Connect with us

ರಾಜಕೀಯ

Kharge challenges RSS-ಆರ್‌ಎಸ್‌ಎಸ್‌ ಕಚೇರಿಗೆ ಬರಲು ಸಿದ್ಧ, ಆದರೆ ನನ್ನ 7 ಪ್ರಶ್ನೆಗಳಿಗೆ ಉತ್ತರಿಸಿ: ಉಡಾಫೆ ಮಾತುಗಳನ್ನು ಬಿಟ್ಟು ದಾಖಲೆ ತೋರಿಸಿ : ದೆಹಲಿ ಪತ್ರಿಕಾಗೋಷ್ಠಿಯಲ್ಲಿ RSSಗೆ ಗೃಹ ಸಚಿವ ಖರ್ಗೆ ಸವಾಲು

Published

on



Ad Widget

Ad Widget

Ad Widget

Ad Widget

ಆರ್‌ಎಸ್‌ಎಸ್‌ (RSS) ಸಂಘಟನೆಯ ನೋಂದಣಿ, ಆದಾಯದ ಮೂಲ ಮತ್ತು ತೆರಿಗೆ ಪಾವತಿಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಂಘಟನೆಯು ಉಡಾಫೆಯ ಮಾತುಗಳನ್ನು ಬಿಟ್ಟು ಅಧಿಕೃತ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. “ನಾನು ಆರ್‌ಎಸ್‌ಎಸ್‌ ಕಚೇರಿಗಳಾದ ಕೇಶವಕೃಪ ಅಥವಾ ಜಗನ್ನಾಥ ಭವನಕ್ಕೆ ಎಲ್ಲಿಗೆ ಬೇಕಾದರೂ ಬರಲು ಸಿದ್ಧ. ಆದರೆ, ಅದಕ್ಕೂ ಮೊದಲು ನಾನು ಕೇಳಿರುವ ಏಳು ಪ್ರಶ್ನೆಗಳಿಗೆ ಸಂಘಟನೆ ಉತ್ತರಿಸಲಿ” ಎಂದು ಅವರು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಬೆಂಗಳೂರು/ನವದೆಹಲಿ: ಆರ್‌ಎಸ್‌ಎಸ್‌ (RSS) ಸಂಘಟನೆಯ ನೋಂದಣಿ, ಆದಾಯದ ಮೂಲ ಮತ್ತು ತೆರಿಗೆ ಪಾವತಿಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯು ಉಡಾಫೆಯ ಮಾತುಗಳನ್ನು ಬಿಟ್ಟು ಅಧಿಕೃತ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. “ನಾನು ಆರ್‌ಎಸ್‌ಎಸ್‌ ಕಚೇರಿಗಳಾದ ಕೇಶವಕೃಪ ಅಥವಾ ಜಗನ್ನಾಥ ಭವನಕ್ಕೆ ಎಲ್ಲಿಗೆ ಬೇಕಾದರೂ ಬರಲು ಸಿದ್ಧ. ಆದರೆ, ಅದಕ್ಕೂ ಮೊದಲು ನಾನು ಕೇಳಿರುವ ಏಳು ಪ್ರಶ್ನೆಗಳಿಗೆ ಸಂಘಟನೆ ಉತ್ತರಿಸಲಿ” ಎಂದು ಅವರು ಹೇಳಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

‘ರಾಜ್ಯದಲ್ಲಿ ಒಟ್ಟು 20 ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂಬ ಮಾಹಿತಿ ಅಖಿಲ ಭಾರತೀಯ ಪ್ರತಿನಿಧಿ ಸಭಾದ ವಾರ್ಷಿಕ ವರದಿಯಲ್ಲಿ ಇದೆ. ಅಷ್ಟು ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸುವವರ ವಿವರಗಳನ್ನು ಕೇಳಬಾರದೇ’ ಎಂದು ಪ್ರಶ್ನಿಸಿದರು.

Ad Widget

Ad Widget <> Ad Widget

‘ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ದೇಶದ ಜನರನ್ನು, ‘ಕಾಗದ ತೋರಿಸಿ’ ಎಂದು ಕೇಳುತ್ತಿದ್ದರು. ಈಗ ಆರ್‌ಎಸ್‌ಎಸ್‌ನ ಕಾಗದ ತೋರಿಸಿ ಎಂದು ಕೇಳಿದಾಕ್ಷಣ, ಓಡಿಹೋಗುತ್ತಿದ್ದಾರೆ. ದೇಶದ ಜನರಿಗೆ ನಿಮ್ಮ ಕಾಗದಗಳನ್ನು ತೋರಿಸಿ’ ಎಂದು ಆಗ್ರಹಿಸಿದರು.



Ad Widget

‘ನೋಂದಣಿ ಮತ್ತಿತರ ದಾಖಲೆ ಪತ್ರಗಳನ್ನು ಕೇಳಿದಾಕ್ಷಣ ನನ್ನ ಮೇಲೆ ದಾಳಿ ನಡೆಸಲು ಆರ್‌ಎಸ್‌ಎಸ್ ತನ್ನ ಆಳು ಮಕ್ಕಳಾದ ಬಿಜೆಪಿ ನಾಯಕರನ್ನು ನಿಯೋಜಿಸಿದೆ. ನನ್ನ ಬಾಯಿ ಮುಚ್ಚಿಸಬೇಕು ಎಂದರೆ, ಈ ದಾಖಲೆ ಪತ್ರಗಳನ್ನು ತೋರಿಸಿಬಿಡಿ. ನಾನಾಗೇ ಬಾಯಿ ಮುಚ್ಚಿಕೊಳ್ಳುತ್ತೇನಲ್ಲವೇ’ ಎಂದರು.

Ad Widget

Ad Widget

‘ದೇಶದ ಗೃಹ, ವಿದೇಶಾಂಗ ಮತ್ತು ರಕ್ಷಣಾ ಸಚಿವರಿಗೆ ನೀಡಬಹುದಾದಂತಹ ಭಾರಿ ಭದ್ರತೆಯನ್ನು ಮೋಹನ್ ಭಾಗವತ್ ಅವರಿಗೆ ನೀಡಲಾಗುತ್ತಿದೆ. ಅಂತಹ ಭದ್ರತೆ ನೀಡಲು ಆ ವ್ಯಕ್ತಿ ಯಾರು? ಏತಕ್ಕಾಗಿ ಅವರಿಗೆ ಅಂತಹ ಭದ್ರತೆ ನೀಡಬೇಕು? ಜನರ ತೆರಿಗೆ ಹಣದಿಂದ ಅಂತಹ ಭದ್ರತೆ ಒದಗಿಸಲಾಗುತ್ತಿದೆ ಎಂದ ಮೇಲೆ ಆ ಸಂಘಟನೆಯ ನೋಂದಣಿ, ಆದಾಯದ ಮೂಲ, ಆಸ್ತಿ ವಿವರ ಮತ್ತು ಆದಾಯ ತೆರಿಗೆ ವಿವರಗಳನ್ನು ಜನರು ಕೇಳಬಾರದೇ’ ಎಂದು ಪ್ರಶ್ನಿಸಿದರು.

‘ಹಿಂದೂ ಧರ್ಮವನ್ನು ನೋಂದಣಿ ಮಾಡಿಸಿ ಎಂದು ನಾನು ಕೇಳಿದ್ದೇನಾ? ಆ ಬಗ್ಗೆ ಪತ್ರದಲ್ಲಿ ಉಲ್ಲೇಖವಿದ್ದರೆ ತೋರಿಸಿ. ಆರ್‌ಎಸ್‌ಎಸ್ ಹಿಂದೂ ಧರ್ಮವಲ್ಲ, ಅದೊಂದು ಸಂಘಟನೆ. ಶಾಖೆ, ಪಥಸಂಚಲನ, ಕಾರ್ಯಕ್ರಮ ಎಲ್ಲ ನಡೆಸಲು ಅವರಿಗೆ ಹಕ್ಕು ಇದೆ. ಆದರೆ, ದೇಶದ ಕಾನೂನಿನ ಅನ್ವಯ ನೋಂದಣಿ ಮಾಡಿಕೊಂಡು ಅವನ್ನೆಲ್ಲಾ ನಡೆಸಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭಾಗವತ್ ಪ್ರತಿಕ್ರಿಯೆಯ ಫ್ಯಾಕ್ಟ್‌ಚೆಕ್: ‘ಆರ್‌ಎಸ್‌ಎಸ್‌ನ ನೋಂದಣಿ ವಿವರಗಳನ್ನು ನೀಡಿ ಎಂದು ನಾನು ಬರೆದ ಪತ್ರವನ್ನು ಬಹಿರಂಗಪಡಿಸಿದ್ದೇ ಜೂನ್ 15ರಂದು. ಆರ್‌ಎಸ್‌ಎಸ್‌ಗೆ ನೋಂದಣಿ ಅಗತ್ಯವಿಲ್ಲ ಎಂದು ಮೋಹನ್ ಭಾಗವತ್ ಅವರು ಹೇಳಿರುವುದು ಜೂನ್ 13ರಂದು, ತ್ರಿಶೂರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ. ನನ್ನ ಪತ್ರಕ್ಕೆ ಇನ್ನೂ ಅವರು ಪ್ರತಿಕ್ರಿಯೆ ನೀಡಿಲ್ಲ’ ಎಂದು ಪ್ರಿಯಾಂಕ್ ಖರ್ಗೆ ಅವರು ‘ಎಕ್ಸ್’ ಪೋಸ್ಟ್‌ನಲ್ಲಿ ಪ್ರಕಟಿಸಿದ್ದಾರೆ.

ಆರ್‌ಎಸ್‌ಎಸ್‌ ಕಚೇರಿಗೆ ಬರಲು ಸಿದ್ಧ, ಆದರೆ ನನ್ನ 7 ಪ್ರಶ್ನೆಗಳಿಗೆ ಉತ್ತರಿಸಿ
“ನಾನು ಆರ್‌ಎಸ್‌ಎಸ್‌ ಕಚೇರಿಗಳಾದ ಕೇಶವಕೃಪ ಅಥವಾ ಜಗನ್ನಾಥ ಭವನಕ್ಕೆ ಎಲ್ಲಿಗೆ ಬೇಕಾದರೂ ಬರಲು ಸಿದ್ಧ. ಆದರೆ, ಅದಕ್ಕೂ ಮೊದಲು ನಾನು ಕೇಳಿರುವ ಏಳು ಪ್ರಶ್ನೆಗಳಿಗೆ ಸಂಘಟನೆ ಉತ್ತರಿಸಲಿ” ಎಂದು ಅವರು ಸವಾಲು ಹಾಕಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಆರೆಸ್ಸೆಸ್‌ ಮುಖ್ಯಸ್ಥರಿಗೆ ಕೇಳಿರುವ ಏಳು ಪ್ರಶ್ನೆಗಳಲ್ಲಿ ಯಾವುದಾದರೂ ಕಾನೂನು ಬಾಹಿರ, ಸಂವಿಧಾನ ಬಾಹಿರವಿದೆಯೆ? ಎಂದು ಪ್ರಶ್ನಿಸಿದರು.

ಅವರು ನನ್ನ ಕಚೇರಿಗೆ ಆದರೂ ಬರಲಿ, ಇಲ್ಲ ನನ್ನನ್ನೆ ಅವರ ಕಚೇರಿಗೆ ಕರೆಸಿಕೊಳ್ಳಲಿ. ಇಲ್ಲವೆ, ಸಂಬಂಧಪಟ್ಟ ವಕೀಲರನ್ನಾದರೂ ಕಳುಹಿಸಲಿ, ನಾವು ನಮ್ಮ ವಕೀಲರನ್ನು ಕಳುಹಿಸುತ್ತೇವೆ. ಈ ವಿಚಾರದ ಕುರಿತು ಚರ್ಚೆ ಮಾಡೋಣ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಆರೆಸ್ಸೆಸ್‌ಗೆ ಬರುತ್ತಿರುವ ದೇಣಿಗೆಯನ್ನು ಗುರು ದಕ್ಷಿಣೆ ಎನ್ನುತ್ತಾರೆ. ಹಾಗಾದರೆ, ಆರೆಸ್ಸೆಸ್‌ಗೆ ಗುರು ಯಾರು? ಅದರ ಧ್ವಜ ತಾನೆ?. ಆ ಧ್ವಜ ಹೆಸರಿನಲ್ಲಿ ಇವರು ದಕ್ಷಿಣೆ ತೆಗೆದುಕೊಳ್ಳುತ್ತಿದ್ದಾರೆ. ನಾಳೆ ನಾನು ನೀಲಿ ಧ್ವಜ ಹಾಕಿ, ಅದರಲ್ಲಿ ಧಮ್ಮ ಚಕ್ರ ಅಳವಡಿಸಿ ದೇಣಿಗೆ ಸಂಗ್ರಹಿಸಲು ಮುಂದಾದರೆ ನೀವು ದೇಣಿಗೆ ನೀಡುತ್ತೀರಾ?, ಅದನ್ನು ಒಪ್ಪುತ್ತೀರಾ? ಎಂದು ಅವರು ಪ್ರಶ್ನಿಸಿದರು.

ಸುಮಾರು 2500 ಅಂತರಾಷ್ಟ್ರೀಯ ಸಂಸ್ಥೆಗಳು ಆರೆಸ್ಸೆಸ್‌ನ ವಿಚಾರ ವಿಭಾಗಕ್ಕೆ ದೇಣಿಗೆ ನೀಡುತ್ತಿವೆ. ಇತ್ತೀಚೆಗೆ ಎಲ್ಲ ಚರ್ಚ್‌ಗಳು, ಮಿಷನರಿಗಳಿಗೆ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಪಾರದರ್ಶಕವಾಗಿರುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗಿತ್ತು. ಅದೇ ಆಧಾರದಲ್ಲಿ ಆರೆಸ್ಸೆಸ್‌ಗೂ ಉತ್ತರದಾಯಿತ್ವ ನಿಗದಿ ಮಾಡಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ರಾಮಮಂದಿರ ಹಗರಣದ ಉಲ್ಲೇಖ:
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ ದೇಣಿಗೆ ವಿಚಾರದಲ್ಲಿ ದೊಡ್ಡ ಹಗರಣ ನಡೆದು, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಮ್ಮ ದೇಶದಲ್ಲಿ ಶ್ರೀರಾಮನೆ ಲೆಕ್ಕ ಕೊಡಬೇಕು. ಇನ್ನು ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರು ಲೆಕ್ಕ ಕೊಡಬಾರದಾ? ರಾಮನ ಹೆಸರಿನಲ್ಲಿ ಪಥಸಂಚಲನ, ರಾಜಕೀಯ ಮಾಡುವವರು, ಸಂಘಟನೆ ಕಟ್ಟವವರಿಗೆ ಉತ್ತದಾಯಿತ್ವ ಇಲ್ಲವೆ? ಅವರು ಪ್ರಶ್ನಿಸಿದರು.

ನೋಂದಣಿ ಇಲ್ಲದ ಅಸ್ತಿತ್ವ:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ತನ್ನ ಅಸ್ತಿತ್ವದ ಶತಮಾನೋತ್ಸವದ (100 ವರ್ಷ) ಸಂದರ್ಭದಲ್ಲಾದರೂ ತನ್ನ ಕಾನೂನುಬದ್ಧ ಸ್ಥಾನಮಾನವನ್ನು ಸ್ಪಷ್ಟಪಡಿಸಬೇಕು ಹಾಗೂ ಆರ್ಥಿಕ ಪಾರದರ್ಶಕತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಬೃಹತ್ ಸಂಘಟನೆ ಮತ್ತು ಸಾರ್ವಜನಿಕ ಚಟುವಟಿಕೆ:
ದೇಶಾದ್ಯಂತ 60 ಸಾವಿರಕ್ಕೂ ಹೆಚ್ಚು ದೈನಂದಿನ ಶಾಖೆಗಳನ್ನು ಹಾಗೂ ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವ ಇಷ್ಟು ದೊಡ್ಡ ಸಂಘಟನೆ ಆರೆಸ್ಸೆಸ್ ಯಾವ ಕಾನೂನಿನ ಆಧಾರದ ಮೇಲೆ ಔಪಚಾರಿಕ ನೋಂದಣಿ ಇಲ್ಲದೆ, ಇಷ್ಟೊಂದು ವ್ಯಾಪಕವಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಅವರು ಪ್ರಶ್ನಿಸಿದರು.

