ಅಂತರ ರಾಜ್ಯ
Vaibhav Suryavanshi-ವಿಶ್ವವನ್ನೇ ನಿಬ್ಬೆರಗಾಗಿಸಿದ ಐಪಿಎಲ್ ಹುಟ್ಟಿದ ನಂತರ ಹುಟ್ಟಿದ ಹುಡುಗ : ಭಾರತದ ವೇಗದ ಶತಕ ಭಾರಿಸಿದ 14ರ ಹರೆಯದ ವೈಭವ್ ಸೂರ್ಯವಂಶಿ ಮುರಿದ ದಾಖಲೆಗಳೆಷ್ಟು ಗೊತ್ತೇ..?
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಗಳಿಸಿದ ಆಟಗಾರನೆಂಬ ದಾಖಲೆ ವೈಭವ್ ಸೂರ್ಯವಂಶಿ(14 ವರ್ಷ, 32 ದಿನ) ಹೆಸರಿಗಾಗಿದೆ. ಈ ಬಾಲಕನ ಆಟಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಈತ ಕ್ರೀಸಿನಲ್ಲಿದ್ದ 59 ನಿಮಿಷಗಳ ಕಾಲ ಹತ್ತು ಹಲವು ದಾಖಲೆಗಳನ್ನು ಬರೆದ. ಆಡಿದ್ದು ಕೇವಲ 38 ಎಸೆತ ! ಅಷ್ಟರಲ್ಲಿಯೇ 101 ರನ್! ಅದರಲ್ಲಿ 11 ಸಿಕ್ಸರ್ 7 ಬೌಂಡರಿ. 14ರ ಹರೆಯದ ಬಾಲಕ ಮೇಲಿಂದ ಮೇಲೆ ಚೆಂಡನ್ನು ಬೌಂಡರಿ ಸಿಕ್ಸರ್ ಗಟ್ಟುತ್ತಿದ್ದರೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತು ನೋಡುತ್ತಿದ್ದರು.
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಗಳಿಸಿದ ಆಟಗಾರನೆಂಬ ದಾಖಲೆ ವೈಭವ್ ಸೂರ್ಯವಂಶಿ(14 ವರ್ಷ, 32 ದಿನ) ಹೆಸರಿಗಾಗಿದೆ. ಈ ಬಾಲಕನ ಆಟಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಈತ ಕ್ರೀಸಿನಲ್ಲಿದ್ದ 59 ನಿಮಿಷಗಳ ಕಾಲ ಹತ್ತು ಹಲವು ದಾಖಲೆಗಳನ್ನು ಬರೆದ. ಆಡಿದ್ದು ಕೇವಲ 38 ಎಸೆತ ! ಅಷ್ಟರಲ್ಲಿಯೇ 101 ರನ್! ಅದರಲ್ಲಿ 11 ಸಿಕ್ಸರ್ 7 ಬೌಂಡರಿ. 14ರ ಹರೆಯದ ಬಾಲಕ ಮೇಲಿಂದ ಮೇಲೆ ಚೆಂಡನ್ನು ಬೌಂಡರಿ ಸಿಕ್ಸರ್ ಗಟ್ಟುತ್ತಿದ್ದರೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತು ನೋಡುತ್ತಿದ್ದರು.
ಕೊನೆಗೆ ಶತಕ ಬಾರಿಸುವಾಗಲಂತೂ ಅತೀವ ಕಾಲುನೋವಿನಿಂದಾಗಿ ವ್ಹೀಲ್ ಚೇರ್ ಬಳಸುವ ಕೋಚ್ ರಾಹುಲ್ ದ್ರಾವಿಡ್ ಅವರೇ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. ಎದುರಾಳಿ ತಂಡದ ಸದಸ್ಯರೂ ಮುಕ್ತ ಮನಸ್ಸಿನಿಂದ ಮುಗ್ಧ ಹುಡುಗನ ಸಾಧನೆಗೆ ತಲೆ ದೂಗಿದರು. ಕೇವಲ 3ನೇ ಪಂದ್ಯವನ್ನಾಡಿದ ಆತ ಬ್ಯಾಟಿಂಗ್ ನ ಎಲ್ಲಾ ಪಟ್ಟುಗಳನ್ನು ನುರಿತ ಹುದ್ದರಿಯಾಗಿ ಕಂಡ. ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಈತ ಮುರಿದ ದಾಖಲೆಗಳು ಹತ್ತು ಹಲವು. ಸಣ್ಣಪುಟ್ಟದು ಅಂತ ಸೇರಿಸುತ್ತಾ ಹೋದರೆ ಅದೇ ನೂರಾರು ಆದೀತು. ಆದರೆ ಮುಖ್ಯವಾದ 11 ದಾಖಲೆಗಳನ್ನು ಇಲ್ಲಿ ನೀಡಲಾಗಿದೆ.
ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಗಳಿಸಿದ ಆಟಗಾರನೆಂಬ ದಾಖಲೆ 2011ರಲ್ಲಿ ಹುಟ್ಟಿದ ವೈಭವ್ ಸೂರ್ಯವಂಶಿ(14 ವರ್ಷ, 32 ದಿನ) ಹೆಸರಿಗಾಗಿದೆ. ಈ ಹಿಂದೆ ಈ ದಾಖಲೆ ಕರ್ನಾಟಕದ ಮನೀಶ್ ಪಾಂಡೆ(19 ವರ್ಷ 253 ದಿನ) ಅವರ ಹೆಸರಲ್ಲಿತ್ತು. ಅವರು 2009 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರವಾಗಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಶತಕ ಗಳಿಸಿದರು. ಐಪಿಎಲ್ ಪಂದ್ಯಾಟ 2007ರಲ್ಲಿ ಪ್ರಾರಂಭವಾಗಿತ್ತು.
ಐಪಿಎಲ್ ವೇಗದ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆಗೂ ಇದೀಗ ವೈಭವ್ ಸೂರ್ಯವಂಶಿ ಒಡೆಯರಾಗಿದ್ದಾರೆ. 2010ರಲ್ಲಿ ಭಾರತದ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ಅವರು ರಾಜಸ್ಥಾನ ರಾಯಲ್ಸ್ ಪರವಾಗಿ ಮುಂಬೈ ಇಂಡಿಯನ್ಸ್ ವಿರುದ್ಧ 37 ಎಸೆತಗಳಲ್ಲಿ ಶತಕ ಬಾರಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.
ವೈಭವ್ ಸೂರ್ಯವಂಶಿ ಅವರು ಟಿ20 ಸ್ವರೂಪದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. 2013 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಶ್ಚಿಮ ವಲಯ ಪಂದ್ಯದಲ್ಲಿ ಮಹಾರಾಷ್ಟ್ರದ ವಿಜಯ್ ಜೋಲ್(18 ವರ್ಷ 118 ದಿನ) ಅವರು ಮುಂಬೈ ವಿರುದ್ಧ ಶತಕ ಬಾರಿಸಿದ್ದರು. ಆ ದಾಖಲೆಯನ್ನು ಇದೀಗ ಸೂರ್ಯವಂಶಿ ಮುರಿದರು.
ಒಟ್ಟಾರೆ ಐಪಿಎಲ್‌ನಲ್ಲಿ ಇದು ಎರಡನೇ ಅತಿ ವೇಗದ ಶತಕವಾಗಿದೆ. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ಪೂರೈಸಿರುವುದು ದಾಖಲೆಯಾಗಿದೆ.
ಪ್ರಥಮ ಐಪಿಎಲ್ ಪಂದ್ಯವನ್ನು ಆಡಿದ ಅಫ್ಘಾನಿಸ್ತಾನದ ಮಧ್ಯಮ ವೇಗಿ ಕರೀಮ್ ಜನತ್ ಅವರಿಗೆ ವೈಭವ್ ಸೂರ್ಯವಂಶಿ ಅವರು 30 ರನ್ ಹೊಡೆದರು. ಈ ಮೂಲಕ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಕೊಟ್ಟ ಕೆಟ್ಟ ದಾಖಲೆ ಕರೀಮ್ ಜನತ್ ಅವರ ಪಾಲಾಯಿತು.
ಐಪಿಎಲ್ ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಗೌರವಕ್ಕೂ ಅವರು ಪಾತ್ರರಾದರು. ರಾಜಸ್ಥಾನ ರಾಯಲ್ಸ್ ತಂಡದ ಹಂಗಾಮಿ ನಾಯಕರಾಗಿರುವ ರಿಯಾನ್ ಪರಾಗ್(17 ವರ್ಷ 175 ದಿನ) ಅವರು ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೊಡೆದಿದ್ದು ಈವರೆಗಿನ ದಾಖಲೆಯಾಗಿತ್ತು.
ಅತಿ ಹೆಚ್ಚು ಸಿಕ್ಸ್ ಹೊಡೆದ 18ರೊಳಗಿನ ಆಟಗಾರ ಎಂಬ ದಾಖಲೆಯನ್ನೂ ಅವರು ಬರೆದಿದ್ದಾರೆ. ಅಭಿಷೇಕ್ ಶರ್ಮಾ ಮತ್ತು ಕಿಯಾನ್ ಪರಾಗ್ ತಲಾ 5 ಸಿಕ್ಸರ್ ಗಳನ್ನು ಬಾರಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ವೈಭವ್ ಅವರು ಈಗಾಗಲೇ 16 ಸಿಕ್ಸ್ ಗಳನ್ನು ಬಾರಿಸಿದ್ದು ಮುಂದಿನ ದಿನಗಳಲ್ಲೂ ಇದೇ ರೀತಿ ಸಿಕ್ಸರ್ ಸುರಿಮಳೆ ಸುರಿಸಿದರೆ ಅಭೇದ್ಯ ದಾಖಲೆಯಾಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ.
ಐಪಿಎಲ್ ನ ಇನ್ನಿಂಗ್ಸ್ ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ ಅತಿ ಕಿರಿಯ ಎಂಬ ದಾಖಲೆಯನ್ನೂ ಅವರು ಇದೀಗ ಬರೆದಿದ್ದಾರೆ. ಮುಂಬೈ ಪರ ಆಡಿದ್ದ ಡಿವಾಲ್ಡ್ ಬ್ರೇವಿಸ್ ಅವರು 18 ವರ್ಷ ವಯಸ್ಸಿನಲ್ಲಿ 5 ಸಿಕ್ಸರ್ ಸಿಡಿಸಿದ್ದು ಈವರೆಗಿನ ದಾಖಲೆಯಾಗಿತ್ತು. ವೈಭವ್ ಈ ಪಂದ್ಯದಲ್ಲಿ 11 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಅಂಡರ್ 17 ವಯೋಮಿತಿಯಲ್ಲಿ 10ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿದ ಕಿರಿಯ ಬ್ಯಾಟರ್ ದಾಖಲೆಯೂ ವೈಭವ್ ಹೆಸರಿಗಾಗಿದೆ. ಆಯುಷ್ ಆವಸ್ತಿ ಅವರು 15 ವರ್ಷದವರಾಗಿದ್ದಾಗ 10 ಸಿಕ್ಸರ್ ಹೊಡೆದಿದ್ದು ಈವರೆಗಿನ ದಾಖಲೆಯಾಗಿತ್ತು.
ವೈಭವ್ ಅವರು ಅರ್ಧಶತಕ ಗಳಿಸಲು ತೆಗೆದುಕೊಂಡದ್ದು ಕೇವಲ 17 ಎಸೆತಗಳನ್ನು. ಇದು ಈ ಐಪಿಎಲ್ ಸೀಸನ್ ನ ಅತ್ಯಂತ ವೇಗದ ಅರ್ಧಶತಕ ಮಾತ್ರವಲ್ಲದೆ ಕಿರಿಯ ಬ್ಯಾಟರ್ ಗಳಿಸಿದ ಅತ್ಯಂತ ವೇಗದ ಅರ್ಧಶತಕ ಸಹ ಆಗಿದೆ. ಅಂಡರ್ 17, ಅಂಡರ್ 18 ವಯೋಮಿತಿಯಲ್ಲಿ ಸಹ ಇಷ್ಟು ವೇಗದ ಅರ್ಧಶತಕ ಹೊಡೆದ ಮತ್ತೊಬ್ಬ ಆಟಗಾರನಿಲ್ಲ..
ಎಲ್ಲದಕ್ಕಿಂತ ಮುಖ್ಯವಾಗಿ ಈ ಅದ್ಭುತ ಇನ್ನಿಂಗ್ಸ್ ಗಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಐಪಿಎಲ್ ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆಯೂ ಅವರ ಪಾಲಾಗಿದೆ.
ರಾಜಸ್ಥಾನ ರಾಯಲ್ಸ್ ಹೊಸ ದಾಖಲೆ
ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ನಷ್ಟಕ್ಕೆ 209 ರನ್ ಗಳಿಸಿತ್ತು. ಇದನ್ನು ರಾಜಸ್ಥಾನ ರಾಯಲ್ಸ್ ತಡ ಇನ್ನೂ 25 ಎಸತಗಳು ಉಳಿದಿರುವಂತೆ ಬೆನ್ನಟ್ಟಿ ವಿಜಯಶಾಲಿಯಾಯಿತು. ಇದು ಐಪಿಎಲ್ ಇತಿಹಾಸದಲ್ಲಿ 200ಕ್ಕಿಂತ ಹೆಚ್ಚು ರನ್ ಅನ್ನು ಅತ್ಯಂತ ವೇಗವಾಗಿ ಬೆನ್ನಟ್ಟಿ ಗೆದ್ದ ದಾಖಲೆಯಾಗಿದೆ.
ಅಂತರ ರಾಜ್ಯ
ECI-ಮುಖ್ಯ ಚುನಾವಣ ಆಯುಕ್ತ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ‘ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಅಭಿಯಾನ’…! 20 ರಾಜ್ಯಗಳಲ್ಲಿ ಕೈಬಿಟ್ಟ 13 ಕೋಟಿ ಮತದಾರರ ಮರುಸೇರ್ಪಡೆಗೆ ಆಯೋಗ ಅವಕಾಶ
ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಮರುಸೇರ್ಪಡೆ ಮಾಡಲು, ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ಸಮಗ್ರ ಪರಿಶೀಲನಾ ಅಭಿಯಾನಕ್ಕೆ ಆದೇಶಿಸಿದೆ.
ಹೊಸದಿಲ್ಲಿ: ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಮರುಸೇರ್ಪಡೆ ಮಾಡಲು, ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ಸಮಗ್ರ ಪರಿಶೀಲನಾ ಅಭಿಯಾನಕ್ಕೆ ಆದೇಶಿಸಿದೆ.
ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರಡು ಪಟ್ಟಿಯಿಂದ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಭಾರಿ ರಾಜಕೀಯ ವಿವಾದ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಈ ತಿದ್ದುಪಡಿ ಕ್ರಮ ಕೈಗೊಳ್ಳಲಾಗಿದೆ.
ನಿನ್ನೆ (ಅ.1-ಗುರುವಾರ) ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ, ಚುನಾವಣಾ ಆಯೋಗವು ಈ ಸ್ಪಷ್ಟ ನಿರ್ದೇಶನ ನೀಡಿದೆ. ಮತದಾರರ ನೋಂದಣಿಯು ನಿರಂತರ ಪ್ರಕ್ರಿಯೆಯಾಗಿದ್ದು, ಎಸ್‌ಐಆರ್ ಅವಧಿಯಲ್ಲಿ ನೋಂದಣಿಯಾಗದ ಕಾರಣಕ್ಕೆ ಯಾವುದೇ ಅರ್ಹ ನಾಗರಿಕನಿಗೆ ಹಕ್ಕು ನಿರಾಕರಿಸಬಾರದು ಎಂದು ಆಯೋಗವು ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಿ ಅಧಿಕಾರಿಗಳಿಗೆ (ERO) ಸೂಚಿಸಿದೆ. ಎಸ್‌ಐಆರ್ ಅಕ್ರಮ ವಿರೋಧಿಸಿ ಸಿಎಂ ಡಿಕೆ ಶಿವಕುಮಾರ್ ಪ್ರತಿಭಟನೆ ನಡೆಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
ಮನೆ-ಮನೆ ಪರಿಶೀಲನೆ ಮತ್ತು ಮರುನೋಂದಣಿ ಪ್ರಕ್ರಿಯೆ:
ಈ ವಿಶೇಷ ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿಗಳು (BLO) ಹಾಲಿ ಮತದಾರರ ಪಟ್ಟಿಯನ್ನು ಎಸ್‌ಐಆರ್ ಪೂರ್ವ ಪಟ್ಟಿಯೊಂದಿಗೆ ಹೋಲಿಸಿ, ಹೆಸರು ಕಾಣೆಯಾಗಿರುವ ಮತದಾರರ ಬೂತ್‌ವಾರು ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಮತದಾರರ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲಿಸಲಿದ್ದಾರೆ. ಪ್ರತಿ ಅಧಿಕಾರಿಗೆ ವಾರಕ್ಕೆ ಕನಿಷ್ಠ 20 ರಿಂದ 25 ಮತದಾರರ ಮನೆಗಳಿಗೆ ಭೇಟಿ ನೀಡಿ, ಸುಮಾರು ಒಂದು ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.
ಅರ್ಹತೆ ಹೊಂದಿರುವ ಮತದಾರರಿಂದ ನಮೂನೆ-6ಪಡೆದು, ಮರುನೋಂದಣಿಗೆ ಅಧಿಕಾರಿಗಳು ನೆರವಾಗಲಿದ್ದಾರೆ. ಪರಿಶೀಲನೆ ವೇಳೆ ಮೊದಲ ಬಾರಿಗೆ ಮತ ಚಲಾಯಿಸಲಿರುವವರು, ಯುವ ಮತದಾರರು ಹಾಗೂ ಅಂಚಿನಲ್ಲಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ನೋಂದಣಿ ಮಾಡಿಕೊಳ್ಳಲಾಗುತ್ತದೆ.
ಅಂಚಿನ ಸಮುದಾಯಗಳಿಗೆ ಆದ್ಯತೆ:
ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಬಿಎಲ್‌ಒಗಳು ಸಿದ್ಧಪಡಿಸಿದ ಪಟ್ಟಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಸ್ವೀಕೃತವಾದ ಅರ್ಜಿಗಳನ್ನು ಜನಪ್ರತಿನಿಧಿ ಕಾಯ್ದೆ-1950 ಹಾಗೂ ಮತದಾರರ ನೋಂದಣಿ ನಿಯಮಗಳು-1960ರ ಅಡಿಯಲ್ಲಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಇದರ ಜೊತೆಗೆ, ರಾತ್ರಿ ಆಶ್ರಯ ಕೇಂದ್ರಗಳು, ಕಾರ್ಮಿಕರ ವಸತಿ ಪ್ರದೇಶಗಳು ಹಾಗೂ ನಿರಾಶ್ರಿತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ವಿಶೇಷ ನೋಂದಣಿ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ‘ಸ್ವೀಪ್’ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ಸಾಗಲಿದೆ.
ವಿವಾದ ಮತ್ತು ರಾಜಕೀಯ ಸಂಘರ್ಷ:
ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಅರ್ಹ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದವು. ಅಂಕಿ-ಅಂಶಗಳ ಪ್ರಕಾರ, ಎಸ್‌ಐಆರ್ ಬಳಿಕ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಒಟ್ಟಾರೆ ಶೇ.10.2ರಷ್ಟು ಕಡಿತ ಕಂಡುಬಂದಿದ್ದು, ಇದರಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಮೃತ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಚುನಾವಣಾ ಆಯೋಗದ ಆಂತರಿಕ ನಿರ್ಧಾರಗಳ ಕುರಿತು ಭಿನ್ನಾಭಿಪ್ರಾಯ ಎಂಬ ವರದಿಗಳು ಹರಿದಾಡಿದ್ದರೂ, ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಪ್ರಸ್ತುತ ಆರಂಭವಾಗಿರುವ ಈ ವಿಶೇಷ ಅಭಿಯಾನವು ಪಟ್ಟಿಯಿಂದ ಹೊರಬಿದ್ದ ಅರ್ಹ ಮತದಾರರಿಗೆ ತಮ್ಮ ಸಾಂವಿಧಾನಿಕ ಹಕ್ಕನ್ನು ಮರಳಿ ಪಡೆಯಲು ಮಹತ್ವದ ಅವಕಾಶ ಕಲ್ಪಿಸಿದೆ.
ಅಂತರ ರಾಜ್ಯ
Jantar Mantar-ಜಂತರ್ ಮಂತರ್ ಪ್ರತಿಭಟನೆ: 500ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲು ಮುಂದಾದ ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲು ಮುಂದಾದ ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಲು ಜಂತರ್ ಮಂತರ್‌ನತ್ತ ತೆರಳುತ್ತಿದ್ದ ಎಎಪಿ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್, ಸಂಜೀವ್ ಝಾ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಸೌರಭ್ ಭಾರದ್ವಾಜ್, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ತಮ್ಮನ್ನು ಪೊಲೀಸರು ತಡೆದಿರುವುದು ಅಪ್ರಜಾಸತ್ತಾತ್ಮಕ ಕ್ರಮ ಎಂದು ಆರೋಪಿಸಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಖಂಡಿಸಿ ಎಎಪಿ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (SFI) ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಜಂಟಿಯಾಗಿ ಪ್ರತಿಭಟನೆಗೆ ಕರೆ ನೀಡಿದ್ದವು.
ಅಶೋಕ ರಸ್ತೆಯ ಮೂಲಕ ಜಂತರ್ ಮಂತರ್‌ಗೆ ತೆರಳಲು ಯತ್ನಿಸಿದ ಎಸ್‌ಎಫ್‌ಐನ ಸುಮಾರು 700ಕ್ಕೂ ಹೆಚ್ಚು ಸದಸ್ಯರನ್ನು ಪೊಲೀಸರು ಮಾರ್ಗಮಧ್ಯೆಯೇ ತಡೆದಿದ್ದಾರೆ. ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಐಶೆ ಘೋಷ್ ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಫಿರೋಜ್ ಶಾ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದ ಎನ್‌ಎಸ್‌ಯುಐ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಗೆ ಯಾವುದೇ ಪೂರ್ವಾನುಮತಿ ಪಡೆಯಲಾಗಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ಪ್ರತಿಭಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (DMRC) ದೆಹಲಿ ವ್ಯಾಪ್ತಿಯ 11 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಂದಿನ ಆದೇಶದವರೆಗೆ ಮುಚ್ಚಿದೆ.
ಅಂತರ ರಾಜ್ಯ
Jantar Mantar-ಪ್ರತಿಭಟನೆಯ ಹಿನ್ನೆಲೆ ಜಂತರ್ ಮಂತರ್‌ನಲ್ಲಿ ಇಂಟರ್‌ನೆಟ್ ಸ್ಥಗಿತ: ‘ಸರ್ವಾಧಿಕಾರಿ ನಿಜಕ್ಕೂ ಭಯಭೀತಗೊಂಡಿದ್ದಾರೆ’-ದೀಪ್ಕೆ
ದೆಹಲಿ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ‘ಸರ್ವಾಧಿಕಾರಿ ನಿಜಕ್ಕೂ ಭಯಭೀತಗೊಂಡಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ನವದೆಹಲಿ: ದೆಹಲಿ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ‘ಸರ್ವಾಧಿಕಾರಿ ನಿಜಕ್ಕೂ ಭಯಭೀತಗೊಂಡಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿಯ 12 ಮೆಟ್ರೊ ನಿಲ್ದಾಣಗಳಲ್ಲಿ ಪ್ರವೇಶ ನಿರ್ಬಂಧ:
ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ವಿದ್ಯಾರ್ಥಿ ಸಂಘಟನೆಗಳು ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಸೇರಿದಂತೆ ದೆಹಲಿಯ ಪ್ರಮುಖ 12 ಮೆಟ್ರೊ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ತಾತ್ಕಾಲಿಕವಾಗಿ ಮುಚ್ಚಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮುಂದಿನ ಆದೇಶದವರೆಗೆ ಜನಪಥ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ರಾಜೀವ್ ಚೌಕ್, ಬಾರಾಖಂಬಾ, ಸೇವಾ ತೀರ್ಥ, ಮಂಡಿ ಹೌಸ್, ಲೋಕ ಕಲ್ಯಾಣ ಮಾರ್ಗ, ಐಎನ್‌ಎ, ಚಾವಿ ಬಜಾರ್, ರಾಮಕೃಷ್ಣ ಆಶ್ರಮ ಮಾರ್ಗ ಹಾಗೂ ನವದೆಹಲಿ ಮೆಟ್ರೊ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದೆ ಎಂದು ಡಿಎಂಆರ್‌ಸಿ ‘ಎಕ್ಸ್’ನಲ್ಲಿ ತಿಳಿಸಿದೆ.
ಎಎಪಿ ಜತೆಗೆ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ), ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.


















