Connect with us

ನಿಧನ ವಾರ್ತೆ

Couple-ಕೆಜಿಎಫ್ : ಬೆಳಗ್ಗೆ ಮದುವೆಯಾದ ಜೋಡಿ ಸಂಜೆ ಮಚ್ಚು ಹಿಡಿದು ಕಾದಾಡಿ ಹರಿಸಿದರು ರಕ್ತದ ಕೋಡಿ – ಪತ್ನಿ ಮೃತ್ಯು, ಪತಿ ಗಂಭೀರ

Published

on

Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ಕೆಜಿಎಫ್: ಮದುವೆಯಾದ ಒಂದೇ ದಿನದಲ್ಲಿ ವಿಚ್ಚೇದನ ಪಡಕೊಂಡ ಘಟನೆ ಹಲವು ಇರಬಹುದು . ಆದರೆ ಬೆಳಗ್ಗೆ ವಿವಾಹವಾಗಿ ಸಂಜೆ ವಧು – ವರರೇ ಮಾರಕಾಸ್ತ್ರ ಹಿಡ್ಕೊಂಡು ಬಡಿದಾಡಿಕೊಂಡ ಘಟನೆ ಎಲ್ಲಾದರೂ ಕೇಳಿದ್ದೀರಾ ? ಇಲ್ಲಿ ಕೇವಲ ಬಡಿದಾಡಿಕೊಂಡದ್ದು ಮಾತ್ರವಲ್ಲ ಗಲಾಟೆ ವಿಕೋಪಕ್ಕೆ ಹೋಗಿ ವಧು ಮೃತಪಟ್ಟಿದ್ದು, ವರ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಅಷ್ಟಕೂ ಈ ಘಟನೆ ನಡೆದದ್ದು ಕೋಲಾರದ ಕೆಜಿಎಫ್ ನಲ್ಲಿ.

Ad Widget

Ad Widget alt="Ad Widget"/>

Ad Widget

ಪ್ರೀತಿಸಿ ಮದುವೆಯಾದ ಯುವ ಜೋಡಿಯೊಂದು ಸಂಜೆ ಇಬ್ಬರೇ ಕೊಠಡಿಯೊಳಗೆ ತೆರಳಿದ ಬಳಿಕ ಮಚ್ಚಿನಲ್ಲಿ ಹೊಡೆದಾಡಿಕೊಂಡ ಘಟನೆ ನಗರದ ಹೊರವಲಯದ ಚಂಬರಸನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ವಧು ಕೊಲೆಯಾಗಿದ್ದು, ಪತಿ ಗಂಭೀರವಾಗಿ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Ad Widget

Ad Widget <> Ad Widget

ಆಂಧ್ರಪ್ರದೇಶದ ಸಂತೂರು ಗ್ರಾಮದ ನವೀನ್ ಕುಮಾರ್ (27) ಗಂಭೀರ ಗಾಯಗೊಂಡ ಪತಿ. ಬೈನೇಹಳ್ಳಿಯ ಲಿಖಿತಾಶ್ರೀ (20) ಕೊಲೆಯಾದ ಪತ್ನಿ . ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಮದುವೆಯಾಗಲು ನಿರ್ಧರಿಸಿದ್ದರು. ಅದ್ಧೂರಿಯಾಗಿ ಮದುವೆ ಮಾಡಲು ವಧುವಿನ ಮನೆಯವರು ಕೇಳಿಕೊಂಡಿದ್ದರು. ದುಂದುವೆಚ್ಚ ಬೇಡ, ಮನೆಯಲ್ಲಿಯೇ ಮದುವೆ ಮಾಡೋಣ ಎಂದ ವರನ ಮನೆಯವರು ಮನ ಒಲಿಸಿದ್ದರು.

ಚಂಬರಸನಹಳ್ಳಿಯ ವರನ ಅಕ್ಕನ ಮನೆಯಲ್ಲಿ ಬುಧವಾರ ಸರಳವಾಗಿ ಮದುವೆಯಾಗಿದ್ದರು. ಬೆಳಗ್ಗೆ ಮದುವೆಯ ಎಲ್ಲ ರೀತಿ ರಿವಾಜುಗಳನ್ನೂ ಇಬ್ಬರೂ ಸಂತೋಷದಿಂದ ಜೊತೆಯಾಗಿ ನಿರ್ವಹಿಸಿದ್ದಾರೆ. ಜೊತೆಯಾಗಿ ಸಪ್ತಪದಿ ತುಳಿದಿದ್ದಾರೆ, ತಾಳಿ ಕಟ್ಟುವ ಶಾಸ್ತ್ರ ಮುಗಿದಿದೆ, ಅರುಂಧತಿ ನಕ್ಷತ್ರ ನೋಡಿದ್ದಾರೆ. ಈ ಎಲ್ಲ ಸಂದರ್ಭದಲ್ಲೂ ನವ ದಂಪತಿ ನಗು ನಗುತ್ತಾ ಖುಷಿ ಖುಷಿಯಾಗಿದ್ದರು.
ಕಲ್ಯಾಣ ಮಂಟಪದಲ್ಲಿ ಬೆಳಗಿನ ಮದುವೆ ಸಂಭ್ರಮ ಮುಗಿದು ಸಂಜೆ ಹೊತ್ತಿಗೆ ಪಕ್ಕದಲ್ಲಿರುವ ಸಂಬಂಧಿಕರ ಮನೆಗೆ ನವದಂಪತಿ ಚಹಾ ಕುಡಿಯಲು ಹೋಗಿದ್ದರು. ಚಹಾ ಕೊಟ್ಟ ಸಂಬಂಧಿ ಮಹಿಳೆ ಹೊರ ಹೋಗುತ್ತಲೇ ಬಾಗಿಲು ಹಾಕಿಕೊಂಡ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ .

Ad Widget

Ad Widget

ಸ್ವಲ್ಪ ಸಮಯದ ನಂತರ ಕಿರುಚಾಟ ಕೇಳಿ ಸಂಬಂಧಿಕರು ಕಿಟಕಿಯಲ್ಲಿ ಇಣುಕಿದಾಗ ವಧು ಲಿಖಿತಾಶ್ರೀ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ನವೀನ್ ಕುಮಾರ್ ಮಚ್ಚಿನಿಂದ ತನ್ನ ಕತ್ತು ಕೊಯ್ದುಕೊಳ್ಳುತ್ತಿದ್ದ. ಮನೆಯ ಬಾಗಿಲು ಮುರಿದು ರಕ್ಷಣೆ ಮಾಡಲಾಯಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಲಿಖಿತಾಶ್ರೀ ಮೃತಪಟ್ಟಿದ್ದಾರೆ. ನವೀನ್ ಕುಮಾರ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನೆ ನಡೆದಾಗ ಕೊಠಡಿಯಲ್ಲಿ ವಧು ಮತ್ತು ವರ ಮಾತ್ರ ಇದ್ದರು. ಜಗಳಕ್ಕೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಘಟನೆ ಬಗ್ಗೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಪ್ರತಿಕ್ರಿಯಿಸಿದ್ದಾರೆ. 
-.

Ad Widget

ನಿಧನ ವಾರ್ತೆ

Kasaragod-ಕಾಸರಗೋಡು : ಬೇಟೆಯಾಡಲು ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದಾಗ ಗುಂಡು ಹಾರಿ ಯುವಕ ಸಾವು..!

Published

on

Ad Widget

Ad Widget

Ad Widget

Ad Widget

ಬೇಟೆಯಾಡಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಲೋಡ್ ಮಾಡಿದ್ದ ರೈಫಲ್ ಆಕಸ್ಮಿಕವಾಗಿ ಸಿಡಿದು 28 ವರ್ಷದ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಮುಳಿಯಾರ್ ಪಂಚಾಯತ್ ವ್ಯಾಪ್ತಿಯ ಕಟ್ಟಿಪ್ಪಳಂನಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಟ್ಟಿಪ್ಪಳಂ ನಿವಾಸಿಗಳಾದ ಮೊಯ್ದು ಮತ್ತು ಜಮೀಲಾ ದಂಪತಿಯ ಪುತ್ರ ಹೈದರ್ ಅಲಿ (28) ಮೃತಪಟ್ಟವರು.

Ad Widget

Ad Widget

Ad Widget

Ad Widget

ಕಾಸರಗೋಡು, ನ.16: ಬೇಟೆಯಾಡಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಲೋಡ್ ಮಾಡಿದ್ದ ರೈಫಲ್ ಆಕಸ್ಮಿಕವಾಗಿ ಸಿಡಿದು 28 ವರ್ಷದ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಮುಳಿಯಾರ್ ಪಂಚಾಯತ್ ವ್ಯಾಪ್ತಿಯ ಕಟ್ಟಿಪ್ಪಳಂನಲ್ಲಿ ಭಾನುವಾರ ರಾತ್ರಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಕಟ್ಟಿಪ್ಪಳಂ ನಿವಾಸಿಗಳಾದ ಮೊಯ್ದು ಮತ್ತು ಜಮೀಲಾ ದಂಪತಿಯ ಪುತ್ರ ಹೈದರ್ ಅಲಿ (28) ಮೃತಪಟ್ಟವರು.

Ad Widget

Ad Widget <> Ad Widget

ಅಡೂರು ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಹೈದರ್ ಅಲಿ ಭಾನುವಾರ ರಾತ್ರಿ ಬೇಟೆಯಾಡುವ ಉದ್ದೇಶದಿಂದ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ರೈಫಲ್ ಕೆಳಗೆ ಬೀಳದಂತೆ ಅದರ ಬಟ್ ಭಾಗವನ್ನು ಸ್ಕೂಟರ್‌ನ ಫುಟ್‌ಬೋರ್ಡ್‌ನಲ್ಲಿ ಕಾಲುಗಳ ನಡುವೆ ಇರಿಸಿಕೊಂಡು, ಮೇಲ್ಭಾಗವನ್ನು ಶರ್ಟ್‌ನ ಒಳಗೆ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಸ್ಕೂಟರ್ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ರೈಫಲ್‌ನ ಟ್ರಿಗರ್ ಒತ್ತಲ್ಪಟ್ಟು ಗುಂಡು ಸಿಡಿದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗುಂಡು ಹೈದರ್ ಅಲಿ ಅವರ ಗಲ್ಲ ಮತ್ತು ತಲೆಯನ್ನು ಸೀಳಿಕೊಂಡು ಹೋಗಿದೆ ಎನ್ನಲಾಗಿದೆ.

Ad Widget

Ad Widget

ಕಟ್ಟಿಪ್ಪಳಂನ ಮೈದಾನವೊಂದರ ಬಳಿ ಸ್ಕೂಟರ್ ಹಾಗೂ ರೈಫಲ್ ಪಕ್ಕದಲ್ಲೇ ಹೈದರ್ ಅಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಘಟನೆಗೆ ಬಳಸಲಾದ ರೈಫಲ್ ಪರವಾನಗಿ ಪಡೆದದ್ದೇ ಅಥವಾ ಅಕ್ರಮವಾಗಿ ತಯಾರಿಸಿದ ದೇಶೀಯ ಬಂದೂಕೇ ಎಂಬುದು ಇನ್ನೂ ಖಚಿತವಾಗಿಲ್ಲ. ತನಿಖೆಯ ಬಳಿಕವಷ್ಟೇ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಅಡೂರು ವೃತ್ತ ನಿರೀಕ್ಷಕರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಅಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

ನಿಧನ ವಾರ್ತೆ

Car crash-ಮರಕ್ಕೆ ಅಪ್ಪಳಿಸಿದ ಕಾರು: ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರ ಬದುಕು ಅಂತ್ಯ; ನಾಲ್ವರು ಆಸ್ಪತ್ರೆಗೆ ದಾಖಲು

Published

on

Ad Widget

Ad Widget

Ad Widget

Ad Widget

ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲದ ಗುಡೇಮಾರನಹಳ್ಳಿ ಬಳಿ ನಡೆದಿದೆ. ಜಾನ್ಹವಿ ಹಾಗೂ ವೈಷ್ಣವಿ ಮೃತಪಟ್ಟ ವಿದ್ಯಾರ್ಥಿನಿಯರು.

Ad Widget

Ad Widget

Ad Widget

Ad Widget

ಬೆಂಗಳೂರು: ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲದ ಗುಡೇಮಾರನಹಳ್ಳಿ ಬಳಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮೃತರನ್ನು ಜಾನ್ಹವಿ (19) ಹಾಗೂ ವೈಷ್ಣವಿ (19) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಅಪಘಾತದಲ್ಲಿ ಗಗನ್, ಜಸ್ವಂತ್, ಹರ್ಷಿಣಿ ಎಸ್. ಹಾಗೂ ಹರ್ಷಿಣಿ ಜಿ. ಎಂಬ ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಹಾಗೂ ಗಾಯಾಳುಗಳು ತುಮಕೂರು ಮೂಲದವರಾಗಿದ್ದು, ಎಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

Ad Widget

Ad Widget

ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಕುಣಿಗಲ್ ಸಮೀಪದ ಹುತ್ರಿದುರ್ಗಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಗುಡೇಮಾರನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ad Widget
Continue Reading

ನಿಧನ ವಾರ್ತೆ

Puttur-ಪುತ್ತೂರು: ಬೈಕ್ ಡಿಕ್ಕಿಯಾಗಿ ಹರಿಪ್ರಸಾದ್ ಹೋಟೆಲ್ ಸಪ್ಲೈಯರ್ ಸಾವು

Published

on

Ad Widget

Ad Widget

Ad Widget

Ad Widget

ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಹೋಟೆಲ್ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನ.16ರಂದು ತಡರಾತ್ರಿ ನಡೆದಿದೆ. ಮೃತರನ್ನು ವಿಜಯಪುರ ಜಿಲ್ಲೆಯ ಬಾಗೇವಾಡಿ ನಿವಾಸಿ ಸಂಗನಗೌಡ ಅವರ ಪುತ್ರ ಚಂದ್ರಶೇಖರ ಸಂಗನಗೌಡ (32) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಹೋಟೆಲ್ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನ.16ರಂದು ತಡರಾತ್ರಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮೃತರನ್ನು ವಿಜಯಪುರ ಜಿಲ್ಲೆಯ ಬಾಗೇವಾಡಿ ನಿವಾಸಿ ಸಂಗನಗೌಡ ಅವರ ಪುತ್ರ ಚಂದ್ರಶೇಖರ ಸಂಗನಗೌಡ (32) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ಇವರು ಪುತ್ತೂರಿನ ಹರಿಪ್ರಸಾದ್ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದರು.

ನ.16ರಂದು ರಾತ್ರಿ ಹೋಟೆಲ್ ಕೆಲಸ ಮುಗಿಸಿ ಹೊರಬಂದ ಚಂದ್ರಶೇಖರ ಅವರು ಹೋಟೆಲ್ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಬೈಕೊಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Ad Widget

Ad Widget

ಘಟನೆಯಲ್ಲಿ ಬೈಕ್ ಸವಾರನಿಗೂ ಗಾಯಗಳಾಗಿದ್ದು, ಅವರು ಸೆಲೂನ್ ಸಿಬ್ಬಂದಿ ಎಂದು ತಿಳಿದುಬಂದಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!