ರಾಜಕೀಯ
Ashok Rai-ಕುರಿಯದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ: ರಾಜಕೀಯದವರ ಭಾಷಣ ಕೇಳಿ ನಿಮ್ಮ ಮನೆ ಖಂಡಿತಾ ಉದ್ದಾರ ಆಗುವುದಿಲ್ಲ; ವಿದ್ಯೆ-ಉದ್ಯೋಗ- ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ: ಶಾಸಕ ಅಶೋಕ್ ರೈ
ಕುರಿಯ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಅಶೋಕ್ ರೈ ರಾಜಕೀಯದವರ ಭಾಷಣ ಕೇಳಿ ಒಂದು ಮನೆಯೂ ಉದ್ದಾರವಾಗಿಲ್ಲ, ರಾಜಕೀಯದವರು ನಾವು ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಹೇಳುವುದು ಮಾತ್ರ. ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ, ಉದ್ಯೋಗ ಕೊಡಿಸಿ ಬಳಿಕ ನಿಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ನೀಡಿದ್ದಲ್ಲಿ ಮಾತ್ರ ನಿಮ್ಮ ಕುಟುಂಬ ಉದ್ದಾರವಾಗಲು ಸಾಧ್ಯ ಎಂದು ಹೇಳಿದರು.

ಪುತ್ತೂರು: ರಾಜಕೀಯದವರ ಭಾಷಣ ಕೇಳಿ ಒಂದು ಮನೆಯೂ ಉದ್ದಾರವಾಗಿಲ್ಲ, ರಾಜಕೀಯದವರು ನಾವು ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಹೇಳುವುದು ಮಾತ್ರ. ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ, ಉದ್ಯೋಗ ಕೊಡಿಸಿ ಬಳಿಕ ನಿಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ನೀಡಿದ್ದಲ್ಲಿ ಮಾತ್ರ ನಿಮ್ಮ ಕುಟುಂಬ ಉದ್ದಾರವಾಗಲು ಸಾಧ್ಯ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕುರಿಯ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ನಿಮ್ಮ ಮನೆಗೆ ತೆರಳುವ ಅಥವಾ ನೀವು ನಿತ್ಯ ಓಡಾಡುವ ರಸ್ತೆಯನ್ನು ಕಾಂಕ್ರೀಟ್ ಮಾಡಿ ಕೊಡುತ್ತೇವೆ ಎಂದು ಹಿಂದೆ ನಿಮ್ಮತ್ರ ಹಲವು ಮಂದಿ ಹೇಳಿರಬಹುದು ಆದರೆ ಇದುವರೆಗೂ ಆ ಕೆಲಸವಾಗಿಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ ನಾನು ವೋಟಿಗೆ ನಿಂತಾಗ ನಿಮ್ಮ ರಸ್ತೆಗಳನ್ನು ಅಭಿವೃದ್ದಿ ಮಾಡಿಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದೆ ಆ ಭರವಸೆಯನ್ನು ಈಡೇರಿಸಿದ್ದೇನೆ. ಮುಂದೆಯೂ ನಿಮ್ಮ ರಸ್ತೆಗಳಿಗೆ ಅನುದಾನವನ್ನು ನೀಡುವ ಮೂಲಕ ಅಭಿವೃದ್ದಿ ಮಾಡುತ್ತೇನೆ. ನಾನು ಕೇವಲ ಭಾಷಣ ಮಾಡಿ ಹೋಗುವ ಕೆಲಸ ಎಂದಿಗೂ ಮಾಡಲಾರೆ. ಆಗುವ ಕೆಲಸವನ್ನು ಮಾತ್ರ ಆಗುತ್ತದೆ ಎಂದು ಹೇಳುತ್ತೇನೆ ಪೊಳ್ಳು ಭರವಸೆ ಕೊಟ್ಟು ನಿಮ್ಮನ್ನು ಖಂಡಿತಾ ಮೋಸ ಮಾಡುವುದಿಲ್ಲ ಎಂದು ಶಾಸಕರು ಹೇಳಿದರು.
3 ವರ್ಷದಲ್ಲಿ 40.10 ಕೋಟಿ ಅನುದಾನ
ಕುರಿಯ ಗ್ರಾಮಕ್ಕೆ ನಾನು ಶಾಕನಾದ 3 ವರ್ಷದಲ್ಲಿ 40.10ಕೋಟಿ ಅನುದಾನವನ್ನು ನೀಡಿದ್ದೇನೆ. ಇದರಲ್ಲಿ 3.10 ಕೋಟಿ ರಸ್ತೆ ಅಭಿವೃದ್ದಿಗೆ ಉಳಿದ 37 ಕೋಟಿ ಕಾರ್ಮಿಕ ವಸತಿ ಶಾಲೆಗೆ ಇಟ್ಟಿದ್ದೇನೆ. ಕುರಿಯದಲ್ಲಿ 65 ಲಕ್ಷ ರೂ ಅನುದಾನದಲ್ಲಿ ಆರೋಗ್ಯ ಕ್ಷಮಾ ಕೇಂದ್ರವನ್ನು ನಿರ್ಮಾಣ ಮಾಡುತ್ತೇವೆ. ಇದುವರೆಗೂ ಸಿಮೆಂಟ್ ಕಾಣದ ರಸ್ತೆಗಳಿಗೆ ಕಾಂಕ್ರೀಟ್ ಮಾಡುತ್ತೇವೆ. ಅಭಿವೃದ್ದಿಯಲ್ಲಿ ಕಾಂಗ್ರೆಸ್ ಎಂದೂ ರಾಜಕೀಯ ಮಾಡುವುದಿಲ್ಲ. ನಮಗೆ ವೋಟು ಹಾಕದೇ ಇರುವ ವಾರ್ಡುಗಳಿಗೂ ಲಕ್ಷ ಲಕ್ಷ ಅನುದಾನ ಇಟ್ಟಿದ್ದೇವೆ. ಅಭಿವೃದ್ದಿಯೋಂದೇ ನಮ್ಮ ಉದ್ದೇಶವಾಗಿದ್ದು, ನಾವು ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ನಿಮಗೆ ಅನಿಸಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡಿ ಎಂದು ಶಾಸಕರು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಹಿಂದುತ್ವದ ಹೆಸರಲ್ಲಿ ವೋಟು ಕೇಳಿದವರುಹಿಂದೂ ಧರ್ಮಕ್ಕೆ ಏನು ಕೊಟ್ಟಿದ್ದಾರೆ?
ಪ್ರತೀ ಚುನಾವಣೆ ಬಂದಾಗ ಹಿಂದುತ್ವದ ಹೆಸರಿನಲ್ಲಿ ಜನರನ್ನು ವಿಭಜಿಸಿ ಮತ ಕೇಳುವ ಬಿಜೆಪಿಯವರು ಹಿಂದೂ ಧರ್ಮಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ ಶಾಸಕರು ಮೂರು ವರ್ಷದಲ್ಲಿ ಹಿಂದೂ ಧರ್ಮದ ದೇವಸ್ಥಾನಕ್ಕೆ ನೀಡಿದ ಅನುದಾನವನ್ನೊಮ್ಮೆ ಪರಿಶೀಲಿಸಿ. ಬಿಜೆಪಿಯವರು ಹಿಂದುತ್ವದ ಭಾಷಣ ಮಾಡಿ ಹಾಗೆ ಮಾಡ್ತೇವೆ ಹೀಗೆ ಮಾಡುತ್ತೇವೆ ಎಂದು ಹೇಳಿ ನಿಮ್ಮನ್ನು ಮಂಗ ಮಾಡುತ್ತಿದ್ದಾರೆ. ಸರಕಾರಿ ಜಾಗದಲ್ಲಿರುವ ಹಿಂದೂ ದೇವಸ್ಥಾನ, ಮಸೀದಿ, ಚರ್ಚುಗಳನ್ನು ದೇವರ ಹೆಸರಿಗೆ ಮಾಡುತ್ತಿದ್ದೇನೆ, ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಮಠಗಳಿಗೂ ಒಂದೊಂದು ಕೋಟಿ ಅನುದಾನ ನೀಡಿದ್ದೇವೆ, ಮಸೀದಿಗೂ ನೀಡಿದ್ದೇವೆ, ಚರ್ಚಿಗೂ ನೀಡುತ್ತೇವೆ ಎಂದು ಹೇಳಿದ ಶಾಸಕರು ಇಷ್ಟು ವರ್ಷದಲ್ಲಿ ಬಿಜೆಪಿಯವರು ಮಠದ ಸ್ವಾಮೀಜಿಯವರನ್ನು ತಮ್ಮ ರಾಜಕೀಯಕ್ಕೆ ಬಳಸಿದ್ದರೆ ವಿನಾ ಅವರಿಗೆ ನಯಾ ಪೈಸೆ ಕೊಡಲಿಲ್ಲ. ಕಾಂಗ್ರೆಸ್ ಸರಕಾರ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ನಮಗೆ ಧರ್ಮ ಆಧಾರಿತ ಚುನಾವಣೆ ಬೇಡ. ಅಭಿವೃದ್ದಿ ಆಧಾರಿತ ಚುನಾವಣೆ ಬೇಕು ಎಂಬ ದೃಡ ನಿರ್ಧಾರ ನೀವು ಮಾಡಿದ್ದಲ್ಲಿ ಪುತ್ತೂರು ಖಂಡಿತಾ ಅಭಿವೃದ್ದಿಯಾಗ್ತದೆ ಎಂದು ಶಾಸಕರು ಹೇಳಿದರು.
ಅಶೋಕ್ ರೈ ಪುತ್ತೂರಲ್ಲಿ ಶಾಸಕರಾಗಿರಬೇಕು: ವೇದಮೂರ್ತಿ ಸೂರ್ಯನಾರಾಯಣ ಭಟ್
ಪುತ್ತೂರಿಗೆ ಮೆಡಿಕಲ್ ಕಾಲೇಜು ತರಲು ಯಾವ ರಾಜಕಾರಣಿಯಿಂದಲೂ ಸಾಧ್ಯವಾಗಿಲ್ಲ, ಮೆಡಿಕಲ್ ಕಾಲೇಜು ತಂದು ತಮ್ಮ ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ, ಇವರಂಥ ಶಾಸಕರು ನಮ್ಮಲ್ಲಿರಬೇಕು, ಇವರೇ ಪುತ್ತೂರಲ್ಲಿ ಅನೇಕ ವರ್ಷಗಳ ಕಾಲ ಶಾಸಕರಾಗಿರಬೇಕು ಎಂಬುದು ನಮ್ಮ ಆಸೆಯಾಗಿದೆ ಎಂದು ವೇದಮೂರ್ತಿ ಸೂರ್ಯನಾರಾಯಣ ಭಟ್ ದೇವರಗುಂಡಿ ಹೇಳಿದರು.
ಕಲ್ಲಾಪಿನಲ್ಲಿ ರಸ್ತೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಅವರು ನಾವು ಎಷ್ಟು ವರ್ಷದಿಂದ ರಸ್ತೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದೇವೆ. ನಮ್ಮ ಕಷ್ಟವನ್ನು ಕಂಡು ತಡ ರಾತ್ರಿ ಬಂದು ಗುದ್ದಲಿಪೂಜೆ ಮಾಡಿದ್ದಾರೆ. ಯಾವ ಶಾಸಕರೂ ನಮ್ಮ ವ್ಯಾಪ್ತಿಗೆ ಇದುವರೆಗೂ ಬಂದಿಲ್ಲ. ಅಭಿವೃದ್ದಿ ಯಾರು ಮಾಡುತ್ತಾರೋ ಅವರಿಗೆ ವೋಟು ಹಾಕುವ ಪರಿಪಾಠವನ್ನು ಜನ ಬೆಳೆಸಿಕೊಳ್ಳಬೇಕು. ಸುಮ್ಮನೆ ಒಬ್ಬ ಶಾಸಕ ಇದ್ದು ಏನು ಪ್ರಯೋಜನವಿಲ್ಲ, ನಾವು ಓಡಾಡುವ ರಸ್ತೆಗಳು ಇನ್ನೂ ಅಭಿವೃದ್ದಿಯಾಗದೇ ಇರಲು ನಮ್ಮ ಆಯ್ಕೆಯಲ್ಲಿನ ದೋಷವೇ ಕಾರಣವಾಗಿದೆ. ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಅವರನ್ನು ಬೆಂಬಲಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಆ ಪಕ್ಷ ಈ ಪಕ್ಷ ಎಂದು ನೋಡದೆ ಯಾರು ನಮ್ಮ ಊರು ಅಭಿವೃದ್ದಿ ಮಾಡುತ್ತಾರೋ ಅವರಿಗೆ ನಮ್ಮ ಬೆಂಬಲ ಇರಬೇಕು ಎಂದು ಹೇಳಿದರು.
ಇಲ್ಲಿನವರೇ ಮುಖ್ಯಮಂತ್ರಿಯಾದರೂ ಮೆಡಿಕಲ್ ಕಾಲೇಜು ಆಗಿಲ್ಲ: ರಮೇಶ್ ರೈ ಡಿಂಬ್ರಿ
ನಮ್ಮ ಪುತ್ತೂರಿನವರೇ ಮುಖ್ಯಮಂತ್ರಿಯಾದರೂ ಮೆಡಿಕಲ್ ಕಾಲೇಜು ತರಲು ಸಾಧ್ಯವಾಗಿಲ್ಲ. ಓರ್ವ ಶಾಸಕರಾದವರು ಮೂರು ವರ್ಷದ ಅವಧಿಯಲ್ಲಿ ಮೆಡಿಕಲ್ ಕಾಲೇಜು ತರುವುದಾದರೆ ಹಿಂದಿನವರಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ರಮೇಶ್ ರೈ ಡಿಂಬ್ರಿ ಪ್ರಶ್ನಿಸಿದರು. ಇಚ್ಚಾಶಕ್ತಿ ಇದ್ದಲ್ಲಿ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಶಾಸಕರೇ ಉಧಾಹರಣೆಯಾಗಿದ್ದಾರೆ.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗವನ್ನು ಒಳಗೆ ಹಾಕಿದವರನ್ನೂ ಬಿಡದೆ ದೇವರ ಜಾಗ ಎಲ್ಲೆಲ್ಲಿ ಇದೆಯೋ ಅದೆಲ್ಲವನ್ನೂ ದೇವರ ಪಾದಕ್ಕೆ ಒಪ್ಪಿಸುವ ಕೆಲಸವನ್ನು ಶಾಸಕರು ಮಾಡಿದ್ದಾರೆ. ಮುಂದಿನ ಮೂರು ಅವಧಿಗೆ ಅಶೋಕ್ ರೈ ಶಾಸಕರಾದರೆ ಪುತ್ತೂರಿನ ಗಲಲ್ಲಿ ಗಲ್ಲಿಯೂ ಅಭಿವೃದ್ದಿಯಾಗುತ್ತದೆ ಎಂಬುದರಲ್ಲಿ ಅನುಮಾನ ಬೇಡ. ಕುರಿಯ ಗ್ರಾಮಕ್ಕೆ 4.10ಕೋಟಿ ಅನುದಾನ ನೀಡಿದ ಏಕೈಕ ಶಾಸಕರಾಗಿದ್ದಾರೆ. ಮುಂದೆ ಅವರಿಗೆ ಶಕ್ತಿ ನೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಹೇಳಿದರು.
ನನಗೆ ಆಶ್ಚರ್ಯವಾಗುತ್ತಿದೆ: ಶಿವರಾಮ ಆಳ್ವ
ಓರ್ವ ಶಾಸಕರಾದವರು ಇಷ್ಟೆಲ್ಲಾ ಅಭಿವೃದ್ದಿ ಕೆಲಸ ಮಾಡುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಕುರಿಯ ಗ್ರಾಮಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಅನುದಾನವನ್ನು ಯಾವ ಶಾಸಕರೂ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ . ಈ ಭಾಗದ ಜನರ 94 ಸಿ ಹಕ್ಕು ಪತ್ರವನ್ನು ಬಾಕಿ ಇರಿಸಿದ್ದರು ಅವೆಲ್ಲವನ್ನೂ ಒಂದೊದಾಗಿ ಹಂಚುವ ಕೆಲಸವನ್ನು ಶಾಸಕರು ಮಾಡಿದ್ದಾರೆ. ಬಡವರ ಪರ ಕಾಳಜಿ ಇದ್ದಲ್ಲಿ ಮಾತ್ರ ಬಡವರು ನಡೆದಾಡುವ ರಸ್ತೆಯನ್ನು ಕಾಂಕ್ರೀಟ್ ಮಾಡುವ ಮನಸ್ಸು ಬರುತ್ತದೆ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಇರಬೇಕು ಆ ಬಳಿಕ ರಾಜಕೀಯ ಮಾಡಬಾರದು ಎಂದು ಶಾಕರು ಹಿಂದೆ ಹೇಳಿದ್ದರು ಆದೇ ರೀತಿ ನಡೆದುಕೊಂಡಿದ್ದಾರೆ. ಬಿಜೆಪಿಯವರೇ ಹೆಚ್ಚು ಇರುವ ರಸ್ತೆಗೂ ಅನುದಾನ ಇಡುವ ಮೂಲಕ ತಾನು ಕೇವಲ ಕಾಂಗ್ರೆಸ್ಸಿನವರಿಗೆ ಮಾತ್ರ ಶಾಕ ಅಲ್ಲ ಕ್ಷೇತ್ರದ ಎಲ್ಲಾ ಜನರ ಶಾಸಕ ಎಂಬುದನ್ನು ತೋರಿಸಿದ್ದಾರೆ, ಇದು ರಾಜಕೀಯ ಪ್ರಭುದ್ದತೆ ಇದ್ದವರಿಗೆ ಮಾತ್ರ ಸಾಧ್ಯ ಎಂದು ಹೇಳಿದರು.
ಸಮರೋಪಾದಿಯಲ್ಲಿ ಅಭಿವೃದ್ದಿ ಕೆಲಸ: ಕೆ.ಪಿ ಆಳ್ವ
ಬ್ಲಾಕ್ ಮಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ.ಮಾಣಿಲದಿಂದ ಹಿಡಿದು ಬಜತ್ತೂರು, ಗಡಿ ಗ್ರಾಮವಾದ ಪಾಣಾಜೆ, ನೆಟ್ಟಣಿಗೆ ಮುಡ್ನೂರು ಹೀಗೇ ಕ್ಷೇತ್ರದ ಅಷ್ಟ ದಿಕ್ಕುಗಳಲ್ಲಿಯೂ ಒಂದಲ್ಲ ಒಂದು ಕಾಮಗಾರಿಗಳು ನಡೆಯುತ್ತಲೇ ಇದೆ. ಶಾಸಕರ ಅಭಿವೃದ್ದಿ ಓಟ ಒಂದು ಕಡೆಯಾದರೆ, ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರನ್ನು ಬದುಕುವಂತೆ ಮಾಡಿದೆ. ಕೇಂದ್ರದ ಮೋದಿ ಸರಕಾರದ ಬೆಲೆ ಏರಿಕೆ ನೀತಿಯಿಂದ ಜನ ಕಂಗೆಟ್ಟಿದ್ದರೂ ಪಂಚ ಗ್ಯಾರಂಟಿ ಬಡವರನ್ನು ಕೈ ಹಿಡಿದು ಮೇಲಕ್ಕೆತ್ತಿದೆ. ಕಾಂಗ್ರೆಸ್ ಎಂದೂ ಬಡವರ ಪರ ಪಕ್ಷವಾಗಿದೆ. ತುಳುವನ್ನು ರಾಜ್ಯ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಸರಕಾರ ಘೋಷಣೆ ಮಾಡಿದೆ. ದ ಕ ಜಿಲ್ಲೆಯವರೇ ಮುಖ್ಯಮಂತ್ರಿ, ಮಂತ್ರಿಗಳಾದರೂ ತುಳುವರ ಬೇಡಿಕೆ ಈಡೇರಿಸಲು ಸಾಧ್ಯವಾಗಲಿಲ್ಲ. ಅಶೋಕ್ ರೈ ಮೂಲಕ ಇಂದು ತುಳು ಭಾಷೆಗೂ ರಾಜ್ಯದಲ್ಲಿ ಮಾನ್ಯತೆ ದೊರೆಯುವಂತಾಯಿತು ಎಂದು ಹೇಳಿದರು.
70 ಶೇ. ಭರವಸೆ ಈಡೇರಿಸಿದ್ದೇವೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಪರ ಚುನಾವಣಾ ಪ್ರಚಾರಕ್ಕೆ ತೆರಳಿದ ವೇಳೆ ಗ್ರಾಮಸ್ಥರಲ್ಲಿ ಅನೇಕ ಭರವಸೆಯನ್ನು ಕೊಟ್ಟಿದ್ದೆವು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಅಶೋಕ್ ರೈ ಆಯ್ಕೆಯಾಗಿದ್ದಾರೆ. ಕೊಟ್ಟ ªಭರವಸೆಯಲ್ಲಿ 70 ಸೇ. ಈಡೇರಿಸಲಾಗಿದೆ. ಉಳಿದ ಭರವಸೆಯನ್ನು ಮುಂದಿನ ಎರಡು ವರ್ಷದಲ್ಲಿ ಈಡೇರಿಸುತ್ತೇವೆ. ಯಾವ ಶಾಸಕರೂ ಇಷ್ಟೊಂದು ಅನುದಾನ ನಮ್ಮ ಗ್ರಾಮಕ್ಕೆ ಇದುವರೆಗೂ ಕೊಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಅಶೋಕ್ ರೈ ಅವರಿಗೆ ಆಶೀರ್ವಾದ ಮಾಡಬೇಕು.
- ಸನತ್ ರೈ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷರು
- ಕಾರ್ಯಕ್ರಮದಲ್ಲಿ ಕುರಿಯ ವಲಯಾಧ್ಯಕ್ಷ ಸನತ್ ರೈ,ಬೂತ್ ಅಧ್ಯಕ್ಷರಾದ ಗೋಪಾಲಕೃಷ್ಣಕರೆಜ್ಜ, ದಿನೇಶ್ ಬೊಳಂತಿಮಾರ್, ಮೋನಪ್ಪ ಬಳ್ಳಮಜಲು, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಡಾ, ಸುರೇಶ್ ಪುತ್ತೂರಾಯ ಯಾಕೂಬ್ ಕುರಿಯ, ಗ್ಯಾರಂಟಿ ಸಮಿತಿ ಸದಸ್ಯ ವಿಶ್ವಜಿತ್ ಅಮ್ಮುಂಜ, ಗ್ರಾಪಂ ಮಾಜಿ ಸದಸ್ಯ ನೇಮಾಕ್ಷ ಸುವರ್ಣ, ನಾಸಿರ್ ಇಡಬೆಟ್ಟು, ಇಬ್ರಾಹಿಂ ಇಡಬೆಟ್ಟು,ಸುಜಿತ್ ಬಂಗೇರ ಸಂಯಾರ್, ಗ್ರಾಪಂ ಮಾಜಿ ಸದಸ್ಯ ಕಲಾವತಿ, ದಿನೇಶ್ ಕಲ್ಲಕಟ್ಟ, ಶ್ರೀಧರ್ ಪೂಜಾರಿ ಗುಂಡಿತ್ತಾರೆ, ಲಕ್ಷಣ ಬೈಲಾಡಿ,ಶ್ರೀನಿವಾಸ ಗೌಡ,ಪ್ರೀತಂ ಮಲಾರ್, ಶಶಿಕಲಾ ಎಸ್ ರೈಕುರಿಯ, ಶಶಿಧರ್ ಕಿನ್ನಿಮಜಲು, ಜಯರಾಮ ರೈ ಅಡ್ಯೆತ್ತಿಮಾರ್, ಹೇಮಾ ಜಯರಾಂ, ಬೈಂಕಿ ರೈ ಅಡ್ಯೆತ್ತಿಮಾರ್, ಆನಂದ ರೈ ಡಿಂಬ್ರ, ಹಸೈನಾರ್ ಡಿಂಬ್ರಿ, ವಿನೋದ್ ಕುಮಾರ್ ಶಿಬರಾಡಿ, ಫಾರೂಕ್ ಪರ್ಪುಂಜ,ದಿವಾಕರ ರೈ ಕಲ್ಲಾಪು, ಬಾಲಕೃಷ್ಣ ರೈ ಕಲ್ಲಾಪು, ಸಂತೋಷ್ ಕಲ್ಲಾಪು, ರಾಮಣ್ಣ ರೈ ಸಂಪ್ಯದ ಮೂಲೆ, ಹಾರಿಸ್ ಸಂಟ್ಯಾರ್, ಗಿರೀಶ್ ಸಂಟ್ಯಾರ್, ಜಯಪ್ರಕಾಶ್ ರೈ ಮಲಾರ್, ರಾಮಚಂದ್ರ ನಾಯಕ್,ಸಲಾಂ ಸಂಪ್ಯ, ರಾಮಯ್ಯ ಮಲಾರ್, ವಿನೋದ್ ರೈ ಏಳ್ನಾಡುಗುತ್ತು ಮತ್ತಿತರರು ಇದ್ದರು.
- ಶಿಲಾನ್ಯಾಸಗೊಂಡ ಕಾಮಗಾರಿಗಳು
- 5 ಲಕ್ಷ ಅನುದಾನದಲ್ಲಿ ಸಂಪ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆ ಅಭಿವೃಧ್ದಿ
- 4 ಲಕ್ಷ ಅನುದಾನದಲ್ಲಿ ಸಂಪ್ಯ ಠಾಣಾ ಹಿಂಬದಿ ರಸ್ತೆ ಅಭಿವೃದ್ದಿ
- 5 ಲಕ್ಷ ಅನುದಾನದಲ್ಲಿ ಮಲಾರಿನಿಂದ ಸೈನಿಕ ಕೂಸಪ್ಪಪೂಜಾರಿ ರ ಮನೆಗೆ ತೆರಳುವ ರಸ್ತೆ ಅಭಿವೃದ್ದಿ
- 5 ಲಕ್ಷ ಅನುದಾನದಲ್ಲಿ ಮಲಾರು-ಕಟ್ಟದ ಬೈಲು ರಸ್ತೆ ಅಭಿವೃದ್ದಿ
- 10 ಲಕ್ಷ ಅನುದಾನದಲ್ಲಿಕಲ್ಲಕಟ್ಟ ಕೆಳಗಿನ ಮಲಾರು ರಸ್ತೆ ಅಭಿವೃದ್ದಿ
- 10 ಲಕ್ಷ ಅನುದಾನದಲ್ಲಿಗಡಾಜೆ ಬೊಟ್ಟತ್ತಾರು ರಸ್ತೆ ಅಭಿವೃದ್ದಿ
- 10ಲಕ್ಷ ಅನುದಾನದಲ್ಲಿ ಬೂಡಿಯಾರು ಡಿಂಬ್ರಿ ಬೈಲು ರಸ್ತೆ ಅಭಿವೃದ್ದಿ
- 65ಲಕ್ಷ ಅನುದಾನದಲ್ಲಿ ಕುರಿಯದಲ್ಲಿ ಆರೋಗ್ಯ ಕ್ಷಮಾ ಕೇಂದ್ರ ನಿರ್ಮಾಣ
- 5 ಲಕ್ಷ ಅನುದಾನದಲ್ಲಿ ಅಡ್ಯೆತ್ತಿಮಾರ್-ಬದಿನಾರ್ ರಸ್ತೆ ಅಭಿವೃದ್ದಿ
- ೧೦ ಲಕ್ಷ ಅನುದಾನದಲ್ಲಿಬಳ್ಳಮಜಲು ಗುತ್ತು ಸಂಪರ್ಕ ರಸ್ತೆ ಅಭಿವೃದ್ದಿ
- 5 ಲಕ್ಷ ಅನುದಾನದಲ್ಲಿ ಕೈಂತಿಲ ರಸ್ತೆ ಅಭಿವೃದ್ದಿ
- 5 ಲಕ್ಷ ಅನುದಾನದಲ್ಲಿ ಕುರಿಯ ಉಳ್ಳಾಲ ದೇವಸ್ಥಾನ ರಸ್ತೆ ಅಭಿವೃದ್ದಿ
- 5 ಲಕ್ಷ ಅನುದಾನದಲ್ಲಿ ಕಲ್ಲಾಪು ರಸ್ತೆ ಅಭಿವೃದ್ದಿ
- 5 ಲಕ್ಷ ಅನುದಾನದಲ್ಲಿ ಅಮ್ಮುಂಜೆ ಮಸೀದಿ ರಸ್ತೆ ಅಭಿವೃದ್ದಿ
ರಾಜಕೀಯ
Puttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿದರು.
ಪುತ್ತೂರು: ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀಡಲಾಗುತ್ತಿರುವ ಭರವಸೆಗಳು ಕೇವಲ ಬ್ಯಾನರ್‌ಗಳಿಗೆ ಸೀಮಿತವಾಗಿದ್ದು, ಕ್ಷೇತ್ರಕ್ಕೆ ಯಾವುದೇ ಗಮನಾರ್ಹ ಅನುದಾನ ಬರುತ್ತಿಲ್ಲ. ಶಾಸಕರು ಕಳೆದ ಮೂರೂವರೆ ವರ್ಷಗಳಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಬೆಳೆ ವಿಮೆಯ ಸೂಕ್ತ ಮೊತ್ತ ನೀಡದೆ ವಂಚಿಸಲಾಗುತ್ತಿದೆ. ಕಾರ್ಮಿಕರ ನಿಧಿಯ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. ಕ್ಷೇತ್ರದಾದ್ಯಂತ ರಸ್ತೆ ದುರಸ್ತಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದಿಷ್ಟು ಅನುದಾನ ಬಂದಿದ್ದರೆ ಅದು ಕೇಂದ್ರ ಸರ್ಕಾರದಿಂದ ಮಾತ್ರವೇ ಹೊರತು ರಾಜ್ಯ ಸರ್ಕಾರದಿಂದಲ್ಲ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನೇ ವಿತರಿಸಲಾಗುತ್ತಿದೆ. ಆದರೆ ಬೆಳೆ ವಿಮೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವನ್ನು ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನದ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅವಧಿಯಲ್ಲಿ ನೆಟ್ಟಣಿಗೆ ಮುಡೂರಿಗೆ ₹29.50 ಕೋಟಿ ಅನುದಾನ: ಸಾಜ ರಾಧಾಕೃಷ್ಣ ಆಳ್ವ
ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಅಂದಿನ ಶಾಸಕ ಸಂಜೀವ ಮಠಂದೂರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೂಲಕ ಒಟ್ಟು ₹29.50 ಕೋಟಿ ಅನುದಾನ ಒದಗಿಸಲಾಗಿತ್ತು ಎಂದು ತಿಳಿಸಿದರು.
ಈಶ್ವರಮಂಗಲ-ಸುಳ್ಯಪದವು ರಸ್ತೆ ಹಾಗೂ ಹನುಮಗಿರಿಯಿಂದ ನಿಡಳ್ಳಿ ಮುಂಡೂರು ರಸ್ತೆಯನ್ನು ಪಿಎಂಜಿಎಸ್‌ವೈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗಿನ ಶಾಸಕರು ಮೂರೂವರೆ ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಬಂದಿರುವುದು ಶಾಸನಬದ್ಧ ಅನುದಾನ ಮಾತ್ರ ಎಂದು ಟೀಕಿಸಿದರು.
ಅನುದಾನ ಮಂಜೂರಾಗಿದೆ ಎಂದು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಆದರೆ ಕಾಮಗಾರಿಗಳು ಆರಂಭವಾಗಲು ಒಂದು ವರ್ಷವೇ ಬೇಕಾಗುತ್ತದೆ. ಶಿಲಾನ್ಯಾಸ ನಡೆದ ಹಲವು ಕಾಮಗಾರಿಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಆದರೂ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಬಿಜೆಪಿ ಆಡಳಿತದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಬಂದಿರುವ ಅನುದಾನಗಳ ಸಂಪೂರ್ಣ ಪಟ್ಟಿ ಶಕ್ತಿ ಕೇಂದ್ರದ ಪ್ರಮುಖರ ಬಳಿ ಇದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಹಾಗೂ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನೆಟ್ಟಣಿಗೆ ಮುಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ನರಸೀನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ ವಂದಿಸಿದರು.
ರಾಜಕೀಯ
Puttur-Big Breaking: ನಾಳೆ ಪುತ್ತೂರಿಗೆ ಬಿಜೆಪಿ ಘಟಾನುಘಟಿ ನಾಯಕರ ದಂಡು; ವಿಜಯೇಂದ್ರ, ಆರ್. ಅಶೋಕ್ ಸಹಿತ ಹಲವು ಹಿರಿಯ ನಾಯಕರ ಭೇಟಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ಬಿಜೆಪಿಯ ಹಲವು ಪ್ರಮುಖ ನಾಯಕರು ನಾಳೆ (ನ.19) ಪುತ್ತೂರಿಗೆ ಆಗಮಿಸಲಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈ ನಾಯಕರು ಪುತ್ತೂರಿಗೆ ಭೇಟಿ ನೀಡಲಿದ್ದು, ರಾಜಕೀಯ ವಲಯದಲ್ಲಿ ಈ ಭೇಟಿಯು ಕುತೂಹಲ ಮೂಡಿಸಿದೆ.
ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ಬಿಜೆಪಿಯ ಹಲವು ಪ್ರಮುಖ ನಾಯಕರು ನಾಳೆ (ನ.19) ಪುತ್ತೂರಿಗೆ ಆಗಮಿಸಲಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈ ನಾಯಕರು ಪುತ್ತೂರಿಗೆ ಭೇಟಿ ನೀಡಲಿದ್ದು, ರಾಜಕೀಯ ವಲಯದಲ್ಲಿ ಈ ಭೇಟಿಯು ಕುತೂಹಲ ಮೂಡಿಸಿದೆ.
ಪುತ್ತೂರಿನ ಬಂಟರ ಭವನದಲ್ಲಿ ಬಿಜೆಪಿ ರಾಜ್ಯ ಮಾಧ್ಯಮ ಸಹ-ಸಂಚಾಲಕ ಪ್ರಶಾಂತ್ ಕೆಡೆಂಜಿ ಅವರ ವಿವಾಹ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಇದಲ್ಲದೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ಬಿಜೆಪಿ ಶಾಸಕರು ಕೂಡ ಈ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮೂಲತಃ ಕಡಬ ತಾಲೂಕಿನ ಸವಣೂರು ಸಮೀಪದ ಕೆಡೆಂಜಿ ಬಳಿಯ ಅರಲ್ತೆಡಿ ನಿವಾಸಿಯಾಗಿರುವ ಪ್ರಶಾಂತ್ ಅವರು ಪ್ರಸ್ತುತ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಸಹ-ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾಯಕರ ಈ ಭೇಟಿ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆಯುತ್ತಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಪುತ್ತೂರಿನ ವಿವಾಹ ಸಮಾರಂಭಕ್ಕೆ ಆಗಮಿಸಿ, ಕಾರ್ಯಕ್ರಮ ಮುಗಿದ ಬಳಿಕ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪುತ್ತೂರು ಬಿಜೆಪಿಯ ಪುನಶ್ಚೇತನಕ್ಕೆ ಸಿಗಲಿದೆಯೇ ಹೊಸ ದಿಕ್ಸೂಚಿ?
ಇನ್ನೊಂದೆಡೆ, ಕಳೆದ ಮೂರು ವರ್ಷಗಳಿಂದ ಆಂತರಿಕ ಭಿನ್ನಾಭಿಪ್ರಾಯ ಹಾಗೂ ರಾಜಕೀಯ ಸಂಘರ್ಷಗಳಿಂದಾಗಿ ಸಂಘಟನಾತ್ಮಕವಾಗಿ ಸವಾಲುಗಳನ್ನು ಎದುರಿಸುತ್ತಿರುವ ಪುತ್ತೂರು ಬಿಜೆಪಿಗೆ ಈ ನಾಯಕರ ಭೇಟಿ ಹೊಸ ಚೈತನ್ಯ ನೀಡುವ ಸಾಧ್ಯತೆ ಇದೆಯೆಂಬ ಕಾರಣಕ್ಕೆ ನಾಳಿನ ಭೇಟಿಗೆ ವಿಶೇಷ ಮಹತ್ವ ಲಭಿಸಿದೆ. ಸ್ಥಳೀಯ ಮಟ್ಟದಲ್ಲಿ ಮುಖಂಡರ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ನಾಯಕರು ಮಧ್ಯಪ್ರವೇಶಿಸಬಹುದೇ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ನಾಯಕರು ಖಾಸಗಿ ಕಾರ್ಯಕ್ರಮಕ್ಕೆ ಮಾತ್ರ ಆಗಮಿಸುತ್ತಿದ್ದರೂ, ಪುತ್ತೂರು ಬಿಜೆಪಿಯ ಇಂದಿನ ಸ್ಥಿತಿಗತಿ ಮತ್ತು ಸಂಘಟನೆಯ ಭವಿಷ್ಯದ ಕುರಿತು ಯಾವುದೇ ಅನೌಪಚಾರಿಕ ಚರ್ಚೆ ನಡೆಯಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ, ರಾಜ್ಯ ಬಿಜೆಪಿಯ ಘಟಾನುಘಟಿ ನಾಯಕರ ಈ ಭೇಟಿಯು ಕೇವಲ ವಿವಾಹ ಸಮಾರಂಭಕ್ಕೆ ಸೀಮಿತವಾಗುತ್ತದೆಯೇ ಅಥವಾ ಅಥವಾ ಪುತ್ತೂರಿನ ಸ್ಥಳೀಯ ರಾಜಕೀಯಕ್ಕೆ ಯಾವುದಾದರೂ ಹೊಸ ಸಂದೇಶ ನೀಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಅಂತರ ರಾಜ್ಯ
Election Commission-ಯುಪಿಯಲ್ಲಿ 1.27 ಕೋಟಿ ಹಿಂದೂ ಮತದಾರರು ನಾಪತ್ತೆ? ಆದಿತ್ಯನಾಥ್ ಆರೋಪಕ್ಕೆ ಚುನಾವಣಾ ಆಯೋಗದ ಸ್ಪಷ್ಟನೆ
ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನವದೀಪ್ ರಿನ್ವಾ, ಚುನಾವಣಾ ಆಯೋಗವು ಮತದಾರರ ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾವುದೇ ದಾಖಲೆಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನವದೀಪ್ ರಿನ್ವಾ, ಚುನಾವಣಾ ಆಯೋಗವು ಮತದಾರರ ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾವುದೇ ದಾಖಲೆಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಬಳಿಕ ಪಟ್ಟಿಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ರಾಜ್ಯದ ಪಂಚಾಯತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿದ್ದ ಸುಮಾರು 1.27 ಕೋಟಿ ಹಿಂದೂ ಮತದಾರರ ಹೆಸರುಗಳು ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ಕಾಣೆಯಾಗಿವೆ ಎಂದು ಅವರು ಆರೋಪಿಸಿದ್ದರು. ಈ ವ್ಯತ್ಯಾಸಗಳ ಕುರಿತು ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದೂ ತಿಳಿಸಿದ್ದರು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ, ಚುನಾವಣಾ ಇಲಾಖೆಯು ಮತದಾರರ ಧರ್ಮ ಅಥವಾ ಜಾತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಹೀಗಾಗಿ ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಅಧಿಕೃತ ವಿಶ್ಲೇಷಣೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮತದಾರರ ದತ್ತಾಂಶದಲ್ಲಿ ಹೆಸರು, ತಂದೆ ಅಥವಾ ಸಂಗಾತಿಯ ಹೆಸರು, ವಯಸ್ಸು, ಮನೆ ಸಂಖ್ಯೆ ಹಾಗೂ ಲಿಂಗದಂತಹ ವಿವರಗಳು ಮಾತ್ರ ದಾಖಲಾಗಿರುತ್ತವೆ. ಧರ್ಮ ಮತ್ತು ಜಾತಿಗೆ ಸಂಬಂಧಿಸಿದ ಮಾಹಿತಿಗಳನ್ನು ಚುನಾವಣಾ ಆಯೋಗದ ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುವುದಿಲ್ಲ ಎಂದು ಅವರು ವಿವರಿಸಿದರು.
ಮತದಾರರ ಪಟ್ಟಿಗಳು ಸಾರ್ವಜನಿಕ ದಾಖಲೆಗಳಾಗಿರುವುದರಿಂದ ಮಾಧ್ಯಮ ಸಂಸ್ಥೆಗಳು ಹಾಗೂ ಸ್ವತಂತ್ರ ವಿಶ್ಲೇಷಕರು ಮತದಾರರ ಹೆಸರುಗಳು ಮತ್ತು ಲಭ್ಯವಿರುವ ಇತರ ಮಾಹಿತಿಗಳ ಆಧಾರದಲ್ಲಿ ತಮ್ಮದೇ ಆದ ವಿಶ್ಲೇಷಣೆ ನಡೆಸಬಹುದು. ಆದರೆ ಅಂತಹ ವಿಶ್ಲೇಷಣೆಗಳನ್ನು ಚುನಾವಣಾ ಇಲಾಖೆಯ ಅಧಿಕೃತ ದತ್ತಾಂಶ ಅಥವಾ ಸಂಶೋಧನೆ ಎಂದು ಪರಿಗಣಿಸಬಾರದು ಎಂದು ರಿನ್ವಾ ಸ್ಪಷ್ಟಪಡಿಸಿದರು.
ಯುಪಿಯಲ್ಲಿ 13.58 ಕೋಟಿ ಮತದಾರರು
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಮಂಗಳವಾರ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಒಟ್ಟು 13.58 ಕೋಟಿ ಮತದಾರರಿದ್ದು, ಅವರಲ್ಲಿ 6.20 ಕೋಟಿ ಮಹಿಳಾ ಮತದಾರರು ಸೇರಿದ್ದಾರೆ ಎಂದು ನವದೀಪ್ ರಿನ್ವಾ ಮಾಹಿತಿ ನೀಡಿದರು.
ಏಪ್ರಿಲ್‌ನಲ್ಲಿ ಘೋಷಿಸಲಾಗಿದ್ದ ಎಸ್‌ಐಆರ್ ಪ್ರಕ್ರಿಯೆಯ ನಂತರ ನಡೆದ ವಿಶೇಷ ಸಾರಾಂಶ ಪರಿಷ್ಕರಣೆ (ಎಸ್‌ಎಸ್‌ಆರ್) ಅವಧಿಯಲ್ಲಿ 18 ಲಕ್ಷಕ್ಕೂ ಅಧಿಕ ಮತದಾರರ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಪ್ರದೇಶದ ಅಂತಿಮ ಮತದಾರರ ಪಟ್ಟಿಯನ್ನು 2027ರ ಜನವರಿ 4ರಂದು ಪ್ರಕಟಿಸಲು ನಿರ್ಧರಿಸಲಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳು ಮತ್ತು ಪರಿಷ್ಕರಣೆ ಪ್ರಕ್ರಿಯೆ ಇದೀಗ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
-
ಬಿಗ್ ನ್ಯೂಸ್13 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
ಮಂಗಳೂರು13 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
ಅಂತರ ರಾಜ್ಯ11 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
Uncategorized12 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್5 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಬಿಗ್ ನ್ಯೂಸ್13 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ರಾಜಕೀಯ11 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಬಿಗ್ ನ್ಯೂಸ್12 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ















