Connect with us

ರಾಜಕೀಯ

B.K. Hariprasad-ಕೆಪಿಸಿಸಿ ಸಾರಥ್ಯ ವಹಿಸಿದ ಬಿ.ಕೆ. ಹರಿಪ್ರಸಾದ್; ಸಿದ್ದರಾಮಯ್ಯ ನೀಡಿದ ‘ಡಬಲ್ ಟಾಸ್ಕ್’ ಏನು?

Published

on



Ad Widget

Ad Widget

Ad Widget

Ad Widget

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅವರು ಭಾನುವಾರ ಅದ್ದೂರಿಯಾಗಿ ಪದಗ್ರಹಣ ಮಾಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಧ್ವಜವನ್ನು ಹಸ್ತಾಂತರಿಸುವ ಮೂಲಕ ಹರಿಪ್ರಸಾದ್ ಅವರಿಗೆ ಜವಾಬ್ದಾರಿ ನೀಡಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ನೂತನ ಅಧ್ಯಕ್ಷರಿಗೆ ಎರಡು ಪ್ರಮುಖ ಟಾಸ್ಕ್ ಗಳನ್ನು ನೀಡಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅವರು ಭಾನುವಾರ ಅದ್ದೂರಿಯಾಗಿ ಪದಗ್ರಹಣ ಮಾಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಧ್ವಜವನ್ನು ಹಸ್ತಾಂತರಿಸುವ ಮೂಲಕ ಹರಿಪ್ರಸಾದ್ ಅವರಿಗೆ ಜವಾಬ್ದಾರಿ ನೀಡಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ನೂತನ ಅಧ್ಯಕ್ಷರಿಗೆ ಎರಡು ಪ್ರಮುಖ ಟಾಸ್ಕ್ ಗಳನ್ನು ನೀಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಸಿದ್ದರಾಮಯ್ಯ ನೀಡಿದ ಆ ಎರಡು ‘ಬಿಗ್ ಟಾಸ್ಕ್’ಗಳು:
2028ರ ವಿಧಾನಸಭಾ ಚುನಾವಣೆ: ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು.
2029ರ ಲೋಕಸಭಾ ಚುನಾವಣೆ: ದೇಶದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವಂತೆ ಮಾಡಿ, ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಸ್ಥಾನದಲ್ಲಿ ಕೂರಿಸುವುದು.

Ad Widget

Ad Widget <> Ad Widget

ಡಿಕೆಶಿ ಶ್ರಮಕ್ಕೆ ಮೆಚ್ಚುಗೆ:
ಇಲ್ಲಿಯವರೆಗೆ ಅಧ್ಯಕ್ಷರಾಗಿ ಅಪ್ರತಿಮ ಸೇವೆ ಸಲ್ಲಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದರು. “2023ರ ಚುನಾವಣೆಯಲ್ಲಿ ನಾವು 136 ಸ್ಥಾನಗಳನ್ನು ಗೆಲ್ಲಲು ಶಿವಕುಮಾರ್ ಮತ್ತು ನಾನು ಒಟ್ಟಾಗಿ ಕೆಲಸ ಮಾಡಿದ್ದೇವೆ. ನನ್ನ ಪ್ರಯತ್ನಗಳಿಗೆ ಅವರು ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದಾರೆ. ಇದು ಕೇವಲ ನಮ್ಮಿಬ್ಬರ ಗೆಲುವಲ್ಲ, ಕಾರ್ಯಕರ್ತರ ಶ್ರಮದ ಫಲ” ಎಂದು ನೆನೆದರು.



Ad Widget

ಗ್ಯಾರಂಟಿ ಯೋಜನೆಗಳ ಯಶಸ್ಸು:
ಪಕ್ಷದ ಸಾಧನೆಯ ಬಗ್ಗೆ ಮಾತನಾಡಿದ ಅವರು, “ನಾವು ಪ್ರಣಾಳಿಕೆಯಲ್ಲಿ ನೀಡಿದ್ದ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆಗಳಿಗಾಗಿ ಸುಮಾರು 1.40 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ನುಡಿದಂತೆ ನಡೆದಿದ್ದೇವೆ” ಎಂದು ತಿಳಿಸಿದರು.

Ad Widget

Ad Widget

ನೂತನ ಅಧ್ಯಕ್ಷರ ಮೇಲೆ ವಿಶ್ವಾಸ:
ಬಿ.ಕೆ. ಹರಿಪ್ರಸಾದ್ ಅವರ ಸಿದ್ಧಾಂತ ಬದ್ಧತೆಯನ್ನು ಶ್ಲಾಘಿಸಿದ ಸಿದ್ದರಾಮಯ್ಯ, “ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಮೂಲ ಸಿದ್ಧಾಂತ ಮತ್ತು ಸಂವಿಧಾನದ ಆಶಯಗಳ ಮೇಲೆ ಅಪಾರ ನಂಬಿಕೆಯಿದೆ. ಅವರು ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ, ಶಿಬಿರಗಳ ಮೂಲಕ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರಿಗೆ ನನ್ನ ಸಂಪೂರ್ಣ ಸಹಕಾರವಿರುತ್ತದೆ” ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಹರಿಪ್ರಸಾದ್‌ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ವೇಣುಗೋಪಾಲ್‌, ರಣ್‌ದೀಪ್‌ ಸಿಂಗ್‌ ಸುರ್ಜೇವಾಲ ಅವರಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ನೂತನ ಅಧ್ಯಕ್ಷರ ಬೆನ್ನಿಗೆ ನಿಂತು ಪಕ್ಷವನ್ನು ಬಲಪಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

Ad Widget
Click to comment

Leave a Reply

ಸ್ಥಳೀಯ

Mysuru-ಮೈಸೂರು ಕಂಬಳಕ್ಕೆ ಆಗಮಿಸಲಿರುವ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆ ವ್ಯವಸ್ಥೆ – ಶಾಸಕರಾದ ಅಶೋಕ್ ರೈ ಮಂಥರ್ ಗೌಡ ನೇತೃತ್ವದಲ್ಲಿ ಸಭೆ

Published

on



Ad Widget

Ad Widget

Ad Widget

Ad Widget

ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

Ad Widget

Ad Widget

Ad Widget

Ad Widget

ಕುಶಾಲನಗರ: ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯು ಮೈಸೂರು ಕಂಬಳದ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಡಿಕೇರಿ ಶಾಸಕ ಮಂಥರ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು.

Ad Widget

Ad Widget <> Ad Widget

ಕಂಬಳ ಕೋಣಗಳಿಗೆ ಪ್ರಯಾಣದ ಬಳಿಕ ವಿಶ್ರಾಂತಿ, ಆರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.



Ad Widget

ಸಭೆಯಲ್ಲಿ ರಾಜ್ಯ ಕಂಬಳ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಗೂ ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Ad Widget

Ad Widget

ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಮೈಸೂರಿನಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ವಿವಿಧ ಭಾಗಗಳಿಂದ ಕಂಬಳ ಕೋಣಗಳು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

Ad Widget
Continue Reading

ರಾಜಕೀಯ

U.T. Khader-₹86ರ ಔಷಧಕ್ಕೆ ₹4,528; ಆಸ್ಪತ್ರೆಗಳಲ್ಲಿ ದುಬಾರಿ ದರಕ್ಕೆ ಔಷಧಗಳ ಮಾರಾಟ – ಆಸ್ಪತ್ರೆಗಳಲ್ಲಿ ಲ್ಯಾಂಡಿಂಗ್ ಮತ್ತು ಮಾರಾಟ ದರ ಪಟ್ಟಿ ಪ್ರಕಟಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು : ಯು.ಟಿ ಖಾದರ್

Published

on



Ad Widget

Ad Widget

Ad Widget

Ad Widget

ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್‌ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್‌ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬರೊಬ್ಬರಿ ಶೇ.5000 ರಷ್ಟು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಕಿ-ಅಂಶಗಳನ್ನು ಆರೋಗ್ಯ ಸಚಿವ ಯು.ಟಿ. ಖಾದರ್‌ ಬಿಚ್ಚಿಟ್ಟಿದ್ದಾರೆ

Ad Widget

Ad Widget <> Ad Widget

ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಅಧಿಕಾರಿಗಳು ವಿವಿಧ ಆಸ್ಪತ್ರೆಗಳಲ್ಲಿ ನಡೆಸಿದ ಪರಿಶೀಲನೆ ವೇಳೆ ಔಷಧಗಳನ್ನು ಲ್ಯಾಂಡಿಂಗ್ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



Ad Widget

ಪ್ರತಿ ಆಸ್ಪತ್ರೆ, ಫಾರ್ಮಾಸಿಗಳು ಔಷಧಗಳ ಲ್ಯಾಂಡಿಂಗ್ ದರ ಹಾಗೂ ಮಾರಾಟ ದರವನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ಬಹಿರಂಗ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು. ದರ ನಿಯಂತ್ರಿಸಲು ರಾಜ್ಯಕ್ಕೆ ಅಧಿಕಾರ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

Ad Widget

Ad Widget

ಅಜಗಜಾಂತರ ವ್ಯತ್ಯಾಸ (ರೂಗಳಲ್ಲಿ)
ಔಷಧ- ಲ್ಯಾಂಡಿಂಗ್ ದರ – ಎಂಆರ್‌ಪಿ

ಗುಫೋಲ್-86- 4,528
ಗುಫಿಸೈಕ್ಲೈನ್-50 ಇಂಜೆಕ್ಷನ್ – 160-7,110
ಟೆರ್ಲಿಟಿಸ್-118-4,416
ಟ್ಯಾಕ್ಸೋಕೇರ್-120 ಎಂಜಿ-1,000-21,617
ಕ್ಯಾನ್‌ಮ್ಯಾಬ್ 440 ಎಂಜಿ-6,600-57,457
ಬೆವಾಟಸ್ 400 ಎಂಜಿ-5,850-62,690
ಸೈಟ್ಯಾಕ್ಸ್ 100 (ಕ್ಯಾನ್ಸರ್ ಔಷಧ)-342-3,836
ನೆಬ್ಯುಲೈಸರ್ ಮಾಸ್ಕ್-44.50-950
ಐವಿಸೆಟ್-14.75-295
ಪಾಲಿಸೇಫಿಟಿ ಪಿಆರ್‌ಒ ಕ್ಯಾನುಲಾ-33.21-548

Ad Widget
Continue Reading

ಅಂತರ ರಾಜ್ಯ

Shivraj Singh Chauhan-ಕರ್ನಾಟಕ ಸೇರಿ 5 ರಾಜ್ಯಗಳು ಬರಪೀಡಿತವೆಂದು ಘೋಷಣೆ : ಅ.3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ ಭೇಟಿ – ಶಿವರಾಜ್ ಸಿಂಗ್ ಚೌಹಾಣ್

Published

on



Ad Widget

Ad Widget

Ad Widget

Ad Widget

ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಹೊಸದಿಲ್ಲಿಯಲ್ಲಿ ನಡೆದ ‘ರಬಿ (ಹಿಂಗಾರು ಬೆಳೆ) 2026-27’ ರಾಷ್ಟ್ರೀಯ ಕೃಷಿ ಸಮ್ಮೇಳನದ ವೇಳೆ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕೆಲವು ಭಾಗಗಳು ಹಾಗೂ ರಾಜಸ್ಥಾನದ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದರು.

Ad Widget

Ad Widget <> Ad Widget

ಕರ್ನಾಟಕ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ತಂಡವು ಅಕ್ಟೋಬರ್ 3ರಂದು ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಚೌಹಾಣ್ ತಿಳಿಸಿದರು.



Ad Widget

ದೇಶದ ಇತರ ಭಾಗಗಳಲ್ಲಿನ ಬರ ಪರಿಸ್ಥಿತಿಯನ್ನೂ ಶೀಘ್ರದಲ್ಲೇ ಪರಿಶೀಲಿಸಲಾಗುವುದು. ಬರಪೀಡಿತ ಪ್ರದೇಶಗಳಿಗೆ ತಾವು ವೈಯಕ್ತಿಕವಾಗಿ ಭೇಟಿ ನೀಡುವುದರ ಜೊತೆಗೆ, ಆಯಾ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವರು ಹೇಳಿದರು.

Ad Widget

Ad Widget

ರೈತರಿಗೆ ನೆರವಿನ ಭರವಸೆ
ಬರ ಪರಿಸ್ಥಿತಿಯ ನಡುವೆಯೂ ಕೃಷಿ ಚಟುವಟಿಕೆ ಮುಂದುವರಿಸುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಚೌಹಾಣ್ ಭರವಸೆ ನೀಡಿದರು. ಕೃಷಿಭೂಮಿ ಪಾಳು ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ತಕ್ಷಣದ ಉದ್ದೇಶವಾಗಿದೆ ಎಂದರು.

ನೀರಿನ ಲಭ್ಯತೆ ಹಾಗೂ ಮಣ್ಣಿನ ತೇವಾಂಶಕ್ಕೆ ಅನುಗುಣವಾಗಿ ಬೆಳೆ ಆಯ್ಕೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದ್ದು, ಕಡಿಮೆ ನೀರು ಅಗತ್ಯವಿರುವ ಬೆಳೆಗಳು ಹಾಗೂ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ತಳಿಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ.

ಶೇ.12.3ರಷ್ಟು ಮಳೆ ಕೊರತೆ
ಎಲ್‌ನೀನೊ ಪರಿಣಾಮ ಸೇರಿದಂತೆ ಹವಾಮಾನ ವೈಪರೀತ್ಯಗಳಿಂದಾಗಿ ದೇಶದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಮುಂಗಾರು ಋತುವಿನ ಅಂತ್ಯದ ವೇಳೆಗೆ ದೇಶದಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇ.12.3ರಷ್ಟು ಮಳೆ ಕಡಿಮೆಯಾಗಿದೆ ಎಂದು ಸಚಿವರು ತಿಳಿಸಿದರು.

ಮಳೆ ಕೊರತೆಯ ಪರಿಣಾಮ 2026-27ರ ಖಾರಿಫ್‌ ಬೆಳೆಗಳ ಒಟ್ಟು ಬಿತ್ತನೆ ಪ್ರದೇಶದಲ್ಲಿ ಸುಮಾರು ಶೇ.1ರಷ್ಟು ಇಳಿಕೆ ಕಂಡುಬಂದಿದೆ. ಭತ್ತದ ಬಿತ್ತನೆ ಪ್ರದೇಶದಲ್ಲಿ 16.32 ಲಕ್ಷ ಹೆಕ್ಟೇರ್‌ಗಳಷ್ಟು ಇಳಿಕೆಯಾಗಿದ್ದು, ಜೋಳ, ಸೋಯಾಬೀನ್ ಮತ್ತು ಹತ್ತಿ ಬೆಳೆಗಳ ವಿಸ್ತೀರ್ಣದಲ್ಲೂ ಕುಸಿತವಾಗಿದೆ.

ಇದಕ್ಕೆ ವಿರುದ್ಧವಾಗಿ ಉದ್ದು, ಬಾಜ್ರಾ, ಜೋಳ, ಎಳ್ಳು, ಸೂರ್ಯಕಾಂತಿ, ಹೆಸರು ಮತ್ತು ತೊಗರಿ ಸೇರಿದಂತೆ ಕೆಲವು ದ್ವಿದಳ ಧಾನ್ಯಗಳು ಹಾಗೂ ಸಿರಿಧಾನ್ಯಗಳ ಬಿತ್ತನೆ ಪ್ರದೇಶದಲ್ಲಿ ಏರಿಕೆ ಕಂಡುಬಂದಿದೆ.

ಕೇಂದ್ರ ಸರ್ಕಾರವು ರಬಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬೀಜಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದು, ಬರಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಯೋಜನೆ ರೂಪಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading