ಬಿಗ್ ನ್ಯೂಸ್
ಪುತ್ತೂರಿಗರ ಚಿತ್ತ ಬಜೆಟ್ ನತ್ತ..! ದಶಕದ ಹೋರಾಟ ಮೆಡಿಕಲ್ ಕಾಲೇಜು ಕನಸು ಸಿದ್ದರಾಮಯ್ಯ ಬಜೆಟ್ ನಲ್ಲಿ ನನಸು – ಸೋಷಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆ : ಆಶಾಭಾವನೆಯಲ್ಲಿ ಶಾಸಕ ಅಶೋಕ್ ರೈ
ಪುತ್ತೂರು: ಸರಕಾರಿ ಮೆಡಿಕಲ್ ಕಾಲೇಜು ಎಂಬ ಪುತ್ತೂರಿಗರ ಹಲವು ದಶಕಗಳ ಕನಸು ನಾಳೆ ಮಂಡನೆಯಾಗಲಿರುವ ರಾಜ್ಯ ಬಜೆಟ್ ನಲ್ಲಿ ನನಸು ಆಗುವ ಸಾಧ್ಯತೆಯಿದೆ ಎಂಬ ಮಾತುಗಳು ವ್ಯಾಪಕವಾಗಿ ಹಬ್ಬಿದ್ದು, ಎಲ್ಲರ ಚಿತ್ತ ನಾಳಿನ ಬಜೆಟ್ʼನತ್ತ ನೆಟ್ಟಿದೆ.
ಸರಕಾರಿ ಮೆಡಿಕಲ್ ಕಾಲೇಜ್ ಎನ್ನುವುದು ಇಲ್ಲಿನ ಜನರ ಬಹು ದಶಕದ ಬೇಡಿಕೆಯಾಗಿದ್ದು , ಇದಕ್ಕಾಗಿ ಕಳೆದೊಂದು ದಶಕದಿಂದ ಹೋರಾಟ, ಅಭಿಯಾನ, ಚಳುವಳಿಗಳು ನಡೆದಿದ್ದವು . 2023ರ ವಿಧಾನಸಭೆ ಚುನಾವಣೆಯ ಸಂದರ್ಭ ಪುತ್ತೂರು ಕ್ಷೇತ್ರದಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಅಭ್ಯರ್ಥಿಗಳ ಪ್ರಮುಖ ಅಜೆಂಡಾ ಆಗಿತ್ತು.
ಸರಿಯಾಗಿ ಹತ್ತು ವರ್ಷಗಳ ಹಿಂದೆ 2015ರಲ್ಲಿ ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅಗತ್ಯವಾಗಿದ್ದ 40 ಎಕ್ರೆ ಜಮೀನನ್ನು ಕಾಯ್ದಿರಿಸುವ ಕಾರ್ಯವಾಗಿತ್ತು . ಇದೀಗ ಒಂದು ದಶಕದ ಹೋರಾಟ, ಪ್ರಯತ್ನದ ಫಲವಾಗಿ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ 17ನೇ ಬಜೆಟ್ ನಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಪೂರಕವಾಗಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಸಾಧ್ಯತೆಯಿದೆ. ಇದರ ಜತೆಗೆ ಮೆಡಿಕಲ್ ಕಾಲೇಜ್ ಪ್ರಸ್ತಾವನೆಗೂ ಹಸಿರು ನಿಶಾನೆ ಸಿಗುವ ನಿರೀಕ್ಷೆಯಿದೆ. ಈ ಕುರಿತು ಶಾಸಕ ಅಶೋಕ್ ರೈಯವರು ಆಶಾಭಾವನೆಯಿಂದ ಇದ್ದಾರೆ.
ಸರ್ವಪ್ರಯತ್ನ ನಡೆಸಿದ ಶಾಸಕ ಅಶೋಕ್ ರೈ:
ತಾನು ಶಾಸಕನಾಗಿ ಆಯ್ಕೆಯಾದ ಬಳಿಕ ನಿರಂತರವಾಗಿ ಅಶೋಕ್ ರೈಯವರು ಸರಕಾರದ ಮೇಲೆ ಒತ್ತಡ ಹಾಕುವ ಕಾರ್ಯ ಮಾಡಿದ್ದರು. ಕಂದಾಯ ಇಲಾಖೆಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೂಲಕ ವೈದ್ಯಕೀಯ ಕಾಲೇಜು ಪ್ರಸ್ತಾವನೆಯನ್ನು ಸರಕಾರದ ತುತ್ತತುದಿಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದರು. ಅದಲ್ಲದೇ ತನ್ನದೇ ಪಕ್ಷ ಅಧಿಕಾರದಲ್ಲಿದ್ದರೂ ಆರೋಗ್ಯ ಸಚಿವರು, ಉಪ ಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಯಾವುದೇ ಮುಲಾಜಿಲ್ಲದೇ ಒತ್ತಡ ಹಾಕುವ ಕಾರ್ಯ ಮಾಡಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಪುತ್ತೂರಿನಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ತುಂಬಿದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಒತ್ತಡ ಹಾಕುವ ಕಾರ್ಯ ಮಾಡಿಸಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಭಿಕರು ‘ವಿ ವಾಂಟ್ ಮೆಡಿಕಲ್ ಕಾಲೇಜ್’ ಎಂಬ ಘೋಷಣೆ ಕೂಗುವ ಮೂಲಕ ವೈದ್ಯಕೀಯ ಕಾಲೇಜಿನ ಅಗತ್ಯತೆಯನ್ನು ಉಪ ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿದರು.
ಒಂದು ವೇಳೆ ನಿರೀಕ್ಷೆಯಂತೆ ನಾಳೆಯ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜ್ ಮಂಜೂರಾದರೆ, ಕ್ರೆಡಿಟ್ ನ ದೊಡ್ಡ ಪಾಲು ಅಶೋಕ್ ರೈಯವರಿಗೆ ಸಿಗಲಿದೆ. ಇದರ ಜತೆಗೆ ತನ್ನ ಶಾಸಕತ್ವದ ಅವಧಿಯಲ್ಲಿ ಸೇಡಿಯಾಪಿನಲ್ಲಿ 40 ಎಕ್ರೆ ಜಮೀನು ಮಂಜೂರು ಮಾಡಿದ್ದ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಹಾಗೂ 3 ವರ್ಷಗಳ ಹಿಂದೆ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿಯ ನೇತೃತ್ವ ವಹಿಸಿ ಅದನ್ನು ಜನಮಾನಸಕ್ಕೆ ತಲುಪಿಸುವ ಮೂಲಕ ಜನರಲ್ಲಿ ಕಾಲೇಜಿನ ಕಿಚ್ಚು ಹಚಿಸಿದ ಎಂಬಿ ವಿಶ್ವನಾಥ ರೈ, ಅಣ್ಣಾ ವಿನಯಚಂದ್ರ, ಅಮಳ ರಾಮಚಂದ್ರ ಮುಂತಾದವರಿಗೆ ಸಲ್ಲಲಿದೆ.
ಈತನಕ ಏನೇನು ಆಯಿತು..?
• ಮಂಗಳೂರನ್ನು ಹೊರತುಪಡಿಸಿದರೆ ಜಿಲ್ಲೆಯ ಇತರ ಭಾಗಕ್ಕೆ ಪುತ್ತೂರು ಪ್ರಮುಖ ಕೇಂದ್ರವಾದ ಕಾರಣ ಇಲ್ಲಿಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ 10 ವರ್ಷಗಳ ಹಿಂದೆ ಹುಟ್ಟಿತು.
• ಶಕುಂತಳಾ ಶೆಟ್ಟಿ ಶಾಸಕರಾಗಿದ್ದಾಗ 40 ಎಕರೆ ಸರಕಾರಿ ಜಾಗವನ್ನು ಸರಕಾರಿ ಮೆಡಿಕಲ್ ಕಾಲೇಜು ಹೆಸರಿಗೆ ಮೀಸಲಿಡಲಾಯಿತು. ಸದ್ಯಕ್ಕೆ ರಾಜ್ಯದ ಯಾವ ಜಿಲ್ಲೆಯಲ್ಲೂ ಇಷ್ಟೊಂದು ಪ್ರಮಾಣದ ಜಾಗ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟಿಲ್ಲ ಎನ್ನುತ್ತಾರೆ ಹೋರಾಟಗಾರರು.
• ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಅನೇಕ ಹಂತದ ಅಭಿಯಾನ ನಡೆಸಿದೆ. ವಿಚಾರ ಸಂಕಿರಣ, ಸಭೆ, ಸಹಿ ಸಂಗ್ರಹ, ಕರಪತ್ರ ಹಂಚಿಕೆ, ಮೆರವಣಿಗೆ ಇತ್ಯಾದಿ ನಡೆಸಲಾಗಿದೆ.
• ಅಶೋಕ್ ರೈ ಶಾಸಕರಾದ ಮೇಲೆ ಈ ನಿಟ್ಟಿನಲ್ಲಿ ಅನೇಕ ಬಾರಿ ಸಿಎಂ, ಡಿಸಿಎಂ ಮತ್ತು ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹೋರಾಟ ಸಮಿತಿಯ ನಿಯೋಗವೂ ಸಿಎಂ ಭೇಟಿ ಮಾಡಿ ಚರ್ಚಿಸಿದೆ.
ಬಳಕೆದಾರರ ಹಿತರಕ್ಷಣಾ ವೇದಿಕೆ ಪುತ್ತೂರು ಹಾಗೂ ಇತರ ಸಂಘಟನೆ ನೇತೃತ್ವದಲ್ಲಿ 2014-15ನೇ ಸಾಲಿನಲ್ಲಿ ಮೆಡಿಕಲ್ ಕಾಲೇಜು ಬೇಡಿಕೆಯ ಅಭಿಯಾನಕ್ಕೆ ಚಾಲನೆ ನೀಡಿತ್ತು. ಪ್ರತಿ ಪಂಚಾಯಿತಿ, ಸಂಘಟನೆಗಳಲ್ಲಿ ನಿರ್ಣಯ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲು ಕೇಳಿಕೊಂಡಿತ್ತು. ಶಕುಂತಳಾ ಟಿ. ಶೆಟ್ಟಿ ಶಾಸಕರಾಗಿದ್ದ ಸಂದರ್ಭದಲ್ಲಿ ನಿವೇಶನ ಕಾಯ್ದಿರಿಸಿ, ಪಹಣಿ ಮಾಡುವ ಕೆಲಸವಾಗಿತ್ತು.
ಆ ಬಳಿಕ ಬಂದ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿಯನ್ನು ವಹಿಸದ ಕಾರಣದಿಂದ ಎಂಬಿ ವಿಶ್ವನಾಥ ರೈಗಳ ಅಧ್ಯಕ್ಷತೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ರಚಿಸಲಾಗಿತ್ತು. ಇದರಲ್ಲಿ ಪಕ್ಷಾತೀತವಾಗಿ ಸಮಾನ ಮನಸ್ಕರನ್ನು ಒಟ್ಟು ಸೇರಿಸಿ ಅಭಿಯಾನ ಚಳುವಳಿ ನಡೆಸಲಾಯಿತು. ಹೋರಾಟ ಸಮಿತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆದು ಸುಮಾರು 5 ಸಾವಿರಕ್ಕೂ ಅಧಿಕ ಜನರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸಿದ್ದರು.
ಬಜೆಟ್ ಗೂ ಮುನ್ನ ಬೇಟಿ..!
ಪುತ್ತೂರಿನಿಂದ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಪದಾಧಿಕಾರಿಗಳು ಗುರುವಾರ ರಾತ್ರಿ ಬೆಂಗಳೂರಿಗೆ ತೆರಳಿದ್ದು, ಶುಕ್ರವಾರ 10 ಗಂಟೆಗೆ ಮುಖ್ಯ ಮಂತ್ರಿಗಳ ಭೇಟಿಯಾಗುವ ಸಾಧ್ಯತೆಯಿದೆ.
ಬಿಗ್ ನ್ಯೂಸ್
Puttur Dasara-92ನೇ ವರ್ಷದ ಶಾರದೋತ್ಸವಕ್ಕೆ ಹೊಸ ರೂಪ; ‘ಪುತ್ತೂರು ದಸರಾ’ ನಾಮಾಂಕಿತದಲ್ಲಿ ನವರಾತ್ರಿಯ ವೈಭವದ ಆಚರಣೆ
ಮೈಸೂರು, ಮಡಿಕೇರಿ ಹಾಗೂ ಕುದ್ರೋಳಿಯಂತೆ ಪುತ್ತೂರಿನಲ್ಲೂ ಹಿಂದೆ ವೈಭವದಿಂದ ದಸರಾ ಉತ್ಸವಗಳು ನಡೆಯುತ್ತಿದ್ದವು. ಕಾಲಕ್ರಮೇಣ ಆ ಪರಂಪರೆಯ ವೈಭವ ಕಡಿಮೆಯಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ಪರಂಪರೆಯನ್ನು ಮರುಕಳಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಮತ್ತಷ್ಟು ವಿಶಾಲ ರೂಪ ನೀಡುವ ಉದ್ದೇಶದಿಂದ ಈ ವರ್ಷದಿಂದ ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಪುತ್ತೂರು: ಮೈಸೂರು, ಮಡಿಕೇರಿ ಹಾಗೂ ಕುದ್ರೋಳಿಯಂತೆ ಪುತ್ತೂರಿನಲ್ಲೂ ಹಿಂದೆ ವೈಭವದಿಂದ ದಸರಾ ಉತ್ಸವಗಳು ನಡೆಯುತ್ತಿದ್ದವು. ಕಾಲಕ್ರಮೇಣ ಆ ಪರಂಪರೆಯ ವೈಭವ ಕಡಿಮೆಯಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ಪರಂಪರೆಯನ್ನು ಮರುಕಳಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಮತ್ತಷ್ಟು ವಿಶಾಲ ರೂಪ ನೀಡುವ ಉದ್ದೇಶದಿಂದ ಈ ವರ್ಷದಿಂದ ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.11ರಿಂದ 21ರವರೆಗೆ 92ನೇ ವರ್ಷದ ನವರಾತ್ರಿ ಪೂಜೆ ಹಾಗೂ ಶ್ರೀ ಶಾರದೋತ್ಸವ ವೈಭವದಿಂದ ನಡೆಯಲಿದೆ.
ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.21ರಂದು 20ಕ್ಕೂ ಅಧಿಕ ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಿವಿಧ ವಾದ್ಯಘೋಷಗಳೊಂದಿಗೆ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಇದರೊಂದಿಗೆ ‘ಪುತ್ತೂರು ದಸರಾ’ ಸಂಪನ್ನಗೊಳ್ಳಲಿದೆ.
ದಸರಾ ಪರಂಪರೆಗೆ ಹೊಸ ರೂಪ
ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಮಾತನಾಡಿ, ಹಲವು ಪವಾಡಗಳಿಗೆ ಸಾಕ್ಷಿಯಾಗಿರುವ ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಕಳೆದ ಮೂರು ವರ್ಷಗಳಿಂದ ಶಾರದೋತ್ಸವವನ್ನು ಗತಕಾಲದ ವೈಭವವನ್ನು ಮರುಕಳಿಸುವ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದರು.
ಈ ಬಾರಿ ಶಾರದೋತ್ಸವಕ್ಕೆ ‘ಪುತ್ತೂರು ದಸರಾ’ ಎಂಬ ನಾಮಾಂಕಿತ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಪುತ್ತೂರು ತಾಲೂಕಿನ ದಸರಾ ಮಹೋತ್ಸವವಾಗಿ ರೂಪಿಸುವ ಉದ್ದೇಶವಿದೆ. ಈ ಕುರಿತು ಮೂರು ವರ್ಷಗಳ ಹಿಂದೆಯೇ ಸಮಿತಿಯಲ್ಲಿ ಚಿಂತನೆ ನಡೆದಿತ್ತು ಎಂದು ಅವರು ತಿಳಿಸಿದರು.
ಪುತ್ತೂರಿನಲ್ಲೇ ದಸರಾ ವೈಭವ
ಹಿಂದೆ ದಸರಾ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳಲು ಪುತ್ತೂರಿನ ಜನರು ಮಂಗಳೂರು ಹಾಗೂ ಮಡಿಕೇರಿಗೆ ತೆರಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಪುತ್ತೂರು ಶಾರದೆಯ ವೈಭವದ ಶೋಭಾಯಾತ್ರೆ ಜನರ ಗಮನ ಸೆಳೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೊಸತನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಸೀತಾರಾಮ ರೈ ಹೇಳಿದರು.
ಪುತ್ತೂರಿನಲ್ಲೇ ಜನರು ದಸರಾ ವೈಭವವನ್ನು ಕಣ್ತುಂಬಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಶಾರದೋತ್ಸವಕ್ಕೆ ‘ಪುತ್ತೂರು ದಸರಾ’ ಎಂಬ ವಿಶಾಲ ರೂಪ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದು ಪುತ್ತೂರು ತಾಲೂಕಿನ ಜನತೆಯ ದಸರಾ ಮಹೋತ್ಸವವಾಗಿ ಬೆಳೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹತ್ತು ದಿನ ಧಾರ್ಮಿಕ-ಸಾಂಸ್ಕೃತಿಕ ಸಂಭ್ರಮ
ಅ.11ರಿಂದ ಆರಂಭವಾಗುವ ಉತ್ಸವದಲ್ಲಿ ನವರಾತ್ರಿ ಪೂಜೆ, ಶ್ರೀ ಶಾರದಾ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಚಂಡಿಕಾ ಹೋಮ ಸೇರಿದಂತೆ ವಿಶೇಷ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರು ಹಾಗೂ ಸಾರ್ವಜನಿಕರನ್ನು ರಂಜಿಸಲಿವೆ.
ಅ.21ರಂದು ನಡೆಯುವ ಸಮಾರೋಪದಂದು 20ಕ್ಕೂ ಅಧಿಕ ಪ್ರಸಿದ್ಧ ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಿವಿಧ ವಾದ್ಯಘೋಷಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ. ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯೊಂದಿಗೆ ಈ ಬಾರಿಯ ‘ಪುತ್ತೂರು ದಸರಾ’ ವೈಭವಕ್ಕೆ ತೆರೆ ಬೀಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ದಸರಾ ಸಮಿತಿಯ ಗೌರವ ಮಾರ್ಗದರ್ಶಕ ಡಾ. ಸುರೇಶ್ ಪುತ್ತೂರಾಯ, ಉಪಾಧ್ಯಕ್ಷ ದಯಾನಂದ ಪಿ., ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ವಸಂತ್ ಕುಮಾರ್ ಹಾಗೂ ಶೋಭಾಯಾತ್ರೆಯ ಸಂಚಾಲಕರಾದ ಕೃಷ್ಣ ಎಂ. ಅಳಿಕೆ ಮತ್ತು ನವೀನ್ ಕುಲಾಲ್ ಪುತ್ತೂರು ಉಪಸ್ಥಿತರಿದ್ದರು.
ಸ್ಥಳೀಯ
Manila-ಮಾಣಿಲದಲ್ಲಿ ಸ್ವಯಂಪ್ರೇರಿತ ಶ್ರಮದಾನ
ಮಾಣಿಲ ಗ್ರಾಮದ ಮುರುವ ಕೊಮ್ಮುಂಜೆ ರಸ್ತೆಯಲ್ಲಿ ಮುರುವ ಬಸ್ ನಿಲ್ದಾಣದಿಂದ ಅಂಗನವಾಡಿ ಬಳಿವರೆಗೆ ”ಸ್ವಚ್ಛತೆಯೇ ಸೇವೆ-2026” ಅಭಿಯಾನದಡಿ ಗುರುವಾರದಂದು ಸ್ವಯಂಪ್ರೇರಿತ ಶ್ರಮದಾನ ಕಾರ್ಯಕ್ರಮ ನಡೆಯಿತು.
ಮಾಣಿಲ : ಮಾಣಿಲ ಗ್ರಾಮದ ಮುರುವ ಕೊಮ್ಮುಂಜೆ ರಸ್ತೆಯಲ್ಲಿ ಮುರುವ ಬಸ್ ನಿಲ್ದಾಣದಿಂದ ಅಂಗನವಾಡಿ ಬಳಿವರೆಗೆ ”ಸ್ವಚ್ಛತೆಯೇ ಸೇವೆ-2026” ಅಭಿಯಾನದಡಿ ಗುರುವಾರದಂದು ಸ್ವಯಂಪ್ರೇರಿತ ಶ್ರಮದಾನ ಕಾರ್ಯಕ್ರಮ ನಡೆಯಿತು.
ಶ್ರಮದಾನದಲ್ಲಿ ಗ್ರಾಮಸ್ಥರಾದ ಚಂದ್ರಶೇಖರ ರಾವ್ ಕೊಮ್ಮುಂಜೆ, ರಾಜಾರಾಮ ನಾಯಕ್ ಮುರುವ, ಬಾಬು ಮೂಲ್ಯ ಮುರುವ, ಭರತ್ ಕುಮಾರ್ ಬೈಕುಂಜ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ ಕಮ್ಮಜೆ, ಗ್ರಾ.ಪಂ ಕಾರ್ಯದರ್ಶಿ ರಾಮ ನಾಯ್ಕ ಎಮ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಜಗದೀಶ್ ನಾಯಕ್, ಭವಾನಿ.ಪಿ, ಮಮತಾ ಎಸ್, ಅವಿನಾಶ್ ಯಂ, ನೇತ್ರಾವತಿ ಒಕ್ಕೂಟದ ಪೂರ್ಣಿಮ ಬಿ, ಕೃಷಿ ಸಖಿ ಪಾರ್ವತಿ, ಪಶು ಸಖಿ ಬಾಲಮಣಿ, ದಿಶಾ ಕೊಂದಲಕೋಡಿ ಭಾಗವಹಿಸಿದರು.
ಬಿಗ್ ನ್ಯೂಸ್
Master Anand-ಕಾರಂತರ ಬಾಲವನ ಪ್ರಶಸ್ತಿಗೆ ಆಯ್ಕೆಯಾದ ಮಾಸ್ಟರ್ ಪ್ಲಾನರಿಯ ಮಾಸ್ಟರ್ ಆನಂದ್
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ಕ್ಕೆ ಪುತ್ತೂರಿನ ಶ್ರೇಷ್ಠ ಸಿವಿಲ್ ಇಂಜಿನಿಯರಿಂಗ್ ಸಾಧಕ ಹಾಗೂ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಮುಖ್ಯಸ್ಥ ಎಸ್.ಕೆ. ಆನಂದ್ ಆಯ್ಕೆಯಾಗಿದ್ದಾರೆ.
ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ಕ್ಕೆ ಪುತ್ತೂರಿನ ಶ್ರೇಷ್ಠ ಸಿವಿಲ್ ಇಂಜಿನಿಯರಿಂಗ್ ಸಾಧಕ ಹಾಗೂ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಮುಖ್ಯಸ್ಥ ಎಸ್.ಕೆ. ಆನಂದ್ ಆಯ್ಕೆಯಾಗಿದ್ದಾರೆ.
ವೈಜ್ಞಾನಿಕ ಮನೋಭಾವ, ಪರಿಸರ ಕಾಳಜಿ ಹಾಗೂ ಸುಸ್ಥಿರ ಜೀವನಶೈಲಿಯನ್ನು ತಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡಿರುವ ಎಸ್.ಕೆ. ಆನಂದ್ ಅವರು, ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೂಲಕ ಮರಕ್ಕೆ ಪರ್ಯಾಯವಾದ ‘ಕಾಂಕೂಡ್’ (Concood™) ಎಂಬ ಉತ್ಪನ್ನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆವಿಷ್ಕಾರದ ಮೂಲಕ ಕಳೆದ ಹಲವು ದಶಕಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮರಮುಟ್ಟುಗಳ ಬಳಕೆಯನ್ನು ತಪ್ಪಿಸಿ, ಲಕ್ಷಾಂತರ ಮರಗಳನ್ನು ಕೊಡಲಿಗೆ ಬಲಿಯಾಗದಂತೆ ಸಂರಕ್ಷಿಸಿದ ಸಾಧನೆ ಅವರದ್ದಾಗಿದೆ.
1951ರಲ್ಲಿ ಪುತ್ತೂರಿನಲ್ಲಿ ಜನಿಸಿದ ಎಸ್.ಕೆ. ಆನಂದ್ ಅವರು ದಿವಂಗತ ಎಸ್.ಕೆ. ಈಶ್ವರ ಭಟ್ ಹಾಗೂ ಶಾರದಾ ಭಟ್ ದಂಪತಿಯ ಪುತ್ರ. ಮಂಗಳೂರಿನ ಕೆ.ಆರ್.ಇ.ಸಿ. (ಪ್ರಸ್ತುತ NITK, ಸುರತ್ಕಲ್)ಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಹಾಗೂ ಎಂ.ಟೆಕ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದ ಅವರು, 1975ರಲ್ಲಿ ತಂದೆಯವರು ಸ್ಥಾಪಿಸಿದ್ದ ‘ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡರು. ಉನ್ನತ ಅವಕಾಶಗಳಿದ್ದರೂ ದೊಡ್ಡ ನಗರಗಳತ್ತ ತೆರಳದೆ ಪುತ್ತೂರಿನಲ್ಲೇ ನೆಲೆಸಿ, ಸುಸ್ಥಿರ ನಿರ್ಮಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
‘ಕಾಂಕೂಡ್’ ಮೂಲಕ ಮರಕ್ಕೆ ಪರ್ಯಾಯ
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮನೆ, ಕಚೇರಿ, ಶಾಲಾ-ಕಾಲೇಜುಗಳ ನಿರ್ಮಾಣಕ್ಕೆ ದಾರಂದ, ಕಿಟಕಿ, ಮೇಲ್ಛಾವಣಿಯ ತೊಲೆ, ಬೆಂಚ್-ಡೆಸ್ಕ್ ಸೇರಿದಂತೆ ವಿವಿಧ ಕಾರ್ಯಗಳಿಗೆ ಅಪಾರ ಪ್ರಮಾಣದ ಮರಮುಟ್ಟುಗಳನ್ನು ಬಳಸಲಾಗುತ್ತಿತ್ತು. ಈ ಸಮಸ್ಯೆಗೆ ಪರಿಸರಸ್ನೇಹಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆನಂದ್ ಅವರು ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಕುರಿತು ಸುದೀರ್ಘ ಸಂಶೋಧನೆ ನಡೆಸಿ, ಮರದ ಬಲಕ್ಕೆ ಪರ್ಯಾಯವಾಗಬಲ್ಲ ಕಾಂಕ್ರೀಟ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದರು.
‘ಕಾಂಕೂಡ್’ ಹೆಸರಿನ ಈ ಉತ್ಪನ್ನಗಳಿಗೆ 2007ರಲ್ಲಿ ಭಾರತ ಸರ್ಕಾರದಿಂದ ಅಧಿಕೃತ ಟ್ರೇಡ್‌ಮಾರ್ಕ್ ನೋಂದಣಿಯೂ ದೊರೆತಿದೆ. ಇಂದು ವಿವಿಧ ಅಗತ್ಯಗಳಿಗೆ ಬಳಸಬಹುದಾದ 250ಕ್ಕೂ ಅಧಿಕ ಕಾಂಕ್ರೀಟ್ ಪರಿಕರಗಳು ‘ಮಾಸ್ಟರ್ ಪ್ಲಾನರಿ’ಯಲ್ಲಿ ಲಭ್ಯವಿವೆ.
36.5 ಲಕ್ಷಕ್ಕೂ ಅಧಿಕ ಮರಗಳ ಸಂರಕ್ಷಣೆ
‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಲ್ಲಿ ಪ್ರತಿದಿನ ಸರಾಸರಿ 200 CFTಗೂ ಅಧಿಕ ಕಾಂಕ್ರೀಟ್ ಪರಿಕರಗಳನ್ನು ಉತ್ಪಾದಿಸಲಾಗುತ್ತಿದ್ದು, ಈ ಪರಿಕರಗಳ ಬಳಕೆಯಿಂದ ಪ್ರತಿದಿನ ಸರಾಸರಿ 20 ಬೃಹತ್ ಮರಗಳು ಕಡಿಯುವುದನ್ನು ತಪ್ಪಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಕಳೆದ 50 ವರ್ಷಗಳ ಈ ಸೇವೆಯ ಲೆಕ್ಕಾಚಾರದಂತೆ, ಇದುವರೆಗೆ ಸುಮಾರು 36.5 ಲಕ್ಷಕ್ಕೂ ಅಧಿಕ ಬೃಹತ್ ಮರಗಳು ಕೊಡಲಿಗೆ ಬಲಿಯಾಗುವುದನ್ನು ತಪ್ಪಿಸಿ ಸಂರಕ್ಷಿಸಲಾಗಿದೆ. ಶಾಲಾ-ಕಾಲೇಜುಗಳು, ಸರ್ಕಾರಿ ಸಂಸ್ಥೆಗಳು ಸೇರಿದಂತೆ ಹಲವು ಕಡೆಗಳಲ್ಲಿ ಮರದ ಪರ್ಯಾಯವಾಗಿ ‘ಕಾಂಕೂಡ್’ ಉತ್ಪನ್ನಗಳನ್ನು ಬಳಸಲಾಗುತ್ತಿದೆ.
ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರು ದೇಶಾದ್ಯಂತ ನಿರ್ಮಿಸಿರುವ 30ಕ್ಕೂ ಅಧಿಕ ತೂಗು ಸೇತುವೆಗಳಲ್ಲೂ ಮರದ ಹಲಗೆಗಳ ಬದಲಿಗೆ ‘ಕಾಂಕೂಡ್’ ಪರಿಕರಗಳನ್ನು ಬಳಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಅರಣ್ಯ ಇಲಾಖೆ ಸೇರಿದಂತೆ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲೂ ಈ ತಂತ್ರಜ್ಞಾನ ಬಳಕೆಯಾಗಿದೆ.
50 ಎಕರೆಗೂ ಅಧಿಕ ಹಸಿರು ಕಾಡು
ಮರಗಳ ಸಂರಕ್ಷಣೆಯ ಜತೆಗೆ ವೈಯಕ್ತಿಕವಾಗಿಯೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವ ಎಸ್.ಕೆ. ಆನಂದ್ ಅವರು ಸೊರಕೆ ಹಾಗೂ ಕುಡಿಪಾಡಿಯಲ್ಲಿ ‘ಕುಡಿಕಾಡು’ ಹೆಸರಿನಲ್ಲಿ 50 ಎಕರೆಗೂ ಅಧಿಕ ಪ್ರದೇಶದಲ್ಲಿ ಸಾವಿರಾರು ಗಿಡ-ಮರಗಳನ್ನು ಬೆಳೆಸಿ ಹಸಿರು ಕಾಡು ನಿರ್ಮಿಸಿದ್ದಾರೆ.
‘ಮಾಸ್ಟರ್ ಪ್ಲಾನರಿ’ ಸಂಸ್ಥೆಯಡಿ 9 ಕೇಂದ್ರಗಳಲ್ಲಿ 24 ಸಂಸ್ಥೆಗಳ ಮೂಲಕ 800ಕ್ಕೂ ಅಧಿಕ ಮಂದಿಗೆ ನೇರ ಉದ್ಯೋಗ ಕಲ್ಪಿಸಲಾಗಿದೆ. ಇವರಲ್ಲಿ 200ಕ್ಕೂ ಅಧಿಕ ಮಹಿಳೆಯರು ಹಾಗೂ 20ಕ್ಕೂ ಅಧಿಕ ಭಿನ್ನಸಾಮರ್ಥ್ಯ ಹೊಂದಿರುವವರು ಸೇರಿದ್ದಾರೆ. ಪರೋಕ್ಷವಾಗಿ 3,000ಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಿರುವುದಾಗಿ ತಿಳಿಸಲಾಗಿದೆ.
ಸಂಸ್ಥೆಯ ಸಿಬ್ಬಂದಿಯ ಮಕ್ಕಳ ಆರೈಕೆ ಹಾಗೂ ಶಿಕ್ಷಣಕ್ಕಾಗಿ ಆವರಣದಲ್ಲೇ ಅಂಗನವಾಡಿ ಮಾದರಿಯ ಪ್ಲೇ ಸ್ಕೂಲ್ ಆರಂಭಿಸಿರುವುದು ಅವರ ಸಾಮಾಜಿಕ ಕಾಳಜಿಗೆ ಮತ್ತೊಂದು ಉದಾಹರಣೆಯಾಗಿದೆ.
ಚಾಮರಾಜನಗರ ಹಾಗೂ ನಾಗರಹೊಳೆ ಭಾಗದ ಅರಣ್ಯವಾಸಿ ಗಿರಿಜನರಿಗೆ 8,000ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿರುವ ಅವರು, ಸುಳ್ಯದಲ್ಲಿ ಕಳೆದ 20 ವರ್ಷಗಳಿಂದ ‘ಸ್ನೇಹ ಶಿಕ್ಷಣ ಸಂಸ್ಥೆ’ ಮೂಲಕ ಗ್ರಾಮೀಣ ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣ ನೀಡುತ್ತಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಆನಂದ್ ಅವರು ‘ಭಾವಲೋಕ’ ಎಂಬ ಕವನ ಸಂಕಲನ ಸೇರಿದಂತೆ ಹಲವು ಭಾವಗೀತೆಗಳನ್ನು ರಚಿಸಿ ಪ್ರಕಟಿಸಿದ್ದಾರೆ.
ಎಸ್.ಕೆ. ಆನಂದ್ ಹಾಗೂ ರೇಖಾ ಆನಂದ್ ದಂಪತಿಯ ನಾಲ್ವರು ಮಕ್ಕಳಾದ ಅಕ್ಷಯ್, ಅರ್ಜುನ್, ಆಕಾಶ್ ಹಾಗೂ ಆರತಿ ಅವರು ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಕುಟುಂಬದ ಸುಸ್ಥಿರ ಹಾಗೂ ಪರಿಸರಸ್ನೇಹಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಹಲವು ಪ್ರಶಸ್ತಿಗಳ ಗರಿ
ಪರಿಸರ ಸೇವೆಗಾಗಿ 2003ರಲ್ಲಿ ‘ಪರಿಸರಪ್ರೇಮಿ’ ಪ್ರಶಸ್ತಿ, 2008ರಲ್ಲಿ ICI ವತಿಯಿಂದ ‘ಕರ್ನಾಟಕದ ಅತ್ಯುತ್ತಮ ಕಾಂಕ್ರೀಟ್ ಇಂಜಿನಿಯರ್’ ಪ್ರಶಸ್ತಿ ಸೇರಿದಂತೆ ರಾಷ್ಟ್ರೀಯ ಜೆಸಿಐ ‘TOBIP’ ಹಾಗೂ ACCE-UltraTech ಪ್ರಶಸ್ತಿಗಳು ಎಸ್.ಕೆ. ಆನಂದ್ ಅವರಿಗೆ ಸಂದಿವೆ.
ಬಾಲವನ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ, ಉಪವಿಭಾಗಾಧಿಕಾರಿ ಹಾಗೂ ಬಾಲವನ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಸ್ಟೆಲ್ಲಾ ವರ್ಗೀಸ್, ತಾಲೂಕು ಕಸಾಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿಗಳಾದ ವಿ.ಬಿ. ಆರ್ತಿಕಜೆ ಹಾಗೂ ರೆ. ವಿಜಯ್ ಹಾರ್ವಿನ್ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಎಸ್.ಕೆ. ಆನಂದ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಅಕ್ಟೋಬರ್ 10, 2026ರಂದು ಪುತ್ತೂರಿನ ಐತಿಹಾಸಿಕ ಬಾಲವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ ಪ್ರದಾನ ಮಾಡಿ ಎಸ್.ಕೆ. ಆನಂದ್ ಅವರನ್ನು ಗೌರವಿಸಲಾಗುವುದು.
-
Uncategorized22 hours ago
ಚಿನ್ನಾಭರಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನ ಸರಾಫ ಮುಳಿಯ ಶ್ಯಾಮ ಭಟ್ ಇನ್ನಿಲ್ಲ
-
ದಕ್ಷಿಣ ಕನ್ನಡ24 hours ago
Raod Accident : ಮಂತ್ರಾಲಯ ಯಾತ್ರೆ ವೇಳೆ ಬಣಕಲ್ ನಲ್ಲಿ ಭೀಕರ ಅಪಘಾತ: ಗಂಭೀರ ಗಾಯಗೊಂಡಿದ್ದ ಶಿಶಿಲದ ಯುವಕ ಸಾವು
-
ಬಿಗ್ ನ್ಯೂಸ್10 hours agoBantwal-Big Breaking-ದ.ಕ. ಜಿಲ್ಲೆಯಲ್ಲಿ ಗುಡುಗು-ಮಿಂಚಿನ ಮಳೆ: ಸಿಡಿಲು ಬಡಿದು ಮನೆ ಜಖಂ-ಮಹಿಳೆ ಅಸ್ವಸ್ಥ
-
ನಿಧನ ವಾರ್ತೆ5 hours agoUppinangadi-ಉಪ್ಪಿನಂಗಡಿ: ಸೇತುವೆ ಮೇಲೆ ಬೈಕ್, ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ
-
ಅಪರಾಧ11 hours agoPuttur-ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ 11 ಗೋವುಗಳ ಸಾಗಾಟ; ವಾಹನ ಪತ್ತೆ, ಇಬ್ಬರು ಪರಾರಿ
-
ಅಂತರ ರಾಜ್ಯ9 hours agoMurder-ಆಸ್ತಿಗಾಗಿ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
-
ಸ್ಥಳೀಯ10 hours agoCrop insurance-ಬೆಳೆ ವಿಮೆಯಲ್ಲಿ ಭಾರೀ ಇಳಿಕೆ – ದ.ಕ. ಜಿಲ್ಲೆಯ ಅಡಿಕೆ, ಕಾಳುಮೆಣಸು ಬೆಳೆಗಾರರು ಶಾಕ್..!; ಬೇಗನೆ ಜಮೆಯಾದರೂ ಪರಿಹಾರ ಮೊತ್ತದಲ್ಲಿ ಭಾರೀ ಇಳಿಕೆ; ಲೆಕ್ಕಾಚಾರ ಬಹಿರಂಗಕ್ಕೆ ಆಗ್ರಹ
-
ನಿಧನ ವಾರ್ತೆ8 hours agoAccident-ಹುತಾತ್ಮ ಸೈನಿಕನ ಮೃತದೇಹ ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅಪಘಾತ: ಸೈನಿಕನ ಮಗ, ಸಹೋದರ ಸೇರಿ ನಾಲ್ವರು ಸಾವು


















