ಅಪರಾಧ
Puttur-ಪುತ್ತೂರು: ರಾಷ್ಟ್ರೀಯ ಲೋಕಾ ಅದಾಲತ್ ಪೂರ್ವಭಾವಿ ಸಭೆ : ಪುತ್ತೂರು ತಹಶೀಲ್ದಾರ್ ವಿರುದ್ದ ನ್ಯಾಯದೀಶರು ಗರಂ
ಗುರುವಾರ ಪುತ್ತೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ನಿರ್ದೇಶನದಂತೆ ನಡೆಯುವ ರಾಷ್ಟ್ರೀಯ ಲೋಕಾ ಅದಾಲತ್ನ ಕುರಿತು ಇಲಾಖಾಧಿಕಾರಿಗಳ ಪೂರ್ವ ಭಾವಿ ಸಭೆ ಕಾನೂನು ಸೇವಾ ಸಮಿತಿ ಸಭೆ ಜು 5ರಂದು ಪುತ್ತೂರು ನ್ಯಾಯಲಯದಲ್ಲಿ ನಡೆಯಿತು.
ಸಭೆಯಲ್ಲಿ ಜನನ ಪ್ರಮಾಣ ಪತ್ರದ ಪೆಂಡಿಂಗ್ ಕೇಸ್ ಕುರಿತು ನ್ಯಾಯಾದೀಶರಾದ ಪ್ರಿಯರವಿ ಜೊಗ್ಳೇಕರ್ ಪ್ರಸ್ತಾಪಿಸಿ, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಪುತ್ತೂರು ತಹಶೀಲ್ದಾರ್ ಅವರನ್ನು ಹುಡುಕಿದಾಗ, ಆ ವೇಳೆ ಅವರು ಸಭೆಯಲ್ಲಿ ಹಾಜರಿರಲಿಲ್ಲ. ಈ ವೇಳೆ ಗರಂ ಆದ ಜೊಗ್ಳೇಕರ್ . ‘ಎಲ್ಲಿದ್ದಾರೆ ತಹಶೀಲ್ದಾರ್ ’ ಎಂದು ಪ್ರಶ್ನಿಸಿದ್ದರು. ಅಲ್ಲದೇ ತಹಸೀಲ್ದಾರ್ ಕಛೇರಿಯಿಂದ ಯಾಕೆ ಬಂದಿಲ್ಲ ? ಎಂದ ನ್ಯಾಯಾದೀಶರು ಮಳೆ ಹಾನಿ ವರದಿ ಕೇಳಿದರೂ ಇನ್ನೂ ಅವರಿಗೆ ಕೊಡಲಾಗಿಲ್ಲ. ಇವತ್ತು ಮೀಟಿಂಗ್ಗೂ ಬರಲಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು.
ಈ ವೇಳೆ ಸಭೆಯಲ್ಲಿದ್ದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸರಿತಾರವರು “ ನ್ಯಾಯಾಲಯದ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲೂ ತಹಸೀಲ್ದಾರ್ ಸರಿಯಾಗಿ ಹಾಜರಾಗುತ್ತಿಲ್ಲ ಎಂದರು. ಮತ್ತೆ ಕಂದಾಯ ಇಲಾಖೆಯ ಬಗ್ಗೆ ಪ್ರಶ್ನೆ ಕೇಳಿದಾಗ ಸಿಬ್ಬಂದಿಯಿಂದ ಸಮರ್ಪಕ ಪ್ರತ್ಯುತ್ತರ ಬಂದಿಲ್ಲ. ಸಿಬ್ಬಂದಿಗಳು ದೂರವಾಣಿಯಲ್ಲಿ ಇದ್ದಾರೆ ಹೊರತು ಉತ್ತರ ನೀಡುವ ಕಾರ್ಯ ಮಾಡುತ್ತಿಲ್ಲ ಎಂದು ನ್ಯಾಯಾದೀಶರು ಹೇಳಿದರು. ಬಳಿಕ ಸಭೆಗೆ ಆಗಮಿಸಿದ ತಹಸೀಲ್ದಾರ್ ಅವರಲ್ಲಿ ಲೋಕ ಅದಾಲತ್ನಲ್ಲಿ ಜನನ ಪ್ರಮಾಣ ಪತ್ರ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತೆ ತಿಳಿಸಿದರು.
ಎನ್. ಡಿ.ಆರ್. ಎಫ್ ಅನುದಾನಕ್ಕೆ ವರದಿ ಮುಖ್ಯ:
ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ ಆಗಿರುವ ಹಾನಿ, ಪ್ರಾಣಿಗಳ ಮರಣದ ಕುರಿತು ಮಾಹಿತಿ ನೀಡುವಂತೆ ಜೂ.24ರಂದು ನ್ಯಾಯಾಲಯದಿಂದ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ಮಾಹಿತಿ ಇಲ್ಲಿಯವರೆಗೆ ಬಂದಿಲ್ಲ. ನಾವು ಇಲ್ಲಿಂದ ಈ ಮಾಹಿತಿಯನ್ನು ಕರ್ನಾಟಕ ಉಚ್ಛನ್ಯಾಯಾಲಯಕ್ಕೆ ನೀಡಬೇಕಾಗಿದೆ. ಈ ಮೂಲಕವೇ ಎನ್.ಡಿ.ಆರ್.ಎಫ್. ಅನುದಾನಗಳು ಬರಲಿದೆ ಎಂದು ಪ್ರಿಯಾರವಿ ಜೊಗ್ಳೇಕರ್ ಹೇಳಿದರು.
ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಜು.13ರಂದು ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಹೆಚ್ಚಿನ ಕಾಲಾವಕಾಶ ಇಲ್ಲದ ಕಾರಣದಿಂದ ಪ್ರತಿಯೊಬ್ಬರಿಗೂ ನೋಟೀಸ್ ಜಾರಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಸಹಕಾರ ಅಗ್ಯವಿದೆ. ವಿಮಾ ಕಂಪನಿಗಳು ಅದಾಲತ್ ನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಕಾರ್ಯಕ್ರಮ 2ನೇ ಶನಿವಾರ ಎಂಬ ಕಾರಣವನ್ನು ನೀಡದೆ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕು ಎಂದು ಪ್ರಿಯಾರವಿ ಜೊಗ್ಳೇಕರ್ ಹೇಳಿದರು.
ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಚೆಕ್ ಕೇಸುಗಳು, ಬ್ಯಾಂಕ್ ಸಾಲದ ಕೇಸುಗಳು, ಜಮೀನಿಗೆ ಸಂಬಂಧಿಸಿದಂತೆ ವರ್ಷಾನುಗಟ್ಟಲೇ ಬಗೆಹರಿಸಿಕೊಳ್ಳದೆ ಬಾಕಿ ಇರುವ ಸಿವಿಲ್ ದಾವೆಗಳನ್ನು ಅದಾಲತ್ನಲ್ಲಿ ಬಗೆಹರಿಸಿಕೊಂಡಾಗ ಕಕ್ಷಿದಾರರು ಸಣ್ಣಪುಟ್ಟ ವ್ಯಾಜ್ಯಗಳಿಗಾಗಿ ಹಲವು ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿದಂತಾಗುತ್ತದೆ. ಪುತ್ತೂರು ತಾಲೂಕಿನಲ್ಲಿ ಜನನ ಪ್ರಮಾಣ ಪತ್ರದ ಪ್ರಕರಣಗಳ ದಾಖಲೆ ಸಹಿತ ಮಾಹಿತಿಯನ್ನು ಕಂದಾಯ ಇಲಾಖೆ ನೀಡಬೇಕು. ಅವುಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಗೊಳಿಸಬೇಕು. ಇಲಾಖೆ ಶ್ರಮಪಟ್ಟರೆ ಜವಾಬ್ದಾರಿ ಕಡಿಮೆಯಾಗಿ, ಕೋರ್ಟ್ಗೆ ಹೋಗಿ ಕೇಸು ಹೆಚ್ಚು ಮಾಡುವುದು ಕೂಡಾ ಕಡಿಮೆ ಆಗುತ್ತದೆ ಎಂದರು.
ಲೋಕ ಅದಾಲತ್ಗೆ ಇನ್ನು ಕೇವಲ 10 ದಿನವಿದೆ. ಹಾಗಾಗಿ ನಮ್ಮಲ್ಲಿ ಎಷ್ಟು ಕೇಸುಗಳಿದೆಯೋ ಅದನ್ನು ಇತ್ಯರ್ಥ ಮಾಡುವ ಪಣ ತೊಡಗಬೇಕಾಗಿದೆ. ಇಲ್ಲಿ ನಮಗೆ ಮುಖ್ಯವಾಗಿ ಪೊಲೀಸ್ ಇಲಾಖೆಯ ಸಹಕಾರ ಬೇಕಾಗಿದೆ. ಪೊಲೀಸ್ ಇಲಾಖೆಯಲ್ಲಿ ಯಾವುದೆಲ್ಲ ಪೆಂಡಿಂಗ್ ಕೇಸ್ ಇದೆ ಎಂದು ನೋಡಿ. ಸಿವಿಲ್ ಕೇಸ್ಗೆ ಸಂಬಂಧಿಸಿ ಕೌಂಟರ್ ಕೇಸ್ ನಲ್ಲಿ ಎರಡು ಪಾರ್ಟಿಯ ಮನವೊಲಿಸುವ ಕೆಲಸ ನೀವು ಮಾಡಬೇಕು ನಿಮ್ಮಲ್ಲಿ ಆಗದ ವಿಚಾರವನ್ನು ಕೋರ್ಟ್ ಮುಂದೆ ತನ್ನಿ. ಅಲ್ಲಿಂದ ಕಕ್ಷಿದಾರರುಗಳಿಗೆ ಲೋಕ ಅದಾಲತ್ ನೊಟೀಸ್ ಕಳಿಸುವ ವ್ಯವಸ್ಥೆ ಆಗುತ್ತದೆ. ಈ ಲೋಕ ಆದಾಲತ್ ನೊಟೀಸ್ ತಲುಪುವಲ್ಲಿಯೂ ಪೊಲೀಸ್ ಇಲಾಖೆಯ ಸಹಕಾರ ಬೇಕಾಗುತ್ತದೆ. ಸಹಾಯಕ ಸರಕಾರಿ ಅಭಿಯೋಜಕರ ಪಾತ್ರವೂ ಮುಖ್ಯ ಎಂದರು
ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಶಿವಣ್ಣ ಎಚ್.ಆರ್, 2ನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ, ಸಹಾಯಕ ಕಮೀಷನರ್ ಜುಬಿನ್ ಮೊಹಾಪಾತ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಲಕಾಳೆ, ಸಹಾಯಕ ಸರ್ಕಾರಿ ಅಭಿಯೋಜಕಿ ಕವಿತಾ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಉಪಾಧ್ಯಕ್ಷ ಮೋನಪ್ಪ, ಕಾರ್ಯದರ್ಶಿ ಚಿನ್ಮಯ್ ರೈ, ನ್ಯಾಯವಾದಿಗಳಾದ ರಾಮಮೋಹನ್ ರಾವ್, ದೇವಾನಂದ್, ಪಿ.ಕೆ. ಸತೀಶ್, ನಾಗರಾಜ್, ಪ್ರವೀಣ್ ಕುಮಾರ್, ಗೌರಿಶಂಕರ್ ಶಾನ್ಬೋಗ್ ಮತ್ತಿತರರು ಉಪಸ್ಥಿತರಿದ್ದರು.
ಅಂತರ ರಾಜ್ಯ
FIR-ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ: ಬಿಗ್ ಬಾಸ್ ವಿಜೇತ ಮುತ್ತುಕುಮಾರನ್ ವಿರುದ್ಧ ಇನ್‌ಫ್ಲುಯೆನ್ಸರ್ ವಹಿದಾ ದೂರು – ಎಫ್‌ಐಆರ್ ದಾಖಲು..!
ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ‘ಬಿಗ್ ಬಾಸ್ ತಮಿಳು ಸೀಸನ್-8’ರ ವಿಜೇತ ಮುತ್ತುಕುಮಾರನ್ ಜಗದೀಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆನ್ನೈ: ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ‘ಬಿಗ್ ಬಾಸ್ ತಮಿಳು ಸೀಸನ್-8’ರ ವಿಜೇತ ಮುತ್ತುಕುಮಾರನ್ ಜಗದೀಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್‌ಫ್ಲುಯೆನ್ಸರ್ ವಹಿದಾ ಅಖ್ದರ್ (Wahidha Akdhar) ನೀಡಿದ ದೂರಿನ ಆಧಾರದಲ್ಲಿ ಚೆನ್ನೈನ ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 69ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಮುತ್ತುಕುಮಾರನ್ ಅವರಿಗೆ ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇದೇ ವೇಳೆ, ತಮ್ಮ ವಿರುದ್ಧ ದೂರು ನೀಡಿರುವ ವಹಿದಾ ವಿರುದ್ಧವೇ ಮುತ್ತುಕುಮಾರನ್ ಪ್ರತಿದೂರು ದಾಖಲಿಸಿದ್ದಾರೆ. ವಹಿದಾ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಏನಿದು ಪ್ರಕರಣ?
‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಇನ್‌ಸ್ಟಾಗ್ರಾಮ್ ಮೂಲಕ ಮುತ್ತುಕುಮಾರನ್ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು ಎಂದು ವಹಿದಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದೈಹಿಕ ಸಂಪರ್ಕ ಬೆಳೆಸುವ ಮೊದಲು ಮುತ್ತುಕುಮಾರನ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ, ನಂತರ ಮದುವೆಯಾಗಲು ನಿರಾಕರಿಸಿದ್ದಾರೆ ಎಂಬುದು ವಹಿದಾ ಅವರ ಆರೋಪವಾಗಿದೆ.
ಈ ಸಂಬಂಧ ವಹಿದಾ ಮೊದಲು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಬಳಿಕ ದೂರನ್ನು ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಿಎನ್‌ಎಸ್ ಸೆಕ್ಷನ್ 69ರ ಅಡಿಯಲ್ಲಿ, ಅತ್ಯಾಚಾರದ ವ್ಯಾಪ್ತಿಗೆ ಬಾರದಿದ್ದರೂ ಮದುವೆಯಾಗುವ ಸುಳ್ಳು ಭರವಸೆ ಸೇರಿದಂತೆ ವಂಚನೆಯ ಮಾರ್ಗಗಳ ಮೂಲಕ ದೈಹಿಕ ಸಂಪರ್ಕ ಬೆಳೆಸುವುದಕ್ಕೆ ಸಂಬಂಧಿಸಿದ ಅಪರಾಧವನ್ನು ಪರಿಗಣಿಸಲಾಗುತ್ತದೆ.
ನವೆಂಬರ್ 9ರಂದು ವಹಿದಾ ಅವರು ಮುತ್ತುಕುಮಾರನ್ ಜೊತೆಗಿನ ಸಂಬಂಧದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡ ಬಳಿಕ ಈ ವಿಚಾರ ಬಹಿರಂಗವಾಗಿತ್ತು. ಇಬ್ಬರೂ ಜೊತೆಯಾಗಿರುವ ವಿಡಿಯೊವನ್ನು ಪ್ರಕಟಿಸಿದ್ದ ಅವರು, ಮುತ್ತುಕುಮಾರನ್ ನೀಡಿದ್ದ ಭರವಸೆಗಳ ಬಗ್ಗೆ ಪ್ರಶ್ನಿಸಿದ್ದರು. ತಮ್ಮ ಪೋಸ್ಟ್‌ನಲ್ಲಿ, “ನೀನು ಹೇಳಿದ್ದೆಲ್ಲವೂ ನಿನಗೆ ಕೇವಲ ತಮಾಷೆಯಾಗಿತ್ತು” ಎಂದು ಬರೆದುಕೊಂಡಿದ್ದರು.
ಇದರ ಬೆನ್ನಲ್ಲೇ ವಹಿದಾ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಈ ಪ್ರಕರಣದ ಕುರಿತು ಹಿರಿಯ ಗೀತರಚನೆಕಾರ ತಾಮರೈ ಕೂಡ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದು, ಮುತ್ತುಕುಮಾರನ್ ಅವರನ್ನು ಟೀಕಿಸಿ, ಆರೋಪಗಳ ಬಗ್ಗೆ ತಮ್ಮ ಕಡೆಯ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ.
ನಟ ವಿಜಯ್ ಸೇತುಪತಿ ನಿರೂಪಣೆಯ ‘ಬಿಗ್ ಬಾಸ್ ತಮಿಳು ಸೀಸನ್-8’ರಲ್ಲಿ ಸ್ಪರ್ಧಿಸುವ ಮೂಲಕ ಮುತ್ತುಕುಮಾರನ್ ಜನಪ್ರಿಯತೆ ಗಳಿಸಿದ್ದರು. 2025ರ ಜನವರಿ 19ರಂದು ನಡೆದ ಫಿನಾಲೆಯಲ್ಲಿ ಅವರು ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದ್ದರು.
ನಟ ವಿಜಯ್ ಸೇತುಪತಿ ನಿರೂಪಣೆಯ ‘ಬಿಗ್ ಬಾಸ್ ತಮಿಳು ಸೀಸನ್ 8’ರಲ್ಲಿ ಭಾಗವಹಿಸುವ ಮೂಲಕ ಮುತ್ತುಕುಮಾರನ್ ಅಪಾರ ಜನಪ್ರಿಯತೆ ಗಳಿಸಿದ್ದರು. ಜನವರಿ 19, 2025ರಂದು ನಡೆದ ಫಿನಾಲೆಯಲ್ಲಿ ಅವರು ಶೋನ ವಿಜೇತರಾಗಿ ಹೊರಹೊಮ್ಮಿದ್ದರು.
ಅಪರಾಧ
Mangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ
ಮಂಗಳೂರು ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು: ನಗರದ ಕದ್ರಿ ಯುದ್ಧ ಸ್ಮಾರಕದ ಬಳಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿರುವ ಯುದ್ಧ ಟ್ಯಾಂಕ್ ಮೇಲೆ ಹತ್ತಿ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು ಸರ್ಕೀಟ್ ಹೌಸ್ ಮುಂಭಾಗದ ಕದ್ರಿ ಯುದ್ಧ ಸ್ಮಾರಕದ ಬಳಿ 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದ ಟಿ-55 ಯುದ್ಧ ಟ್ಯಾಂಕ್‌ನ್ನು ಸಾರ್ವಜನಿಕರ ವೀಕ್ಷಣೆಗಾಗಿ ಎತ್ತರದ ವೇದಿಕೆಯಲ್ಲಿ ಇರಿಸಲಾಗಿದೆ.
ರಾತ್ರಿ ವೇಳೆ ಇಬ್ಬರು ಯುವಕರು ಟ್ಯಾಂಕ್ ಮೇಲೆ ಹತ್ತಿ, ಅದರ ಹ್ಯಾಚ್ ತೆರೆದು ಒಳಗೆ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ತಮ್ಮ ಕಿಡಿಗೇಡಿತನದ ವರ್ತನೆಯನ್ನು ವಿಡಿಯೋ ಮಾಡಿಕೊಂಡಿರುವ ಯುವಕರು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.
ದೇಶದ ಯುದ್ಧ ಇತಿಹಾಸ ಹಾಗೂ ಸೈನಿಕರ ಶೌರ್ಯ, ತ್ಯಾಗದ ಸಂಕೇತವಾಗಿ ಇರಿಸಲಾಗಿರುವ ಟ್ಯಾಂಕ್ ಬಳಿ ಯುವಕರು ಇಂತಹ ವರ್ತನೆ ತೋರಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಪರಾಧ
Arrest-ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದು ₹63 ಸಾವಿರ ದೋಚಿದ ಆರೋಪ: ಉತ್ತರ ಪ್ರದೇಶದಲ್ಲಿ ಆರೋಪಿ ಬಂಧನ
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.27ರಂದು ನಾಪತ್ತೆಯಾಗಿದ್ದ ಯುವಕನ ಮೃತದೇಹದ ಅವಶೇಷಗಳು ನ.13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೃತ ಯುವಕನ ಸ್ನೇಹಿತ, ಉತ್ತರ ಪ್ರದೇಶ ಮೂಲದ ಶ್ರವಣ್ ಎಂಬಾತನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ.
ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.27ರಂದು ನಾಪತ್ತೆಯಾಗಿದ್ದ ಯುವಕನ ಮೃತದೇಹದ ಅವಶೇಷಗಳು ನ.13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಮೃತ ಯುವಕನ ಸ್ನೇಹಿತ, ಉತ್ತರ ಪ್ರದೇಶ ಮೂಲದ ಶ್ರವಣ್ ಎಂಬಾತನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಮನೀಶ್ ಶರ್ಮಾ (25) ಎಂಬ ಯುವಕನನ್ನು ಆತನ ಸ್ನೇಹಿತ ಶ್ರವಣ್ ಕೊಲೆ ಮಾಡಿ ಬಳಿಕ ತನ್ನ ಊರಾದ ಉತ್ತರ ಪ್ರದೇಶದ ಖುಷಿನಗರಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ. ಪ್ರಕರಣವನ್ನು ವ್ಯವಸ್ಥಿತ ಕೊಲೆ ಎಂದು ಶಂಕಿಸಿ ಮೃತನ ಸಹೋದರ ಸೋನು ಶರ್ಮಾ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಬಜಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಾಲದ ಇಎಂಐ ಕಟ್ಟಲು ಕೊಲೆ?
ಆರೋಪಿಗೆ ಸಾಲದ ಇಎಂಐ ಪಾವತಿಸಲು ಹಣದ ಅವಶ್ಯಕತೆ ಇದ್ದು, ಸ್ನೇಹಿತ ಮನೀಶ್ ಬಳಿ ಹಣವಿರುವುದನ್ನು ತಿಳಿದುಕೊಂಡಿದ್ದ ಎನ್ನಲಾಗಿದೆ. ಅಲ್ಲದೆ, ಮನೀಶ್‌ನ ಮೊಬೈಲ್ ಪಾಸ್‌ವರ್ಡ್‌ಗಳನ್ನು ಮೊದಲೇ ತಿಳಿದುಕೊಂಡಿದ್ದ ಶ್ರವಣ್, ಹಣ ಪಡೆಯುವ ಉದ್ದೇಶದಿಂದ ಆತನನ್ನು ಉಪಾಯವಾಗಿ ಊಟಕ್ಕೆಂದು ಕರೆದುಕೊಂಡು ಹೋಗಿದ್ದಾನೆ. ಬಳಿಕ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿ, ನಿರ್ಜನ ಪ್ರದೇಶದಲ್ಲಿ ಮೃತದೇಹವನ್ನು ಬಿಸಾಡಿದ್ದಾಗಿ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಖಾತೆಯಿಂದ ₹63,720 ವರ್ಗಾವಣೆ
ಕೊಲೆ ಬಳಿಕ ಮನೀಶ್‌ನ ಬ್ಯಾಂಕ್ ಖಾತೆಯಲ್ಲಿದ್ದ ₹63,720 ಹಣವನ್ನು ರಾಜನ್ ಎಂಬ ವ್ಯಕ್ತಿಯ ಖಾತೆಗೆ ವರ್ಗಾಯಿಸಿ, ಬಳಿಕ ರಾಜನ್ ಮೂಲಕ ತನ್ನ ಖಾತೆಗೆ ಹಣ ಪಡೆದುಕೊಂಡಿದ್ದ ಎನ್ನಲಾಗಿದೆ. ಈ ಹಣ ವರ್ಗಾವಣೆಯ ಸುಳಿವು ಪ್ರಕರಣದ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
ಸಿಸಿಟಿವಿ ದೃಶ್ಯಗಳಿಂದ ಸುಳಿವು
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅ.27ರಂದು ಮನೀಶ್ ಮತ್ತು ಶ್ರವಣ್ ಒಟ್ಟಿಗೆ ತೆರಳಿರುವುದು ಹಾಗೂ ಬಳಿಕ ಶ್ರವಣ್ ಒಬ್ಬನೇ ವಾಪಸ್ ಬಂದಿರುವುದು ಕಂಡುಬಂದಿತ್ತು. ಈ ಸುಳಿವುಗಳ ಆಧಾರದ ಮೇಲೆ ತನಿಖೆ ಮುಂದುವರಿದಿತ್ತು.
ನ.13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿದ ಪೊಲೀಸರಿಗೆ ಅಸ್ಥಿಪಂಜರದ ತುಂಡುಗಳು ಹಾಗೂ ತಲೆಬುರುಡೆಯ ಅವಶೇಷಗಳು ಪತ್ತೆಯಾಗಿದ್ದವು. ಸ್ಥಳದಲ್ಲಿ ದೊರೆತ ಶರ್ಟ್ ಮತ್ತು ಪ್ಯಾಂಟ್‌ಗಳನ್ನು ಮೃತನ ಸಹೋದರ ಸೋನು ಶರ್ಮಾ ಗುರುತಿಸಿದ್ದರು.
ಆರೋಪಿಯನ್ನು ಉತ್ತರ ಪ್ರದೇಶದಿಂದ ಬಂಧಿಸಿ ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
-
ಶಿಕ್ಷಣ20 hours agoVidyamata Academy-ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲೂ ಅಮೋಘ ಸಾಧನೆ ಮುಂದುವರಿಸಿದ ವಿದ್ಯಾಮಾತಾ ಅಕಾಡೆಮಿ
-
ಮಂಗಳೂರು20 hours agoGirish Mattannavar-ಸೌಜನ್ಯ ಪ್ರಕರಣ: ಎಸ್ಐಟಿಗೆ ದಾಖಲೆಗಳ ʼಬ್ಯಾಗ್ʼ ಸಲ್ಲಿಸಿದ ಗಿರೀಶ್ ಮಟ್ಟಣ್ಣನವರ್; ಸೌಜನ್ಯ ಪ್ರಕರಣದಲ್ಲಿ ಆರ್. ಅಶೋಕ್ ಪಾತ್ರದ ಕುರಿತು ಸ್ಪೋಟಕ ಹೇಳಿಕೆ..!
-
ಬಿಗ್ ನ್ಯೂಸ್22 hours agoRakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ
-
ಕಾರ್ಯಕ್ರಮಗಳು21 hours agoVitla-ವಿಟ್ಲ: ನ.25ರಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ; 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ; ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್ನ ಪ್ರಮುಖ ಉದ್ದೇಶವಾಗಿದೆ- ಡಾ. ಸುಧಾರಾವ್
-
ಅಪರಾಧ4 hours agoMangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ
-
ಅಪರಾಧ20 hours agoArrest-ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದು ₹63 ಸಾವಿರ ದೋಚಿದ ಆರೋಪ: ಉತ್ತರ ಪ್ರದೇಶದಲ್ಲಿ ಆರೋಪಿ ಬಂಧನ
-
ಶಿಕ್ಷಣ19 hours agoVivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
-
ಮಂಗಳೂರು3 hours agoMangalore-ಮಂಗಳೂರು: ರಾತ್ರಿ 11:45ರಿಂದ ಬೆಳಗ್ಗೆ 5:30ರವರೆಗೆ ವ್ಯಾಪಾರ ನಿರ್ಬಂಧ; ಪೊಲೀಸ್ ಆಯುಕ್ತರಿಂದ ಹೊಸ ಆದೇಶ















