ಕ್ರೀಡೆ
India Vs South Africa 2nd T20I ಟಿ 20: ಭಾರತದೆದುರು ದ. ಅಫ್ರಿಕಾ ತಂಡಕ್ಕೆ ರೋಚಕ ಗೆಲುವು – ರಿಂಕ್ ಸಿಂಗ್ ಸಾಹಸ ವ್ಯರ್ಥ
India Vs South Africa 2nd T20I ಸೈಂಟ್ ಜಾರ್ಜ್ ಪಾರ್ಕ್ : ಆತಿಥೇಯ ದಕ್ಷಿಣ ಆಫ್ರಿಕಾ(South Africa) ವಿರುದ್ದ ಮಳೆಯಿಂದ ಭಾದಿತವಾದ ದ್ವಿಪಕ್ಷೀಯ ಕ್ರಿಕೆಟ್ (Cricket) ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಭಾರತವು (India Cricket Team) ವಿರೋಚಿತ ಸೋಲು ಅನುಭವಿಸಿದೆ. ಡಕ್ ವರ್ತ್ ಲೂಯಿಸ್ ನಿಯಮದಂತೆ ಪಂದ್ಯದ ಫಲಿತಾಂಶ ನಿರ್ಧರಿತವಾಗಿದ್ದು ಧಕ್ಷಿಣ ಆಫ್ರಿಕಾ ತಂಡ 7 ಎಸೆತ ಬಾಕಿ ಇರುವಂತೆ 5 ವಿಕೆಟ್ ಗಳಿಂದ ರೋಚಕ ಗೆಲುವು ಸಾಧಿಸಿತ್ತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಹರಿಣಗಳು 1-0 ಯಿಂದ ಮುನ್ನಡೆ ಸಾಧಿಸಿದರು. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಒಂದು ಎಸೆತ ಕಾಣದೇ ರದ್ದಾಗಿತ್ತು.
ಮಳೆಯಿಂದಾಗಿ ನಿಗದಿತ ಸಮಯಕ್ಕಿಂತ ತಡವಾಗಿ ಪಂದ್ಯ ಆರಂಭವಾಯಿತು. ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಮಾಡಿತು. ತಂಡವು 19.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 ರನ್ ಗಳಿಸಿತು. ಈ ಸಂದರ್ಭದಲ್ಲಿ ಮಳೆ ಬಂದು ಆಟ ನಿಂತಿತು. ಆದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದಡಿಯಲ್ಲಿ ದಕ್ಷಿಣ ಅಫ್ರಿಕಾ ತಂಡಕ್ಕೆ ಪರಿಷ್ಕೃತ ಗುರಿಯನ್ನು ನೀಡಲಾಯಿತು. 15 ಓವರ್‌ಗಳಲ್ಲಿ 152 ರನ್‌ಗಳ ತೆಗೆಯುವ ಟಾರ್ಗೆಟ್ ನೀಡಲಾಯಿತು.
ಗುರಿ ಬೆನ್ನೆತ್ತಲು ಆರಂಭಿಸಿದ ಧ. ಅಫ್ರಿಕಾ ತಂಡಕ್ಕೆ ಆರಂಭಿಕರಿಬ್ಬರು ಸ್ಪೋಟಕ ಆರಂಭ ಒದಗಿಸಿದರು. ಆರಂಭಿಕ ಬ್ಯಾಟರ್ ರೀಜಾ ಹೆನ್ರಿಕ್ಸ್ (49 ರನ್) ಮತ್ತು ಮ್ಯಾಥ್ಯೂ ಬ್ರೀಟ್ಜ್ ಅವರು ಕೇವಲ 2.5 ಓವರ್‌ಗಳಲ್ಲಿ 42 ರನ್ ದೋಚಿತು. ಮೂರನೇ ಓವರ್‌ನಲ್ಲಿ ಮ್ಯಾಥ್ಯೂ ರನ್‌ಔಟ್ ಆಗಿದ್ದರಿಂದ ಜೊತೆಯಾಟ ಮುರಿಯಿತು. ಕ್ರೀಸ್‌ಗೆ ಬಂದ ಏಡನ್ ಮರ್ಕರಂ 17 ಎಸೆತಗಳಲ್ಲಿ 30 ರನ್ ಗಳಿಸಿದರು. ಈ ಹಂತದಲ್ಲಿ ದ. ಅಫ್ರಿಕಾ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು. ಇದರಿಂದ ಏಕಮುಖವಾಗಿ ಸಾಗುವಂತೆ ಕಂಡಿತ್ತು.

