Connect with us

ಬಿಗ್ ನ್ಯೂಸ್

Uppinangadi-ಉಪ್ಪಿನಂಗಡಿ–ಗುರುವಾಯನಕೆರೆ ರಸ್ತೆ ಡಾಮರೀಕರಣಕ್ಕೆ ಆಗ್ರಹ: ಕಲ್ಲೇರಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ

Published

on



Ad Widget

Ad Widget

Ad Widget

Ad Widget

ಹೊಂಡ-ಗುಂಡಿಗಳಿಂದ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಉಪ್ಪಿನಂಗಡಿ–ಗುರುವಾಯನಕೆರೆ ರಸ್ತೆಯನ್ನು ಶೀಘ್ರ ಡಾಮರೀಕರಣಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ನ. 2ರಂದು ಕಲ್ಲೇರಿಯಲ್ಲಿ ಪ್ರತಿಭಟನೆ ನಡೆಯಿತು.

Ad Widget

Ad Widget

Ad Widget

ಉಪ್ಪಿನಂಗಡಿ: ಹೊಂಡ-ಗುಂಡಿಗಳಿಂದ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಉಪ್ಪಿನಂಗಡಿ–ಗುರುವಾಯನಕೆರೆ ರಸ್ತೆಯನ್ನು ಶೀಘ್ರ ಡಾಮರೀಕರಣಗೊಳಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ನ. 2ರಂದು ಕಲ್ಲೇರಿಯಲ್ಲಿ ಪ್ರತಿಭಟನೆ ನಡೆಯಿತು.

Ad Widget

Ad Widget alt="Ad Widget"/>

Ad Widget

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸೋ ಫ್ರ್ಯಾಂಕ್, ಬಿಜೆಪಿ ಶಾಸಕ ಹಾಗೂ ಕಾಂಗ್ರೆಸ್ ಸರಕಾರದ ನಡುವಿನ ರಾಜಕೀಯ ಕೆಸರೆರಚಾಟದಿಂದಾಗಿ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಈ ರಸ್ತೆಗೆ ಶೀಘ್ರವೇ ಸಂಪೂರ್ಣ ಡಾಮರು ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು.

Ad Widget

Ad Widget <> Ad Widget

ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೊಡ್ರಿಗಸ್ ಮಾತನಾಡಿ, ಕಳೆದ ಐದು ವರ್ಷಗಳಿಂದ ರಸ್ತೆಯ ದುಸ್ಥಿತಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಹೊಂಡಗಳಿಂದ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಲಕ್ಷಾಂತರ ರೂಪಾಯಿ ಬೆಲೆಬಾಳುವ ವಾಹನಗಳ ಬಿಡಿಭಾಗಗಳಿಗೂ ಹಾನಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



Ad Widget

ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಸರಕಾರಕ್ಕೆ ತಿಳಿದಿದ್ದರೂ ಶಾಶ್ವತ ಪರಿಹಾರ ಕಲ್ಪಿಸದಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ತಾತ್ಕಾಲಿಕ ಪ್ಯಾಚ್‌ವರ್ಕ್ ನಮಗೆ ಬೇಕಾಗಿಲ್ಲ. ಸಂಪೂರ್ಣ ಪ್ರಮಾಣದ ಡಾಮರು ಕಾಮಗಾರಿ ನಡೆಸಬೇಕು ಎಂದು ಒತ್ತಾಯಿಸಿದರು.

Ad Widget

Ad Widget

ಪ್ರತಿಭಟನಾಕಾರರು ಹಾಡಿನ ಮೂಲಕ ಬಿಜೆಪಿ ಶಾಸಕ ಹರೀಶ್ ಪೂಂಜ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ವ್ಯಂಗ್ಯಭರಿತ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಗುಂಡಿಗಳಿಗೆ ಗಾಳ ಹಾಕಿ ಮೀನು ಹಿಡಿಯುವ ಅಣಕು ಪ್ರದರ್ಶನ ನಡೆಸುವ ಮೂಲಕ ಶಾಸಕರು ಸ್ಥಳಕ್ಕೆ ಬಂದು ರಸ್ತೆಯ ದುಸ್ಥಿತಿಯನ್ನು ವೀಕ್ಷಿಸಬೇಕು ಎಂದು ಒತ್ತಾಯಿಸಿದರು. ಸಂಸದರ ಕಾರ್ಯವೈಖರಿಯನ್ನೂ ವ್ಯಂಗ್ಯವಾಡಿದರು.

ಸಂಜೆ 4 ಗಂಟೆಯ ವೇಳೆಗೆ ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಗೋಪಾಲ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಮನವಿಯನ್ನು ಸರಕಾರಕ್ಕೆ ಸಲ್ಲಿಸಿ ಶೀಘ್ರ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ವ್ಯಂಗ್ಯದ ಪೋಸ್ಟರ್ ಅಳವಡಿಕೆ: ಹೊಂಡಮಯ ರಸ್ತೆಯಲ್ಲಿ ಸಂಚರಿಸುವಾಗ ಪ್ರಯಾಣಿಕರು ಅನುಭವಿಸುವ ಸಂಕಷ್ಟಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಬಿಂಬಿಸಿ, ಶಾಸಕ ಹರೀಶ್ ಪೂಂಜ ಅವರ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಎಸ್‌ಡಿಪಿಐ ವತಿಯಿಂದ ರಸ್ತೆ ಬದಿಗಳಲ್ಲಿ ಅಳವಡಿಸಲಾಯಿತು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನವಾಝ್ ಕಟ್ಟೆ, ಕೆ.ಎಸ್. ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು. ನಿಸಾರ್ ಕುದ್ರಡ್ಕ ಸ್ವಾಗತಿಸಿದರು. ಅಸ್ಫಾಕ್ ಪೂಂಜಾಲಕಟ್ಟೆ ವಂದಿಸಿದರು. ಫೈಝಲ್ ಮೂರುಗೋಳಿ ಕಾರ್ಯಕ್ರಮ ನಿರೂಪಿಸಿದರು.

Ad Widget
Click to comment

Leave a Reply

ಬಿಗ್ ನ್ಯೂಸ್

ChatGPT- ಪತ್ನಿಗೆ ಹತ್ಯೆ ಸಂಚು ರೂಪಿಸಲು ಸಲಹೆ ನೀಡಿದ ಆರೋಪ: ಚಾಟ್‌ಜಿಪಿಟಿ ವಿರುದ್ಧ ಪತಿ ಕಾನೂನು ದಾವೆ..!

Published

on



Ad Widget

Ad Widget

Ad Widget

Ad Widget

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನನ್ನು ಹತ್ಯೆ ಮಾಡುವಂತೆ ಪರಿತ್ಯಕ್ತ ಪತ್ನಿಗೆ ಸಲಹೆ ನೀಡಿದೆ ಎಂದು ಆರೋಪಿಸಿ ಅಮೆರಿಕದ ನಾರ್ತ್ ಕೆರೊಲಿನಾ ಮೂಲದ ಜೇಮ್ಸ್ ಗೇಟ್ಸ್ ಎಂಬವರು ಎಐ ಆಧಾರಿತ ಚಾಟ್‌ಬಾಟ್‌ ಚಾಟ್‌ಜಿಪಿಟಿ ವಿರುದ್ಧ ಕಾನೂನು ದಾವೆ ಹೂಡಿದ್ದಾರೆ.

Ad Widget

Ad Widget

Ad Widget

ವಾಷಿಂಗ್ಟನ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನನ್ನು ಹತ್ಯೆ ಮಾಡುವಂತೆ ಪರಿತ್ಯಕ್ತ ಪತ್ನಿಗೆ ಸಲಹೆ ನೀಡಿದೆ ಎಂದು ಆರೋಪಿಸಿ ಅಮೆರಿಕದ ನಾರ್ತ್ ಕೆರೊಲಿನಾ ಮೂಲದ ಜೇಮ್ಸ್ ಗೇಟ್ಸ್ ಎಂಬವರು ಎಐ ಆಧಾರಿತ ಚಾಟ್‌ಬಾಟ್‌ ಚಾಟ್‌ಜಿಪಿಟಿ ವಿರುದ್ಧ ಕಾನೂನು ದಾವೆ ಹೂಡಿದ್ದಾರೆ.

Ad Widget

Ad Widget alt="Ad Widget"/>

Ad Widget

2025ರಲ್ಲಿ ತಮಗೆ ನಿಗೂಢ ಕಾಯಿಲೆ ಕಾಣಿಸಿಕೊಂಡಿತ್ತು. ವೈದ್ಯರಿಂದಲೂ ಕಾಯಿಲೆಯ ಕಾರಣ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಪತ್ನಿಯ ಪರ್ಸ್‌ನಲ್ಲಿ ಆಕೆ ಬರೆದಿಟ್ಟಿದ್ದ ಚೀಟಿಯೊಂದು ಸಿಕ್ಕಿತ್ತು ಎಂದು ಜೇಮ್ಸ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Ad Widget

Ad Widget <> Ad Widget

ಊಟದಲ್ಲಿ ಕಣಗಿಲೆ ಗಿಡದ ರಸ ಬೆರೆಸುವುದು ಸೇರಿದಂತೆ ಪತಿಯನ್ನು ಹತ್ಯೆ ಮಾಡುವ ವಿವಿಧ ವಿಧಾನಗಳ ಬಗ್ಗೆ ಆ ಚೀಟಿಯಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಈ ಆಯ್ಕೆಗಳನ್ನು ಚಾಟ್‌ಜಿಪಿಟಿ ನೀಡಿದ ಸಲಹೆಯ ಮೇರೆಗೆ ಸಿದ್ಧಪಡಿಸಲಾಗಿದೆ ಎಂದು ಜೇಮ್ಸ್ ಆರೋಪಿಸಿದ್ದಾರೆ.



Ad Widget

ಚಾಟ್‌ಜಿಪಿಟಿಯ ಸಲಹೆಯಿಂದಾಗಿ ತನ್ನ ಜೀವಕ್ಕೆ ಅಪಾಯ ಉಂಟಾಗಿದೆ ಎಂದು ಆರೋಪಿಸಿರುವ ಅವರು, ಸಂಸ್ಥೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

Continue Reading

ಬಿಗ್ ನ್ಯೂಸ್

Puttur-ಎಸ್‌ಐಆರ್‌ ವಿರುದ್ಧ ನ. 9ರಂದು ಪುತ್ತೂರಿನಲ್ಲಿ ತಿರಂಗಾ ಯಾತ್ರೆ ಹಾಗೂ ಪ್ರತಿಭಟನಾ ಸಭೆ

Published

on



Ad Widget

Ad Widget

Ad Widget

Ad Widget

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿರೋಧಿಸಿ, ‘ಮತ ಉಳಿಸಿ–ಪ್ರಜಾಪ್ರಭುತ್ವ ರಕ್ಷಿಸಿ’ ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 9ರಂದು ಪುತ್ತೂರಿನಲ್ಲಿ ತಿರಂಗಾ ಯಾತ್ರೆ ಹಾಗೂ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ತಿಳಿಸಿದ್ದಾರೆ.

Ad Widget

Ad Widget

Ad Widget

ಪುತ್ತೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿರೋಧಿಸಿ, ‘ಮತ ಉಳಿಸಿ–ಪ್ರಜಾಪ್ರಭುತ್ವ ರಕ್ಷಿಸಿ’ ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 9ರಂದು ಪುತ್ತೂರಿನಲ್ಲಿ ತಿರಂಗಾ ಯಾತ್ರೆ ಹಾಗೂ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ತಿಳಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ರೈತ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಜನಾಧಿಕಾರ ಆಂದೋಲನ ವೇದಿಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Ad Widget

Ad Widget <> Ad Widget

ನ. 9ರಂದು ಬೆಳಗ್ಗೆ 10.30ಕ್ಕೆ ಗಾಂಧಿ ಕಟ್ಟೆಯಲ್ಲಿ ಸಾರ್ವಜನಿಕರು ಒಟ್ಟುಗೂಡಲಿದ್ದಾರೆ. ಬಳಿಕ ಗಾಂಧೀಜಿಯವರ ಪುತ್ಥಳಿಗೆ ಹಾರಾರ್ಪಣೆ ಮಾಡಿ, ರಾಷ್ಟ್ರಧ್ವಜ ಹಿಡಿದು ಅಮರ್ ಜವಾನ್ ಜ್ಯೋತಿ ಸ್ಮಾರಕದವರೆಗೆ ತಿರಂಗಾ ಯಾತ್ರೆ ನಡೆಯಲಿದೆ. ನಂತರ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿದ್ದು, ಮಂಗಳೂರಿನ ಎಂ.ಜಿ. ಹೆಗ್ಡೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.



Ad Widget

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು
ಎಸ್‌ಐಆರ್‌ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಂದಿನ ಚುನಾವಣೆಗಳನ್ನು ಹಿಂದಿನ ಮತದಾರರ ಪಟ್ಟಿಯ ಆಧಾರದಲ್ಲೇ ನಡೆಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಅವರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಅಮಳ ರಾಮಚಂದ್ರ ಹೇಳಿದರು.

Ad Widget

Ad Widget

ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಚುನಾವಣೆಗಳನ್ನು ರದ್ದುಗೊಳಿಸಿ ಮರುಚುನಾವಣೆ ನಡೆಸಬೇಕು ಹಾಗೂ ಅವರ ಅಧಿಕಾರಾವಧಿಯಲ್ಲಿ ಚುನಾವಣಾ ಆಯೋಗ ಕೈಗೊಂಡ ನಿರ್ಧಾರಗಳು ಮತ್ತು ಪ್ರಕ್ರಿಯೆಗಳನ್ನು ಮರುಪರಿಶೀಲಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗುವುದು ಎಂದರು.

ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿ ನಿಷ್ಪಕ್ಷಪಾತವಾಗಿರಬೇಕು. ಮುಖ್ಯ ಚುನಾವಣಾ ಆಯುಕ್ತರಿಗೆ ಜೀವನಪರ್ಯಂತ ಕಾನೂನು ಕ್ರಮದಿಂದ ರಕ್ಷಣೆ ಒದಗಿಸುವ 2023ರ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂಬುದು ಪ್ರತಿಭಟನೆಯ ಇತರ ಬೇಡಿಕೆಗಳಾಗಿವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೂಪೇಶ್ ರೈ ಅಲಿಮಾರು, ಸುಲೇಮಾನ್ ಕಲ್ಲರ್ಪೆ, ಬಾತಿಶಾ ಅಳಿಕೆಮಜಲು ಹಾಗೂ ರಾಮಣ್ಣ ವಿಟ್ಲ ಉಪಸ್ಥಿತರಿದ್ದರು.

Ad Widget
Continue Reading

ಅಂತರ ರಾಜ್ಯ

Arrested-ನಿವೃತ್ತ ಐಎಎಸ್ ಅಧಿಕಾರಿ ಕೊಲೆ ಪ್ರಕರಣ: ಒಂದು ತಿಂಗಳ ಬಳಿಕ ರೈಲಿನಲ್ಲಿ ಪರಾರಿಯಾಗಿದ್ದ ಕೇರ್‌ಟೇಕರ್ ಅರೆಸ್ಟ್..!

Published

on



Ad Widget

Ad Widget

Ad Widget

Ad Widget

ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಅಗ್ರವಾಲ್ ಅವರನ್ನು ಬರ್ಬರವಾಗಿ ಹತ್ಯೆಗೈದು ರೈಲಿನಲ್ಲಿ ಪರಾರಿಯಾಗಿದ್ದ ಮನೆಯ ಕೇರ್‌ಟೇಕರ್ ವರುಣ್ ವಾಲ್ಮೀಕಿಯನ್ನು ಮಧ್ಯಪ್ರದೇಶ ಪೊಲೀಸರು ಒಂದು ತಿಂಗಳ ಬಳಿಕ ಬಂಧಿಸಿದ್ದಾರೆ.

Ad Widget

Ad Widget

Ad Widget

ಭೋಪಾಲ್: ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಅಗ್ರವಾಲ್ ಅವರನ್ನು ಬರ್ಬರವಾಗಿ ಹತ್ಯೆಗೈದು ರೈಲಿನಲ್ಲಿ ಪರಾರಿಯಾಗಿದ್ದ ಮನೆಯ ಕೇರ್‌ಟೇಕರ್ ವರುಣ್ ವಾಲ್ಮೀಕಿಯನ್ನು ಮಧ್ಯಪ್ರದೇಶ ಪೊಲೀಸರು ಒಂದು ತಿಂಗಳ ಬಳಿಕ ಬಂಧಿಸಿದ್ದಾರೆ. 27 ವರ್ಷದ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ಬರೋಬ್ಬರಿ 9 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, 2,500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

Ad Widget

Ad Widget alt="Ad Widget"/>

Ad Widget

ಮಧ್ಯಪ್ರದೇಶ ಕೇಡರ್‌ನ 1982ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ 70 ವರ್ಷದ ರಾಕೇಶ್ ಅಗ್ರವಾಲ್ ಅವರು ಸೆಪ್ಟೆಂಬರ್ 30ರಂದು ಭೋಪಾಲ್‌ನ ಸೂರಜ್ ನಗರದ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದರು. ದುಷ್ಕರ್ಮಿ ಹರಿತವಾದ ಆಯುಧದಿಂದ ಕತ್ತು ಸೀಳಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.

Ad Widget

Ad Widget <> Ad Widget

ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಮನೆಯ ಕೇರ್‌ಟೇಕರ್ ವರುಣ್ ವಾಲ್ಮೀಕಿ ಪರಾರಿಯಾಗಿದ್ದ. ರಾತ್ರಿ 2.30ರ ಸುಮಾರಿಗೆ ಮನೆಯಿಂದ ಹೊರಟಿದ್ದ ಆತ, ಬೆಳಗಿನ ಜಾವ 4.12ಕ್ಕೆ ಭೋಪಾಲ್ ರೈಲು ನಿಲ್ದಾಣದಿಂದ ಕೇರಳ ಎಕ್ಸ್‌ಪ್ರೆಸ್ ರೈಲು ಹತ್ತಿದ್ದ. ಈ ದೃಶ್ಯ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.



Ad Widget

ಆಗ್ರಾದಲ್ಲಿ ಸಿಕ್ಕ ಸುಳಿವು, ಪೊಲೀಸರ ಕಾರ್ಯಾಚರಣೆ
ರೈಲಿನಲ್ಲಿ ಪರಾರಿಯಾಗಿದ್ದ ವಾಲ್ಮೀಕಿ ಗ್ವಾಲಿಯರ್, ಆಗ್ರಾ, ಮಥುರಾ ಹಾಗೂ ವೃಂದಾವನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಓಡಾಡಿದ್ದ. ಈತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರಿಗೆ ಕೊನೆಗೆ ಆಗ್ರಾದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಆಗ್ರಾ-ಮಥುರಾ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Ad Widget

Ad Widget

ಆದರೆ, ಮಂಗಳವಾರ ಬೆಳಗ್ಗೆ ಮುಘಾಲಿಯಾ ಛಾಪ್ ಬಳಿ ಆರೋಪಿಯನ್ನು ಭೋಪಾಲ್‌ಗೆ ಕರೆತರುತ್ತಿದ್ದ ವೇಳೆ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸ್ ಅಧಿಕಾರಿಯೊಬ್ಬರ ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈದಿದ್ದಕ್ಕೆ ಕೊಲೆ ಮಾಡಿದ್ದೆ ಎಂದ ಆರೋಪಿ!
ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲ ಎಂದು ಭೋಪಾಲ್ ಪೊಲೀಸ್ ಕಮಿಷನರ್ ಸಂಜಯ್ ಕುಮಾರ್ ತಿಳಿಸಿದ್ದಾರೆ.

ಐಎಎಸ್ ಅಧಿಕಾರಿ ತನ್ನನ್ನು ಬೈದು, ಕೆಟ್ಟದಾಗಿ ನಡೆಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆದರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

9 ರಾಜ್ಯಗಳಲ್ಲಿ ಪೊಲೀಸರ ಶೋಧ
ಆರೋಪಿಯನ್ನು ಪತ್ತೆಹಚ್ಚಲು ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಚಂಡೀಗಢ, ಪಂಜಾಬ್, ದೆಹಲಿ, ಉತ್ತರಾಖಂಡ ಹಾಗೂ ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.

ಈ ಸಂದರ್ಭದಲ್ಲಿ 2,500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯ ಸಂಬಂಧಿಕರು ಹಾಗೂ ಪರಿಚಯಸ್ಥರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರು.

ಆರೋಪಿಗೆ ಪೊಲೀಸರ ಸುಳಿವು ಸಿಗದಂತೆ ತನಿಖಾಧಿಕಾರಿಗಳು ವೇಷ ಬದಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು. ಕೆಲವರು ಬೀದಿ ವ್ಯಾಪಾರಿಗಳಂತೆ, ಇನ್ನು ಕೆಲವರು ಕೂಲಿ ಕಾರ್ಮಿಕರು ಹಾಗೂ ಇತರ ಕೆಲಸಗಾರರಂತೆ ನಟಿಸಿ ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ರೈಲು ನಿಲ್ದಾಣ, ಬಸ್ ನಿಲ್ದಾಣ, ದೇವಾಲಯಗಳು ಹಾಗೂ ಆಶ್ರಯ ತಾಣಗಳಲ್ಲೂ ಹುಡುಕಾಟ ನಡೆಸಿದ್ದರು.

ಹಿಂದಿನ ಕೆಲಸದ ಸ್ಥಳಗಳಲ್ಲೂ ಗಂಭೀರ ಆರೋಪ
ವರುಣ್ ವಾಲ್ಮೀಕಿ ಈ ಹಿಂದೆ ಜೈಪುರ, ಗ್ವಾಲಿಯರ್ ಹಾಗೂ ನೈನಿತಾಲ್‌ನಲ್ಲಿರುವ ಮನೆ ಆರೈಕೆ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ. ಈತ ಕೆಲಸ ಮಾಡುತ್ತಿದ್ದ ಕೆಲವು ಕಡೆಗಳಲ್ಲಿ ಆತನ ನಡವಳಿಕೆ ಬಗ್ಗೆ ದೂರುಗಳು ಕೇಳಿಬಂದಿದ್ದವು. ವೃದ್ಧ ರೋಗಿಯೊಬ್ಬರನ್ನು ಹಾನಿಗೊಳಿಸಲು ಯತ್ನಿಸಿದ್ದ ಆರೋಪವೂ ಆತನ ಮೇಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನೈನಿತಾಲ್‌ನಲ್ಲಿ 2025ರ ಡಿಸೆಂಬರ್‌ನಿಂದ 2026ರ ಫೆಬ್ರವರಿವರೆಗೆ 92 ವರ್ಷದ ನಿವೃತ್ತ ವ್ಯಕ್ತಿಯೊಬ್ಬರ ಆರೈಕೆದಾರನಾಗಿ ಕೆಲಸ ಮಾಡಿದ್ದ. ಈ ಅವಧಿಯಲ್ಲಿ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದ ಎಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.

ಒಮ್ಮೆ ವೃದ್ಧ ವ್ಯಕ್ತಿಯ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ್ದ ಎನ್ನಲಾಗಿದ್ದು, ಈ ವೇಳೆ ನೆರೆಹೊರೆಯವರು ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದರು. ಘಟನೆಯ ಬಳಿಕ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಇನ್ನು 2026ರ ಆಗಸ್ಟ್‌ನಲ್ಲಿ ಗ್ವಾಲಿಯರ್‌ನ ಹೋಮ್ ನರ್ಸಿಂಗ್ ಏಜೆನ್ಸಿಗೆ ಸೇರಿದ ಮೊಬೈಲ್ ಫೋನ್ ಕಳ್ಳತನ ಮಾಡಿದ ಆರೋಪವೂ ಆತನ ಮೇಲಿದೆ. ಆದರೆ, ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ. ಜೈಪುರದಲ್ಲೂ 2026ರ ಜೂನ್‌ನಲ್ಲಿ ಆರೈಕೆದಾರನಾಗಿ ಕೆಲಸಕ್ಕೆ ಸೇರಿದ್ದ ವಾಲ್ಮೀಕಿಯನ್ನು ನಡವಳಿಕೆ ಕುರಿತ ದೂರುಗಳ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದುಹಾಕಲಾಗಿತ್ತು.

ಮನೆಯ ಕೆಲಸಗಾರನಿಂದ ಕೊಲೆ ಪ್ರಕರಣ ಬೆಳಕಿಗೆ
ಸೆಪ್ಟೆಂಬರ್ 30ರಂದು ಭೋಪಾಲ್‌ನ ಸೂರಜ್ ನಗರದ ಪಾನ್ ಘಾಟ್ ಮ್ಯಾರೇಜ್ ಗಾರ್ಡನ್ ಸಮೀಪದ ನಿವಾಸದಲ್ಲಿ ರಾಕೇಶ್ ಅಗ್ರವಾಲ್ ಅವರ ಮೃತದೇಹ ಪತ್ತೆಯಾಗಿತ್ತು. ಕುತ್ತಿಗೆಯ ಮೇಲೆ ಗಂಭೀರ ಗಾಯಗಳಿದ್ದವು. ಮನೆಯ ಕೆಲಸಗಾರ ಅಮರ್ ಸಿಂಗ್ ಪಾಲಿವಾಲ್ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಒಂದು ತಿಂಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!