ಕಾರ್ಯಕ್ರಮಗಳು
Ambika-ಅಂಬಿಕಾದಲ್ಲಿ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ
ಶ್ರೀ ಕೃಷ್ಣ ಪರಮಾತ್ಮನದ್ದು. ಸಜ್ಜನರ ಸಂರಕ್ಷಣೆ ದುರ್ಜನರ ಸಂಹಾರ ಮಾಡಿದಂತಹ ಪವಾಡ ಪುರುಷ ಶ್ರೀ ಕೃಷ್ಣ ಪರಮಾತ್ಮನ ಜನ್ಮದಿನ ಶ್ರೀ ಕೃಷ್ಣ ಜನ್ಮಾಷ್ಟಮಿ. ಕರ್ಮ ಮಾಡಿ . ಫಲ ನೀಡುವವನು ಭಗವಂತ. ಮಾಡಿದ ಕರ್ಮಕ್ಕೆ ಅಂಟಿಕೊಳ್ಳಬೇಡಿ .ಶ್ರೀ ಕೃಷ್ಣನನ್ನು ಧ್ಯಾನಿಸಿ ಆತನಿಗೆ ಶರಣಾಗತರಾಗಿರಿ ಭಗವಂತನ ಸ್ಮರಣೆ ಮಾಡಿ ಎಂದು ಪುತ್ತೂರು ಕಲಾ ಪರಿಷತ್ತಿನ ಅಧ್ಯಕ್ಷರಾದ ಭಾಸ್ಕರ್ ಬಾರ್ಯ ಹೇಳಿದರು.
ಭಗವನ್ನಾಮ ಸ್ಮರಣೆ, ಪೂಜೆ, ಪುಷ್ಪಾರ್ಚನೆಯಿಂದ ಭಗವಂತನನ್ನು ಒಲಿಸಿಕೊಳ್ಳಬಹುದು. ಜೊತೆಗೆ ಗುರುವಿನ ಅನುಗ್ರಹ ಇದ್ದಾಗ ಗುರಿ ಸೇರಬಹುದು. ಶಿಸ್ತು, ಸಂಸ್ಕೃತಿ ,ಕರ್ತವ್ಯಗಳ ಬಗ್ಗೆ ಭಗವಂತನೇ ಹೇಳಿದ ವಿಚಾರಗಳು ಭಗವದ್ಗೀತೆಯಲ್ಲಿದೆ.
ಭಗವದ್ಗೀತೆ ಎನ್ನುವದು ಆಧ್ಯಾತ್ಮದ ಮುಕುಟ. ಸದಾ ಸಂತೋಷದಿಂದಿರಿ ಎನ್ನುವುದೇ ಶ್ರೀ ಕೃಷ್ಣ ಪರಮಾತ್ಮನ ಸಂದೇಶ. ನಗುನಗುತ್ತಾ ಇದ್ದರೆ ಆಯಸ್ಸು ವೃದ್ಧಿಯಾಗುತ್ತದೆ. ಶ್ರೀಹರಿಯು ಸದಾ ಹಸನ್ಮುಖಿ ಆಗಿರುವುದರಿಂದ ಅದೇ ಸಂದೇಶ ಭಗವದ್ಗೀತೆಯದು.
ಶ್ರೀ ಕೃಷ್ಣ ಪರಮಾತ್ಮನದ್ದು. ಸಜ್ಜನರ ಸಂರಕ್ಷಣೆ ದುರ್ಜನರ ಸಂಹಾರ ಮಾಡಿದಂತಹ ಪವಾಡ ಪುರುಷ ಶ್ರೀ ಕೃಷ್ಣ ಪರಮಾತ್ಮನ ಜನ್ಮದಿನ ಶ್ರೀ ಕೃಷ್ಣ ಜನ್ಮಾಷ್ಟಮಿ. ಕರ್ಮ ಮಾಡಿ . ಫಲ ನೀಡುವವನು ಭಗವಂತ. ಮಾಡಿದ ಕರ್ಮಕ್ಕೆ ಅಂಟಿಕೊಳ್ಳಬೇಡಿ .ಶ್ರೀ ಕೃಷ್ಣನನ್ನು ಧ್ಯಾನಿಸಿ ಆತನಿಗೆ ಶರಣಾಗತರಾಗಿರಿ ಭಗವಂತನ ಸ್ಮರಣೆ ಮಾಡಿ.
