ಬಿಗ್ ನ್ಯೂಸ್
Pili BJP Fight | ಕಾಂಗ್ರೇಸ್ ನಾಯಕನ ‘ಪಿಲಿ ನಲಿಕೆ’ಯೆಂಬ ತಾಸೆ ಪೆಟ್ಟಿಗೆ ‘ಕಾದಾಡಿ’ಕೊಂಡ ಬಿಜೆಪಿ ಹುಲಿಗಳು..!ಸೋಷಿಯಲ್ ಮೀಡಿಯಾದಲ್ಲಿ ಪರಚಿಕೊಂಡ ಚೌಟ v/s ಕಟೀಲ್ ಬಣದ ಮರಿ ಪಿಲಿಗಳು..! ಏಟು – ತಿರುಗೇಟು ಹೇಗಿತ್ತು ಗೊತ್ತೆ ?
ನವರಾತ್ರಿ ಸಂದರ್ಭ ತುಳುನಾಡಿನಲ್ಲಿ ಹುಲಿ ಕುಣಿತಕ್ಕೆ ಕೊರತೆಯಿಲ್ಲ. ಜಿಲ್ಲೆಯಲ್ಲಿ ಹತ್ತಾರು ಸುಪ್ರಸಿದ್ದ ಹುಲಿ ತಂಡಗಳಿವೆ . ಐದಾರು ಹುಲಿ ಕುಣಿಸುವ ಸ್ಪರ್ಧಾ ಕೂಟಗಳಿವೆ. ಇದಕ್ಕೆ ರಾಜಕೀಯ ನಾಯಕರೇ ನೇತಾರರು. ಇಲ್ಲಿ ಜಿದ್ದಿಗೆ ಬಿದ್ದಂತೆ ಹುಲಿ ತಂಡಗಳು ನರ್ತಿಸುತ್ತವೆ. ನಾಯಕರುಗಳು ಸ್ಪರ್ಧೆಗೆ ಬಿದ್ದಂತೆ ಅದ್ದೂರಿಯಾಗಿ ಆಯೋಜಿಸುತ್ತಾರೆ. ಪ್ರತಿ ವರ್ಷ ಇಷ್ಟಕ್ಕೆ ಸೀಮಿತವಾಗಿದ್ದ ಪಿಲಿಕೂಟ ಈ ಬಾರಿ ಜಿಲ್ಲಾ ಬಿಜೆಪಿಯ (Pili BJP Fight) ಹುಳುಕನ್ನು ಹೊರ ಹಾಕಿದೆ.
ರಾಜ್ಯ ಬಿಜೆಪಿ ಮೂರು ನಾಲ್ಕು ಹೋಳಾಗಿರುವುದು ಎಲ್ಲರಿಗೂ ಗೊತ್ತಿತ್ತು. ದ.ಕ ಜಿಲ್ಲೆಯ ಬಿಜೆಪಿಯಲ್ಲೂ ಕಳೆದ ಲೋಕಸಭಾ ಚುನಾವಣೆ ಬಳಿಕ ಬಣ ರಾಜಕೀಯ ತಾರಕಕ್ಕೆರಿದ್ದರೂ ಬಹಿರಂಗಗೊಂಡಿರಲಿಲ್ಲ. ಆದಕ್ಕೆ ವೇದಿಕೆ ಕಲ್ಪಿಸಿದ್ದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಪಿಲಿ ನಲಿಕೆ ಕಾರ್ಯಕ್ರಮ .
ಕಳೆದ ಲೋಕಸಭಾ ಚುನಾವಣೆ ಸಂದರ್ಭ ದಕ್ಷಿಣ ಕನ್ನಡ ಕ್ಷೇತ್ರದ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದವರು ಮೂರು ಬಾರಿಯ ಸಂಸದ ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ಆದರೇ ಅದು ಅವರ ಕೈ ತಪ್ಪಿ, ಜಿಲ್ಲೆಯ ಅವರ ಬದ್ದ ರಾಜಕೀಯ ವಿರೋಧಿ ಬ್ರಿಜೇಶ್ ಚೌಟ ಪಾಲಾಗಿತ್ತು. 2014ರ ಲೋಕಸಭಾ ಚುನಾವಣೆಯ ಬಳಿಕ 2023ರ ವಿಧಾನಸಭೆ ಚುನಾವಣೆಯವರೆಗೆ ಜಿಲ್ಲಾ ಬಿಜೆಪಿ ನಳಿನ್ ಕುಮಾರ್ ಕಟೀಲ್ ಕೈ ಸನ್ನೆಯಂತೆ ನಡೆಯುತಿತ್ತು ಎನ್ನುವುದು ಪಕ್ಷದ ಒಳ ಹೊರಗು ಬಲ್ಲ ಬಹುತೇಕರ ಮಾತು. ಈ ಸಂದರ್ಭ ಚೌಟರನ್ನು ಪಕ್ಷದ ಕಛೇರಿಯಿಂದ ದೂರವಿಡುವ ಭಾಗವಾಗಿ, ಅವರಿಗೆ ಯಾವುದೇ ಹುದ್ದೆ ಸಿಗದಂತೆ ನೋಡಿಕೊಳ್ಳಲಾಗಿತ್ತು ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಆಗಾಗ ಕೇಳಿ ಬಂದಿತ್ತು.
2024ರಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ಚೌಟರು ಆಯ್ಕೆಗೊಳ್ಳುವ ಮೊದಲು 7-8 ವರ್ಷಗಳ ಕಾಲ ಅವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ಸಿಕ್ಕಿರಲಿಲ್ಲ. ಆ ಅವಧಿಯಲ್ಲಿ ಕಟೀಲ್ ಹಿಡಿತ ಬಿಜೆಪಿಯಲ್ಲಿ ಗಟ್ಟಿಯಾಗಿತ್ತು. ಲೋಕಸಭೆ ಟಿಕೆಟ್ ಘೋಷಣೆಗೂ ಕೆಲ ತಿಂಗಳುಗಳ ಹಿಂದೆ ನಡೆದ ದ.ಕ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಮಂಡಲಗಳ ಪದಾಧಿಕಾರಿಗಳ ಆಯ್ಕೆಯಲ್ಲಿ ಚೌಟ ಬಣ ವಿಜಯದ ನಗೆ ಬೀರಿತ್ತು. ರಾಜ್ಯಾಧ್ಯಕ್ಷ ವಿಜಯೇಂದ್ರರ ಪ್ರಭಾವ ಬಳಸಿ ಎಲ್ಲ ಕಡೇ ಕಟೀಲ್ ಆಪ್ತರಿಗೆ ಆಯಕಟ್ಟಿನ ಹುದ್ದೆ ಸಿಗದಂತೆ ಆ ಟೀಮ್ ನೋಡಿಕೊಂಡಿತ್ತು. ಆಗಲೇ ಎರಡು ಬಣಗಳಲ್ಲಿ ಅಸಮಾಧನದ ಹೊಗೆಯಾಡಲು ಆರಂಭಿಸಿತ್ತು.
ಸುಳ್ಯ – ಬಂಟ್ವಾಳದಲ್ಲಿ ಒಳಗೊಳಗೆ ʼದಕ್ಕಾಮುಕ್ಕಿʼ ನಡೆದಿತ್ತು. ಟಿಕೆಟ್ ಯಾವಾಗ ಚೌಟ ಪಾಲಾಯಿತು, ಆಗ ಜಿಲ್ಲೆಯ ಬಿಜೆಪಿ ಎರಡು ಬಣಗಳಾಗಿ ನಿಚ್ಚಳವಾಗಿ ಒಡೆದು ಹೋಗಿತ್ತು. ಆದರೇ ಆಗ ಎಲ್ಲವು ಸರಿಯಿದೆ ಎನ್ನುವುದನ್ನು ತೋರಿಸುವುದರಲ್ಲಿ ಪಕ್ಷ ಸಫಲವಾಗಿತ್ತು. ಆದರೇ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಟಿಕಟ್ ಆಕಾಂಕ್ಷಿಯಾಗಿದ್ದ ನಳಿನ್ ಗೆ ಟಿಕೆಟ್ ಸಿಗದಂತೆ ನೋಡಿಕೊಳ್ಳಲಾಯಿತೋ ಆಗ ಆ ಟೀಮ್ ಕತ್ತಿ ಮಸೆಯಲು ಆರಂಭಿಸಿದೆ.
ಆದರೇ ಅದಕ್ಕೆ ವೇದಿಕೆ ಒದಗಿಸಿದ್ದು ಜಿಲ್ಲೆಯ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸಾರಥ್ಯದ ಪಿಲಿ ನಲಿಕೆ ಕಾರ್ಯಕ್ರಮ ಮಿಥುನ್ ಸಾರಥ್ಯದ 9ನೇ ವರ್ಷದ ಪಿಲಿ ನಲಿಕೆ ಕಾರ್ಯಕ್ರಮದಲ್ಲಿ ದಕ್ಷಿಣ ಜಿಲ್ಲೆಯ ಸಂಸದ ಬ್ರಿಜೇಶ್ ಚೌಟ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಭಾಗವಹಿಸಿದ್ದರು. ಕಳೆದೊಂದು ದಿನದಿಂದ ಈ ಕಾರ್ಯಕ್ರಮದ ವಿಡಿಯೋ ಬಳಸಿಕೊಂಡು ಚೌಟ, ಕುಂಪಲ ಹಾಗೂ ಮಲ್ಯರನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
ಮಿಥುನ್ ರೈ ಯವರು ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರನ್ನು ನಿಂದಿಸಿದ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಯೋಗಿಯವರನ್ನು ಹೀಯಾಳಿಸಿದ ಕಾಂಗ್ರೆಸ್ ಮುಖಂಡ ಆಯೋಜಿಸಿದ ಕಾರ್ಯಕ್ರಮಕ್ಕೆ ಚೌಟ ಹಾಗೂ ಕುಂಪಲ ಹೋಗುವ ಅನಿವಾರ್ಯತೆ ಏನಿತ್ತು ? ಎಂದು ಈ ಟ್ರೋಲಿಗರು ಪ್ರಶ್ನಿಸುತ್ತಿದ್ದಾರೆ. ಈ ವಿಡಿಯೋ ಗಳು ಕಟೀಲ್ ಅವರ ಬೆಂಬಲಿಗರದ್ದು ಎನ್ನಲಾದ ಫೇಸ್ ಬುಕ್ ಪೇಜ್, ಇನ್ಸ್ಟಾಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದೆ. ಅಲ್ಲದೇ ವಾಟ್ಸ್ಯಾಪ್ ನಲ್ಲಿ ಹಂಚುತ್ತಿರುವ ಬಹುತೇಕರು ಕಟೀಲ್ ಬೆಂಬಲಿಗರು ಎನ್ನುವುದು ಗಮನಾರ್ಹ.
ಟ್ರೋಲ್ ಪೋಸ್ಟ್ ನಲ್ಲಿ ಏನಿದೆ? ಚೌಟ , ಕುಂಪಲ ಹಾಗೂ ಮಲ್ಯರವರು ಅಡ್ಜಸ್ಟ್’ಮೆಂಟ್ ಪಾಲಿಟಿಕ್ಸ್ ಹೇಗಿರಬೇಕು ಎಂಬುದನ್ನು ದೇವದುರ್ಲಬ ಬಿಜೆಪಿ ಕಾರ್ಯಕರ್ತರಿಗೆ ತೋರಿಸಿಕೊಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಯವರ ಪಿಲಿನಲಿಕೆ ಕಾರ್ಯಕ್ರಮ ನಡೆಯುತ್ತಿದ್ದರೂ ಬಿಜೆಪಿಯ ಯಾವೊಬ್ಬ ಜನಪ್ರತಿನಿಧಿ ಅಥವಾ ಪ್ರಮುಖ ಜವಾಬ್ದಾರಿಯುಳ್ಳ ನಾಯಕರು ಅದರಲ್ಲಿ ಭಾಗವಹಿಸಿಲ್ಲ.
ಕಲ್ಲಡ್ಕ ಪ್ರಭಾಕರ್ ಭಟ್ ರವರನ್ನು ಕೇವಲ ವೋಟ್ ಬ್ಯಾಂಕಿಗಾಗಿ ಏಕವಚನದಲ್ಲಿ ಹೀಯಾಳಿಸಿ ಅವಮಾನಿಸಿದ ಹಿಂದೂ ವಿರೋಧಿಯೊಬ್ಬನ ಕಾರ್ಯಕ್ರಮದಲ್ಲಿ ಸ್ವಾಭಿಮಾನ ಬಿಟ್ಟು ಭಾಗವಹಿಸಲು ಯಾವ ನಾಯಕರೂ ತಯಾರಿರಲಿಲ್ಲ ಮತ್ತು ಆ ಬಗ್ಗೆ ನಮ್ಮ ನಾಯಕರ ಮೇಲೆ ಹೆಮ್ಮೆ ಇದೆ ಎಂದು ಬರೆಯಲಾಗಿದೆ ಮುಂದುವರೆದು “ ಕಾರ್ಯಕರ್ತನೊಬ್ಬ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಿದಾಗ ಇದೇ ನಾಯಕರು ನಾಲ್ಕು ಗೋಡೆಗಳ ಮಧ್ಯೆ ನಿಲ್ಲಿಸಿ ವಿಚಾರಣೆ ನಡೆಸುವುದೇನು, ಶಿಸ್ತುಕ್ರಮ ಜರಗಿಸುವುದೇನು, ಉಚ್ಛಾಟನೆಗೊಳಿಸುವುದೇನು,. ಆದರೆ ನಾಯಕರೇ ತಪ್ಪು ಮಾಡಿದಾಗ ಈ ಮೇಲಿನ ಯಾವುದೂ ಅನ್ವಯವಾಗುವುದಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.





ಚೌಟ ಬಣದಿಂದ ತಿರುಗೇಟು: ತಮ್ಮ ವಿರುದ್ದ ವಿರೋಧಿ ಪಾಳಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆರಂಭಿಸುತ್ತಿದ್ದಂತೆ ಚೌಟ ಬಣವು ತಿರುಗೇಟು ನೀಡಲು ಆರಂಭಿಸಿದೆ. ಮಿಥುನ್ ರೈ ನಡೆಸುವ ಹುಲಿ ವೇಷ ಕಾರ್ಯಕ್ರಮಕ್ಕೆ ಹೋದ ಬಗ್ಗೆ ಸಂಸದ ಚೌಟ , ಜಿಲ್ಲಾಧ್ಯಕ್ಷ ಕುಂಪಲ, ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯರನ್ನು ಟ್ರೋಲ್ ಮಾಡುವವರಲ್ಲಿ ಒಂದು ಪ್ರಶ್ನೆ ..! ನಳಿನ್ ಕುಮಾರ್ ಕಟೀಲ್ ಮತ್ತು ತಂಡ ಹೋಗಿರುವುದು ಯಾರ ಕಾರ್ಯಕ್ರಮಕ್ಕೆ ..? ಬಿರುವೆರ್ ಕುಡ್ಲ ಉದಯ ಪೂಜಾರಿ ಕಾರ್ಯಕ್ರಮಕ್ಕೆ ಅಲ್ವ.? ಉದಯ ಪೂಜಾರಿ ಕಳೆದ ಚುನಾವಣೆಯಲ್ಲಿ ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದು ಮರೆತು ಹೋಯಿತಾ?
ಬಹಿರಂಗವಾಗಿ ಪದ್ಮರಾಜ್ ಗೆ ಮತ ಕೇಳಿದ್ದು ಮರೆತು ಹೋಯಿತೇ..? ಅಲ್ಲ ಆ ಪತ್ರಿಕಾಗೋಷ್ಠಿಯ ಹಿಂದೆ ಇದ್ದ ಶಕ್ತಿ ನಳಿನ್ ಕುಮಾರ್ ಅವರ ಉತ್ತರ ಕೊಡಿ..!
ನಳಿನ್ ಕುಮಾರ್ ಅವರ ಕುಂಜಾಡಿ ಮನೆಯ ನೇಮಕ್ಕೆ ಅತಿಥಿಯಾಗಿ ಹೋಗಿದ್ದು, ಡಿಕೆ ಸುರೇಶ್ , ಮಿಥುನ್ ರೈ ಮುಂತಾದ ಕಾಂಗ್ರೆಸ್ ಮುಖಂಡರನ್ನು . ಇದು ಈಗ ಮರೆತು ಹೋಯಿತೇ..? ಉದಯ ಪೂಜಾರಿ ಕಾರ್ಯಕ್ರಮದಲ್ಲಿ ಖಾದರ್ ತಮ್ಮನಿಗೆ ಏನೂ ಕೆಲಸ ..? ಕಟೀಲ್ ತಂಡಕ್ಕೆ ಇಫ್ತಿಕರ್ ಆಗಬಹುದೇ? ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಲಾದ ಒಂದು ಪೋಸ್ಟ್ ನಲ್ಲಿ ಹಂಚಲಾಗಿದೆ.


ಚೌಟ ಬಣದ ಇನ್ನೊಂದು ಪೋಸ್ಟ್ ಹಿಂದುತ್ವದ ವಿಷಯ, ಅಭಿವೃದ್ಧಿಯ ವಿಷಯ ಅಥವಾ ಪಕ್ಷ ಸಿದ್ಧಾಂತದ ವಿಷಯದಲ್ಲಿ ರಾಜಿ ಮಾಡಿಕೊಂಡರೆ ಖಂಡಿತಾ ವಿರೋಧಿಸೋಣ. ಅದು ಬಿಟ್ಟು ನಮ್ಮ ನಾಡಿನ ಕಲೆ , ಸಂಸ್ಕೃತಿಗಳ ವಿಚಾರ ಬಂದಾಗ ಟ್ರೋಲ್ ಮಾಡೋದು ಎಷ್ಟು ಸರಿ !!ಮಿಥುನ್ ರೈ ಆಯೋಜಸಿದ್ದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎನ್ನುವ ಕಾರಣಕ್ಕೆ ಸಂಸದ ಬ್ರಿಜೇಶ್ ಚೌಟರನ್ನು ಟ್ರೋಲ್ ಮಾಡುವ ಅತೃಪ್ತ ಆತ್ಮಗಳೇ ನಿಮಗೆ ಗೊತ್ತಿರಲಿ ನಮ್ಮ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅಪಾರ ಪ್ರೀತಿ ಉಳ್ಳವರು ನಮ್ಮ ಸಂಸದರು.
ಇದೇ ಕಾರಣಕ್ಕಾಗಿಯೇ ತುಳುನಾಡಿನ ದೈವ ದೇವರುಗಳ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿರುವುದು. ರಾಜಕೀಯವನ್ನು ಮಾಡುವಲ್ಲಿ ಮಾಡಬೇಕು. ಎಲ್ಲಾ ಕಡೆ ಅಲ್ಲಾ. ಬ್ರಿಜೇಶ್ ಚೌಟರು ಸಭ್ಯ ರಾಜಕಾರಣ ಮಾಡಿಕೊಂಡು ಬಂದವರು. ಅವರನ್ನು ರಾಜಕೀಯದಲ್ಲಿ ಮೂಲೆಗುಂಪು ಮಾಡುವ ಎಲ್ಲಾ ಪ್ರಯತ್ನ ನಡೆದಾಗಲೂ ಯಾರನ್ನೂ ದೂರಿಕೊಂಡು ಬಂದವರಲ್ಲ. ತನ್ನ ಸ್ವಪ್ರಯತ್ನದಿಂದ ಮೇಲೆದ್ದು ಬಂದವರು.
ಇದನ್ನು ಸಹಿಸದ ಕೆಲ ಅತೃಪ್ತ ಆತ್ಮಗಳು ಇಂದು ಅವರ ತೇಜೋವಧೆಗೆ ಇಳಿದಿರುವುದು ಜಗತ್ತಿಗೆ ಗೊತ್ತಿರುವ ಸತ್ಯ. ಬ್ರಿಜೇಶ್ ಚೌಟರು ಸಂಸದರಾದ ನಂತರ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಲ್ಲ. ಕಳೆದ ಹಲವು ವರ್ಷಗಳಿಂದ ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಕಂಬಳ, ಪಿಲಿನಲಿಕೆಯಂತಹ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಂಡು ಬರುತ್ತಿದ್ದಾರೆ. ಇವರು ಸಕ್ರಿಯ ರಾಜಕಾರಣಕ್ಕೆ ಇಳಿಯುವ ಮೊದಲೇ ಸತತ 7 ವರ್ಷಗಳಿಂದ ಮಂಗಳೂರು ಕಂಬಳವನ್ನು ಆಯೋಜಿಸಿಕೊಂಡು ಬಂದವರು. ಹಾಗೂ ಜಿಲ್ಲಾ ಕಂಬಳ ಕಂಬಳ ಸಮಿತಿಯ ಗೌರವ ಸಲಹೆಗಾರರಾಗಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿರುವವರು. ಪಕ್ಷ ಭೇದವಿಲ್ಲದೆ ಅನೇಕರನ್ನು ತಮ್ಮ ಕಂಬಳಕ್ಕೂ ಆಹ್ವಾನಿಸಿದವರು ಹಾಗೂ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳಗಳಲ್ಲೂ ಭಾಗವಹಿಸುತ್ತಿದ್ದಾರೆ. ಆದರೆ ಎಲ್ಲೂ ನಮ್ಮ ಸಿದ್ದಾಂತವನ್ನು ಬಿಟ್ಟು ಕೊಟ್ಟವರಲ್ಲ. ಎಲ್ಲಿ ವಿರೋಧಿಸಬೇಕೋ ಅಲ್ಲಿ ವಿರೋಧಿಸಿದ್ದಾರೆ. ಎಲ್ಲಿ ಯಾವ ಸಂದರ್ಭದಲ್ಲಿ ರಾಜಕೀಯ ಮಾಡಬೇಕೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ
ಹಾಗೇ ನೋಡಿದ್ದಲ್ಲಿ ಮಂಗಳೂರಿನಲ್ಲಿ ಪ್ರಸಿದ್ದಿ ಪಡೆದಿರುವ ಮಂಗಳೂರು ದಸರಾದ ರೂವಾರಿಗಳು ಶ್ರೀ ಜನಾರ್ಧನ ಪೂಜಾರಿಯವರು ಕೂಡ ಕಾಂಗ್ರೆಸಿಗರು ಹಾಗಂತ ಅದರಲ್ಲಿ ಭಾಗವಹಿಸುವುದು ಕೂಡ ಇವರ ಪ್ರಕಾರ ತಪ್ಪಾ? ಎಂದು ಕೇಳಲಾಗಿದೆ.



ಹೀಗೆ ಕಾಂಗ್ರೇಸ್ ಮುಖಂಡ ಮಿಥುನ್ ರೈಯವರ ಪಿಲಿ ನಲಿಕೆ ಎಂಬ ತಾಸೆಗೆ ಬಿಜೆಪಿಯ ಎರಡು ದಿಗ್ಗಜ ಮುಖಂಡರ ಬೆಂಬಲಿಗರು ಸೋಷಿಯಲ್ ಪರಚಾಡಿಕೊಳ್ಳುತ್ತಿದ್ದಾರೆ . ಇದು ಎಲ್ಲಿ ಹೋಗಿ ತಲುಪುತ್ತದೆ ಎಂದು ಕಾದು ನೋಡಬೇಕಿದೆ
ಬಿಗ್ ನ್ಯೂಸ್
Neralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ.
ವಿಟ್ಲ: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ. ಈಕೆ ಕಂಬಳಬೆಟ್ಟು ಶಾಲೆಯ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ.
ಬಾಲಕಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬಿಗ್ ನ್ಯೂಸ್
Puttur-ಎಸ್‌ಡಿಪಿಐ ನಿರಂತರ ಪ್ರಯತ್ನ: ಪುತ್ತೂರಿನ ಅಲ್ಪಸಂಖ್ಯಾತರ ಸೇವಾ ಕೇಂದ್ರ ಪುನರಾರಂಭ
ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು.
ಪುತ್ತೂರು: ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.
ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು. ಸಾರ್ವಜನಿಕರಿಗೆ ಅನುಕೂಲವಾಗುವ ಈ ಸೇವಾ ಕೇಂದ್ರವನ್ನು ಮತ್ತೆ ಆರಂಭಿಸಬೇಕೆಂದು ಸಮಿತಿಯು ಒತ್ತಾಯಿಸಿತ್ತು.
ಈ ನಡುವೆ, ಕೇಂದ್ರಕ್ಕೆ ಸಂಬಂಧಿಸಿದ ಕಟ್ಟಡವನ್ನು ಹಾಸ್ಟೆಲ್ ಬಳಕೆಗೆ ಪರಿವರ್ತಿಸಲು ಪುತ್ತೂರು ಶಾಸಕರು ಪ್ರಯತ್ನಿಸಿದ್ದರು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಮೂರು ವರ್ಷಗಳ ಬಳಿಕ ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಮತ್ತೆ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರಿಗೆ ಸೇವೆ ಲಭ್ಯವಾಗಿರುವುದಾಗಿ ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಂತರ ರಾಜ್ಯ
Toll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್‌ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್‌ಗೆ SMS, 10 ಸಾವಿರ ರೂ.ವರೆಗೆ ದಂಡ..!
ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ನೋಂದಣಿ ಸಂಖ್ಯೆಯ ಆಧಾರದ ಮೇಲೆ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.
ನವದೆಹಲಿ: ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ನೋಂದಣಿ ಸಂಖ್ಯೆಯ ಆಧಾರದ ಮೇಲೆ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.
ಈ ವ್ಯವಸ್ಥೆಯ ಪ್ರಕಾರ, ಟೋಲ್ ಪ್ಲಾಜಾ ದಾಟುವ ವಾಹನದ ವಿಮೆ ಚಾಲ್ತಿಯಲ್ಲಿದೆಯೇ ಎಂಬುದನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ. ಒಂದು ವೇಳೆ ವಿಮೆಯ ಅವಧಿ ಮುಗಿದಿದ್ದರೆ, ವಾಹನದ ಮಾಲೀಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ತಕ್ಷಣವೇ SMS ಮೂಲಕ ಎಚ್ಚರಿಕೆ ಸಂದೇಶ ಕಳುಹಿಸಲಾಗುತ್ತದೆ. ವಿಮೆ ಇಲ್ಲದೆ ವಾಹನ ಚಲಾಯಿಸುವವರಿಗೆ ನಿಯಮಾನುಸಾರ 10,000 ರೂ.ವರೆಗೆ ದಂಡ ವಿಧಿಸುವ ಅವಕಾಶವೂ ಇದೆ.
ಟೋಲ್ ಪ್ಲಾಜಾದಲ್ಲಿ ವಿಮೆ ಪರಿಶೀಲನೆ ಹೇಗೆ?
ಹೊಸ ವ್ಯವಸ್ಥೆಯು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ನಿರ್ವಹಿಸುವ ‘ವಾಹನ್’ (VAHAN) ಡೇಟಾಬೇಸ್‌ನಲ್ಲಿರುವ ವಾಹನಗಳ ನೋಂದಣಿ ಹಾಗೂ ವಿಮೆಯ ಮಾಹಿತಿಯನ್ನು ಆಧರಿಸಿ ಕಾರ್ಯನಿರ್ವಹಿಸಲಿದೆ.
ವಾಹನ ಟೋಲ್ ಪ್ಲಾಜಾ ದಾಟುವಾಗ ಅದರ ನೋಂದಣಿ ಸಂಖ್ಯೆಯನ್ನು ಗುರುತಿಸಿ, ಡೇಟಾಬೇಸ್‌ನಲ್ಲಿರುವ ವಿಮೆಯ ವಿವರಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಈ ಮೂಲಕ ವಿಮೆ ಚಾಲ್ತಿಯಲ್ಲಿದೆಯೇ ಅಥವಾ ಅವಧಿ ಮುಗಿದಿದೆಯೇ ಎಂಬುದನ್ನು ತಂತ್ರಜ್ಞಾನದ ಸಹಾಯದಿಂದ ಪರಿಶೀಲಿಸಲಾಗುತ್ತದೆ.
ವಿಮೆಯ ಅವಧಿ ಮುಗಿದಿದ್ದರೆ ಕೆಲವೇ ನಿಮಿಷಗಳಲ್ಲಿ ವಾಹನ ಮಾಲೀಕರ ಮೊಬೈಲ್‌ಗೆ SMS ರವಾನೆಯಾಗಲಿದೆ.
SMSನಲ್ಲಿ ಯಾವ ಮಾಹಿತಿ ಇರಲಿದೆ?
ವಾಹನದ ವಿಮೆ ಅವಧಿ ಮುಗಿದಿದ್ದರೆ ಮಾಲೀಕರಿಗೆ ಕಳುಹಿಸುವ ಸಂದೇಶದಲ್ಲಿ ಈ ಕೆಳಗಿನ ವಿವರಗಳಿರಲಿವೆ:
- ವಾಹನದ ನೋಂದಣಿ ಸಂಖ್ಯೆ.
- ಟೋಲ್ ಪ್ಲಾಜಾ ದಾಟಿದ ದಿನಾಂಕ ಮತ್ತು ಸಮಯ.
- ವಾಹನದ ವಿಮೆ ಅವಧಿ ಮುಗಿದ ದಿನಾಂಕ.
- ವಿಮೆಯನ್ನು ನವೀಕರಿಸಿಕೊಳ್ಳುವಂತೆ ಸೂಚನೆ.
ಈ ಮೂಲಕ ವಾಹನ ಮಾಲೀಕರು ವಿಮೆಯನ್ನು ತಕ್ಷಣ ನವೀಕರಿಸಿಕೊಳ್ಳಲು ಎಚ್ಚರಿಕೆ ನೀಡುವ ಉದ್ದೇಶ ಹೊಂದಲಾಗಿದೆ. - ವಿಮೆ ಇಲ್ಲದೆ ವಾಹನ ಚಲಾಯಿಸಿದರೆ ಎಷ್ಟು ದಂಡ?
- ಮೋಟಾರು ವಾಹನ ಕಾಯ್ದೆಯ ಪ್ರಕಾರ ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಂದು ವಾಹನಕ್ಕೂ ಮಾನ್ಯವಾದ ಥರ್ಡ್ ಪಾರ್ಟಿ ವಿಮೆ ಹೊಂದಿರುವುದು ಕಡ್ಡಾಯವಾಗಿದೆ. ಅಪಘಾತ ಸಂಭವಿಸಿದಾಗ ಮತ್ತೊಬ್ಬ ವ್ಯಕ್ತಿಗೆ ಗಾಯ, ಸಾವು ಅಥವಾ ಆಸ್ತಿಗೆ ಹಾನಿಯಾದರೆ ಪರಿಹಾರ ನೀಡಲು ಈ ವಿಮೆ ನೆರವಾಗುತ್ತದೆ.
ಮಾನ್ಯ ವಿಮೆ ಇಲ್ಲದೆ ವಾಹನ ಚಲಾಯಿಸುವುದು ಕಾನೂನು ಉಲ್ಲಂಘನೆಯಾಗಿದ್ದು, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 196ರ ಅಡಿಯಲ್ಲಿ ಮೊದಲ ಬಾರಿಗೆ ತಪ್ಪು ಎಸಗಿದರೆ 2,000 ರೂ. ಹಾಗೂ ಮರುಕಳಿಸಿದರೆ 4,000 ರೂ. ದಂಡ ಅಥವಾ ಕಾಯ್ದೆಯಲ್ಲಿ ನಿಗದಿಪಡಿಸಿರುವ ಇತರ ಶಿಕ್ಷೆ ವಿಧಿಸಬಹುದು.
ಸದ್ಯ ಒಂದು ಟೋಲ್ ಪ್ಲಾಜಾದಲ್ಲಿ ಮಾತ್ರ ಪ್ರಾಯೋಗಿಕ ಪರೀಕ್ಷೆ
ಪ್ರಸ್ತುತ ದೆಹಲಿಯ ಅರ್ಬನ್ ಎಕ್ಸ್‌ಟೆನ್ಷನ್ ರಸ್ತೆ-2 (UER-II)ಯ ಮುಂಡ್ಯಾ ಟೋಲ್ ಪ್ಲಾಜಾದಲ್ಲಿ ಈ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಪ್ರಯೋಗ ಯಶಸ್ವಿಯಾದರೆ ದೇಶದ ಇತರ ಟೋಲ್ ಪ್ಲಾಜಾಗಳಿಗೂ ವಿಸ್ತರಿಸುವ ಕುರಿತು NHAI ಚಿಂತನೆ ನಡೆಸಿದೆ.
ಆದರೆ ದೇಶಾದ್ಯಂತ ಈ ವ್ಯವಸ್ಥೆ ಯಾವಾಗ ಜಾರಿಗೆ ಬರಲಿದೆ ಎಂಬ ಬಗ್ಗೆ ಪ್ರಾಧಿಕಾರ ಇನ್ನೂ ಅಧಿಕೃತ ದಿನಾಂಕ ಪ್ರಕಟಿಸಿಲ್ಲ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ವಾಹನ ಸವಾರರೇ ಎಚ್ಚರ: ನಿಮ್ಮ ವಾಹನದ ವಿಮೆಯ ಅವಧಿಯನ್ನು ಆಗಾಗ್ಗೆ ಪರಿಶೀಲಿಸಿ. ಅವಧಿ ಮುಗಿಯುವ ಮೊದಲೇ ವಿಮೆಯನ್ನು ನವೀಕರಿಸಿಕೊಳ್ಳಿ. ವಿಮೆ ಇಲ್ಲದೆ ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದ್ದು, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ದೊಡ್ಡ ಆರ್ಥಿಕ ಹೊರೆ ಎದುರಿಸಬೇಕಾಗಬಹುದು.
-
ಬಿಗ್ ನ್ಯೂಸ್18 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
ಬಿಗ್ ನ್ಯೂಸ್10 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಅಂತರ ರಾಜ್ಯ15 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್‌ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್‌ಗೆ SMS, 10 ಸಾವಿರ ರೂ.ವರೆಗೆ ದಂಡ..!
-
ಮಂಗಳೂರು18 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
Uncategorized17 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್18 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ರಾಜಕೀಯ16 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಬಿಗ್ ನ್ಯೂಸ್17 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ















