ದಕ್ಷಿಣ ಕನ್ನಡ
Spandana Vijay | ‘ಚುನಾವಣೆಯಲ್ಲಿ ಸೋತರು, ಗೆದ್ದರೂ ಏನಾದರೂ ಇವರಿಗೆ ಸಹಾಯ ಮಾಡಬೇಕು’ ಎಂದಿದ್ದ ಸ್ಪಂದನಾ : ಬೆಳ್ತಂಗಡಿ ಚುನಾವಣೆಯಲ್ಲಿ ಅಣ್ಣನಿಗಾಗಿ ತಂಗಿ 60 ದಿನ ಹೇಗೆ ದುಡಿದಿದ್ದರು ಗೊತ್ತೇ ..?
ಬೆಳ್ತಂಗಡಿ : ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ತೀವ್ರ ಹೃದಯಾಘಾತದಿಂದ ಬ್ಯಾಂಕಕ್ ನಲ್ಲಿ ನಿಧನರಾಗಿ ಪಾರ್ಥಿವ ಶರೀರ ಬೆಂಗಳೂರಿಗೆ ತಂದು ಬಿಲ್ಲವ ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಂ ಬೆಳ್ತಂಗಡಿಯ ಚುನಾವಣೆಯಲ್ಲಿ ಸ್ಪರ್ಧಿಸಿದಾಗ 60 ದಿನಗಳ ಕಾಲ ಆಕೆ ಬೆಳ್ತಂಗಡಿಯಲ್ಲೇ ಇದ್ದು ಚುನಾವಣೆಯ ತಯಾರಿ ನಡೆಸಿದ ಬಗ್ಗೆ ಬಿ.ಕೆ ಹರಿಪ್ರಸಾದ್ ರವರ ಮಾಧ್ಯಮ ಸಲಹೆಗಾರ ಸತೀಶ್ ಬರೆದಿರುವ ಲೇಖನ ಇಲ್ಲಿದೆ
ಒಂದು ಕಾಲದ ಭೂಗತ ಲೋಕವನ್ನೆ ಹೆಡೆಮುರಿ ಕಟ್ಟಿದ್ದ, ಬೆಂಗಳೂರಿನ ರೌಡಿ ಸಾಮ್ರಾಜ್ಯವನ್ನೇ ಪಥರಗುಟ್ಟುವಂತೆ ಮಾಡಿದ್ದ ಬಿಕೆ ಶಿವರಾಂ ಎಂಬ ದೈತ್ಯ, ದಕ್ಷ ಪೊಲೀಸ್ ಅಧಿಕಾರಿಯನ್ನ ಕ್ಷಣಮಾತ್ರದಲ್ಲಿ ಯಾರಾದ್ರು ಕಟ್ಟಿಹಾಕಬಹುದು, ಸೋಲಿಸಬಹುದು ಎಂದರೆ ಅದು ಈ ಹೆಣ್ಣುಮಗಳ ಪ್ರೀತಿಗೆ ಮಾತ್ರ ಆ ಶಕ್ತಿ ಇತ್ತು..! ಹೀಗಾಗಿಯೇ ಬಹುಶಃ ಶಿವರಾಂ ಸರ್ ಅಳೆದು ತೂಗಿ ಇವರ ಹೆಸರನ್ನ “ಸ್ಪಂದನಾ” (Spandana Vijay) ಎಂದ ಹೆಸರಿಟ್ಟಿರಬೇಕು.
ಮೊದಲ ಭೇಟಿಯ ಮಾತುಕತೆಯಲ್ಲೇ ಕುಟುಂಬದ ಸದಸ್ಯರಾಗಿ ಬಿಡಬಹುದು. ಅಂತಹ ಆತ್ಮಿಯತೆ, ನಿಷ್ಕಲ್ಮಷ ಪ್ರೀತಿ, ಕಾಳಜಿ ಎಲ್ಲವೂ..ಅದಕ್ಕೆ ಸಾಕ್ಷಿಯೇ ಕಳೆದ ಮೂರು ದಿನಗಳಿಂದ ಪ್ರೀತಿಯ ಅಚ್ಚು ಅಕ್ಕನ ಕುಟುಂಬ ಎಷ್ಟು ದೊಡ್ಡಾಗಿದೆ ಎಂದು ಇಡೀ ಲೋಕವೇ ನಿಬ್ಬೆರಗಾಗಿ ನೋಡುವಂತಾಯಿತು. ಸಾವಿನ ಸುದ್ದಿ ಬಗ್ಗೆಯೇ ಅಪನಂಬಿಕೆ ಬರುವಂತಾಯಿತು. ಅಷ್ಟು ಬೇಗ ಇಂತಹ ಸಾವಿರಾರು ಕುಟುಂಬದ ಸದಸ್ಯರನ್ನ ಅನಾಥರನ್ನಾಗಿ ಮಾಡಲಾರದು ಎಂಬ ನಂಬಿಕೆಯೇ ತುಸು ಹೆಚ್ಚಿತ್ತು.
ಸಾವನ್ನ ಪ್ರೀತಿಸುವ ನನಗೆ, ಈ ಸಾವು ಒಂದು ಕ್ಷಣ ಹಿಡಿದು ನಿಲ್ಲಸಿದಂತಾಗಿದೆ. ಪ್ರಾಣವನ್ನೇ ಕೊಡುವ ಗಂಡ, ಅವರ ಬೆಟ್ಟದಂತಹ ಪ್ರೀತಿ ಮತ್ತು ನಂಬಿಕೆ, ನೂರಾರು ಕನಸಗಳ ಮೂಟೆ ಹೊತ್ತು ಬೆಳೆಸುತ್ತಿರುವ ಶೌರ್ಯನಂತಹ ಮಗ, ತಾಯಿಗೇ ತಾಯಿಯಂತಿದ್ದ, ತಂದೆಗೆ ತಕ್ಕ ಮಗಳಾಗಿ, ತನ್ನೆಲ್ಲ ಆವಿಷ್ಕಾರಗಳಿಗೆ ಕೈ ಜೋಡಿಸುತ್ತಿದ್ದ ಅಣ್ಣ, ಇಡೀ ಕುಟುಂಬಕ್ಕೆ “ಅಚ್ಚು” ಎಂದೆಂದಿಗೂ ಮೆಚ್ಚುವಾಗಿದ್ದವರು. ಹೀಗೂ ಸಾವಿಗೆ ಆಹ್ವಾನಿಸಲು ಹೇಗೆ ಸಾಧ್ಯ? ಕನಿಷ್ಟ ಅವರೇ ಕಟ್ಟಿಕೊಂಡ ಕನಸುಗಳನ್ನ ನನಸು ಮಾಡಿ,ನೋಡುವ ದಿನಗಳಿಗಾದರೂ ಕಾಯಬೇಕಿತ್ತು.
ಈ ಬಾರಿ ಅಣ್ಣನನ್ನ ಎಂಎಲ್ಎ ಮಾಡಬೇಕೆಂಬ ಕನಸು ಮತ್ತು ಅದಕ್ಕೆ ಅವರು ಹಾಕಿದ ಶ್ರಮ ತೀರಾ ಹತ್ತಿರದಿಂದ ಬಲ್ಲೆ. ಈ ಬಾರಿಯ ಚುನಾವಣೆಯಲ್ಲಿ ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ಘೋಷಣೆ ಆದ ಬೆನ್ನಲ್ಲೆ ಬೆಳ್ತಂಗಡಿಗೆ ಸುಮಾರು ಆರವತ್ತಕ್ಕೂ ಹೆಚ್ಚು ದಿನಗಳ ಕಾಲ ಠಿಕಾಣಿ ಹೂಡಿದ್ದ ನಾನು, ಮತ್ತು ಹೆಚ್ಚು ಕಡಿಮೆ ಸ್ಪಂದನಾ ಅವರು ಕೂಡ ಅಷ್ಟೇ ಸಮಯ ಬೆಳ್ತಂಗಡಿಗಾಗಿ ಕಳೆದಿದ್ದರು.
ಅವರ ಬಹುತೇಕ ಕಾರ್ಯಕ್ರಮಗಳನ್ನ ಫಿಕ್ಸ್ ಮಾಡುತ್ತಿದ್ದೆ. ಅವರಿಗೆ ದಲಿತ ಗ್ರಾಮಗಳು ಹಾಗೂ ಮಲೆಕುಡಿಯ, ಕೊರಗ ಸೇರಿದಂತೆ ಅತ್ಯಂತ ಹಿಂದುಳಿದ, ಬಡ ಜನರಿರುವ ಕಡೆಯೇ ಹೆಚ್ಚು ಒಲವಿತ್ತು.ಕೊನೆ ಕೊನೆಗೆ ಅವರೇ ತನ್ನ ಗಂಡ ವಿಜಯ್ ರಾಘವೇಂದ್ರ ಅವರ ಜೊತೆಗೂಡಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ತೀರಾ ಹೊಸಬರಂತೆ ಅವರ ಬದುಕು, ಬವಣೆಗಳ ಬಗ್ಗೆ ಹೆಚ್ಚು ಚರ್ಚೆ ನಡೆಸುವಂತಾಯಿತು.
ಎಷ್ಟೋ ದಿನಗಳು ಮಧ್ಯರಾತ್ರಿ ಭೂತ, ಕೋಲಾ ಮುಗಿಸಿ ಮಲೆಕುಡಿಯ ಸಮುದಾಯಗಳ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದುಂಟು. ನೇರವಾಗಿ ರಕ್ಷಿತ್ ಶಿವರಾಂ ಅವರಿಗೆ ಸ್ವಲ್ಪ ಗಟ್ಟಿಯಾಗಿಯೇ ಹೇಳಿದರೂ ಕೂಡ “ಚುನಾವಣೆಯಲ್ಲಿ ಸೋತರು, ಗೆದ್ದರೂ ಏನಾದರೂ ಇವರಿಗೆ ಸಹಾಯ ಮಾಡಬೇಕು” ಅಂತಾ.
ಪ್ರತಿ ಕಾರ್ಯಕ್ರಮದಲ್ಲಿ ಅವರು ತೋರಿಸಿದ ಸಮಯ ಪ್ರಜ್ಞೆ, ಶಿಸ್ತು, ಮಿತ ಭಾಷೆ ಎಲ್ಲವೂ ತನ್ನ ತಂದೆಯವರ ಕಲಿಸಿದ ಪಾಠಗಳೇ ಆಗಿದ್ದವು. ವಿಜಯ್ ರಾಘವೇಂದ್ರ ಅವರು ಕೂಡ ಅಷ್ಟೇ ಪ್ರಬುದ್ಧತೆ ಇರುವ ಮನುಷ್ಯ. ಚುನಾವಣಾ ಪ್ರಚಾರದ ಮೊದಲ ದಿನವೇ ಅಂಬೇಡ್ಕರ್ ಕಾರ್ಯಕ್ರಮ ಒಪ್ಪಿಗೆ ಇಲ್ಲದೆ ಮಾಡಿದ್ದೀರಾ ಎಂದು ಕೇಸ್ ಮಾಡಲಾಯಿತು. ಅದಕ್ಕೆ ರಾಘಣ್ಣ ಹೇಳಿದ್ದು, “ನೋಡಿ ಸತೀಶ್ ಅವರೇ ಇದಕ್ಕೆಲ್ಲ ನಾನು ಹೆದರಲ್ಲ. ಅಂಬೇಡ್ಕರ್ ಕಾರ್ಯಕ್ರಮ ಅಂತಾ ಕೇಸ್ ಮಾಡಿದಾರೆ, ಅವರ ಮುಖಾಂತರೇ ಆನ್ಸಾರ್ ಮಾಡೋಣ ಅಂದ್ರು. ಹೀಗಾಗಿಯೇ ರಕ್ಷಿತ್ ಚುನಾವಣೆಯಲ್ಲಿ ಸೋತರು ಬೆಳ್ತಂಗಡಿ ಜನರ ಪ್ರೀತಿ ಗಿಟ್ಟಿಸಿಕೊಂಡಿದ್ದಲ್ಲಿ ಈ ಹೆಣ್ಣುಮಗಳ ಪಾಲು ತುಸು ಹೆಚ್ಚಿದೆ.. ಮುಂದೊಂದು ದಿನಾ ರಕ್ಷಿತ್ ಅವರು ಶಾಸಕರಾದರೇ ಈ ಹೆಣ್ಣುಮಗಳು ನೋಡಲಾದರೂ ಇರಬೇಕಿತ್ತು. ಇವತ್ತು ಅದೆಲ್ಲವನ್ನೂ ಬಿಟ್ಟು ಹೋಗಿದ್ದಾರೆ..
ಇಷ್ಟು ಸಣ್ಣಪ್ರಾಯದಲ್ಲಿ ತನ್ನ ಮಗಳನ್ನ ಕಳೆದುಕೊಂಡಿರುವ ತಂದೆ,ತಾಯಿ , ಪ್ರೀತಿಯ “ಚಿನ್ನ” ವನ್ನು ಶಾಶ್ವತವಾಗಿ ದೂರ ಮಾಡಿಕೊಂಡಿರುವ ಗಂಡ, ತಾಯಿಯ ಮಡಿಲಲ್ಲಿ ಕನಸು ಕಾಣಬೇಕಿದ್ದ ಮಗ, ಒಬ್ಬ ಪರಿಪೂರ್ಣ ಸ್ನೇಹಿತೆಯಂತಿದ್ದ ತಂಗಿಯನ್ನ ಕಳೆದುಕೊಂಡಿರುವ ಅಣ್ಣ, ಇಡೀ ಕುಟುಂಬದಲ್ಲಿ ಇಂದು ಆವರಿಸಿರುವ ಶೂನ್ಯತೆಯನ್ನ ಹೇಗೆ ನಿಭಾಯಿಸುತ್ತಾರೆ? ಛೇ. ಸಾವಿಗೆ ಇಷ್ಟು ಕ್ರೂರ, ಅನ್ಯಾಯ, ನಿರ್ದಯಿತನ ಇರಬಾರದಾಗಿತ್ತು…
ಹೋಗಿ ಬನ್ನಿ ಅಚ್ಚು ಅಕ್ಕಾ… ನಮ್ಮೊಂದಿಗಿನ ನೆನಪುಗಳು ನಿಮ್ಮೊಂದಿಗೆ ಸಾಯಲಾರದು.. 🙏
ಸತೀಶ್ ನಾಯಕ್
ಬಿಗ್ ನ್ಯೂಸ್
Neralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ.
ವಿಟ್ಲ: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ. ಈಕೆ ಕಂಬಳಬೆಟ್ಟು ಶಾಲೆಯ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ.
ಬಾಲಕಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆರೋಗ್ಯ
Puttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ
ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಬೆನ್ನು ನೋವು, ಮೊಣಕಾಲು ನೋವು, ಸೊಂಟ ನೋವು ಹಾಗೂ ಸ್ನಾಯು ನೋವು ಮುಂತಾದ ಸಮಸ್ಯೆಗಳು ಮೂಳೆ ಸವೆತ ಅಥವಾ ಮುಂದಿನ ದಿನಗಳಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ BMD ಶಿಬಿರವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸೇವಾ ವಿಭಾಗದ ಇಂಡ್‌ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಭಾಸ್ಕರ್ ಎಸ್. (D’Ortho), ಆಡಳಿತ ನಿರ್ದೇಶಕರು, ಪುತ್ತೂರು ಸಿಟಿ ಆಸ್ಪತ್ರೆ ಇವರು ತಪಾಸಣೆ ಹಾಗೂ ಸಲಹೆ ನೀಡಿದರು.
ಇನ್ನರ್ ವೀಲ್ ಕ್ಲಬ್ ನ ನಿರ್ದೇಶಕಿ ಮಂಜುಳ ಭಾಸ್ಕರ್, ಅಧ್ಯಕ್ಷೆ ಮನೋರಮಾ ಸೂರ್ಯ, ಖಜಾಂಜಿ ಕವಿತಾ ಕೊಳತ್ತಾಯ, ಕಾರ್ಯದರ್ಶಿ ಶ್ರುತಿ ಎಸ್. ಬಂಗೇರ ಶಿಬಿರದಲ್ಲಿ ಉಪಸ್ಥಿತರಿದ್ದರು.
ಬಿಗ್ ನ್ಯೂಸ್
Puttur-ಎಸ್‌ಡಿಪಿಐ ನಿರಂತರ ಪ್ರಯತ್ನ: ಪುತ್ತೂರಿನ ಅಲ್ಪಸಂಖ್ಯಾತರ ಸೇವಾ ಕೇಂದ್ರ ಪುನರಾರಂಭ
ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು.
ಪುತ್ತೂರು: ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.
ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು. ಸಾರ್ವಜನಿಕರಿಗೆ ಅನುಕೂಲವಾಗುವ ಈ ಸೇವಾ ಕೇಂದ್ರವನ್ನು ಮತ್ತೆ ಆರಂಭಿಸಬೇಕೆಂದು ಸಮಿತಿಯು ಒತ್ತಾಯಿಸಿತ್ತು.
ಈ ನಡುವೆ, ಕೇಂದ್ರಕ್ಕೆ ಸಂಬಂಧಿಸಿದ ಕಟ್ಟಡವನ್ನು ಹಾಸ್ಟೆಲ್ ಬಳಕೆಗೆ ಪರಿವರ್ತಿಸಲು ಪುತ್ತೂರು ಶಾಸಕರು ಪ್ರಯತ್ನಿಸಿದ್ದರು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಮೂರು ವರ್ಷಗಳ ಬಳಿಕ ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಮತ್ತೆ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರಿಗೆ ಸೇವೆ ಲಭ್ಯವಾಗಿರುವುದಾಗಿ ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
-
ಬಿಗ್ ನ್ಯೂಸ್22 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
ಬಿಗ್ ನ್ಯೂಸ್15 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಅಂತರ ರಾಜ್ಯ20 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
ಮಂಗಳೂರು23 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
Uncategorized22 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್23 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ರಾಜಕೀಯ21 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಬಿಗ್ ನ್ಯೂಸ್21 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ















