ಟಿವಿ
Chaitra Kundapura-12 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಚೈತ್ರಾ ಕುಂದಾಪುರ ಮದುವೆ ಫಿಕ್ಸ್ – ವರನ್ಯಾರೋ ಗೊತ್ತೆ ನಿಮ್ಗೆ.?
ಚೈತ್ರಾ ಕುಂದಾಪುರ ಅವರು ತಾವು 12 ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗನನ್ನು ಕೊನೆಗೂ ಮದುವೆಯಾಗಲು ಹೊರಟಿದ್ದಾರೆ. ಇದೀಗ ಆ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ಸಿಕ್ಕಿದ್ದು ಸದ್ಯ ಮದುವೆಯ ಮಮತೆಯ ಕರೆಯೋಲೆ ಕೊಡುವಲ್ಲಿ ಚೈತ್ರಾ ಕುಂದಾಪುರ ಬಿಜಿಯಾಗಿದ್ದಾರೆ. ಚೈತ್ರಾ ಕುಂದಾಪುರ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಅಂತ ಅವರೇ ‘ಮಜಾ ಟಾಕೀಸ್’ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಚೈತ್ರಾ ಕುಂದಾಪುರ ಅವರು ತಾವು 12 ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗನನ್ನು ಕೊನೆಗೂ ಮದುವೆಯಾಗಲು ಹೊರಟಿದ್ದಾರೆ. ಇದೀಗ ಆ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ಸಿಕ್ಕಿದ್ದು ಸದ್ಯ ಮದುವೆಯ ಮಮತೆಯ ಕರೆಯೋಲೆ ಕೊಡುವಲ್ಲಿ ಚೈತ್ರಾ ಕುಂದಾಪುರ ಬಿಜಿಯಾಗಿದ್ದಾರೆ. ಚೈತ್ರಾ ಕುಂದಾಪುರ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಅಂತ ಅವರೇ ‘ಮಜಾ ಟಾಕೀಸ್’ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಚೈತ್ರಾ ಕುಂದಾಪುರ ಅವರದ್ದು ಕಾಲೇಜು ಲವ್ ಸ್ಟೋರಿ. “ಎಲ್ಲರಂತೆ ನಮ್ಮದು ರೋಮ್ಯಾಂಟಿಕ್ ಆಗಿ ಪ್ರೀತಿ ಶುರು ಆಗಲಿಲ್ಲ. ನನ್ನನ್ನು ದ್ವೇಷಿಸುವವರೇ ಈಗ ಪ್ರೀತಿಸ್ತಿದ್ದಾರೆ” ಎಂದು ಹೇಳಿದ್ದಾರೆ ಚೈತ್ರಾ ಕುಂದಾಪುರ. “ಕ್ಯಾಂಟೀನ್ನಲ್ಲಿ ನನ್ನ ಬಗ್ಗೆ ಬೈತಾ ಓಡಾಡ್ತಿದ್ದ ಹುಡುಗ, ನನ್ನನ್ನು ಕಂಡರೆ ಇರಿಟೇಟ್ ಮಾಡ್ಕೊಂಡು, ಇವಳೊಬ್ಬಳು ಕಿರಿಕಿರಿ ಎನ್ನುತ್ತಿದ್ದರು. ಕೊನೆಯಲ್ಲಿ ಅದು ಪ್ರೀತಿಯಾಗಿ ಬದಲಾಯ್ತು” ಎಂದು ಚೈತ್ರಾ ಕುಂದಾಪುರ ತಮ್ಮ ಲವ್ ಸ್ಟೋರಿ ಬಗ್ಗೆ ‘ಮಜಾ ಟಾಕೀಸ್’ನಲ್ಲಿ ರಿವೀಲ್ ಮಾಡಿದರು.
ಚೈತ್ರ ಪ್ರೀತಿಸಿದ ಹುಡುಗ ಯಾರು.?
ತಾವು 12 ವರ್ಷಗಳಿಂದ ಪ್ರೀತಿಸಿದ ಹುಡುಗ ಯಾರು ? ಆ ಹುಡುಗನ ಹೆಸರೇನು ಎಂಬ ಗುಟ್ಟನ್ನು ಮಾತ್ರ ಚೈತ್ರಾ ಕುಂದಾಪುರ ಇನ್ನೂ ರಟ್ಟು ಮಾಡಿಲ್ಲ. ಆದರೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಶ್ರೀಕಾಂತ್ ಎನ್ನುವ ವಿವರವಿದೆ. ಹುಡುಗನ ಹೆಚ್ಚಿನ ವಿವರಗಳಿಲ್ಲ. ಚೈತ್ರಾ ಕುಂದಾಪುರ ಅವರ ಭಾವಿ ಪತಿಯನ್ನ ‘ಬಿಗ್ ಬಾಸ್’ ಸ್ಪರ್ಧಿಗಳು ಭೇಟಿ ಮಾಡಿದ್ದಾರೆ. “ಆ ಹುಡುಗ ತುಂಬಾ ಸಾಫ್ಟ್. ಕೂಲ್ ಆಗಿ ಮಾತನಾಡುತ್ತಾರೆ. ಚೈತ್ರಾಗೆ ತದ್ವಿರುದ್ಧ” ಎಂದು ‘ಮಜಾ ಟಾಕೀಸ್’ನಲ್ಲಿ ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಹೇಳಿದ್ದಾರೆ. ಮದುವೆ 9.5.2025ನೇ ಶುಕ್ರವಾರ ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ.
ಉಂಗುರ ಕಳೆದುಕೊಂಡಿದ್ದರು
‘ಬಿಗ್ ಬಾಸ್’ ಮನೆಯಲ್ಲಿರುವಾಗ ಚೈತ್ರಾ ಕುಂದಾಪುರ ತಮ್ಮ ಉಂಗುರ ಕಳೆದುಕೊಂಡು ಚಡಪಡಿಸಿದ್ದರು. “ಅದು ಚೈತ್ರಾ ಅವರ ಭಾವಿ ಪತಿ ಕೊಟ್ಟ ಉಂಗುರ” ಎಂದು ಸುದ್ದಿಯಾಗಿತ್ತು. ಕೊರಗಜ್ಜನ ಪವಾಡದಿಂದ ಆ ಉಂಗುರ ಮರಳಿ ಸಿಕ್ಕಿತ್ತು.
ಬೆಂಗಳೂರು
Bigg Boss-ಬಿಗ್ ಬಾಸ್ ಕನ್ನಡ 13ಕ್ಕೆ ಗ್ರ್ಯಾಂಡ್ ಓಪನಿಂಗ್: ದೊಡ್ಡಮನೆ ಸೇರಿದ 16 ಮಂದಿ ಕಿಲಾಡಿಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ..!
ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ 13ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿಯ ಬಿಗ್ ಬಾಸ್ ಹಲವು ವಿಶೇಷತೆಗಳಿಂದ ಕೂಡಿದ್ದು, ಅಗ್ನಿ ಪರೀಕ್ಷೆಯ ಮೂಲಕ ಆಯ್ಕೆಯಾದ ಸಾಮಾನ್ಯ ಸ್ಪರ್ಧಿಗಳು ಹಾಗೂ ಖ್ಯಾತ ಸೆಲೆಬ್ರಿಟಿಗಳ ನಡುವೆ ಸಮಬಲದ ಪೈಪೋಟಿ ನಡೆಯಲಿದೆ.
ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ 13ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಬಾರಿಯ ಬಿಗ್ ಬಾಸ್ ಹಲವು ವಿಶೇಷತೆಗಳಿಂದ ಕೂಡಿದ್ದು, ಅಗ್ನಿ ಪರೀಕ್ಷೆಯ ಮೂಲಕ ಆಯ್ಕೆಯಾದ ಸಾಮಾನ್ಯ ಸ್ಪರ್ಧಿಗಳು ಹಾಗೂ ಖ್ಯಾತ ಸೆಲೆಬ್ರಿಟಿಗಳ ನಡುವೆ ಸಮಬಲದ ಪೈಪೋಟಿ ನಡೆಯಲಿದೆ.
ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಿದ 16 ಸ್ಪರ್ಧಿಗಳ ಪರಿಚಯ ಇಲ್ಲಿದೆ:
ಜಗದೀಶ್ (ಜಗ್ಗ ಮಮ್ಮಿ): ‘ಲವ್ ಮಾಕ್ಟೇಲ್ 3’ ಚಿತ್ರದ ಪಾತ್ರದ ಮೂಲಕ ಜನಪ್ರಿಯರಾಗಿರುವ ಮಂಡ್ಯದ ಪಾಂಡವಪುರ ಮೂಲದ ಪ್ರತಿಭೆ.
ಸೌಂದರ್ಯ: ಮಂಗಳೂರು ಮೂಲದ ಮಾಡೆಲಿಂಗ್ ಲೋಕದ ಗ್ಲಾಮರಸ್ ಬೆಡಗಿ.
ಅವಿನಾಶ್ ಶತಮರ್ಷನ: ರಂಗಭೂಮಿಯಿಂದ ಬೆಳೆದು ಬಂದಿರುವ ನಟ ಹಾಗೂ ನಿರ್ದೇಶಕ.
ಪ್ರಥಮಾ ಪ್ರಸಾದ್: ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ, ಕಿರುತೆರೆಯಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ.
ಸಂಗೀತಾ ಭಟ್: ‘ದಯವಿಟ್ಟು ಗಮನಿಸಿ’ ಚಿತ್ರದ ಖ್ಯಾತಿಯ ನಟಿ, ಮೀಟೂ ಅಭಿಯಾನದ ಮೂಲಕವೂ ಸುದ್ದಿಯಾದವರು.
ಗಗನ್ ಚಿನ್ನಪ್ಪ: ‘ಸೀತಾ ರಾಮ’ ಮತ್ತು ‘ಮಂಗಳ ಗೌರಿ ಮದುವೆ’ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟ.
ಓಂ ಪ್ರಕಾಶ್ ರಾವ್: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ. ಹಾಸ್ಯ ನಟ ಎನ್.ಎಸ್. ರಾವ್ ಅವರ ಪುತ್ರ.
ಕಾವ್ಯಾ ಗೌಡ: ‘ಭಾಗ್ಯ ಲಕ್ಷ್ಮಿ’ ಧಾರಾವಾಹಿಯ ಜನಪ್ರಿಯ ಖಳನಾಯಕಿ.
ಯಶಸ್ ಕೃಷ್ಣ: ‘ಪವಿತ್ರ ಬಂಧನ’ ಧಾರಾವಾಹಿಯ ಮೂಲಕ ಪರಿಚಿತರಾಗಿರುವ ನಟ.
ಧನುಷ್ ಮಂಜುನಾಥ್: ‘ಅಗ್ನಿಪರೀಕ್ಷೆ’ ಟಾಸ್ಕ್ ಮೂಲಕ ಅರ್ಹತೆ ಪಡೆದು ಬಂದಿರುವ ಸಾಮಾನ್ಯ ಸ್ಪರ್ಧಿ.
ಕವಿ ಮಂಜುನಾಥ್: ಪ್ರಾಸಬದ್ಧ ಮಾತುಗಳಿಂದಲೇ ಎಲ್ಲರ ಗಮನ ಸೆಳೆದಿರುವ ಸ್ಪರ್ಧಿ.
ಕಿರಣ್ ಶಾಸ್ತ್ರಿ (ಕಾಯಿ ಶಾಸ್ತ್ರಿ): ನಿಂಬೆಹಣ್ಣು ಹಿಡಿದು ಟಾಸ್ಕ್ ಮಾಡುವ ಮೂಲಕ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದವರು.
ಆಸಿಯಾ ಫಿರ್ದೋಸ್: ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿಯ ಮೂಲಕ ವೀಕ್ಷಕರಿಗೆ ಹತ್ತಿರವಾಗಿರುವ ನಟಿ.
ವೈಷ್ಣವಿ ಕೌಂಡಿನ್ಯ: ‘ಮಿಥುನ ರಾಶಿ’ ಮತ್ತು ‘ಪ್ರೇಮ ಕಾವ್ಯ’ ಸೀರಿಯಲ್ಗಳ ಮೂಲಕ ಚಿರಪರಿಚಿತರಾಗಿರುವ ನಟಿ.
ಲಿಖಿತ್ ಗೊಂದಿ: ದೈಹಿಕ ಕ್ಷಮತೆ ಮತ್ತು ಟಾಸ್ಕ್ಗಳ ಮೂಲಕ ಭರವಸೆ ಮೂಡಿಸಿರುವ ಫಿಟ್ನೆಸ್ ಪ್ರಿಯ.
ತಾಂಡವ್ ರಾಮ್: ‘ಜೋಡಿಹಕ್ಕಿ’ ಖ್ಯಾತಿಯ ನಟ ಹಾಗೂ ವೃತ್ತಿಪರ ಕುಸ್ತಿಪಟು.
ಒಟ್ಟಾರೆಯಾಗಿ ಈ ಬಾರಿ ದೊಡ್ಡಮನೆಯಲ್ಲಿ ಸೆಲೆಬ್ರಿಟಿಗಳ ಅನುಭವ ಮತ್ತು ಸಾಮಾನ್ಯ ಸ್ಪರ್ಧಿಗಳ ಉತ್ಸಾಹದ ನಡುವೆ ಭರ್ಜರಿ ಮನರಂಜನೆ ಸಿಗುವುದು ಖಚಿತವಾಗಿದೆ. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಸಾಗಲಿರುವ ಈ ಪಯಣ ಮುಂದಿನ ನೂರು ದಿನಗಳ ಕಾಲ ವೀಕ್ಷಕರನ್ನು ರಂಜಿಸಲಿದೆ.
ಬೆಂಗಳೂರು
Bigg Boss-ನಿಯಮ ಉಲ್ಲಂಘನೆ ಆರೋಪ: ಬಿಗ್ ಬಾಸ್ ಶುರುವಾಗುವ ಮೊದಲೇ ಆಯೋಜಕರಿಗೆ ಬಿಗ್ ಶಾಕ್ ನೀಡಿದ ಜಿಲ್ಲಾಡಳಿತ..!
ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ ಸೀಸನ್-13’ (Bigg Boss Kannada 13) ಆರಂಭಕ್ಕೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ, ಕಾರ್ಯಕ್ರಮಕ್ಕೆ ಕಾನೂನಾತ್ಮಕ ಸಂಕಷ್ಟ ಎದುರಾಗಿದೆ. ಪರಿಸರ ನಿಯಮಗಳ ಉಲ್ಲಂಘನೆ ಹಾಗೂ ಅನುಮತಿಯ ಕೊರತೆಯಿಂದಾಗಿ ಶೋ ಆರಂಭವಾಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರು: ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ ಸೀಸನ್-13’ (Bigg Boss Kannada 13) ಆರಂಭಕ್ಕೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ, ಕಾರ್ಯಕ್ರಮಕ್ಕೆ ಕಾನೂನಾತ್ಮಕ ಸಂಕಷ್ಟ ಎದುರಾಗಿದೆ. ಪರಿಸರ ನಿಯಮಗಳ ಉಲ್ಲಂಘನೆ ಹಾಗೂ ಅನುಮತಿಯ ಕೊರತೆಯಿಂದಾಗಿ ಶೋ ಆರಂಭವಾಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.
ಸಚಿವ ರಾಮಲಿಂಗಾರೆಡ್ಡಿ ಅವರ ಎಚ್ಚರಿಕೆ:
ಕರ್ನಾಟಕದ ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಬಿಗ್ ಬಾಸ್ ಆಯೋಜಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. “ಶೋ ಚಿತ್ರೀಕರಣ ನಡೆಯುವ ಜಾಲಿವುಡ್ (Jollywood) ಸ್ಟುಡಿಯೋ ಆವರಣದಲ್ಲಿ ಪರಿಸರ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕಳೆದ ವರ್ಷ ವಿಧಿಸಲಾಗಿದ್ದ ದಂಡವನ್ನೇ ಇನ್ನೂ ಪಾವತಿಸಿಲ್ಲ. ಕೊಳಚೆ ನೀರು ಸಂಸ್ಕರಣಾ ಘಟಕ (STP) ಅಳವಡಿಕೆಯೂ ಸೇರಿದಂತೆ ಯಾವುದೇ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ. ಈ ಎಲ್ಲಾ ಲೋಪಗಳನ್ನು ಸರಿಪಡಿಸಿಕೊಳ್ಳುವವರೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ,” ಎಂದು ಸಚಿವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸ್ಪಷ್ಟನೆ:
ಈ ಕುರಿತು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಕೂಡ ಮಾಹಿತಿ ನೀಡಿದ್ದು, ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. “ಜಾಲಿವುಡ್ನವರು ಕನ್ಸೆಂಟ್ ಫಾರ್ ಎಸ್ಟಾಬ್ಲಿಷ್ಮೆಂಟ್ಗೆ (CFE) ಅನುಮತಿ ಕೇಳಿದ್ದಾರೆ, ಆದರೆ ಅದು ಬೋರ್ಡ್ನಲ್ಲಿ ಬಾಕಿ ಇದೆ. ಮುಖ್ಯವಾಗಿ, ಬಿಗ್ ಬಾಸ್ ಶೋ ನಡೆಸಲು ಜಿಲ್ಲಾಡಳಿತಕ್ಕೆ ಇದುವರೆಗೆ ಯಾವುದೇ ಅಧಿಕೃತ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಬಂದ ನಂತರವಷ್ಟೇ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ 6ರ ಸಂಕಷ್ಟ:
