ಬಿಗ್ ನ್ಯೂಸ್
Puttur-ಪುತ್ತೂರು: ಓವರ್‌ಟೇಕ್ ಮಾಡುವ ಭರದಲ್ಲಿ ಆಂಬ್ಯುಲೆನ್ಸ್ ಗೆ ಢಿಕ್ಕಿ ಹೊಡೆದ ಕಂಟೈನರ್-ಆಂಬ್ಯುಲೆನ್ಸ್ ನಲ್ಲಿದ್ದ ಮಗು ಸಹಿತ ಐದು ಮಂದಿಗೆ ಗಾಯ
ಇಂದು ( ಸೆ.2) ಸಂಜೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಳಿ ಆಂಬ್ಯುಲೆನ್ಸ್ ಮತ್ತು ಕಂಟೈನರ್ ಮಧ್ಯೆ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್‌ನಲ್ಲಿದ್ದ ಐದು ಮಂದಿ ಗಾಯಗೊಂಡಿದ್ದಾರೆ. ಕಂಟೈನರ್ ಚಾಲಕ ಜೆಸಿಬಿಯೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದ ಆಂಬ್ಯುಲೆನ್ಸ್ ನ ಮುಂಭಾಗ ನಜ್ಜುಗುಜ್ಜಾಗಿದ್ದು ಕಂಟೈನರ್‌ಗೂ ಹಾನಿ ಉಂಟಾಗಿದೆ.
ಪುತ್ತೂರು: ಇಂದು ( ಸೆ.2) ಸಂಜೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಳಿ ಆಂಬ್ಯುಲೆನ್ಸ್ ಮತ್ತು ಕಂಟೈನರ್ ಮಧ್ಯೆ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್‌ನಲ್ಲಿದ್ದ ಐದು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಜಯಪ್ರಕಾಶ್ ಎಂಬವರು ಸುಳ್ಯದಿಂದ ಮಂಗಳೂರು ಆಸ್ಪತ್ರೆಗೆ ಮಗುವೊಂದನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್(ಕೆಎ 21, ಬಿ 1971) ಹಾಗೂ ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತದಿಂದಾಗಿ ಆಂಬ್ಯುಲೆನ್ಸ್ ನಲ್ಲಿದ್ದ ಮಗು ಸಹಿತ ಐದು ಮಂದಿಗೆ ಗಾಯವಾಗಿದೆ. ಗಾಯಗೊಂಡವರನ್ನು ಇನ್ನೊಂದು ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಜೆಸಿಬಿಯೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಕಂಟೈನರ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದ ಆಂಬ್ಯುಲೆನ್ಸ್ ನ ಮುಂಭಾಗ ನಜ್ಜುಗುಜ್ಜಾಗಿದ್ದು ಕಂಟೈನರ್‌ಗೂ ಹಾನಿ ಉಂಟಾಗಿದೆ.
ಸ್ಥಳೀಯ
Shweta Motors-ಸಿದ್ದಕಟ್ಟೆಯಲ್ಲಿ ಅ.11ರಂದು ಶ್ವೇತಾ ಮೋಟಾರ್ಸ್‌ನ ಎರಡನೇ ಶಾಖೆ ಶುಭಾರಂಭ; TVS, Bajaj, Suzuki ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ದ್ವಿಚಕ್ರ ವಾಹನಗಳ ಮಾರಾಟ, ಸೇವಾ ಸೌಲಭ್ಯ ಲಭ್ಯ
ದ್ವಿಚಕ್ರ ವಾಹನಗಳ ಖರೀದಿ ಮತ್ತು ಸೇವೆಗಾಗಿ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ವೇತಾ ಮೋಟಾರ್ಸ್ ತನ್ನ ಎರಡನೇ ಶಾಖೆಯನ್ನು ಸಿದ್ದಕಟ್ಟೆಯಲ್ಲಿ ಆರಂಭಿಸುತ್ತಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 9.45ಕ್ಕೆ ಸಿದ್ದಕಟ್ಟೆಯ ಮುಖ್ಯ ರಸ್ತೆಯ ಮಡಾಯಿ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.

ಸಿದ್ದಕಟ್ಟೆ: ದ್ವಿಚಕ್ರ ವಾಹನಗಳ ಖರೀದಿ ಮತ್ತು ಸೇವೆಗಾಗಿ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ವೇತಾ ಮೋಟಾರ್ಸ್ ತನ್ನ ಎರಡನೇ ಶಾಖೆಯನ್ನು ಸಿದ್ದಕಟ್ಟೆಯಲ್ಲಿ ಆರಂಭಿಸುತ್ತಿದೆ. ನೂತನ ಶಾಖೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 9.45ಕ್ಕೆ ಸಿದ್ದಕಟ್ಟೆಯ ಮುಖ್ಯ ರಸ್ತೆಯ ಮಡಾಯಿ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಶ್ವೇತಾ ಮೋಟಾರ್ಸ್‌ನಲ್ಲಿ TVS, Bajaj, Suzuki ಸೇರಿದಂತೆ ಪ್ರಮುಖ ಕಂಪನಿಗಳ ವಿವಿಧ ಮಾದರಿಯ ದ್ವಿಚಕ್ರ ವಾಹನಗಳ ಮಾರಾಟ ಹಾಗೂ ಸೇವಾ ಸೌಲಭ್ಯ ಲಭ್ಯವಿರಲಿದೆ. ಒಂದೇ ಸೂರಿನಡಿ ವಿವಿಧ ಬ್ರ್ಯಾಂಡ್‌ಗಳ ವಾಹನಗಳ ಖರೀದಿ ಮತ್ತು ಸೇವೆ ಪಡೆಯಲು ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.
ಸಂಸ್ಥೆಯ ಎರಡನೇ ಶಾಖೆಯ ಆರಂಭದೊಂದಿಗೆ ಸಿದ್ದಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ ದ್ವಿಚಕ್ರ ವಾಹನಗಳ ಖರೀದಿ ಮತ್ತು ನಿರ್ವಹಣಾ ಸೇವೆಗಳನ್ನು ಸುಲಭವಾಗಿ ಪಡೆಯಲು ಅವಕಾಶ ದೊರೆಯಲಿದೆ.

ಶ್ವೇತಾ ಮೋಟಾರ್ಸ್‌ನ ಪ್ರೊಪ್ರೈಟರ್ ಹರೀಶ್ ಬಂಗೇರ ಅವರು ನೂತನ ಶಾಖೆಯ ಉದ್ಘಾಟನಾ ಸಮಾರಂಭಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ರಾಜ್ಯ
Robotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್‌ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ
ಸ್ಪೇನ್‌ನ ಬಾರ್ಸಿಲೋನಾದಲ್ಲಿ ಕುಳಿತು ವೈದ್ಯರೊಬ್ಬರು 12 ಸಾವಿರ ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಕರ್ನಾಟಕದ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಸಾಧ್ಯತೆಗಳನ್ನು ಮತ್ತೊಮ್ಮೆ ಸಾಬೀತುಪಡಿಸಲಾಗಿದೆ.
ಚಿಕ್ಕಬಳ್ಳಾಪುರ: ಸ್ಪೇನ್‌ನ ಬಾರ್ಸಿಲೋನಾದಲ್ಲಿ ಕುಳಿತು ವೈದ್ಯರೊಬ್ಬರು 12 ಸಾವಿರ ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಕರ್ನಾಟಕದ ಮುದ್ದೇನಹಳ್ಳಿಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಸಾಧ್ಯತೆಗಳನ್ನು ಮತ್ತೊಮ್ಮೆ ಸಾಬೀತುಪಡಿಸಲಾಗಿದೆ.
ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (SMSIMSR) ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.
ಭಾರತೀಯ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ಕ್ಷೇತ್ರದ ಪ್ರಮುಖ ತಜ್ಞ ಡಾ. ಸುಧೀರ್ ಶ್ರೀವಾಸ್ತವ ಅವರು ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ಅಸೋಸಿಯೇಷನ್ ಫಾರ್ ಕಾರ್ಡಿಯೋ-ಥೊರಾಸಿಕ್ ಸರ್ಜರಿ (EACTS) ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾಗಲೇ ದೂರದಿಂದ ರೋಬೋಟ್ ನಿಯಂತ್ರಿಸಿ ಶಸ್ತ್ರಚಿಕಿತ್ಸೆ ನಡೆಸಿದರು.
ಜನ್ಮಜಾತ ಹೃದಯ ಸಮಸ್ಯೆಗೆ ಚಿಕಿತ್ಸೆ
ಕೋಲಾರ ಜಿಲ್ಲೆಯ 26 ವರ್ಷದ ಮಹಿಳೆಯೊಬ್ಬರು ಹೃದಯದ ಮೇಲಿನ ಎರಡು ಕೋಣೆಗಳ ನಡುವಿನ ಗೋಡೆಯಲ್ಲಿ ಜನ್ಮಜಾತ ರಂಧ್ರವಿರುವ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯಕೀಯ ಭಾಷೆಯಲ್ಲಿ ಇದನ್ನು ಆಟ್ರಿಯಲ್ ಸೆಪ್ಟಲ್ ಡಿಫೆಕ್ಟ್ (ASD) ಎಂದು ಕರೆಯಲಾಗುತ್ತದೆ.
ಬಾರ್ಸಿಲೋನಾದಲ್ಲಿ ಅಳವಡಿಸಲಾಗಿದ್ದ ರೋಬೋಟಿಕ್ ಶಸ್ತ್ರಚಿಕಿತ್ಸಾ ಕನ್ಸೋಲ್ ಮೂಲಕ ಡಾ. ಸುಧೀರ್ ಶ್ರೀವಾಸ್ತವ ಅವರು ಮುದ್ದೇನಹಳ್ಳಿಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ‘ಎಸ್‌ಎಸ್‌ಐ ಮಂತ್ರ’ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿದರು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಿತು.
ಮಣಿಪಾಲ್ ಆಸ್ಪತ್ರೆಯ ಜೈಪುರ ಘಟಕದ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಹಾಗೂ ರೋಬೋಟಿಕ್ ಶಸ್ತ್ರಚಿಕಿತ್ಸಕ ಡಾ. ಲಲಿತ್ ಮಲಿಕ್ ಮತ್ತು ಮುದ್ದೇನಹಳ್ಳಿಯ ಸಂಸ್ಥೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ಸಿ.ಎಸ್. ಹಿರೇಮಠ ಅವರು ಸ್ಥಳದಲ್ಲಿದ್ದು, ಶಸ್ತ್ರಚಿಕಿತ್ಸೆಗೆ ಅಗತ್ಯವಾದ ನೆರವು ನೀಡಿದರು. ರೋಗಿಯ ಆರೋಗ್ಯದ ಮೇಲೂ ನಿರಂತರ ನಿಗಾ ವಹಿಸಿದರು.
ಆರು ಗಂಟೆಗಳಲ್ಲಿ ಉಸಿರಾಟದ ಟ್ಯೂಬ್ ತೆರವು
ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಸುಮಾರು ಆರು ಗಂಟೆಗಳ ನಂತರ ಉಸಿರಾಟಕ್ಕೆ ಅಳವಡಿಸಿದ್ದ ಟ್ಯೂಬ್ ಅನ್ನು ತೆಗೆದುಹಾಕಲಾಯಿತು ಎಂದು ಆಸ್ಪತ್ರೆ ತಿಳಿಸಿದೆ.
ಶಸ್ತ್ರಚಿಕಿತ್ಸೆ ವೇಳೆ ಮೂರು ಸಣ್ಣ ಛೇದನಗಳನ್ನು ಮಾಡಲಾಗಿದ್ದು, ಪ್ರತಿಯೊಂದೂ ಐದು ಮಿಲಿಮೀಟರ್‌ಗಿಂತ ಕಡಿಮೆ ಗಾತ್ರದ್ದಾಗಿತ್ತು. ಇದರಿಂದ ರಕ್ತಸ್ರಾವ ಮತ್ತು ಶಸ್ತ್ರಚಿಕಿತ್ಸೆಯ ನಂತರದ ನೋವು ಕಡಿಮೆಯಾಗಿತ್ತು ಎಂದು ಸಂಸ್ಥೆ ಹೇಳಿದೆ.
ದೂರದ ಅಂತರವನ್ನೂ ಮೀರಿದ ವೈದ್ಯಕೀಯ ತಂತ್ರಜ್ಞಾನ
ಇದೇ ಆಸ್ಪತ್ರೆಯಲ್ಲಿ ಈ ಹಿಂದೆ ಗುರುಗ್ರಾಮ್‌ನಿಂದ ರೋಬೋಟಿಕ್ ವ್ಯವಸ್ಥೆಯನ್ನು ನಿಯಂತ್ರಿಸಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಸ್ಪೇನ್‌ನ ಬಾರ್ಸಿಲೋನಾದಿಂದಲೇ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ದೂರಸ್ಥ ರೋಬೋಟಿಕ್ ವೈದ್ಯಕೀಯ ತಂತ್ರಜ್ಞಾನದ ಅಂತರರಾಷ್ಟ್ರೀಯ ಬಳಕೆಯ ಸಾಧ್ಯತೆಗಳನ್ನು ಪ್ರದರ್ಶಿಸಲಾಗಿದೆ.
ಇಂತಹ ತಂತ್ರಜ್ಞಾನವು ಭವಿಷ್ಯದಲ್ಲಿ ಗ್ರಾಮೀಣ ಪ್ರದೇಶಗಳು ಹಾಗೂ ಪರಿಣತ ವೈದ್ಯರ ಕೊರತೆಯಿರುವ ಸ್ಥಳಗಳಿಗೂ ಉನ್ನತ ಮಟ್ಟದ ವೈದ್ಯಕೀಯ ಸೇವೆ ತಲುಪಿಸಲು ನೆರವಾಗಬಹುದು. ವೈದ್ಯಕೀಯ ಶಿಕ್ಷಣ, ಶಸ್ತ್ರಚಿಕಿತ್ಸಾ ತರಬೇತಿ ಮತ್ತು ವಿವಿಧ ದೇಶಗಳ ತಜ್ಞ ವೈದ್ಯರ ಸಹಯೋಗಕ್ಕೂ ಇದು ಹೊಸ ಅವಕಾಶಗಳನ್ನು ಕಲ್ಪಿಸಬಹುದು.
ಆದರೆ ಇಂತಹ ಶಸ್ತ್ರಚಿಕಿತ್ಸೆಗಳನ್ನು ಸುರಕ್ಷಿತವಾಗಿ ನಡೆಸಲು ವಿಶ್ವಾಸಾರ್ಹ ಸಂವಹನ ವ್ಯವಸ್ಥೆ, ಸ್ಥಳೀಯ ವೈದ್ಯಕೀಯ ತಂಡದ ಸಮನ್ವಯ ಮತ್ತು ಸೂಕ್ತ ಸುರಕ್ಷತಾ ಕ್ರಮಗಳು ಅತ್ಯಗತ್ಯ.
ಬಡ ಕುಟುಂಬದ ಮಹಿಳೆಗೆ ಸಂಪೂರ್ಣ ಉಚಿತ ಚಿಕಿತ್ಸೆ
ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಇಬ್ಬರು ಮಕ್ಕಳ ತಾಯಿಯಾಗಿದ್ದು, ಅವರ ಪತಿ ಆಟೋರಿಕ್ಷಾ ಚಾಲಕರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಈ ಕುಟುಂಬಕ್ಕೆ ದುಬಾರಿ ಹೃದಯ ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸುವುದು ಕಷ್ಟವಾಗಿತ್ತು.
ಇದನ್ನು ಗಮನದಲ್ಲಿಟ್ಟುಕೊಂಡು ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಶಸ್ತ್ರಚಿಕಿತ್ಸೆ ಸೇರಿದಂತೆ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಿದೆ.
ಆಧುನಿಕ ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ನಡೆದ ಈ ಶಸ್ತ್ರಚಿಕಿತ್ಸೆ, ದೂರದ ಅಂತರವನ್ನು ಮೀರಿಯೂ ಪರಿಣತ ವೈದ್ಯಕೀಯ ಸೇವೆಯನ್ನು ರೋಗಿಗಳಿಗೆ ತಲುಪಿಸಬಹುದೆಂಬುದಕ್ಕೆ ಮಹತ್ವದ ಉದಾಹರಣೆಯಾಗಿದೆ.
ಅಂತರ ರಾಜ್ಯ
Dhruv Rati-BIG BREAKING: ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನಲೆ – ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ?
ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಶನಿವಾರ ಬೆಳಗ್ಗೆ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ಹಿಂದಿ ವರದಿ ಮಾಡಿದೆ.
ಗುರುಗ್ರಾಮ, ಅ. 10: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಶನಿವಾರ ಬೆಳಗ್ಗೆ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ಹಿಂದಿ ವರದಿ ಮಾಡಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಆಯೋಜಿಸಲು ಉದ್ದೇಶಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಧ್ರುವ್ ರಾಠಿ ದೆಹಲಿಗೆ ತೆರಳಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ಗುರುಗ್ರಾಮದ ಸೆಕ್ಟರ್ 56ರ ಸೆಂಟ್ರಲ್ ಪಾರ್ಕ್ ವಿಹಾರ್‌ನಲ್ಲಿರುವ ರಾಠಿ ಅವರ ಕುಟುಂಬದ ನಿವಾಸಕ್ಕೆ ಶುಕ್ರವಾರ ತಡರಾತ್ರಿಯಿಂದಲೇ ಸುಮಾರು 50 ಪೊಲೀಸ್ ಸಿಬ್ಬಂದಿ ಜಮಾಯಿಸಿದ್ದರು. ಶನಿವಾರ ಬೆಳಗ್ಗೆ 7.48ರ ಸುಮಾರಿಗೆ ಅವರ ತಾಯಿ ಬಾಗಿಲು ತೆರೆದ ಬಳಿಕ ಪೊಲೀಸರು ಮನೆಯೊಳಗೆ ಪ್ರವೇಶಿಸಿ ರಾಠಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಆದರೆ, ಈ ಬೆಳವಣಿಗೆಗೆ ಸಂಬಂಧಿಸಿದಂತೆ ಪೊಲೀಸರು ಅಧಿಕೃತವಾಗಿ ನೀಡಿರುವ ಹೇಳಿಕೆ ಅಥವಾ ವಶಕ್ಕೆ ಪಡೆಯಲು ಕಾರಣವೇನು ಎಂಬ ಕುರಿತು ಹೆಚ್ಚಿನ ಮಾಹಿತಿ ವರದಿಯಲ್ಲಿ ಲಭ್ಯವಾಗಿಲ್ಲ
-
ಮಂಗಳೂರು20 hours agoMangalore-ಮಂಗಳೂರು : 2 ತಿಂಗಳ ಬಳಿಕ ಸಮಾಧಿಯಿಂದ ಹೊರಬರಲಿದೆ ಆಲ್ಬರ್ಟ್ ರೇಗೋ ಶವ..!; ಮಗಳಿಂದಲೇ ತಂದೆಯ ಕೊಲೆ : ಸ್ನೇಹಿತನ ಆರೋಪ – ತನಿಖೆಗೆ ಸಿಗಲಿದೆ ಮಹತ್ವದ ತಿರುವು
-
ಬಿಗ್ ನ್ಯೂಸ್18 hours agoKaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
-
ಅಪರಾಧ18 hours agoPuttur-ಪುತ್ತೂರು: ಅಕ್ರಮ ಗೋ ಸಾಗಾಟ ಪ್ರಕರಣ; ಪರಾರಿಯಾಗಿದ್ದ ಇಬ್ಬರು ವಶಕ್ಕೆ, ಆರೋಪಿ ಶಿವಪ್ರಸಾದ್ ಮನೆ ಮಹಜರು?
-
ಮಂಗಳೂರು19 hours agoMRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
-
ಅಪರಾಧ23 hours agoRaid-ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ದಾಳಿ: 4 ಕಡೆ ನಿಯಮ ಉಲ್ಲಂಘನೆ, ಅವಧಿ ಮೀರಿದ ಪದಾರ್ಥ ಪತ್ತೆ..!
-
ಅಪರಾಧ20 hours agoMangalore-ವಾಟರ್ ಪ್ಯೂರಿಫೈಯರ್ ಒಳಗೆ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್- ಕೋರಿಯರ್ ಮೂಲಕ ಸಾಗಾಟ | ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಯತ್ನ ಮಂಗಳೂರಿನಲ್ಲಿ ವಿಫಲ – ಮೂವರ ಬಂಧನ..!
-
ಬಿಗ್ ನ್ಯೂಸ್24 hours agoGreen card-ಇನ್ಫೋಸಿಸ್, ಟಿಸಿಎಸ್ ಸೇರಿ 8 ಐಟಿ ಕಂಪನಿಗಳಿಗೆ ಅಮೆರಿಕದ ಗ್ರೀನ್ ಕಾರ್ಡ್ ಪ್ರಕ್ರಿಯೆ ಸ್ಥಗಿತ
-
ಸ್ಥಳೀಯ20 hours agoNavoor clinic-ನಾವೂರು ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ: ಘಟನಾ ಸ್ಥಳಕ್ಕೆ ಎಎಸ್ಪಿ ಭೇಟಿ, ಪರಿಶೀಲನೆ


















