ಅಪರಾಧ
Puttur: ಜಾಮೀನು ಪಡೆದು ತಲೆಮರೆಸಿಕೊಂಡಿದ್ದ 21 ವರ್ಷಗಳ ಹಿಂದಿನ ಪ್ರಕರಣದ ಆರೋಪಿ ಬಂಧನ – ಏನಿದು ಪ್ರಕರಣ ? ಇಲ್ಲಿದೆ ವಿವರ
(ಪುತ್ತೂರು :Puttur ಅ 17): 21 ವರ್ಷಗಳ ಹಿಂದಿನ ಅಪರಾಧ ಪ್ರಕರಣದ ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು (absconded Accused) ಆತನನ್ನು ಪುತ್ತೂರು ನಗರ ಠಾಣೆ ಪೊಲೀಸರು ಆ 16 ರಂದು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಮಂಗಳೂರು ಕದ್ರಿ ನಿವಾಸಿ ಅಚ್ಯುತ ಪ್ರಭು ಎಂಬವರ ಪುತ್ರ ಬಿ.ಸುರೇಶ್ ಪ್ರಭು ಬಂಧಿತ ಆರೋಪಿ.
ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನೀಲ್ ಕುಮಾರ್ ಮತ್ತು ಪೊಲೀಸ್ ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ ರವರ ನಿರ್ದೇಶನದ ಮೇರೆಗೆ ಎಎಸ್ಐ ಚಂದ್ರ ಮತ್ತು ಹೆಡ್ ಕಾನ್ಸ್ಟೇಬಲ್ ಪರಮೇಶ್ವರರವರು ಆ 16 ರಂದು ಮಂಗಳೂರು ನಗರದ ಬರ್ಕೆ ಬಳಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿಯ ವಿರುದ್ದ ಐಪಿಸಿ ಕಲಂ 379 ಜೊತೆಗೆ 34 ರಂತೆ ಕಳ್ಳತನ ಪ್ರಕರಣ ದಾಖಲಾಗಿತ್ತು. ಅಲ್ಲದೇ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿರುವ ಬಗ್ಗೆ 2009ರಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಸುಧೀರ್ ಪ್ರಭು,ಮತ್ತು ಬಿ.ಎಂ ಹನೀಫ್ ಎಂಬವರು ಮಾರ್ಚ್ 8 2001 ರಂದು ಮಂಗಳೂರು ಹಂಪನಕಟ್ಟೆಯಿಂದ ಜಯಂತ್ ಎಂಬವರ ಟಾಟಾ ಸುಮೋ ಕಾರನ್ನು ಬಾಡಿಗೆಗಾಗಿ ಬುಕ್ ಮಾಡಿದ್ದರು. ಟಿಂಬರ್ ವ್ಯಾಪಾರದ ಕುರಿತು ಮಾತನಾಡಲು ಸಕಲೇಶ ಪುರ, ಹಾಸನ ಇತ್ಯಾದಿ ಕಡೆಗಳಿಗೆ ಆ ಕಾರಿನಲ್ಲಿ ಸುತ್ತಾಡಿದ್ದರು. 5 ದಿನಗಳ ಬಳಿಕ ಮಾ 13 ರಂದು ಬೆಳಿಗ್ಗಿನ ಜಾವ 3 ಗಂಟೆಗೆ ಅವರು ಪುತ್ತೂರಿಗೆ ಬಂದು ಆರಾಧನಾ ಟೂರಿಸ್ಟ್ ಹೋಂ ನಲ್ಲಿ ತಂಗುವ ಉದ್ದೇಶದಿಂದ ಅಲ್ಲೆ ಕಾರು ಪಾರ್ಕ್ ಮಾಡಿಸಿದ್ದರು. ಹೊಟೇಲ್ ನಲ್ಲಿ ಚಾಲಕನಿಗೆ ತಂಗುವ ವ್ಯವಸ್ಥೆ ಮಾಡಿದ ಆರೋಪಿಗಳು ಬೆಳಿಗ್ಗೆ 4 ಗಂಟೆ ಸುಮಾರಿಗೆ ಚಾಲಕನಿಲ್ಲದ ವೇಳೆ ಕಾರನ್ನು ಕಳ್ಳತನ ಮಾಡಿ ಬಾಡಿಗೆ ವಂಚಿಸಿ ಪರಾರಿಯಾಗಿದ್ದರು
ಈ ಬಗ್ಗೆ ಪ್ರಕರಣ ದಾಖಲಾಗಿ ಪೊಲೀಸರು ಆರೋಪಿಗಳಾದ ಸುಧೀರ್ ಪ್ರಭು ,ಮತ್ತು ಬಿ.ಎಂ ಹನೀಫ್ ಅವರನ್ನು ಬಂಧಿಸಿದ್ದರು. ಆದರೇ ಅವರು ಜಾಮೀನು ದೊರೆತು ಜೈಲಿನಿಂದ ಹೊರ ಬಂದಿದ್ದು ಆ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಆರೋಪಿ ಹನೀಫ್ ನನ್ನು ನ. 4 2018 ರಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಇನ್ನೊರ್ವ ಆರೋಪಿ ಬಿ.ಸುರೇಶ್ ಪ್ರಭು ಕೂಡ ಬಂಧಿಸಲ್ಪಟ್ಟಿದ್ದಾನೆ
ಸ್ಥಳೀಯ
Navoor clinic-ನಾವೂರು ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ: ಘಟನಾ ಸ್ಥಳಕ್ಕೆ ಎಎಸ್ಪಿ ಭೇಟಿ, ಪರಿಶೀಲನೆ
ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದ್ದ ನಾವೂರು ಆರೋಗ್ಯ ಕ್ಲಿನಿಕ್‌ಗೆ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಅವರು ಅ. 8ರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾವೂರು: ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದ್ದ ನಾವೂರು ಆರೋಗ್ಯ ಕ್ಲಿನಿಕ್‌ಗೆ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಅವರು ಅ. 8ರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಘಟನಾ ಸ್ಥಳವನ್ನು ಪರಿಶೀಲಿಸಿದ ಅವರು, ಕ್ಲಿನಿಕ್‌ನ ವೈದ್ಯ ಡಾ. ಪ್ರದೀಪ್ ಅವರಿಂದ ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು.
ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ನ್ಯಾಯ ಒದಗಿಸುವ ಭರವಸೆಯನ್ನು ಅವರು ನೀಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.
ಅಪರಾಧ
Mangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!
ಕೋರಿಯರ್ ಮೂಲಕ ಮಾದಕವಸ್ತು ಎಂಡಿಎಂಎ ಸಾಗಾಟ ಮಾಡಿ ಮಂಗಳೂರು ನಗರ ಹಾಗೂ ಕೇರಳದ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ₹1.58 ಕೋಟಿ ಮೌಲ್ಯದ 1 ಕೆಜಿ 796.96 ಗ್ರಾಂ ಎಂಡಿಎಂಎ ಸೇರಿದಂತೆ ಒಟ್ಟು ₹1.63 ಕೋಟಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು: ಕೋರಿಯರ್ ಮೂಲಕ ಮಾದಕವಸ್ತು ಎಂಡಿಎಂಎ ಸಾಗಾಟ ಮಾಡಿ ಮಂಗಳೂರು ನಗರ ಹಾಗೂ ಕೇರಳದ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ₹1.58 ಕೋಟಿ ಮೌಲ್ಯದ 1 ಕೆಜಿ 796.96 ಗ್ರಾಂ ಎಂಡಿಎಂಎ ಸೇರಿದಂತೆ ಒಟ್ಟು ₹1.63 ಕೋಟಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅ.8ರಂದು ರಾತ್ರಿ ಸುಮಾರು 10 ಗಂಟೆಗೆ ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಸಮೀಪ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಎಂಡಿಎಂಎ, ಮೂರು ಮೊಬೈಲ್ ಫೋನ್‌ಗಳು, ಮಾದಕವಸ್ತು ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಆಟೋ ರಿಕ್ಷಾ, ಕೋರಿಯರ್ ರಟ್ಟಿನ ಬಾಕ್ಸ್ ಹಾಗೂ ವಾಟರ್ ಪ್ಯೂರಿಫೈಯರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹1,63,84,000 ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು:
ಅಬ್ದುಲ್ ಹಾಪೀಲ್ (25) ಮಂಗಳಪಾಡಿ, ಕಾಸರಗೋಡು
ಜಿಯಾವುಲ್ ಹಕ್ (30) ಕಸಬಾ ಬೆಂಗ್ರೆ, ಕೂಳೂರು, ಮಂಗಳೂರು
ಅಲ್ತಾಫ್ (28) ಪಾಂಡೇಶ್ವರ, ಮಂಗಳೂರು
ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಬಚ್ಚಿಟ್ಟು ಸಾಗಾಟಕ್ಕೆ ಸಂಚು
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಪಂಜಾಬ್‌ನ ಅಮೃತಸರದಿಂದ ಎಂಡಿಎಂಎ ಖರೀದಿಸಿ, ಅದನ್ನು ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹಿಸುವ ಭಾಗದಲ್ಲಿ ಭದ್ರವಾಗಿ ಬಚ್ಚಿಡುತ್ತಿದ್ದರು. ಬಳಿಕ ಕೋರಿಯರ್ ಮೂಲಕ ಮಂಗಳೂರಿಗೆ ಕಳುಹಿಸಿ, ಇಲ್ಲಿಂದ ಮಂಗಳೂರು ನಗರ ಹಾಗೂ ಕೇರಳದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಕಾರ್ಯಾಚರಣೆ ನಡೆಸಿ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ಈ ಹಿಂದೆಯೂ ಪ್ರಕರಣ
ಬಂಧಿತ ಅಬ್ದುಲ್ ಹಾಪೀಲ್ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಯಾವುಲ್ ಹಕ್ ದುಬೈನ ರಾಸ್ ಅಲ್ ಖೈಮಾದಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ಮರಳಿದ್ದಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಅಲ್ತಾಫ್ ವಿರುದ್ಧವೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಂಧಿತ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅಪರಾಧ
Raid-ರಾಜ್ಯದ 45 ಐಸ್‌ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
ರಾಜ್ಯಾದ್ಯಂತ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ಗುರುವಾರ ವಿಶೇಷ ತಪಾಸಣೆ ನಡೆಸಿದೆ. ಒಟ್ಟು 45 ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರು, ಮೈಸೂರು ಮತ್ತು ರಾಯಚೂರಿನ ನಾಲ್ಕು ಘಟಕಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು, ಅ. 9: ರಾಜ್ಯಾದ್ಯಂತ ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ಗುರುವಾರ ವಿಶೇಷ ತಪಾಸಣೆ ನಡೆಸಿದೆ. ಒಟ್ಟು 45 ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರು, ಮೈಸೂರು ಮತ್ತು ರಾಯಚೂರಿನ ನಾಲ್ಕು ಘಟಕಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನಾಲ್ಕು ಘಟಕಗಳಲ್ಲಿ ನಿಯಮ ಉಲ್ಲಂಘನೆ
ಪರಿಶೀಲನೆ ವೇಳೆ ಬೆಂಗಳೂರಿನ ಜಯನಗರ 3ನೇ ಬ್ಲಾಕ್‌ನ ಸಾವರ ಐಸ್‌ಕ್ರೀಂ ಕೆಫೆ, ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯ ಎಂ.ಎನ್. ಎಂಟರ್‌ಪ್ರೈಸಸ್, ಮೈಸೂರಿನ ಜಾನ್ ಕ್ಯಾಂಡಿ ಐಸ್‌ಕ್ರೀಂ ತಯಾರಿಕಾ ಘಟಕ ಹಾಗೂ ರಾಯಚೂರಿನ ಜೆಮಿನಿ ಐಸ್‌ಕ್ರೀಂ ತಯಾರಿಕಾ ಘಟಕಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದೆ.
ಈ ಘಟಕಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ಸಂಬಂಧಿತ ನಿಯಮಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
70 ಆಹಾರ ಮಾದರಿಗಳ ಸಂಗ್ರಹ
ವಿಶೇಷ ತಪಾಸಣೆಯ ಸಂದರ್ಭದಲ್ಲಿ ವಿವಿಧ ಘಟಕಗಳಿಂದ ಐಸ್‌ಕ್ರೀಂ, ಹಾಲು, ಹಾಲಿನ ಪುಡಿ, ಫ್ಲೇವರಿಂಗ್ ಪದಾರ್ಥಗಳು, ಸಕ್ಕರೆ, ಆಹಾರ ಸೇರ್ಪಡೆ ಪದಾರ್ಥಗಳು ಸೇರಿದಂತೆ ವಿವಿಧ ಕಚ್ಚಾವಸ್ತುಗಳ ಒಟ್ಟು 70 ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಈ ಮಾದರಿಗಳನ್ನು ಗುಣಮಟ್ಟ ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಪರಿಶೀಲನೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಅವಧಿ ಮೀರಿದ ಆಹಾರ ಪದಾರ್ಥ ಪತ್ತೆ
ಪರಿಶೀಲನೆಯ ವೇಳೆ ಅವಧಿ ಮೀರಿದ ಐಸ್‌ಕ್ರೀಂ, ಹಾಲು, ಬಿಸ್ಕತ್ ಹಾಗೂ ಕೊಬ್ಬರಿ ಪುಡಿ ಪತ್ತೆಯಾಗಿವೆ. ಅಲ್ಲದೆ, ಕೆಲವು ಆಹಾರ ಉತ್ಪನ್ನಗಳ ಮೇಲೆ ಲೇಬಲಿಂಗ್ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದೂ ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಇಂತಹ ತಪಾಸಣೆಗಳನ್ನು ಮುಂದುವರಿಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
-
ಅಂತರ ರಾಜ್ಯ24 hours agoNana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
-
ಸ್ಥಳೀಯ6 hours agoGanja-ಸಾಗರದ ಲಾಡ್ಜ್ನಲ್ಲಿ ಗಾಂಜಾ ಸೇವನೆ: ಯುವತಿ ಸೇರಿ ನಾಲ್ವರು ವಶಕ್ಕೆ – ಗಾಂಜಾ ಸಾಗಾಟಗಾರನ ಮಾಹಿತಿ ಬಿಚ್ಚಿಟ್ಟ ಯುವತಿ..!
-
ಅಂತರ ರಾಜ್ಯ24 hours agoDK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
-
ಬಿಗ್ ನ್ಯೂಸ್6 hours agoAYUSH Federation-ಡಾ. ಪ್ರದೀಪ್ ನಾವೂರು ಅವರ ಆರೋಗ್ಯ ಕ್ಲಿನಿಕ್ ಗೆ ಬೆಂಕಿ : ಆಯುಷ್ ಫೆಡರೇಶನ್ ತೀವ್ರ ಖಂಡನೆ
-
ಅಪರಾಧ6 hours agoUdupi-ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆ : ಉಡುಪಿ, ಮೂಲ್ಕಿಯಲ್ಲಿ 4 ಪ್ರಕರಣ ದಾಖಲು
-
ಸಿನೆಮಾ5 hours agoNana Patekar-ನಾನಾ ಪಾಟೇಕರ್ ಸಾವಿಗೆ ನಿಖರ ಕಾರಣವೇನು? ಗೋವಾ ಪೊಲೀಸರಿಂದ ಅಸಹಜ ಸಾವು ಪ್ರಕರಣ ದಾಖಲು
-
ಅಪರಾಧ5 hours agoRaid-ರಾಜ್ಯದ 45 ಐಸ್‌ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಮಂಗಳೂರು23 hours agoMangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ


















