Connect with us

ಸುಳ್ಯ

ಸುದ್ದಿ ಬಿಡುಗಡೆಯ ಶಿವಾನಂದ ಹಾಗೂ ಸಹಚರರು ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಹೈಕೋರ್ಟಿಗೆ ಸಲ್ಲಿಸಿದ ಅರ್ಜಿ ವಜಾ – ತೀವ್ರ ಮುಖಭಂಗ

Published

on



Ad Widget

Ad Widget

Ad Widget

Ad Widget

ಪುತ್ತೂರು : ಅ 17:  ಬಿಜೆಪಿ ಜಿಲ್ಲಾ ಮುಖಂಡ, ಬಜರಂಗದಳದ ಮಾಜಿ ಸಂಚಾಲಕ ದಿನೇಶ್ ಜೈನ್ ಅವರ ಬಗ್ಗೆ ಪುತ್ತೂರಿನ ಲೋಕಲ್ ಪತ್ರಿಕೆ ಸುದ್ದಿ ಬಿಡುಗಡೆಯಲ್ಲಿ (suddi Bidugade)   ಮಾನಹಾನಿಕರ ವರದಿ ಪ್ರಕಟಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಮುಖ ಆರೋಪಿ, ಪತ್ರಿಕೆಯ  ಸಂಪಾದಕ ಡಾ| ಯು.ಪಿ ಶಿವಾನಂದ (U.P. Shivananda) ಹಾಗೂ ಆತನ ಇಬ್ಬರು ಸಹಚರರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಛೀಮಾರಿ ಹಾಕಿರುವುದಾಗಿ ಮೂಲಗಳಿಂದ  ತಿಳಿದು ಬಂದಿದೆ. ಇದರಿಂದ ವಿಚಲಿತಗೊಂಡ ಆರೋಪಿಗಳು ತಮ್ಮ ಮೇಲಿನ ಪ್ರಕರಣ ವಜಾ ಮಾಡಬೇಕೆಂದು ಕೋರಿ ಹೈ ಕೋರ್ಟ್’ನಲ್ಲಿ ಸಲ್ಲಿಸಿದ ಅರ್ಜಿಯನ್ನು ಸೈಲೆಂಟಾಗಿ ವಾಪಸ್ಸು ಪಡೆದು ಸಾರ್ವಜನಿಕವಾಗಿ ಬೆತ್ತಲಾಗಿರುವುದು ಈಗ ಜಗಜ್ಜಾಹೀರಾಗಿದೆ. ಈ ಮೂಲಕ ಅವರು ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಸಲ್ಲಿಸಿದ ಅರ್ಜಿ ವಜಾಗೊಂಡಿದೆ.

Ad Widget

Ad Widget

Ad Widget

Ad Widget
ಏನಿದು ಪ್ರಕರಣ ? ಇದೇನು ಹೊಸ ಬೆಳವಣಿಗೆ ?  ಇಲ್ಲಿದೆ ಸಂಪೂರ್ಣ ಮಾಹಿತಿ

ರಕ್ತದಾನ ಹಾಗೂ ಇನ್ನಿತರೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಮನೆಮಾತಾಗಿದ್ದ,  ಹಿಂದೂ ಸಂಘಟನೆ ಬಜರಂಗದಳದ ಜಿಲ್ಲಾ ಮಟ್ಟದಲ್ಲಿ ಖ್ಯಾತಿವೆತ್ತ ನಾಯಕರಾಗಿದ್ದ  ಹಾಗೂ  ಪ್ರಸ್ತುತ ಜಿಲ್ಲಾ ಬಿಜೆಪಿಯಲ್ಲಿ ಪ್ರಮುಖ ಹುದ್ದೆಯಲ್ಲಿರುವ  ದಿನೇಶ್ ಕುಮಾರ್  ಜೈನ್ (Dinesh Kumar Jain) ಪುತ್ತೂರು ಎಂಬವರ ಬಗ್ಗೆ 2016ರ ಜನವರಿ ತಿಂಗಳಿನಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ  ಮಾನಹಾನಿಕರವಾದ  ಸರಣಿ ಲೇಖನ ಪ್ರಕಟವಾಗಿತ್ತು. ಇದರ ವಿರುದ್ದ ಅವರು ಪುತ್ತೂರು ನ್ಯಾಯಾಲಯದಲ್ಲಿ ಖ್ಯಾತ ನ್ಯಾಯವಾದಿ ಚಾಣಕ್ಯ ಲಾ ಚೆಂಬರ್ಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಕೈಲಾರ್ ರವರ ಮೂಲಕ  ಖಾಸಗಿ ಕ್ರಿಮಿನಲ್ ಪ್ರಕರಣ ಹೂಡಿದ್ದರು. ಪುತ್ತೂರು ನ್ಯಾಯಾಲಯದಲ್ಲಿ ಸಿಸಿ ನಂಬರ್ 1089/2019 ರಂತೆ ಪ್ರಕರಣ ದಾಖಲಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget

ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸುಳ್ಯ ತಾಲೂಕು ಊರುಬೈಲ್ ನಿವಾಸಿ ದಿ.ಪುಟ್ಟಪ್ಪ ಎಂಬವರ ಪುತ್ರ ಪ್ರಸ್ತುತ ಪುತ್ತೂರು ನಗರದ ಹಳೆ ಪೋಸ್ಟ್ ಆಫೀಸ್ ಬಳಿಯ  ನಿವಾಸಿ  ಡಾ|ಯು.ಪಿ. ಶಿವಾನಂದ ಪ್ರಕರಣದ ಎ1 ಆರೋಪಿಯಾಗಿದ್ದ. ಜತೆಗೆ  ಪತ್ರಿಕೆಯ ರೆಸಿಡೆನ್ಷಿಯಲ್ ಸಂಪಾದಕ ಸೇಸಪ್ಪ ರೈ ಎಂಬವರ ಪುತ್ರ, ಕರುಣಾಕರ ರೈ ಸಿ.ಎಚ್ ಹಾಗೂ ಅದೇ ಪತ್ರಿಕೆಯ ಉದ್ಯೋಗಿ   ರೋಹಿತಾಕ್ಷ ರಾವ್ ಎಂಬವರ ಪುತ್ರ ಈಶ್ವರ ಮಂಗಲ ನಿವಾಸಿ  ಶಿವಕುಮಾರ್ ಹಾಗೂ ಪತ್ರಿಕೆ ಮುದ್ರಣಗೊಳ್ಳುತ್ತಿದ್ದ ಮೆಟ್ರೋ ಪಾಲಿಟಿನ್ ಮೀಡಿಯಾ ಲಿಮಿಟೆಡ್ ಮೇಲೂ ಪ್ರಕರಣ ದಾಖಲಾಗಿತ್ತು. ಈ ಎಲ್ಲಾ ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ U/s 499,500,501 ಹಾಗೂ 502 ರಂತೆ ಪ್ರಕರಣ ದಾಖಲಾಗಿತ್ತು. 

Ad Widget

Ad Widget <> Ad Widget

ನ್ಯಾಯಾಲಯದಲ್ಲಿ  ದಾಖಲಾದ ಈ  ಮಾನಹಾನಿಕರ ಪ್ರಕರಣವನ್ನು ವಜಾಗೊಳಿಸಬೇಕು ಎಂದು ಆರೋಪಿಗಳಾದ  ಯುಪಿ ಶಿವಾನಂದ,  ಕರುಣಾಕರ ರೈ ಹಾಗೂ  ಶಿವಕುಮಾರ್ ಅವರು 2019 ರಲ್ಲಿ  ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿತ್ತು.  ಇತ್ತೀಚೆಗೆ ಈ  ಪ್ರಕರಣವನ್ನು ಮಾನ್ಯ ಉಚ್ಚ ನ್ಯಾಯಲಯವು   ವಿಚಾರಣೆಗೆತ್ತಿಕೊಂಡಿತ್ತು.  ದಿನೇಶ್ ಜೈನ್ ಅವರು ಹೂಡಿರುವ  ಕ್ರಿಮಿನಲ್ ಪ್ರಕರಣದ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ನ್ಯಾಯಾಲಯವು  ಇದು  ವಜಾಗೊಳ್ಳಲು ಅರ್ಹ ಪ್ರಕರಣವಲ್ಲ ಎಂಬ ತೀರ್ಮಾನಕ್ಕೆ ಬಂದು ಆರೋಪಿಗೆ ಬಾಯ್ದೆರೆಯಾಗಿ ಛೀಮಾರಿ ಹಾಕಿತ್ತು  ಎಂಬ ಮಾತುಗಳು ಹೈ ಕೋರ್ಟಿನ ಮೂಲಗಳಿಂದ  ತಿಳಿದು  ಬಂದಿದೆ.



Ad Widget

ಇದನ್ನು ಓದಿ Big Shocking : ಪುತ್ತೂರು : ಸುದ್ದಿಬಿಡುಗಡೆ ಪತ್ರಿಕೆ ಸಂಪಾದಕ ಡಾ. ಯು.ಪಿ ಶಿವಾನಂದರಿಂದ ಮಹಿಳೆಯ ಮಾನಹಾನಿ

Ad Widget

Ad Widget

 ಈ ಬೆಳವಣಿಗೆಯಿಂದ  ಗಾಬರಿಯಾದ  ಆರೋಪಿ ಶಿವಾನಂದ ಹಾಗೂ ಪಟಲಾಂ ಬೇರೆ ದಾರಿ ಕಾಣದೆ  ಮೆಮೊ ಹಾಕಿ ತಾವು ವಜಾಕ್ಕೆ ಸಲ್ಲಿಸಿದ ಅರ್ಜಿಯನ್ನು ಹಿಂಪಡೆಯುವುದಾಗಿ ನ್ಯಾಯಪೀಠವನ್ನು  ವಿನಂತಿಸಿಕೊಂಡರು.  ಹೀಗಾಗಿ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ ಅರ್ಜಿ ವಜಾಗೊಂಡು ಆರೋಪಿಗಳು ತೀವ್ರ ಮುಖಭಂಗ ಅನುಭವಿಸಿದ್ದಾರೆ.  ಇದೀಗ ಈ ಪ್ರಕರಣದ ವಿಚಾರಣೆ ಪುತ್ತೂರಿನ ನ್ಯಾಯಾಲಯದಲ್ಲಿ ಮುಂದುವರಿಯಲಿದ್ದು ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ.

ಪ್ರಕರಣದ ವಿವರ 

2015 ರ ಆಕ್ಟೋಬರ್ 10 ರಂದು  ಟಿಪ್ಪು ಜಯಂತಿಯನ್ನು ವಿರೋಧಿಸಿ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಯ ವೇಳೆ  ಹಿಂದೂ ಮುಖಂಡ ಕುಟ್ಟಪ್ಪ ಎಂಬವರು ಸಾವನ್ನಪ್ಪಿದ್ದರು.  ಕುಟ್ಟಪ್ಪ ಅವರನ್ನು ಮತಾಂಧ ಶಕ್ತಿಗಳು ಹತ್ಯೆ ಮಾಡಿವೆ ಎಂದು ಆರೋಪಿಸಿ ಪುತ್ತೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು.  ಪುತ್ತೂರಿನಲ್ಲಿ ಬಂದ್ ಶಾಂತಿಯುತವಾಗಿ ನಡೆದು ಯಶಸ್ವಿಯಾಗಿತ್ತು. ಇದಾದ ಬಳಿಕ ( ಅಕ್ಟೋಬರ್ ತಿಂಗಳ ಮಧ್ಯದ ವಾರದಲ್ಲಿ) ಸುದ್ದಿ ಬಿಡುಗಡೆ ಪತ್ರಿಕೆಯು  ಬಂದ್ ವಿರೋಧಿ ಅಭಿಯಾನ ನಡೆಸಿತ್ತು.  ಈ ಕುರಿತು  ಸರಣಿ ಸಂಪಾದಕೀಯ ಬರೆಯಿತು.  ಇದನ್ನು ಹಿಂದೂ ಮುಖಂಡನ ನೆಲೆಯಲ್ಲಿ ದಿನೇಶ್ ಜೈನ್ ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದರು.

ತನ್ನ ಕಚ್ಚಿದ 20 ಇಂಚು ಉದ್ದದ  ಹಾವನ್ನು ಹಿಡಿದು ಕಚ್ಚಿ ಕೊಂದ ಎರಡು ವರ್ಷದ ಮಗು …!

ತನ್ನ ಅಂದೋಲನವನ್ನು ಟೀಕಿಸಿದರು ಎಂಬ ಕಾರಣಕ್ಕೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ  ದಿನೇಶ್ ಜೈನ್ ಅವರ ಬಗ್ಗೆ ಪ್ರಕಟಿಸಲು ಯೋಗ್ಯವಲ್ಲದ ಪದಗಳಿಂದ ಅವಹೇಳನ ಮಾಡಿ ಸಂಪಾದಕೀಯ ಪ್ರಕಟಿಸಲಾಗಿತ್ತು. ಮೂರು ತಿಂಗಳ ಅಂತರದಲ್ಲಿ ಹಲವು ಬಾರಿ ಹಿಂದೂ ನಾಯಕನ ತೇಜೊವಧೆ, ಮಾನ ಹಾನಿ, ಅವಹೇಳನ ಮಾಡಲಾಗಿತ್ತು. ʼನರಿʼ ʼಭಯೋತ್ಪಾದಕʼ ಇತ್ಯಾದಿ ಪದ ಬಳಸಿ ನನ್ನ ತೇಜೊವಧೆ ಮಾಡಲಾಗಿದೆ ಎಂದು ದಿನೇಶ್ ಜೈನ್ ಅವರು ಪುತ್ತೂರು ನ್ಯಾಯಾಲಯದಲ್ಲಿ ತಮ್ಮ ವಕೀಲರಾದ ಶ್ಯಾಮಪ್ರಸಾದ್ ಕೈಲಾರ್ ಮೂಲಕ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.

ಹಿಂದೂ ಮುಖಂಡ, ಸಾಮಾಜಿಕ ಹೋರಾಟಗಾರ ದಿನೇಶ್ ಕುಮಾರ್ ಜೈನ್

  ಪ್ರಕರಣ ದಾಖಲಾದ ಬಳಿಕ ಹಲವು ಸಮಯ ತಲೆಮರೆಸಿಕೊಂಡಿದ್ದ ಆರೋಪಿಗಳು ಕೊನೆಗೆ ವಿಧಿಯಿಲ್ಲದೆ  ನ್ಯಾಯಾಲಯಕ್ಕೆ ಶರಣಾಗಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.  ಇದಾದ ಬಳಿಕ ಪ್ರಕರಣ ವಜಾಗೊಳಿಸಬೇಕೆಂದು ಕೋರಿ ಹೈಕೋರ್ಟು ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ವೇಳೆ ಖ್ಯಾತ ನ್ಯಾಯವಾದಿ ಚಾಣಕ್ಯ ಲಾ ಚೆಂಬರ್ಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಕೈಲಾರ್ ಅವರು  ಸರ್ವೋಚ್ಚ ನ್ಯಾಯಾಲಯದ ಹಲವಾರು ಪ್ರಕರಣಗಳನ್ನು ಉಲ್ಲೇಖಿಸಿ ವಾದಿಸಿದ್ದರು. ಪತ್ರಕರ್ತರು ಮಾನಹಾನಿ ಮಾಡಲು ಕಾನೂನಿನಲ್ಲಿ ವಿಶೇಷ ಅಧಿಕಾರವನ್ನು ಪಡೆದಿಲ್ಲ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದ ಉಲ್ಲೇಖವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದೀಗ ಮೂವರು ಆರೋಪಿಗಳು ಹೈಕೋರ್ಟಿನಲ್ಲಿ ಮುಖಭಂಗ ಅನುಭವಿಸಿ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿ ಪುತ್ತೂರು ನ್ಯಾಯಾಲಯದ  ಕಟಕಟೆ  ಏರಲಿದ್ದಾರೆ.

Ad Widget

ಸುಳ್ಯ

Sevaratna-ಕಲ್ಪವೃಕ್ಷದ ಕಾಯಕಯೋಗಿಗೆ ‘ಸೇವಾರತ್ನ’ ಗೌರವ; 20 ವರ್ಷಗಳ ನಿರಂತರ ಕಾಯಕಕ್ಕೆ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ಜಿಲ್ಲಾಮಟ್ಟದ ಪ್ರಶಸ್ತಿ

Published

on



Ad Widget

Ad Widget

Ad Widget

Ad Widget

ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget

Ad Widget

ಸುಳ್ಯ: ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರವನ್ನು ಏರಿ, ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಶ್ರೀ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಹಾಗೂ ಸೇವೆಯಿಂದ ಇದೀಗ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆಕ್ಸಿಸ್ ಬ್ಯಾಂಕ್ ಹಾಗೂ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ಕೊಡಮಾಡುವ ಜಿಲ್ಲಾಮಟ್ಟದ ‘ಸೇವಾರತ್ನ ಪ್ರಶಸ್ತಿ’ಗೆ ಅಚ್ಚುತ ನಾಯಕ್ ಕಿಲಂಗೋಡಿಯವರನ್ನು ಆಯ್ಕೆ ಮಾಡಲಾಗಿದೆ.
ಒಕ್ಟೊಬರ್ 9ರಂದು ಸಂಜೆ 4.30ಕ್ಕೆ ಮoಗಳೂರಿನಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Ad Widget

Ad Widget <> Ad Widget

ತೆಂಗಿನ ಮರವೇರುವುದು ಸುಲಭದ ಕೆಲಸವಲ್ಲ. ಮರದ ಎತ್ತರ, ಗಾಳಿಯ ವೇಗ, ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಸವಾಲುಗಳ ನಡುವೆಯೂ ಮರದ ತುದಿಗೆ ಏರಿ ತೆಂಗಿನಕಾಯಿಗಳನ್ನು ಕೊಯ್ದು ಕೆಳಗಿಳಿಸುವ ಈ ಕಾಯಕಕ್ಕೆ ಧೈರ್ಯ, ದೈಹಿಕ ಸಾಮರ್ಥ್ಯ, ಕೌಶಲ್ಯ ಹಾಗೂ ಅಪಾರ ಅನುಭವದ ಅಗತ್ಯವಿದೆ. ಇಂತಹ ಅಪಾಯಭರಿತ ಕಾಯಕವನ್ನು ಅಚ್ಚುತ ನಾಯಕ್ ಅವರು ಕಳೆದ 20 ವರ್ಷಗಳಿಂದ ಅತ್ಯಂತ ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ಕಳಂಜ ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಸುಳ್ಯ ತಾಲೂಕು ಹಾಗೂ ಹೊರ ತಾಲೂಕುಗಳ ವಿವಿಧ ಪ್ರದೇಶಗಳಿಗೆ ತೆರಳಿ, ರೈತರು ಮತ್ತು ಸಾರ್ವಜನಿಕರ ತೆಂಗಿನ ಮರಗಳಿಂದ ತೆಂಗಿನಕಾಯಿಗಳನ್ನು ಕೊಯ್ದು ತೆಗೆದು ಕೊಡುವ ಸೇವೆಯನ್ನು ಅವರು ನಿರಂತರವಾಗಿ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅತ್ಯಗತ್ಯವಾಗಿರುವ ಈ ಸೇವೆಯನ್ನು ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ಮಾಡುತ್ತಿರುವುದು ಅವರ ಕಾಯಕದ ವಿಶೇಷತೆಯಾಗಿದೆ.



Ad Widget

ಮೌನ ಸಾಧಕರ ಸೇವೆಗೆ ಮತ್ತೊಂದು ಗೌರವ
ಅಚ್ಚುತ ನಾಯಕ್ ಅವರ ಸೇವೆಯನ್ನು ಈಗಾಗಲೇ ಹಲವು ಸಂಸ್ಥೆಗಳು ಗುರುತಿಸಿವೆ. ರೋಟರಿ ಕ್ಲಬ್ ಬೆಳ್ಳಾರೆ ಸಂಸ್ಥೆಯು 2018–19ನೇ ಸಾಲಿನಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವಿಸಿತ್ತು.
ಅದೇ ರೀತಿ ಜೆಸಿಐ ಬೆಳ್ಳಾರೆ ಸಂಸ್ಥೆಯು 2025ರಲ್ಲಿ ಅವರ ನಿರಂತರ ಹಾಗೂ ಶ್ರಮದಾಯಕ ಸೇವೆಯನ್ನು ಗುರುತಿಸಿ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಿತ್ತು.

Ad Widget

Ad Widget

ಯಾವುದೇ ಪ್ರಚಾರದ ಹಿಂದೆ ಹೋಗದೆ, ತನ್ನ ಶ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಪ್ರತಿದಿನವೂ ದುಡಿಯುತ್ತಿರುವ ಅಚ್ಚುತ ನಾಯಕ್ ಅವರು ನಿಜವಾದ ಮೌನ ಕಾಯಕಯೋಗಿ. ತೆಂಗಿನ ಮರದ ತುದಿಯಲ್ಲಿ ನಿಂತು ಅವರು ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ಧೈರ್ಯ, ಪರಿಶ್ರಮ, ಕೌಶಲ್ಯ ಮತ್ತು ಕುಟುಂಬದ ಬದುಕಿಗಾಗಿ ನಡೆಸುವ ಪ್ರಾಮಾಣಿಕ ಹೋರಾಟವಿದೆ.

ಕಲ್ಪವೃಕ್ಷದೊಂದಿಗೆ ಎರಡು ದಶಕಗಳ ಕಾಲ ನಂಟು ಬೆಳೆಸಿಕೊಂಡಿರುವ ಅಚ್ಚುತ ನಾಯಕ್ ಅವರ ಕಾಯಕವು ಗ್ರಾಮೀಣ ಶ್ರಮಜೀವಿಗಳ ಬದುಕಿನ ಪ್ರತೀಕವಾಗಿದೆ. ರೈತರ ಅಗತ್ಯಕ್ಕೆ ಸ್ಪಂದಿಸುತ್ತಾ, ಅಪಾಯವನ್ನು ಲೆಕ್ಕಿಸದೆ ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ಅವರ ಸೇವೆಗೆ ‘ಸೇವಾರತ್ನ’ ಪ್ರಶಸ್ತಿ ಮತ್ತೊಂದು ಸಾರ್ಥಕ ಗೌರವವಾಗಿದೆ.

ಕಾಯಕಕ್ಕೆ ಸಂದ ಸಾರ್ಥಕ ಗೌರವ
ಕಳೆದ 20 ವರ್ಷಗಳಿಂದ ತೆಂಗಿನ ಮರದ ತುದಿಯಲ್ಲಿ ಬೆವರು ಸುರಿಸಿ, ರೈತರು ಮತ್ತು ಸಾರ್ವಜನಿಕರಿಗೆ ಅಗತ್ಯವಾದ ಸೇವೆಯನ್ನು ಸಲ್ಲಿಸುತ್ತಿರುವ ಅಚ್ಚುತ ನಾಯಕ್ ಕಿಲಂಗೋಡಿಯವರಿಗೆ ದೊರೆಯುತ್ತಿರುವ ‘ಸೇವಾರತ್ನ’ ಪ್ರಶಸ್ತಿ, ಅವರ ಕಾಯಕನಿಷ್ಠೆಗೆ ಸಂದ ಗೌರವ ಮಾತ್ರವಲ್ಲದೆ, ಗ್ರಾಮೀಣ ಶ್ರಮಜೀವಿಗಳ ಪರಿಶ್ರಮಕ್ಕೂ ಸಂದ ಗೌರವವಾಗಿದೆ.

ಕಲ್ಪವೃಕ್ಷದ ಕಾಯಕಯೋಗಿಯ ಎರಡು ದಶಕಗಳ ನಿರಂತರ ಸೇವೆಗೆ ಇದೀಗ ‘ಸೇವಾರತ್ನ’ದ ಗೌರವದ ಕಿರೀಟ ದೊರೆತಿದೆ.

Ad Widget
Continue Reading

ಸುಳ್ಯ

ಸುಳ್ಯ :ಗ್ಯಾರೇಜ್‌ನಲ್ಲಿ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ

Published

on



Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸುಳ್ಯ: ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆರೋಪಿಗಳನ್ನು ಸುಳ್ಯ ಐವರ್ನಾಡು ನಿವಾಸಿ ದಯಾನಂದ (30) ಹಾಗೂ ಸುಳ್ಯ ಕಸಬಾ ನಿವಾಸಿ ದರ್ಶನರಾಜು (23) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಸುಳ್ಯ ಕಸಬಾ ಗ್ರಾಮದ ಅಂಬೆಟಡ್ಕದಲ್ಲಿ ಆ.26ರ ರಾತ್ರಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.120/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 326(g) ಅಡಿ ಪ್ರಕರಣ ದಾಖಲಾಗಿತ್ತು.



Ad Widget

ಪ್ರಕರಣದ ತನಿಖೆ ನಡೆಸಿದ ಸುಳ್ಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Continue Reading

ಸುಳ್ಯ

Dr. Deviprasad Kanattur-ಪಂಜ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ; ಸತ್ಯ ಪ್ರಮಾಣಕ್ಕೆ ಡಾ. ದೇವಿಪ್ರಸಾದ್ ಕಾನತ್ತೂರ್ ನಿರ್ಧಾರ

Published

on



Ad Widget

Ad Widget

Ad Widget

Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget

Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ತನ್ನ ಮೇಲಿನ ಅವ್ಯವಹಾರದ ಆರೋಪಕ್ಕೆ ಸತ್ಯಪ್ರಮಾಣಕ್ಕೆ ನಿರ್ಧರಿಸಿದ್ದು ಆರೋಪ ಹೊರಿಸಿದವರು, ಪ್ರಮಾಣಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಆಗಸ್ಟ್ 31 ರಂದು ಸೋಮವಾರ ಪೂರ್ವಾಹ್ನ ಶ್ರೀ ದೇವರು ಜಳಕ ಮಾಡುವ ಪವಿತ್ರ ನಾಗತೀರ್ಥ ನದಿಯಲ್ಲಿ ಸ್ನಾನಮಾಡಿ ದೇಗುಲದ ನಡೆಯಲ್ಲಿ ಬೆಳಗ್ಗಿನ ಮಹಾಪೂಜೆಯ ನಂತರ ನಾನು ಯಾವ ಅವ್ಯವಹಾರ ಮಾಡಿಲ್ಲ ಎಂದು ಸತ್ಯ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳು ಉತ್ತರ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಯಾರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರೂ ಪ್ರಮಾಣಕ್ಕೆ ಬರಲಿ ಎಂದು ಅವರು ತಿಳಿಸಿದ್ದಾರೆ.

Ad Widget

Ad Widget <> Ad Widget

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading