Connect with us

ದಕ್ಷಿಣ ಕನ್ನಡ

Police Failure: ಪುತ್ತೂರು : ಜನಸಂದಣಿ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಬೀಭತ್ಸ ಕೊಲೆಗಳು – ಪೇಟೆಗೆ ಬರಲು ಜನರಿಗೆ ಭಯ..! ಪೊಲೀಸರು ಎಚ್ಚರಿಕೆ ವಹಿಸಿದ್ರೆ ಈ 5 ಕೊಲೆಗಳನ್ನು ತಡೆಯಬಹುದಿತ್ತು

Published

on



Ad Widget

Ad Widget

Ad Widget

Ad Widget

ಕಳೆದ ಕೆಲ ವರ್ಷಗಳಲ್ಲಿ ಹುಲಿ ಕುಣಿತ ವೇಷ ತಂಡದಲ್ಲಿ ಭಾರೀ ಖ್ಯಾತಿಯನ್ನು ಸಂಪಾದಿಸಿದ ಕಲ್ಲೇಗ ಟೈಗರ್ಸ್ ನ ಅಕ್ಷಯ್‌ (26) ಹತ್ಯೆಯ ರೀತಿ ಮತ್ತು ಕಾರಣ ಜನಮಾನಸದಲ್ಲಿ ಭೀತಿ ಸೃಷ್ಟಿಸಿದ್ದು, ಪುತ್ತೂರು ನಗರದಾದ್ಯಂತ ಭಯದ ವಾತವಾರಣ ಉಂಟು ಮಾಡಿದೆ. ಕೋಮು ವಿಷಯ ಹೊರತು ಪಡಿಸಿ ಪುತ್ತೂರು ಪೇಟೆ ಅತ್ಯಂತ ಶಾಂತ ಹಾಗೂ ನೆಮ್ಮದಿಯ ಪ್ರದೇಶ ಎಂದೆ ಬಿಂಬಿತವಾಗಿತ್ತು. ಕೋಮು ವಿಚಾರದಲ್ಲೂ ಕಳೆದೆರಡು ದಶಕಗಳಲ್ಲಿ ಹೇಳಿಕೊಳ್ಳುವಂತಹ ಗಲಾಟೆ, ಗಲಭೆ ನಡೆದದ್ದಿಲ್ಲ.

Ad Widget

Ad Widget

Ad Widget

Ad Widget

1980ರಿಂದ 90ರ ದಶಕದವರೆಗೆ ಪುತ್ತೂರು ಪೇಟೆಯಲ್ಲಿ ಗೂಂಡಾಗಳ ಕಾರುಬಾರು ಇದ್ದಿದ್ದು ನಿಜ . ಬೊಳ್ವಾರು ಹಾಗೂ ದರ್ಭೆ ಎಂಬ ಎರಡು ಗ್ಯಾಂಗ್‌ ಗಳು ಪರಸ್ಪರ ಇಲ್ಲಿ ಕಾದಾಟ ನಡೆಸುತ್ತಿದ್ದವು. ಈ ಸಂದರ್ಭ ಮಚ್ಚಿನೆಟ್ಟಿಗೆ , ಗುಂಡಿನ ದಾಳಿಗೆ ಕೆಲ ಹೆಣಗಳು ಇಲ್ಲಿ ಉರುಳಿದ್ದವು. ಬಳಿಕದ ದಿನಗಳಲ್ಲಿ
ಬಾಬ್ರಿ ಮಸೀದಿ ವಿವಾದ ಸೌಮ್ಯ ಭಟ್‌ ಹಾಗೂ ಅಕ್ಷತ್‌ ಕೊಲೆ ಪ್ರಕರಣ ಸಂದರ್ಭ ಪುತ್ತೂರು ಉದ್ವೀಗ್ನ ದಿನಗಳನ್ನು ಕಂಡಿತಾದರೂ ಬಳಿಕದ ದಿನಗಳಲ್ಲಿ ಇಲ್ಲಿ ಶಾಂತಿ ನೆಲೆಸಿತ್ತು, ನೆಮ್ಮದಿ ಕಾಣಿಸಿತ್ತು.
ಆದರೇ ಕಳೆದ ಕೆಲ ವರ್ಷಗಳಲ್ಲಿ ಇಲ್ಲಿ ಉತ್ತರ ಭಾರತದ ಮಾದರಿ ಕೊಲೆಗಳು ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

Ad Widget

Ad Widget

Ad Widget alt="Ad Widget"/>

Ad Widget

ಕೌಟುಂಬಿಕ ಕಲಹಕ್ಕೂ , ವೈಯುಕ್ತಿಕ ದ್ವೇಷಕ್ಕೂ ಕೊಲೆಗಳು ಎಲ್ಲ ಕಡೆಗಳಲ್ಲಿ ನಡೆಯುವುದು ಸಾಮಾನ್ಯ . ಪ್ರತಿ ಠಾಣೆಯಲ್ಲಿ ಪ್ರತಿ ವರ್ಷವು ಈ ರೀತಿಯ ‌ಕನಿಷ್ಟ ಒಂದಾದರೂ ಪ್ರಕರಣ ದಾಖಲಾಗುತ್ತಿರುತ್ತದೆ. ಆದರೇ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವುದು ಸಿನಿಮೀಯ ಶೈಲಿ ಕೊಲೆಗಳು. ಜನನಿಬಿಡ ಪ್ರದೇಶದಲ್ಲಿ ಮಾರಕಾಯುಧಗಳನ್ನು ಬಳಸಿ ಅತ್ಯಂತ ಬರ್ಬರವಾಗಿ, ಬೀಭತ್ಸವಾಗಿ, ಅಟ್ಟಾಡಿಸಿ ಹತ್ಯೆ ಮಾಡಲಾಗುತ್ತಿದೆ.

Ad Widget

Ad Widget <> Ad Widget

4 ವರ್ಷದಲ್ಲಿ 5 ಬೀಭತ್ಸ ಹತ್ಯೆ



Ad Widget

2019ರಲ್ಲಿ ಗಣೇಶೋತ್ಸವದ ಪೆಂಡಾಲ್‌ ನಲ್ಲಿ ಸಂಪ್ಯ ಠಾಣೆಯ ಕೂಗಳತೆ ದೂರದಲ್ಲಿ ನೂರಾರು ಜನರ ಸಮ್ಮುಖ ಹಿಂದೂ ಸಂಘಟನೆಯ ಕಾರ್ಯಕರ್ತ ಕಾರ್ತಿಕ್‌ ಮೇರ್ಲ ಹತ್ಯೆ ನಡೆಸಲಾಗಿತ್ತು. ಕಿರಣ್‌, ಚರಣ್‌ ಹಾಗೂ ಪ್ರಿತೇಶ್‌ ಎಂಬವರು ಹಲವು ಬಾರಿ ಇರಿದು ಹತ್ಯೆ ಮಾಡಿದ್ದರು. ಈ ಹತ್ಯೆಯ ಕಾರಣವಾಗಿ ಹಲವು ಊಹಾಪೋಹಗಳು ಸೃಷ್ಟಿಯಾಗಿತ್ತಾದರೂ ಪೊಲೀಸರು ನಿಖರ ಕಾರಣ ಇವತ್ತಿನವರೆಗೆ ತಿಳಿಸಿಲ್ಲ. ಈ ಹತ್ಯೆ ನಡೆವ ಕೆಲ ತಿಂಗಳುಗಳ ಹಿಂದೆ ನಡೆದ ಹಲ್ಲೆ ಪ್ರಕರಣವೊಂದರ ಮುಂದುವರಿದ ಭಾಗವಾಗಿ ಕಾರ್ತಿಕ್‌ ಹತ್ಯೆ ನಡೆದಿತ್ತು ಎಂದು ಹೇಳಲಾಗಿತ್ತಾದರೂ, ಆ ಹಲ್ಲೆ ಪ್ರಕರಣದ ಸಂದರ್ಭ ಕಾರ್ತಿಕ್‌ ಸ್ಥಳದಲ್ಲೆ ಇರಲಿಲ್ಲ ಎನ್ನುವುದು ವಿಶೇಷ.

Ad Widget

Ad Widget
ಕಾರ್ತಿಕ್‌ ಮೇರ್ಲಾ

2022ರ ಜೂನ್‌ ತಿಂಗಳಿನಲ್ಲಿ ತನ್ನ ಅಂಗಡಿಯ ಶುಭಾರಂಭದ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದ ಕಾರ್ತಿಕ್‌ ಮೇರ್ಲ ಕೊಲೆ ಆರೋಪಿ ಚರಣ್‌ ರೈಯನ್ನು ಹಾಡುಹಗಲೇ ಪುತ್ತೂರು ತಾಲೂಕಿನ ಗ್ರಾಮೀಣ ಭಾಗವಾದ ಪೆರ್ಲಂಪಾಡಿಯ ಪೇಟೆಯಲ್ಲಿ ಜನರ ಸಮ್ಮುಖವೇ ಅಟ್ಟಾಡಿಸಿ ಬರ್ಬರವಾಗಿ ಕಡಿದು ಹತ್ಯೆ ಮಾಡಲಾಗಿತ್ತು. ಕಾರ್ತಿಕ್‌ ಮೇರ್ಲ ಸಂಬಂಧಿ ಕಿಶೋರ್‌ ಹಾಗೂ ಸಹಚರರು ಕೃತ್ಯ ಎಸಗಿದ್ದರು.

ಚರಣ್‌ ರೈ

2022ರ ಜುಲೈ ತಿಂಗಳ ಅಂತ್ಯದಲ್ಲಿ ಕೋಳಿ ಅಂಗಡಿಯ ಮಾಲೀಕ ಹಾಗೂ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರ್‌ ನನ್ನು ಬೈಕ್‌ ನಲ್ಲಿ ಬಂದ ಮೂವರು ಬೆಳ್ಳಾರೆ ಪೇಟೆಯಲ್ಲಿದ್ದ ಆತನ ಅಂಗಡಿಯ ಮುಂಭಾಗವೇ ರಾತ್ರಿ 8 ಗಂಟೆ ಸುಮಾರಿಗೆ ಅಟ್ಟಾಡಿಸಿ ಹತ್ಯೆ ಮಾಡಿದ್ದರು. ಈ ವೇಳೆ ಪ್ರವೀಣ್‌ ಅಂಗಡಿಯ ಕೆಲಸದಾತ ಅಂಗಡಿಯ ಒಳಗಡೆಯೇ ಇದ್ದರು. ಬೆಳ್ಳಾರೆ ಪೇಟೆಯಲ್ಲಿ ಆ ವೇಳೆ ಜನ ಸಂಚಾರವಿತ್ತು.

ಪ್ರವೀಣ್‌ ನೆಟ್ಟಾರ್

2023ರ ಅಗಷ್ಟ್‌ ತಿಂಗಳ ಅಂತ್ಯದಲ್ಲಿ ಪುತ್ತೂರು ಬಸ್ಸು ನಿಲ್ದಾಣದ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ವಿಟ್ಲದ ಯುವತಿ ಗೌರಿಯನ್ನು ಪುತ್ತೂರು ಮಹಿಳಾ ಠಾಣೆಯ ಮುಂಭಾಗ ಪಾಗಲ್‌ ಪ್ರೇಮಿ ಪದ್ಮರಾಜ್‌ ಚೂರಿಯಿಂದ ಹಲವು ಬಾರಿ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಹತ್ಯೆ ನಡೆದ ಸಂದರ್ಭವು ಆ ಪ್ರದೇಶದಲ್ಲಿ ಜನ ಸಂಚಾರವಿತ್ತು.‌

ಗೌರಿ

ಕಾಲೇಜ್‌ ರಸ್ತೆಯಲ್ಲೆ ಹತ್ಯೆ

ಇದೀಗ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಪುತ್ತೂರಿನ ಪ್ರತಿಷ್ಟಿತ ವಿದ್ಯಾಸಂಸ್ಥೆಗೆ ತೆರಳುವ ರಸ್ತೆ ಮಧ್ಯೆ ಅಕ್ಷಯ್‌ ಕಲ್ಲೇಗ ರನ್ನು ಅವರ ಇಬ್ಬರು ಸ್ನೇಹಿತರ ಸಮ್ಮುಖವೇ ರಾತ್ರಿ 11.30ರ ಸುಮಾರಿಗೆ ಹತ್ಯೆ ಮಾಡಲಾಗಿದೆ. ಪ್ರಖರ ಬೀದಿ ದೀಪದ ಬೆಳಕಿನಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೆ ಅಟ್ಟಾಡಿಸಿ ಹತ್ಯೆ ಮಾಡಲಾಗಿದ್ದು, ಮೃತನ ದೇಹದ ಮೇಲೆ ೫೨ ಗಾಯದ ಗುರುತುಗಳಿದ್ದವು. ಹತ್ಯೆ ನಡೆದ ಪಕ್ಕದಲ್ಲೆ ಹೊಟೇಲ್‌ ಇದ್ದು ಅಲ್ಲಿ ರಾತ್ರಿ ತಂಗುವ ಕೆಲಸಗಾರರಿದ್ದರು. ಈ ಹತ್ಯೆಯ ಕುರಿತಾಗಿ ಪೊಲೀಸ್‌ FIRನಲ್ಲಿ ದಾಖಲಾದ ಕಾರಣಗಳು ಅಸ್ಪಷ್ಟವಾಗಿದೆ. ಕೃತ್ಯ ನಡೆದ ಸ್ಥಳ ಪುತ್ತೂರು ನಗರ ಠಾಣೆಯಿಂದ ಕೇವಲ ಒಂದೂವರೆ ಕಿಮೀ ದೂರದಲ್ಲಿದೆ.

ಅಕ್ಷಯ್‌ ಕಲ್ಲೇಗ

ಇಷ್ಟು ಕೊಲೆಗಳ ಸಂದರ್ಭ ಹಂತಕರು ಸಾರ್ವಜನಿಕರು ಹಾಗೂ ಪೊಲೀಸರನ್ನು ಲೆಕ್ಕಿಸದೆ ಯಾವುದೇ ಭಯ ಭಿಡೆ ಇಲ್ಲದೇ ಕೃತ್ಯ ಎಸಗಿರುವುದು ಸ್ಪಷ್ಟ. ಕಾನೂನು ಹಾಗೂ ಪೊಲೀಸರ ಬಗ್ಗೆ ಭಯ ರಹಿತ ವಾತಾವರಣವಿದ್ದಾಗವಷ್ಟೆ ಈ ರೀತಿಯ ಕೊಲೆಗಳು ನಡೆಯಲು ಸಾಧ್ಯ . ತಾಲೂಕಿನಲ್ಲಿ ಪೊಲೀಸ್‌ ಗಸ್ತು ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದು, ಪೊಲೀಸ್‌ ಇಂಟೆಲಿಜೆನ್ಸ್‌ ನಿದ್ರೆಗೆ ಜಾರಿರುವುದು, ನಗರ ಪ್ರದೇಶದಲ್ಲೂ, ಅದು ಕೂಡ ಅಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಇಲ್ಲದಿರುವುದು ಕಾನೂನು ಭಂಜಕರಿಗೆ ವರದಾನವಾಗಿ ಪರಿಣಮಿಸಿದೆ.

5 ಕೊಲೆಗಳಲ್ಲೂ ಪೊಲೀಸ್‌ ವೈಫಲ್ಯವಿದೆ

ಕಾರ್ತಿಕ್‌ ಮೇರ್ಲ ಕೊಲೆಗೆ ಕೆಲ ತಿಂಗಳ ಹಿಂದೆ ಎರಡು ತಂಡದ ಮಧ್ಯೆ ಗಲಾಟೆ ನಡೆದು ಪೊಲೀಸ್‌ ಠಾಣೆ ಮೆಟ್ಟೀಲೆರಿತ್ತು. ಈ ವೇಳೆ ಪೊಲೀಸರು ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿ ಎರಡು ತಂಡಕ್ಕೂ ಸೂಕ್ತ ಎಚ್ಚರಿಕೆ ನೀಡಿ ಅವರ ಮೇಲೆ ಒಂದು ಕಣ್ಣಿಟ್ಟಿದ್ದರೇ ಮೇರ್ಲ ಹತ್ಯೆ ತಡೆಯಬಹುದಿತ್ತು. ಇನ್ನು ಈ ಪ್ರಕರಣದ ಆರೋಪಿಗಳು ಪೊಲೀಸರ ಗಳಸ್ಯ ಕಂಠಸ್ಯರಾಗಿದ್ದರು.

ಇನ್ನು ಚರಣ್‌ ಮೇಲೆ ಕೊಲೆಯ ತೂಗುಕತ್ತಿ ಬೀಸುತಿತ್ತು ಮತ್ತು ಆಪಾಯ ಯಾರಿಂದ ಇತ್ತು ಎನ್ನುವುದು ಪೊಲೀಸರಿಗೆ ಹಾಗೂ ಸಾರ್ವಜನಿಕರಿಗೆ ಸ್ಪಟಿಕದಷ್ಟು ನಿಚ್ಚಳವಾಗಿತ್ತು. ಕೊಲೆಗೆ ಕೆಲ ತಿಂಗಳುಗಳ ಹಿಂದೆ ಪುತ್ತೂರಿನ ಬಿರುಮಲೆ ಗುಡ್ಡೆಯಲ್ಲಿ ನಡೆದ ವಿದ್ಯಮಾನ ಇದಕ್ಕೆ ಸ್ಪಷ್ಟ ಉದಾಹರಣೆ. ಇಷ್ಟಾದರೂ ಪೊಲೀಸರು ನಿಗಾ ವಹಿಸದ್ದು ವಿಪರ್ಯಾಸ

ಪ್ರವೀಣ್‌ ನೆಟ್ಟಾರ್‌ ಹತ್ಯೆ ಬೆಳ್ಳಾರೆಯ ಮಸೂದು ಹತ್ಯೆಯ 20 ದಿನಗಳ ಬಳಿಕ ಪ್ರತಿಕಾರದ ರೂಪದಲ್ಲಿ ನಡೆದಿತ್ತು. ಮಸೂದ್‌ ಹತ್ಯೆಯ ಬಳಿಕ ಸಂಘಟನೆಯೊಂದು ನಿಗಿ ನಿಗಿ ಕೆಂಡದಂತಾಗಿತ್ತು ಹಾಗು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯುವಕನೊಬ್ಬನ ಹತ್ಯೆಗೆ ಹಾತೊರೆಯುತ್ತಿದ್ದದ್ದು ಎಲ್ಲರಿಗೂ ತಿಳಿದಿತ್ತು. ಹಾಗಾಗಿಯೂ ಬೆಳ್ಳಾರೆಯಲ್ಲೆ ಹತ್ಯೆ ನಡೆಯಲು ಎಡೆ ಮಾಡಿಕೊಟ್ಟದ್ದು ಪೊಲೀಸ್‌ ವೈಫಲ್ಯವಲ್ಲದೇ ಮತ್ತೇನು ?

ವಿಟ್ಲದ ಯುವತಿ ಗೌರಿಯ ತಾಯಿ ಆಕೆಯ ಕೊಲೆಗಾರ ಪದ್ಮರಾಜ್‌ ಮಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಹಲವು ಬಾರಿ ವಿಟ್ಲ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಪೊಲೀಸರು ಎಚ್ಚೆತ್ತುಕೊಂಡು ಪದ್ಮರಾಜ್‌ ಗೆ ಬಿಸಿ ಮುಟ್ಟಿಸುತ್ತಿದ್ದರೇ ಗೌರಿ ಬದುಕಿ ಉಳಿಯುತ್ತಿದ್ದಳು.

ಅಕ್ಷಯ್‌ ಕೊಲೆಯೂ ತಪ್ಪಿಸಬಹುದಿತ್ತು…!

ಕೆಲ ತಿಂಗಳುಗಳ ಹಿಂದೆ ಕಾಂಗ್ರೆಸ್‌ ಮುಖಂಡ ಪ್ರದೀಪ್‌ ರೈ ಪಾಂಬಾರು ಎಂಬವರು ಕಲ್ಲೇಗದ ಯುವಕರು ವಾಹನ ಅಪಘಾತದ ವಿಚಾರದ ಗಲಾಟೆ ಎಬ್ಬಿಸಿ ಪರ್ಸು ಹಾಗೂ ಚಿನ್ನದ ಸರವನ್ನು ಎಳೆದುಕೊಂಡಿದ್ದರು ಎಂದು ದೂರು ನೀಡಿದ್ದರು. ಇದೀಗ ಕಲ್ಲೇಗದ ಯುವಕನ ಹತ್ಯೆ ವಾಹನ ಅಪಘಾತ ಹಾಗೂ ಹಣದ ವಿಚಾರವಾಗಿ ನಡೆದಿತ್ತು. ಈ ಎರಡು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೇ ಒಬ್ಬ ವ್ಯಕ್ತಿ ಈ ಎರಡು ಪ್ರಕರಣದಲ್ಲಿ ʼಕಾಮನ್‌ʼ ಆಗಿದ್ದ. ಆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಂತೆ ʼಓರ್ವ ಪೊಲೀಸ್‌ʼ ರಕ್ಷಣೆಗೆ ನಿಂತಿದ್ದರು. ಈ ಘಟನೆಯ ಬಳಿಕ ಆ ಪೊಲೀಸ್‌ ವರ್ಗಾವಣೆಗೊಂಡಿದ್ದರು.

ಇನ್ನೂ ಆ ಪ್ರದೇಶದಲ್ಲಿ ಆಗಾಗ ಸಣ್ಣ ಅಪಘಾತಗಳು ನಡೆಯುವುದು ಬಳಿಕ ಹಣಕಾಸಿನ ವಿಚಾರವಾಗಿ ಹಲವು ಬಾರಿ ʼಕಿರಿಕ್‌ʼ ಆಗಿ ರಾಜಿಯಲ್ಲಿ ಮುಕ್ತಾಯವಾದ ಘಟನೆಗಳು ನಡೆದಿರುವುದು ಈಗ ಒಂದೊಂದಾಗಿ ಹೊರ ಬರುತ್ತಿದೆ. ಪ್ರತಿ ಬಾರಿಯೂ ಈ ವಿಷಯ ಪೊಲೀಸರ ಗಮನಕ್ಕೆ ಬರುತಿತ್ತು ಹಾಗೂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಅಥಾವ ಈ ರೀತಿಯ ಪ್ರಕರಣದ ಪೋಷಕರಾಗಿದ್ದರು ಎಂಬ ಮಾತುಗಳು ನಗರದ ಸಂದಿ ಸಂದಿಯಲ್ಲಿ ಕೇಳಿ ಬರುತ್ತಿದೆ.

ಮಾದಕ ಪದಾರ್ಥ ಮಾರಾಟದ ಅಡ್ಡೆ

ಇನ್ನೂ ಹತ್ಯೆ ನಡೆದ ಕಾಲೇಜು ರಸ್ತೆಯಲ್ಲಿ ರಾತ್ರಿ ಓಡಾಡಲು ಜನರು ಹೆದರುವ ಪರಿಸ್ಥಿತಿಯಿದೆ. ಅಲ್ಲಿ ಕೆಲ ಅಯಕಟ್ಟಿನ ಸ್ಥಳಗಳಲ್ಲಿ ಮಾದಕ ಪದಾರ್ಥ ಮಾರಾಟ ಮಾಡಲಾಗುತ್ತಿದೆ. ಇದನ್ನು ಅಲ್ಲೇ ಸೇವಿಸಿ ನಶೆಯ ಮತ್ತಿನಲ್ಲಿ ಹೋಗಿ ಬರುವವರಿಗೆ ಕಿರಿಕ್‌ ಮಾಡುತ್ತಾರೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಆದರೂ ಸ್ಥಳೀಯ ಪೊಲೀಸರು ಈ ಕುರಿತು ನಿಗಾ ವಹಿಸದ್ದು ಯಾಕೇ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ ವೇಳೆ ಒಂದು ಪೊಲೀಸ್‌ ಇರಲಿಲ್ಲ ಎನ್ನುವುದು ಆಘಾತಕಾರಿ ವಿಷಯ. ಇನ್ನೂ ಕೊಲೆ ನಡೆದ ಸ್ಥಳದಲ್ಲಿ ಕೆಲ ವರ್ಷಗಳ ಹಿಂದಿನವರೆಗೂ ಸಿಸಿಟಿವಿ ಕಾರ್ಚರಿಸುತಿತ್ತು. ಆದರೇ ಅಕ್ರಮ ದಂಧೆಗಳಿಗೆ ಇದು ಅಡ್ಡಿಯಾಗದಂತೆ ಅದು ಕೆಲಸ ಮಾಡದಂತೆ ನೋಡಿಕೊಳ್ಳಲಾಗಿತ್ತು ಎನ್ನುತ್ತಾರೆ ಸ್ಥಳೀಯರು.

Ad Widget
Click to comment

Leave a Reply

ಪುತ್ತೂರು

ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್‌ಮ್ಯಾನ್ ಮೃತ್ಯು

Published

on



Ad Widget

Ad Widget

Ad Widget

Ad Widget

ಪುತ್ತೂರು: ಕೆದಿಲ ಶಾಲೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಪವರ್‌ಮ್ಯಾನ್‌ವೊಬ್ಬರು ಮೃತಪಟ್ಟ ಘಟನೆ ಅ.3ರಂದು ನಡೆದಿದೆ.

Ad Widget

Ad Widget

Ad Widget

Ad Widget

ಮೃತರನ್ನು ಕೆಮ್ಮಾಯಿ ನಿವಾಸಿ ದಿ. ಗುಡ್ಡಪ್ಪ ಗೌಡರವರ ಪುತ್ರ ರವಿ ಗೌಡ ಎಂದು ಗುರುತಿಸಲಾಗಿದೆ. ಇವರು ಮೆಸ್ಕಾಂ ಬಂಟ್ವಾಳ ತಾಲೂಕಿನ ಮಾಣಿ ಸೆಕ್ಷನ್ ನಲ್ಲಿ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮೂಲಗಳ ಪ್ರಕಾರ, ಎಚ್‌ಟಿ (ಹೈಟೆನ್ಶನ್) ವಿದ್ಯುತ್‌ ಲೈನ್‌ನ ಜಿಒಎಸ್‌ (ಗ್ಯಾಂಗ್‌ ಆಪರೇಟಿಂಗ್‌ ಸ್ವಿಚ್‌) ತೆರೆಯುವ ಸಂದರ್ಭದಲ್ಲಿ ಅರ್ಥ್‌ ಆಗಿ ವಿದ್ಯುತ್‌ ಪ್ರವಹಿಸಿ ರವಿ ಗೌಡ ಅವರಿಗೆ ವಿದ್ಯುತ್‌ ಸ್ಪರ್ಶಿಸಿದೆ ಎನ್ನಲಾಗಿದೆ.

Ad Widget

Ad Widget <> Ad Widget

ಕೆದಿಲ ಪಾಟ್ರಕೋಡಿ, ಮಿತ್ತೂರು ಹಾಗೂ ಗಡಿಯಾರ ಭಾಗಗಳಲ್ಲಿ ಪವರ್‌ಮ್ಯಾನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಗೌಡ ಅವರು, ತಮ್ಮ ಸೇವಾ ಮನೋಭಾವದಿಂದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.



Ad Widget
Ad Widget
Continue Reading

ಅಪರಾಧ

Mangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ

Published

on



Ad Widget

Ad Widget

Ad Widget

Ad Widget

ಮಂಗಳೂರು ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು

Ad Widget

Ad Widget

Ad Widget

Ad Widget

ಮಂಗಳೂರು: ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು

Ad Widget

Ad Widget <> Ad Widget

ಸೆ.28ರಂದು ಅಳಕೆ ಕಂಬ್ಲ ಕ್ರಾಸ್ ರಸ್ತೆಯ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್‌ನ ಮನೆಯೊಂದರ ನಿವಾಸಿಗಳು ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಮಾರುಕಟ್ಟೆಗೆ ತೆರಳಿದ್ದರು. ಸಂಜೆ 5.10ರ ಸುಮಾರಿಗೆ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿಯನ್ನು ಮುರಿದು ಕಳ್ಳರು ಒಳನುಗ್ಗಿರುವುದು ಕಂಡುಬಂದಿದೆ.



Ad Widget

ಕಳ್ಳರು ಮನೆಯಲ್ಲಿದ್ದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಾಚ್ ಹಾಗೂ ಟ್ರಾಲಿ ಬ್ಯಾಗ್ ಸೇರಿದಂತೆ ಹಲವು ಸೊತ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Ad Widget

Ad Widget

ಇದೇ ವೇಳೆ ಸೆ.27ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಕ್ಕಪಟ್ಣ ರಸ್ತೆಯ ಮನೆಯೊಂದರಲ್ಲೂ ಕಳ್ಳತನ ನಡೆದಿತ್ತು. ಮನೆಯ ಲಾಕರ್‌ನ್ನು ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳು ಯಾವುದೇ ಬೆಲೆಬಾಳುವ ವಸ್ತು ಸಿಗದ ಹಿನ್ನೆಲೆಯಲ್ಲಿ ಚೆಕ್ ಪುಸ್ತಕಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣವೂ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಎರಡೂ ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಆರೋಪಿಗಳು ಮನೆಕಳ್ಳತನ ನಡೆಸಿದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.

ತಕ್ಷಣ ಗುಜರಾತ್‌ನ ವಡೋದರಾ ಪೊಲೀಸರ ಸಹಾಯ ಪಡೆದುಕೊಂಡ ಮಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾಗಿದ್ದ 24 ಗಂಟೆಗಳೊಳಗಾಗಿ ಸೆ.29ರಂದು ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ.

ಬಂಧಿತ ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆತನ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಕೂಡ ಬಾಕಿ ಇದ್ದು, ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.

Ad Widget
Continue Reading

ಶಿಕ್ಷಣ

Narendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Published

on



Ad Widget

Ad Widget

Ad Widget

Ad Widget

ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಇವರು ಪುತ್ತೂರಿನ ನಿವಾಸಿಗಳಾದ ಪ್ರದೀಪ್ ಜೈನ್ ಮತ್ತು ಪ್ರೇಕ್ಷ ದಂಪತಿಗಳ ಪುತ್ರಿ.

Ad Widget

Ad Widget <> Ad Widget

ಹೈದರಾಬಾದ್ ನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ಕ್ಷೇತ್ರಮಟ್ಟದ ಕ್ರೀಡಾಕೂಟದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಲಿಖಿತ್ ಎನ್. ಇವರು 1500ಮೀ., 3000ಮೀ ರೇಸ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಇವರು ಪುಣಚ ನಿವಾಸಿಗಳಾದ ಮೋಹನ ನಾಯ್ಕ್ ಎನ್. ಮತ್ತು ಭವ್ಯ ದಂಪತಿಗಳ ಪುತ್ರ.



Ad Widget

ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ, ಬಳ್ಳಾರಿಯಲ್ಲಿ ನಡೆದ ಪ್ರಾಂತೀಯ ಮಟ್ಟದ ಗಣಿತ ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವದ ಸ್ಪರ್ಧೆಗಳಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಕುಶಿತ್ ಆರ್. ಗೌಡ ಇವರು ಫಿಸಿಕ್ಸ್ ಎಕ್ಸ್ ಪರಿಮೆಂಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪುತ್ತೂರಿನ ನಿವಾಸಿಗಳಾದ ರಾಜೇಶ್ ಮತ್ತು ನಳಿನಿ ದಂಪತಿಗಳ ಪುತ್ರ.

Ad Widget

Ad Widget

ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಈ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading