ಅಪರಾಧ
Madhukar Shetty’s-ಅಂದು ಯಡಿಯೂರಪ್ಪ..! ಇಂದು ದರ್ಶನ್..! ದಿ.ಮಧುಕರ್ ಶೆಟ್ಟಿ ಶಿಷ್ಯರಿಗೆ ನ್ಯಾಯದೆದುರು ‘ಸ್ಟಾರ್ ಗಿರಿ’ ಗಿಲ್ಲ ಬೆಲೆ : ಹಳ್ಳ ಹಿಡಿಯುತ್ತಿದ್ದ ಪ್ರಕರಣ ರೋಚಕ ತಿರುವು ಪಡೆದ ಸ್ಟೋರಿ ಓದಿ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಂಧನ ಆಗಿರುವ ಬೆನ್ನಲ್ಲೇ ಖಡಕ್ ಪೊಲೀಸ್ ಅಧಿಕಾರಿ ದಿ.ಮಧುಕರ್ ಶೆಟ್ಟಿ ನೆನಪು ಮತ್ತೊಮ್ಮೆ ಮರುಕಳಿಸಿದೆ. ಮಂಗಳವಾರ ಬೆಳಗ್ಗೆ ಮೈಸೂರಿನಲ್ಲಿ ದರ್ಶನ್ ಬಂಧನವಾದ ಬಳಿಕ ಆ ಸುದ್ದಿ ಮಿಂಚಿನಂತೆ ಜಗತ್ತಿನಾದ್ಯಂತ ವ್ಯಾಪಿಸಿತು. ಆಗ ರಾಜಕಾರಣಿಗಳು, ಪೊಲೀಸರು ಮತ್ತು ಸಾರ್ವಜನಿಕರು ಸೇರಿ ಎಲ್ಲರ ತಲೆಯಲ್ಲಿ ಕಾಡಿದ್ದು ಒಂದೇ ಒಂದು ಪ್ರಶ್ನೆ. ಯಾರಪ್ಪ ಆ ಪೊಲೀಸು. ದರ್ಶನ್ ಅಂತಹ ಸೆಲೆಬ್ರಿಟಿಯನ್ನೇ ಅರೆಸ್ಟ್ ಮಾಡಿದಂಥ ಆ ಅಧಿಕಾರಿ ಯಾರು? ಈ ಒಂದು ಮಿಲಿಯನ್ ಡಾಲರ್ ಪ್ರಶ್ನೆ ಈಗಲೂ ಬಹಳಷ್ಟು ಜನರನ್ನು ಕಾಡ್ತಿದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ದರ್ಶನ್ ಅಂತಹ ಸೆಲೆಬ್ರಿಟಿಯನ್ನು, ಬಹಳ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ ನಾಯಕ ನಟನನ್ನು ಅರೆಸ್ಟ್ ಮಾಡೋದಂದ್ರೆ ಸುಮ್ಮನೇ ಅಲ್ಲ. ಅಂತಹ ಕೆಲಸವನ್ನು ಮಾಡಿದ್ದು ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಅಂದ್ರೇ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಎಸ್ ಗಿರೀಶ್ ಅವರು. ಏನಾದ್ರೂ ಒಂದಿಷ್ಟು ಲೆಕ್ಕಾಚಾರ ತಪ್ಪಿದ್ರೂ ಅವರ ಕೆಲಸಕ್ಕಷ್ಟೇ ಅಲ್ಲ, ಅವರ ಜೀವನಕ್ಕೂ ಕುತ್ತು ಬರ್ತಿತ್ತು. ಅಂತದ್ರಲ್ಲೂ ಯಾವುದೇ ಹಿಂದೇಟು ಹಾಕದೇ ಎಲ್ಲ ಆರಂಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಒಂದಿಷ್ಟು ಮಾಹಿತಿಯು ಸೋರಿಕೆ ಆಗದಂತೆ ದರ್ಶನ್ ಅನ್ನು ಬಂಧಿಸುವಲ್ಲಿ ಗಿರೀಶ್ ಮತ್ತು ತಂಡ ಯಶಸ್ವಿಯಾಗಿತ್ತು. ಈ ಐಪಿಎಸ್ ಅಧಿಕಾರಿ ಗಿರೀಶ್ ಬೇರೆ ಯಾರೂ ಅಲ್ಲ ಅವರು ಖಡಕ್ ಐಪಿಎಸ್ ಅಧಿಕಾರಿ ದಿ.ಮಧುಕರ್ ಶೆಟ್ಟಿಯಿಂದ ತರಬೇತಿ ಪಡೆದ ಅಧಿಕಾರಿ.
ಗಿರೀಶ್ ಅಂತಹ ಡೈನಾಮಿಕ್ ಅಧಿಕಾರಿ ಇಲ್ಲದಿದ್ದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣ ಹುಟ್ಟಿದಲ್ಲೇ ಸತ್ತು ಹೋಗ್ತಿತ್ತು. ಕೊಲೆ ಆರೋಪದಲ್ಲಿ ಪ್ರಭಾವಿ ಸಿನಿಮಾ ನಟನಿಗೆ ಕೋಳ ತೊಡಿಸಲು ಎರಡು ಗುಂಡಿಗೆ ಬೇಕು ಅಂತಾ ಸ್ವತಃ ಹಿರಿಯ ಐಪಿಎಸ್ ಅಧಿಕಾರಿಗಳೇ ಮಾತನಾಡ್ತಿದ್ದಾರೆ. ಗಿರೀಶ್ ಕುಮಾರ್ ಅವರಿಗೆ ವಿಜಯನಗರದ ಎಸಿಪಿ ಚಂದನ್ ಕುಮಾರ್ ಸಾಥ್ ನೀಡಿದರು. ಇವರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಬೆಂಬಲವಾಗಿ ನಿಂತಿದ್ದು ಎಲ್ಲರಿಗೂ ಗೊತ್ತೇ ಇದೆ.
ಬಿಎಸ್ ಯಡಿಯೂರಪ್ಪರನ್ನು ಬಂಧಿಸಿದ್ದ ಎಸ್ ಗಿರೀಶ್..!
ಗಿರೀಶ್ ಮತ್ತು ಚಂದನ್ ಇಬ್ಬರು ಕೂಡ ಅನೇಕ ಯುವ ಪೊಲೀಸರಿಗೆ ರಿಯಲ್ ಹೀರೋಗಳು.. ಇಬ್ಬರು ಕೂಡ ಖಡಕ್ ಅಧಿಕಾರಿ ಮಧುಕರ್ ಶೆಟ್ಟಿಯವರಲ್ಲಿ ತರಬೇತಿ ಪಡೆದವರು. ಯಾಕಂದ್ರೇ ಇವರಿಬ್ಬರು ಎಷ್ಟೇ ಒತ್ತಡ ಬಂದರು ಕೂಡ ತಮ್ಮ ಕೆಲಸದಿಂದ ಹಿಂದೆ ಸರಿಯದೇ ಈ ನೆಲದ ಕಾನೂನು ಎಲ್ಲರಿಗೂ ಒಂದೇ ಅನ್ನೋದನ್ನ ಸಾರಿ ಸಾರಿ ಹೇಳಿದ್ದಾರೆ. ಪ್ರಮುಖವಾಗಿ ನಾವು ಎಸ್ ಗಿರೀಶ್ ಯಾರು ಎಂಬುದನ್ನು ನೋಡೋಕೆ ಹೋದರೆ, ಒಂದು ದೊಡ್ಡ ಘಟನೆಯೇ ನಮ್ಮ ಮುಂದೆ ಬರುತ್ತೆ. 2011ರಲ್ಲಿ ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸಿದ್ದು ಕೂಡ ಇದೇ ಮಧುಕರ್ ಶೆಟ್ಟಿ ಮತ್ತು ಎಸ್ ಗಿರೀಶ್ ಎಂಬುದು ಎಲ್ಲರಿಗೂ ಗೊತ್ತಿರದ ಸತ್ಯ.
ಇಂಜಿನಿಯರ್ ಆಗಿ ಬಳಿಕ ಪೊಲೀಸ್ ಅಧಿಕಾರಿಯಾಗಿರುವ ಎಸ್ ಗಿರೀಶ್ ಅವರು ಈ ಹಿಂದೆ ಲೋಕಾಯುಕ್ತದಲ್ಲಿದ್ದಾಗ ತಮ್ಮ ನೇರ ಹಾಗೂ ಧೈರ್ಯದ ನಡವಳಿಕೆಗೆ ಹೆಸರಾಗಿದ್ದರು. ಆಗ ದೊಡ್ಡ ದೊಡ್ಡ ಅಧಿಕಾರಿಗಳು, ಕಾರ್ಪೊರೇಟರ್‌ಗಳನ್ನು ಕಂಬಿ ಹಿಂದೆ ಹಾಕಿದ ಖ್ಯಾತಿ ಎಸ್ ಗಿರೀಶ್ ಅವರದ್ದು. ಇನ್ನು, ಚಂದನ್ ಕುಮಾರ್ ಅವರು ಮೊದಲು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಅದಾದ ಬಳಿಕ ಪೊಲೀಸ್ ಅಧಿಕಾರಿಯಾದ ಅವರಿಗೆ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹೆಸರಿದ್ದು, ಕೇಸ್‌ಗಳನ್ನು ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗ್ತಾರೆ ಅಂತಾ ಎಲ್ಲರೂ ಹೇಳ್ತಾರೆ.
ಡಿಸಿಪಿ ಗಿರೀಶ್ ಅವತ್ತು ಸ್ಟೇಷನ್‌ನಲ್ಲಿ ಇಲ್ಲದಿದ್ರೆ ಸ್ಟೋರಿನೇ ಬೇರೆ ಆಗಿರ್ತಿತ್ತು..!
ಎಸ್ ಗಿರೀಶ್ ಅವರು ಅವತ್ತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇಲ್ಲದಿದ್ದರೇ ಈ ಕೇಸ್ ಧಮ್ ಕಳೆದುಕೊಳ್ತಿತ್ತು. ರೇಣುಕಾಸ್ವಾಮಿ ಶವ ಸಿಗುತ್ತಲೇ ನಾಲ್ಕು ಮಂದಿ ನಾವೇ ಕೊಲೆ ಮಾಡಿದ್ದು ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅವರ ಹೇಳಿದ ಕಾಗಕ್ಕ, ಗುಬ್ಬಕ್ಕನ ಕಥೆಯನ್ನು ಆ ಸ್ಟೇಷನ್‌ನ ಪೊಲೀಸ್ ಅಧಿಕಾರಿಗಳು ನಂಬಿ, ಕೇಸ್ ಅನ್ನು ಅಲ್ಲಿಯೇ ಕ್ಲೋಸ್ ಮಾಡಲು ಮುಂದಾಗಿದ್ದರು.
ಆ ವೇಳೆ ಈ ಕೇಸ್‌ಗೆ ಎಂಟ್ರಿ ಕೊಟ್ಟಿದ್ದೇ ಡಿಸಿಪಿ ಎಸ್ ಗಿರೀಶ್. ಶರಣಾದ ನಾಲ್ವರು ಹೇಳಿದ ಕಥೆ ಗಿರೀಶ್ ಅವರಿಗೆ ಅನುಮಾನ ಬಂತು. ನಾಲ್ವರ ಹೇಳಿಕೆಗಳು ತದ್ವಿರುದ್ಧ ಆಗಿದ್ದವು. ಆಗ ಡಿಸಿಪಿ ಎಸ್ ಗಿರೀಶ್ ಮತ್ತು ಎಸಿಪಿ ಚಂದನ್ ಕುಮಾರ್ ಇಬ್ಬರು ಸೇರಿಕೊಂಡು ಶರಣಾದ ನಾಲ್ವರಿಗೆ ತಮ್ಮದೇ ರೀತಿಯಲ್ಲಿ ವರ್ಕ್ ಮಾಡಿದ್ದಾರೆ. ಆಗ ಇವರಿಗೂ ರೇಣುಕಾಸ್ವಾಮಿಗೂ ಸಂಬಂಧ ಇಲ್ಲ. ಕೇವಲ ಜೈಲಿಗೆ ಹೋಗಲು ಇವರಿಗೆ ಹಣದ ಆಮಿಷ ಒಡ್ಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಎಸ್ ಗಿರೀಶ್ ಅವರು ಆರೋಪಿಗಳ ಮುಂದೆ ನೆಕ್ಸ್ಟ್ ಇಟ್ಟ ಪ್ರಶ್ನೆಯೇ ಹಣ ಕೊಟ್ಟವರು ಯಾರು? ಅಂತಾ. ಆಗ ಆರ್‌ಆರ್ ನಗರದ ರೆಸ್ಟೋರೆಂಟ್ ಮಾಲೀಕ ವಿನಯ್ ವಿ ಅವರ ಹೆಸರು ಬಯಲಿಗೆ ಬಂದಿದೆ. ಆತನನ್ನು ಎತ್ತಾಕೊಂಡು ಬರೋದಕ್ಕೆ ಪೊಲೀಸರು ಜಾಸ್ತಿ ಟೈಂ ತಗೋಳ್ಲಿಲ್ಲ.
ಅದಲ್ಲದೇ ಆರೋಪಿಗಳಲ್ಲಿ ಒಬ್ಬ ಕಾಮಾಕ್ಷಿಪಾಳ್ಯ ಎಸ್‌ಐಗೆ ಫೋನ್ ಮಾಡಿ ಶರಣಾಗೋದು ಹೇಗೆ? ಅದರ ಪ್ರಕ್ರಿಯೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಎಂಬುದು ವಿಚಾರಣೆ ವೇಳೆ ಗಿರೀಶ್ ಹಾಗೂ ಚಂದನ್ ಅವರಿಗೆ ಗೊತ್ತಾಗಿದೆ. ನಟ ದರ್ಶನ್ ಆಪ್ತ ಸಹಾಯಕನಾಗಿರುವ ವಿನಯ್, ನಟನ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ, ಆತನನ್ನು ಆರ್‌ಆರ್ ನಗರದ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದು, ಅದಾದ್ಮೇಲೆ ಏನೇನಾಯ್ತು ಎಂಬುದನ್ನು ಬಾಯಿ ಬಿಟ್ಟಿದ್ದಾನೆ. ಜೊತೆಗೆ ದರ್ಶನ್ ಗೆಳತಿ ಪವಿತ್ರಾಗೌಡಗೆ ಬಂದಿದ್ದ ಅಶ್ಲೀಲ ಕಮೆಂಟ್‌ಗಳ ಬಗ್ಗೆಯೂ ವಿನಯ್ ಬಾಯಿಬಿಟ್ಟಿದ್ದು, ಅದಕ್ಕೆ ಈ ರೀತಿ ಆಯ್ತು ಎಂದು ಕೂಡ ಹೇಳಿದ್ದ. ಚಿತ್ರಹಿಂಸೆ ನೀಡುವಾಗ ಯಾರ‍್ಯಾರು ಇದ್ದರು ಎಂಬುದನ್ನು ಕೂಡ ಆತ ಹೇಳಿದ್ದ. ಅದಾದ ಬಳಿಕ ಶವ ಸಿಕ್ಕ ಸ್ಥಳದಲ್ಲಿ, ಶೆಡ್ ಬಳಿಕ ಸ್ಕಾರ್ಪಿಯೋ ಕಾರಿನ ಜೊತೆಗೆ ದರ್ಶನ್ ಬಳಸುತ್ತಿದ್ದ ಕೆಂಪು ಬಣ್ಣದ ಜೀಪ್ ರಾಂಗ್ಲರ್ ಓಡಾಡಿದ ಸಿಸಿಟಿವಿ ವಿಡಿಯೋಗಳನ್ನು ವಶಕ್ಕೆ ಪಡೆದು, ಕೇಸ್ ಅನ್ನು ಮತ್ತಷ್ಟು ಸ್ಟ್ರಾಂಗ್ ಮಾಡಿದ್ದಾರೆ.
ನಟ ದರ್ಶನ್ ಈ ಕೊಲೆಯಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಪೊಲೀಸರು ಮನದಟ್ಟು ಮಾಡಿಕೊಂಡ್ರು. ಅದಾದ್ಮೇಲೆ ಸ್ಯಾಂಡಲ್‌ವುಡ್ ಸುಲ್ತಾನ್ ಅನ್ನು ಬಂಧಿಸಬೇಕಿತ್ತು.
ಅವರಿಗಿರೋ ಸ್ಟಾರ್‌ಡಮ್ ಮತ್ತು ರಾಜಕಾರಣಿಗಳ ಜೊತೆ ಇದ್ದ ಸಂಬಂಧವನ್ನು ಗಮನಿಸಿದರೆ ಅವರನ್ನು ಅರೆಸ್ಟ್ ಮಾಡೋದು ಸಾಧ್ಯವೇ ಇಲ್ಲ ಅಂತಾ ಸ್ವತಃ ಪೊಲೀಸ್ ಇಲಾಖೆಯಲ್ಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಎಸ್ ಗಿರೀಶ್ ಅವರು ಎಲ್ಲರ ಊಹೆಯನ್ನು ತಲೆಕೆಳಗು ಮಾಡಿ, ರಹಸ್ಯ ಕಾರ್ಯಾಚರಣೆ ನಡೆಸಿ, ದರ್ಶನ್ ಅವರ ಆಪ್ತರನ್ನೆಲ್ಲಾ ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಬರಲು ಯಶಸ್ವಿಯಾಗಿದ್ದರು.
ಈಗ ದರ್ಶನ್ ಮಾತ್ರ ಬಾಕಿ, ಅದಕ್ಕಾಗಿ ಮಂಗಳವಾರ ಬೆಳ್ಳಂಬೆಳಗ್ಗೆ ಎಸಿಪಿ ಚಂದನ್ ಕುಮಾರ್ ನೇತೃತ್ವದ ಪೊಲೀಸರ ತಂಡ ದರ್ಶನ್ ತಂಗಿದ್ದ ಮೈಸೂರಿನ ಸ್ಟಾರ್ ಹೋಟೆಲ್‌ಗೆ ಬಂತು. ಚಂದನ್ ಕುಮಾರ್ ದರ್ಶನ್ ಬಳಿ ಹೋಗಿ ನಮ್ಮ ಜೊತೆ ಬರುವಂತೆ ಹೇಳಿದರು. ಆಗ ದರ್ಶನ್ ನನಗೆ ಎಲ್ಲ ಗೊತ್ತು, ನೀವು ಮುಂದೆ ಹೋಗಿ, ನಾನು ನನ್ನ ಕಾರಿನಲ್ಲಿ ಬರ್ತಿನಿ ಎಂದಿದ್ದಾರೆ. ಆಗ ಚಂದನ್ ಕುಮಾರ್ ಈಗ ನಮ್ಮೊಂದಿಗೆ ಬರ್ತಿರಾ ಅಥವಾ.. ಎಂದು ಹೇಳಿದ್ದಾರೆ.. ಎಸಿಪಿ ಚಂದನ್ ಕುಮಾರ್ ಅವರ ಬಾಯಿಂದ ಆ ಡೈಲಾಗ್ ಬರುತ್ತಲೇ ಪರಿಸ್ಥಿತಿಯ ಗಂಭೀರತೆ ಅರಿತ ದರ್ಶನ್ ತಕ್ಷಣವೇ ಪೊಲೀಸ್ ಜೀಪ್ ಹೇರಿದ್ದಾರೆ. ಆಗ ದರ್ಶನ್ ಅವರ 3 ಕೋಟಿ ರೂ. ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಹೋಟೆಲ್ ಗೇಟ್‌ನಲ್ಲಿ ನಿಂತೇ ಇತ್ತು.
ದರ್ಶನ್ ಅನ್ನು ಬಂಧಿಸಿ ಮೈಸೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಬರುವಷ್ಟರಲ್ಲಿ ಸುದ್ದಿ ಎಲ್ಲ ಕಡೆ ಹಬ್ಬಿತ್ತು. ಗಿರೀಶ್ ಹಾಗೂ ಪೊಲೀಸ್ ಕಮಿಷನರ್ ಅವರ ಫೋನ್‌ಗಳು ಒಂದಾದ ಮೇಲೊಂದರಂತೆ ಬಡಿದುಕೊಳ್ಳಲು ಶುರು ಮಾಡಿವೆ. ಅದಾಗಲೇ ಟಿವಿ ಚಾನಲ್‌ಗಳಲ್ಲೂ ಕೂಡ ಬ್ರೇಕಿಂಗ್ ನ್ಯೂಸ್ ಶುರು ಆಗಿತ್ತು. ದರ್ಶನ್ ಮತ್ತು ಆತನ ಆಪ್ತರು ಪೊಲೀಸರು ಈ ರೀತಿ ಮಿಂಚಿನ ವೇಗದಲ್ಲಿ ಕೆಲಸ ಮಾಡ್ತಾರೆ ಎಂಬುದನ್ನು ನಿರೀಕ್ಷೆ ಮಾಡೇ ಇರಲಿಲ್ಲ. ಒಂದಿಷ್ಟು ತಡ ಆಗಿದ್ರು, ಅಥವಾ ಒಂದಿಷ್ಟು ಮಾಹಿತಿ ಲೀಕ್ ಆಗಿದ್ರೂ ಎಲ್ಲವೂ ಬದಲಾಗಿರುತ್ತಿತ್ತು ಅಂತಾ ಪೊಲೀಸರೇ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ವೇಗ ಹಾಗೂ ರಹಸ್ಯವಾಗಿ ಈ ಕಾರ್ಯಾಚರಣೆಯನ್ನು ಡಿಸಿಪಿ ಎಸ್ ಗಿರೀಶ್ ಮತ್ತು ಅವರ ತಂಡ ನಡೆಸಿರುವುದು ಶ್ಲಾಘನೀಯ. ಈ ಮೂಲಕ ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸುಳ್ಯ
Sullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ
ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಸುಳ್ಯ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಉದಯ ರವಿ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಶಾಲಾ ಮೈದಾನದಲ್ಲಿದ್ದ ಕಂಬವೊಂದಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಸುಳ್ಯ ಆಲೆಟ್ಟಿ ನಿವಾಸಿಗಳಾದ ಹಾಶಿರ್ (28) ಮತ್ತು ಸಂಶುದ್ದೀನ್ (25) ಎಂದು ತಿಳಿದುಬಂದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಲು ಸ್ಥಳಕ್ಕೆ ತಂದಿದ್ದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಜೊತೆಗೆ 62 ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ ಕಲಂ 7 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪರಾಧ
Madikeri-ಗಾಂಜಾ ಸೇವಿಸಿದವನಿಗೆ ವಿಭಿನ್ನ ಶಿಕ್ಷೆ: ದಿನವಿಡೀ ಟ್ರಾಫಿಕ್ ಕರ್ತವ್ಯ ನಿರ್ವಹಿಸಿದ ಆರೋಪಿ
ಗಾಂಜಾ ಸೇವನೆ ಪ್ರಕರಣದಲ್ಲಿ ನ್ಯಾಯಾಲಯ ವಿಧಿಸಿದ ಶಿಕ್ಷೆಯ ಭಾಗವಾಗಿ ಆರೋಪಿಯೊಬ್ಬರು ಪೊಲೀಸರೊಂದಿಗೆ ಕೈಜೋಡಿಸಿ ಸಾರ್ವಜನಿಕರ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿದ ಅಪರೂಪದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸಿದ್ದಾಪುರ ಪಟ್ಟಣದಲ್ಲಿ ನಡೆದಿದೆ.
ಮಡಿಕೇರಿ, ನ.17: ಗಾಂಜಾ ಸೇವನೆ ಪ್ರಕರಣದಲ್ಲಿ ನ್ಯಾಯಾಲಯ ವಿಧಿಸಿದ ಶಿಕ್ಷೆಯ ಭಾಗವಾಗಿ ಆರೋಪಿಯೊಬ್ಬರು ಪೊಲೀಸರೊಂದಿಗೆ ಕೈಜೋಡಿಸಿ ಸಾರ್ವಜನಿಕರ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿದ ಅಪರೂಪದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸಿದ್ದಾಪುರ ಪಟ್ಟಣದಲ್ಲಿ ನಡೆದಿದೆ.
ಗಾಂಜಾ ಸೇವನೆ ಮಾಡಿದ ಆರೋಪದಡಿ ಸಿದ್ದಾಪುರ ನಿವಾಸಿ ಆಸೀಮ್ ಎಂಬಾತನಿಗೆ ನ್ಯಾಯಾಲಯ ₹5,000 ದಂಡ ವಿಧಿಸಿತ್ತು. ಇದರೊಂದಿಗೆ ಸಮುದಾಯ ಸೇವೆಯನ್ನೂ ಶಿಕ್ಷೆಯ ಭಾಗವಾಗಿ ನೀಡುವಂತೆ ಆದೇಶಿಸಿತ್ತು.
ದಿನವಿಡೀ ಸಂಚಾರ ನಿಯಂತ್ರಣ ಕರ್ತವ್ಯ
ನ್ಯಾಯಾಲಯದ ಆದೇಶದಂತೆ ನವೆಂಬರ್ 15ರಂದು ಆಸೀಮ್ ಸಿದ್ದಾಪುರ ಪಟ್ಟಣದಲ್ಲಿ ಪೊಲೀಸರ ಮೇಲ್ವಿಚಾರಣೆಯಲ್ಲಿ ಸಂಚಾರ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದರ ಜೊತೆಗೆ ಪಾದಚಾರಿಗಳ ಸಂಚಾರವನ್ನೂ ನಿಯಂತ್ರಿಸಿ ದಿನವಿಡೀ ಕರ್ತವ್ಯ ನಿರ್ವಹಿಸುವ ಮೂಲಕ ನ್ಯಾಯಾಲಯ ವಿಧಿಸಿದ್ದ ಸಮುದಾಯ ಸೇವೆಯ ಶಿಕ್ಷೆಯನ್ನು ಪೂರ್ಣಗೊಳಿಸಿದರು.
ಸಾಮಾಜಿಕ ಜವಾಬ್ದಾರಿ ಮೂಡಿಸುವ ಉದ್ದೇಶ
ಅಪರಾಧಿಗಳಿಗೆ ಕೇವಲ ದಂಡ ಅಥವಾ ಜೈಲು ಶಿಕ್ಷೆ ವಿಧಿಸುವ ಬದಲು, ಸಾರ್ವಜನಿಕ ಸೇವೆಯಲ್ಲಿ ತೊಡಗಿಸುವ ಮೂಲಕ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ತಮ್ಮ ತಪ್ಪಿನ ಅರಿವು ಮೂಡಿಸುವ ಉದ್ದೇಶದಿಂದ ನ್ಯಾಯಾಲಯ ಇಂತಹ ವಿಭಿನ್ನ ಶಿಕ್ಷೆಯನ್ನು ವಿಧಿಸಿದೆ.
ಇದೇ ವರ್ಷದ ಮಾರ್ಚ್‌ನಲ್ಲಿ ಕಡೂರು ಉಪವಿಭಾಗದಲ್ಲಿ ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ್ದ ವ್ಯಕ್ತಿಯೊಬ್ಬರಿಗೆ ರಸ್ತೆ ಬದಿಯಲ್ಲಿ ನಿಂತು ಸಂಚಾರ ನಿಯಮಗಳ ಜಾಗೃತಿ ಫಲಕ ಹಿಡಿಯುವಂತೆ ನ್ಯಾಯಾಲಯ ಆದೇಶಿಸಿತ್ತು.
ಸಿದ್ದಾಪುರದಲ್ಲಿ ಜಾರಿಗೊಂಡಿರುವ ಈ ವಿಭಿನ್ನ ಶಿಕ್ಷೆಯ ಮಾದರಿ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದ್ದು, ಅಪರಾಧಿಗಳಿಗೆ ಪಾಠ ಕಲಿಸುವುದರ ಜೊತೆಗೆ ಸಮಾಜಮುಖಿ ಚಿಂತನೆ ಬೆಳೆಸುವ ಪ್ರಯತ್ನವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.
ಅಪರಾಧ
Mangalore-Big Shocking : ಮಂಗಳೂರು: ‘ಕೋಲ್ಡ್ ಪ್ರೆಸ್ಡ್’ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ಆರೋಪ; ಪ್ರತಿಷ್ಠಿತ ‘ಬೋಳಾಸ್’ ಆಗ್ರೋ ಘಟಕದಿಂದ 1,240 ಕೆ.ಜಿ. ಅಡುಗೆ ಎಣ್ಣೆ ವಶ..!
ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್‌ಬ್ರಾಂಡಿಂಗ್ ಹಾಗೂ ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ ಆಹಾರೋತ್ಪನ್ನ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ, ನ.17: ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್‌ಬ್ರಾಂಡಿಂಗ್ ಹಾಗೂ ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ ಆಹಾರೋತ್ಪನ್ನ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ.
ಕಚ್ಚಾ ಎಣ್ಣೆಗೆ ‘ಕೋಲ್ಡ್ ಪ್ರೆಸ್ಡ್’ ಲೇಬಲ್!
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಘಟಕದಲ್ಲಿ ಪರಿಶೀಲನೆ ನಡೆಸಿದಾಗ ಲೇಬಲಿಂಗ್ ಹಾಗೂ ಬ್ರಾಂಡಿಂಗ್ ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳು ಕಂಡುಬಂದಿವೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು (Raw Groundnut Oil) ಖರೀದಿಸಿ, ಅದನ್ನು ‘ಕೋಲ್ಡ್ ಪ್ರೆಸ್ಡ್ ಕಡಲೆಕಾಯಿ ಎಣ್ಣೆ’ (Cold Pressed Groundnut Oil) ಎಂಬ ಹೆಸರಿನಲ್ಲಿ ಮರುಪ್ಯಾಕ್ ಮಾಡಲಾಗುತ್ತಿತ್ತು ಎಂಬುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಉತ್ಪನ್ನದ ನೈಜ ಸ್ವರೂಪಕ್ಕೆ ವಿರುದ್ಧವಾಗಿ ಲೇಬಲ್ ಬಳಸುವ ಮೂಲಕ ಗ್ರಾಹಕರನ್ನು ದಾರಿತಪ್ಪಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಪ್ತಿ ಕ್ರಮ ಕೈಗೊಂಡಿದ್ದಾರೆ.
ವಶಪಡಿಸಿಕೊಂಡ ಎಣ್ಣೆಯ ಪ್ರಮಾಣ ಹೀಗಿದೆ:
ಘಟಕದಿಂದ ಒಟ್ಟು 1,240 ಕೆ.ಜಿ. ತೂಕದ ಅಡುಗೆ ಎಣ್ಣೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಅದರ ವಿವರ ಹೀಗಿದೆ:
- ಕಡಲೆಕಾಯಿ ಎಣ್ಣೆ (ಬಾಕ್ಸ್): ತಲಾ 10 ಕೆ.ಜಿ. ತೂಕದ 11 ಬಾಕ್ಸ್‌ಗಳು.
- ಕಡಲೆಕಾಯಿ ಎಣ್ಣೆ (ಕ್ಯಾನ್): ತಲಾ 35 ಲೀಟರ್‌ನ 30 ಕ್ಯಾನ್‌ಗಳು.
- ತೆಂಗಿನ ಎಣ್ಣೆ (ಬಾಕ್ಸ್): ತಲಾ 20 ಕೆ.ಜಿ. ತೂಕದ 4 ಬಾಕ್ಸ್‌ಗಳು.
- ಮಿಸ್‌ಬ್ರಾಂಡಿಂಗ್ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆ ವಿರುದ್ಧ ಆಹಾರ ಸುರಕ್ಷತಾ ಇಲಾಖೆ ಕೈಗೊಂಡಿರುವ ಈ ಕ್ರಮವು ಗ್ರಾಹಕರ ಹಿತಾಸಕ್ತಿ ಮತ್ತು ಆಹಾರ ಉತ್ಪನ್ನಗಳ ಗುಣಮಟ್ಟದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
-
ಬಿಗ್ ನ್ಯೂಸ್10 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
Uncategorized9 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್10 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ಮಂಗಳೂರು10 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
ಅಂತರ ರಾಜ್ಯ8 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
ರಾಜಕೀಯ8 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಬಿಗ್ ನ್ಯೂಸ್9 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ
-
ಸುಳ್ಯ8 hours agoSullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ















