ಸಿನೆಮಾ
Malashree fulfills the vow of Koragajja :ಮೂರು ತಿಂಗಳ ಹಿಂದೆ ಬಂದು ಬೇಡಿಕೊಂಡ ಇಷ್ಟಾರ್ಥ ನೆರವೇರಿಸಿದ ಕುತ್ತಾರಿನ ಕೊರಗಜ್ಜನ ಹರಕೆ ತೀರಿಸಿದ ನಟಿ ಮಾಲಾಶ್ರೀ – ಬಳಿಕ ದೈವ ಸಾನಿಧ್ಯವನ್ನು ಕೊಂಡಾಡಿದ್ದು ಹೀಗೆ
Malashree fulfills the vow of Koragajja ಉಳ್ಳಾಲ:(ಮಂಗಳೂರು)ಆ.9 : ತುಳುನಾಡ ದೈವಗಳ ಕಾರಣಿಕತೆ ನಿರಂತರವಾಗಿ ಪ್ರಕಟವಾಗುತ್ತಲೇ ಇರುತ್ತದೆ. ಸಂಕಷ್ಟ ಎದುರಾದಾಗಲೆಲ್ಲ ಇಲ್ಲಿನ ಜನತೆ ತಮ್ಮ ಆರಾಧ್ಯದೈವದ ಮೊರೆ ಹೋಗುವುದು ಮತ್ತು ಈಡೇರುವುದು ಆನಾದಿ ಕಾಲದಿಂದಲೂ ನಡೆದು ಬಂದ ಪದ್ದತಿ. ಆದರೆ ಈ ಸಾರಿ ಕರ್ನಾಟಕದ ಸಿಲೆ ಬ್ರಿಟಿ ಒಬ್ಬರಿಗೆ ಈ ಅನುಭವ ಆಗಿದೆ. ಅದು ಕೂಡ ಕೇವಲ 3 ತಿಂಗಳಿನ ಒಳಗಡೆ. ಆ ಸಿಲೆಬ್ರಿಟಿ ಯಾರು ಗೊತ್ತೇ ?
ಚಂದನವನದ ಚಂದದ ನಟಿ, ಕನ್ನಡದ ಲೇಡಿ ಸೂಪರ್ ಸ್ಟಾರ್ , ಕನಸಿನ ರಾಣಿ ಮಾಲಾಶ್ರೀ . ಅವರು ಮೂರು ತಿಂಗಳ ಹಿಂದೆ ಕುತ್ತಾರ್ ಗೆ ಬಂದು , ಕೊರಗ ತನಿಯನ ಆದಿ ಸ್ಥಳ ಕುತ್ತಾರ್ ಗೆ ಭೇಟಿ ನೀಡಿದ್ದರು. ಈ ವೇಳೆ ಕೊರಗಜ್ಜನಲ್ಲಿ ತನ್ನ ಇಷ್ಟಾರ್ಥವನ್ನು ಬೇಡಿಕೊಂಡಿದ್ದರು. ಬೇಡಿಕೊಂಡ ಇಷ್ಟಾರ್ಥವನ್ನು ಈಡೇರಿಸಿದ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಮಾಲಶ್ರೀ ಹಾಗೂ ಅವರ ಪುತ್ರಿ ಅನನ್ಯಾ ಭೇಟಿ ನೀಡಿ ತಾವು ಹೇಳಿಕೊಂಡಿದ್ದ ಹರಕೆ ತೀರಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಲಾಶ್ರೀ ಅವರು ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆನು. ಎಲ್ಲವೂ ಅಚಾತುರ್ಯವೆಂಬಂತೆ ನಡೆಯಿತು. ಕ್ಷೇತ್ರದ ಶಕ್ತಿಯನ್ನು ಹೇಳತೀರದು. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ. ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತಿರುತ್ತೇನೆ ಎಂದರು.

ಈ ಸಂದರ್ಭ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್ ನ ಟ್ರಸ್ಟಿಗಳು ನಟಿ ಮಾಲಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದರು. ನಟಿ ಮಾಲಾಶ್ರೀ ಹಾಗೆ ತಾಯಿ,ಅಕ್ಕ ,ಮಗ ಆರ್ಯನ್ ಹಾಗೂ ಮಗಳು ಆರಾಧನಾ ಅವರೊಂದಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದರು.ಮುಖ್ಯಪ್ರಾಣರ ದರ್ಶನ ಪಡೆದರು.

ಕೃಷ್ಣ ಮಠಕ್ಕೆ ಭೇಟಿ
ನಟಿ ಮಾಲಾಶ್ರೀ ಹಾಗೆ ತಾಯಿ,ಅಕ್ಕ ,ಮಗ ಆರ್ಯನ್ ಹಾಗೂ ಮಗಳು ಆರಾಧನಾ ಅವರೊಂದಿಗೆ ಕೃಷ್ಣ ಮಠಕ್ಕೆ ಭೇಟಿ ನೀಡಿದರು.ಮುಖ್ಯಪ್ರಾಣರ ದರ್ಶನ ಪಡೆದರು.ಕೃಷ್ಣ ಮಠಕ್ಕೆ ಆಗಮಿಸಿ ಕೃಷ್ಣ,ಮುಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಶ್ರೀಗಳಿಂದ ಹಾಗೂ ಕಾಣಿಯೂರು ಮಠಾಧೀಶರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.ಕೃಷ್ಣ,ಮುಖ್ಯಪ್ರಾಣರ ದರ್ಶನ ಮತ್ತು ಕಾಣಿಯೂರು ಮಠಾಧೀಶರಿಂದ ಮಂತ್ರಾಕ್ಷತೆ ಪಡೆದು ಭೋಜನ ಪ್ರಸಾದ ಸ್ವೀಕರಿಸಿದರು. ಕೃಷ್ಣ ಮಠದಿಂದ ಕೊಲ್ಲೂರಿಗೆ ನಟಿ ಮಾಲಾಶ್ರೀ ತೆರಳಿದರು.



ಸಿನೆಮಾ
Rajinikanth-ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ತಲೈವಾ: ರಜಿನಿಕಾಂತ್ ನೋಡಲು ಮುಗಿಬಿದ್ದ ಅಭಿಮಾನಿಗಳು
‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.
ಮೈಸೂರು: ‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.
ಮೈಸೂರಿನ ಸುತ್ತಮುತ್ತ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ರಜಿನಿಕಾಂತ್ ಅವರು ನಗರದಲ್ಲಿರುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ʻತಲೈವಾʼನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಶೂಟಿಂಗ್ ಸ್ಥಳಗಳು ಹಾಗೂ ಅವರು ಭೇಟಿ ನೀಡುವ ಪ್ರದೇಶಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.
ಚಾಮುಂಡೇಶ್ವರಿ ದೇವಾಲಯಕ್ಕೆ ರಜಿನಿಕಾಂತ್ ಭೇಟಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಅವರನ್ನು ನೋಡಲು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳನ್ನು ಕಂಡ ರಜಿನಿಕಾಂತ್ ಅವರು ಪ್ರೀತಿಯಿಂದ ಕೈಬೀಸಿ ಅಭಿಮಾನಿಗಳ ಖುಷಿಗೆ ಕಾರಣರಾದರು.
ಇದಕ್ಕೂ ಮುನ್ನ ಮಂಗಳವಾರ (ಸೆ.29) ಸೋಮನಾಥಪುರದಲ್ಲಿ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಟ ವಿಷ್ಣುವರ್ಧನ್ ಅವರ ಕುಟುಂಬದ ಸದಸ್ಯರು ರಜಿನಿಕಾಂತ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ್ದು, ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಕರ್ನಾಟಕದಲ್ಲಿ ರಜಿನಿಕಾಂತ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರು ರಾಜ್ಯಕ್ಕೆ ಆಗಮಿಸಿದಾಗಲೆಲ್ಲ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯುತ್ತದೆ. ಇದೀಗ ಮೈಸೂರಿನಲ್ಲಿ ನಡೆಯುತ್ತಿರುವ ‘ಧರ್ಮನ್’ ಚಿತ್ರದ ಚಿತ್ರೀಕರಣದ ಹಿನ್ನೆಲೆಯಲ್ಲಿ ತಲೈವಾ ನಗರದಲ್ಲಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.
ರಜಿನಿಕಾಂತ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ಜೈಲರ್-2’ ಕೂಡ ಸದ್ಯ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಕನ್ನಡದ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ‘ಜೈಲರ್-2’ ಅಕ್ಟೋಬರ್ 15ರಂದು ತೆರೆಗೆ ಬರಲಿದೆ.
ಸಿನೆಮಾ
Bethlehem Family Unit-ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ಬರೆದ ‘ಬೆತ್ಲೆಹೆಮ್ ಕುಟುಂಬ ಯೂನಿಟ್’: ಅ.2ಕ್ಕೆ ಒಟಿಟಿ ಎಂಟ್ರಿ
ಮಲಯಾಳಂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ (Bethlehem Kudumba Unit) ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಅ.2ರಿಂದ ಜಿಯೋಹಾಟ್‌ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ (Bethlehem Kudumba Unit) ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಅ.2ರಿಂದ ಜಿಯೋಹಾಟ್‌ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಗಿರೀಶ್ ಎ.ಡಿ. ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 326 ಕೋಟಿ ರೂ. ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ನಿರ್ಮಿಸಿದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ‘ಲೋಕಾ ಚಾಪ್ಟರ್ 1: ಚಂದ್ರ’ ಚಿತ್ರ 304 ಕೋಟಿ ರೂ. ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿತ್ತು. ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಈ ದಾಖಲೆಯನ್ನು ಹಿಂದಿಕ್ಕಿದೆ.
ಚಿತ್ರವು ಕೇರಳದಲ್ಲಿ ಮೊದಲ ಬಾರಿಗೆ 150 ಕೋಟಿ ರೂ. ಗಳಿಕೆ ದಾಖಲಿಸಿದ ಮಲಯಾಳಂ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅತಿ ವೇಗವಾಗಿ 300 ಕೋಟಿ ರೂ. ಕ್ಲಬ್ ಸೇರಿದ ಚಿತ್ರ ಎಂಬ ದಾಖಲೆಗೂ ಪಾತ್ರವಾಗಿದೆ.
ಸಿನೆಮಾ
Hanuman Ansh-₹2 ಕೋಟಿ ಬಜೆಟ್ ಸಿನಿಮಾ ₹347 ಕೋಟಿ ಗಳಿಕೆ; ‘ಪೆದ್ದಿ’, ‘ಟಾಕ್ಸಿಕ್’ ದಾಖಲೆ ಹಿಂದಿಕ್ಕಿದ ‘ಹನುಮಾನ್ ಅಂಶ್ʼ
ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ (Hanuman Ansh) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ. ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ ₹300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇದೀಗ ₹347 ಕೋಟಿಯ ಗಡಿ ದಾಟಿದೆ ಎಂದು ವರದಿಯಾಗಿದೆ.
ಮುಂಬಯಿ: ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ (Hanuman Ansh) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ.
ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ ₹300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇದೀಗ ₹347 ಕೋಟಿಯ ಗಡಿ ದಾಟಿದೆ ಎಂದು ವರದಿಯಾಗಿದೆ. ಸಿನಿಮಾ ಬಿಡುಗಡೆಯಾಗಿ 45 ದಿನಗಳು ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮುಂದುವರಿದಿರುವುದು ವಿಶೇಷವಾಗಿದೆ.
‘ಪೆದ್ದಿ’, ‘ಟಾಕ್ಸಿಕ್’ ದಾಖಲೆ ಹಿಂದಿಕ್ಕಿದ ಸಿನಿಮಾ
ಭಾನುವಾರ (ಸೆ.20) ‘ಹನುಮಾನ್ ಅಂಶ್’ ಭಾರತದಲ್ಲಿ ₹13.75 ಕೋಟಿ ಹಾಗೂ ವಿದೇಶದಲ್ಲಿ ₹1.50 ಕೋಟಿ ಗಳಿಕೆ ಮಾಡಿದೆ. ಇದರೊಂದಿಗೆ ಚಿತ್ರದ ಒಟ್ಟು ಜಾಗತಿಕ ಗಳಿಕೆ ₹347.05 ಕೋಟಿಗೆ ತಲುಪಿದೆ ಎಂದು ಸ್ಯಾಕ್‌ನಿಲ್ಕ್ ವರದಿ ಮಾಡಿದೆ.
ಈ ಮೂಲಕ ರಾಮ್ ಚರಣ್ ಅಭಿನಯದ ‘ಪೆದ್ದಿ’ ಹಾಗೂ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಳ ವಿಶ್ವದಾದ್ಯಂತದ ಗಳಿಕೆಯನ್ನು ‘ಹನುಮಾನ್ ಅಂಶ್’ ಹಿಂದಿಕ್ಕಿದೆ.
‘ಪೆದ್ದಿ’ ₹341.90 ಕೋಟಿ ಹಾಗೂ ‘ಟಾಕ್ಸಿಕ್’ ₹341.99 ಕೋಟಿ ಗಳಿಕೆ ಮಾಡಿದ್ದರೆ, ‘ಹನುಮಾನ್ ಅಂಶ್’ ₹347.05 ಕೋಟಿ ಗಳಿಕೆಯೊಂದಿಗೆ ಈ ಎರಡೂ ಸಿನಿಮಾಗಳನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಂಗ್ಲಾ’ ಸಿನಿಮಾದ ಗಳಿಕೆಯನ್ನೂ ಹಿಂದಿಕ್ಕಿರುವ ‘ಹನುಮಾನ್ ಅಂಶ್’, ಈ ವರ್ಷದ ಹಿಂದಿ ಸಿನಿಮಾಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡ ಮೂರನೇ ಚಿತ್ರವಾಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.
ಇತರ ಭಾಷೆಯ ಸಿನಿಮಾಗಳನ್ನೂ ಹಿಂದಿಕ್ಕಿದ ‘ಹನುಮಾನ್ ಅಂಶ್’
ಕಳೆದ ವಾರದಲ್ಲಿಯೂ ಸಿನಿಮಾ ತನ್ನ ಗಳಿಕೆಯ ಓಟ ಮುಂದುವರಿಸಿದ್ದು, ‘ಜನಾ ನಾಯಕನ್’, ‘ಬೆತ್ತೆಹೇಮ್ ಕುಟುಂಬ ಯೂನಿಟ್’, ‘ಮಾನ ಶಂಕರ ವರಪ್ರಸಾದ್ ಗಾರು’ ಹಾಗೂ ‘ಕರುಪ್ಪು’ ಸೇರಿದಂತೆ ವಿವಿಧ ಚಿತ್ರರಂಗಗಳ ಪ್ರಮುಖ ಸಿನಿಮಾಗಳ ಜಾಗತಿಕ ಗಳಿಕೆಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.
ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಚಿತ್ರವು ‘ಮಹಾರಾಜ್ ಜಿ’ ಎಂದೇ ಜನಪ್ರಿಯರಾಗಿದ್ದ ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದೆ.
ಸ್ವಯಂಭೂ ಮೀಡಿಯಾ ನೆಟ್‌ವರ್ಕ್, ರಾಗಿಣಿ ಎಸ್., ನಮ್ರತಾ ಜಿ.ಎಸ್. ಹಾಗೂ ಅನುಪ್ರಿಯಾ ಎ. ನಗರ್ ನಿರ್ಮಿಸಿರುವ ಚಿತ್ರದಲ್ಲಿ ಚಂದನ್ ಕೆ. ಆನಂದ್ ಮತ್ತು ಶೋಭಿನವ್ ಸತ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಖಿಲ್ ದುಬೆ, ಉದಯಸಿಂಹ ರಜಪೂತ್, ಪೂರ್ಣಿಮಾ ತಿವಾರಿ ಹಾಗೂ ಮನೀಶ್ ಚೌಧರಿ ಸೇರಿದಂತೆ ಹಲವು ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


