ಪೂರ್ವ ನಿಗದಿಯಂತೆ ಸೆಪ್ಟೆಂಬರ್ 6ರಿಂದ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಬಿಗ್ ಬಾಸ್ ಆರಂಭವಾಗಬೇಕಿದೆ. ಆದರೆ, ಬೆಂಗಳೂರಿನಲ್ಲಿ ಸರ್ಕಾರದ ಅನುಮತಿ ಸಿಗದಿದ್ದರೆ ಕನ್ನಡ ಸೀಸನ್ ವಿಳಂಬವಾಗುವ ಸಾಧ್ಯತೆಯಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತದ ಮುಂದಿನ ಹೆಜ್ಜೆ ಏನು ಎಂಬುದು ಈಗ ಕುತೂಹಲ ಮೂಡಿಸಿದೆ.
ಬೆಂಗಳೂರು
Bigg Boss Kannada-13-ಸೆ.6 ರಿಂದ ‘ಬಿಗ್ಬಾಸ್ ಕನ್ನಡ-13’ ಆರಂಭ: ಈ ಬಾರಿ ಕಿಚ್ಚನ ಅಂಗಳದಲ್ಲಿ ‘ಫ್ಲೈಟ್ ಥೀಮ್’ ಹವಾ..!
ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಕನ್ನಡ’ (Bigg Boss Kannada) ಸೀಸನ್ 13ರ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಈ ಬಾರಿಯ ಶೋ ಸೆಪ್ಟೆಂಬರ್ 6ರ ಸಂಜೆ 7 ಗಂಟೆಗೆ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ.
ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಕನ್ನಡ’ (Bigg Boss Kannada) ಸೀಸನ್ 13ರ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಈ ಬಾರಿಯ ಶೋ ಸೆಪ್ಟೆಂಬರ್ 6ರ ಸಂಜೆ 7 ಗಂಟೆಗೆ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ.
ಎಲ್ಲಿ ಪ್ರಸಾರ?
ಪ್ರತಿ ವರ್ಷದಂತೆ ಈ ವರ್ಷವೂ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಶೋ ಪ್ರಸಾರವಾಗಲಿದ್ದು, ಡಿಜಿಟಲ್ ವೇದಿಕೆಗಳಾದ ಜಿಯೋ ಸಿನಿಮಾ ಹಾಗೂ ಹಾಟ್ಸ್ಟಾರ್ನಲ್ಲಿಯೂ ವೀಕ್ಷಕರು ಕಾರ್ಯಕ್ರಮವನ್ನು ಆನಂದಿಸಬಹುದಾಗಿದೆ.
ವಿಶೇಷತೆಗಳೇನು?
ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಸುದೀಪ್, ಈ ಬಾರಿ ಬಿಗ್ಬಾಸ್ ಮನೆಯನ್ನು ‘ಫ್ಲೈಟ್ ಥೀಮ್’ನಲ್ಲಿ (Flight Theme) ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು. ಎಂದಿನಂತೆ ಈ ಸೀಸನ್ ಕೂಡ 100 ದಿನಗಳ ಕಾಲ ನಡೆಯಲಿದ್ದು, ಎಷ್ಟು ಮಂದಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಕುತೂಹಲಕ್ಕೆ ಸೆಪ್ಟೆಂಬರ್ 6ರಂದು ತೆರೆಬೀಳಲಿದೆ. ವಿಶೇಷವೆಂದರೆ, ‘ಬಿಗ್ಬಾಸ್ ಅಗ್ನಿ ಪರೀಕ್ಷೆ’ ಕಾರ್ಯಕ್ರಮದ ಮೂಲಕ ಈಗಾಗಲೇ ಮೂವರು ಸಾಮಾನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಉಳಿದಂತೆ ಸಿನಿಮಾ ಹಾಗೂ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಮನೆಯೊಳಗೆ ಪ್ರವೇಶಿಸಲಿದ್ದಾರೆ.
ದರ್ಶನ್ ಹಾಡುಗಳ ಬಗ್ಗೆ ಸುದೀಪ್ ಸ್ಪಷ್ಟನೆ:
ಬಿಗ್ಬಾಸ್ ಮನೆಯಲ್ಲಿ ನಟ ದರ್ಶನ್ ಅಭಿನಯದ ಹಾಡುಗಳನ್ನು ಪ್ಲೇ ಮಾಡದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಸುದೀಪ್ ಅವರು ಬಹಳ ಮುತ್ಸದ್ದಿತನದಿಂದ ಉತ್ತರಿಸಿದರು. “ಹಾಡುಗಳನ್ನು ಹಾಕದಿರಲು ತಾಂತ್ರಿಕ ಕಾರಣಗಳಿರಬಹುದು ಅಥವಾ ಕೆಲವೊಮ್ಮೆ ಹಾಡು ಹಾಕಿದ್ದಕ್ಕೆ ಪ್ರಶ್ನಿಸುವವರು ಅಥವಾ ಬೆದರಿಕೆ ಹಾಕುವವರೂ ಇರಬಹುದು. ಆದರೆ, ನಮಗೆ ಚಿತ್ರರಂಗದ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ. ಯಾರ ಮೇಲೂ ನಮಗೆ ದ್ವೇಷವಿಲ್ಲ” ಎಂದು ಹೇಳುವ ಮೂಲಕ ಸುದೀಪ್ ಅವರು ವಿವಾದಗಳಿಗೆ ತೆರೆ ಎಳೆದಿದ್ದಾರೆ.
-
ರಾಜಕೀಯ22 hours agoPuttur-Big Breaking: ನಾಳೆ ಪುತ್ತೂರಿಗೆ ಬಿಜೆಪಿ ಘಟಾನುಘಟಿ ನಾಯಕರ ದಂಡು; ವಿಜಯೇಂದ್ರ, ಆರ್. ಅಶೋಕ್ ಸಹಿತ ಹಲವು ಹಿರಿಯ ನಾಯಕರ ಭೇಟಿ
-
ಬಿಗ್ ನ್ಯೂಸ್6 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
ಸಿನೆಮಾ23 hours agoRamya Krishnan-ಪತಿಯಿಂದ ದೂರವಿದ್ದರೂ ದಾಂಪತ್ಯ ಗಟ್ಟಿಯಾಗಿದೆ..! ವಿಚ್ಛೇದನ ವದಂತಿಗೆ ರಮ್ಯಾ ಕೃಷ್ಣನ್ ಸ್ಪಷ್ಟನೆ
-
ಅಂತರ ರಾಜ್ಯ23 hours agoElection Commission-ಯುಪಿಯಲ್ಲಿ 1.27 ಕೋಟಿ ಹಿಂದೂ ಮತದಾರರು ನಾಪತ್ತೆ? ಆದಿತ್ಯನಾಥ್ ಆರೋಪಕ್ಕೆ ಚುನಾವಣಾ ಆಯೋಗದ ಸ್ಪಷ್ಟನೆ
-
ಕಾರ್ಯಕ್ರಮಗಳು23 hours agoPuttur-ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ ರಾಷ್ಟ್ರೀಯ ಈಜು ಚಾಂಪಿಯನ್ಶಿಪ್-2026
-
Uncategorized5 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಅಂತರ ರಾಜ್ಯ23 hours agoChinmaya Krishna Das-ಚಟ್ಟೋಗ್ರಾಮ್ನಿಂದ ಢಾಕಾ ಜೈಲಿಗೆ ಸ್ಥಳಾಂತರ: ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಆರೋಗ್ಯದ ಬಗ್ಗೆ ವಕೀಲರ ಕಳವಳ
-
ಮಂಗಳೂರು6 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು















