Uncategorized
Kerala Horror : ಜ್ಯೂಸ್ ತೋರಿಸಿ 5 ರ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ! ಮೃತದೇಹವನ್ನು ಗೋಣಿ ಚೀಲದಲ್ಲಿ ಕಟ್ಟಿ ತ್ಯಾಜ ರಾಶಿಯಲ್ಲಿ ಎಸೆದ ಕ್ರೂರಿ ಹಂತಕ ಬಳಿಕ ಕಂಠಪೂರ್ತಿ ಕುಡಿದು ಮಲಗಿದ್ದ ..! ಕೇರಳವನ್ನು ಬೆಚ್ಚಿ ಬೀಳಿಸಿದ ಬೀಭತ್ಸ ಘಟನೆ
ಅಲುವಾ(ಕೇರಳ): ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಕೊಲೆಗೈದ ಬೀಭತ್ಸ ಘಟನೆ ಆಲುವಾದಲ್ಲಿ ನಡೆದಿದೆ. ಈ ದಾರುಣ ಕೃತ್ಯಕ್ಕೆ ಇಡೀ ಕೇರಳವೇ ಬೆಚ್ಚಿ ಬಿದ್ದಿದೆ. ಬಾಲಕಿಯನ್ನು ಕೊಲೆಗೈದ ಹೊರ ರಾಜ್ಯ ಕಾರ್ಮಿಕ ಅಸ್ಸಾಂ ನಿವಾಸಿ ಆಸ್ಫಾಕ್ ಆಲಂನನ್ನು ಪೊಲೀಸರು ಬಂಧಿಸಿದ್ದಾರೆ.
ಮುಕ್ಕತ್ತ್ ಪ್ಲಾಜಾದಲ್ಲಿ ಬಾಡಿಗೆ ಕಟ್ಟಡದಲ್ಲಿ ವಾಸವಾಗಿರುವ ಹೊರರಾಜ್ಯ ಕಾರ್ಮಿಕ ಬಿಹಾರ ಬಿಶಾಂಪರ್ ಪುರ್ ನಿವಾಸಿ ರಾಮಧರ್ ತಿವಾರಿ ಎಂಬವರ ಪುತ್ರಿ ಐದು ವರ್ಷದ ಬಾಲಕಿ ಚಾಂದಿನಿಯನ್ನು ಕೊಲೆಗೈಯ್ಯಲಾಗಿದೆ. ಬಾಲಕಿ ಶುಕ್ರವಾರ ಸಂಜೆಯ ಬಳಿಕ ನಾಪತ್ತೆಯಾಗಿದ್ದಳು. ರಾತ್ರಿ 7 ರ ವೇಳೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ಬಾಲಕಿ ಮಿಸ್ಸಿಂಗ್ ಆಗಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಆಲುವಾ ಮಾರುಕಟ್ಟೆಯ ಕಾರ್ಮಿಕರು ಶುಕ್ರವಾರ ಸಂಜೆ 3.30ರ ವೇಳೆ ಮಾರುಕಟ್ಟೆಯಲ್ಲಿ ಮಗುವಿನೊಂದಿಗೆ ವ್ಯಕ್ತಿಯೊಬ್ಬನನ್ನು ನೋಡಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಅಸ್ಫಾಕ್ ಮಗುವನ್ನು ಕರೆದುಕೊಂಡು ಹೋಗುತ್ತಿರುವುದನ್ನು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ : Madras Eye : ವ್ಯಾಪಕವಾಗಿ ಹಬ್ಬುತ್ತಿದೆ ಕೆಂಗಣ್ಣು ಅಥಾವ ‘ಮದ್ರಾಸ್ ಐ’ – ಲಕ್ಷಣಗಳು ಹಾಗು ಪರಿಹಾರೋಪಾಯಗಳು

ರಾತ್ರಿ 9.30ಕ್ಕೆ ತೊಟ್ಟಕ್ಕಾಟ್ ತೀರದಿಂದ ಆರೋಪಿ ಅಸ್ಫಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪಾನಮತ್ತನಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನಿಂದ ಆ ವೇಳೆ ಬಾಲಕಿಯ ಕುರಿತಾಗಿ ಯಾವುದೆ ಮಾಹಿತಿ ಕಲೆ ಹಾಕಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಪೊಲೀಸರು ರಾತ್ರಿ ರೈಲು ನಿಲ್ದಾಣ ಹಾಗೂ ಕಾರ್ಮಿಕ ಶಿಬಿರಗಳಲ್ಲಿ ಶೋಧ ನಡೆಸಿದ್ದು ಮಗು ಪತ್ತೆಯಾಗಿಲ್ಲ.
22 ಗಂಟೆಗಳ ಹುಡುಕಾಟದ ಬಳಿಕ ಬೆಳಗ್ಗೆ 11.30ಕ್ಕೆ ಮಾರುಕಟ್ಟೆ ಕಾರ್ಮಿಕರಿಗೆ ಆಲುವಾ ಮಾರುಕಟ್ಟೆಯ ತ್ಯಾಜ್ಯ ಎಸೆಯುವ ನಿರ್ಜನ ಪ್ರದೇಶದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ಹಾಕಲಾಗಿದ್ದುಅದರಿಂದ ಮಗುವಿನ ಕೈ ಹೊರಗೆ ಚಾಚಿತ್ತು. ಇದನ್ನು ನೋಡಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಪೊಲೀಸರು ಬಾಲಕಿಯ ತಂದೆಯನ್ನು ಸ್ಥಳಕ್ಕೆ ಕರೆತಂದು ಮೃತದೇಹ ಚಾಂದಿನಿಯದ್ದೆಂದು ಖಚಿತಪಡಿಸಿದ್ದಾರೆ.

ಶನಿವಾರ ಬೆಳಗ್ಗೆ ಮದ್ಯದ ನಶೆ ಇಳಿದ ಅಫ್ಸಾಕ್, ಹಣಕ್ಕಾಗಿ ಮಗುವನ್ನು ಬೇರೆಯವರಿಗೆ ಒಪ್ಪಿಸಿರುವುದಾಗಿ ಹೇಳಿಕೆ ನೀಡಿ ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದ .ಜಾಕೀರ್ ಎಂಬಾತನಿಗೆ ಮಗುವನ್ನು ಒಪ್ಪಿಸಿದ್ದಾಗಿ ಅಸ್ಫಾಕ್ ಮೊದಲು ಪೊಲೀಸರಿಗೆ ತಿಳಿಸಿದ್ದರೂ ಕೊನೆಗೂ ತಾನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಧಿವಿಜ್ಞಾನ ತಜ್ಞರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಸುದೀರ್ಘ 3 ಗಂಟೆಗಳ ಕಾಲ ಪಂಚನಾಮೆ ನಡೆಸಿ ಸಂಜೆ 3ಕ್ಕೆ ಮೃತದೇಹವನ್ನು ಕಳಮಶ್ಶೇರಿ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಹಿಸುಕಿ, ಬಾಲಕಿ ಧರಿಸಿದ್ದ ಬನಿಯನ್ ಸುತ್ತಿ ಉಸಿರುಗಟ್ಟಿಸಿ ಕೊಲೆಗೈದಿರುವುದು ದೃಢಪಟ್ಟಿದೆ. ಮಗುವಿನ ಖಾಸಗಿ ಭಾಗ ಸೇರಿದಂತೆ ದೇಹದ ಮೇಲೆ ಸಂಪೂರ್ಣ ಗಾಯಗಳು ಪತ್ತೆಯಾಗಿದೆ. ಫೋರೆನ್ಸಿಕ್ ವರದಿಯ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಆರೋಪ ಹೊರಿಸಿದ್ದಾರೆ . ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಅಸ್ಫಾಕ್ ಆಲಂ 2 ದಿನಗಳ ಹಿಂದೆ ರಾಮಧರ್ ತಿವಾರಿ ವಾಸವಾಗಿದ್ದ ಕಟ್ಟಡದಲ್ಲಿ ವಾಸಕ್ಕೆ ಬಂದಿದ್ದ. ಶುಕ್ರವಾರ ಸಂಜೆ 3 ಗಂಟೆ ವೇಳೆ ಬಾಲಕಿಗೆ ಜ್ಯೂಸ್ ಖರೀದಿಸಿ ನೀಡಿ ಆಕೆಯನ್ನು ಅಪಹರಿಸಿದ್ದಾನೆ. ಬಳಿಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಕೊಲೆಗೈದು ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ತ್ಯಾಜ್ಯ ರಾಶಿಯಲ್ಲಿ ಹಾಕಿ ಅದರ ಮೇಲೆ ದೊಡ್ಡ ಕಲ್ಲುಗಳನ್ನು ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕಿಯ ಮೃತದೇಹ ಪತ್ತೆಯಾದ ಸುದ್ದಿ ಹಬ್ಬುತ್ತಿದ್ದಂತೆ ಮಾರುಕಟ್ಟೆ ಪ್ರದೇಶದಲ್ಲಿ ಜನ ಜಮಾಯಿಸಿದ್ದಾರೆ.ಇದೇ ವೇಳೆ ಪೊಲೀಸರು ಆರೋಪಿಯನ್ನು ಬಾಲಕಿಯನ್ನು ಕೊಲೆಗೈದ ಸ್ಥಳಕ್ಕೆ ಕರೆದೊಯ್ದರೂ ಸ್ಥಳೀಯರ ಪ್ರತಿಭಟನೆಯಿಂದ ವಾಪಸ್ ಕರೆದೊಯ್ದಿದ್ದಾರೆ.
ಇದನ್ನೂ ಓದಿ : Apple IPhone 13 ಸಿಗಲಿದೆ ಕೇವಲ 21,399 ರೂಗಳಿಗೆ; ಹೇಗೆ ? ಎಲ್ಲಿ ? ಇಲ್ಲಿದೆ ವಿವರ
ಮಗುವನ್ನು ತಾನೊಬ್ಬನೆ ಕೊಂದಿರುವುದಾಗಿ ಅಸ್ಫಾಕ್ ಹೇಳಿಕೆ ನೀಡಿದ್ದರೂ ಪೊಲೀಸರು ಇದನ್ನು ಪೂರ್ಣವಾಗಿ ನಂಬಿಲ್ಲ. ಮಾರುಕಟ್ಟೆ ಕಾರ್ಮಿಕರ ಹೇಳಿಕೆ ಪ್ರಕಾರ, ಶುಕ್ರವಾರ ಸಂಜೆ 3ರ ವೇಳೆ ಅಸ್ಫಾಕ್ ಬಾಲಕಿಯೊಂದಿಗೆ ಮಾರುಕಟ್ಟೆಗೆ ಒಬ್ಬಂಟಿಯಾಗಿ ಬಂದಿದ್ದಾನೆ. ಬಾಲಕಿಯ ಬಗ್ಗೆ ಆತನನ್ನು ಪ್ರಶ್ನಿಸಿದಾಗ ತನ್ನ ಮಗಳೆಂದು ಹೇಳಿಕೊಂಡಿದ್ದಾನೆ. ಆ ಪ್ರದೇಶದಲ್ಲಿ ಇನ್ನೂ ಕೆಲವರು ಇದ್ದರು. ಹೊರ ರಾಜ್ಯಗಳ ಕಾರ್ಮಿಕರ ಮದ್ಯ, ಮಾದಕ ದ್ರವ್ಯ ಸೇವಿಸಲು ಸೇರುವ ಜಾಗಕ್ಕೆ ಆತ ಬಾಲಕಿಯನ್ನು ಕರೆತಂದು ಏಕಾಂಗಿಯಾಗಿ ಕೊಲೆ ಮಾಡಿದ್ದು ಯಾಕೆ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಮಗುವಿನ ದೇಹದ ಮೇಲಿರುವ ಗಾಯಗಳನ್ನು ತನಿಖಾ ವರದಿಯಲ್ಲಿ ದಾಖಲಿಸಲಾಗಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಆತನಿಗೆ 14 ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದೆ.
Uncategorized
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.
Uncategorized
Puttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಪುತ್ತೂರು: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಕೃಷ್ಣನಗರದಲ್ಲಿ ಉದಯ ಕುಮಾರ್ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಹಿರೇಬಂಡಾಡಿ ಮೂಲದ ಯತೀಶ್ ಅವರು ಕುಟುಂಬ ಸಮೇತರಾಗಿ ವಾಸವಾಗಿದ್ದಾರೆ. ಸಹೋದರ ತಿಲಕ್ ಅವರ ಮದುವೆ ಕಾರ್ಯಕ್ರಮದ ನಿಮಿತ್ತ ನ.12ರಂದು ರಾತ್ರಿ ಮನೆಗೆ ಬೀಗ ಹಾಕಿ ಕುಟುಂಬದೊಂದಿಗೆ ಹಿರೇಬಂಡಾಡಿ ಗ್ರಾಮದ ಕೆಮ್ಮಾರದಲ್ಲಿರುವ ತಮ್ಮ ಮನೆಗೆ ತೆರಳಿದ್ದರು.
ಮದುವೆ ಕಾರ್ಯಕ್ರಮ ಮುಗಿಸಿ, ನ.16ರಂದು ರಾತ್ರಿ ನಡೆಯಲಿದ್ದ ಔತಣಕೂಟಕ್ಕೆ ತೆರಳುವ ಮೊದಲು ಮಗುವಿನ ಬಟ್ಟೆ ಹಾಗೂ ಇತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಂಜೆ ವೇಳೆ ಬಾಡಿಗೆ ಮನೆಗೆ ಬಂದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಮನೆಯೊಳಗೆ ತೆರಳಿ ಪರಿಶೀಲಿಸಿದಾಗ ಎರಡು ಕಬ್ಬಿಣದ ಕಪಾಟುಗಳ ಬಾಗಿಲುಗಳನ್ನು ಯಾವುದೋ ಸಾಧನದಿಂದ ಮೀಟಿ ತೆರೆಯಲಾಗಿತ್ತು. ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಮೂರು ಜೊತೆ ಚಿನ್ನದ ಬೆಂಡೋಲೆ (12 ಗ್ರಾಂ), ಒಂದು ಮೂಗುತಿ (1 ಗ್ರಾಂ), ಮಗುವಿನ ಎರಡು ಜೊತೆ ಕಿವಿಯೋಲೆಗಳು (ಒಟ್ಟು 5 ಗ್ರಾಂ), ಎರಡು ಮಗುವಿನ ಬಳೆಗಳು (4 ಗ್ರಾಂ), 40 ಸಾವಿರ ರೂ. ಮೌಲ್ಯದ ಡೈಮಂಡ್ ಪೆಂಡೆಂಟ್ ಹಾಗೂ 3 ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದಾರೆ.
ಕಳವಾದ ಚಿನ್ನಾಭರಣಗಳ ಒಟ್ಟು ತೂಕ ಸುಮಾರು 22 ಗ್ರಾಂ ಆಗಿದ್ದು, ನಗದು ಹಣ ಹಾಗೂ ಡೈಮಂಡ್ ಪೆಂಡೆಂಟ್ ಸೇರಿದಂತೆ ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 2.19 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Uncategorized
Soujanya case-Big Breaking: ಸೌಜನ್ಯ ಪ್ರಕರಣ: ಎಸ್‌ಐಟಿ ಕಚೇರಿಯಲ್ಲಿ ಕೊನೆಯದಾಗಿ ನೋಡಿದ್ದ ಐವರು ಸಾಕ್ಷಿಗಳ ಹೇಳಿಕೆ ದಾಖಲು
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಮಂಗಳೂರಿನ ಎಸ್‌ಐಟಿ ಕಚೇರಿಯಲ್ಲಿ ಐವರ ವಿಚಾರಣೆ ನಡೆಸಲು ಮುಂದಾಗಿದೆ. ಸೌಜನ್ಯಾಳನ್ನು ಕೊನೆಯದಾಗಿ ನೋಡಿದ್ದ ಐವರು ಸಾಕ್ಷಿಗಳಾದ ಆಕೆಯ ಮಾವ ವಿಠಲ ಗೌಡ, ಕೃಷ್ಣಪ್ಪ, ಪುರಂದರ ಗೌಡ, ಯಶೋಧಾ ಹಾಗೂ ಯಶೋಧಾ ಅವರ ಪುತ್ರ ಪ್ರತೀಕ್ ಅವರು ಇಂದು ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.
ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಮಂಗಳೂರಿನ ಎಸ್‌ಐಟಿ ಕಚೇರಿಯಲ್ಲಿ ಐವರ ವಿಚಾರಣೆ ನಡೆಸಲು ಮುಂದಾಗಿದೆ.
ಸೌಜನ್ಯಾಳನ್ನು ಕೊನೆಯದಾಗಿ ನೋಡಿದ್ದ ಐವರು ಸಾಕ್ಷಿಗಳಾದ ಆಕೆಯ ಮಾವ ವಿಠಲ ಗೌಡ, ಕೃಷ್ಣಪ್ಪ, ಪುರಂದರ ಗೌಡ, ಯಶೋಧಾ ಹಾಗೂ ಯಶೋಧಾ ಅವರ ಪುತ್ರ ಪ್ರತೀಕ್ ಅವರು ಇಂದು ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.
ಈ ಪೈಕಿ ಸೌಜನ್ಯಾಳ ಮಾವ ವಿಠಲ ಗೌಡ ಹಾಗೂ ಪುರಂದರ ಗೌಡ ಅವರು ವಿಚಾರಣೆಗೆ ಹಾಜರಾಗಿದ್ದು, ಕೃಷ್ಣಪ್ಪ, ಯಶೋಧಾ ಮತ್ತು ಪ್ರತೀಕ್ ಅವರು ಜೀಪಿನಲ್ಲಿ ಆಗಮಿಸಿದ್ದಾರೆ.
ಇಂದು ಐವರ ಹೇಳಿಕೆಗಳನ್ನು ಎಸ್‌ಐಟಿ ತಂಡ ದಾಖಲಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.
-
ಬಿಗ್ ನ್ಯೂಸ್23 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
ಬಿಗ್ ನ್ಯೂಸ್16 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಅಂತರ ರಾಜ್ಯ21 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
ಮಂಗಳೂರು24 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
Uncategorized23 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್24 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ರಾಜಕೀಯ22 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಬಿಗ್ ನ್ಯೂಸ್22 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ















