Connect with us

ಸ್ಥಳೀಯ

ಕಾಣೆಯಾಗಿದ್ದ ಬದಿಯಡ್ಕದ ಹೆಸರಾಂತ ದಂತ ವೈದ್ಯರ ಶವ ರೈಲ್ವೆ ಹಳಿಯ ಮೇಲೆ ಛಿದ್ರ ಛಿದ್ರವಾಗಿ ಪತ್ತೆ – ಮಹಿಳೆಯ ಜತೆ ಅನುಚಿತ ವರ್ತನೆಯ ಆರೋಪ ಹೊರಿಸಿ ಲ್ಯಾಂಡ್‌ ಜಿಹಾದ್‌ : ಹಿಂದೂ ಸಂಘಟನೆ ಕಾರ್ಯಕರ್ತರ ಆರೋಪ

Published

on

Ad Widget

Ad Widget

Ad Widget

Ad Widget

ಕುಂದಾಪುರ: ನ 10 : ಕಾಸರಗೋಡು ಜಿಲ್ಲೆಯ ಬದಿಯಡ್ಕದ ಹೆಸರಾಂತ ದಂತ ವೈದ್ಯರಾದ  ಡಾ| ಕೃಷ್ಣಮೂರ್ತಿ ಸರ್ಪಂಗಳ (57)  ನಾಪತ್ತೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ.  ನ. 8ರಂದು ನಾಪತ್ತೆಯಾಗಿದ್ದ ಅವರ ಮೃತದೇಹ ನ.9 ರಂದು ಬೆಳ್ಳಿಗೆ   ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದೆ.  ನ 10 ರಂದು ಈ ಬಗ್ಗೆ ಮಾಹಿತಿ ಪಡೆದ ವೈದರ ಕುಟುಂಬಸ್ಥರು ಶವದ ಗುರುತು ಪತ್ತೆ ಹಚ್ಚಿದ್ದಾರೆ. ಇದು ಆತ್ಮಹತ್ಯೆಯೇ ? ಕೊಲೆಯೇ ? ಎನ್ನುವ ಬಗ್ಗೆ ಪೊಲೀಸರು ಇನ್ನಷ್ಟೆ ಖಚಿತ ತೀರ್ಮಾನಕ್ಕೆ ಬರಬೇಕಿದೆ.

Ad Widget

Ad Widget

Ad Widget

Ad Widget

ಆದರೇ ಅವರು ನಾಪತ್ತೆಯಾಗುವುದಕ್ಕೂ ತುಸು ಮುಂಚೆ ಕ್ಲಿನಿಕ್‌ ನಲ್ಲಿ  ನಡೆದ ಘಟನೆಯಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ. ಆದರೇ ಅವರ ಮೃತ ದೇಹ ಸಿಕ್ಕ ಸ್ಥಳ ಬೇರೆಯದೆ ಆದ ಅನುಮಾನಗಳನ್ನು ಸೃಷ್ಟಿಸುತ್ತಿದ್ದು ಇಡೀ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿ ಪರಿಣಾಮಿಸಿದೆ. ಮೃತ ದೇಹ ಪತ್ತೆಯಾದ ಸ್ಥಳ ಹಾಗೂ ಬದಿಯಡ್ಕಕ್ಕೆ 180ರಿಂದ 190 ಕಿಮೀಗಳ ಅಂತರವಿದೆ. ಅಲ್ಲದೇ ಈ ಪ್ರಕರಣ ಎರಡು ರಾಜ್ಯಗಳ ಪೊಲೀಸರ ವ್ಯಾಪ್ತಿಗೆ ಬರುವುದರಿಂದ  ತನಿಖೆಗೆ ಒಂದಷ್ಟು ಹಿನ್ನಡೆಯಾಗುವ ಸಾಧ್ಯತೆಯೂ ಇದೆ.

Ad Widget

Ad Widget alt="Ad Widget"/>

Ad Widget

ಐವರ ಬಂಧನ

ಆದರೇ ಈಗಾಗಲೇ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬದಿಯಡ್ಕ ಪೊಲೀಸರು ಒಟ್ಟು ಐವರನ್ನು ಬಂಧಿಸಿದ್ದಾರೆ. ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತು ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತು ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್,  ಕುಂಬ್ಡಾಜೆ ನಿವಾಸಿ ಅಶ್ರಫ್,ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಬಂಧಿತರು

Ad Widget

Ad Widget <> Ad Widget

ನ 8 ರಂದು ಏನಾಯಿತು ?

