ಪುತ್ತೂರು
ಪುತ್ತೂರಿನ ಹಲವೆಡೆ ಘೋರ ದುರಂತ : ಸ್ಥಳಕ್ಕೆ ಭೇಟಿ ನೀಡಿದ ಅರುಣ್ ಪುತ್ತಿಲ – ಇಷ್ಟು ದೊಡ್ಡ ದುರ್ಘಟನೆ ನಡೆದರೂ ಡಿಸಿ,ಎಸಿ,ತಹಶೀಲ್ದಾರ್ ಆಗಲಿ ಸ್ಥಳಕ್ಕೆ ಧಾವಿಸಿಲ್ಲ – ಕಾಂಗ್ರೆಸ್ಸಿನ ದುರಾಡಳಿತದಿಂದ ಆಡಳಿತವರ್ಗ ಬೆಚ್ಚಗೆ ಕೂತಿದೆ : ಪುತ್ತಿಲ ಆರೋಪ
ಪುತ್ತೂರು: ಪುತ್ತೂರು ತಾಲೂಕಿನ ಹಲವು ಕಡೆ ಭೀಕರ ಭೂಕುಸಿತವಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.
ಭೀಕರ ದುರ್ಘಟನೆ ನಡೆದ ಪುತ್ತೂರು ತಾಲೂಕಿನ
ಬೆಳ್ಳಿಪ್ಪಾಡಿ, ಹರಿನಗರ, ಶಾಂತಿನಗರ, ಪಾಣಂಬು, ಉಪ್ಪಿನಂಗಡಿ, ಹಿರೇಬಂಡಾಡಿ,ಮುಂಡೂರು, ಪುರುಷರಕಟ್ಟೆ ಸಹಿತ ಹಲವು ಕಡೆ ಅರುಣ್ ಪುತ್ತಿಲ ಭೇಟಿ ನೀಡಿದರು.
ಬೆಳ್ಳಿಪ್ಪಾಡಿ ಗುತ್ತಿನಮನೆಯಲ್ಲಿ ಅಸಮರ್ಪಕ ರಸ್ತೆ ಕಾಮಗಾರಿಯಿಂದ ಧರೆ ಕುಸಿದುಬಿದ್ದು ಮೇಲ್ಭಾಗದಲ್ಲಿ ಎರಡು ಮನೆಗಳು ತೀರ ಅಪಾಯಕಾರಿ ಸ್ಥಿತಿಯಲ್ಲಿವೆ.
ಭೂಕುಸಿತ ದುರ್ಘಟನೆ ನಡೆದ ಬೆಳ್ಳಿಪ್ಪಾಡಿಯ ರೆಂಜಾಜೆ , ದೇವಸ್ಯ , ಕೋಡಿಯಡ್ಕ ಮೊದಲಾದ ಕಡೆ ಭೇಟಿ ನೀಡಿದರು.
ಶಾಂತಿಗೋಡು ಗ್ರಾಮದ ಪ್ರಗತಿಪರ ಕೃಷಿಕ ಪಾಣಂಬು ವಸಂತರವರ ತೋಟದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಸುಮಾರು 250ಕ್ಕಿಂತಲೂ ಹೆಚ್ಚಿನ ಪಸಲು ಕೊಡುವ ಅಡಿಕೆ ಸಸಿಗಳಿರುವ ಬೆಟ್ಟ ಧರೆಗುರುಳಿ ಅಪಾರ ನಷ್ಟವಾಗಿದೆ.
ಉಪ್ಪಿನಂಗಡಿ, ಮುಂಡೂರು, ಪುರುಷರಕಟ್ಟೆ, ಹಿರೇಬಂಡಾಡಿ , ಶಾಂತಿನಗರ, ಹರಿನಗರ ಮೊದಲಾದ ಕಡೆ ಭೂಕುಸಿತವಾಗಿ ಭಾರಿ ನಷ್ಟವುಂಟಾಗಿದೆ.
ಇಷ್ಟು ದೊಡ್ಡ ಪ್ರಮಾಣದ ನಷ್ಟ ಉಂಟಾದರೂ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ, ಎಸಿ, ತಹಶೀಲ್ದಾರ್ ಆಗಲಿ ದುರ್ಘಟನೆ ನಡೆದ ಸ್ಥಳಗಳಿಗೆ ತೆರಳಿ ವೀಕ್ಷಣೆ ನಡೆಸಿಲ್ಲ. ಸಂತ್ರಸ್ತರಿಗೆ ತಕ್ಷಣ ಸಿಗಬೇಕಾದ ಪರಿಹಾರ ಹಣವನ್ನು ನೀಡಿಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಆರೋಪಿಸಿದರು.
ಕಾಂಗ್ರೆಸ್ಸಿನ ದುರಾಆಡಳಿತದಿಂದ ಅಧಿಕಾರಿ ವರ್ಗ ಬೆಚ್ಚಗೆ ಕಚೇರಿಯಲ್ಲೇ ಕೂತಿದೆ ಎಂದು ಪುತ್ತಿಲ ಆರೋಪಿಸಿದರು.
ಶಿಕ್ಷಣ
Ambika-ಅಂಬಿಕಾ ವಿದ್ಯಾಲಯದಲ್ಲಿ ಆರ್ಟ್ ಆಫ್ ಲಿವಿಂಗ್ನ ಸಹಜ ಸಮಾಧಿ ಧ್ಯಾನ ಶಿಬಿರ
ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪುತ್ತೂರು ಘಟಕದ ವತಿಯಿಂದ “ಸಹಜ ಸಮಾಧಿ ಧ್ಯಾನ ಯೋಗ” ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪುತ್ತೂರು ಘಟಕದ ವತಿಯಿಂದ “ಸಹಜ ಸಮಾಧಿ ಧ್ಯಾನ ಯೋಗ” ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಅಷ್ಟಾಂಗ ಯೋಗದ ಪ್ರಕಾರ ಧ್ಯಾನದ ಅತ್ಯಂತ ಆಳವಾದ ಸ್ಥಿತಿಯಾದ ಸಮಾಧಿ ಸ್ಥಿತಿಯನ್ನು ಅನಾಯಾಸವಾಗಿ ಸರಳವಾಗಿ ನಿತ್ಯವೂ ಅನುಭವಿಸಲು ಸಹಕಾರಿಯಾದ ಈ ಯೋಗ ಶಿಬಿರವನ್ನು ಆರ್ಟ್ ಆಫ್ ಲಿವಿಂಗ್ನ ಅಂತರಾಷ್ಟ್ರೀಯ ಶಿಕ್ಷಕ ಯಾದವ ಜೀ ನಡೆಸಿಕೊಟ್ಟರು. ಶಿಬಿರದಲ್ಲಿ ೮೮ ಮಂದಿ ಭಾಗವಹಿಸಿ ಧ್ಯಾನ ಮಾಡುವ ಕ್ರಮವನ್ನು ಕಲಿತುಕೊಂಡರು.
ಸಹಾಯಕ ಶಿಕ್ಷಕರಾಗಿ ಮಂಗಳೂರಿನ ರಜನಿ ರೈ ಸಹಕರಿಸಿದರು. ಸಹಜ ಸಮಾಧಿ ಧ್ಯಾನವನ್ನು ಕಲಿಸುವುದಕ್ಕಾಗಿ ತರಬೇತಿಯನ್ನು ಪಡೆಯುತ್ತಿರುವ ಶರಾವತಿ ರವಿ ನಾರಾಯಣ, ಆರ್ಟ್ ಆಫ್ ಲಿವಿಂಗ್ ಪುತ್ತೂರಿನ ಮುಖ್ಯಸ್ಥರಾದ ಕುಮಾರ ಸುಬ್ರಹ್ಮಣ್ಯ ಭಟ್, ಸತ್ಯವತಿ ಕೆ ಎಸ್, ಸುಧಾ ಹೆಬ್ಬಾರ್, ಭಾರತಿ ಜಯರಾಮ್ ಹಾಗೂ ಸಂಸ್ಥೆಯ ಎಲ್ಲಾ ಸ್ವಯಂಸೇವಕರು ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದರು.
ಸಮಾರೋಪ ಸಮಾರಂಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಭಾಗವಹಿಸಿ, ಪ್ರೇರಣೆ ನೀಡಿದರು.
ಶಿಕ್ಷಣ
Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಲಹರಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೊಜನಾ ಘಟಕ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಲಾದ ಒಂದು ವಾರದ ಕನ್ನಡ ಕಾರ್ಯಕ್ರಮಗಳ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿಕ ಹಾಗೂ ಅಂಕಣಕಾರ ಮಹೇಶ್ ಪುಚ್ಚಪ್ಪಾಡಿ ಮಾತಾಡಿದರು.
ಪುತ್ತೂರು: ಇಂದಿನ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯ ಅನಿವಾರ್ಯತೆ ಹೆಚ್ಚಾಗುತ್ತಿದೆ. ಇಂಗ್ಲಿಷ್ ಕೌಶಲ ಎಷ್ಟಿದ್ದರೂ ಕಡಿಮೆಯೇ ಎನ್ನುವ ಸ್ಪರ್ಧಾತ್ಮಕ ಜಗತ್ತು ನಮ್ಮ ಮುಂದಿರುವ ಇಂತಹ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಯೊಂದರಲ್ಲಿ ಕನ್ನಡ ಸಂಘ ಇರುವುದು ಆಶಾದಾಯಕ. ಇದು ಕೇವಲ ಭಾಷಾ ಚಟುವಟಿಕೆಗಳಿಗೆ ಸೀಮಿತವಾಗದೆ ಹೊಸ ಸಾಧ್ಯತೆಗಳ ವೇದಿಕೆಯಾಗಲಿ ಎಂದು ಕೃಷಿಕ ಹಾಗೂ ಅಂಕಣಕಾರ ಮಹೇಶ್ ಪುಚ್ಚಪ್ಪಾಡಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಲಹರಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೊಜನಾ ಘಟಕ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಲಾದ ಒಂದು ವಾರದ ಕನ್ನಡ ಕಾರ್ಯಕ್ರಮಗಳ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು.

ಕನ್ನಡ ನಮ್ಮ ಬೇರು, ತಂತ್ರಜ್ಞಾನ ನಮ್ಮ ರೆಕ್ಕೆ, ಜಗತ್ತಿನ ಯಾವುದೇ ತಂತ್ರಜ್ಞಾನವನ್ನು ಕಲಿಯಬಹುದು. ಆದರೆ ನಮ್ಮ ಬೇರುಗಳನ್ನು ಮರೆಯಬಾರದು. ಜಾಗತಿಕವಾಗಿ ಬೆಳೆಯಲು ಇಂಗ್ಲಿಷ್ ಬೇಕಾದರೆ ನಮ್ಮ ನೆಲದೊಂದಿಗೆ ಬೆಸೆಯಲು ಕನ್ನಡ ಬೇಕು ಎಂದರು. ಕೈಯಲ್ಲಿ ಮೊಬೈಲಿದೆ, ತಲೆಯಲ್ಲಿ ತಂತ್ರಜ್ಞಾನವಿದೆ, ಮುಂದೆ ವಿಶಾಲ ಜಗತ್ತಿದೆ ಈ ಮೂರರ ನಡುವೆ ಕನ್ನಡವನ್ನು ಕಳೆದುಕೊಳ್ಳಬೇಡಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ ಪ್ರತಿಯೊಬ್ಬನಿಗೂ ಮಾತೃ ಭಾಷೆಯ ಮೇಲೆ ಅಪಾರ ಅಭಿಮಾನವಿರಬೇಕು. ನಾವು ಎಲ್ಲಿ ಹೋದರು, ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ನಮ್ಮತನವನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದರು. ದೇಶ-ಭಾಷೆ, ನಾಡು-ನುಡಿ, ನೆಲ-ಜಲದ ವಿಷಯದಲ್ಲಿ ಎಲ್ಲರೂ ಒಂದಾಗಿ ಅದರ ಸಾರ್ವಭೌಮತೆಯನ್ನು ಎತ್ತಿಹಿಡಿಯಬೇಕು ಎಂದು ಹೇಳಿದರು.
ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆಸಲಾದ ವಾಗ್-ವೈಖರಿ, ಸಮ್ವಾದ, ಜಸ್ಟ್ಮಾತು, ಮೇಧಮಂಥನ, ಪಿಕ್ಸೆಲ್ಪುಟ, ಭಾವಕುಂಚ ಮತ್ತು ಅನ್ವೇಷಣಾ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಲಹರಿ ಕನ್ನಡ ಸಂಘದ ಸಂಯೋಜಕ ಪ್ರೊ.ನವೀನ್.ಸಿ ಮತ್ತು ವಿದ್ಯಾರ್ಥಿ ಸಂಯೋಜಕ ಆದಿತ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಗೀತೆಗಳ ಗಾಯನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರೊ.ನವೀನ್.ಸಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಆದಿತ್ಯ ವಂದಿಸಿದರು. ಅನಿತಾ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಣ
Vidyamata Academy-ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲೂ ಅಮೋಘ ಸಾಧನೆ ಮುಂದುವರಿಸಿದ ವಿದ್ಯಾಮಾತಾ ಅಕಾಡೆಮಿ
ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ- KSET 2026ರ ಅಂತಿಮ ಫಲಿತಾಂಶ ಬಿಡುಗಡೆಯಾಗಿದ್ದು, ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಅಭ್ಯರ್ಥಿಗಳು ಉತ್ತೀರ್ಣರಾಗಿ ರಾಜ್ಯ ಮಟ್ಟದ ಅರ್ಹತೆಯನ್ನು ಪಡೆದಿರುತ್ತಾರೆ.
ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ- KSET 2026ರ ಅಂತಿಮ ಫಲಿತಾಂಶ ಬಿಡುಗಡೆಯಾಗಿದ್ದು, ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಅಭ್ಯರ್ಥಿಗಳು ಉತ್ತೀರ್ಣರಾಗಿ ರಾಜ್ಯ ಮಟ್ಟದ ಅರ್ಹತೆಯನ್ನು ಪಡೆದಿರುತ್ತಾರೆ.
ನಿರಂತರ ಪರಿಶ್ರಮದ ಜೊತೆಗೆ ವಿದ್ಯಾಮಾತಾ ಅಕಾಡೆಮಿಯ ಮೂಲಕ ದಿನನಿತ್ಯ ಪಡೆದ, ರಾತ್ರಿ ನಿರ್ವಹಿಸುವ ಆನ್ಲೈನ್(Online) ಲೈವ್ ತರಗತಿಗಳ ಮೂಲಕ ಈ ಗಣನೀಯ ಸಾಧನೆ ಮಾಡಿದ್ದು, ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಮತ್ತು ತರಬೇತುದಾರರ ತಂಡ ಉತ್ತೀರ್ಣರಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ರೀತಿ ನಡೆಯುತ್ತದೆ ವಿದ್ಯಾಮಾತಾದ ತರಬೇತಿ
2026ನೇ ಸಾಲಿನ ಅರ್ಹತಾ ಪರೀಕ್ಷೆಯ ಪೂರ್ವ ಸಿದ್ದತಾ ತರಬೇತಿಯು ರಾತ್ರಿ 8 ರಿಂದ 10ರವರೆಗೆ ನಡೆಯುವುದರ ಜೊತೆಗೆ ಪ್ರತಿನಿತ್ಯ ಅಣುಕು ಪರೀಕ್ಷೆ (Mock Test),ವಿಷಯಾಧಾರಿತ ತರಗತಿಗಳು ಅಲ್ಲದೇ ವಿಶೇಷ ಮಾಹಿತಿ ಕಾರ್ಯಾಗಾರ ನಡೆದಿರುತ್ತದೆ ಅದಲ್ಲದೆ ಅಧ್ಯಯನ ಸಾಮಾಗ್ರಿ (Study Materials )ಒದಗಿಸಿ ವಿದ್ಯಾರ್ಥಿಗಳಿಗಿರುವ ಗೊಂದಲಗಳನ್ನು ನಿವಾರಿಸಿ ಪರಿಣಾಮಕಾರಿಯಾಗಿ ತರಬೇತಿ ನಡೆಸಿದ ಕೀರ್ತಿ ವಿದ್ಯಾಮಾತಾ ಅಕಾಡೆಮಿಗೆ ಸಲ್ಲುತ್ತದೆ.
ಈ ಹಿಂದಿನ ಅರ್ಹತಾ ಪರೀಕ್ಷೆಗಳಲ್ಲಿ ವಿದ್ಯಾಮಾತಾ ಅಕಾಡೆಮಿ ಸಾಧನೆ
KSET, NET, KARTET, CTET ಗಳಂತಹ ಪ್ರವೇಶ ಪರೀಕ್ಷೆಗಳಲ್ಲಿ ಕಳೆದ 5ವರ್ಷಗಳಲ್ಲಿ 450ಕ್ಕೂ ಅಧಿಕ ಅಭ್ಯರ್ಥಿಗಳು ಉತ್ತೀರ್ಣರಾಗಿರುವುದು ಅಲ್ಲದೇ ವಿವಿಧ ಶಿಕ್ಷಕರ ನೇಮಕಾತಿ ಸೇರಿದಂತೆ IAS, KAS ಬ್ಯಾಂಕಿಂಗ್, ರೈಲ್ವೆ, ಆರ್ಮಿ ಸೇರಿದಂತೆ ವಿವಿಧ ಸರಕಾರಿ ನೇಮಕಾತಿಗಳಿಗೆ ನಿರಂತರವಾಗಿ ತರಬೇತಿಗಳನ್ನು ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯ 300ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು ಇವೆಲ್ಲವೂ ವಿದ್ಯಾಮಾತಾದ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
KSET 2026ರಲ್ಲಿ ಉತ್ತೀರ್ಣರಾದ ವಿದ್ಯಾಮಾತಾದ ವಿದ್ಯಾರ್ಥಿಗಳು:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವರಹಳ್ಳಿ ಗ್ರಾಮದ ಗುಂಡಡ್ಕ ನಿವಾಸಿ ಪ್ರಸ್ತುತ ನೆಹರು ಮೆಮೋರಿಯಲ್ ಪಿ ಯು ಕಾಲೇಜು ಅರಂತೋಡು ಸುಳ್ಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪದ್ಮ ಕುಮಾರ್ ಜಿ ಆರ್.
ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಾಪೆ ಮಜಲು ನಿವಾಸಿ ಪೊಲೀಸ್ ಇಲಾಖೆಯ ನಿವೃತ್ತ ಸಹಾಯಕ ಉಪನಿರೀಕ್ಷಕರಾದ ಶ್ರೀ ಶ್ರೀ ಧರ ಮಣಿಯಾಣಿ ಇವರ ಪುತ್ರಿ ದಿವ್ಯಶ್ರೀ ಎಸ್
ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬಂತಹಿತ್ಲು ನಿವಾಸಿ ಪ್ರಸ್ತುತ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ಬೋಂದೇಲ್ ಮಂಗಳೂರು ಇಲ್ಲಿ ಶೈಕ್ಷಣಿಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂಧ್ಯಾ ಲಕ್ಷ್ಮಿ ಎಸ್
ಬಂಟ್ವಾಳ ತಾಲೂಕಿನ ಪೆರಾಜೆ ಬುಡೋಳಿ ಗ್ರಾಮದ ಕುಡೋಲು ನಿವಾಸಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜ್ ವಿಟ್ಲ ಇಲ್ಲಿ ಶೈಕ್ಷಣಿಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಅನುಪಮಾ ಪಿ
ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮದ ಮಡತಡ್ಕ ನಿವಾಸಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಯನಗರ ಬೆಂಗಳೂರು ಇಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಶಾಲಾಕ್ಷಿ ಎಂ
ಪುತ್ತೂರು ತಾಲೂಕಿನ ಕೈಕಾರ ಗ್ರಾಮದ ಒಳಮೊಗರು ಅಜ್ಜಿ ಕಲ್ಲು ನಿವಾಸಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತಡ್ಕ ಅಜ್ಜಿ ಕಲ್ಲು ಇಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಚೇತನ ಕುಮಾರಿ ಎ.
ಚಿಕ್ಕಮಗಳೂರು ಜಿಲ್ಲೆಯ ಜಯನಗರದ ಕಾಫಿ ಡೇ ನಿವಾಸಿ ಪ್ರಸ್ತುತ ಶ್ರೀ ಆದಿ ಚುಂಚನಗಿರಿ ಪ್ರೌಢಶಾಲೆ, ಚಿಕ್ಕಮಗಳೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ರುಚಿ ಎಸ್ ಕೆ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ದರ್ಖಾಸು ಮಲೆ ಬೆಟ್ಟು ನಿವಾಸಿ ಪ್ರಸ್ತುತ ಸರಕಾರಿ ಪ್ರಾಥಮಿಕ ಶಾಲೆ ಮಲೆಬೆಟ್ಟು ಕಾರ್ಕಳ ಉಡುಪಿ ಇಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಾನಂದರವರು.
ವಿದ್ಯಾಮಾತಾ ಅಕಾಡೆಮಿಯು ನೀಡಿದ ನಿರಂತರ ತರಬೇತಿ ಮತ್ತು ಮಾರ್ಗದರ್ಶನದ ಫಲವಾಗಿ ಉತ್ತೀರ್ಣರಾಗಿರುತ್ತಾರೆ.
ಇದೀಗ 2026ರ ಅರ್ಹತಾ ಪರೀಕ್ಷೆಗಳಲ್ಲಿ ಅವಿಸ್ಮರಣೀಯ ಸಾಧನೆ ಮಾಡಿರುವುದು ಮುಂದಿನ ಉದ್ದೇಶಿತ ತರಬೇತಿಗಳಿಗೆ ಹೊಸ ಉತ್ಸಾಹ ಬಂದಿದ್ದು ಈ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯು ಮುಂಬರುವ ಅರ್ಹತಾ ಪರೀಕ್ಷೆಗಳ ಮತ್ತು ನೇಮಕಾತಿ ಪರೀಕ್ಷೆಗಳಿಗೆ ಪೂರ್ವ ಸಿದ್ದತಾ ತರಬೇತಿಗಳನ್ನು ಪಡೆದುಕೊಳ್ಳಲು ವಿದ್ಯಾಮಾತಾ ಅಕಾಡೆಮಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಿದ್ದು ಆಸಕ್ತರು 96204 68869 ಸಂಖ್ಯೆಯನ್ನು ಸಂಪರ್ಕಿಸಿ ತರಬೇತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
-
ಸ್ಥಳೀಯ8 hours agoWedding-ಕ್ಯಾಸೆಟ್ಗಳ ಅಬ್ಬರವಿಲ್ಲ, ಡ್ಯಾನ್ಸ್ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
-
ಬಿಗ್ ನ್ಯೂಸ್7 hours agoRailway-ರೈಲ್ವೆ ಗುಂಪು ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಬರ್ತ್ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!
-
ಬಿಗ್ ನ್ಯೂಸ್3 hours agoRakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ
-
ಶಿಕ್ಷಣ9 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ
-
ಕಾರ್ಯಕ್ರಮಗಳು2 hours agoVitla-ವಿಟ್ಲ: ನ.25ರಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ; 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ; ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್ನ ಪ್ರಮುಖ ಉದ್ದೇಶವಾಗಿದೆ- ಡಾ. ಸುಧಾರಾವ್
-
ಮಂಗಳೂರು52 minutes agoGirish Mattannavar-ಸೌಜನ್ಯ ಪ್ರಕರಣ: ಎಸ್ಐಟಿಗೆ ದಾಖಲೆಗಳ ʼಬ್ಯಾಗ್ʼ ಸಲ್ಲಿಸಿದ ಗಿರೀಶ್ ಮಟ್ಟಣ್ಣನವರ್; ಸೌಜನ್ಯ ಪ್ರಕರಣದಲ್ಲಿ ಆರ್. ಅಶೋಕ್ ಪಾತ್ರದ ಕುರಿತು ಸ್ಪೋಟಕ ಹೇಳಿಕೆ..!
-
ಶಿಕ್ಷಣ9 hours agoScience Fair-ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ-2026: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ
-
ಅಪರಾಧ58 minutes agoArrest-ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದು ₹63 ಸಾವಿರ ದೋಚಿದ ಆರೋಪ: ಉತ್ತರ ಪ್ರದೇಶದಲ್ಲಿ ಆರೋಪಿ ಬಂಧನ















