Connect with us

ಸ್ಥಳೀಯ

Kidnappers-ಮಗುವಾಗಿದ್ದಾಗ ತನ್ನನ್ನು ಕಿಡ್ನ್ಯಾಪ್ ಮಾಡಿದ ಅಪಹರಣಕಾರರಿಗೆ 17 ವರ್ಷಗಳ ಬಳಿಕ ವಕೀಲನಾಗಿ ಶಿಕ್ಷೆ ಕೊಡಿಸಿದ ಯುವಕ

Published

on

Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

7 ವರ್ಷ ಬಾಲಕನಾಗಿದ್ದಾಗ ತಂದೆಯ ಮೇಲೆ ಗುಂಡು ಹಾರಿಸಿ ತನ್ನನ್ನು ಅಪಹರಿಸಿದ ಡಕಾಯಿತರಿಗೆ, 17 ವರ್ಷದ ಬಳಿಕ ಸ್ವತ: ತಾನೇ ವಕೀಲಿಕೆ ಕಲಿತು ಶಿಕ್ಷೆ ಸಿಗುವಂತೆ ಮಾಡಿದ ಯುವಕನ ಕಥೆಯೊಂದು ಇಂಟರ್ ನೆಟ್ ನಲ್ಲಿ ಭಾರೀ ವೈರಲಾಗಿದೆ. ಈಗ ವಕೀಲನಾಗಿರುವ ಹರ್ಷ್ ಗರ್ಗ್ ಅಂದಿನ ಸಂತ್ರಸ್ತ ಬಾಲಕ.

Ad Widget

Ad Widget alt="Ad Widget"/>

Ad Widget

ಸುಮಾರು 17 ವರ್ಷಗಳ ಹಿಂದೆ, ಅಂದರೇ ಫೆಬ್ರವರಿ 10, 2007 ರಂದು. ಒಂದು ಸಂಜೆ, ಏಳು ವರ್ಷದ ಹರ್ಷ್ ಗರ್ಗ್ ಆಗ್ರಾದಿಂದ 40 ಕಿ.ಮೀ ದೂರದಲ್ಲಿರುವ ಖೇರಾಘರ್ನಲ್ಲಿ ತನ್ನ ತಂದೆ ಮತ್ತು ಚಿಕ್ಕಪ್ಪ ನಡೆಸುತ್ತಿರುವ ಮೆಡಿಕಲ್ ಶಾಪ್ ನಲ್ಲಿ ಕುಳಿತಿದ್ದನು. ಸಂಜೆ 7 ಗಂಟೆ ಸುಮಾರಿಗೆ ಡಕಾಯಿತರ ಗುಂಪೊಂದು ಆ ಅಂಗಡಿಗೆ ನುಗ್ಗಿ ಹರ್ಷನನ್ನು ಅಪಹರಿಸಿದೆ.

Ad Widget

Ad Widget <> Ad Widget

ಆಗ ಅಲ್ಲಿಯೇ ತಂದೆ ಮಗನ ರಕ್ಷಣೆಗೆ ಮುಂದಾಗಿದ್ದಾರೆ. ತಕ್ಷಣ ಡಕಾಯಿತರು ಅವರ ಬಲ ಭುಜಕ್ಕೆ ಗುಂಡು ಹಾರಿಸಿದ್ದಾರೆ. ಬಳಿಕ ಬಾಲಕನನ್ನು ತಮ್ಮ ಕಾರಿನೊಳಗೆ ಎಳೆದುಕೊಂಡು ಹೋಗಿದ್ದಾರೆ. ಅದಕ್ಕೂ ಮೊದಲು ಹರ್ಷ್ ಬಿಡುಗಡೆಗೊಳಿಸಬೇಕಾದರೇ ರೂ 55 ಲಕ್ಷ ಹಣ ನೀಡುವಂತೆ ಅಪಹರಣಕಾರರು ಸೂಚಿಸಿದ್ದರು.

ಇದಾಗಿ 17 ವರ್ಷಗಳ ಬಳಿಕ ವಕೀಲರಾಗಿ ಬದಲಾಗಿರುವ 24 ವರ್ಷದ ಹರ್ಷ್ ಗರ್ಗ್ ತನ್ನನ್ನೂ ಅಪಹರಿಸಿದ ಅಪಹರಣಕಾರರಿಗೆ ಶಿಕ್ಷೆ ವಿಧಿಸುವಂತೆ ಸುಮಾರು ಒಂದು ಗಂಟೆ ಕಾಲ ಮುಕ್ತಾಯದ ವಾದವನ್ನು ಮಂಡಿಸಿದ್ದಾರೆ. ಪ್ರಕರಣದ 14 ಆರೋಪಿಗಳಲ್ಲಿ ಎಂಟು ಮಂದಿಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Ad Widget

Ad Widget

17 ವರ್ಷಗಳ ಹಿಂದೆ ಏನಾಯಿತು ?
ಹರ್ಷ ನನ್ನು ಮೆಡಿಕಲ್ ಶಾಪ್ ನಿಂದ ಅಪಹರಿಸಿದ ಸರಿ ಸುಮಾರು 25 ದಿನಗಳ ಬಳಿಕ , ಮಾರ್ಚ್ 6, 2007ರಂದು ಆರೋಪಿಗಳಾದ ಭೀಮ್ ಸಿಂಗ್ ಹಾಗೂ ರಾಮ್ ಪ್ರಕಾಶ್ ಹರ್ಷ್ನನ್ನು ಬೇರೆಡೆಗೆ ಕರೆದೊಯ್ಯುತ್ತಿದ್ದಾಗ ಬಾಲಕ ಅವರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆರೋಪಿಗಳಿಬ್ಬರು ಆತನನ್ನು ಹಿಂಬಾಲಿಸಿದ್ದರು, ಆದರೆ ಪೊಲೀಸರನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದರು.

ನಂತರ ಪೊಲೀಸರು ಆರೋಪಿಗಳಾದ ಗುಡ್ಡನ್ ಕಚ್ಚಿ, ರಾಜಕುಮಾರ್, ಫತೇ ಸಿಂಗ್, ಅಮರ್ ಸಿಂಗ್, ಬಲ್ವೀರ್, ರಾಜೇಶ್ ಶರ್ಮಾ, ಭೀಮ್ ಸಿಂಗ್ ಮತ್ತು ರಾಮ್ ಪ್ರಕಾಶ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

2014ರಲ್ಲಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಆರಂಭಗೊಂಡು 2018ರವರೆಗೂ ನಡೆಯಿತು. ಹರ್ಷ್ ತಂದೆ ವೃತ್ತಿಯಲ್ಲಿ ವಕೀಲರಾಗಿದ್ದರು. ಹೀಗಾಗಿ ಹರ್ಷ್ ನ್ಯಾಯಾಲಯದ ವಿಚಾರಣೆಗೆ ಹೆಚ್ಚಾಗಿ ಹಾಜರಾಗುತ್ತಿದ್ದರು. ನ್ಯಾಯಾಲಯದ ಕಲಾಪಗಳನ್ನು ಗಮನಿಸಿದ ಅವರಿಗೆ ವಕೀಲರಾಗುವ ಆಸಕ್ತಿ ಮೂಡಿತ್ತು. ಪದವಿಯ ಶಿಕ್ಷಣ ಮುಗಿಸಿದ ಬಳಿಕ , ಹರ್ಷ್ 2022 ರಲ್ಲಿ ಆಗ್ರಾ ಕಾಲೇಜಿನಿಂದ ಎಲ್‌ಎಲ್‌ಬಿಯನ್ನು ಪೂರ್ಣಗೊಳಿಸಿದರು ಮತ್ತು ಮುಂದಿನ ವರ್ಷ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಂಡರು.

ಹರ್ಷ್ ಅವರು ಪ್ರಾಸಿಕ್ಯೂಷನ್ ತಂಡವನ್ನು ಸೇರಿಕೊಂಡರು ಮತ್ತು ಜೂನ್ 2024 ರ ಜೂನ್ ನಲ್ಲಿ ನಡೆದ ಅಂತಿಮ ವಾದಗಳನ್ನು ಸ್ವತಃ ಮಂಡಿಸಿದರು. ಸೆಪ್ಟೆಂಬರ್ 17 ರಂದು ವಿಶೇಷ ನ್ಯಾಯಾಧೀಶ ನ್ಯಾಯಾಲಯವು ಅಪಹರಣ ಪ್ರಕರಣದಲ್ಲಿ 8 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
14 ಆರೋಪಿಗಳ ಪೈಕಿ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಇಬ್ಬರು ಪ್ರಕರಣದ ನ್ಯಾಯಾಲಯದಲ್ಲಿ ಇದ್ದ ಸಮದರ್ಭ ಮೃತಪಟ್ಟಿದ್ದಾರೆ.ಉಳಿದ ನಾಲ್ವರು ಆರೋಪಿಗಳಾದ ದಲೇಲ್ ಸಿಂಗ್, ಲಖನ್ ಸಿಂಗ್, ರಾಜೇಂದ್ರ ಮತ್ತು ರಮೇಶ್- ಸಾಕ್ಷಿಗಳು ಮತ್ತು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಂಡಿದ್ದಾರೆ.

ಹರ್ಷ ಈಗ ಯುಪಿ ಪ್ರಾಂತೀಯ ನಾಗರಿಕ ಸೇವಾ ನ್ಯಾಯಾಂಗ ಪರೀಕ್ಷೆಗೆ (ಪಿಸಿಎಸ್-ಜೆ) ತಯಾರಿ ನಡೆಸುತ್ತಿದ್ದಾರೆ, ಇದು ಕಾನೂನು ಪದವೀಧರರಿಗೆ ಅಧೀನ ನ್ಯಾಯಾಂಗ ಸದಸ್ಯರಾಗಿ ನೇಮಕಗೊಳ್ಳಲು ಪ್ರವೇಶ ಮಟ್ಟದ ಪರೀಕ್ಷೆಯಾಗಿದೆ. ಅಂತಿಮ ವಾದದ ನಂತರ, ನ್ಯಾಯಾಲಯವು ಆರೋಪಿಗಳಾದ ಗುಡ್ಡನ್ ಕಚ್ಚಿ, ರಾಜೇಶ್ ಶರ್ಮಾ, ರಾಜ್‌ಕುಮಾರ್, ಫತೇ ಸಿಂಗ್ ಅಲಿಯಾಸ್ ಚಿಗ್ಗಾ, ಅಮರ್ ಸಿಂಗ್, ಬಲ್ವೀರ್, ರಾಮ್‌ಪ್ರಕಾಶ್ ಮತ್ತು ಭಿಕಮ್ ಅಲಿಯಾಸ್ ಭಿಕಾರಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.

Ad Widget
Click to comment

Leave a Reply

ಬಿಗ್ ನ್ಯೂಸ್

Neralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ

Published

on

Ad Widget

Ad Widget

Ad Widget

Ad Widget

ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ವಿಟ್ಲ: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ. ಈಕೆ ಕಂಬಳಬೆಟ್ಟು ಶಾಲೆಯ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ.

Ad Widget

Ad Widget <> Ad Widget

ಬಾಲಕಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

ಆರೋಗ್ಯ

Puttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ

Published

on

Ad Widget

Ad Widget

Ad Widget

Ad Widget

ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.

Ad Widget

Ad Widget alt="Ad Widget"/>

Ad Widget

ಬೆನ್ನು ನೋವು, ಮೊಣಕಾಲು ನೋವು, ಸೊಂಟ ನೋವು ಹಾಗೂ ಸ್ನಾಯು ನೋವು ಮುಂತಾದ ಸಮಸ್ಯೆಗಳು ಮೂಳೆ ಸವೆತ ಅಥವಾ ಮುಂದಿನ ದಿನಗಳಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ BMD ಶಿಬಿರವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸೇವಾ ವಿಭಾಗದ ಇಂಡ್‌ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.

Ad Widget

Ad Widget <> Ad Widget

ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಭಾಸ್ಕರ್ ಎಸ್. (D’Ortho), ಆಡಳಿತ ನಿರ್ದೇಶಕರು, ಪುತ್ತೂರು ಸಿಟಿ ಆಸ್ಪತ್ರೆ ಇವರು ತಪಾಸಣೆ ಹಾಗೂ ಸಲಹೆ ನೀಡಿದರು.

ಇನ್ನರ್‌ ವೀಲ್‌ ಕ್ಲಬ್ ನ ನಿರ್ದೇಶಕಿ ಮಂಜುಳ ಭಾಸ್ಕರ್, ಅಧ್ಯಕ್ಷೆ ಮನೋರಮಾ ಸೂರ್ಯ, ಖಜಾಂಜಿ ಕವಿತಾ ಕೊಳತ್ತಾಯ, ಕಾರ್ಯದರ್ಶಿ ಶ್ರುತಿ ಎಸ್.‌ ಬಂಗೇರ ಶಿಬಿರದಲ್ಲಿ ಉಪಸ್ಥಿತರಿದ್ದರು.

Continue Reading

ಬಿಗ್ ನ್ಯೂಸ್

Puttur-ಎಸ್‌ಡಿಪಿಐ ನಿರಂತರ ಪ್ರಯತ್ನ: ಪುತ್ತೂರಿನ ಅಲ್ಪಸಂಖ್ಯಾತರ ಸೇವಾ ಕೇಂದ್ರ ಪುನರಾರಂಭ

Published

on

Ad Widget

Ad Widget

Ad Widget

Ad Widget

ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು.

Ad Widget

Ad Widget

Ad Widget

Ad Widget

ಪುತ್ತೂರು: ಕಳೆದ ಮೂರು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿದ್ದ ಪುತ್ತೂರು ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಇದೀಗ ಮತ್ತೆ ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ.

Ad Widget

Ad Widget alt="Ad Widget"/>

Ad Widget

ಕೇಂದ್ರವನ್ನು ಪುನರಾರಂಭಿಸುವಂತೆ ಎಸ್‌ಡಿಪಿಐ ಪುತ್ತೂರು ನಗರ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ನಿರಂತರ ಪ್ರಯತ್ನ ನಡೆಸಿತ್ತು. ಸಾರ್ವಜನಿಕರಿಗೆ ಅನುಕೂಲವಾಗುವ ಈ ಸೇವಾ ಕೇಂದ್ರವನ್ನು ಮತ್ತೆ ಆರಂಭಿಸಬೇಕೆಂದು ಸಮಿತಿಯು ಒತ್ತಾಯಿಸಿತ್ತು.

Ad Widget

Ad Widget <> Ad Widget

ಈ ನಡುವೆ, ಕೇಂದ್ರಕ್ಕೆ ಸಂಬಂಧಿಸಿದ ಕಟ್ಟಡವನ್ನು ಹಾಸ್ಟೆಲ್ ಬಳಕೆಗೆ ಪರಿವರ್ತಿಸಲು ಪುತ್ತೂರು ಶಾಸಕರು ಪ್ರಯತ್ನಿಸಿದ್ದರು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಮೂರು ವರ್ಷಗಳ ಬಳಿಕ ಅಲ್ಪಸಂಖ್ಯಾತರ ಸಾಮಾನ್ಯ ಸೇವಾ ಕೇಂದ್ರ ಮತ್ತೆ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರಿಗೆ ಸೇವೆ ಲಭ್ಯವಾಗಿರುವುದಾಗಿ ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!