ಅಪರಾಧ
Sonali Phogat Death :ಆಕ್ಷೇಪಾರ್ಹ ವಿಡಿಯೋ ಹಿಡ್ಕೊಂಡು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾತ ರೇಪ್ ಮಾಡಿ ಹತ್ಯೆ ಮಾಡಿದ್ದಾನೆ : ದೂರು
ನವದೆಹಲಿ (ಆ.24): ಹರಿಯಾಣದ ಬಿಜೆಪಿ (BJP) ನಾಯಕಿ ಮತ್ತು ಮಾಜಿ ಬಿಗ್ ಬಾಸ್ (Big Boss) ತಾರೆ 42ರ ಹರೆಯದ ಸೋನಾಲಿ ಫೋಗಟ್ ನಿನ್ನೆ ಗೋವಾದಲ್ಲಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಈ ಅಘಾತಕಾರಿ ಸಾವಿನ ಬಳಿಕ ಸೋನಾಲಿ (Sonali Phogat) ಕುಟುಂಬಿಕರು, ಸ್ನೇಹಿತರು ಮತ್ತು ಅಭಿಮಾನಿಗಳು ತೀವ್ರ ದು:ಖತಪ್ತರಾಗಿದ್ದಾರೆ. ವೈದ್ಯರ ಪ್ರಾಥಮಿಕ ವರದಿಗಳ ಪ್ರಕಾರ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ (Sonali Phogat Death) ಎನ್ನಲಾಗಿದೆ. ಆದಾಗ್ಯೂ, ಆಕೆಯ ಕುಟುಂಬವು ಸಾವಿನ ಬಗ್ಗೆ ಸಂಶಯ ವ್ಯಕ್ತ ಪಡಿಸಿದೆ. ಅದೊಂದು ಕೊಲೆ ಎಂದು ಹೇಳಿರುವ ಅವರು ಆಕೆಯ ಹತ್ಯೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.
ಸೋನಾಲಿ ಸಹೋದರ ರಿಂಕು ಢಾಕಾ (rinku dhaka) ಅವರು ಈ ಬಗ್ಗೆ ಇಂದು ಗೋವಾ ಪೊಲೀಸರಿಗೆ ದೂರು ನೀಡಿದರು. ಆಕೆಯ ಇಬ್ಬರು ಸಹಚರರು ಆಕೆಯನ್ನುಕೊಲೆ ಮಾಡಿದ್ದಾರೆ ಎಂದು ಆತ ದೂರಿನಲ್ಲಿ ಆರೋಪಿಸಿದ್ದಾರೆ. ಫೋಗಟ್ ಸಾವಿನ ಕುರಿತು ರಾಜ್ಯ ಪೊಲೀಸರು ವಿಸ್ತೃತವಾದ ತನಿಖೆ ನಡೆಸುತ್ತಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಠಾಣೆಗೆ ನೀಡಿದ ದೂರಿನಲ್ಲಿ, ಸೋನಾಲಿಯ ಪಿಎ ಸುಧೀರ್ ಸಾಂಗ್ವಾನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಆತನೇ ಸೋನಾಲಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ನೇರವಾಗಿ ತಿಳಿಸಲಾಗಿದೆ. ಸಾಂಗ್ವಾನ್ ತನ್ನ ಸ್ನೇಹಿತ ಸುಖ್ವಿಂದರ್ ಜೊತೆಗೆ ಸೋನಾಲಿಯ ಆಕ್ಷೇಪಾರ್ಹ ವೀಡಿಯೋ ಚಿತ್ರಿಕರಿಸಿದ್ದು, ಅದನ್ನು ಹಿಡ್ಕೊಂಡು ಆಕೆಯನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಕೂಡ ಆರೋಪಿಸಿದ್ದಾರೆ. ಎರಡು ವರ್ಷಗಳ ಹಿಂದೆ ಸುಧೀರ್ ಸಂಗ್ವಾನ್ ಹಾಗೂ ಸುಖ್ವಿಂದರ್ ಸೇರಿಕೊಂಡು ಸೋನಾಲಿ ಅವರ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿದ್ದರು. ಬಳಿಕ ಆಕೆಯನ್ನು ರೇಪ್ ಮಾಡಿದ್ದಾರೆ. ಅಲ್ಲದೇ, ಅದನ್ನು ವಿಡಿಯೋ ಮಾಡಿ, ಬ್ಲ್ಯಾಕ್ಮೇಲ್ ಕೂಡ ಮಾಡಿದ್ದಾರೆ ಎಂದು ಸಹೋದರ ರಿಂಕು ದೂರಿನಲ್ಲಿ ಆರೋಪಿಸಿದ್ದಾರೆ.
ಕಳ್ಳತನ
2019 ರ ಚುನಾವಣೆಯ ಸಮಯದಲ್ಲಿ, ರೋಹ್ಟಕ್ ನಿವಾಸಿ ಸುಧೀರ್ ಸಾಂಗ್ವಾನ್ (sudhir sangwan) ಮತ್ತು ಭಿವಾನಿ ನಿವಾಸಿ ಸುಖ್ವಿಂದರ್, ಸೋನಾಲಿ ಅವರ ಬಳಿ ಕೆಲಸಗಾರರಾಗಿ ಸೇರಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಅವರಿಬ್ಬರು ಸೋನಾಲಿಯ ವಿಶ್ವಾಸವನ್ನು ಪಾತ್ರರಾಗಿದ್ದರು. ಇದರಲ್ಲಿ ಸುಧೀರ್, ಸೋನಾಲಿ ಅವರ ಪಿಎ ಆಗಿ ಕೆಲಸ ಮಾಡುತ್ತಿದ್ದ. 2021ರಲ್ಲಿ ಸೋನಾಲಿ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಸುಧೀರ್ ಈ ಕಳ್ಳತನ ನಡೆಸಿದ್ದ. ಆದರೇ ಈ ವಿಚಾರ ಸೋನಾಲಿಗೆ ಗೊತ್ತಿರಲಿಲ್ಲ. ಅದಾದ ಬಳಿಕ ಸೋನಾಲಿಯವರು ತಪ್ಪು ಗ್ರಹಿಕೆಯಿಂದ ತನ್ನ ಮನೆ ಕೆಲಸದವರು ಹಾಗೂ ಇತರ ಸಿಬ್ಬಂದಿಯನ್ನ ತೆಗೆದು ಹಾಕಿದ್ದರು. ಅವರನ್ನು ಕೆಲಸದಿಂದ ತೆಗೆದು ಹಾಕುವ ಉದ್ದೇಶದಿಂದಲೇ ಕಳ್ಳತನ ನಡೆಸಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಅಂದಿನಿಂದ ಸೋನಾಲಿ ಅವರ ಊಟ ಉಪಚಾರದ ವಿಷಯವನ್ನು ಸುಧೀರ್ ನೋಡಿಕೊಳ್ಳುತ್ತಿದ್ದ. ಸುಧೀರ್ ನನಗೆ ಖೀರ್ (ಪಾಯಸ) ತಿನಿಸಿದ ಬಳಿಕ ನನ್ನ ಕೈ ಕಾಲುಗಳು ಮರಗಟ್ಟಿ ಹೋದಂತಾಗುತ್ತಿದೆ ಎಂದು ಹಿಂದೂಮ್ಮೆ ನನ್ನಲ್ಲಿ ತಿಳಿಸಿದ್ದಳು ಎಂದು ದೂರಿನಲ್ಲಿ ರಿಂಕ್ ಆರೋಪಿಸಿದ್ದಾರೆ.

Health Tips flax seeds : ಅಗಸೆ ಬೀಜ ಹಲವು ಖಾಯಿಲೆಗಳಿಗೆ ರಾಮ ಬಾಣ – ಇದರ ಪ್ರಯೋಜನ ಕೇಳಿದ್ರೆ ವ್ಹಾರೇ ವ್ಹಾ ಅಂತೀರಾ
ಸೋನಾಲಿಯ ಎಲ್ಲಾ ವಹಿವಾಟು ಮತ್ತು ಕಾಗದ ಪತ್ರಗಳನ್ನು ಸುಧೀರ್ ನೋಡಿಕೊಳ್ಳುತ್ತಿದ್ದ ಎಂದು ರಿಂಕು ಹೇಳಿದ್ದಾರೆ. ಆಗಸ್ಟ್ 22 ರಂದು, ಸೋನಾಲಿ ತನ್ನ ಕಿರಿಯ ಅಳಿಯ ಅಮನ್ಗೆ ಕರೆ ಮಾಡಿ, ಸುಧೀರ್ ತನಗೆ ಆಹಾರದಲ್ಲಿ ಏನೋ ಹಾಕಿದ್ದಾನೆ. ಇದರಿಂದ ನಾನು ವಿಚಲಿತಳಾಗಿದ್ದೇನೆ ಎಂದು ಹೇಳಿದ್ದಳು.

ಅತ್ಯಾಚಾರ , ಬ್ಲ್ಯಾಕ್ ಮೇಲ್
ಮೂರು ವರ್ಷಗಳ ಹಿಂದೆ ಹಿಸಾರ್ನಲ್ಲಿನ ಮನೆಯಲ್ಲಿ ಅಮಲು ಪದಾರ್ಥ ಬೆರೆಸಿದ ಆಹಾರವನ್ನು ಸೋನಾಲಿಗೆ ಸುದೀರ್ ನೀಡಿದ್ದ. ಆಕೆಗ ಪ್ರಜ್ಞೆ ತಪ್ಪಿದಾಗ ಅವಳ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಕೂಡ ಮಾಡಿದ್ದ. ಈ ವಿಡಿಯೋವನ್ನು ತೋರಿಸಿ ಆಕೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಆ ಬಳಿಕವೂ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದ ಎಂದಿದ್ದಾರೆ.

Whatsapp Feature : ಗ್ರೂಪ್ ಆಡ್ಮಿನ್ ಗೆ ಪರಮಾಧಿಕಾರ – ಚಾಟ್ ಲಿಸ್ಟ್ ನಲ್ಲಿಯೇ ಸ್ಟೇಟಸ್ ಅಪ್ಡೇಟ್
ಆ ವಿಡಿಯೋ ಹಿಡ್ಕೊಂಡು ಸೋನಾಲಿಯನ್ನು ಬೆದರಿಸಿದ್ದ. ಆಕೆಯ ಸಿನಿಮಾ ಹಾಗೂ ರಾಜಕೀಯ ಕೆರಿಯರ್ ಅನ್ನು ಅಂತ್ಯ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆಕೆಯ ಮನೆಯ ಕೀಗಳು, ಆಕೆಯ ಎರಡೂ ಫೋನ್ಗಳು, ಆಸ್ತಿ ಪತ್ರಗಳು, ಎಟಿಎಂ ಕಾರ್ಡ್ಗಳು ಸುಧೀರ್ ಬಳಿಯೇ ಇದ್ದವು. ಸುಧೀರ್ ಹಾಗೂ ಸುಖ್ವಿಂದರ್ ನನಗೆ ಏನಾದರೂ ಮಾಡಬಹುದು ಎನ್ನುವ ಆತಂಕ ಆಕೆಯಲ್ಲಿತ್ತು. ಇದನ್ನು ಫೋನ್ನಲ್ಲಿ ಕೂಡ ಹೇಳಿದ್ದಳು.

ಶೂಟಿಂಗ್ ಎಂದು ಸುಳ್ಳು ಹೇಳಿದ
ನಿನ್ನೆ ಬೆಳಗ್ಗೆ ವೇಳೆ ಸುಧೀರ್ ಫೋನ್ ಮಾಡಿದ. ಶೂಟಿಂಗ್ ವೇಳೆ ಸೋನಾಲಿ ಹೃದಯಘಾತದಿಂದ ಮೃತಪಟ್ಟಿದ್ದಾಳೆ ಎಂದು ತಿಳಿಸಿದ. ಆದರೇ ನಾವು ಕುಟುಂಬ ಸದಸ್ಯರು ಆಕೆಯನ್ನು ಕಾಣಲು ಗೋವಾಕ್ಕೆ ಹೋದಾಗ ಅಲ್ಲಿ ಯಾವುದೇ ಶೂಟಿಂಗ್ ನಡೆಯುತ್ತಿರಲಿಲ್ಲ ಎಂಬ ವಿಚಾರ ಗೊತ್ತಾಯಿತು. ಸೋನಾಲಿ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸುವ ಸಲುವಾಗಿ ಹಾಗೂ ಆಕೆಯ ಆಸ್ತಿಗಾಗಿ ಸುಧೀರ್ ಹಾಗೂ ಸುಖ್ವಿಂದರ್ ಆಕೆಯ ಕೊಲೆ ಮಾಡಿದ್ದಾರೆ. ಸೋನಾಲಿ ಸಾವಿನ ಬಗ್ಗೆ ನಮಗೆ ಮೊದಲು ತಿಳಿಸಿದ್ದು ಸುಧೀರ್. ಅದಾದ ಬಳಿಕ ನಾವು ಆತನಿಗೆ ಕರೆ ಮಾಡಿದರೆ, ಫೋನ್ ಸ್ವಿಚ್ ಆಫ್ ಆಗಿದೆ. ಸೋನಾಲಿ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಗಳು ಹೇಳಿದ್ದೆನು?
ಸೋನಾಲಿ ಪೋಗಟ್ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಆಕೆಯ ಮಗಳು ಯಶೋಧರ ಕೂಡ ಮಾತನಾಡಿದ್ದಾರೆ. 15 ವರ್ಷದ ಯಶೋಧರ ತನ್ನ ತಾಯಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರನ್ನು ಕೇಳಿಕೊಂಡಿದ್ದಾರೆ. ಹಿಸಾರ್ನಲ್ಲಿರುವ ಫಾರ್ಮ್ ಹೌಸ್ನಲ್ಲಿ ಚಿಕ್ಕಮ ರಮೋನ್ ಪೋಗಟ್ ಜೊತೆ ಯಶೋಧರ ವಾಸವಿದ್ದಾರೆ. ತನ್ನ ತಾಯಿಯ ಸಾವಿಗೆ ಕಾರಣರಾದವರನ್ನು ಹುಡುಕಿ ಶಿಕ್ಷೆ ನೀಡಬೇಕು ಎಂದು ಕಣ್ಣೀರಿಡುತ್ತಲೇ ಹೇಳಿದ್ದಾರೆ.


ಸುಳ್ಯ
Sullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ
ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಸುಳ್ಯ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಉದಯ ರವಿ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಶಾಲಾ ಮೈದಾನದಲ್ಲಿದ್ದ ಕಂಬವೊಂದಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಸುಳ್ಯ ಆಲೆಟ್ಟಿ ನಿವಾಸಿಗಳಾದ ಹಾಶಿರ್ (28) ಮತ್ತು ಸಂಶುದ್ದೀನ್ (25) ಎಂದು ತಿಳಿದುಬಂದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಲು ಸ್ಥಳಕ್ಕೆ ತಂದಿದ್ದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಜೊತೆಗೆ 62 ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ ಕಲಂ 7 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪರಾಧ
Madikeri-ಗಾಂಜಾ ಸೇವಿಸಿದವನಿಗೆ ವಿಭಿನ್ನ ಶಿಕ್ಷೆ: ದಿನವಿಡೀ ಟ್ರಾಫಿಕ್ ಕರ್ತವ್ಯ ನಿರ್ವಹಿಸಿದ ಆರೋಪಿ
ಗಾಂಜಾ ಸೇವನೆ ಪ್ರಕರಣದಲ್ಲಿ ನ್ಯಾಯಾಲಯ ವಿಧಿಸಿದ ಶಿಕ್ಷೆಯ ಭಾಗವಾಗಿ ಆರೋಪಿಯೊಬ್ಬರು ಪೊಲೀಸರೊಂದಿಗೆ ಕೈಜೋಡಿಸಿ ಸಾರ್ವಜನಿಕರ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿದ ಅಪರೂಪದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸಿದ್ದಾಪುರ ಪಟ್ಟಣದಲ್ಲಿ ನಡೆದಿದೆ.
ಮಡಿಕೇರಿ, ನ.17: ಗಾಂಜಾ ಸೇವನೆ ಪ್ರಕರಣದಲ್ಲಿ ನ್ಯಾಯಾಲಯ ವಿಧಿಸಿದ ಶಿಕ್ಷೆಯ ಭಾಗವಾಗಿ ಆರೋಪಿಯೊಬ್ಬರು ಪೊಲೀಸರೊಂದಿಗೆ ಕೈಜೋಡಿಸಿ ಸಾರ್ವಜನಿಕರ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿದ ಅಪರೂಪದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸಿದ್ದಾಪುರ ಪಟ್ಟಣದಲ್ಲಿ ನಡೆದಿದೆ.
ಗಾಂಜಾ ಸೇವನೆ ಮಾಡಿದ ಆರೋಪದಡಿ ಸಿದ್ದಾಪುರ ನಿವಾಸಿ ಆಸೀಮ್ ಎಂಬಾತನಿಗೆ ನ್ಯಾಯಾಲಯ ₹5,000 ದಂಡ ವಿಧಿಸಿತ್ತು. ಇದರೊಂದಿಗೆ ಸಮುದಾಯ ಸೇವೆಯನ್ನೂ ಶಿಕ್ಷೆಯ ಭಾಗವಾಗಿ ನೀಡುವಂತೆ ಆದೇಶಿಸಿತ್ತು.
ದಿನವಿಡೀ ಸಂಚಾರ ನಿಯಂತ್ರಣ ಕರ್ತವ್ಯ
ನ್ಯಾಯಾಲಯದ ಆದೇಶದಂತೆ ನವೆಂಬರ್ 15ರಂದು ಆಸೀಮ್ ಸಿದ್ದಾಪುರ ಪಟ್ಟಣದಲ್ಲಿ ಪೊಲೀಸರ ಮೇಲ್ವಿಚಾರಣೆಯಲ್ಲಿ ಸಂಚಾರ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದರ ಜೊತೆಗೆ ಪಾದಚಾರಿಗಳ ಸಂಚಾರವನ್ನೂ ನಿಯಂತ್ರಿಸಿ ದಿನವಿಡೀ ಕರ್ತವ್ಯ ನಿರ್ವಹಿಸುವ ಮೂಲಕ ನ್ಯಾಯಾಲಯ ವಿಧಿಸಿದ್ದ ಸಮುದಾಯ ಸೇವೆಯ ಶಿಕ್ಷೆಯನ್ನು ಪೂರ್ಣಗೊಳಿಸಿದರು.
ಸಾಮಾಜಿಕ ಜವಾಬ್ದಾರಿ ಮೂಡಿಸುವ ಉದ್ದೇಶ
ಅಪರಾಧಿಗಳಿಗೆ ಕೇವಲ ದಂಡ ಅಥವಾ ಜೈಲು ಶಿಕ್ಷೆ ವಿಧಿಸುವ ಬದಲು, ಸಾರ್ವಜನಿಕ ಸೇವೆಯಲ್ಲಿ ತೊಡಗಿಸುವ ಮೂಲಕ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ತಮ್ಮ ತಪ್ಪಿನ ಅರಿವು ಮೂಡಿಸುವ ಉದ್ದೇಶದಿಂದ ನ್ಯಾಯಾಲಯ ಇಂತಹ ವಿಭಿನ್ನ ಶಿಕ್ಷೆಯನ್ನು ವಿಧಿಸಿದೆ.
ಇದೇ ವರ್ಷದ ಮಾರ್ಚ್ನಲ್ಲಿ ಕಡೂರು ಉಪವಿಭಾಗದಲ್ಲಿ ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ್ದ ವ್ಯಕ್ತಿಯೊಬ್ಬರಿಗೆ ರಸ್ತೆ ಬದಿಯಲ್ಲಿ ನಿಂತು ಸಂಚಾರ ನಿಯಮಗಳ ಜಾಗೃತಿ ಫಲಕ ಹಿಡಿಯುವಂತೆ ನ್ಯಾಯಾಲಯ ಆದೇಶಿಸಿತ್ತು.
ಸಿದ್ದಾಪುರದಲ್ಲಿ ಜಾರಿಗೊಂಡಿರುವ ಈ ವಿಭಿನ್ನ ಶಿಕ್ಷೆಯ ಮಾದರಿ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದ್ದು, ಅಪರಾಧಿಗಳಿಗೆ ಪಾಠ ಕಲಿಸುವುದರ ಜೊತೆಗೆ ಸಮಾಜಮುಖಿ ಚಿಂತನೆ ಬೆಳೆಸುವ ಪ್ರಯತ್ನವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.
ಅಪರಾಧ
Mangalore-Big Shocking : ಮಂಗಳೂರು: ‘ಕೋಲ್ಡ್ ಪ್ರೆಸ್ಡ್’ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ ಆರೋಪ; ಪ್ರತಿಷ್ಠಿತ ‘ಬೋಳಾಸ್’ ಆಗ್ರೋ ಘಟಕದಿಂದ 1,240 ಕೆ.ಜಿ. ಅಡುಗೆ ಎಣ್ಣೆ ವಶ..!
ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್ಬ್ರಾಂಡಿಂಗ್ ಹಾಗೂ ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ ಆಹಾರೋತ್ಪನ್ನ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ, ನ.17: ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್ಬ್ರಾಂಡಿಂಗ್ ಹಾಗೂ ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ ಆಹಾರೋತ್ಪನ್ನ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 1,240 ಕೆ.ಜಿ. ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ.
ಕಚ್ಚಾ ಎಣ್ಣೆಗೆ ‘ಕೋಲ್ಡ್ ಪ್ರೆಸ್ಡ್’ ಲೇಬಲ್!
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ಘಟಕದಲ್ಲಿ ಪರಿಶೀಲನೆ ನಡೆಸಿದಾಗ ಲೇಬಲಿಂಗ್ ಹಾಗೂ ಬ್ರಾಂಡಿಂಗ್ ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳು ಕಂಡುಬಂದಿವೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು (Raw Groundnut Oil) ಖರೀದಿಸಿ, ಅದನ್ನು ‘ಕೋಲ್ಡ್ ಪ್ರೆಸ್ಡ್ ಕಡಲೆಕಾಯಿ ಎಣ್ಣೆ’ (Cold Pressed Groundnut Oil) ಎಂಬ ಹೆಸರಿನಲ್ಲಿ ಮರುಪ್ಯಾಕ್ ಮಾಡಲಾಗುತ್ತಿತ್ತು ಎಂಬುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಉತ್ಪನ್ನದ ನೈಜ ಸ್ವರೂಪಕ್ಕೆ ವಿರುದ್ಧವಾಗಿ ಲೇಬಲ್ ಬಳಸುವ ಮೂಲಕ ಗ್ರಾಹಕರನ್ನು ದಾರಿತಪ್ಪಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಪ್ತಿ ಕ್ರಮ ಕೈಗೊಂಡಿದ್ದಾರೆ.
ವಶಪಡಿಸಿಕೊಂಡ ಎಣ್ಣೆಯ ಪ್ರಮಾಣ ಹೀಗಿದೆ:
ಘಟಕದಿಂದ ಒಟ್ಟು 1,240 ಕೆ.ಜಿ. ತೂಕದ ಅಡುಗೆ ಎಣ್ಣೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಅದರ ವಿವರ ಹೀಗಿದೆ:
- ಕಡಲೆಕಾಯಿ ಎಣ್ಣೆ (ಬಾಕ್ಸ್): ತಲಾ 10 ಕೆ.ಜಿ. ತೂಕದ 11 ಬಾಕ್ಸ್ಗಳು.
- ಕಡಲೆಕಾಯಿ ಎಣ್ಣೆ (ಕ್ಯಾನ್): ತಲಾ 35 ಲೀಟರ್ನ 30 ಕ್ಯಾನ್ಗಳು.
- ತೆಂಗಿನ ಎಣ್ಣೆ (ಬಾಕ್ಸ್): ತಲಾ 20 ಕೆ.ಜಿ. ತೂಕದ 4 ಬಾಕ್ಸ್ಗಳು.
- ಮಿಸ್ಬ್ರಾಂಡಿಂಗ್ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆ ವಿರುದ್ಧ ಆಹಾರ ಸುರಕ್ಷತಾ ಇಲಾಖೆ ಕೈಗೊಂಡಿರುವ ಈ ಕ್ರಮವು ಗ್ರಾಹಕರ ಹಿತಾಸಕ್ತಿ ಮತ್ತು ಆಹಾರ ಉತ್ಪನ್ನಗಳ ಗುಣಮಟ್ಟದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
-
ಬಿಗ್ ನ್ಯೂಸ್14 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
ಮಂಗಳೂರು14 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
ಅಂತರ ರಾಜ್ಯ11 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
ಬಿಗ್ ನ್ಯೂಸ್6 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
Uncategorized13 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್14 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ರಾಜಕೀಯ12 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಬಿಗ್ ನ್ಯೂಸ್13 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ















