Connect with us

ಕ್ರೀಡೆ

T20 World Cup ; ಐಸಿಸಿ ಟಿ20 ವಿಶ್ವಕಪ್ 2022 : ಸೆಮಿಪೈನಲ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಬಿಗ್‌ ಶಾಕ್‌ – ಸ್ಟಾರ್‌ ಆಟಗಾರನಿಗೆ ಅಭ್ಯಾಸ ಪಂದ್ಯದ ವೇಳೆ ಗಾಯ

Published

on

Ad Widget

Ad Widget

Ad Widget

Ad Widget

T20 World Cup : ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಟೂರ್ನಿಯಲ್ಲಿ ಇನ್ನು ಮೂರು ಪಂದ್ಯಗಳಷ್ಟೇ ಬಾಕಿಯುಳಿದಿದೆ. ನವೆಂಬರ್ 10 ರಂದು ಅಡಿಲೆಡ್ ನ ಓವಲ್ ನಲ್ಲಿ ನಡೆಯಲಿರುವ ದ್ವಿತೀಯ ಸೆಮಿ ಪೈನಲ್ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ (India vs England) ತಂಡಗಳು ಸೆಣೆಸಾಟ ನಡೆಸಲಿದೆ. ಆದರೇ ಈ ಪಂದ್ಯಕ್ಕೂ ಮೊದಲು ಭಾರತ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಭಾರತ ತಂಡದ ಕಪ್ತಾನ ಹಾಗೂ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ( Rohit Sharma) ಅಭ್ಯಾಸ ಪಂದ್ಯವಾಡುವ ವೇಳೆ ಗಾಯಗೊಂಡಿದ್ದಾರೆ

Ad Widget

Ad Widget

Ad Widget

Ad Widget

ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಎಲ್ಲ ಪಂದ್ಯಗಳು ಸೆ 6 ರಂದು ಮುಕ್ತಾಯಗೊಂಡವು. ಗ್ರೂಪ್ 1 ಮತ್ತು ಗ್ರೂಪ್ 2 ರಿಂದ ಮೊದಲ ಎರಡು ಸ್ಥಾನ ಪಡೆದುಕೊಂಡ ತಂಡಗಳು ಸೆಮಿ ಫೈನಲ್ಗೆ ಪ್ರವೇಶ ಪಡೆದಿದೆ. ಗ್ರೂಪ್ 1 ರಿಂದ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಗ್ರೂಪ್ 2 ರಿಂದ ಭಾರತ, ಪಾಕಿಸ್ತಾನ ಮುಂದಿನ ಹಂತಕ್ಕೆ ತೇರ್ಗಡೆಯಾಗಿದೆ.

Ad Widget

Ad Widget alt="Ad Widget"/>

Ad Widget

ನವೆಂಬರ್ 9 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಮೊದಲ ಸೆಮಿ ಫೈನಲ್ ನ್ಯೂಜಿಲೆಂಡ್-ಪಾಕಿಸ್ತಾನ (New Zealand vs Pakistan) ತಂಡಗಳ ನಡುವೆ ನಡೆಯಲಿದೆ. ಮರುದಿನ ಭಾರತ ಮತ್ತು ಇಂಗ್ಲೇಡ್ ತಂಡಗಳು ಮುಖಾಮುಖಿ ಆಗಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ರೋಹಿತ್ ಶರ್ಮಾ ರೂಪದಲ್ಲಿ ಆಘಾತ ಉಂಟಾಗಿದೆ.

Ad Widget

Ad Widget <> Ad Widget

ಸೆಮಿ ಫೈನಲ್ ಪಂದ್ಯಕ್ಕಾಗಿ ಅಡಿಲೇಡ್ ಗೆ ಬಂದಿಳಿದ ಭಾರತ ತಂಡ ನೆಟ್ ಪ್ರಾಕ್ಟಿಸ್ ಮಾಡುತ್ತಿರುವಾಗ ನಾಯಕ ರೋಹಿತ್ ಶರ್ಮಾ ಅವರು ಗಾಯಗೊಂಡಿದ್ದಾರೆ. ಹಿಟ್ಮ್ಯಾನ್ ಬಲ ಮುಂಗೈಗೆ ಪೆಟ್ಟು ಮಾಡಿಕೊಂಡಿದ್ದು ಅಭ್ಯಾಸವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ. ತಕ್ಷಣ ಟೀಮ್ ಇಂಡಿಯಾ ವೈದ್ಯಕೀಯ ಸಿಬ್ಬಂದಿ ಬಂದು ಚಿಕಿತ್ಸೆ ನೀಡಿದ್ದಾರೆ. ಆದರೆ, ನೋವು ಅತಿಯಾದ ಕಾರಣ ಬ್ಯಾಟಿಂಗ್ ಅಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿದರು. ನೆಟ್ಸ್ನಿಂದ ನಿರ್ಗಮಿಸಿದ ರೋಹಿತ್ ಕೈಗೆ ಐಸ್ ಬಾಕ್ಸ್ ಕಟ್ಟಿದ್ದು, ದೂರದಲ್ಲಿ ಕುಳಿತು ಅವರು ಅಭ್ಯಾಸವನ್ನು ವೀಕ್ಷಿಸುತ್ತಿದ್ದರು. ಮಾನಸಿಕ ಕಂಡೀಷನಿಂಗ್ ತರಬೇತುದಾರ ಪ್ಯಾಡಿ ಅಪ್ಟನ್ ಅವರೊಂದಿಗೆ ರೋಹಿತ್ ಸಾಕಷ್ಟು ಸಮಯದವರೆಗೆ ಮಾತನಾಡುತ್ತಿರುವುದು ಕಂಡುಬಂದಿದೆ.

Gold Rate Today : ಅಭರಣ ಖರೀದಿಸುವವರಿಗೆ ಗುಡ್ ನ್ಯೂಸ್ – ಮಂಗಳವಾರದ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

Ad Widget

Ad Widget

ರೋಹಿತ್ ಶರ್ಮಾ ಗಾಯ ಟೀಮ್‌ ಇಂಡಿಯಾಕ್ಕೆ ದೊಡ್ಡ ತಲೆ ನೋವು ಉಂಟಾಗಲಿದೆ. ಸ್ವತಃ ನಾಯಕನೇ ಗಾಯಗೊಂಡಿರುವುದು ಮತ್ತು ಅವರು ಮಂದಿನ ಪಂದ್ಯಕ್ಕೆ ಅಲಭ್ಯರಾದರೇ ಮಹತ್ವದ ಪಂದ್ಯಕ್ಕೆ ತಂಡವನ್ನು ಮುನ್ನಡೆಸುವುದು ಯಾರು ಎನ್ನುವುದು ತಂಡವನ್ನು ಕಾಡುವ ಮೊದಲ ದೊಡ್ಡ ಪ್ರಶ್ನೆ. ಅಲ್ಲದೇ ರೋಹೀತ್‌ ತಂಡದ ಒಪನರ್‌ ಕೂಡ . ಅವರ ಅನುಪಸ್ಥಿತಿಯಲ್ಲಿ ರಾಹಲ್‌ ಜತೆ ಆರಂಭಿಕರಾಗಿ ಕಣಕ್ಕಿಳಿಯುವುದು ಯಾರು ಎನ್ನುವುದು ಮತ್ತೊಂದು ತಲೆ ನೋವು.

ಈ ಟೂರ್ನಿಯಲ್ಲಿ ರೋಹೀತ್‌ ಬ್ಯಾಂಟಿಗ್‌ ಅಷ್ಟೇನು ಪರಿಣಾಮಕಾರಿಯಾಗಿರಲಿಲ್ಲ. ಆದರೇ ದೊಡ್ಡ ಹಾಗೂ ಒತ್ತಡದ ಪಂದ್ಯದಲ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್‌ ಬರಬಹುದು ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿದೆ. ಅಲ್ಲದೇ,ರೋಹೀತ್‌ ಅವರು ಸಾಕ್ಷಷ್ಟು ಅನುಭವಿಯಾಗಿದ್ದು ನಿರ್ಣಾಯಕ ಹಂತದಲ್ಲಿ ಬೌಲಿಂಗ್‌ , ಪೀಲ್ಡಿಂಗ್‌ ಪರಿವರ್ತನೆ ಮಾಡುವ ಮೂಲಕ ರಣ ನೀತಿ ರೂಪಿಸುವಲ್ಲೂ ಸಿದ್ದ ಹಸ್ತರು. ಹೀಗಾಗಿ ಅವರು ಮುಂದಿನ ಪಂದ್ಯಗಳಿಗೆ ಅಲಭ್ಯರಾದರೇ ಅದು ಟೀಮ್‌ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡುವುದು ಖಂಡಿತ. ಆದರೆ, ರೋಹಿತ್ ಇಂಜುರಿ ಬಗ್ಗೆ ಬಿಸಿಸಿಐ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.

ಕೋಳಿ ಸಾಕಾಣಿಕೆಗಾಗಿ ಬಳಸುವ ಕೃಷಿ ಭೂಮಿಗೆ ಭೂ ಪರಿವರ್ತನೆಯಿಂದ ವಿನಾಯಿತಿ

Ad Widget
Click to comment

Leave a Reply

ಕ್ರೀಡೆ

IPL 2027-ಐಪಿಎಲ್ 2027 ಮಿನಿ ಹರಾಜು ಡಿ.16ಕ್ಕೆ ಫಿಕ್ಸ್: ಆರ್‌ಸಿಬಿ ಸೇರಿ 10 ತಂಡಗಳ ಪರ್ಸ್ ವಿವರ ಇಲ್ಲಿದೆ..

Published

on

Ad Widget

Ad Widget

Ad Widget

Ad Widget

ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು, ನ.18: ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.

Ad Widget

Ad Widget alt="Ad Widget"/>

Ad Widget

ಲಕ್ನೋ ಸೂಪರ್ ಜೈಂಟ್ಸ್ ಬಳಿ ಅತಿ ಹೆಚ್ಚು ಹಣ!
ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತಿ ಹೆಚ್ಚು ಹಣದೊಂದಿಗೆ ಕಣಕ್ಕಿಳಿಯಲಿದೆ. ಆಟಗಾರರನ್ನು ಉಳಿಸಿಕೊಂಡ ಬಳಿಕ ತಂಡದ ಪರ್ಸ್‌ನಲ್ಲಿ ಬರೋಬ್ಬರಿ ₹47.45 ಕೋಟಿ ಉಳಿದಿದೆ.

Ad Widget

Ad Widget <> Ad Widget

ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ₹40.15 ಕೋಟಿ ಹಣದೊಂದಿಗೆ ನಂತರದ ಸ್ಥಾನಗಳಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿ ₹39.50 ಕೋಟಿ ಹಾಗೂ ಮುಂಬೈ ಇಂಡಿಯನ್ಸ್ ಬಳಿ ₹32.60 ಕೋಟಿ ಹಣವಿದೆ.

ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ತಂಡದ ಬಳಿ ಕೇವಲ ₹8.75 ಕೋಟಿ ಮಾತ್ರ ಉಳಿದಿದ್ದು, 10 ತಂಡಗಳ ಪೈಕಿ ಅತ್ಯಂತ ಕಡಿಮೆ ಮೊತ್ತ ಹೊಂದಿರುವ ತಂಡವಾಗಿದೆ.

Ad Widget

Ad Widget

ಡೆಲ್ಲಿ, ಮುಂಬೈಗೆ ಹೆಚ್ಚು ಆಟಗಾರರ ಖರೀದಿ ಅವಕಾಶ
ಖಾಲಿ ಇರುವ ಆಟಗಾರರ ಸ್ಥಾನಗಳ ಲೆಕ್ಕಾಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಂಚೂಣಿಯಲ್ಲಿವೆ. ಈ ಎರಡೂ ತಂಡಗಳು ತಲಾ 9 ಆಟಗಾರರನ್ನು ಖರೀದಿಸಲು ಅವಕಾಶ ಹೊಂದಿವೆ.

ಕೋಲ್ಕತ್ತಾ ನೈಟ್ ರೈಡರ್ಸ್ 8, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಲಾ 7 ಆಟಗಾರರನ್ನು ಖರೀದಿಸಬಹುದು. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ತಲಾ 6 ಸ್ಥಾನಗಳು ಖಾಲಿಯಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6 ಆಟಗಾರರನ್ನು ಖರೀದಿಸುವ ಅವಕಾಶವಿದ್ದು, ಗುಜರಾತ್ ಟೈಟಾನ್ಸ್ ತಂಡದಲ್ಲಿ ಕೇವಲ 3 ಸ್ಥಾನಗಳು ಮಾತ್ರ ಖಾಲಿಯಿವೆ.

10 ತಂಡಗಳ ಪರ್ಸ್ ಮೊತ್ತ ಮತ್ತು ಖಾಲಿ ಸ್ಥಾನಗಳ ವಿವರ
ತಂಡ ಉಳಿದ ಹಣ ಖಾಲಿ ಸ್ಥಾನ ವಿದೇಶಿ ಆಟಗಾರರ ಸ್ಥಾನ
ಲಕ್ನೋ ಸೂಪರ್ ಜೈಂಟ್ಸ್ ₹47.45 ಕೋಟಿ 7 3
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ 8 3
ಸನ್‌ರೈಸರ್ಸ್ ಹೈದರಾಬಾದ್ ₹40.15 ಕೋಟಿ 7 3
ಡೆಲ್ಲಿ ಕ್ಯಾಪಿಟಲ್ಸ್ ₹39.50 ಕೋಟಿ 9 4
ಮುಂಬೈ ಇಂಡಿಯನ್ಸ್ ₹32.60 ಕೋಟಿ 9 2
ಚೆನ್ನೈ ಸೂಪರ್ ಕಿಂಗ್ಸ್ ₹28.05 ಕೋಟಿ 6 2
ರಾಜಸ್ಥಾನ್ ರಾಯಲ್ಸ್ ₹27.05 ಕೋಟಿ 6 2
ಪಂಜಾಬ್ ಕಿಂಗ್ಸ್ ₹18.60 ಕೋಟಿ 6 2
ರಾಯಲ್ ಚಾಲೆಂಜರ್ಸ್ ಬೆಂಗಳೂರು ₹14.15 ಕೋಟಿ 6 1
ಗುಜರಾತ್ ಟೈಟಾನ್ಸ್ ₹8.75 ಕೋಟಿ 3 2

ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು
ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16, 2026ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ 10 ತಂಡಗಳು ತಮ್ಮ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಸಲಿವೆ.

2025ರಿಂದ 2027ರವರೆಗಿನ ಮೂರು ವರ್ಷಗಳ ಅವಧಿಯ ಆರಂಭದಲ್ಲಿ ಪ್ರತಿ ತಂಡಕ್ಕೆ ಆಟಗಾರರ ಖರೀದಿಗಾಗಿ ₹120 ಕೋಟಿ ಪರ್ಸ್ ನಿಗದಿಪಡಿಸಲಾಗಿತ್ತು. ನಿಯಮದ ಪ್ರಕಾರ ಪ್ರತಿ ಮಿನಿ ಹರಾಜಿಗೂ ಮುನ್ನ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ₹5 ಕೋಟಿ ಸೇರ್ಪಡೆಯಾಗುತ್ತದೆ. ಹೀಗಾಗಿ 2027ರ ಮಿನಿ ಹರಾಜಿನಲ್ಲಿ ಪ್ರತಿ ತಂಡದ ಒಟ್ಟು ಪರ್ಸ್ ಮೊತ್ತ ₹130 ಕೋಟಿಗೆ ಏರಿಕೆಯಾಗಲಿದೆ.

ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನಲ್ಲಿ ಯಾವ ತಂಡ ಯಾವ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಮತ್ತು ಯಾವ ತಂಡ ಬಲಿಷ್ಠ ಪಡೆಯನ್ನು ಕಟ್ಟಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದೆ.

Ad Widget
Continue Reading

ಅಂತರ ರಾಜ್ಯ

Mohammed Shami: ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ

Published

on

Ad Widget

Ad Widget

Ad Widget

Ad Widget

ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.

Ad Widget

Ad Widget alt="Ad Widget"/>

Ad Widget

‘ನಾನು ಬಿಳಿ ಜೆರ್ಸಿಗೆ ವಿದಾಯ ಹೇಳುತ್ತಿದ್ದೇನೆ. ಆದರೆ ಅದರೊಂದಿಗೆ ಬೆಸೆದುಕೊಂಡಿರುವ ನೆನಪುಗಳಿಗೆ ಎಂದಿಗೂ ವಿದಾಯ ಹೇಳುವುದಿಲ್ಲ’ ಎಂದು ಶಮಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Ad Widget

Ad Widget <> Ad Widget

ಭಾರತದ ಟೆಸ್ಟ್ ಜೆರ್ಸಿಯನ್ನು ಮೊದಲ ಬಾರಿಗೆ ಧರಿಸಿದ ಕ್ಷಣವನ್ನು ನೆನಪಿಸಿಕೊಂಡಿರುವ ಅವರು, ‘ಮೊದಲ ಬಾರಿಗೆ ಭಾರತದ ಟೆಸ್ಟ್ ಜೆರ್ಸಿ ಧರಿಸಿದಾಗ ನನ್ನಲ್ಲಿದ್ದದ್ದು ಒಂದೇ ಕನಸು. ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದಾಗಿತ್ತು. ಅಂದಿನಿಂದ ಪ್ರತಿಯೊಂದು ವಿಕೆಟ್, ಪ್ರತಿಯೊಂದು ಹೋರಾಟ, ಪ್ರತಿಯೊಂದು ಗಾಯ ಹಾಗೂ ಪ್ರತಿಯೊಂದು ಪುನರಾಗಮನವೂ ನನಗೆ ಹೊಸ ಪಾಠ ಕಲಿಸಿದೆ’ ಎಂದು ಬರೆದುಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನನ್ನ ಜೀವನದ ವಿಶೇಷ ಭಾಗವಾಗಿತ್ತು
‘ನನ್ನ ಪಾಲಿಗೆ ಟೆಸ್ಟ್ ಕ್ರಿಕೆಟ್ ಕೇವಲ ಒಂದು ಮಾದರಿಯಾಗಿರಲಿಲ್ಲ. ಅದು ನನ್ನ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು. ಇಂದು ಭಾರವಾದ ಹೃದಯ ಹಾಗೂ ಅಸಂಖ್ಯಾತ ಸುಂದರ ನೆನಪುಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ’ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

Ad Widget

Ad Widget

ಇದೇ ವೇಳೆ, ತಮ್ಮ ಕ್ರಿಕೆಟ್ ಪಯಣದಲ್ಲಿ ಬೆಂಬಲವಾಗಿ ನಿಂತ ಸಹ ಆಟಗಾರರು, ತರಬೇತುದಾರರು ಹಾಗೂ ಕುಟುಂಬ ಸದಸ್ಯರಿಗೆ ಶಮಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ಒಳ್ಳೆಯ ಹಾಗೂ ಕಷ್ಟದ ಸಮಯಗಳಲ್ಲೂ ತಮ್ಮ ಮೇಲೆ ನಂಬಿಕೆ ಇಟ್ಟ ಲಕ್ಷಾಂತರ ಭಾರತೀಯ ಅಭಿಮಾನಿಗಳಿಗೂ ಕೃತಜ್ಞತೆ ತಿಳಿಸಿದ್ದಾರೆ.

ತಮ್ಮ ಪ್ರತಿಭೆಯನ್ನು ಗುರುತಿಸಿ, ಬೆಳೆಯಲು ಅವಕಾಶ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಸಂಸ್ಥೆಗಳಿಗೂ ಧನ್ಯವಾದ ಅರ್ಪಿಸಿದ್ದಾರೆ. ಈ ಸಂಸ್ಥೆಗಳು ನೀಡಿದ ಬೆಂಬಲ ಹಾಗೂ ವಿಶ್ವಾಸ ಸದಾ ತಮ್ಮ ಪಾಲಿಗೆ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.

Ad Widget
Continue Reading

ಸ್ಥಳೀಯ

Shrikrishna-ಗ್ವಾಲಿಯರ್‌ನಲ್ಲಿ ಮಿಂಚಿದ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿ; ರಾಷ್ಟ್ರಮಟ್ಟದ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ

Published

on

Ad Widget

Ad Widget

Ad Widget

Ad Widget

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ವಿದ್ಯಾಭಾರತಿಯ 33ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿ ಸಾಥ್ವಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ಪಟ್ಟೆ ಬಡಗನ್ನೂರು: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ವಿದ್ಯಾಭಾರತಿಯ 33ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿ ಸಾಥ್ವಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

Ad Widget

Ad Widget alt="Ad Widget"/>

Ad Widget

17 ವರ್ಷ ವಯೋಮಾನದ ವಿಭಾಗದಲ್ಲಿ ಕರ್ನಾಟಕ ದಕ್ಷಿಣ ಮಧ್ಯ ಕ್ಷೇತ್ರ ತಂಡವನ್ನು ಪ್ರತಿನಿಧಿಸಿದ ಸಾಥ್ವಿ, ತಂಡದೊಂದಿಗೆ ಸ್ಪರ್ಧಿಸಿ ಈ ಸಾಧನೆ ಮಾಡಿದ್ದಾರೆ.

Ad Widget

Ad Widget <> Ad Widget

ವಿದ್ಯಾರ್ಥಿಯ ಸಾಧನೆಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಹಾಗೂ ಸಾಥ್ವಿ ಅವರನ್ನು ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರು, ಸರ್ವ ಸದಸ್ಯರು, ಶಾಲೆಯ ಮುಖ್ಯಗುರುಗಳು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!