ಸಾಮಾಜಿಕ ಮಾಧ್ಯಮ
Chaitra Kundapura : ಬಿಗ್ಬಾಸ್ ಮನೆಯ ಬಾತ್ ರೂಂನಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಚೈತ್ರಾ ಕುಂದಾಪುರ ! ಆಸ್ಫತ್ರೆಗೆ ದಾಖಲು

ಕನ್ನಡ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರರವರು ಇದ್ದಕ್ಕಿದ್ದಂತೆ ಬಿಗ್ಬಾಸ್ ಮನೆಯ ಬಾತ್ ರೂಂನಲ್ಲಿ ಕುಸಿದು ಬಿದ್ದಿದ್ದಾರೆ. ಬಾತ್ ರೂಂ ಏರಿಯಾದಲ್ಲಿ ಒಬ್ಬರೇ ಇದ್ದಾಗ ಸಡನ್ ಆಗಿ ಚೈತ್ರಾ ಕುಸಿದು ಬಿದ್ದಿದ್ದಾರೆ. ಬಿಗ್ ಬಾಸ್ ಇದನ್ನು ಗಮನಿಸಿದ್ದು, ಇನ್ನಿಬ್ಬರು ಸ್ಪರ್ಧಿಗಳಾದ ಗೌತಮಿ ಹಾಗೂ ಮೋಕ್ಷಿತಾಗೆ ಕೂಡಲೇ ಬಾತ್ರೂಂಗೆ ಹೀಗಿ ಚೈತ್ರಾ ಅವರಿಗೆ ಸಹಾಯ ಮಾಡಿ ಎಂದು ನಿರ್ದೇಶಿಸಿದ್ದಾರೆ.
ತಕ್ಷಣ ಗೌತಮಿ ಹಾಗೂ ಮೋಕ್ಷಿತಾ ಬಾತ್ ರೂಂಗೆ ಓಡಿ ಹೋಗಿದ್ದಾರೆ. ಆಗ ಚೈತ್ರಾ ಅವರು ನೆಲದ ಮೇಲೆ ಬಿದ್ದು ಕೊಂಡಿದ್ದರು. ತಕ್ಷಣ ಅವರಿಬ್ಬರು ಚೈತ್ರಾ ಮುಖಕ್ಕೆ ತಣ್ಣೀರು ಪ್ರೋಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. . ಆದರೂ ಚೈತ್ರಾ ಅವರು ಎದ್ದೇಳಲ್ಲಿಲ್ಲ. ಹೀಗಾಗಿ ಬಿಗ್ಬಾಸ್ ಚೈತ್ರಾ ಅವರನ್ನು ಕನ್ಫೆಕ್ಷನ್ ರೂಂ ಕರೆ ತನ್ನಿ ಅಂತ ಹೇಳಿದ್ದರು. ಬಳಿಕ ಎಲ್ಲ ಸ್ಪರ್ಧಿಗಳು ಚೈತ್ರಾ ಅವರನ್ನು ಕನ್ಫೆಕ್ಷನ್ ರೂಂಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಅವರನ್ನು ಆಸ್ಫತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಮದು ತಿಳಿದು ಬಂದಿದೆ

ಚೈತ್ರಾ ಕುಂದಾಪುರ ಅವರನ್ನು ಎತ್ತಿಕೊಂಡು ಹೋಗುವಾಗ ಮಾತನಾಡಿದ ತ್ರಿವಿಕ್ರಮ್, “ಅವರು ಬೆಳಗ್ಗೆಯಿಂದ ಏನೂ ತಿಂದಿಲ್ಲ, ಈಗ ತಿಂದ್ರು ಅಂತ ಕಾಣತ್ತೆ..” ಎಂದು ಹೇಳಿದರು. ಬಹುಶಃ ಊಟವನ್ನು ಸರಿಯಾಗಿ ಮಾಡದೇ ಇರುವುದಕ್ಕೆ ನಿಶ್ಯಕ್ತಿಯಿಂದ ಬಳಲಿದ ಚೈತ್ರಾ ಕುಂದಾಪುರ ಈ ರೀತಿ ಪ್ರಜ್ಞೆ ತಪ್ಪಿ ಬಿದ್ದಿರಬಹುದೇ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಬಿಗ್ ಬಾಸ್ ಮಾತ್ರ ಚೈತ್ರಾಗೆ ಏನಾಯಿತು ಎಂಬುದು ತಿಳಿಸಿಲ್ಲ.

ಚೈತ್ರಾ ಅಸ್ವಸ್ಥಗೊಂಡ ಬಳಿಕವು ಎಂದಿನ ಟಾಸ್ಕ್‌ಗಳು ಬಿಗ್ ಬಾಸ್ ಮನೆಯಲ್ಲಿ ಮುಂದುವರಿದಿವೆ. ನಿನ್ನೆ ಕಳಪೆ, ಉತ್ತಮ ಪಟ್ಟಕ್ಕೆ ಆಯ್ಕೆ ಕೂಡ ನಡೆದಿದೆ.. ಆದರೇ ಈ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಚೈತ್ರಾ ಅವರು ಕಾಣಿಸಿಕೊಳ್ಳಲಿಲ್ಲ. ಅವರನ್ನು ಈ ಪ್ರತಿಕ್ರಿಯೆಯಿಂದಲೇ ಹೊರಗೆ ಇಡಲಾಗಿದೆ. ಕಳಪೆ ಆಯ್ಕೆಯಾಗುವುದನ್ನು ತಪ್ಪಿಸಲು ಚೈತ್ರಾ ನಾಟಕ ಆಡಿರಬಹುದೇ ಎಂಬ ಅನುಮಾನ ಬಿಗ್ ಬಾಸ್ ವೀಕ್ಷಕರನ್ನು ಕಾಡುತ್ತಿದೆ. ಈ ಹಿಂದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಕೂಡ ಚೈತ್ರಾ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಗ ಅದು ನಾಟಕ ಎಂಬ ಮಾತುಗಳು ಕೇಳಿ ಬಂದಿದ್ದವು

ಪೊಲೀಸ್ ಕಸ್ಟಡಿಯಲ್ಲಿದ್ದಗಾಲೂ ಪ್ರಜ್ಞೆ ತಪ್ಪಿದ್ದರು
ಕಳೆದ ವರ್ಷ ಚೈತ್ರಾ ಕುಂದಾಪುರ ಅವರನ್ನು ಟಿಕೆಟ್ ವಂಚನೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಆಗ ಪೊಲೀಸರ ವಶದಲ್ಲಿದ್ದ ಚೈತ್ರಾ ಬಾಯಿಯಿಂದ ನೊರೆ ಬಂದು ಪ್ರಜ್ಞೆ ತಪ್ಪಿದ್ದರು. ಆಗ ಅವರನ್ನು ಪರೀಕ್ಷೆ ಮಾಡಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, “ವಿವಿಧ ರೋಗ ಪತ್ತೆ ಪರೀಕ್ಷೆಗಳನ್ನು ಚೈತ್ರಾ ಕುಂದಾಪುರಗೆ ಮಾಡಲಾಗಿದೆ. ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ. ಅಲ್ಲದೆ, ಅವರಿಗೆ ಮೂರ್ಛೆ ರೋಗ ಕೂಡ ಇಲ್ಲ” ಎಂದು ಹೇಳಿದ್ದರು. ಬಟ್ಟೆ ತೊಳೆಯಲು ಪೊಲೀಸರು ನೀಡಿದ ಸೋಪು ನುಂಗಿ ಈ ರೀತಿ ಬಾಯಲ್ಲಿ ನೊರೆ ಬಂದಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿತ್ತು
ಸಾಮಾಜಿಕ ಮಾಧ್ಯಮ
ನೀವು ಕಳ್ಳರ ಜೊತೆಗಾದರೂ ಇರಿ. ಯಾರ ಜೊತೆಗಾದರೂ ಇರಿ. ಆದರೆ, ಸತ್ಯದ ಪರವಾಗಿ ಇರಿ: ಎಲೆಕ್ಟ್ರಾನಿಕ್ ಮೀಡಿಯಾದವರಿಗೆ ಸಿಎಂ ಕರೆ : ಯುಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ – ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ
ಹುಬ್ಬಳ್ಳಿ ಸೆ 15: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು.
ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.
ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ ಎಂದರು.
ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ಏನ್ ದೊಡ್ಡ ದೊಡ್ಡ ಚರ್ಚೆ ನಡೆಸಿದರು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ನೀವು ಹೀಗೆಲ್ಲಾ ತೋರಿಸಿದರೆ ಜನ ಒಪ್ತಾರಾ ಯೋಚನೆ ಮಾಡಿ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ ಸರ್ಕಾರ ಸದಾ ಸಿದ್ದ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಯಾವತ್ತೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ ಎಂದರು.
ಸಂಘದ ಬೇಡಿಕೆ
ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯು ಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿದ್ದು, ಇಂಥವರಿಂದ ಪತ್ರಿಕೋದ್ಯಮದ ಘನತೆ ಹಾಳಾಗಿದೆ. ಹೀಗಾಗಿ ಯು ಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿತು. ಈ ಬೇಡಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗಿವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಸಿನೆಮಾ
Kiara Advani War 2 bikini look: ಕಿಯಾರಾ ಬಿಕಿನಿ ಕಿಡಿ – ಎಲ್ಲರ ಕಣ್ಣು ಅಲ್ಲೇ! ‘ವಾರ್ 2’ ಟೀಸರ್‌ನಿಂದ ಇಂಟರ್ನೆಟ್‌ನಲ್ಲಿ ಅಲ್ಲೋಲ ಕಲ್ಲೋಲ

ವಾರ್ 2′ ಟೀಸರ್‌ನಲ್ಲಿ ಕಿಯಾರಾ ಅಡ್ವಾಣಿಯವರ ಚಿನ್ನದ ಬಿಕಿನಿ ಲುಕ್ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಅವರ ಕೇವಲ ಎರಡು ಸೆಕೆಂಡ್‌ಗಳ ಹಾಟ್ ದೃಶ್ಯವು ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.
Kiara Advani War 2 bikini look ಬಾಲಿವುಡ್‌ನ ಬ್ಯೂಟಿ ಕ್ವೀನ್ ಕಿಯಾರಾ ಅಡ್ವಾಣಿ ಇದೀಗ ಇಂಟರ್ನೆಟ್‌ನಲ್ಲಿ ಅಕ್ಷರಶಃ ಬೆಂಕಿ ಹಚ್ಚಿದ್ದಾರೆ! “ವಾರ್ 2” ಚಿತ್ರದ ಟೀಸರ್‌ನಲ್ಲಿ ಅವರು ತೊಟ್ಟ ಚಿನ್ನದ ಬಿಕಿನಿ ಇದೀಗ ನ್ಯಾಷನಲ್ ಹಾಟ್ ಟಾಪಿಕ್. ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ಗಿಫ್ಟ್ ಆಗಿ ರಿಲೀಸ್ ಆದ ಈ ಟೀಸರ್‌ನಲ್ಲಿ ಹೃತಿಕ್ ರೋಷನ್‌ರವರ ಮೈ ಜುಮ್ಮೆನ್ನಿಸೋ ಆಕ್ಷನ್ ಸೀಕ್ವೆನ್ಸ್‌ಗಳಿವೆ, ನಿಜ. ಆದರೆ, ಎಲ್ಲರ ಕಣ್ಣು, ಮನಸ್ಸು ಕದ್ದಿದ್ದು ಮಾತ್ರ ಕಿಯಾರಾ ಅವರ ಹಾಟ್ ಅವತಾರ!
ಬರೀ ಎರಡೇ ಎರಡು ಸೆಕೆಂಡುಗಳ ಕಾಲ ಕಡಲತೀರದಲ್ಲಿ, ಚಿನ್ನದ ಬಿಕಿನಿಯಲ್ಲಿ ಕಂಗೊಳಿಸಿರುವ ಕಿಯಾರಾ, ತಮ್ಮ ಫಿಟ್ ದೇಹ ಮತ್ತು ಆಕರ್ಷಕ ಮೈಮಾಟದಿಂದ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ರೆಡ್ಡಿಟ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ಕಾಳ್ಗಿಚ್ಚಿನಂತೆ ಹಬ್ಬಿದೆ. ‘ಕಿಯಾರಾ ಎರಡೇ ಸೆಕೆಂಡ್‌ನಲ್ಲಿ ಇಡೀ ಶೋ ಕದ್ದಿದ್ದಾರೆ’ ಎಂದು ಕೆಲವರು ಹೊಗಳಿದರೆ, ‘ಗರ್ಭಿಣಿಯಾಗಿದ್ದರೂ ಕಿಯಾರಾ ದೇವತೆಯಂತೆ ಕಾಣುತ್ತಿದ್ದಾರೆ’ ಎಂದು ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.ಅವರ ಫಿಟ್ನೆಸ್, ಆಕರ್ಷಕ ಮೈಮಾಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸದ್ಯ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಿಯಾರಾಗೆ, ‘ವಾರ್ 2’ ಹಲವು ಪ್ರಥಮಗಳ ಚಿತ್ರ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೊದಲ ಸಿನಿಮಾ, ಮೊದಲ ಪಕ್ಕಾ ಆಕ್ಷನ್ ಸಿನಿಮಾ, ಮತ್ತು ಹೌದು, ತೆರೆಮೇಲೆ ಮೊದಲ ಬಿಕಿನಿ ದೃಶ್ಯ ಕೂಡಾ ಇದೇ! ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ 2025ರ ಆಗಸ್ಟ್ 14ಕ್ಕೆ ತೆರೆಗೆ ಅಪ್ಪಳಿಸಲಿದೆ.

ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್! ಈ ಹಾಟ್ ಲುಕ್ ಕೆಲವರಲ್ಲಿ ಅನುಮಾನದ ಕಿಡಿಯನ್ನೂ ಹತ್ತಿಸಿದೆ. ಕೆಲವರು ಇದನ್ನು ಸಿಜಿಐ (ಕಂಪ್ಯೂಟರ್ ಜನರೇಟೆಡ್ ಇಮೇಜರಿ) ಇರಬೇಕು “ಇಲ್ಲ, ಬಾಡಿ ಡಬಲ್ ಇರಬಹುದು” ಅಂತೆಲ್ಲಾ ಕೆಲ ನೆಟ್ಟಿಗರು ಗುಸುಗುಸು ಶುರುಮಾಡಿದ್ದಾರೆ. ಆದರೆ, ಕಿಯಾರಾ ಅವರ ತಂಡ, “ಅದೆಲ್ಲಾ ಸುಳ್ಳು, ಕಿಯಾರಾ ಈ ಲುಕ್‌ಗಾಗಿ ಸಖತ್ ಆಗಿ ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ” ಅಂತ ಸ್ಪಷ್ಟನೆ ಕೊಟ್ಟಿದೆ.
ಸಾಮಾಜಿಕ ಮಾಧ್ಯಮ
ದೂರು ನೀಡಲು ಬಂದ ಮಹಿಳೆಯ ಜತೆ ಡಿವೈಎಸ್ಪಿ ಬಲವಂತದ ಸೆಕ್ಸ್ ! ಕಛೇರಿಯಲ್ಲೆ ರಾಸಲೀಲೆ ನಡೆಸುತ್ತಿರುವ ವಿಡಿಯೋ ವೈರಲ್ – ಗೃಹ ಸಚಿವರ ತವರು ಜಿಲ್ಲೆಯಲ್ಲಿ ಶಾಕಿಂಗ್ ಘಟನೆ

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದು ಇಂತಹ ವಿಕೃತ ಮನೋಸ್ಥಿತಿ ಇರುವವರಿಗೆ ಬುದ್ಧಿ ಕಲಿಸುವಂತಿರಬೇಕು ಎಂದು ವಿಡಿಯೊ ನೋಡಿದವರು ಒತ್ತಾಯಿಸಿದ್ದಾರೆ.
ತುಮಕೂರು : ಜ 2ಡಿವೈಎಸ್ಪಿಯೊಬ್ಬರು ರಾಜ್ಯ ಪೊಲೀಸ್ ಇಲಾಖೆಯ ಮಾನ ಹಾಗೂ ಗೌರವವನ್ನು ಹರಾಜು ಹಾಕಿದ ಘಟನೆಯೊಂದು ಗೃಹ ಸಚಿವ ಡಾ| ಪರಮೇಶ್ವರ್ ಅವರ ತವರು ಜಿಲ್ಲೆಯಿಂದ ವರದಿಯಾಗಿದೆ. ದೂರು ನೀಡಲು ಬಂದ ಸಂತ್ರಸ್ತ ಮಹಿಳೆಯನ್ನು ತುಮಕೂರು ಜಿಲ್ಲೆಯ ಮಧುಗಿರಿಯ ಡಿವೈಎಸ್ಪಿ ತನ್ನ ಕಾಮತೃಷೆ ತೀರಿಸಲು ಬಲವಂತವಾಗಿ ಬಳಸಲು ಯತ್ನಿಸಿದ ಆರೋಪ ಕೇಳಿ ಬಂದಿದೆ.ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಘಿದೆ.
ಏನಿದು ಪ್ರಕರಣ ?
ದೂರು ನೀಡಲು ಕಚೇರಿಗೆ ಬಂದ ಮಹಿಳೆಯೊಂದಿಗೆ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿದ್ದಾರೆ. ಇವರ ಹದ್ದು ಮೀರಿದ ವರ್ತನೆಯ ವಿಡಿಯೊ ವೈರಲ್ ಆಗಿದೆ. ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಪಾವಗಡದಿಂದ ಬಂದಿದ್ದ ಮಹಿಳೆಯನ್ನು ಏಕಾಂತ ಕೊಠಡಿಗೆ ಎಳೆದುಕೊಂಡು ಹೋದ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ.
ಪಾವಗಡ ಮೂಲದ ಮಹಿಳೆ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಮಹಿಳೆಯೊಂದಿಗೆ ಮಾತುಕತೆ ನಡೆಸಬೇಕು ಕೆಲವು ವಿಚಾರಣೆ ಮಾಡಬೇಕು ಎಂದು ಡಿವೈಎಸ್ ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನ ಪುಸಲಾಯಿಸಿರುವ ಡಿವೈಎಸ್‌ಪಿ ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆಯನ್ನ ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ.
ತನಗೆ ನ್ಯಾಯ ಸಿಗಬೇಕಾದರೆ ಇಂಥ ಕೆಲಸವನ್ನೂ ಮಾಡಬೇಕು ಎಂದು ಮಹಿಳೆ ಡಿವೈಎಸ್‌ಪಿಯ ಕಾಮತೃಷೆ ತೀರಿಸಲು ಮುಂದಾಗಿದ್ದಾಳೆ. ಇದಾದ ನಂತರ ಡಿವೈಎಸ್‌ಪಿ ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋದ ರಾಮಚಂದ್ರಪ್ಪ ಮಹಿಳೆಯೊಂದಿಗೆ ರಾಸಲೀಲೆ ಆರಂಭಿಸಿದ್ದಾರೆ. ಆದರೆ, ಡಿವೈಎಸ್‌ಪಿ ರಾಮಚಂದ್ರಪ್ಪನ ರಾಸಲೀಲೆಯ ದೃಶ್ಯ ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ನಡೆದುಕೊಳ್ಳುತ್ತಿದ್ದ ದೃಶ್ಯಗಳು ಸೆರೆ ಸಿಕ್ಕಿವೆ.
ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇದು ಇಂತಹ ವಿಕೃತ ಮನೋಸ್ಥಿತಿ ಇರುವವರಿಗೆ ಬುದ್ಧಿ ಕಲಿಸುವಂತಿರಬೇಕು ಎಂದು ವಿಡಿಯೊ ನೋಡಿದವರು ಒತ್ತಾಯಿಸಿದ್ದಾರೆ.
‘ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವನ್ನು ನಾನೂ ವೀಕ್ಷಿಸಿದ್ದೇನೆ. ಅದರಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ ಆಕ್ಷೇಪಾರ್ಹವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಸಂತ್ರಸ್ತೆಯನ್ನು ಹುಡುಕುತ್ತಿದ್ದೇವೆ. ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದನ್ನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ತುಮಕೂರು ಜಿಲ್ಲೆ ಎಸ್‌ಪಿ ಕೆ.ವಿ. ಅಶೋಕ್ ಪ್ರತಿಕ್ರಿಯಿಸಿದ್ದಾರೆ
-
Uncategorized7 hours ago
ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲ ಮೋಹಿತ್ ಕುಮಾರ್ ಗೆ ಮಾತೃ ವಿಯೋಗ
-
Uncategorized6 hours ago
ಮಂಗಳೂರು : ಸಹಪಾಠಿಯೊಂದಿಗೆ ಜಗಳ: ಬಿಸಿಎ ವಿದ್ಯಾರ್ಥಿಗೆ ಚೂರಿಯಿಂದ ಇರಿತ; ಇಬ್ಬರು ವಶಕ್ಕೆ
-
ದಕ್ಷಿಣ ಕನ್ನಡ10 minutes ago
Raod Accident : ಮಂತ್ರಾಲಯ ಯಾತ್ರೆ ವೇಳೆ ಬಣಕಲ್ ನಲ್ಲಿ ಭೀಕರ ಅಪಘಾತ: ಗಂಭೀರ ಗಾಯಗೊಂಡಿದ್ದ ಶಿಶಿಲದ ಯುವಕ ಸಾವು



















