Connect with us

ಕಾರ್ಯಕ್ರಮಗಳು

Independence Day-ಸ್ವಾತಂತ್ರ್ಯೋತ್ಸವವನ್ನು ರಜಾ ದಿನ ಎಂದು ಪರಿಗಣಿಸುವ ದರಿದ್ರರು ನಾವಾಗಬಾರದು!

Published

on

Ad Widget

Ad Widget

Ad Widget

Ad Widget

ನಗರದಲ್ಲಿ ಉದ್ಯೋಗದಲ್ಲಿರುವ ಸ್ನೇಹಿತನೊಬ್ಬ ನಾನು ಆಗಸ್ಟ್ 15ಕ್ಕೆ ಊರಿಗೆ ಬರುತ್ತಿದ್ದೇನೆ ಸಿಗೋಣ ಎಂದ. ಆ ದಿನ ಸ್ವಾತಂತ್ರ‍್ಯ ದಿನ ಅಲ್ವಾ ಮಾರಾಯ, ನಮ್ಮ ಸಂಸ್ಥೆಯಲ್ಲಿ ಸಂಭ್ರಮದ ವಾತಾವರಣ. ಮೆರವಣಿಗೆ, ಭಾರತ ಮಾತೆಗೆ ಘೋಷಣೆಗಳ ಅರ್ಪಣೆ ಎಲ್ಲಾ ಇರುತ್ತದೆ ಎಂದಾಗ ‘ಹೊ ಹೌದಾ, ಹೋಗ್ಬೇಕಾಗ್ತದಾ, ರಜೆ ಅಲ್ವಾ ಸಿಗುವ ಅಂದುಕೊಂಡಿದ್ದೆ’ ಅಂದ!

Ad Widget

Ad Widget

Ad Widget

Ad Widget

ಇದು ಆ ಒಬ್ಬನ ಸಮಸ್ಯೆಯಲ್ಲ. ಬಹುತೇಕರ ಸಮಸ್ಯೆ. ಅವೆಷ್ಟೋ ಮಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನದ ಮೂಲಕ ಪಡೆದುಕೊಂಡ ಸ್ವಾತಂತ್ರ್ಯದ ಹೆಮ್ಮೆಯ ದಿನಾಚರಣೆ ಹೆಚ್ಚಿನ ಮಂದಿಗೆ ರಜಾ ದಿನ! ಸ್ವತಃ ಕಷ್ಟ ಪಡದೆ, ದಬ್ಬಾಳಿಕೆಯ, ಶೋಷಣೆಯ ಹಿಂಸೆಯನ್ನು ಅನುಭವಿಸದೆ ಇರುವವರಿಗೆ, ದೇಶದ ಬಗೆಗೆ ಜಾಗೃತಿ ಮೂಡಿಸದೇ ಇರುವ ಹೆತ್ತವರ ಮಕ್ಕಳಾಗಿರುವವರಿಗೆ, ರಾಷ್ಟ್ರಜಾಗೃತಿಯನ್ನು ಕಲಿಸದಿರುವ ವಿದ್ಯಾಸಂಸ್ಥೆಗಳೆಂಬ ಕಟ್ಟಡದಿಂದ ಹೊರಬಂದವರಿಗೆ ಸ್ವಾತಂತ್ರ್ಯ ದಿನಾಚರಣೆ ರಜಾ ದಿನವಲ್ಲದೆ ಇನ್ನೇನಾಗುವುದಕ್ಕೆ ಸಾಧ್ಯ ಹೇಳಿ…

Ad Widget

Ad Widget alt="Ad Widget"/>

Ad Widget

ಹಾಗಾದರೆ ಇದು ಈಗಿನ ತಲೆಮಾರಿನ ಸಮಸ್ಯೆಯಾ ಎಂದು ಕೇಳಿದರೆ ಖಂಡಿತಾ ಅವರದ್ದಷ್ಟೆ ಅಲ್ಲ, ಅವರ ಹೆತ್ತವರಲ್ಲೇ ಸಮಸ್ಯೆ ಇದೆ! ಇಂದು ಎಷ್ಟು ಜನ ಹೆತ್ತವರು ಸ್ವಾತಂತ್ರ್ಯದ ದಿನ ಕನಿಷ್ಟ ತಮ್ಮ ಪಕ್ಕದ ಶಿಕ್ಷಣ ಸಂಸ್ಥೆಗೆ ಅಥವ ಗ್ರಾಮ ಪಂಚಾಯತ್ ಗೆ ತೆರಳಿ ಧ್ವಜವಂದನೆ ನಡೆಸುತ್ತಾರೆ? ಬೇಡ, ತಮ್ಮ ಮನೆ ಅಂಗಳದಲ್ಲಾದರೂ ಎಷ್ಟು ಜನ ಶ್ರದ್ಧಾ ಭಕ್ತಿಯಿಂದ ಧ್ವಜಾರೋಹಣಗೈದು ಎಳೆಯರಿಗೊಂದು ಮೌನ ಸಂದೇಶ ರವಾನಿಸುತ್ತಿದ್ದಾರೆ?

Ad Widget

Ad Widget <> Ad Widget

ತಮ್ಮ ಹೆತ್ತವರೇ ಸ್ವಾತಂತ್ರ್ಯ ದಿನವನ್ನು ರಜಾ ದಿನವೆಂದು ಪರಿಗಣಿಸಿ ಮಸ್ತ್ ಮಜಾ ಮಾಡಿ ಎಂಬಂತೆ ನಡೆದುಕೊಳ್ಳುತ್ತಿದ್ದಾರಾದರೆ, ಸ್ವಾತಂತ್ರ‍್ಯದ ನೆಲೆಯಲ್ಲಿ ನಮ್ಮ ಜವಾಬ್ಧಾರಿಗಳ ಬಗೆಗೆ ಮನೆಯಲ್ಲಿ ಮಾತುಕತೆ ನಡೆಸುವುದಿಲ್ಲ ಎಂದಾದರೆ ಮಕ್ಕಳಿಗೆ ಅದು ಹೇಗೆ ತಾನೇ ದೇಶಪ್ರೇಮ ಆವರಿಸಿಕೊಂಡೀತು? ಹಾಗಾದರೆ ಇಂದು ಮಕ್ಕಳನ್ನು ಹಾಳುಮಾಡುತ್ತಿರುವವರು ಯಾರು? ಮೊಬೈಲ್ ಮಕ್ಕಳನ್ನು ಹಾಳು ಮಾಡಿತು, ಟಿವಿ ಮಕ್ಕಳನ್ನು ಹಾಳು ಮಾಡಿತು ಎನ್ನುವವರಿಗೆ ತಾವೇ ಸ್ವತಃ ಮಕ್ಕಳನ್ನು ಹಾಳುಮಾಡುತ್ತಿದ್ದೇವೆ ಎನಿಸದಿರುವುದು ದುರಂತ. ಈ ದೇಶದ ಅನ್ನ ತಿಂದು, ಈ ದೇಶದ ಕಣ ಕಣವನ್ನೂ ಅನುಭವಿಸಿ ಬದುಕುತ್ತಿರುವ ‘ಹಿರಿಯ’ರೆನಿಸಿದವರೂ ಈ ರೀತಿ ಬೇಜವಾಬ್ದಾರಿಯಿಂದ ನಡೆದುಕೊಂಡು ಮಕ್ಕಳಿಗೊಂದು ಕೆಟ್ಟ ಮಾದರಿಯಾಗುತ್ತಿರುವುದು ಶೋಚನೀಯ.

ನಾನಾ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳನ್ನು ಓದಿಸುತ್ತಿರುವ ಹೆತ್ತವರೇ, ಇಂದು ವಯಸ್ಸಾದವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಅವೆಷ್ಟೋ ಘಟನಾವಳಿಗಳು ನಮ್ಮ ಕಣ್ಣ ಮುಂದೆ ಕಾಣಿಸುತ್ತಿವೆ. ಹಿರಿಯರಿಗೆ ಕೈಕಾಲು ಗಟ್ಟಿ ಇರುವವರೆಗೆ ಸುಖೀ ಕುಟುಂಬ ಎನಿಸಿದ್ದು ಕೈಕಾಲು ಬಿದ್ದ ತಕ್ಷಣ ಛಿದ್ರ ಕುಟುಂಬವಾಗುತ್ತಿದೆ. ಇದಕ್ಕೆ ಕಾರಣ ನೀವೇ ಎಂಬುದು ನಿಮಗೆ ತಿಳಿದಿದೆಯಾ? ನಿಮ್ಮ ಮಕ್ಕಳಿಗೆ ನೀವು ಕೊಟ್ಟ ಸಂಸ್ಕಾರ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡಿದ್ದೀರಾ? ದೇಶ, ಧರ್ಮ, ಕುಟುಂಬ, ಸಮಾಜದ ಬಗೆಗೆ ಮಕ್ಕಳಿಗೆ ತಿಳಿಸಿಕೊಟ್ಟಿದ್ದೀರಾ? ಇವೆಲ್ಲವೂ ಅತ್ಯಂತ ಮುಖ್ಯವಾದದ್ದು ಎಂಬುದನ್ನು ಕಲಿಸಿಕೊಟ್ಟಿದ್ದೀರಾ? ಸ್ವಾತಂತ್ರ‍್ಯದ ದಿನ ಒಂಬತ್ತರವರೆಗೆ ಹೊದ್ದು ಮಲಗುವ ನೀವು ಯಾವ ಮಾದರಿಯನ್ನು ಮಕ್ಕಳಿಗೆ ಕಾಣಿಸುತ್ತಿದ್ದೀರಿ ಸ್ವಾಮೀ? ದೇಶದ ಪವಿತ್ರ ದಿನ ಪ್ರವಾಸ ಹಮ್ಮಿಕೊಳ್ಳುವ ನೀವು ನಿಜಕ್ಕೂ ಈ ದೇಶದ ನಾಗರಿಕರಾಗುವುದಕ್ಕೆ ಯೋಗ್ಯರಾ ಎಂದು ಪ್ರಶ್ನೆ ಮಾಡಿಕೊಂಡಿದ್ದೀರಾ? ಸಮಾಜಕ್ಕೆ ಬಿಡಿ, ನಿಮ್ಮ ಮಕ್ಕಳಿಗೇ ಮಾದರಿ ಎನಿಸದಿರುವ ನಿಮ್ಮನ್ನು ನಾಳೆ ಅವರು ಏನಕ್ಕಾಗಿ ಗೌರವಿಸಬೇಕು ಹೇಳಿ?

Ad Widget

Ad Widget

ಇಂದು ಶಾಲಾ ಕಾಲೇಜುಗಳಲ್ಲಿ ಕಡ್ಡಾಯ ಸ್ವಾತಂತ್ರ್ಯ ದಿನಾಚರಣೆ ಇದೆ ಎನ್ನುವ ಕಾರಣಕ್ಕೆ ಮಕ್ಕಳ ಸಂಖ್ಯೆ ಕಾಣಿಸುತ್ತಿದೆ. ಅನೇಕ ಕಡೆ, ಶಿಕ್ಷಕರೆನಿಸಿಕೊಂಡವರಲ್ಲಿಯೂ ಅನೇಕರು ಪರಂಚಿಕೊಂಡೇ ಸ್ವಾತಂತ್ರ್ಯೋತ್ಸವಕ್ಕೆ ಆಗಮಿಸುತ್ತಿದ್ದಾರೆ. ಇತ್ತ ಸರ್ಕಾರಿ ಉದ್ಯೋಗಿಗಳಲ್ಲಿಯೂ ಅನೇಕರು ಬರುತ್ತಿರುವುದು ಅನಿವಾರ್ಯವಾಗಿಯೇ ಹೊರತು ನಿಜ ಭಾವನೆಯಿಂದಲ್ಲ. ಖಾಸಗಿ ಸಂಸ್ಥೆಯವರಂತೂ ಕೇಳುವುದೇ ಬೇಡ. ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿದಂತೆ, ಎಲ್ಲೋ ಬೆರಳೆಣಿಕೆಯ ಖಾಸಗಿ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯುತ್ತದಾದರೂ ಉಳಿದಂತೆ ಅನೇಕ ಕಡೆ ಅದು ರಜಾ ದಿನ! ಸಾಪ್ಟ್ ವೇರ್ ಕಂಪೆನಿಗಳಂತೂ ತಮ್ಮ ಉದ್ಯೋಗಿಗಳನ್ನು ಸೇರಿಸಿ ಸ್ವಾತಂತ್ರ್ಯ ದಿನ ಆಚರಿಸುವಲ್ಲಿ ದಟ್ಟ ದರಿದ್ರರು. ಈ ದೇಶದಲ್ಲಿ ಹುಟ್ಟಿ, ಈ ದೇಶದಲ್ಲಿ ಬೆಳೆದು, ಈ ದೇಶದಿಂದಲೇ ಕೋಟ್ಯಾಂತರ ಸಂಪಾದಿಸುವ ಸಾಪ್ಟ್ ವೇರ್ ಕಂಪೆನಿಗಳಿಗೆ ಈ ದೇಶದ ಹಬ್ಬವನ್ನು ಆಚರಿಸಬೇಕೆಂಬ ಕನಿಷ್ಟ ಜ್ಞಾನವೂ ಇಲ್ಲ. ಅಲ್ಲಿ ಉದ್ಯೋಗಲ್ಲಿ ನಮ್ಮ ಮಕ್ಕಳಿದ್ದಾರೆಂದು ಹೆಮ್ಮೆ ಪಡುವ ಹೆತ್ತವರಿಗೆ ಒಂದು ಮುಷ್ಟಿ ನಾಚಿಕೆಯೂ ಆಗುವುದಿಲ್ಲ!

ಒಟ್ಟಿನಲ್ಲಿ ಸ್ವಾತಂತ್ರ್ಯೋತ್ಸವ ಇರುವುದು ಮಕ್ಕಳಿಗೆ ಎಂಬ ಮನೋಭಾವ ಹೆತ್ತವರಲ್ಲೇ ವ್ಯಾಪಕವಾಗಿ ಬೆಳೆದಿದೆ. ಸಮಾಜವೂ ಹಾಗೆಯೇ ಅಂದುಕೊಂಡಿದೆ!

ಅಂಬಿಕಾ ಮಾದರಿ:
ರಾಷ್ಟ್ರಪ್ರೇಮ ಹಾಗೂ ಧರ್ಮ ಜಾಗೃತಿಯ ಕೆಲಸಕ್ಕೆ ಯಾರು ಮುಂದಡಿ ಇಡುತ್ತಾರೋ ಗೊತ್ತಿಲ್ಲ. ಆದರೆ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಶಿಕ್ಷಣ ಸಂಸ್ಥೆಗಳು ಆರಂಭಗೊಂಡದ್ದೇ ಈ ಮಹಾನ್ ಕಾರ್ಯಕ್ಕಾಗಿ. ಆದ್ದರಿಂದಲೇ ಇಲ್ಲಿ ಕಾರ್ಗಿಲ್ ವಿಜಯೋತ್ಸವ, ಸ್ವಾತಂತ್ರ್ಯೋತ್ಸವ ಹಿಂದೂ ಧಾರ್ಮಿಕ ಹಬ್ಬಗಳನ್ನು ಪರಮ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಈ ಬಗೆಗೆ ಯಾರು ಬೆನ್ನ ಹಿಂದೆ ಏನು ಮಾತಾಡಿಕೊಳ್ಳುತ್ತಾರೋ ಎಂಬ ಭಯವೂ ಇಲ್ಲ. ದೇಶಭಕ್ತಿಯನ್ನು ಶಿಕ್ಷಣ ಸಂಸ್ಥೆಯಲ್ಲಿ ತುಂಬದಿದ್ದರೆ ಈ ಮಕ್ಕಳು ನಾಳೆ ಒಳ್ಳೆಯ ನಾಗರಿಕರಾಗುವುದಕ್ಕೆ ಸಾಧ್ಯವೇ? ಹಾಗಾಗಿ ಅಂಬಿಕಾದ ಕಾಯಕವೇ ದೇಶಪ್ರೇಮ ತುಂಬುವುದು. ಆ ಕಾರಣಕ್ಕಾಗಿಯೇ ಖರ್ಚು ವೆಚ್ಚದ ಮುಖ ನೋಡದೆ ಈ ವರ್ಷದ ಕಾರ್ಗಿಲ್ ವಿಜಯೋತ್ಸವದ ಸಂದರ್ಭದಲ್ಲಿ ಪರಮವೀರ ಚಕ್ರ ಪುರಸ್ಕೃತರೊಬ್ಬರನ್ನು ಕರೆತಂದು ನಮ್ಮ ಮಕ್ಕಳ ಮುಂದೆ ಪ್ರಸ್ತುತಪಡಿಸಲಾಗಿದೆ. ತನ್ಮೂಲಕ ನಮ್ಮ ಮಕ್ಕಳಿಗೆ ಪ್ರೇರಣೆಯಾಗಲಿ, ದೇಶಕ್ಕಾಗಿ ಮಿಡಿಯುವ ಮನಸ್ಥಿತಿ ಅವರಲ್ಲಿ ಒಡಮೂಡಲಿ ಎಂಬುದಷ್ಟೇ ಇದರ ಉದ್ದೇಶ. ಪ್ರತಿಬಾರಿಯೂ ಸ್ವಾತಂತ್ರ‍್ಯೋತ್ಸವ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡು ಭವ್ಯ ಮೆರವಣಿಗೆ ನಡೆಸಲಾಗುತ್ತದೆ. ಇದು ಪ್ರಚಾರಕ್ಕಾಗಿ ನಡೆಸುವ ಕೆಲಸ ಎಂದು ಯಾರಾದರೂ ಕುಹಕವಾಡುತ್ತಾರಾದರೆ ಅಂತಹವರಿಗೆ ಶೀಘ್ರವಾಗಿ ಮನಃಶಾಂತಿ ಸಿಗಲಿ ಎಂದಷ್ಟೇ ಹಾರೈಸಬಹುದು. ಮೆರವಣಿಗೆಯ ಉದ್ದೇಶ ಎಳೆಯ ಮನಸ್ಸುಗಳಲ್ಲಿ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ತುಂಬುವುದಷ್ಟೇ ಆಗಿದೆ. ಮೆರವಣಿಗೆಯುದ್ದಕ್ಕೂ ಮೂಡಿಬರುವ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಅವರ ಮನಸ್ಸಲ್ಲಿ ಅಚ್ಚಳಿಯದೆ ಉಳಿಯಬೇಕು, ಜೀವಿತದ ಕೊನೆಯ ಉಸಿರಿನವರೆಗೆ ದೇಶಭಕ್ತಿ ಅಂತರಂಗದಲ್ಲಿ ಸ್ಥಾಪಿತವಾಗಬೇಕು ಎಂಬುದೇ ಈ ಮೆರವಣಿಗೆಯ ಆಶಯ. ಹೇಗೆ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮದಂತಹ ಸ್ತೋತ್ರಗಳನ್ನು ಪಠಿಸುತ್ತಾ ಭಗವಂತನನ್ನು ಸ್ತುತಿಸುತ್ತೇವೋ ಅದೇ ರೀತಿಯಲ್ಲಿ ‘ಭಾರತ್ ಮಾತಾ ಕಿ ಜೈ’ಯಂತಹ ಘೋಷಣೆಗಳು ತಾಯಿ ಭಾರತಿಯನ್ನು ಸ್ತುತಿಸುವುದೇ ಆಗಿದೆ. ಈ ರೀತಿಯ ಸ್ತುತಿಸುವಿಕೆ ಎಳೆಯ ಮಕ್ಕಳಿಂದಲೇ ಮೂಡಿಬಂದು, ನಿರಂತರ ದೇಶಭಕ್ತಿಯನ್ನು ನಾಳಿನ ನಾಗರಿಕರ ಅಂತರಂಗದಲ್ಲಿ ಸ್ಥಿರಗೊಳಿಸುವುದೇ ಅಂಬಿಕಾದ ಪರಮೋದ್ದೇಶ.

ದೇಶದ ಪ್ರಧಾನಿಯೇ ಘರ್ ಘರ್ ತಿರಂಗಾ ಎಂಬ ಕಲ್ಪನೆಯನ್ನು ದೇಶಕ್ಕೆ ನೀಡಿದ್ದಾರೆ. ಮನೆಮನೆಯಲ್ಲೂ ಸ್ವಾತಂತ್ರ್ಯದ ಹಬ್ಬ ಆಯೋಜನೆಗೊಳ್ಳಲಿ. ಕೇವಲ ಅಂಬಿಕಾದ ವಿದ್ಯಾರ್ಥಿಗಳ ಹೆತ್ತವರಲ್ಲದೆ ಯಾವುದೇ ಸಂಸ್ಥೆಯ ವಿದ್ಯಾರ್ಥಿಗಳ ಹೆತ್ತವರೂ ಅಂಬಿಕಾದ ಭವ್ಯ ಮೆರವಣಿಗೆಯಲ್ಲಿ ತಮ್ಮ ಮಕ್ಕಳ ಜತೆ ಹೆಜ್ಜೆ ಹಾಕಿ ಸ್ವಯಂ ಮಾದರಿಗಳಾಗಿ ಮಕ್ಕಳ ಕಣ್ಣಲ್ಲಿ ‘ಆದರ್ಶ’ ಎನಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ನಮ್ಮ ಮಕ್ಕಳಿಗೆ ನಾವೇ ಹೀರೋಗಳೆನಿಸುವ ತನಕ ಸಿನೆಮಾ ನಟರೋ, ಕ್ರಿಕೆಟಿಗರೋ ಹೀರೋ ಆಗಿರುತ್ತಾರೆ. ಆದರೆ ಆ ಎಲ್ಲ ಆಕರ್ಷಣೆಗಳನ್ನು ದೇಶಪ್ರೇಮದ ಸಮ್ಮೋಹಿನಿಯಿಂದ ತೊಡೆದುಹಾಕಿ ‘ನೇಶನ್ ಫಸ್ಟ್’ ಕಲ್ಪನೆಯನ್ನು ಮಕ್ಕಳಲ್ಲಿ ತುಂಬುವುದಕ್ಕೆ ಇದು ಸಕಾಲ.

ಸ್ವಾತಂತ್ರ್ಯದ ಹಿನ್ನೆಲಯಲ್ಲಿ ಹತ್ತು – ಹನ್ನೊಂದು ವಯಸ್ಸಿನ ಅಂಬಿಕಾ ವಿದ್ಯಾರ್ಥಿಗಳೂ ದೇಶದ ಸ್ವಾತಂತ್ರö್ಯ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ನೆನಪಿಡಿ, ಆ ಮಕ್ಕಳಿಗೆ ಇದುವರೆಗೆ ಕೇವಲ ಹತ್ತು – ಹನ್ನೊಂದು ವರ್ಷ ಮಾತ್ರ ಈ ನೆಲದ ಮೇಲೆ ಜೀವನ ನಡೆಸಿದ ಋಣವಿದೆ. ಆದರೆ ಈ ಸಮಾಜದಲ್ಲಿನ ಹೆತ್ತವರಿಗೆ, ನಾಗರಿಕರಿಗೆ ನಲವತ್ತು, ಐವತ್ತು, ಅರವತ್ತು, ಎಪ್ಪತ್ತು ಅಥವ ಅದಕ್ಕಿಂತಲೂ ಹೆಚ್ಚು ವರ್ಷ ಈ ದೇಶದ ಅನ್ನ ತಿಂದ ಋಣವಿದೆ! ಹತ್ತೇ ವರ್ಷದ ಋಣ ಇರುವ ಪೋರರೂ ತಮ್ಮದಾದ ದೇಶಪ್ರೇಮವನ್ನು ಪ್ರಸ್ತುತಪಡಿಸುವಾಗ ನಾಲ್ಕಾರು ದಶಕಗಳ ಋಣ ಇರುವ ಹಿರಿಯರೆನಿಸಿಕೊಂಡ ನಮ್ಮ ದೇಶಪ್ರೇಮದ ಅನಾವರಣ ಹೇಗಿರಬೇಕು? ಈ ಬಗೆಗೆ ಯೋಚಿಸುವ ಅಗತ್ಯವಿಲ್ಲವೇ?

ನೆನಪಿಡಿ, ಸ್ವಾತಂತ್ರ‍್ಯೋತ್ಸವವನ್ನು ಯಾರು ರಜಾ ದಿನ ಅಂದುಕೊಳ್ಳುತ್ತಾರೋ ಅವರು ಅಕ್ಷರಶಃ ದರಿದ್ರರು ಮಾತ್ರವಲ್ಲ ಜೀವಂತ ಶವಗಳು, ಅಷ್ಟೆ! -ದೇಶಭಕ್ತ ನಾಗರಿಕ, ಪುತ್ತೂರು

Ad Widget
Click to comment

Leave a Reply

ಕಾರ್ಯಕ್ರಮಗಳು

Puttur-ಡಿ.8ರಂದು ಪುತ್ತೂರು ದೀಪೋತ್ಸವ: ದೇವಸ್ಥಾನದ ಮುಂಭಾಗದಲ್ಲಿ ಚಪ್ಪರ ಮುಹೂರ್ತ

Published

on

Ad Widget

Ad Widget

Ad Widget

Ad Widget

ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು, ನ.18: ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಡಿ.8ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪುತ್ತೂರು ದೀಪೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.

Ad Widget

Ad Widget alt="Ad Widget"/>

Ad Widget

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ಉದ್ಯಮಿ ವಾಮನ ಪೈ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ದೀಪೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.

Ad Widget

Ad Widget <> Ad Widget

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಶ್ ರೈ ಬೆಳ್ಳಿಪ್ಪಾಡಿ ಮಾತನಾಡಿ, ದೇವಸ್ಥಾನದ ಮುಂಭಾಗದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೂ ವ್ಯವಸ್ಥಾಪನಾ ಸಮಿತಿಯ ಸಂಪೂರ್ಣ ಸಹಕಾರ ಇರಲಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದರು.

ದೀಪೋತ್ಸವ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ದೀಪೋತ್ಸವವನ್ನು ಉತ್ಸವದ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಐದು ಸಾವಿರಕ್ಕೂ ಅಧಿಕ ಮಂದಿ ದೀಪ ಬೆಳಗಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಉತ್ತಮ ಸಮಿತಿ ರಚಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Ad Widget

Ad Widget

ವೇದಿಕೆಯಲ್ಲಿ ಉದ್ಯಮಿ ಜಯಕುಮಾರ್ ನಾಯರ್, ಸ್ವರ್ಣೋದ್ಯಮಿ ಈಶ್ವರ ಮುರಳಿ ಹಾಗೂ ದೀಪೋತ್ಸವ ಸಮಿತಿ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಂದಿಸಿದರು. ಸಂಚಾಲಕ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು.

Ad Widget
Continue Reading

ಕಾರ್ಯಕ್ರಮಗಳು

Puttur-ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್-2026

Published

on

Ad Widget

Ad Widget

Ad Widget

Ad Widget

ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.

Ad Widget

Ad Widget

Ad Widget

Ad Widget

ಪುತ್ತೂರು: ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಸಹಯೋಗದಲ್ಲಿ 37ನೇ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್-2026 ನವೆಂಬರ್ 20ರಿಂದ 22ರವರೆಗೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ಭರತ್ ಪೈ ತಿಳಿಸಿದರು.

Ad Widget

Ad Widget alt="Ad Widget"/>

Ad Widget

ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವಿದ್ಯಾಭಾರತಿಯ ಅಧೀನದಲ್ಲಿರುವ ದೇಶದ ವಿವಿಧ ರಾಜ್ಯಗಳ ಆರು ಕ್ಷೇತ್ರಗಳ ಒಟ್ಟು 162 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ 30 ಎಸ್ಕಾರ್ಟ್‌ಗಳು ಹಾಗೂ ತರಬೇತುದಾರರು ಭಾಗವಹಿಸಲಿದ್ದು, ಒಟ್ಟು 104 ಸ್ಪರ್ಧಾ ವಿಭಾಗಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

Ad Widget

Ad Widget <> Ad Widget

ನವೆಂಬರ್ 20ರಂದು ಸಂಜೆ 6 ಗಂಟೆಗೆ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಈಜುಪಟು ರಾಧಾಕೃಷ್ಣ ನಾಯಕ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿದ್ಯಾಭಾರತಿ ಕರ್ನಾಟಕದ ರಾಜ್ಯಾಧ್ಯಕ್ಷ ಪರಮೇಶ್ವರ ಹೆಗ್ಡೆ ಭಾಗವಹಿಸಲಿದ್ದು, ಮನಮೋಹನ್ ರೈ ಚೆಲ್ಯಡ್ಕ, ವಸಂತ ಮಾಧವ, ಯು.ಪಿ. ಹರಿದಾಸ್ ಹಾಗೂ ಬಿ.ಡಿ. ಮಣಿ ಉಪಸ್ಥಿತರಿರಲಿದ್ದಾರೆ.

Ad Widget

Ad Widget

ನವೆಂಬರ್ 21ರಂದು ಪುತ್ತೂರಿನ ಬಾಲವನ ಈಜುಕೊಳದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.

ನವೆಂಬರ್ 22ರಂದು ಬೆಳಗ್ಗೆ 11.30ಕ್ಕೆ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರದ ಜಂಟಿ ಕಾರ್ಯದರ್ಶಿ ವಸಂತ ಮಾಧವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬ್ರಾಂಡ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀಕಾಂತ್ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಸಂತಿ ಕೆ. ಹಾಗೂ ಪ್ರತಿಮಾ ಹೆಗ್ಡೆ ಉಪಸ್ಥಿತರಿರಲಿದ್ದಾರೆ ಎಂದು ಭರತ್ ಪೈ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ವಿಷ್ಣು ಪ್ರಸಾದ್ ಸಿ., ಪ್ರಾಂಶುಪಾಲೆ ಸಿಂಧು ವಿ.ಜಿ., ರವಿನಾರಾಯಣ, ಶ್ಯಾಮಲಾ ಹಾಗೂ ವೆಂಕಟರಮಣ ಮಂಕುಡೆ ಉಪಸ್ಥಿತರಿದ್ದರು

Ad Widget
Continue Reading

ಸ್ಥಳೀಯ

Savanoor-ಸವಣೂರು ಆದರ್ಶ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮ: ‘ಸಹಕಾರ ರಶ್ಮಿ’ ನೂತನ ಕಟ್ಟಡ ಉದ್ಘಾಟನೆ

Published

on

Ad Widget

Ad Widget

Ad Widget

Ad Widget

ಸಹಕಾರರತ್ನ ಸವಣೂರು ಕೆ. ಸೀತಾರಾಮ ರೈ ಅವರು ಅಧ್ಯಕ್ಷರಾಗಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿ, ಸವಣೂರು ಶಾಖೆ ಮತ್ತು ವಾಣಿಜ್ಯ ಸಂಕೀರ್ಣಗಳಿರುವ ಸಹಕಾರ ರಶ್ಮಿ’ ಕಟ್ಟಡದ ಉದ್ಘಾಟನೆ ಹಾಗೂ ಸಂಘದ ರಜತ ಮಹೋತ್ಸವ ನ.16ರಂದು ಸವಣೂರಿನಲ್ಲಿ ನಡೆಯಿತು.

Ad Widget

Ad Widget

Ad Widget

Ad Widget

ಪುತ್ತೂರು: ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈ ಅವರು ಅಧ್ಯಕ್ಷರಾಗಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿ, ಸವಣೂರು ಶಾಖೆ ಮತ್ತು ವಾಣಿಜ್ಯ ಸಂಕೀರ್ಣಗಳಿರುವ ಸಹಕಾರ ರಶ್ಮಿ’ ಕಟ್ಟಡದ ಉದ್ಘಾಟನೆ ಹಾಗೂ ಸಂಘದ ರಜತ ಮಹೋತ್ಸವ ನ.16ರಂದು ಸವಣೂರಿನಲ್ಲಿ ನಡೆಯಿತು.

Ad Widget

Ad Widget alt="Ad Widget"/>

Ad Widget

ಆದರ್ಶ ರಜತ ಪ್ರಶಸ್ತಿ ಪ್ರದಾನ
ಹಿರಿಯ ಸಹಕಾರಿ, ಸಹಕಾರ ರತ್ನ ಜಾಕೆ ಮಾಧವ ಗೌಡ ಅವರಿಗೆ ಆದರ್ಶ ರಜತ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಸಹಾಯಕ ಮಹಾಪ್ರಬಂಧಕ ಸುನಾರಾಜ್ ಶೆಟ್ಟಿ ಅವರು ಪ್ರಶಸ್ತಿ ಪತ್ರ ವಾಚಿಸಿದರು.

Ad Widget

Ad Widget <> Ad Widget

ಸಾಂಸ್ಕೃತಿಕ ಕಾರ್ಯಕ್ರಮ:
ಬೆಳಗ್ಗೆ ಯಜೇಶ್ ಆಚಾರ್ ಮತ್ತು ಬಳಗ ಸುಬ್ರಹ್ಮಣ್ಯ ಇವರಿಂದ ಭಕ್ತಿ ಗಾನಾಮೃತ, ಉಮೇಶ್‌ ದೇವಾಡಿಗ ಪುತ್ತೂರು ಬಳಗದವರಿಂದ ರಾಗ್‌ರಂಗ್ ಸಂಗೀತ ಕಾರ್ಯಕ್ರಮ, ಅಪರಾಹ್ನಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈ ಚೆಲ್ಯಡ್ಕ ಮತ್ತು ಬಳಗದವರಿಂದ ಯಕ್ಷನೃತ್ಯ ರೂಪಕ ನಡೆಯಿತು. ಸಮಾರಂಭದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಸನ್ಮಾನ:
ಸಹಕಾರ ರತ್ನ ಸವಣೂರು ಸೀತಾರಾಮ ರೈ ಅವರನ್ನು ಅವರ ಶಿಷ್ಯ ವೃಂದದವರು ಸನ್ಮಾನಿಸಿ ಗೌರವಿಸಿದರು. ಸಂಘದ ಆಡಳಿತ ಮಂಡಳಿಯಲ್ಲಿ ಆರಂಭದಿಂದಲೇ ನಿರ್ದೇಶಕರಾಗಿರುವ ಎನ್.ಸುಂದರ ರೈ ಸವಣೂರು, ಎಸ್.ಎಮ್. ಬಾಪು ಸಾಹೇಬ್ ಸುಳ್ಯ, ಬಿ.ಮಹಾಬಲ ರೈ ಬೋಳಂತೂರು, ಪೂರ್ಣಿಮ ಎಸ್‌. ಆಳ್ವ ಮಂಗಳೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದಲ್ಲಿ ಆರಂಭದಿಂದಲೇ ಸೇವೆ ಸಲ್ಲಿಸುತ್ತಿರುವ ಪ್ರಸ್ತುತ ಮಹಾಪ್ರಬಂಧಕರಾಗಿರುವ ವಸಂತ್ ಜಾಲಾಡಿ, ನಿವೃತ್ತರಾದ ಸಿಬ್ಬಂದಿಗಳಾದ ಮೋನಪ್ಪ ಗೌಡ ವಿಟ್ಲ, ಶ್ರೀನಿವಾಸ ತಂತ್ರಿ ಉಜಿರೆ, ಮನೋಜ್‌ಕುಮಾರ್ ಸುಳ್ಯ, ಸುರೇಖಾ ಬೆಳ್ತಂಗಡಿ, ನಿತ್ಯ ನಿಧಿ ಸಂಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಪುತ್ತೂರು ಶಾಖೆಯ ಕೃಷ್ಣಪ್ಪ, ಸುಬ್ರಹ್ಮಣ್ಯ ಶಾಖೆಯ ಶ್ರೀನಿವಾಸ ಡಿ., ಉಜಿರೆ ಶಾಖೆಯ ಮಂಜುನಾಥ ಶೆಟ್ಟಿ, ಸಂಘದ ಗುತ್ತಿಗೆದಾರ ಎಂ.ಎನ್.ಪ್ರಭಾಕರ್( ಡೆಕ್ಕನ್ ಡೀಲ್ ಪುತ್ತೂರು), ಕಟ್ಟಡದ ಇಂಜಿನಿಯರ್ ಸಚ್ಚಿದಾನಂದ (ನಿರ್ಮಾಣ್ ಅಸೋಸಿಯೇಟ್ಸ್ ಪುತ್ತೂರು) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ನಿರೂಪಿಸಿದ ರಾಕೇಶ್ ರೈ ಕೆಡೆಂಜಿಯವರಿಗೆ ಗೌರವಾರ್ಪಣೆ ಮಾಡಲಾಯಿತು.

Ad Widget

Ad Widget

ದಕ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ಸವಣೂರು ಗ್ರಾ.ಪಂ.ಆಡಳಿತಾಧಿಕಾರಿ ಹರೀಶ್ ಕೆ., ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ಮಹಾಪ್ರಬಂಧಕ ವಸಂತ್ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೀತಾರಾಮ ರೈ ಅವರು ಎಡನೀರು ಮತ್ತು ಒಡಿಯೂರು ಶ್ರೀಗಳಿಗೆ ತುಳಸಿ ಹಾರ, ಫಲಪುಷ್ಪ ನೀಡಿ ಗೌರವಿಸಿದರು. ನಿರ್ದೇಶಕರಾದ ಎನ್.ಜಯಪ್ರಕಾಶ್ ರೈ ಸುಳ್ಯ, ಮಹಾಬಲ ರೈ ಬೋಳಂತೂರು, ಎಸ್.ಎಮ್.ಬಾಪೂ ಸಾಹೇಬ್, ಪೂರ್ಣಿಮಾ ಎಸ್.ಆಳ್ವ, ವಿ.ವಿ.ನಾರಾಯಣ ಭಟ್, ರಾಮಯ್ಯ ರೈ ತಿಂಗಳಾಡಿ, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಸೀತಾರಾಮ ಶೆಟ್ಟಿ ಮಂಗಳೂರು, ಮಹಾದೇವ ಮಂಗಳೂರು, ಯಮುನಾ ಎಸ್ ರೈ ಗುತ್ತುಪಾಲ್, ಅರಿಯಡ್ಕ ಚಿಕ್ಕಪ್ಪ ನ್ಯಾಕ್, ರಶ್ಮಿ ಎಸ್.ರೈ ಸವಣೂರು ಅತಿಥಿಗಳನ್ನು ಗೌರವಿಸಿದರು.

ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು ವಂದಿಸಿದರು. ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ವಿದುಷಿ ಪವಿತ್ರಾ ರೂಪೇಶ್ ಪುತ್ತೂರು ಪ್ರಾರ್ಥನೆಗೈದರು. ಸಂಘದ ಸಹಾಯಕ ಮಹಾಪ್ರಬಂಧಕ ಸುನಾರಾಜ್ ಶೆಟ್ಟಿ ಮತ್ತು ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬೆಳಗ್ಗೆ – ಉಪಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!