Connect with us

ಬೆಂಗಳೂರು

Terrorists Arrest | ಬೆಂಗಳೂರು : ವಿಧ್ವಂಸಕ ಕೃತ್ಯ ಎಸಗಲು ತಯಾರಾಗಿದ್ದ ಐವರು ಉಗ್ರರ ಹೊಡೆಮುರಿಕಟ್ಟಿದ ರಾಜ್ಯ ಪೊಲೀಸ್ : ಕೊಲೆಯಿಂದ ಭಯೋತ್ಪಾದನೆಯತ್ತ – ಜೈಲಲ್ಲೇ ತರಬೇತಿ..! ಇದು ಉಗ್ರರ ಹಿಸ್ಟ್ರಿ: ಸಿಸಿಬಿಯನ್ನು ಅಭಿನಂದಿಸಿದ ಸಿಎಂ

Published

on



Ad Widget

Ad Widget

Ad Widget

Ad Widget

ಭಯೋತ್ಪಾದಕರ ದೊಡ್ಡದೊಂದು ಸಂಚನ್ನ ಪೊಲೀಸರು ಬಯಲು ಮಾಡಿದ್ದಾರೆ. ಬೆಂಗಳೂರಿನಲ್ಲಿ ಅಥವಾ ಕರ್ನಾಟಕ ರಾಜ್ಯದ ಬೇರೆ ಬೇರೆ ಕಡೆ ವಿಧ್ವಂಸಕ ನಡೆಸಲು ಭಯೋತ್ಪಾದಕರು ನಡೆಸಿದ್ದ ಸಂಚನ್ನ ಸಿಸಿಬಿ ಪೊಲೀಸರು ಫಿನಿಷ್ ಮಾಡಿದ್ದಾರೆ. ಐವರು ಉಗ್ರರು ತಮ್ಮ ದುಷ್ಕೃತ್ಯಕ್ಕೆ ಸಂಚು ರೂಪಿಸುವ ಹೊತ್ತಲ್ಲೇ ಪೊಲೀಸರು(Terrorists Arrest) ಅವರನ್ನ ಬಂಧನ ಮಾಡಿದ್ದಾರೆ.
ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್​ ಬಂಧಿತ ಶಂಕಿತ ಉಗ್ರರು. ಬೆಂಗಳೂರು ನಗರ ಸಿಸಿಬಿ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.

Ad Widget

Ad Widget

Ad Widget

Ad Widget

ಆದ್ರೆ, ಈ ಪ್ರಕರಣದ ಕಿಂಗ್ ಪಿನ್ ಮಾತ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಮತ್ತೊಂದು ಆಘಾತಕಾರಿ ಸಂಗತಿ ಅಂದರೆ, ಭಯೋತ್ಪಾದಕ ಕೃತ್ಯದ ಮೂಲ ಪರಪ್ಪನ ಅಗ್ರಹಾರ ಜೈಲು!

Ad Widget

Ad Widget

Ad Widget alt="Ad Widget"/>

Ad Widget

ಕೊಲೆಯಿಂದ ಭಯೋತ್ಪಾದನೆವರೆಗೆ..!
ಈ ಎಲ್ಲಾ ಡ್ರಾಮಾ ಶುರುವಾಗಿದ್ದು ಒಂದು ಕೊಲೆಯಿಂದ..! 2017ರಲ್ಲಿ ಬೆಂಗಳೂರಿನ ಆರ್‌. ಟಿ. ನಗರದಲ್ಲಿ ಒಂದು ಕೊಲೆ ನಡೆದಿತ್ತು. ನೂರ್ ಅಹ್ಮದ್ ಎಂಬಾತನನ್ನ ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು ಆತನನ್ನ ಕೊಲೆ ಮಾಡಿದ್ದರು. ಈ ಪ್ರಕರಣದ ಆರೋಪಿಗಳು ಸಾಮಾನ್ಯರೇನಲ್ಲ. ಇವರೆಲ್ಲರೂ ಆರ್‌. ಟಿ. ನಗರದ ರೌಡಿ ಶೀಟರ್‌ಗಳು. ಸಣ್ಣ ಪುಟ್ಟ ಕ್ರಿಮಿನಲ್ ಕೆಲಸಗಳನ್ನ ಮಾಡಿಕೊಂಡಿದ್ದ ಈ ರೌಡಿಗಳು, ಆಗಾಗ ಸಣ್ಣ ಪುಟ್ಟ ಕೆಲಸಗಳನ್ನೂ ಮಾಡ್ತಿದ್ರು. ಡ್ರೈವರ್, ಮೆಕಾನಿಕ್ ಹೀಗೆ ತಾತ್ಕಾಲಿಕವಾಗಿ ಹಲವಾರು ವೃತ್ತಿ ಮಾಡಿಕೊಂಡಿದ್ದ ಈ ಖದೀಮರು, ಸಂಚು ರೂಪಿಸಿ ಒಬ್ಬ ವ್ಯಕ್ತಿಯನ್ನು ಕಿಡ್ನಾಪ್ ಮಾಡಿದ್ದರು. ನೂರ್‌ ಅಹಮದ್ ಎಂಬುವರನ್ನ 2017ರಲ್ಲಿ ಕಿಡ್ನಾಪ್ ಮಾಡಿದ್ದ ಈ ಆರೋಪಿಗಳು, ನಂತರ ಅವರನ್ನ ಕೊಲೆ ಕೂಡಾ ಮಾಡಿ ಬಿಟ್ಟಿದ್ರು. ಅವತ್ತಿನಿಂದಲೇ ಇವರೆಲ್ಲರ ಬಂಧನಕ್ಕೆ ಬೆಂಗಳೂರು ನಗರ ಪೊಲೀಸರು ತನಿಖೆ ನಡೆಸ್ತಿದ್ದರು. ಕೊರೊನಾ ಟೈಮ್‌ನಲ್ಲಿ 2020ರಲ್ಲಿ ಈ ಆರೋಪಿಗಳು ಪೊಲೀಸರ ಕೈಗೆ ಬಿದ್ದರು. ಆಗ ಒಟ್ಟು 21 ಮಂದಿ ಆರೋಪಿಗಳು ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದರು. ಆದರೆ, ಇವರೆಲ್ಲರ ಪೈಕಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದು 6 ಮಂದಿ ಮಾತ್ರ..

Ad Widget

Ad Widget <> Ad Widget

ಪರಪ್ಪನ ಅಗ್ರಹಾರದಲ್ಲೇ ಉಗ್ರ ಕೃತ್ಯಕ್ಕೆ ಟ್ರೈನಿಂಗ್?



Ad Widget

ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದವರು ಜೈಲಿನಿಂದ ಹೊರಗೆ ಬರೋ ಹೊತ್ತಿಗೆ ಉಗ್ರರಾಗಲು ಸಾಧ್ಯವೇ.? ಹೌದು ಎನ್ನುವಂತಿದೆ ಈ ಕೇಸ್..! ಯಾಕಂದ್ರೆ, ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ 21 ಮಂದಿಯ ಪೈಕಿ, 6 ಮಂದಿಗೆ ಇದೇ ಜೈಲ್‌ನಲ್ಲಿ ಇದ್ದ ಉಗ್ರನೊಬ್ಬನ ಜೊತೆ ಸಂಪರ್ಕ ಬೆಳೆದಿತ್ತು. ಆತನ ಹೆಸರು ಟಿ. ನಜೀರ್.. ಮೂಲತಃ ಕೇರಳದವನಾದ ನಜೀರ್, ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದವನು ಅನ್ನೋ ಮಾಹಿತಿ ಇದೆ. 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಈತ. ಬರೋಬ್ಬರಿ 19 ಕೇಸ್‌ಗಳು ನಜೀರ್ ಮೇಲೆ ಇದೆ. ಆರ್‌ಟಿ ನಗರ ಕೊಲೆ ಕೇಸ್‌ನ 6 ಆರೋಪಿಗಳು, ಉಗ್ರ ನಜೀರ್ ಜೊತೆ ಗೆಳೆತನ ಸಾಧಿಸಿದ್ರು. ಉಗ್ರ ನಜೀರ್ ಈ ಎಲ್ಲ ಆರೋಪಿಗಳ ತಲೆಯಲ್ಲಿ ಭಯೋತ್ಪಾದನೆ, ಧರ್ಮಾಂಧತೆ ತುಂಬಿದ ಅನ್ನೋ ಆರೋಪ ಇದೆ. ಭಯೋತ್ಪಾದಕ ಕೃತ್ಯ ಎಸಗೋದಕ್ಕೆ ಜೈಲಿನಲ್ಲೇ ಸಂಚನ್ನೂ ರೂಪಿಸಿದ. ಹೀಗಾಗಿ, ಕೊಲೆ ಕೇಸ್‌ನ ಆರೋಪಿಗಳ ತಲೆಯಲ್ಲಿ ಉಗ್ರವಾದದ ಮೊಳಕೆ ಒಡೆದಿತ್ತು. 18 ತಿಂಗಳ ಕಾಲ ಜೈಲಿನಲ್ಲಿ ಇದ್ದ ಈ ಆರೋಪಿಗಳು ಬೇಲ್ ಪಡೆದು ರಿಲೀಸ್ ಆಗೋ ಹೊತ್ತಿಗೆ ಹೊಸ ಸಂಚೊಂದನ್ನ ತಲೆಯಲ್ಲಿ ತುಂಬಿಕೊಂಡಿದ್ರು ಅನ್ನೋ ಮಾಹಿತಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

Ad Widget

Ad Widget

ಜೈಲಿನಿಂದ ಹೊರಬಿದ್ದ ಕೂಡಲೇ ವಿಧ್ವಂಸಕ ಕೃತ್ಯಕ್ಕೆ ಸಂಚು! ಕೊಲೆ ಕೇಸ್‌ನಲ್ಲಿ 18 ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರು ಆರೋಪಿಗಳು ಜೈಲಿನಿಂದ ಹೊರಬಿದ್ದ ಕೂಡಲೇ ಉಗ್ರ ಕೃತ್ಯ ಎಸಗೋಕೆ ಸಂಚು ರೂಪಿಸಲು ಶುರು ಮಾಡಿದ್ರು. ಈ 6 ಮಂದಿ ಪೈಕಿ ಪ್ರಮುಖ ಆರೋಪಿ ಜುನೈದ್ ಉಗ್ರ ಸಂಚಿನ ಮಾಸ್ಟರ್ ಮೈಂಡ್. ಸದ್ಯ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಈತ ತನ್ನ ಐವರು ಸಹಚರರಿಗೆ ಹಣಕಾಸಿನ ನೆರವು ನೀಡ್ತಿದ್ದ. ಕೊಲೆ ಕೇಸ್‌ನ ಎ1 ಆರೋಪಿ ಆಗಿದ್ದ ಈತ, ವಿದೇಶದಿಂದ ಗೂಗಲ್ ಪೇ ಸೇರಿದಂತೆ ಆನ್‌ಲೈನ್ ಮೂಲಕ ಹಣ ರವಾನೆ ಮಾಡ್ತಿದ್ದ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈತನ ಬಗ್ಗೆ ಕೇಂದ್ರೀಯ ತನಿಖಾ ತಂಡಗಳಿಗೂ ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ಧಾರೆ. ಈತನ ಐವರು ಸಹಚರರು 25 ರಿಂದ 30 ವರ್ಷ ವಯಸ್ಸಿನವರು. ಇವರೆಲ್ಲರೂ ಬೆಂಗಳೂರಿನ 10 ಕಡೆ ಸ್ಫೋಟ ನಡೆಸೋಕೆ ಸಂಚು ರೂಪಿಸಿದ್ದರು ಅನ್ನೋ ವಿಚಾರ ಗೊತ್ತಾಗಿದೆ. ಇವರೆಲ್ಲರನ್ನೂ ಸಿಸಿಬಿ ಪೊಲೀಸರು ಬಂಧಿಸಿದಾಗ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಿಕ್ಕಿದೆ. 7 ಕಂಟ್ರಿ ಮೇಡ್ ಪಿಸ್ತೂಲ್, 40 ಗುಂಡುಗಳು, ಎರಡು ಡ್ರ್ಯಾಗರ್‌ಗಳು, ಮೊಬೈಲ್, ವಾಕಿ ಟಾಕಿ ಸಿಕ್ಕಿದೆ. ಇವರೆಲ್ಲರಿಗೂ ಹಣಕಾಸು ನೆರವು ನೀಡ್ತಿರುವ ಸಂಘಟನೆ ಯಾವುದು ಅನ್ನೋದು ಪೊಲೀಸರಿಗೆ ಇನ್ನೂ ಗೊತ್ತಾಗಿಲ್ಲ. ಈ ಕುರಿತಾಗಿ ಎನ್‌ಐಎ ರೀತಿಯ ಕೇಂದ್ರದ ತನಿಖಾ ತಂಡಗಳ ನೆರವನ್ನ ಪೊಲೀಸರು ಪಡೆಯಬಹುದು.

ಜೈಲುಗಳೇ ಉಗ್ರ ತರಬೇತಿ ಕೇಂದ್ರವಾದರೆ ಹೇಗೆ?
ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳಿಗೆ ಜೈಲಿನಲ್ಲೇ ಉಗ್ರವಾದದ ತರಬೇತಿ ಸಿಗುತ್ತೆ ಅಂದ್ರೆ ಇದು ನಿಜಕ್ಕೂ ಆಘಾತಕಾರಿ ವಿಚಾರ. ಜೈಲಿನಲ್ಲಿದ್ದ ಜುನೈದ್, ಮುದಾಸೀರ್, ಫೈಜಲ್ ರಬ್ಬಾನಿ, ಸುಹೇಲ್, ಉಮರ್ ಸೇರಿದಂತೆ ಹಲವು ಆರೋಪಿಗಳಿಗೆ ಬಂಧಿತ ಉಗ್ರ ಟಿ. ನಜೀರ್ ಉಗ್ರವಾದದ ವಿಷ ಬೀಜವನ್ನ ಜೈಲಿನಲ್ಲೇ ಬಿತ್ತಿದ್ದ ಅನ್ನೋ ಮಾಹಿತಿಯನ್ನ ಖುದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರೇ ನೀಡಿದ್ಧಾರೆ. ಈ ಮೂಲಕ, ಜೈಲುಗಳು ಉಗ್ರರ ತಯಾರಿ ಕೇಂದ್ರವೂ ಆಗ್ತಿದೆಯಾ ಅನ್ನೋ ಅನುಮಾನವೂ ಸೃಷ್ಟಿಯಾಗ್ತಿದೆ.

ಜೈಲುಗಳಲ್ಲಿ ಕಾಲ ಕಾಲಕ್ಕೆ ದಾಳಿ ಹಾಗೂ ಪರಿಶೀಲನೆ ನಡೆಯುತ್ತದೆ ಎಂದು ಪೊಲೀಸರೇನೋ ಹೇಳ್ತಾರೆ. ಆದ್ರೆ, ಜೈಲಿನಲ್ಲಿ ಇರುವ ಕೈದಿಗಳು ಹೊರ ಪ್ರಪಂಚದ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರ್ತಾರೆ, ಅವರಿಗೆ ಬೇಕಾದ ಎಲ್ಲ ಸವಲತ್ತುಗಳೂ ಸಿಗ್ತಿವೆ ಅನ್ನೋ ಆರೋಪ ಹೊಸದೇನಲ್ಲ. ಇವೆಲ್ಲವೂ ಓಪನ್ ಸೀಕ್ರೆಟ್ ರೀತಿ ಆಗಿ ಹೋಗಿದೆ. ಆದ್ರೆ, ಸಾಮಾನ್ಯ ರೌಡಿ ಶೀಟರ್‌ಗಳು, ಕೊಲೆ ಕೇಸ್‌ನಲ್ಲಿ ಸಿಕ್ಕಿ ಬಿದ್ದು ಅಂತಿಮವಾಗಿ ಉಗ್ರವಾಗಿ ಬದಲಾಗಲು ಜೈಲುಗಳೇ ತರಬೇತಿ ಕೇಂದ್ರವಾಗಿ ಬದಲಾದರೆ ಹೇಗೆ ಅನ್ನೋದು ಇಲ್ಲಿ ಅತಿ ಮುಖ್ಯ ಪ್ರಶ್ನೆ.. ಇನ್ನು ಈಗಾಗಲೇ ಬಂಧಿತರಾಗಿರುವ ಐವರು ಶಂಕಿತ ಭಯೋತ್ಪಾದಕರ ವಿರುದ್ಧ ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಗೆ ತರಬೇತಿ ನೀಡಿದ ಉಗ್ರ ಟಿ. ನಜೀರ್ ಇನ್ನೂ ಜೈಲಿನಲ್ಲೇ ಇದ್ದಾನೆ. ಈತನನ್ನ ಪೊಲೀಸರು ಮತ್ತೆ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಬಹುದು.

Ad Widget
Click to comment

Leave a Reply

ಬಿಗ್ ನ್ಯೂಸ್

Nagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಸಂವಾದವೊಂದರಲ್ಲಿ ಮಾತನಾಡಿದ ಚೌದರಿ , ಎಸ್‌ಐಟಿ ತನಿಖಾ ವರದಿಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳ ಸಂಖ್ಯೆ ಹಾಗೂ ಗ್ರಾಮ ಪಂಚಾಯತ್‌ನಲ್ಲಿ ದಾಖಲಾಗಿರುವ ಸಾವುಗಳ ವಿವರಗಳಲ್ಲಿ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಅಳವಾಗಿ ತನಿಖೆ ನಡೆಸಲು ಸರ್ಕಾರ ಅವಕಾಶ ನೀಡಬೇಕು ಎಂದು ಎಸ್‌ಐಟಿ ತಿಳಿಸಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.

Ad Widget

Ad Widget <> Ad Widget

ಬಂಗ್ಲೆ ಗುಡ್ಡೆಯಲ್ಲಿ ಹಲವಾರು ಅಸ್ತಿಪಂಜರಗಳು ಪತ್ತೆಯಾಗಿರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಬಂಗ್ಲೆ ಗುಡ್ಡೆ ಸ್ಮಶಾನವಲ್ಲದಿದ್ದರೂ ಅಲ್ಲಿ ಇಷ್ಟೊಂದು ಎಲುಬುಗಳು ಮತ್ತು ಅಸ್ತಿಪಂಜರಗಳು ಪತ್ತೆಯಾಗಿರುವುದು ಹೇಗೆ ಎಂಬುದರ ಕುರಿತು ಉನ್ನತ ತನಿಖೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.



Ad Widget

ಪತ್ತೆಯಾದ ಕೆಲವು ಅಸ್ತಿಪಂಜರಗಳ ಪರೀಕ್ಷೆಯಲ್ಲಿ ಅವು ಪುರುಷರದ್ದು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಒಂದು ಹುಡುಗಿಯ ಅಸ್ತಿಪಂಜರವನ್ನು ಆಸಿಡ್‌ನಿಂದ ಸುಟ್ಟಿರುವ ಸ್ಥಿತಿಯಲ್ಲಿ ಹೂತುಹಾಕಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಆದರೆ, ಆ ವ್ಯಕ್ತಿ ಆಸಿಡ್‌ನಿಂದ ಮೃತಪಟ್ಟಿಲ್ಲ ಎಂಬುದು ಡಿಎನ್‌ಎ ವರದಿಯಲ್ಲಿ ತಿಳಿದುಬಂದಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.

Ad Widget

Ad Widget

ಈ ರೀತಿಯಾಗಿ ವಿವಿಧ ವರದಿಗಳ ನಡುವೆ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಪೂರಕ ತನಿಖೆ ನಡೆಸಲು ಸಂಪೂರ್ಣ ಅಧಿಕಾರ ನೀಡಬೇಕು ಎಂದು ಸರ್ಕಾರಕ್ಕೆ ಪತ್ರದ ಮೂಲಕ ಶಿಫಾರಸು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಸ್ತುತ ರಚನೆಯಾಗಿರುವ ಎಸ್‌ಐಟಿ ವ್ಯಾಪ್ತಿಗೆ ಈ ಹೊಸ ಮಾಹಿತಿಗಳು ಸ್ವಯಂಚಾಲಿತವಾಗಿ ಸೇರುತ್ತವೆಯೇ ಎಂಬ ಬಗ್ಗೆ ಕಾನೂನುಬದ್ಧ ಸ್ಪಷ್ಟತೆ ಅಗತ್ಯವಿದೆ. ಆದ್ದರಿಂದ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಈ ಎಲ್ಲ ವಿಷಯಗಳನ್ನು ಈಗಾಗಲೇ ರಚಿಸಿರುವ ಎಸ್‌ಐಟಿಗೆ ವಹಿಸಬೇಕು. ಅಗತ್ಯವಿದ್ದರೆ ಅದರ ‘ಟರ್ಮ್ಸ್ ಆಫ್ ರೆಫರೆನ್ಸ್’ (ತನಿಖೆಯ ವ್ಯಾಪ್ತಿ) ವಿಸ್ತರಿಸಬೇಕು ಎಂದು ಮಹಿಳಾ ಆಯೋಗ ಶಿಫಾರಸು ಮಾಡಿದೆ.

ಸರ್ಕಾರದ ಪ್ರತಿಕ್ರಿಯೆಗಾಗಿ ಇನ್ನೂ 15 ದಿನ ಕಾಯಲಾಗುವುದು. ಬಳಿಕ ಎರಡು ಬಾರಿ ಸರ್ಕಾರಕ್ಕೆ ನೆನಪಿನ ಪತ್ರ ಕಳುಹಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ.

Ad Widget
Continue Reading

ಶಿಕ್ಷಣ

Special classes: ಮಳೆ ರಜೆ ಹೊಂದಾಣಿಕೆ: ಅ.3ರಿಂದ ಅ.7ರವರೆಗೆ ದಸರಾ ರಜೆಯಲ್ಲೂ ವಿಶೇಷ ತರಗತಿ

Published

on



Ad Widget

Ad Widget

Ad Widget

Ad Widget

ಮಳೆಯಿಂದಾಗಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ ದಸರಾ ರಜೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಅ.3ರಿಂದ ಅ.7ರವರೆಗೆ ಕೆಲವು ನಿಬಂಧನೆಗಳೊಂದಿಗೆ ವಿಶೇಷ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ಮಳೆಯಿಂದಾಗಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ ದಸರಾ ರಜೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಅ.3ರಿಂದ ಅ.7ರವರೆಗೆ ಕೆಲವು ನಿಬಂಧನೆಗಳೊಂದಿಗೆ ವಿಶೇಷ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ವಿಶೇಷ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಪೋಷಕರಿಂದ ಕಡ್ಡಾಯವಾಗಿ ಲಿಖಿತ ಒಪ್ಪಿಗೆ ಪತ್ರ ಪಡೆಯಬೇಕು ಎಂದು ಇಲಾಖೆ ಸೂಚಿಸಿದೆ.

Ad Widget

Ad Widget <> Ad Widget

ಅಲ್ಲದೆ, ವಿಶೇಷ ತರಗತಿಗಳನ್ನು ನಡೆಸುವ ಕುರಿತು ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ನಡವಳಿ ದಾಖಲಿಸಬೇಕು. ತರಗತಿಗಳನ್ನು ನಡೆಸುತ್ತಿರುವ ಮಾಹಿತಿಯನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ನೀಡುವಂತೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.



Ad Widget

ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇಲಾಖೆ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.

Continue Reading

ಬಿಗ್ ನ್ಯೂಸ್

KRS-ಕೆಆರ್‌ಎಸ್‌ಗೆ ಎತ್ತಿನಹೊಳೆ ನೀರು..! ನೀರಿನ ಮಟ್ಟ ಹೆಚ್ಚಿಸಲು ಹೊಸ ಮಾರ್ಗ

Published

on



Ad Widget

Ad Widget

Ad Widget

Ad Widget

ಮಳೆ ಕೊರತೆ ಹಾಗೂ ಕೆಆರ್‌ಎಸ್‌ ಅಣೆಕಟ್ಟಿನ ನೀರಿನ ಮಟ್ಟ ಕಾಯ್ದುಕೊಳ್ಳುವ ಅಗತ್ಯದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯ ನೀರನ್ನು ಹೇಮಾವತಿ ನದಿಗೆ ಹರಿಸಿ, ಅಲ್ಲಿಂದ ಗೊರೂರು ಅಣೆಕಟ್ಟಿನ ಮೂಲಕ ಕನ್ನಂಬಾಡಿ (ಕೆಆರ್‌ಎಸ್‌) ಅಣೆಕಟ್ಟಿಗೆ ಹರಿಸಲಾಗುತ್ತಿದೆ.

Ad Widget

Ad Widget

Ad Widget

Ad Widget

ಸಕಲೇಶಪುರ: ಮಳೆ ಕೊರತೆ ಹಾಗೂ ಕೆಆರ್‌ಎಸ್‌ ಅಣೆಕಟ್ಟಿನ ನೀರಿನ ಮಟ್ಟ ಕಾಯ್ದುಕೊಳ್ಳುವ ಅಗತ್ಯದ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆಯ ನೀರನ್ನು ಹೇಮಾವತಿ ನದಿಗೆ ಹರಿಸಿ, ಅಲ್ಲಿಂದ ಗೊರೂರು ಅಣೆಕಟ್ಟಿನ ಮೂಲಕ ಕನ್ನಂಬಾಡಿ (ಕೆಆರ್‌ಎಸ್‌) ಅಣೆಕಟ್ಟಿಗೆ ಹರಿಸಲಾಗುತ್ತಿದೆ.

Ad Widget

Ad Widget

Ad Widget alt="Ad Widget"/>

Ad Widget

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ನಾಗರ ಗ್ರಾಮದ ವಿತರಣಾ ಘಟಕದಿಂದ ಕಳೆದ ಒಂದು ವಾರದಿಂದ ಎತ್ತಿನಹೊಳೆ ನೀರನ್ನು ಹೇಮಾವತಿ ನದಿಗೆ ಹರಿಸಲಾಗುತ್ತಿದೆ. ಅಲ್ಲಿಂದ ಗೊರೂರು ಜಲಾಶಯದ ಮೂಲಕ ಕಾವೇರಿ ನದಿಗೆ ಸೇರಿ ಕೆಆರ್‌ಎಸ್‌ ಅಣೆಕಟ್ಟಿನತ್ತ ನೀರು ಸಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ad Widget

Ad Widget <> Ad Widget

ಪ್ರಸಕ್ತ ವರ್ಷ ಮಳೆ ಪ್ರಮಾಣ ಕಡಿಮೆಯಾಗಿದ್ದು, ಕಾವೇರಿ ನೀರಾವರಿ ನಿಯಂತ್ರಣ ಪ್ರಾಧಿಕಾರದ ನಿರ್ದೇಶನದಂತೆ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಎತ್ತಿನಹೊಳೆ ನೀರನ್ನು ಪರ್ಯಾಯವಾಗಿ ಬಳಸಲಾಗುತ್ತಿದೆ ಎನ್ನಲಾಗಿದೆ.



Ad Widget

ಎತ್ತಿನಹೊಳೆ ಯೋಜನೆಯಡಿ ಮೇ 15ರಿಂದ ಅಕ್ಟೋಬರ್‌ ಅಂತ್ಯದವರೆಗೆ ಎಂಟು ಚೆಕ್‌ಡ್ಯಾಮ್‌ಗಳಿಂದ ನೀರನ್ನು ಮೇಲೆತ್ತಿ ಬೇಲೂರು-ಅರಸೀಕೆರೆ ಮಾರ್ಗವಾಗಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬರಪೀಡಿತ ಏಳು ಜಿಲ್ಲೆಗಳಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ. ಆದರೆ ಅರಸೀಕೆರೆ ಹಾಗೂ ತುಮಕೂರು ಭಾಗಗಳಲ್ಲಿ ಯೋಜನೆಯ ಕಾಮಗಾರಿಗಳು ಇನ್ನೂ ಸಂಪೂರ್ಣಗೊಂಡಿಲ್ಲ.

Ad Widget

Ad Widget

ಯೋಜನಾ ಪ್ರದೇಶದ 32ನೇ ಕಿ.ಮೀ. ವ್ಯಾಪ್ತಿಯ ಬೆಟ್ಟದಲೂರು ಸಮೀಪ ಕಾಗೇಹಳ್ಳಕ್ಕೆ ನೀರು ಹರಿಸಿ, ಮಾರಿಕಣಿವೆ ಮೂಲಕ ಎತ್ತಿನಹೊಳೆ ನೀರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರಕ್ಕೆ ತಲುಪಿಸುವ ವ್ಯವಸ್ಥೆ ಇದೆ. ಈ ಮಾರ್ಗದಲ್ಲಿರುವ ಬಹುತೇಕ ಕೆರೆಕಟ್ಟೆಗಳು ಈಗಾಗಲೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಹೇಮಾವತಿ ನದಿಗೆ ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

2024ರಲ್ಲಿ ಎತ್ತಿನಹೊಳೆ ಯೋಜನೆ ಉದ್ಘಾಟನೆಯಾಗಿದ್ದು, ಆ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಮೇಲೆತ್ತಲು ಸಾಧ್ಯವಾಗಿರಲಿಲ್ಲ. 2025ರಲ್ಲಿ ಸುಮಾರು 4.5 ಟಿಎಂಸಿ ನೀರನ್ನು ಮೇಲೆತ್ತಲಾಗಿತ್ತು. ಪ್ರಸಕ್ತ ವರ್ಷದ ಸೆಪ್ಟೆಂಬರ್‌ ಅಂತ್ಯದವರೆಗೆ 1.57 ಟಿಎಂಸಿ ನೀರನ್ನು ಮಾತ್ರ ಮೇಲೆತ್ತಲಾಗಿದೆ ಎಂದು ತಿಳಿದುಬಂದಿದೆ.

ಇದರಲ್ಲಿ ಸುಮಾರು 57 ಕ್ಯುಸೆಕ್‌ ನೀರನ್ನು ಹೇಮಾವತಿ ನದಿಗೆ ಹರಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆಯಡಿ ಮೇಲೆತ್ತಿದ ಸಂಪೂರ್ಣ ನೀರನ್ನು ಕಾಗೇಹಳ್ಳಕ್ಕೆ ಹರಿಸಿದರೆ ರೈತರ ಜಮೀನುಗಳು ಜಲಾವೃತವಾಗುವ ಸಾಧ್ಯತೆ ಇರುವುದರಿಂದ, ಸದ್ಯ ಅಲ್ಪ ಪ್ರಮಾಣದ ನೀರನ್ನು ಹೇಮಾವತಿ ನದಿಗೆ ಹರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading