ಅಂತರ ರಾಜ್ಯ
Bihar-ಸರ್ಕಾರಿ ಯೋಜನೆಯ ವಿಡಿಯೋಗೆ 1ಲಕ್ಷ ವ್ಯೂವ್ಸ್ ಗೆ ರೂ.10000..! ಇನ್ಫ್ಲೂಯೆನ್ಸರ್ ಗಳಿಗೆ ಬಂಪರ್ ಆಫರ್ ಕೊಟ್ಟ ಬಿಹಾರ ಸರ್ಕಾರ
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗುತ್ತಿದೆ. ಇದನ್ನು ಮನಗಂಡಿರುವ ಬಿಹಾರ ಸರ್ಕಾರವು, ತನ್ನ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencers) ಗಳ ಮೊರೆ ಹೋಗಿದೆ. ಇದಕ್ಕಾಗಿ ಸರ್ಕಾರವು ವಿಶೇಷ ಜಾಹೀರಾತು ನೀತಿಯನ್ನು ಜಾರಿಗೊಳಿಸಿದ್ದು, ಕಂಟೆಂಟ್ ಕ್ರಿಯೇಟರ್‌ಗಳು ಒಂದು ವಿಡಿಯೋಗೆ ಗರಿಷ್ಠ 1 ಲಕ್ಷ ರೂಪಾಯಿವರೆಗೆ ಹಣ ಗಳಿಸಬಹುದಾಗಿದೆ.
ನವದೆಹಲಿ/ಪಟ್ನಾ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗುತ್ತಿದೆ. ಇದನ್ನು ಮನಗಂಡಿರುವ ಬಿಹಾರ ಸರ್ಕಾರವು, ತನ್ನ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencers) ಗಳ ಮೊರೆ ಹೋಗಿದೆ. ಇದಕ್ಕಾಗಿ ಸರ್ಕಾರವು ವಿಶೇಷ ಜಾಹೀರಾತು ನೀತಿಯನ್ನು ಜಾರಿಗೊಳಿಸಿದ್ದು, ಕಂಟೆಂಟ್ ಕ್ರಿಯೇಟರ್‌ಗಳು ಒಂದು ವಿಡಿಯೋಗೆ ಗರಿಷ್ಠ 1 ಲಕ್ಷ ರೂಪಾಯಿವರೆಗೆ ಹಣ ಗಳಿಸಬಹುದಾಗಿದೆ.
ಸಂಭಾವನೆ ಹೇಗೆ ನೀಡಲಾಗುತ್ತದೆ?
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಇತ್ತೀಚೆಗೆ ಈ ಹೊಸ ನೀತಿಗೆ ಅನುಮೋದನೆ ನೀಡಿದೆ. ಇದರ ಪ್ರಕಾರ:
ಸರ್ಕಾರದ ಯೋಜನೆಗಳ ಕುರಿತು ವಿಡಿಯೋ ಮಾಡುವ ಕ್ರಿಯೇಟರ್‌ಗಳಿಗೆ ಅವರು ಗಳಿಸುವ ವೀಕ್ಷಣೆಗಳ (Views) ಆಧಾರದ ಮೇಲೆ ಹಣ ನೀಡಲಾಗುತ್ತದೆ.
ಯಾವುದೇ ವಿಡಿಯೋ ಅಪ್‌ಲೋಡ್ ಆದ 30 ದಿನಗಳಲ್ಲಿ 1 ಲಕ್ಷ ವೀಕ್ಷಣೆ ಪಡೆದರೆ, ಕ್ರಿಯೇಟರ್‌ಗೆ 10,000 ರೂಪಾಯಿ ಸಂಭಾವನೆ ಸಿಗಲಿದೆ.
ಒಂದು ವಿಡಿಯೋಗೆ ನೀಡಲಾಗುವ ಗರಿಷ್ಠ ಸಂಭಾವನೆಯನ್ನು 1 ಲಕ್ಷ ರೂಪಾಯಿಗೆ ಮಿತಿಗೊಳಿಸಲಾಗಿದೆ.
ಇನ್ಫ್ಲುಯೆನ್ಸರ್‌ಗಳ ಆಯ್ಕೆ ಏಕೆ?
ಸರ್ಕಾರದ ಇಲಾಖೆಗಳು ಹೊರಡಿಸುವ ಪ್ರಕಟಣೆಗಳು ಹೆಚ್ಚಾಗಿ ತಾಂತ್ರಿಕ ಭಾಷೆಯಲ್ಲಿರುತ್ತವೆ, ಇದು ಸಾಮಾನ್ಯ ಜನರಿಗೆ ಅರ್ಥವಾಗುವುದು ಕಷ್ಟ. ಆದರೆ, ಸೋಶಿಯಲ್ ಮೀಡಿಯಾ ಕ್ರಿಯೇಟರ್‌ಗಳು ಅದೇ ವಿಚಾರವನ್ನು ಅತ್ಯಂತ ಸರಳ ಮತ್ತು ಮನರಂಜನಾತ್ಮಕ ಶೈಲಿಯಲ್ಲಿ ವಿವರಿಸುತ್ತಾರೆ. ವಿಶೇಷವಾಗಿ ಯುವಜನತೆ ಮೊಬೈಲ್ ಫೋನ್‌ಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ, ಈ ಮೂಲಕ ಅಲ್ಪಾವಧಿಯಲ್ಲಿ ಕೋಟ್ಯಂತರ ಜನರನ್ನು ತಲುಪಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
ರಾಜಕೀಯ ಮತ್ತು ಸಂವಹನ:
ಬಿಹಾರದ ಬಿಜೆಪಿಯ ಮೊದಲ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇವಲ ಟಿವಿ, ರೇಡಿಯೋ ಮತ್ತು ಪತ್ರಿಕೆಗಳಿಗೆ ಸೀಮಿತವಾಗಿದ್ದ ಸರ್ಕಾರಿ ಪ್ರಚಾರ ಈಗ ಸ್ಮಾರ್ಟ್‌ಫೋನ್ ಪರದೆಗಳಿಗೆ ವಿಸ್ತರಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅಧಿಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ.
ಅಂತರ ರಾಜ್ಯ
ECI-ಮುಖ್ಯ ಚುನಾವಣ ಆಯುಕ್ತ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ‘ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಅಭಿಯಾನ’…! 20 ರಾಜ್ಯಗಳಲ್ಲಿ ಕೈಬಿಟ್ಟ 13 ಕೋಟಿ ಮತದಾರರ ಮರುಸೇರ್ಪಡೆಗೆ ಆಯೋಗ ಅವಕಾಶ
ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಮರುಸೇರ್ಪಡೆ ಮಾಡಲು, ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ಸಮಗ್ರ ಪರಿಶೀಲನಾ ಅಭಿಯಾನಕ್ಕೆ ಆದೇಶಿಸಿದೆ.
ಹೊಸದಿಲ್ಲಿ: ಮುಖ್ಯ ಚುನಾವಣ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ನಾಗರಿಕರನ್ನು ಮರುಸೇರ್ಪಡೆ ಮಾಡಲು, ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ಸಮಗ್ರ ಪರಿಶೀಲನಾ ಅಭಿಯಾನಕ್ಕೆ ಆದೇಶಿಸಿದೆ.
ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರಡು ಪಟ್ಟಿಯಿಂದ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಭಾರಿ ರಾಜಕೀಯ ವಿವಾದ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಈ ತಿದ್ದುಪಡಿ ಕ್ರಮ ಕೈಗೊಳ್ಳಲಾಗಿದೆ.
ನಿನ್ನೆ (ಅ.1-ಗುರುವಾರ) ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ, ಚುನಾವಣಾ ಆಯೋಗವು ಈ ಸ್ಪಷ್ಟ ನಿರ್ದೇಶನ ನೀಡಿದೆ. ಮತದಾರರ ನೋಂದಣಿಯು ನಿರಂತರ ಪ್ರಕ್ರಿಯೆಯಾಗಿದ್ದು, ಎಸ್‌ಐಆರ್ ಅವಧಿಯಲ್ಲಿ ನೋಂದಣಿಯಾಗದ ಕಾರಣಕ್ಕೆ ಯಾವುದೇ ಅರ್ಹ ನಾಗರಿಕನಿಗೆ ಹಕ್ಕು ನಿರಾಕರಿಸಬಾರದು ಎಂದು ಆಯೋಗವು ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಿ ಅಧಿಕಾರಿಗಳಿಗೆ (ERO) ಸೂಚಿಸಿದೆ. ಎಸ್‌ಐಆರ್ ಅಕ್ರಮ ವಿರೋಧಿಸಿ ಸಿಎಂ ಡಿಕೆ ಶಿವಕುಮಾರ್ ಪ್ರತಿಭಟನೆ ನಡೆಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
ಮನೆ-ಮನೆ ಪರಿಶೀಲನೆ ಮತ್ತು ಮರುನೋಂದಣಿ ಪ್ರಕ್ರಿಯೆ:
ಈ ವಿಶೇಷ ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿಗಳು (BLO) ಹಾಲಿ ಮತದಾರರ ಪಟ್ಟಿಯನ್ನು ಎಸ್‌ಐಆರ್ ಪೂರ್ವ ಪಟ್ಟಿಯೊಂದಿಗೆ ಹೋಲಿಸಿ, ಹೆಸರು ಕಾಣೆಯಾಗಿರುವ ಮತದಾರರ ಬೂತ್‌ವಾರು ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಬಿಎಲ್‌ಒಗಳು ಮನೆ-ಮನೆಗೆ ತೆರಳಿ ಮತದಾರರ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲಿಸಲಿದ್ದಾರೆ. ಪ್ರತಿ ಅಧಿಕಾರಿಗೆ ವಾರಕ್ಕೆ ಕನಿಷ್ಠ 20 ರಿಂದ 25 ಮತದಾರರ ಮನೆಗಳಿಗೆ ಭೇಟಿ ನೀಡಿ, ಸುಮಾರು ಒಂದು ತಿಂಗಳೊಳಗೆ ಈ ಕಾರ್ಯ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.
ಅರ್ಹತೆ ಹೊಂದಿರುವ ಮತದಾರರಿಂದ ನಮೂನೆ-6ಪಡೆದು, ಮರುನೋಂದಣಿಗೆ ಅಧಿಕಾರಿಗಳು ನೆರವಾಗಲಿದ್ದಾರೆ. ಪರಿಶೀಲನೆ ವೇಳೆ ಮೊದಲ ಬಾರಿಗೆ ಮತ ಚಲಾಯಿಸಲಿರುವವರು, ಯುವ ಮತದಾರರು ಹಾಗೂ ಅಂಚಿನಲ್ಲಿರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ನೋಂದಣಿ ಮಾಡಿಕೊಳ್ಳಲಾಗುತ್ತದೆ.
ಅಂಚಿನ ಸಮುದಾಯಗಳಿಗೆ ಆದ್ಯತೆ:
ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಬಿಎಲ್‌ಒಗಳು ಸಿದ್ಧಪಡಿಸಿದ ಪಟ್ಟಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಸ್ವೀಕೃತವಾದ ಅರ್ಜಿಗಳನ್ನು ಜನಪ್ರತಿನಿಧಿ ಕಾಯ್ದೆ-1950 ಹಾಗೂ ಮತದಾರರ ನೋಂದಣಿ ನಿಯಮಗಳು-1960ರ ಅಡಿಯಲ್ಲಿ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಇದರ ಜೊತೆಗೆ, ರಾತ್ರಿ ಆಶ್ರಯ ಕೇಂದ್ರಗಳು, ಕಾರ್ಮಿಕರ ವಸತಿ ಪ್ರದೇಶಗಳು ಹಾಗೂ ನಿರಾಶ್ರಿತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ವಿಶೇಷ ನೋಂದಣಿ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ‘ಸ್ವೀಪ್’ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ಸಾಗಲಿದೆ.
ವಿವಾದ ಮತ್ತು ರಾಜಕೀಯ ಸಂಘರ್ಷ:
ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಅರ್ಹ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದವು. ಅಂಕಿ-ಅಂಶಗಳ ಪ್ರಕಾರ, ಎಸ್‌ಐಆರ್ ಬಳಿಕ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಒಟ್ಟಾರೆ ಶೇ.10.2ರಷ್ಟು ಕಡಿತ ಕಂಡುಬಂದಿದ್ದು, ಇದರಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಮೃತ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಚುನಾವಣಾ ಆಯೋಗದ ಆಂತರಿಕ ನಿರ್ಧಾರಗಳ ಕುರಿತು ಭಿನ್ನಾಭಿಪ್ರಾಯ ಎಂಬ ವರದಿಗಳು ಹರಿದಾಡಿದ್ದರೂ, ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಪ್ರಸ್ತುತ ಆರಂಭವಾಗಿರುವ ಈ ವಿಶೇಷ ಅಭಿಯಾನವು ಪಟ್ಟಿಯಿಂದ ಹೊರಬಿದ್ದ ಅರ್ಹ ಮತದಾರರಿಗೆ ತಮ್ಮ ಸಾಂವಿಧಾನಿಕ ಹಕ್ಕನ್ನು ಮರಳಿ ಪಡೆಯಲು ಮಹತ್ವದ ಅವಕಾಶ ಕಲ್ಪಿಸಿದೆ.
ಅಂತರ ರಾಜ್ಯ
Jantar Mantar-ಜಂತರ್ ಮಂತರ್ ಪ್ರತಿಭಟನೆ: 500ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲು ಮುಂದಾದ ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲು ಮುಂದಾದ ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಲು ಜಂತರ್ ಮಂತರ್‌ನತ್ತ ತೆರಳುತ್ತಿದ್ದ ಎಎಪಿ ನಾಯಕರಾದ ಅತಿಶಿ, ಸೌರಭ್ ಭಾರದ್ವಾಜ್, ಸಂಜೀವ್ ಝಾ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಸೌರಭ್ ಭಾರದ್ವಾಜ್, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ತಮ್ಮನ್ನು ಪೊಲೀಸರು ತಡೆದಿರುವುದು ಅಪ್ರಜಾಸತ್ತಾತ್ಮಕ ಕ್ರಮ ಎಂದು ಆರೋಪಿಸಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಖಂಡಿಸಿ ಎಎಪಿ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (SFI) ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಜಂಟಿಯಾಗಿ ಪ್ರತಿಭಟನೆಗೆ ಕರೆ ನೀಡಿದ್ದವು.
ಅಶೋಕ ರಸ್ತೆಯ ಮೂಲಕ ಜಂತರ್ ಮಂತರ್‌ಗೆ ತೆರಳಲು ಯತ್ನಿಸಿದ ಎಸ್‌ಎಫ್‌ಐನ ಸುಮಾರು 700ಕ್ಕೂ ಹೆಚ್ಚು ಸದಸ್ಯರನ್ನು ಪೊಲೀಸರು ಮಾರ್ಗಮಧ್ಯೆಯೇ ತಡೆದಿದ್ದಾರೆ. ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಐಶೆ ಘೋಷ್ ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಫಿರೋಜ್ ಶಾ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ಯತ್ನಿಸಿದ ಎನ್‌ಎಸ್‌ಯುಐ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಗೆ ಯಾವುದೇ ಪೂರ್ವಾನುಮತಿ ಪಡೆಯಲಾಗಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಭದ್ರತಾ ದೃಷ್ಟಿಯಿಂದ ಪ್ರತಿಭಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (DMRC) ದೆಹಲಿ ವ್ಯಾಪ್ತಿಯ 11 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಂದಿನ ಆದೇಶದವರೆಗೆ ಮುಚ್ಚಿದೆ.
ಅಂತರ ರಾಜ್ಯ
Jantar Mantar-ಪ್ರತಿಭಟನೆಯ ಹಿನ್ನೆಲೆ ಜಂತರ್ ಮಂತರ್‌ನಲ್ಲಿ ಇಂಟರ್‌ನೆಟ್ ಸ್ಥಗಿತ: ‘ಸರ್ವಾಧಿಕಾರಿ ನಿಜಕ್ಕೂ ಭಯಭೀತಗೊಂಡಿದ್ದಾರೆ’-ದೀಪ್ಕೆ
ದೆಹಲಿ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ‘ಸರ್ವಾಧಿಕಾರಿ ನಿಜಕ್ಕೂ ಭಯಭೀತಗೊಂಡಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ನವದೆಹಲಿ: ದೆಹಲಿ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ‘ಸರ್ವಾಧಿಕಾರಿ ನಿಜಕ್ಕೂ ಭಯಭೀತಗೊಂಡಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿಯ 12 ಮೆಟ್ರೊ ನಿಲ್ದಾಣಗಳಲ್ಲಿ ಪ್ರವೇಶ ನಿರ್ಬಂಧ:
ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ವಿದ್ಯಾರ್ಥಿ ಸಂಘಟನೆಗಳು ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಸೇರಿದಂತೆ ದೆಹಲಿಯ ಪ್ರಮುಖ 12 ಮೆಟ್ರೊ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ತಾತ್ಕಾಲಿಕವಾಗಿ ಮುಚ್ಚಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮುಂದಿನ ಆದೇಶದವರೆಗೆ ಜನಪಥ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ರಾಜೀವ್ ಚೌಕ್, ಬಾರಾಖಂಬಾ, ಸೇವಾ ತೀರ್ಥ, ಮಂಡಿ ಹೌಸ್, ಲೋಕ ಕಲ್ಯಾಣ ಮಾರ್ಗ, ಐಎನ್‌ಎ, ಚಾವಿ ಬಜಾರ್, ರಾಮಕೃಷ್ಣ ಆಶ್ರಮ ಮಾರ್ಗ ಹಾಗೂ ನವದೆಹಲಿ ಮೆಟ್ರೊ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದೆ ಎಂದು ಡಿಎಂಆರ್‌ಸಿ ‘ಎಕ್ಸ್’ನಲ್ಲಿ ತಿಳಿಸಿದೆ.
ಎಎಪಿ ಜತೆಗೆ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ), ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
-
ಪುತ್ತೂರು16 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಬಿಗ್ ನ್ಯೂಸ್19 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಮಂಗಳೂರು19 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
Uncategorized24 hours agoಅ.6: ಮಂಗಳೂರಿನ ಪುರಭವನದಲ್ಲಿ ‘ಲವ್ ಜಿಹಾದ್ ಮತ್ತು ಮತಾಂತರ: ಪ್ರಚಾರ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ
-
ಅಂತರ ರಾಜ್ಯ22 hours agoECI-ಮುಖ್ಯ ಚುನಾವಣ ಆಯುಕ್ತ ವಿರುದ್ಧ ದೇಶಾದ್ಯಂತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ‘ಬಿಟ್ಟು ಹೋದವರ ಹೆಸರು ಸೇರ್ಪಡೆಗೆ ಅಭಿಯಾನ’…! 20 ರಾಜ್ಯಗಳಲ್ಲಿ ಕೈಬಿಟ್ಟ 13 ಕೋಟಿ ಮತದಾರರ ಮರುಸೇರ್ಪಡೆಗೆ ಆಯೋಗ ಅವಕಾಶ
-
ಬಿಗ್ ನ್ಯೂಸ್18 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ರಾಜ್ಯ21 hours agoTemperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!
-
ಶಿಕ್ಷಣ18 hours agoSpecial classes: ಮಳೆ ರಜೆ ಹೊಂದಾಣಿಕೆ: ಅ.3ರಿಂದ ಅ.7ರವರೆಗೆ ದಸರಾ ರಜೆಯಲ್ಲೂ ವಿಶೇಷ ತರಗತಿ


