ಭಗವದ್ಗೀತೆಯನ್ನು ಅಭ್ಯಾಸ ಮಾಡಿ, ನೀವು ಸಜ್ಜನರಾಗುತ್ತಿರಿ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ನಿಮ್ಮ ಮೇಲಿರಲಿ ಎಂದು ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷರು, ಪುತ್ತೂರು ಕಲಾ ಪರಿಷತ್ತಿನ ಅಧ್ಯಕ್ಷರು ಆದ ಭಾಸ್ಕರ್ ಬಾರ್ಯ ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಮುಖ್ಯ ಅಭ್ಯಗತರಾಗಿ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣನ ಸಂದೇಶವನ್ನು ಸಾರಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷ ಪೀಠವನ್ನು ಅಲಂಕರಿಸಿದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಸುಬ್ರಹ್ಮಣ್ಯ ನಟ್ಟೋಜರು ಮಾತನಾಡುತ್ತಾ ಇಂದು ದೇಶದ ಅತ್ಯಂತ ಸಂಭ್ರಮಾಚರಣೆಯ ದಿನ. ಶ್ರೀ ಕೃಷ್ಣನ ಗುಣಗಾನ ಮಾಡಿ .ನಾವು ಶ್ರೀರಾಮ, ಶ್ರೀ ಕೃಷ್ಣನ ಸಂತಾನ .ನಾವು ಕ್ಷಾತ್ರ ತೇಜ ಮೆರೆಯಲೇ ಬೇಕು, ಸ್ವಾಭಿಮಾನಿಗಳಾಗಬೇಕು .ಧರ್ಮವನ್ನು ರಕ್ಷಿಸಬೇಕು ಆಗ ಧರ್ಮ ನಮ್ಮನ್ನು ರಕ್ಷಿಸುವುದು. ಸ್ವಾಭಿಮಾನಿಗಳಾಗಿ. ಕೃಷ್ಣನ ಕೌಶಲ , ಕ್ಷಾತ್ರತ್ರೇಜಸ್ಸು, ಸದ್ಗುಣಗಳು ಇಂದಿನಿಂದ ನಿಮ್ಮಲ್ಲಿ ಮೇಳೈಸಲಿ ಎಂದು ಹರಸಿದರು.
ನಟ್ಟೋಜಾ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ರಾಜಶ್ರೀ ನಟ್ಟೋಜಾ, ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ ,ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿ ಕೊಂಡ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರನ್ನು ಅತಿಥಿಗಳು ಗೌರವಿಸಿದರು. ಉಪನ್ಯಾಸಕಿ ಅಕ್ಷತಾ ವಿಜೇತರ ಪಟ್ಟಿಯನ್ನು ವಾಚಿಸಿದರು.ನಂತರ ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಭಕ್ತಿ ಪೂರ್ವಕ ಭಜನಾ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿ ನಾಯಕರಾದ ಪವನ್ ಭಾರದ್ವಾಜ ,ಸಂಜಯ್ ,ವರ್ಷಿನಿ ಆಳ್ವ ಶ್ರೀ ಕೃಷ್ಣನ ವಿಗ್ರಹಕ್ಕೆ ಆರತಿ ಬೆಳಗಿದರು. ವಿದ್ಯಾರ್ಥಿನಿಯರಾದ ಆತ್ಮಶ್ರೀ ,ಮಹತಿ, ಶ್ರೀಮ ,ಧನ್ಯಶ್ರೀ ರ್ಪ್ರಾರ್ಥಿಸಿದರು. ವಿದ್ಯಾರ್ಥಿನಿ ಪೂರ್ವಿ ಕೆ ಎಂ ಸ್ವಾಗತಿಸಿ, ವೈಷ್ಣವಿ ಆಳ್ವ ವಂದಿಸಿದರು. ವಿದ್ಯಾರ್ಥಿ ಸಂಕೇತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಂತರ ದೇವರ ಪ್ರಸಾದ ವಿತರಿಸಲಾಯಿತು. ತದನಂತರ ಹಗ್ಗಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆಗಳನ್ನು ನಡೆಸಲಾಯಿತು.
ಕಾರ್ಯಕ್ರಮಗಳು
Puttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು
ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುತ್ತೂರು: ಸಾಮರಸ್ಯ ವೇದಿಕೆ ಪುತ್ತೂರು ಜಿಲ್ಲೆ ಹಾಗೂ ಸಾಮರಸ್ಯ ವೇದಿಕೆ ಪುತ್ತೂರು ನಗರ ಘಟಕದ ವತಿಯಿಂದ ‘ಸಾಮರಸ್ಯದ ತುಡರ್’ ಕಾರ್ಯಕ್ರಮ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಉರಿಯುತ್ತಿದ್ದ ದೀಪದಿಂದ ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶದ ಉಪೇಕ್ಷಿತ ಬಂಧುಗಳು ತಂದ ದೀಪಗಳನ್ನು ದೇವಸ್ಥಾನದ ಅರ್ಚಕರು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ದೇವಸ್ಥಾನದಲ್ಲಿ ಬೆಳಗಿಸಿದ ದೀಪವನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಉರ್ಲಾಂಡಿ, ಮಣ್ಣಾಪು, ಶೇವಿರೆ ಹಾಗೂ ಬ್ರಹ್ಮನಗರ ಪ್ರದೇಶಗಳ ಸುತ್ತಮುತ್ತಲಿನ ಮನೆಗಳಲ್ಲಿ ದೀಪ ಬೆಳಗಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಸಾಮರಸ್ಯ ಸಂಯೋಜಕ ರವೀಂದ್ರ, ಜಿಲ್ಲಾ ಸಾಮರಸ್ಯ ಸಂಯೋಜಕ ಶ್ರೀಕುಮಾರ್ ಸುಬ್ರಹ್ಮಣ್ಯ, ದಾಮೋದರ ಪಾಟಲಿ, ಅಪ್ಪಯ್ಯ ಮಣಿಯಾಣಿ, ರಮೇಶ್ ಪ್ರಭು, ಸಂತೋಷ್ ಬೊನಂತಾಯ, ರಮೇಶ್ ನೆಗಳಗುಳಿ, ದಯಾನಂದ ಬೋಲ್ವಾರ್, ಸಚಿನ್ ಶೆಣೈ, ರಮೇಶ್ ಉರ್ಲಾಂಡಿ, ಅಶೋಕ್ ಬ್ರಹ್ಮನಗರ ಸೇರಿದಂತೆ ಪ್ರಮುಖರು ಹಾಗೂ ಮಾತೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳು
Puttur-ಡಿ.8ರಂದು ಪುತ್ತೂರು ದೀಪೋತ್ಸವ: ದೇವಸ್ಥಾನದ ಮುಂಭಾಗದಲ್ಲಿ ಚಪ್ಪರ ಮುಹೂರ್ತ
ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.
ಪುತ್ತೂರು, ನ.18: ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ಉದ್ಯಮಿ ವಾಮನ ಪೈ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ದೀಪೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಶ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ದೇವಸ್ಥಾನದ ಮುಂಭಾಗದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೂ ವ್ಯವಸ್ಥಾಪನಾ ಸಮಿತಿಯ ಸಂಪೂರ್ಣ ಸಹಕಾರ ಇರಲಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದರು.

ದೀಪೋತ್ಸವ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ದೀಪೋತ್ಸವವನ್ನು ಉತ್ಸವದ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಐದು ಸಾವಿರಕ್ಕೂ ಅಧಿಕ ಮಂದಿ ದೀಪ ಬೆಳಗಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಉತ್ತಮ ಸಮಿತಿ ರಚಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಗಳು
Puttur-ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ ರಾಷ್ಟ್ರೀಯ ಈಜು ಚಾಂಪಿಯನ್ಶಿಪ್-2026
ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.
ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿದ್ಯಾಭಾರತಿಯ ಅಧೀನದಲ್ಲಿರುವ ದೇಶದ ವಿವಿಧ ರಾಜ್ಯಗಳ ಆರು ಕ್ಷೇತ್ರಗಳ ಒಟ್ಟು 162 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ 30 ಎಸ್ಕಾರ್ಟ್ಗಳು ಹಾಗೂ ತರಬೇತುದಾರರು ಭಾಗವಹಿಸಲಿದ್ದು, ಒಟ್ಟು 104 ಸ್ಪರ್ಧಾ ವಿಭಾಗಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ನವೆಂಬರ್ 20ರಂದು ಸಂಜೆ 6 ಗಂಟೆಗೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಈಜುಪಟು ರಾಧಾಕೃಷ್ಣ ನಾಯಕ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿದ್ಯಾಭಾರತಿ ಕರ್ನಾಟಕದ ರಾಜ್ಯಾಧ್ಯಕ್ಷ ಪರಮೇಶ್ವರ ಹೆಗ್ಡೆ ಭಾಗವಹಿಸಲಿದ್ದು, ಮನಮೋಹನ್ ರೈ ಚೆಲ್ಯಡ್ಕ, ವಸಂತ ಮಾಧವ, ಯು.ಪಿ. ಹರಿದಾಸ್ ಹಾಗೂ ಬಿ.ಡಿ. ಮಣಿ ಉಪಸ್ಥಿತರಿರಲಿದ್ದಾರೆ.
ನವೆಂಬರ್ 21ರಂದು ಪುತ್ತೂರಿನ ಬಾಲವನ ಈಜುಕೊಳದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
ನವೆಂಬರ್ 22ರಂದು ಬೆಳಗ್ಗೆ 11.30ಕ್ಕೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರದ ಜಂಟಿ ಕಾರ್ಯದರ್ಶಿ ವಸಂತ ಮಾಧವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬ್ರಾಂಡ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀಕಾಂತ್ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಸಂತಿ ಕೆ. ಹಾಗೂ ಪ್ರತಿಮಾ ಹೆಗ್ಡೆ ಉಪಸ್ಥಿತರಿರಲಿದ್ದಾರೆ ಎಂದು ಭರತ್ ಪೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ವಿಷ್ಣು ಪ್ರಸಾದ್ ಸಿ., ಪ್ರಾಂಶುಪಾಲೆ ಸಿಂಧು ವಿ.ಜಿ., ರವಿನಾರಾಯಣ, ಶ್ಯಾಮಲಾ ಹಾಗೂ ವೆಂಕಟರಮಣ ಮಂಕುಡೆ ಉಪಸ್ಥಿತರಿದ್ದರು
-
ಬಿಗ್ ನ್ಯೂಸ್11 hours agoBail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
-
ಅಂತರ ರಾಜ್ಯ10 hours agoFormer CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
-
ಸಿನೆಮಾ10 hours agoDawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
-
ನಿಧನ ವಾರ್ತೆ11 hours agoHeart attack-ಸಾಲಿಗ್ರಾಮ: ಕಚೇರಿಯಲ್ಲೇ ಹೃದಯಾಘಾತ; ಬಹುಮುಖ ಪ್ರತಿಭೆ ದಿನೇಶ್ ಹೊಳ್ಳ ನಿಧನ
-
ನಿಧನ ವಾರ್ತೆ11 hours agoMudbidri-ಮಂಗಳೂರಿನಲ್ಲಿ ಮೇಲ್ಛಾವಣಿ ಕೆಲಸದ ವೇಳೆ ಅವಘಡ: ಮೂಡುಬಿದಿರೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಾವು
-
ಮಂಗಳೂರು5 hours agoMangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
-
ನಿಧನ ವಾರ್ತೆ10 hours agoOne-sided love-ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಮೇಲಿನ ಒನ್ಸೈಡೆಡ್ ಲವ್; ಹಲ್ಲೆಗೊಳಗಾದ ಯುವಕ ಸಾವು
-
ಅಂತರ ರಾಜ್ಯ4 hours agoArrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!















