Connect with us

ರಾಷ್ಟ್ರೀಯ

Joshimath | ದೇವಭೂಮಿ ಜೋಶಿಮಠದಲ್ಲಿ ದೇವಸ್ಥಾನಗಳ ಸಹಿತ ಕುಸಿಯುತ್ತಿರುವ ಮನೆಗಳು – ಬಾಯಿ ಬಿಟ್ಟ ಭೂಮಿ..! : ಕುಟುಂಬಗಳ ಸ್ಥಳಾಂತರ – ದುರಂತವನ್ನು ಆಹ್ವಾನಿಸುತ್ತಿದೆಯೇ ಪ್ರಕೃತಿ ವಿರೋಧಿ ಪ್ರಾಜೆಕ್ಟ್ ಗಳು

Published

on



Ad Widget

Ad Widget

Ad Widget

Ad Widget

ಹೊಸದಿಲ್ಲಿ: ದೇವ ಭೂಮಿ ಹಿಮಾಚಲದ ತಪ್ಪಲಿನ ಉತ್ತರಖಾಂಡದ ಜೋಶಿಮಠದಲ್ಲಿ(Joshimath) ದೇವಸ್ಥಾನ ಹಾಗೂ  ಹಲವಾರು ಮನೆಗಳ ಕುಸಿತಗೊಂಡಿದೆ. ಸುಮಾರು 600 ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಅವರು ಆದೇಶಿಸಿದ್ದಾರೆ.

Ad Widget

Ad Widget

Ad Widget

Ad Widget

“ಕುಸಿಯುತ್ತಿರುವ ಪಟ್ಟಣ” ಉತ್ತರಾಖಂಡದ ಬೆಟ್ಟದ ಪಟ್ಟಣಗಳಲ್ಲಿ ಭೂಮಿ ಮುಳುಗಡೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇದಕ್ಕೆ ಹಿಮಾಚಲ ಬೆಟ್ಟದಲ್ಲಿ ಪ್ರಕೃತಿ ವಿರುದ್ಧವಾಗಿ ನಡೆಯುತ್ತಿರುವ ಪವರ್ ಪ್ರೋಜೆಕ್ಟ್ , ಹೆದ್ದಾರಿ ನಿರ್ಮಾಣ , ಸುರಂಗ ನಿರ್ಮಾಣ ಕಾರಣ ಎನ್ನಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget
TOI ವಿಶೇಷ ಲೇಖನ

ಜೋಶಿಮಠದಲ್ಲಿ ನಿನ್ನೆ ದೇವಾಲಯ ಕುಸಿದುಬಿದ್ದು ಈಗಾಗಲೇ ಭಯದಲ್ಲಿ ಬದುಕುತ್ತಿರುವ ಇಲ್ಲಿನ ನಿವಾಸಿಗಳು, ಕರ್ಣಪ್ರಯಾಗದಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾದ ನಂತರ ಇನ್ನಷ್ಟು ಭಯಭೀತರಾಗಿದ್ದಾರೆ.ಭೂಮಿ ಕುಸಿತದ ಕುರಿತು “ಕ್ಷಿಪ್ರ ಅಧ್ಯಯನ” ನಡೆಸಲು ಕೇಂದ್ರವು ತಜ್ಞರ ಸಮಿತಿಯನ್ನು ರಚಿಸಿದೆ. ಮಾನವ ನೆಲೆನಿಂತಿರುವ ಪ್ರದೇಶಗಳು, ಕಟ್ಟಡಗಳು, ಹೆದ್ದಾರಿಗಳು, ಮೂಲಸೌಕರ್ಯಗಳು ಮತ್ತು ನದಿ ವ್ಯವಸ್ಥೆಗಳ ಮೇಲೆ ಭೂ ಕುಸಿತದ ಪರಿಣಾಮಗಳನ್ನು ಸಮಿತಿಯು ಅಧ್ಯಯನ ನಡೆಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget

Ad Widget <> Ad Widget

“ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಜೋಶಿಮಠದ ಬೀಳುವ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ಸುಮಾರು 600 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.  ತಕ್ಷಣದ ಮತ್ತು ದೀರ್ಘಾವಧಿಯ ಕ್ರಿಯಾ ಯೋಜನೆಗಳನ್ನು ಕೂಡಲೇ ಸಿದ್ಧಪಡಿಸಬೇಕು. ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳು ತಕ್ಷಣವೇ  ಲಭ್ಯವಿರಬೇಕು ಹಾಗೂ  ಜನರನ್ನು ಏರ್‌ಲಿಫ್ಟಿಂಗ್ ಮಾಡಲು ವ್ಯವಸ್ಥೆ ಮಾಡಬೇಕು” ಎಂದು ಸಿಎಂ ಪುಷ್ಕರ್ ಧಾಮಿ  ಹೇಳಿದರು.



Ad Widget

ಈ ವೇಳೆ ಜೋಶಿಮಠದ ಮನೋಹರ್ ಬಾಗ್, ಸಿಂಗ್ಧರ್, ಜೆಪಿ, ಮಾರ್ವಾರಿ, ಸುನೀಲ್ ಗಾಂವ್, ವಿಷ್ಣು ಪ್ರಯಾಗ, ರವಿಗ್ರಾಮ, ಗಾಂಧಿನಗರ ಮೊದಲಾದ ಪೀಡಿತ ಪ್ರದೇಶಗಳಲ್ಲಿ ತಂಡ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿತು. ಅವರು ತಪೋವನಕ್ಕೆ ಭೇಟಿ ನೀಡಿ ಎನ್‌ಟಿಪಿಸಿ ಸುರಂಗದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಸುಮಾರು 50,000 ಜನಸಂಖ್ಯೆಯೊಂದಿಗೆ, ಕರ್ಣಪ್ರಯಾಗವು ಸಮುದ್ರ ಮಟ್ಟದಿಂದ 860 ಮೀಟರ್ ಎತ್ತರದಲ್ಲಿದೆ. ಜೋಶಿಮಠವು 1,890 ಮೀಟರ್ ಎತ್ತರದಲ್ಲಿದೆ. ಕರ್ಣಪ್ರಯಾಗವು ಜೋಶಿಮಠದಿಂದ 80 ಕಿ.ಮೀ ದೂರದಲ್ಲಿದೆ.

Ad Widget

Ad Widget

ಹಿಮಾಲಯದಲ್ಲಿ ನಡೆಯುತ್ತಿರುವ ಪವರ್ ಪ್ರೊಜೆಕ್ಟ್ ಗಳು ಹಾಗೂ ಚಾರ್ ಧಾಮ್ ಪ್ರೊಜೆಕ್ಟ್ ಗಳನ್ನು ವಿರೋಧಿಸಿ ಪ್ರೊಜೆಕ್ಟ್ ಅಧ್ಯಕ್ಷರಾದ, ಪರಿಸರವಾದಿ ರವಿ ಚೋಪ್ರಾ 2022ರಲ್ಲಿ ರಾಜಿನಾಮೆ ಕೊಟ್ಟಿದ್ದರು.

Ad Widget
Click to comment

Leave a Reply

ಕ್ರೀಡೆ

India-West Indies match-ಒಂದೇ ODI ಪಂದ್ಯದಲ್ಲಿ 5 ಶತಕ: ಗುವಾಹಟಿಯಲ್ಲಿ ವಿಶ್ವದಾಖಲೆ ಬರೆದ ಭಾರತ–ವೆಸ್ಟ್ ಇಂಡೀಸ್ ಕದನ

Published

on



Ad Widget

Ad Widget

Ad Widget

Ad Widget

ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.

Ad Widget

Ad Widget

Ad Widget

Ad Widget

ಗುವಾಹಟಿ: ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.

Ad Widget

Ad Widget

Ad Widget alt="Ad Widget"/>

Ad Widget

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಬೆಲ್ (101), ಶಾಯಿ ಹೋಪ್ (104) ಹಾಗೂ ಅಮಿರ್ ಜಾಂಗೋ (114) ಅವರ ಶತಕಗಳ ನೆರವಿನಿಂದ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

Ad Widget

Ad Widget <> Ad Widget

ಇದಕ್ಕೆ ಉತ್ತರವಾಗಿ ಭಾರತ ತಂಡದ ಆರಂಭಿಕರಾದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಶತಕ ಸಿಡಿಸಿದರು. ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 255 ರನ್‌ಗಳ ಭರ್ಜರಿ ಜೊತೆಯಾಟವಾಡಿದರು.



Ad Widget

ಒಂದೇ ಪಂದ್ಯದಲ್ಲಿ 5 ಶತಕ
1971ರಲ್ಲಿ ಮೊದಲ ಏಕದಿನ ಪಂದ್ಯ ನಡೆದ ಬಳಿಕ ಇದುವರೆಗೆ 5,023 ODI ಪಂದ್ಯಗಳು ನಡೆದಿವೆ. ಆದರೆ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.

Ad Widget

Ad Widget

ಇದಕ್ಕೂ ಮೊದಲು ಒಂದೇ ODI ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾಗಿದ್ದೇ ಗರಿಷ್ಠ ಸಾಧನೆಯಾಗಿತ್ತು. 1998ರಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ, 2013ರಲ್ಲಿ ನಾಗ್ಪುರದಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ಹಾಗೂ 2023ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನ–ಶ್ರೀಲಂಕಾ ಪಂದ್ಯಗಳಲ್ಲಿ ತಲಾ ನಾಲ್ಕು ಶತಕಗಳು ದಾಖಲಾಗಿದ್ದವು.

ವಿಶೇಷವೆಂದರೆ, ಈ ಹಿಂದೆ ನಾಲ್ಕು ಶತಕಗಳು ದಾಖಲಾಗಿದ್ದ ಪಂದ್ಯಗಳೂ ಏಷ್ಯಾ ಖಂಡದಲ್ಲೇ ನಡೆದಿದ್ದವು.

ಒಂದೇ ಇನ್ನಿಂಗ್ಸ್‌ನಲ್ಲಿ 3 ಶತಕ
ವೆಸ್ಟ್ ಇಂಡೀಸ್ ತಂಡದ ಪರ ಜಾನ್ ಕ್ಯಾಂಬೆಲ್, ಶಾಯಿ ಹೋಪ್ ಮತ್ತು ಅಮಿರ್ ಜಾಂಗೋ ಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೂ ಕಾರಣರಾದರು. ಏಕದಿನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದು ಆರನೇ ಬಾರಿ.

ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್, 2015ರಲ್ಲಿ ದಕ್ಷಿಣ ಆಫ್ರಿಕಾ–ಭಾರತ, 2022ರಲ್ಲಿ ಇಂಗ್ಲೆಂಡ್–ನೆದರ್ಲ್ಯಾಂಡ್ಸ್, 2023ರಲ್ಲಿ ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಾಗೂ 2025ರಲ್ಲಿ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ್ದರು.

ವೆಸ್ಟ್ ಇಂಡೀಸ್‌ಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದೇ ಮೊದಲ ಅನುಭವವಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡವೊಂದು ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ದಾಖಲಿಸಿರುವುದು ಇದು ಎರಡನೇ ಬಾರಿ.

ಇದರೊಂದಿಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದರೂ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯೂ ವೆಸ್ಟ್ ಇಂಡೀಸ್ ಪಾಲಾಗಿದೆ.

Ad Widget
Continue Reading

ರಾಷ್ಟ್ರೀಯ

ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ಆಹ್ವಾನಿಸಿದ್ದರು..! ನಿವೃತ್ತ ಐಎಎಸ್ ಅಧಿಕಾರಿ ಬಹಿರಂಗ

Published

on



Ad Widget

Ad Widget

Ad Widget

Ad Widget

ತಿರುವನಂತಪುರ: ‘2019ರ ಲೋಕಸಭಾ ಚುನಾವಣೆಯಲ್ಲಿ ಕೇರಳಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ತಮಗೆ ಆಹ್ವಾನ ನೀಡಿದ್ದರು’ ಎಂದು ಕೇರಳಂನ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಜಿಜಿ ಥಾಮ್ರನ್‌ ಬಹಿರಂಗಪಡಿಸಿದ್ದಾರೆ.

Ad Widget

Ad Widget

Ad Widget

Ad Widget

ಬಿಜೆಪಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾ‌ರ್ ನಡುವಿನ ಮೈತ್ರಿಯ ಕುರಿತು ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಥಾಮ್ಸ್‌ನ್ ಅವರ ಹೇಳಿಕೆ ಹೊರಬಿದ್ದಿದೆ.

Ad Widget

Ad Widget

Ad Widget alt="Ad Widget"/>

Ad Widget

‘ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿಯು ಆರಂಭದಲ್ಲಿ ಪಕ್ಷದ ನೇಮಕಾತಿ ಪ್ರಕ್ರಿಯೆಗೆ ಬಳಸಿಕೊಂಡಿತ್ತು. ನಂತರ ಅವರನ್ನು ‘ಅಂಪೈರ್’ ರೀತಿ ಮಾಡಿ, ಭಾರತದ ಚುನಾವಣೆಗಳನ್ನು `ಫಿಕ್ಸಿಂಗ್’ ಮಾಡುವ ಉಸ್ತುವಾರಿ ವಹಿಸಲಾಯಿತು’ ಎಂದು ಲೋಕಸಭೆಯ ವಿರೋಧ ಪಕ್ಷದ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Ad Widget

Ad Widget <> Ad Widget

2016ರಲ್ಲಿ ವಿಮಾನ ಪ್ರಯಾಣವೊಂದರ ಸಂದರ್ಭದಲ್ಲಿ ಜ್ಞಾನೇಶ್ ಕುಮಾ‌ರ್ ಅವರನ್ನು ಭೇಟಿಯಾದೆ. ಕೇರಳಂನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಅವರು ನನಗೆ ಸೂಚಿಸಿದರು. ನಾನು ಅದೇ ವರ್ಷ ನಿವೃತ್ತಿಯಾಗಲಿದ್ದೆ. ಕೇಂದ್ರ ಸಚಿವ ಕೂಡ ಆಗಲು ಅವಕಾಶವಿದೆ ಎಂದು ಅವರು ಹೇಳಿದರು. ಆದರೆ, ನನಗೆ ಆಸಕ್ತಿ ಇಲ್ಲದ ಕಾರಣ, ಆ ಆಹ್ವಾನವನ್ನು ನಿರಾಕರಿಸಿದೆ.



Ad Widget

ಬಿಜೆಪಿ ಮುಖಂಡರ ಬದಲು ಮುಖ್ಯ ಚುನಾವಣಾ ಆಯುಕ್ತರೇ ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದು ಆಶ್ಚರ್ಯ ತಂದಿತ್ತು’ ಎಂದು ಥಾಮ್ರನ್ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Ad Widget

Ad Widget

ಥಾಮ್ಪನ್ ಹಾಗೂ ಜ್ಞಾನೇಶ್ ಕುಮಾರ್ ಇಬ್ಬರೂ ಕೇರಳಂ ಕೇಡರ್‌ನ ಐಎಎಸ್‌ ಅಧಿಕಾರಿಗಳು. ಥಾಮ್ರನ್ 1980ರ ಹಾಗೂ ಕುಮಾರ್ 1988ರ ಬ್ಯಾಚ್‌ನ ಅಧಿಕಾರಿ. ಕೇರಳಂನ ಲೋಕೋಪಯೋಗಿ ಕಾರ್ಯದರ್ಶಿಯಾಗಿಯೂ ಜ್ಞಾನೇಶ್ ಕುಮಾರ್ ಕಾರ್ಯನಿರ್ವಹಿಸಿದ್ದಾರೆ.

Ad Widget
Continue Reading

ರಾಷ್ಟ್ರೀಯ

Crude oil-100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ : ಡೀಸೆಲ್ ಮಾರಾಟದಲ್ಲಿ ಲೀಟರ್‌ಗೆ ₹23 ನಷ್ಟ..!

Published

on



Ad Widget

Ad Widget

Ad Widget

Ad Widget

ಅಮೆರಿಕ ಮತ್ತು ಇರಾನ್ ನಡುವಿನ ತೀವ್ರಗೊಳ್ಳುತ್ತಿರುವ ಯುದ್ಧ ಹಾಗೂ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಉಂಟಾಗಿದೆ. ಇದರ ಪರಿಣಾಮವಾಗಿ ಜುಲೈ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿದೆ.

Ad Widget

Ad Widget

Ad Widget

Ad Widget

ನ್ಯೂಯಾರ್ಕ್‌: ಅಮೆರಿಕ ಮತ್ತು ಇರಾನ್ ನಡುವಿನ ತೀವ್ರಗೊಳ್ಳುತ್ತಿರುವ ಯುದ್ಧ ಹಾಗೂ ಸಂಘರ್ಷದ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಉಂಟಾಗಿದೆ. ಇದರ ಪರಿಣಾಮವಾಗಿ ಜುಲೈ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ಗಡಿ ದಾಟಿದೆ.

Ad Widget

Ad Widget

Ad Widget alt="Ad Widget"/>

Ad Widget

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಪ್ರಮುಖ ಮಾನದಂಡವಾಗಿರುವ ಬ್ರೆಂಟ್ ಕ್ರೂಡ್ ಬೆಲೆ ಶೇ.2ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 100 ಡಾಲರ್ ಮಟ್ಟ ತಲುಪಿದೆ.

Ad Widget

Ad Widget <> Ad Widget

ಕಚ್ಚಾ ತೈಲದ ಬೆಲೆ ಏರಿಕೆಯಿಂದ ಪೆಟ್ರೋಲ್, ಡೀಸೆಲ್ ಹಾಗೂ ಜೆಟ್ ಇಂಧನದ ಬೆಲೆಗಳ ಮೇಲೂ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಪ್ರಯಾಣ ವೆಚ್ಚ ಹೆಚ್ಚುವುದರ ಜೊತೆಗೆ, ತಾಜಾ ಆಹಾರ ಪದಾರ್ಥಗಳು ಸೇರಿದಂತೆ ತ್ವರಿತವಾಗಿ ಸಾಗಿಸಬೇಕಾದ ಸರಕುಗಳ ಬೆಲೆಯೂ ಏರಿಕೆಯಾಗಬಹುದು. ದೂರದ ಪ್ರದೇಶಗಳಿಗೆ ಸಾಗಿಸುವ ಪೀಠೋಪಕರಣ, ವಿದ್ಯುತ್ ಉಪಕರಣ ಸೇರಿದಂತೆ ವಿವಿಧ ವಸ್ತುಗಳ ಬೆಲೆಯ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.



Ad Widget

ಡೀಸೆಲ್ ಮಾರಾಟದಲ್ಲಿ ಲೀಟರ್‌ಗೆ ₹23 ನಷ್ಟ!
ಕಚ್ಚಾ ತೈಲದ ಬೆಲೆ 100 ಡಾಲರ್ ದಾಟಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಲ್ಲಿ ಸುಮಾರು ₹5 ಹಾಗೂ ಡೀಸೆಲ್ ಮಾರಾಟದಲ್ಲಿ ₹23ರಷ್ಟು ನಷ್ಟ ಉಂಟಾಗುತ್ತಿದೆ ಎಂದು ವರದಿಯಾಗಿದೆ.

Ad Widget

Ad Widget

ಭಾರತ ತನ್ನ ಅಗತ್ಯದ ಸುಮಾರು ಶೇ.88ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದರೆ ಅದರ ನೇರ ಪರಿಣಾಮ ಭಾರತದ ಇಂಧನ ಆರ್ಥಿಕತೆ ಹಾಗೂ ಸಾರಿಗೆ ವೆಚ್ಚದ ಮೇಲೂ ಬೀಳುವ ಸಾಧ್ಯತೆ ಇದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading