ಸ್ಥಳೀಯ
Muliya-ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್- ಮತ್ತಷ್ಟು ಹೊಸತನದೊಂದಿಗೆ ಈಗ 5000 + sft ನ ಬೆಳ್ತಂಗಡಿಯ ಅತಿ ದೊಡ್ಡ ಶೋರೂಂ ಉದ್ಘಾಟನೆ
ಮುಳಿಯ ಗೋಲ್ಡ್ ಅಂಡ್ ಡೈಮಂಡ್ , 81+ ವರ್ಷ ಪರಂಪರೆಯ ಚಿನ್ನದ ಮಳಿಗೆ ಇದೆ ಮೇ 17 ರಂದು ಹೊಸ ವಿಸ್ತೃತ ಶೋರೂಮ್ ನೊಂದಿಗೆ ಮುಳಿಯ ಗೋಲ್ಡನ್ ಡೈಮಂಡ್ ಎಂದು ಹೊಸ ಹೆಸರಿನಿಂದ ಮತ್ತು ಹಲವು ಹೊಸತನಗಳಿಂದ ಉದ್ಘಾಟನೆಗೊಳ್ಳಲಿದೆ.
ಮುಳಿಯ ಗೋಲ್ಡ್ ಅಂಡ್ ಡೈಮಂಡ್ , 81+ ವರ್ಷ ಪರಂಪರೆಯ ಚಿನ್ನದ ಮಳಿಗೆ ಇದೆ ಮೇ 17 ರಂದು ಹೊಸ ವಿಸ್ತೃತ ಶೋರೂಮ್ ನೊಂದಿಗೆ ಮುಳಿಯ ಗೋಲ್ಡನ್ ಡೈಮಂಡ್ ಎಂದು ಹೊಸ ಹೆಸರಿನಿಂದ ಮತ್ತು ಹಲವು ಹೊಸತನಗಳಿಂದ ಉದ್ಘಾಟನೆಗೊಳ್ಳಲಿದೆ. ಎಂಟು ದಶಕಗಳ ಹಿಂದೆ ದಿವಂಗತ ಕೇಶವ ಭಟ್ಟರಿಂದ ಆರಂಭದ ಸಂಸ್ಥೆಯನ್ನು ಅವರ ಮೊಮ್ಮಕ್ಕಳದ ಕೇಶವ ಪ್ರಸಾದ್ ಹಾಗೂ ಕೃಷ್ಣನಾರಾಯಣ ಮುಳಿಯ ಇವರು ಮುನ್ನಡೆಸುತ್ತಿದ್ದಾರೆ .
ಈ ವಿಶಾಲ ಶೋರೂಮ್ ಖ್ಯಾತ ಸಿನಿಮಾ ನಟ ಹಾಗೂ ಸ್ಪೂರ್ತಿಯ ಮಾತುಗಾರ ರಮೇಶ್ ಅರವಿಂದ್ ಇವರಿಂದ ಉದ್ಘಾಟನೆಗೊಳ್ಳಲಿದೆ.
ಮೇ 17 ಬೆಳಿಗ್ಗೆ 10.30 ಗಂಟೆಗೆ ಶೋರೂಮ್ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವರು.
ರಮೇಶ್ ಅರವಿಂದ್ ಅವರು ಈಗಾಗಲೇ ಮುಳಿಯದ ಹೊಸ ಲೋಗೊ ಬಿಡುಗಡೆ ಮಾಡಿದ್ದು ಈ ಸಮಾರಂಭದಲ್ಲಿ ಮುಳಿಯ ಜೊತೆ ಮತ್ತು ಬೆಳ್ತಂಗಡಿ ಜನರೊಂದಿಗೆ ಹೊಸತನದೊಂದಿಗೆ ಸಂತೋಷದಿಂದ ಭಾಗವಹಿಸುತ್ತಿದ್ದೇನೆ ತಾವೆಲ್ಲರೂ “ಬನ್ನಿ ಮುಳಿಯಕ್ಕೆ” ಎಂದು ಆಹ್ವಾನಿಸಿದ್ದಾರೆ.
ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ. ಈ ಹೊಸ ಶೋರೂಮ್ ನಂಬಿಕೆ ಮತ್ತು ಪರಂಪರೆಯ ಜೊತೆಗೆ ಈ ವಿಶಾಲ ವಿಸ್ತೃತ ಶೋರೂಮ್ ಮೂಲಕ ಬೆಳ್ತಂಗಡಿ ಊರಿನ ಜನತೆಗೆ ಅರ್ಪಿಸುತ್ತಿದ್ದೇವೆ” ಎನ್ನುತ್ತಾರೆ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ.
ಕಳೆದ ಮೂರು ತಲೆಮಾರುಗಳಿಂದ ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ ಬೆಳೆಯುತ್ತಿರುವ ನಮ್ಮ ಮುಳಿಯ ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ, ಸಂತೋಷ ನೀಡಿದ್ದೇವೆ.. ಬೆಳ್ತಂಗಡಿಯಲ್ಲಿ ನೀವು ಮನಸಾರೆ ನಮ್ಮನ್ನು ಹರಸಿದ್ದೀರಿ.. ನೀಡುವ ನಮ್ಮ ಹೊಸತನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ಹೊಸತನದೊಂದಿಗೆ ಬರುತ್ತಿದ್ದೇವೆ” ಎನ್ನುತ್ತಾರೆ ಅವರು
ಈ 2 ಅಂತಸ್ತಿನ ವಿಶಾಲ ಶೋರೂಮ್ ಅತ್ಯಾಧುನಿಕ ಶೈಲಿಯಲ್ಲಿ ರೂಪಗೊಂಡಿದೆ. ಇಲ್ಲಿ ಚಿನ್ನ , ಬೆಳ್ಳಿ , ವಜ್ರ , ವಾಚುಗಳು , ಗಿಫ್ಟ್ ಐಟಂ ..ಹಾಗೂ ವಿವಿಧ ಬಗೆಯ ಚಿನ್ನಾಭರಣಗಳ ಕೌಂಟರ್ಗಳು ಇರಲಿವೆ. ಇದು ನಮ್ಮ ಮುಂದಿನ ಐದು ವರ್ಷಗಳ ವರ್ಷಗಳ ವ್ಯವಹಾರ ವಿಸ್ತಾರಣೆಗೆ ನಾಂದಿಯಾಗಲಿದೆ ಎಂದು ಅವರು ವಿವರಿಸಿದರು.
ಗ್ರಾಹಕರ ಸಂತೃಪ್ತಿ ಮತ್ತು ಸಂತೋಷ ನೀಡುತ್ತಾ ಮುಳಿಯ ಈಗ ಹಿಂದಿಗಿಂತ ದುಪ್ಪಟ್ಟು ರೀತಿಯಲ್ಲಿ ಸದಾ ಸಂತೋಷ ನೀಡುವಲ್ಲಿ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿದೆ.
ಶೋರೂಮ್ ವಿಶೇಷಗಳು
- * 5000+ sft ವಿಶಾಲ 2 ಮಹಡಿ, ವಿಶಾಲ ಪಾರ್ಕಿಂಗ್ –
* ಬೆಳ್ಳಿಯ ಭರಣಗಳ ವಿಶೇಷ ಕಾಂಡ ಕೌಂಟರ್
* ಗ್ರಾಹಕರಿಗೆ ತಿಂಡಿ ಊಟದ ವ್ಯವಸ್ಥೆ – ಮಕ್ಕಳ ಆಟಕ್ಕೆ ಮತ್ತು ಆರೈಕೆಗೆ ವಿಶೇಷ ಕೊಠಡಿ. - * ವ್ಯಾಲೆಟ್ ಪಾರ್ಕಿಂಗ್
- * ವಾಚ್ ಕೌಂಟರ್
- * ವಜ್ರಾಭರಣ ಅಮೂಲ್ಯ ಕೌಂಟರ್
- ದೇಶದಲ್ಲಿಯೇ ಪ್ರಪ್ರಥಮ ಬಾರಿ ಎನ್ನಬಹುದಾದ ಗ್ರಾಹಕರ ಸಮ್ಮುಖದಲ್ಲಿ ಗೋಲ್ಡ್ ಪ್ಯೂರಿಟಿ ಅನಲೈಸರ್ ಹಾಗೂ ಲ್ಯಾಬ್ ಗ್ರೋನ್ ಡೈಮಂಡ್ ಡಿಟೆಕ್ಟರ್ ಟೆಸ್ಟಿಂಗ್ ಮಿಷನ್
ಇದಲ್ಲದೆ ಬಳೆ ,ಆಂಟಿಕ್, ನೆಕ್ಲೆಸ್ , ಪಾರಂಪರಿಕ ಆಭರಣಗಳ… ಇನ್ನಿತರ ಕೌಂಟರ್ಗಳು.
“ಗ್ರಾಹಕರು ಬದಲಾಗುತ್ತಿದ್ದಾರೆ. ಅವರ ಆಸೆ ಆಕಾಂಕ್ಷೆಗಳಿಗೆ ಸರಿಯಾಗಿ ನಾವೂ ಹೊಸತನ ನೀಡಬೇಕು. ‘ಬದಲಾವಣೆ ಜಗದ ನಿಯಮ’. ಇಂದಿನ ಯುವ ಪೀಳಿಗೆ ಮನೆಯ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಕೈಯಲ್ಲಿರುವ ಮೊಬೈಲ್ ಅವರಿಗೆ ಜಗತ್ತಿನ ವೈವಿಧ್ಯ ಮತ್ತು ಹೊಸಹೊಸ ವಸ್ತುಗಳನ್ನು ತೋರಿಸುತ್ತದೆ. ಚಿನ್ನದ ಹೂಡಿಕೆ ಬಗ್ಗೆಯೂ ಅವರಿಗೆ ಜಾಣತನದ ಬುದ್ಧಿವಂತಿಕೆ ಇದೆ. ಅವರು ಸಂಪಾದನೆ ಮಾಡುತ್ತಾರೆ. ಈ ಹೊಸ ಮತ್ತು ವಿಶಾಲ ಶೋರೂಮ್ ನಮ್ಮ ಲಕ್ಷಕ್ಕಿಂತಲೂ ಹೆಚ್ಚಿನ ಪರಂಪರಾಗದ ನಿಷ್ಠಾವಂತ (loyal customer) ಗ್ರಾಹಕರನ್ನು ನೆನಪಿಟ್ಟು ಅವರಿಗೂ ಮತ್ತು ಈಗಿನ ಹೊಸ ಜನರೇಷನ್ (Z generation) ಪೀಳಿಗೆಯನ್ನೂ ಆಕರ್ಷಿಸಲಿದೆ. ಎಂದು ಕೃಷ್ಣನಾರಾಯಣ ಮುಳಿಯ ವಿವರಿಸಿದರೆ
ಬೆಳ್ತಂಗಡಿಯ ವಿವಿಧಗ್ರಾಮಗಳಿಂದ ಗ್ರಾಹಕರು ನಮ್ಮಲ್ಲಿ ಬರುತ್ತಾರೆ. ಮದುವೆ ಮತ್ತು ಮನೆಯ ಸಮಾರಂಭಗಳ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ಆಯ್ಕೆ ಬೇಕಾಗುತ್ತದೆ. ಹಾಗೆಯೇ ಅವರು ಹೆಚ್ಚು ಸಂತೋಷದ/ ಆರಾಮದ ವಾತಾವರಣ ಬಯಸುತ್ತಾರೆ. ಈಥರದ ಇಷ್ಟು ದೊಡ್ಡ ಹೊಸ ವಿಶಾಲ ಶೋರೂಮ್ ಬೆಳ್ತಂಗಡಿಗೆ ಹೊಸತು . ಹಾಗಾಗಿ ಗ್ರಾಮಾಂತರದ ಜನತೆ ಈ ಹೊಸ ವಿಶಾಲ ಶೋರೂಮ್ ಹಾಗೂ ಹೆಚ್ಚಿನ ಆಯ್ಕೆಯ ಮುಳಿಯವನ್ನು ಇಷ್ಟಪಡುವುದು ಖಂಡಿತ. ಎಂದು ಅವರು ತಿಳಿಸಿದರು.
ಸಾಮಾಜಿಕ ಜವಾಬ್ದಾರಿಯೊಂದಿಗೆ ಗ್ರಾಹಕ ಸಂತೃಪ್ತಿ ಮತ್ತು ನಮ್ಮ ಸುತ್ತ ಸದಾ ಸಂತೋಷವನ್ನು ನೀಡುವ ಮುಳಿಯ ISO ಕಂಪನಿಯಾಗಿದೆ. ಸುಮಾರು 500ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಒಳಗೆ ಒಳಗೊಂಡಿರುವ ಮುಳಿಯ 1000 ಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ಇಂಡೈರೆಕ್ಟ್ ಆಗಿ ಉದ್ಯೋಗ Applicable ಶುದ್ಧ ಹಾಲ್ ಮಾರ್ಕ್ 916 ಹಾಗೂ HUD ಚಿನ್ನದ ಆಭರಣಗಳನ್ನು ಮತ್ತು ಐಜಿಐ ಸರ್ಟಿಫೈಡ್ ವಜ್ರಭರಣಗಳನ್ನು ಮಾತ್ರ ಮಾರಾಟ ಮಾಡುತ್ತದೆ.
ನಮ್ಮ ನೂತನ ಬ್ರಾಂಡ್ ಅಂಬ್ಯಾಸಿಡರ್ ಆದ ರಮೇಶ್ ಅರವಿಂದ್ ಬೆಳ್ತಂಗಡಿಗೆ ಬರುವುದು ತುಂಬಾ ಖುಷಿಯಾಗುತ್ತದೆ. ಹಲೋ ಗ್ರಾಹಕರು ರಮೇಶ್ ರಮೇಶ್ ಅರವಿಂದನ್ನು ಈಗಾಗಲೇ ಮುಳಿಯ ಅಂಬಾಸಿಡರ್ ಆಗಿರುವುದ ಕುರಿತು ಈಗಾಗಲೇ ಸಂತೋಷವ್ಯಕ್ತಪಡಿಸಿದ್ದಾರೆ ಎಂದು ಮಾರ್ಕೆಟಿಂಗ್ ಸಲಹೆಗಾರ ವೇಣು ಶರ್ಮ ತಿಳಿಸಿದರು. ಇವರು ಬೆಳ್ತಂಗಡಿ ಜನರನ್ನು ಜನರನ್ನು ಉದ್ದೇಶಿಸಿ ಮಾತನಾಡಿ ಮೋಟಿವೇಟ್ ಮಾಡಲಿದ್ದಾರೆ ಎಂದರು.
ಆರು ವರ್ಷಗಳ ಹಿಂದೆ 81 ಗ್ರಾಮ ದೇಗುಲಗಳಿಂದ ಬೆಳಕನ್ನು ತಂದು ತಂದು ಬೆಳ್ತಂಗಡಿ ಶೋರೂಮ್ ಅನ್ನು ಉದ್ಘಾಟನೆ ಮಾಡಲಾಗಿತ್ತು. ಈ ಬಾರಿಯೂ ಅದೇ ರೀತಿ ದೀಪ ಬೆಳಗಿಸಿ ಉದ್ಘಾಟಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಎಸ್ಕ್ಯೂಟಿವ್ ಅಸಿಸ್ಟೆಂಟ್ ಶಿವ ಕೃಷ್ಣ ಮೂರ್ತಿ ಶಾಖೆಯಪ್ರಬಂಧಕ ಲೋಹಿತ್ ಹಿತ್ ಗೌಡ ಹಾಗೂ ಮಾರುಕಟ್ಟೆ ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ಉಪಸ್ಥಿತರಿದ್ದರು.
ಬಿಗ್ ನ್ಯೂಸ್
Neralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ.
ವಿಟ್ಲ: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ. ಈಕೆ ಕಂಬಳಬೆಟ್ಟು ಶಾಲೆಯ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ.
ಬಾಲಕಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆರೋಗ್ಯ
Puttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ
ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಬೆನ್ನು ನೋವು, ಮೊಣಕಾಲು ನೋವು, ಸೊಂಟ ನೋವು ಹಾಗೂ ಸ್ನಾಯು ನೋವು ಮುಂತಾದ ಸಮಸ್ಯೆಗಳು ಮೂಳೆ ಸವೆತ ಅಥವಾ ಮುಂದಿನ ದಿನಗಳಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ BMD ಶಿಬಿರವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸೇವಾ ವಿಭಾಗದ ಇಂಡ್‌ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಭಾಸ್ಕರ್ ಎಸ್. (D’Ortho), ಆಡಳಿತ ನಿರ್ದೇಶಕರು, ಪುತ್ತೂರು ಸಿಟಿ ಆಸ್ಪತ್ರೆ ಇವರು ತಪಾಸಣೆ ಹಾಗೂ ಸಲಹೆ ನೀಡಿದರು.
ಇನ್ನರ್ ವೀಲ್ ಕ್ಲಬ್ ನ ನಿರ್ದೇಶಕಿ ಮಂಜುಳ ಭಾಸ್ಕರ್, ಅಧ್ಯಕ್ಷೆ ಮನೋರಮಾ ಸೂರ್ಯ, ಖಜಾಂಜಿ ಕವಿತಾ ಕೊಳತ್ತಾಯ, ಕಾರ್ಯದರ್ಶಿ ಶ್ರುತಿ ಎಸ್. ಬಂಗೇರ ಶಿಬಿರದಲ್ಲಿ ಉಪಸ್ಥಿತರಿದ್ದರು.
ಬಿಗ್ ನ್ಯೂಸ್
Puttur-ಎಸ್‌ಡಿಪಿಐ ನಿರಂತರ ಪ್ರಯತ್ನ: ಪುತ್ತೂರಿನ ಅಲ್ಪಸಂಖ್ಯಾತರ ಸೇವಾ ಕೇಂದ್ರ ಪುನರಾರಂಭ
ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು.
ಪುತ್ತೂರು: ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.
ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು. ಸಾರ್ವಜನಿಕರಿಗೆ ಅನುಕೂಲವಾಗುವ ಈ ಸೇವಾ ಕೇಂದ್ರವನ್ನು ಮತ್ತೆ ಆರಂಭಿಸಬೇಕೆಂದು ಸಮಿತಿಯು ಒತ್ತಾಯಿಸಿತ್ತು.
ಈ ನಡುವೆ, ಕೇಂದ್ರಕ್ಕೆ ಸಂಬಂಧಿಸಿದ ಕಟ್ಟಡವನ್ನು ಹಾಸ್ಟೆಲ್ ಬಳಕೆಗೆ ಪರಿವರ್ತಿಸಲು ಪುತ್ತೂರು ಶಾಸಕರು ಪ್ರಯತ್ನಿಸಿದ್ದರು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಮೂರು ವರ್ಷಗಳ ಬಳಿಕ ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಮತ್ತೆ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರಿಗೆ ಸೇವೆ ಲಭ್ಯವಾಗಿರುವುದಾಗಿ ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
-
ಬಿಗ್ ನ್ಯೂಸ್20 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
ಬಿಗ್ ನ್ಯೂಸ್12 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಅಂತರ ರಾಜ್ಯ18 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
ಮಂಗಳೂರು20 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
Uncategorized19 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್20 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ರಾಜಕೀಯ18 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಬಿಗ್ ನ್ಯೂಸ್19 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ















