Connect with us

ಬಿಗ್ ನ್ಯೂಸ್

Puttur-ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ 20 ವರ್ಷಗಳ ನಂತರ ಚಿನ್ನ ಗೆದ್ದ ಕೋಣ : ಗೆದ್ದ 2 ಪವನ್ ಚಿನ್ನದಲ್ಲಿ ಅರ್ಧ ಭಾಗ ದೇವರಿಗೆ ಸಮರ್ಪಣೆ

Published

on

Ad Widget

Ad Widget

Ad Widget

Ad Widget

ಪುತ್ತೂರಿನಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 2 ‍ಪವನ್‌ ಚಿನ್ನ ಗೆದ್ದ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರು, 1 ಪವನ್ ಚಿನ್ನವನ್ನು ಪುತ್ತೂರಿನ ಮಹಾಲಿಂಗೇಶ್ವರ ದೇವರಿಗೆ ಸೋಮವಾರದಂದು ಸಮರ್ಪಿಸಿದರು.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರಿನಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 2 ‍ಪವನ್‌ ಚಿನ್ನ ಗೆದ್ದ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರು, 1 ಪವನ್ ಚಿನ್ನವನ್ನು ಪುತ್ತೂರಿನ ಮಹಾಲಿಂಗೇಶ್ವರ ದೇವರಿಗೆ ಸೋಮವಾರದಂದು ಸಮರ್ಪಿಸಿದರು.

Ad Widget

Ad Widget alt="Ad Widget"/>

Ad Widget

ಮಾಂಕು ಭಂಡಾರಿಯವರು ಚಿನ್ನ ಹಾಗೂ ದೇವಳದಲ್ಲಿ ನಡೆಯುವ ಅನ್ನದಾನ ಸೇವೆಗಾಗಿ ರೂ. 5ಸಾವಿರ ದೇಣಿಗೆಯನ್ನು ನೀಡಿದರು.

Ad Widget

Ad Widget <> Ad Widget

ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಈಶ್ವರ ಬೇಡೆಕರ್, ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ ಭಾಗವಹಿಸಿದ್ದರು.

ಪ್ರಾರ್ಥನೆಗೆ ಒಲಿದ ಮಹಾಲಿಂಗೇಶ್ವರ:
ಪುತ್ತೂರು ಕಂಬಳದಲ್ಲಿ ಕೋಣಗಳನ್ನು ಓಡಿಸುವ ಸಲುವಾಗಿ ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರು ಬಂದಿದ್ದರು. ಶನಿವಾರ ಕಂಬಳದ ಕರೆಯ ಬಳಿ ನಿಂತು ಅವರು ಚಿಂತಿಸುತ್ತಿದ್ದರು. ಈ ವೇಳೆ ಅವರು ನನ್ನಲ್ಲಿ, ಸುಮಾರು 20 ವರ್ಷದಿಂದ ಪುತ್ತೂರು ಕಂಬಳದಲ್ಲಿ ನನ್ನ ಕೋಣಗಳು ಸ್ಪರ್ಧೆ ಮಾಡುತ್ತಿವೆ. ಆದರೆ ಗೆಲ್ಲುವ ಹಂತದಲ್ಲೇ ಸೋಲಾಗುತ್ತಿದೆ. ನನ್ನಿಂದ ಏನಾದರೂ ತಪ್ಪಾಗಿದೆಯೇ? ದೇವರಿಗೆ ಏನಾದರೂ ಕೋಪ ಇದೆಯಾ? ಎಂದು ಪ್ರಶ್ನಿಸಿದರು. ನಾನು ಅವರನ್ನು ನೇರ ದೇವಳಕ್ಕೆ ಕರೆದುಕೊಂಡು ಹೋಗಿ ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿಸಿ ಶ್ರೀ ದೇವರಿಗೆ ಒಂದು ರುದ್ರಾಭಿಷೇಕ ಮತ್ತು ಅನ್ನದಾನ ಸೇವೆ ನೀಡುವಂತೆ ಹೇಳಿದೆ. ಅದರಂತೆ ಅವರು ಪ್ರಾರ್ಥನೆ ಮಾಡಿದ್ದರು. ಈ ಬಾರಿ ಅವರ ಕೋಣಗಳು ಪ್ರಥಮ ಸ್ಥಾನವನ್ನೂ ಗಳಿಸಿದೆ. – ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

Ad Widget

Ad Widget

ಮನಸ್ಸಿನಲ್ಲಂದುಕೊಂಡಂತೆ ಚಿನ್ನ ಸಮರ್ಪಣೆ:
ನಾವು ನಮ್ಮ ಅಜ್ಜನ ಕಾಲದಲ್ಲೇ ಕಂಬಳದ ಕೋಣಗಳನ್ನು ಓಡಿಸುತ್ತಿದ್ದೆವು. ನನ್ನ ಅಜ್ಜ 105 ವರ್ಷಗಳ ಕಾಲ ಬದುಕಿದ್ದರು. ಅವರ ಬಳಿಕ ನನ್ನ ತಂದೆ ಅದನ್ನು ಮುಂದುವರಿಸಿದರು. ನನ್ನ ತಂದೆಯ ಬಳಿಕ ಅಣ್ಣ, ತಮ್ಮಂದಿರು, ಅಕ್ಕತಂಗಿಯರು ಸೇರಿ ಮುಂದುವರಿಸಿ ಕಂಬಳ ಕೋಣಗಳನ್ನು ಓಡಿಸುವ ತಂದೆಯ ಆಸೆಯನ್ನು ಈಡೇರಿಸುವ ಕೆಲಸ ಮಾಡಿದೆವು. 1995ರಲ್ಲಿ ಎರಡು ಕೋಣ ಖರೀದಿಸಿದ್ದೆವು. 6 ವರ್ಷ ಪ್ರಥಮ, ದ್ವಿತೀಯ ಸ್ಥಾನ ಪಡೆಯುತ್ತಿತ್ತು.

ಉಡುಪಿ ಜಿಲ್ಲೆಯಲ್ಲಿ ನನ್ನ ತಂದೆಗೆ ಸನ್ಮಾನ ಮಾಡಲು ಸಿದ್ದತೆ ಆಗಿತ್ತು. ಆದರೆ ಅವರು ಅದಕ್ಕಿಂತ ಮೊದಲೇ ನಿಧನರಾದರು. ತಂದೆ ನಿಧನದ ವರ್ಷದಲ್ಲೇ ನನ್ನ ಹೆಸರಿನಲ್ಲಿ ನಮ್ಮ ಕೋಣ ಮೆಡಲ್ ಪಡೆದಿತ್ತು. ಆ ಬಳಿಕ ಸುಮಾರು 19 ವರ್ಷ ಆಯಿತು. ಪುತ್ತೂರಿನಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ಯೋಗ ಬರಲಿಲ್ಲ.

32ನೇ ವರ್ಷದ ಪುತ್ತೂರು ಕಂಬಳದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಮೊನ್ನೆ ಶನಿವಾರ ದಿವಸ ಬಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರಲ್ಲಿ ಮನಸಿನ ನೋವನ್ನು ತಿಳಿಸಿದೆ.

ಅವರು ತಿಳಿಸಿದಂತೆ ದೇವಳಲ್ಲಿ ಪ್ರಾರ್ಥನೆ ಮಾಡಿ ‘ನನ್ನಿಂದ ತಪ್ಪು ನಡೆದಿದ್ದರೆ ಅದನ್ನು ಕ್ಷಮಿಸಿ ಈ ಬಾರಿ ನಮ್ಮ ಕೋಣಗಳು ವಿಜಯಿಯಾಗುವಂತೆ ಬೇಡಿಕೊಂಡು ಶ್ರೀ ದೇವರಿಗೆ ರುದ್ರಾಭಿಷೇಕ, ಅನ್ನದಾನ ಸೇವೆ ಮಾಡಿಸುವ ನಿರ್ಧಾರ ಕೈಗೊಂಡೆ.

ಪ್ರಾರ್ಥನೆಗೆ ಒಲಿದ ದೇವರು ಪ್ರಥಮ ಬಹುಮಾನವನ್ನು ನೀಡಿದ್ದಾರೆ. ಪ್ರಾರ್ಥನೆಯ ಸಂದರ್ಭ ನನ್ನ ಮನಸ್ಸಿನಲ್ಲಿ ಅಂದುಕೊಂಡಂತೆ, ವಿಜಯ ಸ್ಥಾನಕ್ಕೆ ಲಭಿಸಿದ 2 ಪವನ್ ಚಿನ್ನದಲ್ಲಿ 1 ಪವನ್ ಚಿನ್ನವನ್ನು ದೇವಳಕ್ಕೆ ಸಮರ್ಪಣೆ ಮಾಡಿದ್ದೇನೆ. ಜೊತೆಗೆ ರುದ್ರಾಭಿಷೇಕ ಮತ್ತು ಅನ್ನದಾನ ಸೇವೆಯನ್ನೂ ಮಾಡಿಸಿದ್ದೇನೆ’ ಎಂದು ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ ಅವರು ತಿಳಿಸಿದ್ದಾರೆ.

Ad Widget
Click to comment

Leave a Reply

ಬಿಗ್ ನ್ಯೂಸ್

Muraleedhar Rai-ಮೆಸ್ಕಾಂ ನಿರ್ದೇಶಕರಾಗಿ ಮುರಳೀಧರ ರೈ ಮಠಂತಬೆಟ್ಟು ಸರ್ಕಾರದಿಂದ ನೇಮಕ

Published

on

Ad Widget

Ad Widget

Ad Widget

Ad Widget

ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ 81 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಪೈಕಿ ಮೆಸ್ಕಾಂ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಅವರು ನೇಮಕಗೊಂಡಿದ್ದಾರೆ.

Ad Widget

Ad Widget

Ad Widget

Ad Widget

ಉಪ್ಪಿನಂಗಡಿ: ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ 81 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಪೈಕಿ ಮೆಸ್ಕಾಂ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಅವರು ನೇಮಕಗೊಂಡಿದ್ದಾರೆ.

Ad Widget

Ad Widget alt="Ad Widget"/>

Ad Widget

ಕೋಡಿಂಬಾಡಿ ಮಠಂತಬೆಟ್ಟುವಿನ ಪ್ರತಿಷ್ಠಿತ ಬಂಟ ಕುಟುಂಬದ ಹಿರಿಯ ಕಾಂಗ್ರೆಸ್ ಮುಖಂಡ ಅನಂತ ರೈಯವರ ಪುತ್ರ ಮುರಳೀಧರ ರೈ ಮಠಂತಬೆಟ್ಟು ಅವರು ಹಿರಿಯರ ಕಾಲದಿಂದಲೇ ಕಾಂಗ್ರೆಸ್ ಕುಟುಂಬದಲ್ಲಿ ಬೆಳೆದು ಬಂದವರು.ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಸುಮಾರು ವರ್ಷಗಳ ಕಾಲ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಜನ ಸೇವೆ ಆರಂಭಿದ ಇವರು ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿರುವ ಮುರಳೀಧರ ರೈಯವರನ್ನು ಇದೀಗ ಕರ್ನಾಟಕ ಸರಕಾರ ಮೆಸ್ಕಾಂ ನಿರ್ದೇಶಕರಾಗಿ ನೇಮಕ ಮಾಡಿದೆ.

Ad Widget

Ad Widget <> Ad Widget

Ad Widget
Continue Reading

ಬಿಗ್ ನ್ಯೂಸ್

Shashikumar Bhat-ಶಶಿಕುಮಾರ್ ಭಟ್ ಪಡಾರು ಅವರಿಗೆ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿ

Published

on

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಗೋವಾ ರಾಜ್ಯ ತೋಟಗಾರಿಕೆ ನಿಗಮ ಹಾಗೂ ಕನ್ನಡ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ಗೋವಾ – ಕರ್ನಾಟಕ ಸಂಸ್ಥೆ ಕೊಡಮಾಡುವ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಗೋವಾ ರಾಜ್ಯ
ತೋಟಗಾರಿಕೆ ನಿಗಮ ಹಾಗೂ ಕನ್ನಡ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ಗೋವಾ – ಕರ್ನಾಟಕ ಸಂಸ್ಥೆ ಕೊಡಮಾಡುವ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Ad Widget

Ad Widget alt="Ad Widget"/>

Ad Widget

ಪುತ್ತೂರು ಕೇಂದ್ರಿತವಾಗಿ ಹಲವು ಕೃಷಿ ಸಂಬಂಧಿ ಸಮಾವೇಶಗಳನ್ನೂ ಆಯೋಜಿಸುತ್ತಿರುವ ಶಶಿಕುಮಾರ್ ಭಟ್ಪ ಡಾರು ಅವರು ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ, ತರಬೇತಿ, ಸಲಹೆ – ಮಾರ್ಗದರ್ಶನಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕೊಡಮಾಡಕಲಾಗುತ್ತಿದೆ. ಪ್ರಶಸ್ತಿ ಪ್ರದಾನ
ಸಮಾರಂಭ ನವೆಂಬರ್ 22ರಂದು ವಾಸ್ಕೋ ಗೋವಾದ ಬೈನಾದಲ್ಲಿನ ರವೀಂದ್ರ ಭವನದಲ್ಲಿ ನಡೆಯಲಿದೆ.

Ad Widget

Ad Widget <> Ad Widget

ಶಶಿಕುಮಾರ್ ಭಟ್ ಪಡಾರು ಅವರ ಸಾಧನೆಯ ಹಾದಿ:
ಕರಾವಳಿಯ ಜೀವನಾಡಿಯಾದ ಅಡಿಕೆ ಕೃಷಿ ಇಂದು ಹಳದಿ ಎಲೆ ರೋಗ, ಮಾರುಕಟ್ಟೆ ಅಸ್ಥಿರತೆ, ಹವಾಮಾನ ವೈಪರೀತ್ಯ, ಕೂಲಿ ಸಮಸ್ಯೆ ಮೊದಲಾದ ನಾನಾ ಸಂಕಷ್ಟಗಳಿಂದ ನಲುಗಿ ಹೋಗುತ್ತಿರುವ ಈ ಆಧುನಿಕ ದಿನಮಾನಗಳಲ್ಲಿ, ಕೃಷಿಕರಿಗೆ ಹೊಸ ದಾರಿ, ಹೊಸ ಸಾಧ್ಯತೆಯ ಬೆಳಕನ್ನು ತೋರಿಸಿದ ದೀಪಸ್ತಂಭ ಶಶಿಕುಮಾರ ಭಟ್ ಪಡಾರು.

ಕಾಳುಮೆಣಸಿನ ಕ್ರಾಂತಿಯ ಹರಿಕಾರ:
ಅಡಿಕೆಯೊಂದಿಗೆ ಕಾಳುಮೆಣಸು ಬೆಳೆದರೆ ರೈತನ ಆದಾಯ ದ್ವಿಗುಣವಾಗುತ್ತದೆ ಎಂಬ ಸತ್ಯವನ್ನು ಮನಗಂಡು, ಅದನ್ನು ಕೇವಲ ತಮ್ಮ ತೋಟಕ್ಕೆ ಸೀಮಿತಗೊಳಿಸದೆ ಸಾವಿರಾರು ರೈತರಿಗೆ
ಮನದಟ್ಟು ಮಾಡಿದವರು. ಕಾಳುಮೆಣಸು ಕೃಷಿಯ ಬಗ್ಗೆ ಮಾಹಿತಿ ವಿನಿಮಯಕ್ಕಾಗಿ ವಾಟ್ಸಾಪ್ ತಂಡಗಳನ್ನು ರಚಿಸಿ, ಸಾವಿರಾರು ಮಂದಿಯನ್ನು ಒಗ್ಗೂಡಿಸಿ, ಪ್ರತಿನಿತ್ಯ ತಳಿ ಆಯ್ಕೆ, ನಾಟಿ ವಿಧಾನ,
ರೋಗ ನಿರ್ವಹಣೆ, ಇಳುವರಿ ಹೆಚ್ಚಳದ ಬಗ್ಗೆ ಚರ್ಚಿಸಿ, ಅವರಲ್ಲಿ ಕಾಳುಮೆಣಸಿನ ಬಗೆಗೆ ಆಸಕ್ತಿ ಹಚ್ಚಿಸಿದ ಅಪರೂಪದ ಸಂಘಟಕರು. ಇಂದು ಕರಾವಳಿಯ ಸಾವಿರಾರು ಯುವ ರೈತರು ಅವರ ವಾಟ್ಸಾಪ್ ತಂಡಗಳಿಂದಲೇ ಕೃಷಿಗೆ ಮರಳಿದ್ದಾರೆ.

Ad Widget

Ad Widget

ಮನೆ ಬಾಗಿಲಿಗೆ ಕೃಷಿ ಸೇವೆ – ಕೇವಲ ಮಾರಾಟವಲ್ಲ ಬದ್ಧತೆ:
ಕೇವಲ ಪ್ರೇರಣೆ ನೀಡುವುದಕ್ಕೆ ಸೀಮಿತವಾಗದೆ, ಆಸಕ್ತ ಕೃಷಿಕರ ಮನೆ ಬಾಗಿಲಿಗೇ ಗುಣಮಟ್ಟದ, ರೋಗ ನಿರೋಧಕ ಶಕ್ತಿಯುಳ್ಳ ಕಾಳುಮೆಣಸಿನ ಗಿಡಗಳನ್ನು ತಲುಪಿಸುವುದು, ನಂತರ ತಜ್ಞರ ಮೂಲಕ ಬೆಳೆಸುವ ವೈಜ್ಞಾನಿಕ ವಿಧಾನವನ್ನು ತಿಳಿಸಿಕೊಡುವುದು ಮತ್ತು ಫಸಲು ಬರುವವರೆಗೂ ದೀರ್ಘಕಾಲಿಕ ಮಾರ್ಗದರ್ಶನ ನೀಡುವುದರ ಮೂಲಕ ಹೊಸಬರೂ ಧೈರ್ಯದಿಂದ ಕೃಷಿಗಿಳಿಯುವಂತೆ ಮಾಡಿದ್ದಾರೆ. ರೈತರು ಗಿಡಗಳಿಗೆ ಉಂಟಾದ ತೊಂದರೆಗೆ ಸಂಬಂಧಿಸಿದಂತೆ ಫೋಟೋ ಕಳುಹಿಸಿದರೆ ತಕ್ಷಣ ಪರಿಹಾರ ಸೂಚಿಸುವ ಅವರ ಕಾಳಜಿ ಅನನ್ಯ.

ದಾಖಲೆಯ ಸಾಧನೆ – ಮೂವತ್ತು ಲಕ್ಷದತ್ತ ಪಯಣ:
ಕಳೆದ ಬೆರಳೆಣಿಕೆಯ ವರ್ಷಗಳಲ್ಲಿ ಸರಿಸುಮಾರು ಇದುವರೆಗೆ ಮೂವತ್ತು ಲಕ್ಷಕ್ಕಿಂತಲೂ ಅಧಿಕ ಕಾಳುಮೆಣಸಿನ ಗಿಡಗಳನ್ನು ಕೃಷಿಕರ ತೋಟಗಳಿಗೆ ತಲುಪಿಸುವ ಮೂಲಕ ಕರಾವಳಿ
ಜಿಲ್ಲೆಗಳಲ್ಲಿ ಕಾಳುಮೆಣಸಿನ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಇದು ಕೇವಲ ಸಂಖ್ಯೆಯಲ್ಲ, ಕರಾವಳಿಯ ಕೃಷಿ ಭೂಪಟವನ್ನೇ ಬದಲಾಯಿಸಿದ ಸಾಧನೆ.

ಅಡಿಕೆಯೊಂದಿಗೆ ಸಮಗ್ರ ಸಹಬೆಳೆಗಳ ಕನಸು:
ಕಾಳುಮೆಣಸಿಗೆ ಮಾತ್ರ ಸೀಮಿತವಾಗದೆ, ಇವರು ಅಡಿಕೆಯ ಸಹಬೆಳೆಗಳಾಗಿ ಕಾಫಿ, ಏಲಕ್ಕಿ ಬೆಳೆಯುವುದಕ್ಕೂ ರೈತರನ್ನು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ. ಅಡಿಕೆ ತೋಟದಲ್ಲಿ ಖಾಲಿ
ಇರುವ ಜಾಗದಲ್ಲಿ ಕಾಫಿ ಮತ್ತು ಏಲಕ್ಕಿ ಬೆಳೆದು ಹೆಚ್ಚುವರಿ ಆದಾಯ ಗಳಿಸುವ ವೈಜ್ಞಾನಿಕ ಮಾದರಿಯನ್ನು ಪರಿಚಯಿಸಿದ್ದಾರೆ. ಅದಕ್ಕಾಗಿ ಗುಣಮಟ್ಟದ ಕಾಫಿ ಮತ್ತು ಏಲಕ್ಕಿ ಗಿಡಗಳನ್ನೂ ರೈತರಿಗೆ
ಒದಗಿಸುತ್ತಿದ್ದಾರೆ.

ಸಮಗ್ರ ತೋಟಗಾರಿಕಾ ಸೇವೆ:

ಇದೀಗ ಸಮಾನ ಮನಸ್ಕ ಸ್ನೇಹಿತರನ್ನು ಕೂಡಿಕೊಂಡು, ಗುಣಮಟ್ಟದ ಕಾಫಿ, ಅಡಿಕೆ, ತೆಂಗು, ಅತ್ಯಧಿಕ ಇಳುವರಿಯ ಲಿಂಬೆ, ಏಪಲ್, ಏಲಕ್ಕಿ ಮುಂತಾದ ತೋಟಗಾರಿಕಾ ಬೆಳೆಗಳ ಗಿಡಗಳನ್ನು
ಒದಗಿಸುವ ಮಹತ್ಕಾರ್ಯದಲ್ಲೂ ನಿರತರಾಗಿದ್ದಾರೆ. ರೈತನಿಗೆ ಬೇಕಾದ ಎಲ್ಲಾ ಗಿಡಗಳು – ಮಾಹಿತಿಗಳನ್ನು ಒಂದೇ ಸೂರಿನಡಿ, ಒಂದೇ ವಿಶ್ವಾಸಾರ್ಹ ಮೂಲದಲ್ಲಿ ಸಿಗುವಂತಹ ವ್ಯವಸ್ಥೆಯನ್ನು
ಕಟ್ಟಿದ್ದಾರೆ.

Ad Widget
Continue Reading

ಬಿಗ್ ನ್ಯೂಸ್

Neralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ

Published

on

Ad Widget

Ad Widget

Ad Widget

Ad Widget

ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ವಿಟ್ಲ: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ. ಈಕೆ ಕಂಬಳಬೆಟ್ಟು ಶಾಲೆಯ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ.

Ad Widget

Ad Widget <> Ad Widget

ಬಾಲಕಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!