ವೈರಲ್ ನ್ಯೂಸ್
Battery problem-ಸ್ಮಾರ್ಟ್‌ಫೋನ್ ಬ್ಯಾಟರಿ ಸಮಸ್ಯೆಗೆ ಇಲ್ಲಿದೆ ಪರಿಹಾರ…!ಈ ಸೆಟ್ಟಿಂಗ್ಸ್ ಆಫ್ ಮಾಡಿ, ಬ್ಯಾಟರಿ ಆಯುಷ್ಯ ಹೆಚ್ಚಿಸಿ
ಆಧುನಿಕ 6 ಇಂಚಿನ ಸ್ಮಾರ್ಟ್‌ಫೋನ್‌ಗಳು ಶಕ್ತಿಶಾಲಿ ಫೀಚರ್‌ಗಳನ್ನು ಹೊಂದಿದ್ದರೂ ಬ್ಯಾಟರಿ ತ್ವರಿತವಾಗಿ ಖಾಲಿಯಾಗುವ ದೂರು ಸಾಮಾನ್ಯ. ದಿನವಿಡೀ ಚಾರ್ಜ್ ಮಾಡಿದರೂ ಬ್ಯಾಟರಿ ಕಡಿಮೆಯಾಗುವ ಸಮಸ್ಯೆ ಕಾಡುತ್ತಿದ್ದರೆ, ಕೆಲವು ಸೆಟ್ಟಿಂಗ್ಸ್ ಆಫ್ ಮಾಡುವ ಮೂಲಕ ಬ್ಯಾಟರಿ ಆಯುಷ್ಯವನ್ನು ಹೆಚ್ಚಿಸಬಹುದು.
ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ, ಮೊಬೈಲ್ ಬಳಕೆ ಹೆಚ್ಚಾದಂತೆ ಬ್ಯಾಟರಿ ಸಮಸ್ಯೆಯೂ ಸಾಮಾನ್ಯವಾಗಿದೆ. ಹಿಂದಿನ ಕೀಪ್ಯಾಡ್ ಫೋನ್‌ಗಳು ದೀರ್ಘ ಬ್ಯಾಟರಿ ಬ್ಯಾಕಪ್ ನೀಡುತ್ತಿದ್ದವು, ಆದರೆ ಆಧುನಿಕ 6-ಇಂಚಿನ ಸ್ಮಾರ್ಟ್‌ಫೋನ್‌ಗಳು ಶಕ್ತಿಶಾಲಿ ಫೀಚರ್‌ಗಳನ್ನು ಹೊಂದಿದ್ದರೂ ಬ್ಯಾಟರಿ ತ್ವರಿತವಾಗಿ ಖಾಲಿಯಾಗುವ ದೂರು ಸಾಮಾನ್ಯ. ದಿನವಿಡೀ ಚಾರ್ಜ್ ಮಾಡಿದರೂ ಬ್ಯಾಟರಿ ಕಡಿಮೆಯಾಗುವ ಸಮಸ್ಯೆ ಕಾಡುತ್ತಿದ್ದರೆ, ಕೆಲವು ಸೆಟ್ಟಿಂಗ್ಸ್ ಆಫ್ ಮಾಡುವ ಮೂಲಕ ಬ್ಯಾಟರಿ ಆಯುಷ್ಯವನ್ನು ಹೆಚ್ಚಿಸಬಹುದು. ಈ ಕೆಳಗಿನ ಸಲಹೆಗಳು ನಿಮಗೆ ಉಪಯುಕ್ತವಾಗಬಹುದು.
ಬ್ಯಾಟರಿ ಸಮಸ್ಯೆಗೆ ಮೂಲ ಕಾರಣ
ಸ್ಮಾರ್ಟ್‌ಫೋನ್ ಖರೀದಿಸಿದ ಬಳಿಕ ಅದರಲ್ಲಿನ ಹಲವು ಫೀಚರ್ ಗಳನ್ನು ನಾವು ಬದಲಿಸುತ್ತಲೇ ಇರುತ್ತವೆ. ಇದರೊಟ್ಟಿಗೆ ಬ್ಯಾಕ್‌ಗ್ರೌಂಡ್ ನಲ್ಲಿ ಕೆಲವು ಆ್ಯಪ್‌ಗಳನ್ನು ರನ್ನಿಂಗ್‌ನಲ್ಲೇ ಇಟ್ಟಿರುತ್ತೇವೆ. ಇದು ಸಹ ಬ್ಯಾಟರಿ ಡೌನ್‌ಗೆ ಒಂದು ಮೂಲ ಕಾರಣ. ಮೊಬೈಲ್‌ನಲ್ಲಿ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಬೇಕು ಎಂದಾದರೆ, ಮೊದಲು ಕೆಳಗೆ ತಿಳಿಸಿರುವ ಸೆಟ್ಟಿಂಗ್ಸ್‌ಗಳನ್ನು ಆಫ್ ಮಾಡಿಕೊಳ್ಳಿ. ಈ ಮುಖೇನ ಮೊಬೈಲ್ ಬದಲಿಸುವುದು ಅಥವಾ ಹೊಸ ಬ್ಯಾಟರಿ ಹಾಕಿಸುವುದು ತಪ್ಪುತ್ತದೆ.
ಆಟೋಮೆಟಿಕ್ ಬ್ರೈಟ್ನೆಸ್ ಆಯ್ಕೆ
ಬ್ಯಾಟರಿ ಪರ್ಸಂಟೆಂಜ್ ಕುಸಿತಕ್ಕೆ ಬ್ರೈಟ್ನೆಸ್ ಕಾರಣ. ನೀವು ಎಷ್ಟು ಹೆಚ್ಚು ಬೆಳಕು ಜಾಸ್ತಿ ಇಟ್ಟಿರುತ್ತೀರೋ, ಅಷ್ಟೇ ಪ್ರಮಾಣದಲ್ಲಿ ಬ್ಯಾಟರಿ ಕಡಿಮೆಯಾಗುತ್ತಿರುತ್ತದೆ. ಕೆಲವರು ಬೆಳಗಿನ ಸಮಯದಲ್ಲಿ ಕಡಿಮೆ ಇಟ್ಟಿರುತ್ತಾರೆ. ಇನ್ನೂ ಕೆಲವರು ರಾತ್ರಿ ಆಗುತ್ತಿದ್ದಂತೆ ಬ್ರೈಟ್ನೆಸ್ ಜಾಸ್ತಿ ಮಾಡಿಕೊಳ್ಳುತ್ತಾರೆ. ಇದು ಬ್ಯಾಟರಿ ಬಾಳಿಕೆಗೆ ಕತ್ತರಿ ಹಾಕುತ್ತದೆ. ಇದನ್ನು ತಡೆಯಲು ಸೆಟ್ಟಿಂಗ್ಸ್‌ನಲ್ಲಿ ಆಟೋಮೆಟಿಕ್ ಬ್ರೈಟ್ನೆಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಇದು ಬೆಳಕಿನ ಅಗತ್ಯತೆ ನೋಡಿಕೊಂಡು ಬ್ರೈಟ್ನೆಸ್ ಒದಗಿಸುತ್ತದೆ. ಈ ಸೆಟ್ಟಿಂಗ್ ಆಯ್ಕೆ ಮಾಡಿಕೊಳ್ಳುವುದರಿಂದ ಬ್ಯಾಟರಿ ಹೆಚ್ಚು ಬಳಕೆಯಾಗುವುದಿಲ್ಲ.
ಲೊಕೇಶನ್ ಸೇವೆ ಆಫ್ ಮಾಡಿ
ಸ್ಮಾರ್ಟ್‌ಫೋನ್‌ಗಳಲ್ಲಿ ಲೊಕೇಶನ್ ಆನ್ ಆಗಿದ್ದರೆ ತಮ್ಮ ಕೆಲಸಗಳು ಸುಲಭ ಎಂಬುದು ಕೆಲವರ ಅನಿಸಿಕೆ. ಲೊಕೇಶನ್ ಸೆಟ್ಟಿಂಗ್‌ನಲ್ಲಿ ತಾವು ಹೋಗಬೇಕಾದ ಸ್ಥಳವನ್ನು ನಮೂದಿಸಿ, ಬ್ಯಾಕ್‌ಡ್ರಾಪ್‌ನಲ್ಲಿ ಇಟ್ಟಿರುತ್ತಾರೆ. ಇದರಿಂದ ಬ್ಯಾಟರಿ ಲೈಫ್ ಕ್ಷಿಣಿಸುತ್ತ ಹೋಗುತ್ತದೆ. ಸ್ಮಾರ್ಟ್‌ಫೋನ್ ಬಳಕೆದಾರರು ನಿಮ್ಮ ಮೊಬೈನಲ್ಲಿರುವ ಲೊಕೇಶನ್ ಸೇವೆಗಳ ಸೆಟ್ಟಿಂಗ್ ಅನ್ನು ಆಫ್ ಮಾಡಿಕೊಳ್ಳಿ. ಅನಗತ್ಯ ಅಪ್ಲಿಕೇಶನ್‌ಗಳಿಗೆ ಅನುಮತಿ ನೀಡುವುದರಿಂದ ಬ್ಯಾಟರಿ ತ್ವರಿತವಾಗಿ ಖಾಲಿಯಾಗುತ್ತದೆ. ಇದಲ್ಲದೆ, ನಿಮ್ಮ ವೈಯಕ್ತಿಕ ಡೇಟಾ ಕೂಡ ಹ್ಯಾಕ್ ಆಗುವ ಅಪಾಯವಿರುತ್ತದೆ. ನ್ಯಾವಿಗೇಷನ್ ಮತ್ತು ಹವಾಮಾನ ವರದಿಗಳ ಅಪ್ಲಿಕೇಶನ್‌ಗಳ ಸೆಟ್ಟಿಂಗ್‌ಗಳನ್ನು ಅಗತ್ಯವಿದ್ದಾಗ ಆನ್ ಮಾಡಿಕೊಳ್ಳುವುದರಿಂದ ಬ್ಯಾಟರಿ ಆರೋಗ್ಯ ದೀರ್ಘ ಕಾಲ ಬರುವಂತೆ ನೋಡಿಕೊಳ್ಳಬಹುದು
ವೈರಲ್ ನ್ಯೂಸ್
ಸಿಎಂ ಪುಟದಲ್ಲಿ ಮೊಳಗಿದ ಪುತ್ತೂರಿನ ಕಂಠ – ತುಳುನಾಡಿನ ಸಂಸ್ಕೃತಿ – ಭಾಷಾ ಸೊಗಡಿಗೆ ಧ್ವನಿಯಾದ ದಿವ್ಯಶ್ರೀ ರೈ ವಜ್ರದುಂಬಿ
ಪುತ್ತೂರು: ತುಳುವಿಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತ ಸಂಭ್ರಮದ ನಡುವೆಯೇ, ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸೊಬಗನ್ನು ಪರಿಚಯಿಸುವ ವಿಡಿಯೋವೊಂದಕ್ಕೆ ಪುತ್ತೂರಿನ ಕುಂಬ್ರದ ದಿವ್ಯಶ್ರೀ ರೈ ವಜ್ರದುಂಬಿ ಅವರು ನೀಡಿರುವ ಹಿನ್ನಲೆ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಸೆ.18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಆಚಾರ ವಿಚಾರವನ್ನು ಬಿಂಬಿಸುವ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಕಂಠಸಿರಿ ಹಿನ್ನಲೆ ಧ್ವನಿಯಾಗಿತ್ತು.
ವಿಡಿಯೋದಲ್ಲಿ ತುಳುನಾಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ , ಸಂಸ್ಕೃತಿ, ಸಂಪ್ರದಾಯ, ಬದುಕಿನ ವೈವಿಧ್ಯ ಹಾಗೂ ತುಳು ಭಾಷೆಯ ಸೊಗಡನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಧ್ವನಿ ಮತ್ತಷ್ಟು ಜೀವ ತುಂಬಿದೆ. ಮಾತುಗಳನ್ನು ಕೇವಲ ಕೇಳಿಸುವುದಕ್ಕಿಂತ, ಅವುಗಳ ಭಾವವನ್ನು ಕೇಳುಗರ ಮನಸ್ಸಿಗೆ ತಲುಪಿಸುವ ರೀತಿಯ ಅವರ ಧ್ವನಿ ನಿರೂಪಣೆ ವಿಡಿಯೋಗೆ ವಿಶೇಷ ಮೆರುಗು ನೀಡಿದೆ.
ಮುಖ್ಯಮಂತ್ರಿಗಳ ಅಧಿಕೃತ ಪುಟದಲ್ಲಿ ಪ್ರಸಾರವಾದ ಈ ವಿಡಿಯೋಗೆ ಅಲ್ಪಾವಧಿಯಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಎರಡು ದಿನಗಳಲ್ಲಿ ಸುಮಾರು 5 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ತುಳುವಿನ ಬಗ್ಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕರಾವಳಿಯ ಜನರ ನಡುವೆ ಈ ವಿಡಿಯೋ ವಿಶೇಷ ಗಮನ ಸೆಳೆದಿದ್ದು, ದಿವ್ಯಶ್ರೀ ಅವರ ಕಂಠಸಿರಿಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ನಿರೂಪಕಿ ಹಾಗೂ ವಾಯ್ಸ್‌ಓವರ್ ಆರ್ಟಿಸ್ಟ್ ಆಗಿರುವ ದಿವ್ಯಶ್ರೀ, ತಮ್ಮ ಧ್ವನಿಯ ಏರಿಳಿತ, ಉಚ್ಚಾರಣೆಯ ಸ್ಪಷ್ಟತೆ ಹಾಗೂ ಭಾವಪೂರ್ಣ ನಿರೂಪಣೆಯ ಮೂಲಕ ತುಳುನಾಡಿನ ಮಣ್ಣಿನ ಸೊಗಡನ್ನು ಧ್ವನಿಯಲ್ಲೇ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತುಳು ಭಾಷೆಯ ಬಗ್ಗೆ ಹೆಮ್ಮೆ, ಕರಾವಳಿಯ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ವಿಡಿಯೋದಲ್ಲಿನ ದೃಶ್ಯಗಳಿಗೆ ಹೊಂದಿಕೊಳ್ಳುವ ಧ್ವನಿ ನಿರೂಪಣೆ ಅವರ ವಾಯ್ಸ್‌ಓವರ್‌ನ ವಿಶೇಷತೆಯಾಗಿದೆ.
ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಶ್ರೀ, ಇದಕ್ಕೂ ಮೊದಲು ಹಲವು ಸುದ್ದಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ಅನುಭವದ ಜತೆಗೆ ಡಾಕ್ಯುಮೆಂಟರಿ, ವಿಶೇಷ ವರದಿ ಹಾಗೂ ಜಾಹೀರಾತುಗಳಿಗೆ ಧ್ವನಿ ನೀಡಿರುವ ಅವರು ವಾಯ್ಸ್‌ಓವರ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. “ನಿಖರ ನ್ಯೂಸ್”ನ ಹಲವಾರು ವಿಡಿಯೋಗಳಲ್ಲೂ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
2023ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ದಿವ್ಯಶ್ರೀ, ಅಧ್ಯಯನ ಹಾಗೂ ವೃತ್ತಿ ಎರಡೂ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಅರಿಯಡ್ಕ ಗ್ರಾಮದ ತ್ಯಾಗರಾಜನಗರ ನಿವಾಸಿ ವಿಠಲ ರೈ ಹಾಗೂ ಶಾಲಿನಿ ರೈ ದಂಪತಿಯ ಪುತ್ರಿಯಾಗಿರುವ ದಿವ್ಯಶ್ರೀ ಅವರ ವೃತ್ತಿ ಬದುಕಿನ ಹೆಜ್ಜೆಗಳಿಗೆ ಸಹೋದರಿ ಮಧುಶ್ರೀ ರೈ ಅವರೂ ಪ್ರೋತ್ಸಾಹ ನೀಡುತ್ತಿದ್ದಾರೆ.
ತುಳುವಿಗೆ ಅಧಿಕೃತ ಮಾನ್ಯತೆ ದೊರೆತ ಸಂಭ್ರಮದ ಕ್ಷಣದಲ್ಲಿ, ತುಳುನಾಡಿನ ಕಥೆಯನ್ನು ತಮ್ಮ ಕಂಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ ದಿವ್ಯಶ್ರೀ ರೈ ವಜ್ರದುಂಬಿ ಅವರ ಧ್ವನಿ ಈಗ ಪುತ್ತೂರಿನಿಂದ ತುಳುನಾಡಿನಾಚೆಗೂ ಕೇಳಿಸುತ್ತಿದೆ.
ಅಂತರ ರಾಜ್ಯ
Punjab-ಪಂಜಾಬ್ ವಿವಾಹದಲ್ಲಿ ವಧುವಿನ ಮೇಲೆ 8 ಕೋಟಿ ರೂ. ನೋಟುಗಳ ಮಳೆ: ಹಬ್ಬಿದ್ದ ವದಂತಿಗೆ ಬಿತ್ತು ಬ್ರೇಕ್; ಅಸಲಿ ಮೊತ್ತ ಎಷ್ಟು ಗೊತ್ತೇ?
ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.
ಅಮೃತಸರ, ಫೆ.19: ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.
ಘಟನೆಯ ಹಿನ್ನೆಲೆ:
ರಾಜಮನೆತನದ ಶೈಲಿಯಲ್ಲಿ ನಡೆದ ಈ ವಿವಾಹದಲ್ಲಿ, ಸಂಭ್ರಮಾಚರಣೆಯ ಭಾಗವಾಗಿ ನೋಟುಗಳನ್ನು ಗಾಳಿಯಲ್ಲಿ ತೂರಿ ಸುರಿಮಳೆಗೈಯಲಾಗಿತ್ತು. ಅತಿಥಿಗಳು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದರು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ, ಕೆಲವರು ಇದನ್ನು ಶ್ರೀಮಂತಿಕೆಯ ಪ್ರದರ್ಶನ ಎಂದು ಟೀಕಿಸಿದರೆ, ಇನ್ನು ಕೆಲವರು ಇದು ಅಲ್ಲಿನ ಸಂಪ್ರದಾಯ ಎಂದು ಅಭಿಪ್ರಾಯಪಟ್ಟಿದ್ದರು. ಕೋಟ್ಯಂತರ ರೂಪಾಯಿ ಹಣವನ್ನು ಹೀಗೆ ಪೋಲು ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು.
ಅಸಲಿ ಸತ್ಯ ಬಹಿರಂಗ:
ಆದರೆ, ಈ ಹರಡಿದ್ದ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂಬುದು ಈಗ ತಿಳಿದುಬಂದಿದೆ. ಮದುವೆಯ ಕಾರ್ಯಕ್ರಮದಲ್ಲಿದ್ದ ಡಿಜೆ ಆಪರೇಟರ್ ಈ ಕುರಿತು ಅಸಲಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ವಾಸ್ತವವಾಗಿ ಅಲ್ಲಿ ಸುರಿಸಿದ್ದು 8 ಕೋಟಿ ರೂಪಾಯಿಗಳನ್ನಲ್ಲ, ಬದಲಿಗೆ ಕೇವಲ 3 ಲಕ್ಷ ರೂಪಾಯಿಗಳನ್ನು ಮಾತ್ರ!
ಹಣದ ರಾಶಿ ದೊಡ್ಡದಾಗಿ ಕಾಣಲು ಕಾರಣವೆಂದರೆ, ಅಲ್ಲಿ ಬಳಸಲಾದ ಬಹುಪಾಲು ನೋಟುಗಳು 10 ರೂಪಾಯಿ ಮುಖಬೆಲೆಯದ್ದಾಗಿದ್ದವು. ಕಡಿಮೆ ಮುಖಬೆಲೆಯ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ನೋಡುವವರಿಗೆ ಅದು ಕೋಟ್ಯಂತರ ರೂಪಾಯಿಯಂತೆ ಭಾಸವಾಗಿತ್ತು. “ಇದು ಕುಟುಂಬದ ಸಂತೋಷವನ್ನು ವ್ಯಕ್ತಪಡಿಸುವ ಒಂದು ವಿಧಾನ ಮತ್ತು ಸ್ಥಳೀಯ ಆಚರಣೆಯ ಭಾಗವಾಗಿದೆ” ಎಂದು ಸ್ಪಷ್ಟಪಡಿಸಲಾಗಿದೆ.
ವೈರಲ್ ನ್ಯೂಸ್
ಚೀನಾದಲ್ಲಿ ಇತಿಹಾಸ ನಿರ್ಮಾಣ : ಗಂಟೆಗೆ 700ಕಿಮೀ ವೇಗದಲ್ಲಿ ಸಂಚರಿಸುವ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
ಬೀಜಿಂಗ್: ನವೀನ ತಂತ್ರಜ್ಞಾನಗಳಿಂದ ಜಗತ್ತನ್ನು ನಿಬ್ಬೆರಗುಗೊಳಿಸುವ ಚೀನಾ ಇದೀಗ ಮತ್ತೊಂದು ಇತಿಹಾಸ ನಿರ್ಮಿಸಿದೆ. ಗಂಟೆಗೆ 700 ಕಿ.ಮೀ ಸಂಚರಿಸುವ ಸೂಪರ್ ಕಂಡಕ್ಟಿವ್ ಮ್ಯಾಗ್ಲೆವ್ ರೈಲಿನ ಮಾದರಿಯ ಪ್ರಾಯೋಗಿಕ ಪರೀಕ್ಷೆಯನ್ನು ಚೀನಾ ಯಶಸ್ವಿಯಾಗಿ ನಡೆಸಿದೆ. ಈ ವೇಗ ನೂತನ ವಿಶ್ವದಾಖಲೆಯಾಗಿದೆ. ಒಂದು ವೇಳೆ ಈ ರೈಲು ನಿಜರೂಪ ಪಡೆದು ಹಳಿ ಮೇಲೆ ಓಡಿದರೆ ಅದು ವಿಶ್ವದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಹಾಲಿ ಚೀನಾದಲ್ಲಿ ಇರುವ ಶಾಂಘೈ ಮ್ಲಾಗ್ಲೇವ್ ಗಂಟೆಗೆ 460 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ವಿಶ್ವದ ಅತಿವೇಗದ ರೈಲು ಎಂಬ ಹಿರಿಮೆ ಹೊಂದಿದೆ. ಪರೀಕ್ಷಿಸಿದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾನಿಲಯ
ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾನಿಲಯವು 700 ಕಿ.ಮೀ/ ಗಂಟೆಗೆ ಸಂಚರಿಸುವ ರೈಲಿನ ಮಾದರಿಯನ್ನು ಪರೀಕ್ಷಿಸಿದೆ. 400 ಮೀ.ಉದ್ದ ಮ್ಯಾಗ್ಲೆವ್ ಹಳಿಯ ಮೇಲೆ 1000 ಕೆಜಿ ತೂಕದ ರೈಲಿನ ಮಾದರಿಯನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆ ವೇಳೆ ಗಂಟೆಗೆ 700 ಕಿ.ಮೀ ದೂರ ಸಂಚರಿಸಬೇಕಾದ ವೇಗವನ್ನು ರೈಲು ಕೇವಲ 2 ಸೆಕೆಂಡ್‌ಗಳಲ್ಲೇ ಸಾಧಿಸುವ ಮೂಲಕ, ಯೋಜನೆಯ ಕಾರ್ಯಸಾಧು ಬಗ್ಗೆ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಇದು ಇದುವರೆಗೆ ಪರೀಕ್ಷಿಸಲ್ಪಟ್ಟ ಅತ್ಯಂತ ವೇಗದ ಸೂಪರ್ ಕಂಡಕ್ಟಿಂಗ್ ಮ್ಯಾಗ್ಲೆವ್ ರೈಲಾಗಿದೆ.
ಸಂಶೋಧನಾ ತಂಡವು ಒಂದು ದಶಕದಿಂದ ಈ ಯೋಜನೆಗಾಗಿ ಶ್ರಮಿಸುತ್ತಿತ್ತು
ಸಂಶೋಧನಾ ತಂಡವು ಒಂದು ದಶಕದಿಂದ ಈ ಯೋಜನೆಗಾಗಿ ಶ್ರಮಿಸುತ್ತಿತ್ತು, ಇದೇ ವರ್ಷದ ಜನವರಿಯಲ್ಲಿ ಇದೇ ಹಳಿ ಮೇಲೆ 648 ಕಿ.ಮೀ/ ಗಂಟೆ ಸಂಚಾರದ ಪರೀಕ್ಷೆ ನಡೆಸಿತ್ತು. ಇದೀಗ ಆ ವೇಗ 700 ಕಿ.ಮೀಗೆ ಹೆಚ್ಚಿದೆ. ಮ್ಯಾಗ್ಲೇವ್ ತಂತ್ರಜ್ಞಾನದ ರೈಲುಗಳಿಗೆ ಚಕ್ರ ಇರುವುದಿಲ್ಲ. ಬದಲಾಗಿ ಅವು ಹಳಿ ಮತ್ತು ರೈಲಿನ ನಡುವೆ ಉತ್ಪತ್ತಿಯಾಗುವ ಅಯಂಸ್ಕಾತೀಯ ವಲಯದಲ್ಲಿ ಗಾಳಿಯಲ್ಲೇ ತೇಲಿಕೊಂಡು ಮುಂದೆ ಸಾಗುತ್ತದೆ.
-
ನಿಧನ ವಾರ್ತೆ23 hours agoKadaba-ಕಡಬ : ಹೆದ್ದಾರಿಯಲ್ಲಿ ದಿಢೀರ್ ಪ್ರತ್ಯಕ್ಷವಾದ ಕಡವೆ; ಕಾರಿಗೆ ಡಿಕ್ಕಿ, ಸ್ಥಳದಲ್ಲೇ ಸಾವು
-
ಬಿಗ್ ನ್ಯೂಸ್18 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಪುತ್ತೂರು15 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಮಂಗಳೂರು18 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
Uncategorized23 hours agoಅ.6: ಮಂಗಳೂರಿನ ಪುರಭವನದಲ್ಲಿ ‘ಲವ್ ಜಿಹಾದ್ ಮತ್ತು ಮತಾಂತರ: ಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ
-
ಅಂತರ ರಾಜ್ಯ21 hours agoECI-ಮುಖ್ಯ ಚುನಾವಣ ಆಯುಕ್ತ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ‘ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಅಭಿಯಾನ’…! 20 ರಾಜ್ಯಗಳಲ್ಲಿ ಕೈಬಿಟ್ಟ 13 ಕೋಟಿ ಮತದಾರರ ಮರುಸೇರ್ಪಡೆಗೆ ಆಯೋಗ ಅವಕಾಶ
-
ಬಿಗ್ ನ್ಯೂಸ್17 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ರಾಜ್ಯ20 hours agoTemperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!


















