ಶಿಕ್ಷಣ
Vivekananda-ವಿವೇಕಾನಂದ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಗಾರ; ಉದ್ಯೋಗದಲ್ಲಿ ಲಾಭ ನಷ್ಟ ಸಹಜ : ಶುಭ ಅಡಿಗ
ವಿದ್ಯೆ ಮನುಷ್ಯನಲ್ಲಿ ವಿನಯವನ್ನು ತಂದುಕೊಡಬೇಕೆ ಹೊರತು ಅಹಂಕಾರವನ್ನಲ್ಲ. ನಾವು ಮಾಡುವ ಕೆಲಸ ಆತ್ಮತೃಪ್ತಿಯನ್ನು ನೀಡುವಂತಿರಬೇಕು. ಹಾಗೆಯೇ ಉದ್ಯೋಗದಲ್ಲಿ ಕಷ್ಟ- ನಷ್ಟ ಸಹಜ, ಒಂದು ಉದ್ಯೋಗವನ್ನು ಎತ್ತರಕ್ಕೆ ಕೊಂಡೊಯ್ಯಬೇಕಾದರೆ ಅಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭ ಅಡಿಗ ಹೇಳಿದರು.
ಪುತ್ತೂರು: ವಿದ್ಯೆ ಉದ್ಯೋಗವನ್ನು ಪಡೆಯುದಕ್ಕಾಗಿ ಸೀಮಿತವಾಗಿರದೆ, ಬದುಕಿಗೆ ಬೇಕಾದ ಸರ್ವಾಂಗೀಣ ಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಬೇಕು. ವಿದ್ಯೆ ಮನುಷ್ಯನಲ್ಲಿ ವಿನಯವನ್ನು ತಂದುಕೊಡಬೇಕೆ ಹೊರತು ಅಹಂಕಾರವನ್ನಲ್ಲ. ನಾವು ಮಾಡುವ ಕೆಲಸ ಆತ್ಮ ತೃಪ್ತಿಯನ್ನು ನೀಡುವಂತಿರಬೇಕು. ಹಾಗೆಯೇ ಉದ್ಯೋಗದಲ್ಲಿ ಕಷ್ಟ- ನಷ್ಟ ಸಹಜ, ಒಂದು ಉದ್ಯೋಗವನ್ನು ಎತ್ತರಕ್ಕೆ ಕೊಂಡೊಯ್ಯಬೇಕಾದರೆ ಅಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶುಭ ಅಡಿಗ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗದ ಜಂಟಿ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುರಕ್ಷಾ ಮಡ್ ಬ್ಲಾಕ್ಸ್ ಉದ್ಯಮದ ಮಾಲಿಕ, ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಾತ್ವಿಕ್ ಖಂಡೇರಿ ಮಾತನಾಡಿ, ಪರಿಸರ ಸ್ನೇಹಿಯಾದ ಇಟ್ಟಿಗೆಯನ್ನು ಉತ್ಪಾದಿಸುವುದು ಆರೋಗ್ಯಕ್ಕೂ ಒಳ್ಳೆಯದು, ಹಾಗೆಯೇ ಕಡಿಮೆ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಬಹುದು. ಒಂದು ವಸ್ತುವಿಗೆ ಹೆಚ್ಚಾಗಿ ಅನಿವಾರ್ಯತೆ ಬಿದ್ದಾಗ ಮಾತ್ರ ಆ ವಸ್ತುವನ್ನು ಉತ್ಪಾದಿಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ವಾಣಿಜ್ಯ ವಿಭಾಗದ ಡೀನ್ ಡಾ. ರವಿಕಲಾ, ಉಪನ್ಯಾಸಕಿ ಅಕ್ಷತಾ ನಾಯಕ್ ಉಪಸ್ಥಿತರಿದ್ದರು. ವಾಣಿಜ್ಯವಿಭಾಗದ ಉಪನ್ಯಾಸಕಿ ಅಂಕಿತಾ ಸಹಕರಿಸಿದರು.
ಶಿಕ್ಷಣ
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ಕನ್ನಡ ಭಾಷಾ ಕಾರ್ಯಾಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಅ 7 ರಂದು ಭಾಷಣ ಕಲೆ, ಕವನ ರಚನೆ, ಕಥಾ ರಚನೆ, ಕಾರ್ಯಕ್ರಮ ನಿರೂಪಣೆ ಹಾಗೂ ಪತ್ರಿಕಾ ವರದಿಯ ಕುರಿತು ಕಾರ್ಯಾಗಾರವು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ಅ 7 ರಂದು ಭಾಷಣ ಕಲೆ, ಕವನ ರಚನೆ, ಕಥಾ ರಚನೆ, ಕಾರ್ಯಕ್ರಮ ನಿರೂಪಣೆ ಹಾಗೂ ಪತ್ರಿಕಾ ವರದಿಯ ಕುರಿತು ಕಾರ್ಯಾಗಾರವು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಸುಳ್ಯದ ಸಾಹಿತಿ ಹಾಗೂ ಡಿಜಿಟಲ್ ಆರ್ಟ್ ನ ಉದಯ ಭಾಸ್ಕರ್ ಮಾತನಾಡಿ, ಸಾಹಿತ್ಯವು ನಮ್ಮೊಳಗಿನಿಂದ ಅಭಿವ್ಯಕ್ತಿಗೊಳ್ಳುವ ಮಾಧ್ಯಮ. ಸಾಹಿತ್ಯ ಲೋಕದ ಬರಹಗಳು ಮನುಷ್ಯನ ಕಲ್ಪನೆ ಮತ್ತು ಚಿಂತನೆಗಳ ಫಲಶ್ರುತಿ. ಸಾಹಿತಿಗೆ ಮುಖ್ಯವಾಗಿ ಶಬ್ದ ಸಂಪತ್ತು ಇರಬೇಕು. ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಪ್ರತಿಯೊಂದು ಭಾಷೆಗೂ ಸಮಾನ ಗೌರವವನ್ನು ನೀಡುವುದು ಅತ್ಯಂತ ಅಗತ್ಯವಿದ್ದು, ವಿವಿಧ ಭಾಷೆಗಳನ್ನು ಕಲಿಯುವುದರಿಂದ ನಮ್ಮ ಯೋಚನಾ ಶಕ್ತಿ ವೃದ್ಧಿಸುತ್ತದೆ. ಕನ್ನಡ ಒಂದು ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಕನ್ನಡವನ್ನು ಕಲಿಯುವುದರ ಜೊತೆಗೆ, ಕನ್ನಡ ಭಾಷೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆಗಳನ್ನು ನೀಡಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಕನ್ನಡ ಸಂಘದ ನಿರ್ದೇಶಕರಾದ ಉಷಾ ಎ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ವರ್ಗ ಉಪಸ್ಥಿತರಿದ್ದರು.
ಶಿಕ್ಷಣ
Vivekananda-ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಶಾಲಾ ರಕ್ಷಕ-ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿಣಿ ಸಮಿತಿಯ ಸಭೆಯು ದಿನಾಂಕ 02-10-2026 ರಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ ಅವರ ಅಧ್ಯಕ್ಷತೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಭಾಸ್ಕರ ಬಲ್ಯಾಯರವರ ಉಪಸ್ಥಿತಿಯಲ್ಲಿ ನಡೆಯಿತು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿಣಿ ಸಮಿತಿಯ ಸಭೆಯು ದಿನಾಂಕ 02-10-2026 ರಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ ಅವರ ಅಧ್ಯಕ್ಷತೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಭಾಸ್ಕರ ಬಲ್ಯಾಯರವರ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ 2026-27 ನೇ ಶೈಕ್ಷಣಿಕ ಸಾಲಿನ ರಕ್ಷಕ- ಶಿಕ್ಷಕ ಸಂಘದ ಪದಾಧಿಕಾರಿಗಳಾಗಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಹತ್ತನೆಯ ತರಗತಿಯ ವಿದ್ಯಾರ್ಥಿಯ ಪೋಷಕರದ ಪ್ರತಿಭಾರವರು ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಚೇತನ, ರವೀಂದ್ರ, ವಿದ್ಯಾ ಅವರುಗಳು ಆಯ್ಕೆಯಾದರು.
2025-2026 ನೇ ಸಾಲಿನ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ ಅವರು ನಿಯೋಜಿತ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ, ನೂತನ ತಂಡಕ್ಕೆ ಶುಭಾಶಯಗಳನ್ನು ಕೋರಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಸಮರ್ಪಿಸಿ ಸಂಸ್ಥೆಯ ಶ್ರೇಯಾಭಿವೃದ್ಧಿಗೆ ಭರವಸೆಯ ಮಾತುಗಳನ್ನಾಡಿದರು.
ಸಭೆಯಲ್ಲಿ ಕಾರ್ಯಕಾರಿಣಿ ಸಮಿತಿಯ ಪ್ರತಿನಿಧಿಗಳು ಹಾಗೂ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಶಿಕ್ಷಣ
Vivekananda-ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆ ವತಿಯಿಂದ ಕ್ಯಾಂಪಸ್ ಸಂದರ್ಶನ
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ “ಯೂನಿಮೆಕ್ ಏರೋಸ್ಪೇಸ್” ಸಂಸ್ಥೆಯ ವತಿಯಿಂದ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರಕ್ರಿಯೆಯಲ್ಲಿ 14 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಕಂಪನಿಯ ಹೆಚ್.ಆರ್. ಅಧಿಕಾರಿ ಸುನಿಲ್ ಹಾಗೂ ನೇಮಕಾತಿ ಅಧಿಕಾರಿ ಸಂತೋಷ್.ವಿ.ಜೋಸ್ ಸಂದರ್ಶನ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆಗಿರುವ ಸಂತೋಷ್.ವಿ.ಜೋಸ್ ಅವರು ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಜೀವನ ರೂಪಿಸಿಕೊಳ್ಳುವ ಕುರಿತು ಮತ್ತು ಭವಿಷ್ಯದ ಅವಕಾಶಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ಲೇಸ್‌ಮೆಂಟ್ ವಿಭಾಗದ ಅಧಿಕಾರಿ ಉಷಾಕಿರಣ್ ಹಾಗೂ ಮೆಕ್ಯಾನಿಕಲ್ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
-
ಬಿಗ್ ನ್ಯೂಸ್21 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ಬಿಗ್ ನ್ಯೂಸ್20 hours agoSDPI-ಮಕ್ಕಳ ಆಟದ ಉಪಕರಣಗಳೇ ಹಾಳು: ಕಾರಂತರ ಬಾಲವನದ ದುಸ್ಥಿತಿಗೆ ಎಸ್ಡಿಪಿಐ ಅಸಮಾಧಾನ
-
ಬಿಗ್ ನ್ಯೂಸ್19 hours agoReservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
-
ಅಪರಾಧ19 hours agoDigital Arrest-‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ಮಹಿಳೆಗೆ ₹2 ಕೋಟಿ ವಂಚನೆ
-
ಅಂತರ ರಾಜ್ಯ18 hours agoNana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
-
ಅಂತರ ರಾಜ್ಯ18 hours agoDK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
-
ಅಂತರ ರಾಜ್ಯ20 hours agoCEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
-
ಮಂಗಳೂರು17 hours agoMangaluru-ಬೆಳೆ ವಿಮೆ ಅನ್ಯಾಯ ಆರೋಪ: ಅ.9ರಂದು ಮಂಗಳೂರಿನಲ್ಲಿ ರೈತರ ಬೃಹತ್ ಹಕ್ಕೊತ್ತಾಯ | ಸಹಕಾರ ಭಾರತಿ – ಬಿಜೆಪಿ ಬೆಂಬಲ


