ಆದರೇ ಮರ್ಕರಂ ಮತ್ತು ರಿಜಾ ಕ್ರಮವಾಗಿ ಎಂಟು ಹಾಗೂ ಒಂಬತ್ತನೇ ಓವರ್‌ನಲ್ಲಿ ಬೆನ್ನು ಬೆನ್ನಿಗೆ ಔಟ್ ಆದರು. ಇದರಿಂದಾಗಿ ಭಾರತ ಮತ್ತೆ ಪಂದ್ಯಕ್ಕೆ ವಾಪಸ್ಸಾಯಿತು. ನಂತರದ ನಾಲ್ಕು ಓವರ್‌ಗಳಲ್ಲಿ ತುರುಸಿನ ಪೈಪೋಟಿ ನಡೆಯಿತು. ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ವಿಕೆಟ್ ಪಡೆಯುವಲ್ಲಿ ಸಿರಾಜ್ ಹಾಗೂ ಮುಕೇಶ್ ಕುಮಾರ್ ಯಶಸ್ವಿಯಾದರು.
ಆದರೆ ಭಾರತದ ಗೆಲುವಿನ ಯತ್ನಕ್ಕೆ ಸ್ಟಬ್ಸ್ ಮತ್ತು ಆಯಂಡಿಲೆ ಪಿಶುವಾಯೊ ಅಡ್ಡಿಯಾದರು. ಇನಿಂಗ್ಸ್‌ನ ಕೊನೆಯ 12 ಎಸೆತಗಳಲ್ಲಿ ಬೇಕಾಗಿದ್ದ 12 ರನ್‌ಗಳನ್ನು ಈ ಇಬ್ಬರೂ ಸೇರಿ ರವೀಂದ್ರ ಜಡೆಜಾ ರ ಐದು ಎಸೆತಗಳಲ್ಲಿ ಹೊಡೆದರು. ಆಯಂಡಿಲೆ ವಿಜಯದ ಸಿಕ್ಸರ್ ಸಿಡಿಸಿದರು.
ಸೂರ್ಯ, ರಿಂಕು ಅಬ್ಬರ: ಇನ್ನು ಭಾರತ ಕಳಪೆಯಾಗಿಯೇ ಪಂದ್ಯ ಆರಂಭಿಸಿತ್ತು . ಭಾರತದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಿಬ್ಬರೂ ಖಾತೆ ತೆರೆಯದೇ ಔಟಾದರು. ಆದರೇ ನಾಯಕ ಸೂರ್ಯ ಕುಮಾರ್ ಹಾಗೂ ಉದಯೋನ್ಮುಖ ಪ್ರತಿಭೆ ರಿಂಕ್ ಸಿಂಗ್ ಸಮಯೋಚಿತ ಹಾಗೂ ಅಬ್ಬರದ ಬ್ಯಾಟಿಂಗ್ ನಡೆಸಿ ಟೀಮ್ ಇಂಡಿಯಾವನ್ನು ಆಧರಿಸಿದರು.

ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯ (56; 36ಎ, 4X5, 6X3) ಮತ್ತು ರಿಂಕು (ಔಟಾಗದೆ 68; 39ಎ, 4X9, 6X2) ಅವರು ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಮೂರನೇ ವಿಕೆಟಿಗೆ ತಿಲಕ್ ವರ್ಮಾ (29; 20ಎ) ಅವರು ಸೂರ್ಯ ಅವರೊಂದಿಗೆ 49 ರನ್ ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಮತ್ತು ಎರಡನೇ ಓವರ್‌ನಲ್ಲಿ ತಿಲಕ್ ವರ್ಮಾ ಅವರಿಗೆ ಜೀವದಾನಗಳು ಲಭಿಸಿದ್ದವು. ಗೆರಾಲ್ಡ್ ಕೋಝಿ ಎಸೆತದಲ್ಲಿ ವರ್ಮಾ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ಸೂರ್ಯ ಮತ್ತು ರಿಂಕು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 70 ರನ್ ಸೇರಿಸಿದರು. ಕೊನೆಯ ಹಂತದಲ್ಲಿ ರವಿಂದ್ರ ಜಡೆಜಾ 19 ರನ್ ಗಳ ಚಿನಕುರುಳಿ ಆಟವಾಡಿದರು.

ಸಂಕ್ಷಿಪ್ತ ಸ್ಕೋರು: ಭಾರತ: 19.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 (ತಿಲಕ್ ವರ್ಮಾ 29, ಸೂರ್ಯಕುಮಾರ್ ಯಾದವ್ 56, ರಿಂಕು ಸಿಂಗ್ ಔಟಾಗದೆ 68, ರವೀಂದ್ರ ಜಡೇಜ 19, ಗೆರಾಲ್ಡ್ ಕೋಜಿ 32ಕ್ಕೆ3) ದಕ್ಷಿಣ ಆಫ್ರಿಕಾ: 13.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 154 (ರೀಜಾ ಹೆನ್ರಿಕ್ಸ್ 49, ಏಡನ್ ಮರ್ಕರಂ 30, ಡೇವಿಡ್ ಮಿಲ್ಲರ್ 17, ಟ್ರಿಸ್ಟನ್ ಸ್ಟಬ್ಸ್ ಔಟಾಗದೆ 14, ಆಯಂಡಿಲೆ ಪಿಶುವಾಯೊ ಔಟಾಗದೆ 10, ಮುಕೇಶ್ ಕುಮಾರ್ 34ಕ್ಕೆ2) ಫಲಿತಾಂಶ:ದಕ್ಷಿಣ ಆಫ್ರಿಕಾಕ್ಕೆ 5 ವಿಕೆಟ್ ಜಯ (ಡಿಎಲ್‌ಎಸ್ ಪದ್ಧತಿ ಅನ್ವಯ)
ಕ್ರೀಡೆ
IPL 2027-ಐಪಿಎಲ್ 2027 ಮಿನಿ ಹರಾಜು ಡಿ.16ಕ್ಕೆ ಫಿಕ್ಸ್: ಆರ್‌ಸಿಬಿ ಸೇರಿ 10 ತಂಡಗಳ ಪರ್ಸ್ ವಿವರ ಇಲ್ಲಿದೆ..
ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.
ಬೆಂಗಳೂರು, ನ.18: ಐಪಿಎಲ್ 2027ರ ಮಿನಿ ಹರಾಜಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಅಂತಿಮ ಪಟ್ಟಿಯನ್ನು ನವೆಂಬರ್ 17ರ ಗಡುವಿನೊಳಗೆ ಬಿಸಿಸಿಐಗೆ ಸಲ್ಲಿಸಿವೆ. ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಆಟಗಾರರ ರಿಟೆನ್ಷನ್ ಮತ್ತು ಟ್ರೇಡಿಂಗ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಹರಾಜಿನಲ್ಲಿ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಎಷ್ಟು ಆಟಗಾರರನ್ನು ಖರೀದಿಸಲು ಅವಕಾಶವಿದೆ ಎಂಬ ಲೆಕ್ಕಾಚಾರ ಬಹಿರಂಗವಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ಬಳಿ ಅತಿ ಹೆಚ್ಚು ಹಣ!
ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತಿ ಹೆಚ್ಚು ಹಣದೊಂದಿಗೆ ಕಣಕ್ಕಿಳಿಯಲಿದೆ. ಆಟಗಾರರನ್ನು ಉಳಿಸಿಕೊಂಡ ಬಳಿಕ ತಂಡದ ಪರ್ಸ್‌ನಲ್ಲಿ ಬರೋಬ್ಬರಿ ₹47.45 ಕೋಟಿ ಉಳಿದಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ₹40.15 ಕೋಟಿ ಹಣದೊಂದಿಗೆ ನಂತರದ ಸ್ಥಾನಗಳಲ್ಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿ ₹39.50 ಕೋಟಿ ಹಾಗೂ ಮುಂಬೈ ಇಂಡಿಯನ್ಸ್ ಬಳಿ ₹32.60 ಕೋಟಿ ಹಣವಿದೆ.
ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ತಂಡದ ಬಳಿ ಕೇವಲ ₹8.75 ಕೋಟಿ ಮಾತ್ರ ಉಳಿದಿದ್ದು, 10 ತಂಡಗಳ ಪೈಕಿ ಅತ್ಯಂತ ಕಡಿಮೆ ಮೊತ್ತ ಹೊಂದಿರುವ ತಂಡವಾಗಿದೆ.
ಡೆಲ್ಲಿ, ಮುಂಬೈಗೆ ಹೆಚ್ಚು ಆಟಗಾರರ ಖರೀದಿ ಅವಕಾಶ
ಖಾಲಿ ಇರುವ ಆಟಗಾರರ ಸ್ಥಾನಗಳ ಲೆಕ್ಕಾಚಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಂಚೂಣಿಯಲ್ಲಿವೆ. ಈ ಎರಡೂ ತಂಡಗಳು ತಲಾ 9 ಆಟಗಾರರನ್ನು ಖರೀದಿಸಲು ಅವಕಾಶ ಹೊಂದಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ 8, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಲಾ 7 ಆಟಗಾರರನ್ನು ಖರೀದಿಸಬಹುದು. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ತಲಾ 6 ಸ್ಥಾನಗಳು ಖಾಲಿಯಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6 ಆಟಗಾರರನ್ನು ಖರೀದಿಸುವ ಅವಕಾಶವಿದ್ದು, ಗುಜರಾತ್ ಟೈಟಾನ್ಸ್ ತಂಡದಲ್ಲಿ ಕೇವಲ 3 ಸ್ಥಾನಗಳು ಮಾತ್ರ ಖಾಲಿಯಿವೆ.
10 ತಂಡಗಳ ಪರ್ಸ್ ಮೊತ್ತ ಮತ್ತು ಖಾಲಿ ಸ್ಥಾನಗಳ ವಿವರ
ತಂಡ ಉಳಿದ ಹಣ ಖಾಲಿ ಸ್ಥಾನ ವಿದೇಶಿ ಆಟಗಾರರ ಸ್ಥಾನ
ಲಕ್ನೋ ಸೂಪರ್ ಜೈಂಟ್ಸ್ ₹47.45 ಕೋಟಿ 7 3
ಕೋಲ್ಕತ್ತಾ ನೈಟ್ ರೈಡರ್ಸ್ ₹41.65 ಕೋಟಿ 8 3
ಸನ್‌ರೈಸರ್ಸ್ ಹೈದರಾಬಾದ್ ₹40.15 ಕೋಟಿ 7 3
ಡೆಲ್ಲಿ ಕ್ಯಾಪಿಟಲ್ಸ್ ₹39.50 ಕೋಟಿ 9 4
ಮುಂಬೈ ಇಂಡಿಯನ್ಸ್ ₹32.60 ಕೋಟಿ 9 2
ಚೆನ್ನೈ ಸೂಪರ್ ಕಿಂಗ್ಸ್ ₹28.05 ಕೋಟಿ 6 2
ರಾಜಸ್ಥಾನ್ ರಾಯಲ್ಸ್ ₹27.05 ಕೋಟಿ 6 2
ಪಂಜಾಬ್ ಕಿಂಗ್ಸ್ ₹18.60 ಕೋಟಿ 6 2
ರಾಯಲ್ ಚಾಲೆಂಜರ್ಸ್ ಬೆಂಗಳೂರು ₹14.15 ಕೋಟಿ 6 1
ಗುಜರಾತ್ ಟೈಟಾನ್ಸ್ ₹8.75 ಕೋಟಿ 3 2
ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು
ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16, 2026ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಎಲ್ಲಾ 10 ತಂಡಗಳು ತಮ್ಮ ತಂಡಕ್ಕೆ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಪೈಪೋಟಿ ನಡೆಸಲಿವೆ.
2025ರಿಂದ 2027ರವರೆಗಿನ ಮೂರು ವರ್ಷಗಳ ಅವಧಿಯ ಆರಂಭದಲ್ಲಿ ಪ್ರತಿ ತಂಡಕ್ಕೆ ಆಟಗಾರರ ಖರೀದಿಗಾಗಿ ₹120 ಕೋಟಿ ಪರ್ಸ್ ನಿಗದಿಪಡಿಸಲಾಗಿತ್ತು. ನಿಯಮದ ಪ್ರಕಾರ ಪ್ರತಿ ಮಿನಿ ಹರಾಜಿಗೂ ಮುನ್ನ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ₹5 ಕೋಟಿ ಸೇರ್ಪಡೆಯಾಗುತ್ತದೆ. ಹೀಗಾಗಿ 2027ರ ಮಿನಿ ಹರಾಜಿನಲ್ಲಿ ಪ್ರತಿ ತಂಡದ ಒಟ್ಟು ಪರ್ಸ್ ಮೊತ್ತ ₹130 ಕೋಟಿಗೆ ಏರಿಕೆಯಾಗಲಿದೆ.
ಡಿಸೆಂಬರ್ 16ರಂದು ನಡೆಯಲಿರುವ ಹರಾಜಿನಲ್ಲಿ ಯಾವ ತಂಡ ಯಾವ ಸ್ಟಾರ್ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಮತ್ತು ಯಾವ ತಂಡ ಬಲಿಷ್ಠ ಪಡೆಯನ್ನು ಕಟ್ಟಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದೆ.
ಅಂತರ ರಾಜ್ಯ
Mohammed Shami: ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ
ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.
ಹೊಸದಿಲ್ಲಿ: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.
‘ನಾನು ಬಿಳಿ ಜೆರ್ಸಿಗೆ ವಿದಾಯ ಹೇಳುತ್ತಿದ್ದೇನೆ. ಆದರೆ ಅದರೊಂದಿಗೆ ಬೆಸೆದುಕೊಂಡಿರುವ ನೆನಪುಗಳಿಗೆ ಎಂದಿಗೂ ವಿದಾಯ ಹೇಳುವುದಿಲ್ಲ’ ಎಂದು ಶಮಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಭಾರತದ ಟೆಸ್ಟ್ ಜೆರ್ಸಿಯನ್ನು ಮೊದಲ ಬಾರಿಗೆ ಧರಿಸಿದ ಕ್ಷಣವನ್ನು ನೆನಪಿಸಿಕೊಂಡಿರುವ ಅವರು, ‘ಮೊದಲ ಬಾರಿಗೆ ಭಾರತದ ಟೆಸ್ಟ್ ಜೆರ್ಸಿ ಧರಿಸಿದಾಗ ನನ್ನಲ್ಲಿದ್ದದ್ದು ಒಂದೇ ಕನಸು. ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದಾಗಿತ್ತು. ಅಂದಿನಿಂದ ಪ್ರತಿಯೊಂದು ವಿಕೆಟ್, ಪ್ರತಿಯೊಂದು ಹೋರಾಟ, ಪ್ರತಿಯೊಂದು ಗಾಯ ಹಾಗೂ ಪ್ರತಿಯೊಂದು ಪುನರಾಗಮನವೂ ನನಗೆ ಹೊಸ ಪಾಠ ಕಲಿಸಿದೆ’ ಎಂದು ಬರೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನನ್ನ ಜೀವನದ ವಿಶೇಷ ಭಾಗವಾಗಿತ್ತು
‘ನನ್ನ ಪಾಲಿಗೆ ಟೆಸ್ಟ್ ಕ್ರಿಕೆಟ್ ಕೇವಲ ಒಂದು ಮಾದರಿಯಾಗಿರಲಿಲ್ಲ. ಅದು ನನ್ನ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು. ಇಂದು ಭಾರವಾದ ಹೃದಯ ಹಾಗೂ ಅಸಂಖ್ಯಾತ ಸುಂದರ ನೆನಪುಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ’ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ತಮ್ಮ ಕ್ರಿಕೆಟ್ ಪಯಣದಲ್ಲಿ ಬೆಂಬಲವಾಗಿ ನಿಂತ ಸಹ ಆಟಗಾರರು, ತರಬೇತುದಾರರು ಹಾಗೂ ಕುಟುಂಬ ಸದಸ್ಯರಿಗೆ ಶಮಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ಒಳ್ಳೆಯ ಹಾಗೂ ಕಷ್ಟದ ಸಮಯಗಳಲ್ಲೂ ತಮ್ಮ ಮೇಲೆ ನಂಬಿಕೆ ಇಟ್ಟ ಲಕ್ಷಾಂತರ ಭಾರತೀಯ ಅಭಿಮಾನಿಗಳಿಗೂ ಕೃತಜ್ಞತೆ ತಿಳಿಸಿದ್ದಾರೆ.
ತಮ್ಮ ಪ್ರತಿಭೆಯನ್ನು ಗುರುತಿಸಿ, ಬೆಳೆಯಲು ಅವಕಾಶ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಸಂಸ್ಥೆಗಳಿಗೂ ಧನ್ಯವಾದ ಅರ್ಪಿಸಿದ್ದಾರೆ. ಈ ಸಂಸ್ಥೆಗಳು ನೀಡಿದ ಬೆಂಬಲ ಹಾಗೂ ವಿಶ್ವಾಸ ಸದಾ ತಮ್ಮ ಪಾಲಿಗೆ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.
ಸ್ಥಳೀಯ
Shrikrishna-ಗ್ವಾಲಿಯರ್‌ನಲ್ಲಿ ಮಿಂಚಿದ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿ; ರಾಷ್ಟ್ರಮಟ್ಟದ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ವಿದ್ಯಾಭಾರತಿಯ 33ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿ ಸಾಥ್ವಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಪಟ್ಟೆ ಬಡಗನ್ನೂರು: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ವಿದ್ಯಾಭಾರತಿಯ 33ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿ ಸಾಥ್ವಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
17 ವರ್ಷ ವಯೋಮಾನದ ವಿಭಾಗದಲ್ಲಿ ಕರ್ನಾಟಕ ದಕ್ಷಿಣ ಮಧ್ಯ ಕ್ಷೇತ್ರ ತಂಡವನ್ನು ಪ್ರತಿನಿಧಿಸಿದ ಸಾಥ್ವಿ, ತಂಡದೊಂದಿಗೆ ಸ್ಪರ್ಧಿಸಿ ಈ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಹಾಗೂ ಸಾಥ್ವಿ ಅವರನ್ನು ಪಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷರು, ಸರ್ವ ಸದಸ್ಯರು, ಶಾಲೆಯ ಮುಖ್ಯಗುರುಗಳು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
-
ಬಿಗ್ ನ್ಯೂಸ್16 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಅಂತರ ರಾಜ್ಯ22 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
Uncategorized23 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ರಾಜಕೀಯ22 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಬಿಗ್ ನ್ಯೂಸ್23 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ
-
ಆರೋಗ್ಯ18 hours agoPuttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ
-
ಸುಳ್ಯ22 hours agoSullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ
-
ಕಾರ್ಯಕ್ರಮಗಳು23 hours agoPuttur-ಡಿ.8ರಂದು ಪುತ್ತೂರು ದೀಪೋತ್ಸವ: ದೇವಸ್ಥಾನದ ಮುಂಭಾಗದಲ್ಲಿ ಚಪ್ಪರ ಮುಹೂರ್ತ