ನ.8 ರಂದು ಬೆಳಗ್ಗೆ 9 ಗಂಟೆ  ಸುಮಾರಿಗೆ ಡಾ| ಕೃಷ್ಣಮೂರ್ತಿ ಅವರು ಆಸ್ಪತ್ರೆಗೆ ತೆರಳಿ, ಎಂದಿನಂತೆ ಕೆಲಸ ಆರಂಭಿಸಿದ್ದರು.  ಬೆಳಗ್ಗೆ 11 ಗಂಟೆಯ ಸುಮಾರಿಗೆ 32 ರ ಹರೆಯದ ವಿವಾಹಿತ  ಮುಸ್ಲಿಂ ಮಹಿಳೆಯೊಬ್ಬರು ಹಲ್ಲಿನ ಸಮಸ್ಯೆ ಇಟ್ಟುಕೊಂಡು ಕ್ಲಿನಿಕ್ಗೆ  ಆಗಮಿಸಿದ್ದಾಳೆ. ಬಳಿಕ ಕ್ಲಿನಿಕ್‌ ನಿಂದ ಮನೆಗೆ ತೆರಳಿದ ಯುವತಿ ಅಲ್ಲಿ ಕ್ಲಿನಿಕ್‌ ನಲ್ಲಿ ವೈದ್ಯರು  ಅನುಚಿತವಾಗಿ ವರ್ತಿಸಿದ್ದಾರೆಂದು ಮನೆಯವರಲ್ಲಿ ದೂರಿದ್ದಾಳೆ ಎನ್ನಲಾಗಿದೆ.ಈ ಹಿನ್ನಲೆಯಲ್ಲಿ ಆಕೆ ಸಂಬಂಧಿಕರಿಬ್ಬರು ವೈದ್ಯರ ಬಳಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು ಎಂದು ಕ್ಲಿನಿಕ್ ನ ಮೂಲಗಳಿಂದ ತಿಳಿದು ಬಂದಿದ್ದು ಆದರೇ ಅದಕ್ಕೆ ವೈದ್ಯರು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಜೀವ ಬೆದರಿಕೆ

ಇದರಿಂದ ಕುಪಿತರಾದ  ಮಹಿಳೆಯ ಕಡೆಯವರು ಸಮುದಾಯದ ಸ್ಥಳೀಯ ಮುಖಂಡರಲ್ಲಿ ಈ ಬಗ್ಗೆ ದೂರಿದ್ದು , ಹೀಗಾಗಿ ದೊಡ್ಡ ಗುಂಪೊಂದು ಕ್ಲಿನಿಕ್‌ ಗೆ  ದಾಂಗುಡಿಯಿಟ್ಟು ವೈದ್ಯರಿಗೆ ಬೆದರಿಕೆ ಹಾಕಿ, ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಅಲ್ಲಿದ್ದವರು ತಡೆದಿದ್ದಾರೆ. ಇದಲ್ಲದೆ ನಿಮ್ಮ ವಿರುದ್ಧ ಕೇಸು ದಾಖಲಿಸುವುದಾಗಿಯೂ ಆ ಗುಂಪು ಬೆದರಿಕೆ ಹಾಕಿದ್ದಾರೆ. ಅಲ್ಲದೇ  ಡಾ| ಕೃಷ್ಣಮೂರ್ತಿ  ಮಹಿಳೆಯ ಜತೆ ಅನುಚಿತ ವರ್ತನೆ ಎಸಗಿರುವುದಾಗಿ ಆ ಗುಂಪಿನವರು ಬದಿಯಡ್ಕ ಠಾಣೆಗೆ ದೂರು ನೀಡಿ, ಅದರಂತೆ ಕೇಸು ದಾಖಲಾಗಿದೆ.

Ad Widget

Ad Widget

ಹಣಕ್ಕೆ ಡಿಮ್ಯಾಂಡ್ ?

ಇನ್ನೊಂದು ಮೂಲಗಳ ಪ್ರಕಾರ ವೈದ್ಯರ ಮೇಲೆ ಹಲ್ಲೆಗೆ ಬಂದ ಐವರ  ತಂಡ  ಪ್ರಕರಣ ಮುಗಿಸಲು 10 ಲಕ್ಷ ರೂಪಾಯಿಗೆ ಡಿಮ್ಯಾಂಡ್‌ ಮಾಡಿದ್ದಾರೆ. ಆದರೇ ವೈದ್ಯರು ಹಣ ನೀಡಲು ಒಪಿಲ್ಲ . ಹೀಗಾಗಿ ಅವರು ಠಾಣೆಯಲ್ಲಿ ದೂರು ನೀಡಿದ್ದಾರೆಂದು ಆರೋಪಿಸಲಾಗುತ್ತಿದೆ.  

ಮೊಬೈಲ್‌  ಬಿಟ್ಟು ಬೈಕ್‌ ನಲ್ಲಿ ತೆರಳಿದರು

ನಿಕಟವರ್ತಿಗಳ  ಪ್ರಕಾರ ಈ ಘಟನೆಯಿಂದ ಕುಗ್ಗಿಹೋದ ವೈದ್ಯರು,  ಮಧ್ಯಾಹ್ನ 12 ಗಂಟೆಗೆ  ಕ್ಲಿನಿಕ್‌ ನಿಂದ  ಬೈಕ್ನಲ್ಲಿ ಹೊರಟಿದ್ದಾರೆ. ಮಧ್ಯಾಹ್ನ ಊಟಕ್ಕೆ ಹೊರಟಿರಬಹುದು ಎಂದು ಕಂಪೌಂಡರ್ ಹಾಗೂ ಮತ್ತಿತರರು ಭಾವಿಸಿದ್ದರು.. ಕೆಲ ಘಂಟೆಗಳ ಬಳಿಕ ಮನೆಯವರಿಗೆ ಹಾಗೂ ಕ್ಲಿನಿಕ್‌ ನವರಿಗೆ ವೈದ್ಯರು ನಾಪತ್ತೆಯಾಗಿರುವುದು ತಿಳಿದಿದೆ. ಈ ವೇಳೆ ಅವರು  ಮೊಬೈಲನ್ನು ಆಸ್ಪತ್ರೆಯಲ್ಲಿಯೇ  ಬಿಟ್ಟು  ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಹುಡುಕಾಟದ ವೇಳೆ ಅವರ  ಬೈಕ್ ರೈಲು ನಿಲ್ದಾಣಕ್ಕಿಂತ  200 ಮೀ ದೂರದಲ್ಲಿ ಕುಂಬಳೆ ಪೇಟೆಯಲ್ಲಿ ಕಂಡು ಬಂದಿತ್ತು. ಇದಾದ ಬಳಿಕ ಡಾ| ಕೃಷ್ಣಮೂರ್ತಿಯ ಪತ್ನಿ ಠಾಣೆಯಲ್ಲಿ  ನಾಪತ್ತೆ ಪ್ರಕರಣ ದಾಖಲಿಸಿದ್ದು , ಜತೆಗೆ ಅವರಿಗೆ ತಂಡವೊಂದು ಕ್ಲಿನಿಕ್‌ ನಲ್ಲಿ ಬೆದರಿಕೆವೊಡ್ಡಿದ ಬಗ್ಗೆಯೂ ದೂರು ನೀಡಿದ್ದರು

ಅಪರಿಚಿತ ಮೃತ ದೇಹ ಪತ್ತೆ

 ನ.9 ರ ಬೆಳಗ್ಗೆ 8 ಗಂಟೆಗೆ  ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲ್ವೇ ಹಳಿಯಲ್ಲಿ   ಮೃತದೇಹವೊಂದು  ಪತ್ತೆಯಾಗಿತ್ತು.  ಮೃತ ದೇಹದ ಗುರುತು ಪತ್ತೆಯಾಗದ ಹಿನ್ನಲೆಯಲ್ಲಿ   ರೈಲ್ವೇ ಟ್ರ್ಯಾಕ್ವೆುನ್ ಗಣೇಶ ಕೆ. ಅವರು ಈ ಬಗ್ಗೆ  ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆ ದೂರು ನೀಡಿದ್ದು ಅದರಲ್ಲಿ   ಅಪರಿಚಿತ ವ್ಯಕ್ತಿಯೊಬರ ರಯಲು ಹಳಿಯಲ್ಲಿ ಪತ್ತೆಯಾಗಿದೆ. ಅವರು   ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲ್ವೇ ಹಳಿಗೆ ದೇಹವನ್ನು ಅಡ್ಡವಿಟ್ಟು ಮಲಗಿದ್ದು, ಯಾವುದೋ ರೈಲು ಹರಿದು ಸಾವನ್ನಪ್ಪಿರುವ ಸಾಧ್ಯತೆಯಿದೆ  ಎಂದು ತಿಳಿಸಿದ್ದರು. ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಗುರುತು ಪತ್ತೆ

 ಕುಂದಾಪುರದ ತಲ್ಲೂರು – ಹಟ್ಟಿಯಂಗಡಿ ಸಮೀಪ ಅಪರಿಚಿತ ಮೃತದೇಹ ಪತ್ತೆಯಾದ ಬಗ್ಗೆ ಸುದ್ದಿ ತಿಳಿದ ಡಾ| ಕೃಷ್ಣಮೂರ್ತಿ ಅವರ ಮನೆಯವರು, ನ.10 ರಂದು ಮಧ್ಯಾಹ್ನದ ವೇಳೆಗೆ ಕುಂದಾಪುರಕ್ಕೆ ಆಗಮಿಸಿದ್ದರು. ಅವರ ದೇಹದ ಮೇಲಿದ್ದ ಜನಿವಾರ, ಹಿಂಬದಿ ದೇಹದಲ್ಲಿದ್ದ ಕಪ್ಪು ಮಚ್ಚೆ, ಒಳ ಉಡುಪುಗಳನ್ನು ಗುರುತಿಸಿ, ಇದು ಕೃಷ್ಣಮೂರ್ತಿ ಅವರದೇ ಮೃತದೇಹವೆಂದು ಗುರುತಿಸಲಾಗಿದೆ.

ದೇಹ ಎರಡು ಭಾಗ:

ತಲ್ಲೂರು ಸಮೀಪದ ರಾಜಾಡಿಯ ಕಡೆಗೆ ತೆರಳುವ ರಸ್ತೆಯಲ್ಲಿ ತೆರಳುವ ಹಾದಿಯಲ್ಲಿ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆ ಎಂಬಲ್ಲಿನ ರೈಲ್ವೇ ಹಳಿಯಲ್ಲಿ ಡಾ| ಕೃಷ್ಣಮೂರ್ತಿ ಅವರ ಮೃತದೇಹ ಎರಡು ಭಾಗವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಹದ ತಲೆ ಭಾಗ ಒಂದು ಕಡೆ ಇದ್ದರೆ, ಅಲ್ಲಿಂದ 50 ಮೀ. ದೂರದಲ್ಲಿ ದೇಹದ ಉಳಿದ ಭಾಗ ಅಂದರೆ ಹೊಟ್ಟೆಗಿಂತ ಕೆಳಗಿನ ಭಾಗ ಪತ್ತೆಯಾಗಿದೆ.

ಗುರುತು ಖಚಿತಪಡಿಸಿದ ಪುತ್ರಿ:

ಮೃತರ ಸಹೋದರ ಪುತ್ತೂರಿನ ಖ್ಯಾತ ವೈದ್ಯ ಡಾ| ರಾಮ್ಮೋಹನ್ , ಭಾವ ಮನೋಹರ್, ಸ್ನೇಹಿತ ಉದಯ್ ಕುಮಾರ್, ಆಸ್ಪತ್ರೆ ಕಂಪೌಂಡರ್ ಸಿ.ಎಚ್. ಪರಮೇಶ್ವರ ಭಟ್, ಬದಿಯಡ್ಕ ಠಾಣೆಯ ಮೂವರು ಪೊಲೀಸ್ ಸಿಬಂದಿ ಆಗಮಿಸಿ, ಬಹುತೇಕ ಇದು  ಕೃಷ್ಣಮೂರ್ತಿಯವರ ಮೃತದೇಹವೆಂದು ಖಚಿತಪಡಿಸಿದ್ದರು. ಆ ಬಳಿಕ ನ.10 ರ ಸಂಜೆ 8 ಗಂಟೆಯ ವೇಳೆಗೆ ಅವರ ಪುತ್ರಿ ಆಗಮಿಸಿ ತಂದೆಯದ್ದೇ ಮೃತದೇಹ ಎನ್ನುವುದನ್ನು ಖಚಿತಪಡಿಸಿದ್ದಾರೆ.

 ಪೊಲೀಸರಿಂದ ತನಿಖೆ

ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕಂಡ್ಲೂರು ಠಾಣಾಧಿಕಾರಿ ಪವನ್ ನಾಯಕ್, ಸಿಬಂದಿ, ಫಾರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನ.10 ರ ಸಂಜೆ ಮತ್ತೆ ಸ್ಥಳಕ್ಕೆ ಭೇಟಿ ನೀಡಿದ ಎಸ್ಐ ಪವನ್ ನೇತೃತ್ವದ ಪೊಲೀಸರ ತಂಡ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಇನ್ನು ಯಾವುದಾದರೂ ಸುಳಿವು, ಗುರುತು, ವಸ್ತುಗಳು ಸಿಗಬಹುದೇ ಅನ್ನುವುದರ ಬಗ್ಗೆ ಹುಡುಕಾಟ ನಡೆಸಿದರು.

ಊಹಾಪೋಹಗಳು – ಅನುಮಾನಗಳು

ಸ್ಥಳೀಯ ಪ್ರತ್ಯಕ್ಷದರ್ಶಿಯವರ ಪ್ರಕಾರ, ನ .8 ರಂದು ಮಧ್ಯಾಹ್ನ ಡಾ| ಕೃಷ್ಣಮೂರ್ತಿಯವರು, ಕ್ಲಿನಿಕ್‌ ನಿಂದ ಬೈಕ್‌ ನಲ್ಲಿ ಹೊರಟ ಬಳಿಕ ಪೆರ್ಲದತ್ತ ತೆರಳುತ್ತಿದ್ದರು. ಆದರೇ ಅವರ ಬೈಕ್‌ ಪೆರ್ಲ ಹಾಗು ಬದಿಯಡ್ಕದಿಂದ ಹಲವು ಕಿಮೀ ದೂರದ ಕುಂಬಳೆಯಲ್ಲಿ ಸಿಕ್ಕಿರುವುದು ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಇನ್ನೂ  ಬೈಕನ್ನು ಕೃಷ್ಣಮೂರ್ತಿಯವರೇ ತಂದು ಪಾರ್ಕ್‌ ಮಾಡಿದ್ದರು ಎಂದು ಹೇಳುವುದಕ್ಕೆ ಯಾವುದೇ ಪ್ರತ್ಯಕ್ಷ , ಪರೋಕ್ಷ ಸಾಕ್ಷಿ  ಈವರೆಗೆ ಪೊಲೀಸರಿಗೆ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.  ಅಲ್ಲದೇ, ಬೈಕ್‌ ನ್ನು ಹ್ಯಾಂಡಲ್‌ ಲಾಕ್‌ ಮಾಡಲಾಗಿದ್ದು  ಕೀ ಇರಲಿಲ್ಲ. 

ದಾಖಲೆಗಳು ಸಿಕ್ಕಿಲ್ಲ

ಇನ್ನೂ ಮೃತ ದೇಹ ಸಿಕ್ಕ ಸ್ಥಳದಲ್ಲಿ ಅಥಾವ ಅದರ 1 ಕಿ. ಮೀ ಅಸುಪಾಸಿನಲ್ಲಿ ಅವರ ಚಪ್ಪಲ್‌, ವಾಚ್‌, ಪರ್ಸ್‌, ಬೆಲ್ಟ್, ಬೈಕ್‌ ಕೀ. ಡ್ರೈವಿಂಗ್‌ ಲೈಸನ್ಸ್, IDA ಐಡಿ ಸಿಕ್ಕಿಲ್ಲ ಎನ್ನಲಾಗುತ್ತಿದೆ.

ಕುಂದಾಪುರವೆ ಯಾಕೇ ?

ಡಾ| ಕೃಷ್ಣಮೂರ್ತಿಯವರು ಸಾಯಲು  ಬದಿಯಡ್ಕದಿಂದ ಸುಮಾರು 180-190 ಕಿ.ಮೀ. ದೂರದ ಕುಂದಾಪುರವನ್ನೆ ಯಾಕೇ ಆಯ್ಕೆ ಮಾಡಿಕೊಂಡರು ಎನ್ನುವುದು ಪೊಲೀಸರು ಹಾಗೂ ಕುಟುಂಬ ಸದಸ್ಯರ ಮುಂದಿರುವ ದೊಡ್ಡ ಪ್ರಶ್ನೆ. ಇನ್ನು ಅವರು ಅಲ್ಲಿಗೆ ಯಾವ ವಾಹನದಲ್ಲಿ ಬಂದರು ಎನ್ನುವುದು ಮೂಡಿರುವ ಇನ್ನೊಂದು ಯಕ್ಷ ಪ್ರಶ್ನೆ. ಕುಂಬಳೆಯಿಂದ  ರೈಲಿನಲ್ಲಿ  ಮಂಗಳೂರು ರೈಲು ನಿಲ್ದಾಣಕ್ಕೆ ಬಂದು,  ಅಲ್ಲಿಂದ ಮತ್ತೆ ಕುಂದಾಪುರದ ಕಡೆಗೆ ಹೋಗಿರಬಹುದೇ ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ಅಥಾವ ಟಿಕೆಟ್‌ ನಂತಹ ದಾಖಲೆಗಳು ಪೊಲೀಸರಿಗೆ ಸಿಕ್ಕಿಲ್ಲ . ಅವರು ರೈಲಿನಲ್ಲಿ ಪ್ರಯಾಣಿಸಿರುವುದನ್ನು ನೋಡಿರುವ ಪ್ರತ್ಯಕ್ಷದರ್ಶಿಗಳು ಈವರೆಗೆ ಸಿಕ್ಕಿಲ್ಲ. 

ರೈಲಿನಲ್ಲಿ ಬಂದಿದ್ದರೂ ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಮೃತದೇಹ ಪತ್ತೆಯಾದ ಹಟ್ಟಿಯಂಗಡಿಯ ಸ್ಥಳಕ್ಕೆ ಸುಮಾರು 10-12 ಕಿ.ಮೀ. ದೂರವಿದೆ. ಅಲ್ಲಿಯವರೆಗೆ ಹಳಿಯಲ್ಲಿಯೇ ನಡೆದುಕೊಂಡೇ ಬಂದರೆ ? ಅದಲ್ಲದೆ ರಾತ್ರಿ ವೇಳೆ ಮೊಬೈಲ್ ಅಥವಾ ಬೆಳಕಿನ ವ್ಯವಸ್ಥೆಯಿಲ್ಲದೆ ಹಳಿಯಲ್ಲಿಯೇ ಅಷ್ಟು ದೂರ ನಡೆದುಕೊಂಡು ಬರಲು ಸಾಧ್ಯವೇ? ಇನ್ನು ಚಲಿಸುತ್ತಿದ್ದ ರೈಲಿನಿಂದ ಕತ್ತಲಲ್ಲಿ ಹಾರಿರಬಹುದು ಎಂದು ಸಂಶಯಿಸಿದರೂ ಅವರ ಮೃತ ರೈಲಿನ ಹಳಿ ಮೇಲೆ ಇದ್ದಿರಲೂ ಸಾಧ್ಯವೇ ಇಲ್ಲ . ದೇಹ  ಹಳಿಯ ಹೊರಗೆಯೇ ಬೀಳ ಬೇಕಿತ್ತು ಹಾಗೂ ದೇಹವೂ ಛಿದ್ರವಾಗುವ ಸಾಧ್ಯತೆಯೂ ಇರಲಿಲ್ಲ.  

 ಒಂದು ಬಸ್ಸಿನಲ್ಲಿ ಬಂದಿದ್ದರೂ,  ಅವರಿಗೆ ಅಪರಿಚಿತವಾಗಿರುವ ತಲ್ಲೂರಲ್ಲಿ ಇಳಿದು ಅಲ್ಲಿಂದ 2-3 ಕಿ.ಮೀ. ದೂರದವರೆಗೆ ರೈಲು ಹಳಿಯನ್ನು ಹುಡುಕಿಕೊಂಡು , ಗೊತ್ತಿಲ್ಲದ ಹಾದಿಯಲ್ಲಿ  ನಡೆದುಕೊಂಡು  ಇಲ್ಲಿಗೆ ಹೇಗೆ ಬಂದರೂ ಎನ್ನುವುದು ಮೂಡಿರುವ ಇನ್ನೊಂದು ಪ್ರಭಲ ಸಂಶಯ.

ಶರ್ಟ್‌ ಬೇರೆ ಬೇರೆ…! 

ಇನ್ನು ಡಾಕ್ಟರ್‌ ಕ್ಲಿನಿಕ್‌ ನಿಂದ ಮಧ್ಯಾಹ್ನ ಹೊರಟಾಗ ತೊಟ್ಟಿದ ಶರ್ಟ್‌ ಹಾಗೂ  ಮೃತ ದೇಹದಲ್ಲಿ ಸಿಕ್ಕ ಶರ್ಟ್ ಬೇರೆ ಬೇರೆ, ಅಲ್ಲದೇ ಮೃತ ದೇಹದ ಮೇಲೆ ಸಿಕ್ಕ ಶರ್ಟ್‌ ಪ್ಯಾಟರ್ನ್‌ ಅವರು ಸರ್ವ ಸಾಮಾನ್ಯವಾಗಿ ಉಡುವ ಶರ್ಟ್‌ ಗಿಂತ ಸಂಫೂರ್ಣ ಬೇರೆ ಪ್ಯಾಟರ್ನ್‌ ಆಗಿತ್ತು ಎಂದು ಎಂದು ಹೇಳಲಾಗುತ್ತಿದೆ.

ಇನ್ನು ತನ್ನ ಮೃತ ದೇಹದ ಗುರುತು ಯಾರಿಗೂ ಸಿಗಬಾರದು ಎಂಬ ಉದ್ದೇಶಕ್ಕೆ ಅವರು ಈ ರೀತಿ ದಾಖಲೆಗಳನ್ನು ಹಾಗೂ ಶರ್ಟನ್ನು ಮರೆ ಮಾಚಿದರೂ ಎಂದು ಭಾವಿಸಿದರೂ , ಅಷ್ಟೆಲ್ಲಾ ಎಚ್ಚರಿಕೆ ವಹಿಸಿದ ಅವರು ಜನಿವಾರ ಒಳ ಉಡುಪು ಯಾಕೇ ಬದಲಿಸಲಿಲ್ಲ ಎನ್ನುವ ಪ್ರಶ್ನೆ ಕೂಡ ಇದೆ ವೇಳೆ ಹುಟ್ಟುಕೊಂಡಿದೆ.

ಜಾಗದ ವಿಚಾರ ಕಾರಣವೇ? :

ಮನೆಯ ಕೆಲವರು ಹೇಳುವ ಮೂಲಗಳ ಪ್ರಕಾರ ನ.8 ರಂದು ನಡೆದ ಘಟನೆಗೂ ಮೊದಲೇ ಡಾ| ಕೃಷ್ಣಮೂರ್ತಿ ಅವರ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 6 ತಿಂಗಳಿನಿಂದ ಕೆಲವರಿಂದ ನಿರಂತರ ಕಿರುಕುಳ, ಬೆದರಿಕೆ ಬರುತ್ತಿದ್ದು, ಜಾಗದ ಮಾರಾಟಕ್ಕೆ ಒತ್ತಾಯಿಸುತ್ತಿದ್ದರು ಎನ್ನಲಾಗುತ್ತಿದೆ. ಜಾಗದ ಖರೀದಿಗಾಗಿ ಬೇಡಿಕೆ ಇಡುತ್ತಿದ್ದರು. ಈ ವಿಚಾರದಿಂದಲೂ ವೈದ್ಯರು ನೊಂದಿದ್ದರೇ? ಅನ್ನುವ ಪ್ರಶ್ನೆ ಈಗ ಮೂಡಿದೆ

ನ.8 ರಂದು ಮಹಿಳೆಯ ವಿಚಾರವಾಗಿ ಕ್ಲಿನಿಕ್ಗ ಬಂದು ವೈದ್ಯರಿಗೆ ಬೆದರಿಕೆಯೊಡ್ಡಿದ್ದ ಐವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಹಿನ್ನಲೆಯಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪುತ್ತೂರಿನ ಖ್ಯಾತ ವೈದ್ಯ ಸಹೋದರರ ಅಣ್ಣ

ಮೃತ ವೈದ್ಯ ಡಾ | ಕೃಷ್ಣ ಮೂರ್ತಿ ಪುತ್ತೂರಿನ ಖ್ಯಾತ ಇ ಎನ್‌ ಟಿ ವೈದ್ಯ  ಡಾ | ರಾಮ್‌ ಮೋಹನ್‌ ರಾವ್  ಹಾಗೂ ಕೆಲ ವರ್ಗಳ ಹಿಂದಿನವರೆಗೂ ಪುತ್ತೂರಿನಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಹೆಸರಾಂತ ವೈದ್ಯ ಡಾ|  ಅರವಿಂದ ಅವರ ಸಹೋದರ.

ಪ್ರತಿಭಟನೆ :

ಬದಿಯಡ್ಕದಲ್ಲಿ  ಹಿಂದುತ್ವವಾದಿ ಸಂಘಟನೆಗಳು  ಪ್ರತಿಭಟನಾ ಮೆರವಣಿಗೆ ನಡೆಸಿ ವೈದ್ಯರಿಗೆ ಬೆದರಿಕೆ ಒಡ್ಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು. ಬಿಜೆಪಿ ನಾಯಕ ಕುಂಟಾರು ರವೀಶ್‌ ತಂತ್ರಿ ಮತ್ತು ಇತರೆ ಹಿಂದು ನಾಯಕರು ಪ್ರತಿಭಟನೆಯ ನೇತೃತ್ವವಹಿಸಿದ್ದರು. ಇಂದು ಬದಿಯಡ್ಕದಲ್ಲಿ ಹರತಾಳಕ್ಕೆ ವಿಶ್ವಹಿಂದು ಪರಿಷತ್‌ ಕರೆ ನೀಡಿತ್ತು.ಇಂದು ಬೆಳಗ್ಗೆ ಡಾಕ್ಟರ್‌ ಕೃಷ್ಣಮೂರ್ತಿ ಅವರ ಅಂತ್ಯ ಸಂಸ್ಕಾರ ಬೆಳಗ್ಗೆ 9 ಗಂಟೆಗೆ ನೆರವೇರಿದೆ. ಬಳಿಕ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಬದಿಯಡ್ಕ ಪೇಟೆಯ ಬಹುತೇಕ ಅಂಗಡಿ ಮುಂಗಟ್ಟು ಈ ಸಂದರ್ಭದಲ್ಲಿ ಮುಚ್ಚಿದ್ದವು.

ಲ್ಯಾಂಡ್‌ ಜಿಹಾದ್‌ ಮಾಫಿಯಾ?

ವೈದ್ಯರ ಹತ್ಯೆಯ ಹಿಂದೆ ಲ್ಯಾಂಡ್‌ ಜಿಹಾದ್‌ ಮಾಫಿಯಾ ಕೆಲಸ ಮಾಡಿದೆ.  ಈ ಮಾಫಿಯಾವು ವೈದ್ಯರ ಜಾಗ ಕಬಳಿಸುವ ಉದ್ದೇಶಧಿಂದ ಅವರ ವಿರುದ್ದ ಮಹಿಳೆಯ ಮೂಲಕ ದೂರು ಕೊಡಿಸಿ ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಹಿಂದುತ್ವವಾದಿ ಸಂಘಟನೆಗಳು ಈ ವೇಳೆ ಆರೋಪಿಸಿದ್ದಾರೆ,

Ad Widget
Click to comment

Leave a Reply

ಶಿಕ್ಷಣ

Vivekananda-ವಿವೇಕಾನಂದ ಪಾಲಿಟೆಕ್ನಿಕ್‌ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ

Published

on

Ad Widget

Ad Widget

Ad Widget

Ad Widget

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಆಡಳಿತ ಮಂಡಳಿಯ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ, ಕೋಶಾಧಿಕಾರಿಯಾಗಿ ಸನತ್ ಕುಮಾರ್ ರೈ ಅಧಿಕಾರ ಸ್ವೀಕರಿಸಿದರು.

Ad Widget

Ad Widget

Ad Widget

Ad Widget

ಪುತ್ತೂರು : ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಆಡಳಿತ ಮಂಡಳಿಯ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Ad Widget

Ad Widget alt="Ad Widget"/>

Ad Widget

ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ, ಕೋಶಾಧಿಕಾರಿಯಾಗಿ ಸನತ್ ಕುಮಾರ್ ರೈ ಅಧಿಕಾರ ಸ್ವೀಕರಿಸಿದರು.

Ad Widget

Ad Widget <> Ad Widget

ಸದಸ್ಯರಾಗಿ: ಶ್ರೀಮತಿ ತ್ರಿವೇಣಿ ಪೆರ್ವೋಡಿ , ಶಮಂತ ಕೃಷ್ಣ ಕೆ ಉರಿಮಜಲು, ಕೇಶವ ಅಮೈ , ರವಿರಾಜ ಶೆಟ್ಟಿ, ಬಿ ರೋಹಿತ್ ಕುಮಾರ್, ಶ್ರೀಮತಿ ಮೋಹಿನಿ ದಿವಾಕರ ಜವಾಬ್ದಾರಿ ವಹಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೃಷ್ಣಕುಮಾರ್ ಶೆಟ್ಟಿ, ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ., ಜತೆ ಕಾರ್ಯದರ್ಶಿ ಭರತ್ ಪೈ, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಸಾದ್, ಹಿಂದಿನ ಆಡಳಿತ ಮಂಡಳಿಯ ಸಂಚಾಲಕರು, ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

Continue Reading

ಬಿಗ್ ನ್ಯೂಸ್

Neralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ

Published

on

Ad Widget

Ad Widget

Ad Widget

Ad Widget

ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ವಿಟ್ಲ: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ಹೆದ್ದಾರಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

Ad Widget

Ad Widget alt="Ad Widget"/>

Ad Widget

ಮೃತ ಬಾಲಕಿಯನ್ನು ನೆಟ್ಲಮುಡ್ನೂರು ನಿವಾಸಿ ಫಾತಿಮಾ ಇಝಾ ಇಲ್ಯಾಸ್ (14) ಎಂದು ಗುರುತಿಸಲಾಗಿದೆ. ಈಕೆ ಕಂಬಳಬೆಟ್ಟು ಶಾಲೆಯ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ.

Ad Widget

Ad Widget <> Ad Widget

ಬಾಲಕಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

ಆರೋಗ್ಯ

Puttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ

Published

on

Ad Widget

Ad Widget

Ad Widget

Ad Widget

ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.

Ad Widget

Ad Widget alt="Ad Widget"/>

Ad Widget

ಬೆನ್ನು ನೋವು, ಮೊಣಕಾಲು ನೋವು, ಸೊಂಟ ನೋವು ಹಾಗೂ ಸ್ನಾಯು ನೋವು ಮುಂತಾದ ಸಮಸ್ಯೆಗಳು ಮೂಳೆ ಸವೆತ ಅಥವಾ ಮುಂದಿನ ದಿನಗಳಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ BMD ಶಿಬಿರವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸೇವಾ ವಿಭಾಗದ ಇಂಡ್‌ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.

Ad Widget

Ad Widget <> Ad Widget

ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಭಾಸ್ಕರ್ ಎಸ್. (D’Ortho), ಆಡಳಿತ ನಿರ್ದೇಶಕರು, ಪುತ್ತೂರು ಸಿಟಿ ಆಸ್ಪತ್ರೆ ಇವರು ತಪಾಸಣೆ ಹಾಗೂ ಸಲಹೆ ನೀಡಿದರು.

ಇನ್ನರ್‌ ವೀಲ್‌ ಕ್ಲಬ್ ನ ನಿರ್ದೇಶಕಿ ಮಂಜುಳ ಭಾಸ್ಕರ್, ಅಧ್ಯಕ್ಷೆ ಮನೋರಮಾ ಸೂರ್ಯ, ಖಜಾಂಜಿ ಕವಿತಾ ಕೊಳತ್ತಾಯ, ಕಾರ್ಯದರ್ಶಿ ಶ್ರುತಿ ಎಸ್.‌ ಬಂಗೇರ ಶಿಬಿರದಲ್ಲಿ ಉಪಸ್ಥಿತರಿದ್ದರು.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!