವಿಗುಣವಾಗಲಿದೆ. ಈ ಅವಧಿಯು ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿರುತ್ತದೆ. ಯಾಕೆಂದರೆ ನೀವು ನಿಮ್ಮ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು. ನಿಮ್ಮ ಭರವಸೆಗಳನ್ನು ಪೂರೈಸಲು ಸಾಧ್ಯವಾಗುವ ಸಮಯ ಇದು. ಆಸ್ತಿಗಳಲ್ಲಿ ಹೂಡಿಕೆ ಮಾಡಲು ಇದು ಅತ್ಯುತ್ತಮ ಸಮಯ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ನೆಮ್ಮದಿಯನ್ನು ತರಲಿದೆ. ಶುಕ್ರ ಚಂದ್ರ ಗ್ರಹ ಸಂಚಾರವು ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸಬಹುದು. ಬಹುನಿರೀಕ್ಷಿತ ಹಣ ಈ ಸಮಯದಲ್ಲಿ ಉಪಯೋಗಕ್ಕೆ ಬರಬಹುದು. ಹೂಡಿಕೆಗಳು ಅನಿರೀಕ್ಷಿತ ಲಾಭವನ್ನು ನೀಡುತ್ತವೆ. ಐಷಾರಾಮಿ ವಸ್ತುಗಳ ಮೇಲಿನ ವೆಚ್ಚಗಳು ಹೆಚ್ಚಾಗಲಿವೆ. ಆದರೆ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು ಕಂಡುಬರುವ ಸಾಧ್ಯತೆಗಳು ಇವೆ. ಇದಲ್ಲದೆ ಹೆಚ್ಚಿದ ಆತ್ಮವಿಶ್ವಾಸ ನಿಮ್ಮ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲುಗಳನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆಯುವ ಸಮಯ. ಈ ಸಮಯದಲ್ಲಿ ನೀವು ಮಾಡುವ ಕಾರ್ಯಗಳು ದುಪ್ಪಟ್ಟು ಲಾಭವನ್ನು ನೀಡುತ್ತವೆ. ಹಿಂದೆ ಮಾಡಿದ ಸಾಲಗಳನ್ನು ತೀರಿಸಲು ಸಾಧ್ಯವಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಇದಲ್ಲದೆ ಉದ್ಯೋಗದಲ್ಲಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ವೃದ್ಧಿಯಾಗುತ್ತವೆ. ಇದು ವ್ಯವಹಾರ ಮತ್ತು ವೈಯಕ್ತಿಕ ವಿಷಯಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಸಮಯ. ಹೀಗಾಗಿ ನೀವು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸು ಕಾಣುವಿರಿ. ನೆಮ್ಮದಿಯ ಜೀವನ ನಿಮ್ಮದಾಗಲಿದೆ. ದೀರ್ಘಕಾಲದಿಂದ ನಿಂತುಹೋಗಿದ್ದ ಶುಭ ಕಾರ್ಯಗಳು ಮತ್ತೆ ಶುರುವಾಗಲಿವೆ.
ತುಲಾ ರಾಶಿ
ಲಕ್ಷ್ಮಿ ರಾಜಯೋಗದಿಂದಾಗಿ ಸೆಪ್ಟೆಂಬರ್ 13ರಿಂದ ತುಲಾ ರಾಶಿಯವರ ಆದಾಯ ದ್ವಿಗುಣವಾಗುವುದು. ವಿದೇಶದಲ್ಲಿ ವ್ಯಾಪಾರ ಅಥವಾ ಕೆಲಸದಲ್ಲಿ ತೊಡಗಿರುವವರು ಹೆಚ್ಚಿನ ಲಾಭವನ್ನು ಗಳಿಸಬಹುದು. ಶುಕ್ರ ಚಂದ್ರ ಗ್ರಹಗಳ ಸಂಯೋಗದಿಂದ ತುಲಾ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಹಳೆಯ ಹೂಡಿಕೆಗಳಿಂದ ಲಾಭವನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಇರುತ್ತವೆ. ವಿಶೇಷವಾಗಿ ಶುಕ್ರನು ಹಣದ ಮನೆಯಲ್ಲಿ ಸಂಯೋಗದಲ್ಲಿರುವುದರಿಂದ, ಆರ್ಥಿಕ ಪರಿಸ್ಥಿತಿ ನಿರೀಕ್ಷೆಗಿಂತ ಹೆಚ್ಚು ಸುಧಾರಿಸುತ್ತದೆ. ಆರ್ಥಿಕ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳು ಬಹಳ ಕಡಿಮೆಯಾಗುವುದು. ಪ್ರಮುಖ ಅಗತ್ಯಗಳು ಈಡೇರುತ್ತವೆ. ಆರೋಗ್ಯ ಬಹಳಷ್ಟು ಸುಧಾರಣೆ ಕಾಣುವುದು. ನೀವು ವೈಯಕ್ತಿಕ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ವೃತ್ತಿ ಮತ್ತು ಕೆಲಸದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿಯೂ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ನೀವಿರುವ ಸ್ಥಳದಲ್ಲಿ ಉದ್ಯೋಗ ಸಿಗಬಹುದು. ನಿರೀಕ್ಷಿತ ಶುಭ ಸುದ್ದಿ ಬರಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಶುಕ್ರ ಚಂದ್ರ ಸಂಯೋಗ ಅಪಾರ ಲಾಭವನ್ನು ತಂದುಕೊಡುವುದು. ಶುಕ್ರನ ಅನುಗ್ರಹದಿಂದ ಮನೆಯಲ್ಲಿ ಮದುವೆಯಂತಹ ಶುಭ ಘಟನೆಗಳು ನಡೆಯಲಿವೆ. ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಣೆ ಕಾಣುವುದು. ಇಲ್ಲಿಯವರೆಗೆ ನಿಧಾನವಾಗಿ ಚಲಿಸುತ್ತಿರುವ ಯೋಜನೆಗಳು ವೇಗವನ್ನು ಪಡೆಯಲು ಪ್ರಾರಂಭಿಸಬಹುದು. ಬೆಳವಣಿಗೆ ಮತ್ತು ಆರ್ಥಿಕ ಲಾಭಗಳಿಗೆ ಅವಕಾಶಗಳನ್ನು ಸೃಷ್ಟಿಲಾಗಲಿವೆ. ವೃತ್ತಿಪರ ಮತ್ತು ವ್ಯವಹಾರ-ಸಂಬಂಧಿತ ಪ್ರಯತ್ನಗಳಲ್ಲಿ ಅನುಕೂಲಕರ ಬೆಳವಣಿಗೆಗಳು ಕಂಡುಬರುವ ಸಾಧ್ಯತೆ ಉಂಟು. ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳ ಬೆಂಬಲ ನಿಮ್ಮ ಮೇಲೆ ಇರುವುದರಿಂದ ನಿಮ್ಮೆಲ್ಲಾ ಕಾರ್ಯಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ಆದರೆ ಸಮಾಜದಲ್ಲಿ ನಿಮ್ಮ ಖ್ಯಾತಿ ಮತ್ತು ಪ್ರಭಾವ ದ್ವಿಗುಣವಾಗಲಿದೆ.
-
ಪುತ್ತೂರು19 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಬಿಗ್ ನ್ಯೂಸ್23 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಮಂಗಳೂರು22 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
ಬಿಗ್ ನ್ಯೂಸ್21 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ಶಿಕ್ಷಣ22 hours agoSpecial classes: ಮಳೆ ರಜೆ ಹೊಂದಾಣಿಕೆ: ಅ.3ರಿಂದ ಅ.7ರವರೆಗೆ ದಸರಾ ರಜೆಯಲ್ಲೂ ವಿಶೇಷ ತರಗತಿ
-
ಅಪರಾಧ21 hours agoMangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
-
ಶಿಕ್ಷಣ22 hours agoNarendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
-
ಶಿಕ್ಷಣ22 hours agoVivekananda-ವಿವೇಕಾನಂದ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅಗತ್ಯ : ಪ್ರತಿಮಾ



















Vinay
October 24, 2025 at 3:54 pm
ಬುದ್ಧಿವಂತರೆನಿಸಿಕೊಂಡವರು ಕೂಡ ಮೂರ್ಖರಾಗುವುದು ಹೀಗೇನೇ. ಮುಖ್ಯಮಂತ್ರಿಯಡ್ಡು ಕೇವಲ ಭರವಸೆಯೇ ಹೊರತು ಘೋಷಣೆ ಅಲ್ಲ. ಈ ಗಿಮಿಕ್ ಅರ್ಥ ಆಗದವರು ಮೂರ್ಖರು. ಅಷ್ಟೇ