ಸಂವಿಧಾನದ ಅಡಿಯಲ್ಲಿ ಪ್ರತಿಯೊಂದು ಸಂಸ್ಥೆಯೂ ಕಾನೂನಿನ ಚೌಕಟ್ಟಿಗೆ ಬದ್ಧವಾಗಿರಬೇಕು. ಸಾಮಾನ್ಯ ನಾಗರಿಕರು, ಕಾರ್ಮಿಕ ಸಂಘಟನೆಗಳು, ಸರಕಾರೇತರ ಸಂಸ್ಥೆಗಳು, ಟ್ರಸ್‌ಟ್‌ಗಳು ಮತ್ತು ಕಂಪನಿಗಳು ಸರಕಾರದ ನಿಯಮಾವಳಿಗಳ ಪ್ರಕಾರ ನೋಂದಣಿ ಮಾಡಿಕೊಂಡು, ತಮ್ಮ ಆದಾಯ-ವೆಚ್ಚಗಳ ವಿವರಗಳನ್ನು ನೀಡುತ್ತಿರುವಾಗ ಆರೆಸ್ಸೆಸ್‌ಗೆ ಮಾತ್ರ ಇದರಿಂದ ಏಕೆ ವಿನಾಯಿತಿ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಸಂಘಟನೆಯ ಒಟ್ಟು ಆಸ್ತಿ ಎಷ್ಟು, ದೇಣಿಗೆಯ ಮೂಲಗಳೇನು, ಆರ್ಥಿಕ ವೆಚ್ಚಗಳು ಹೇಗೆ ನಡೆಯುತ್ತವೆ ಮತ್ತು ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ ತೆರಿಗೆ ಪಾವತಿಸಲಾಗುತ್ತಿದೆಯೆ ಎಂಬ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಇಡಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.

ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವರದಿಯನ್ನು ಉಲ್ಲೇಖಿಸಿದ ಸಚಿವರು, ಕರ್ನಾಟಕವೊಂದರಲ್ಲೆ 4,127 ದೈನಂದಿನ ಶಾಖೆಗಳು, 1,389 ವಾರಾಂತರ ಸಭೆಗಳು, 60 ಮಾಸಿಕ ಮಂಡಳಿಗಳು ನಡೆಯುತ್ತಿವೆ. ಜೊತೆಗೆ 500ಕ್ಕೂ ಹೆಚ್ಚು ಪಥಸಂಚಲನಗಳು ಹಾಗೂ ಲಕ್ಷಾಂತರ ಜನರು ಭಾಗವಹಿಸುವ ಸಮಾಜೋತ್ಸವಗಳು ನಿರಂತರವಾಗಿ ಜರುಗುತ್ತಿವೆ ಎಂದು ಅವರು ಹೇಳಿದರು.

ಇಷ್ಟು ದೊಡ್ಡ ಮಟ್ಟದ ಸಾರ್ವಜನಿಕ ಸಜ್ಜುಗೊಳಿಸುವಿಕೆ ಹಾಗೂ ಗಣವೇಶಧಾರಿ ಪಥಸಂಚಲನಗಳನ್ನು ‘ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅನುಮತಿಗಳ ವಿವರಗಳನ್ನು ಒದಗಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಶತಮಾನೋತ್ಸವದ ಉಡುಗೊರೆ:
ಆರೆಸ್ಸೆಸ್ ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಭಾರತೀಯ ಸಂವಿಧಾನಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. 100ನೆ ವರ್ಷದಲ್ಲಿ ಸಂಘಟನೆಯು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು, ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುವುದೆ ದೇಶಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಕಾನೂನಿಗಿಂತ ಮಿಗಿಲಲ್ಲ. ಇಷ್ಟು ದೊಡ್ಡ ಸಂಘಟನೆಯ ಸಾರ್ವಜನಿಕ ಹೊಣೆಗಾರಿಕೆ, ಆರ್ಥಿಕ ಪಾರದರ್ಶಕತೆ ಮತ್ತು ದೇಶದ ಕಾನೂನುಗಳ ಪಾಲನೆಯ ಬಗ್ಗೆ ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ ಎಂದು ಅವರು ಪುನರುಚ್ಚರಿಸಿದರು.

Ad Widget
Click to comment

Leave a Reply

ಸ್ಥಳೀಯ

Mysuru-ಮೈಸೂರು ಕಂಬಳಕ್ಕೆ ಆಗಮಿಸಲಿರುವ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆ ವ್ಯವಸ್ಥೆ – ಶಾಸಕರಾದ ಅಶೋಕ್ ರೈ ಮಂಥರ್ ಗೌಡ ನೇತೃತ್ವದಲ್ಲಿ ಸಭೆ

Published

on



Ad Widget

Ad Widget

Ad Widget

Ad Widget

ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

Ad Widget

Ad Widget

Ad Widget

Ad Widget

ಕುಶಾಲನಗರ: ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯು ಮೈಸೂರು ಕಂಬಳದ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಡಿಕೇರಿ ಶಾಸಕ ಮಂಥರ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು.

Ad Widget

Ad Widget <> Ad Widget

ಕಂಬಳ ಕೋಣಗಳಿಗೆ ಪ್ರಯಾಣದ ಬಳಿಕ ವಿಶ್ರಾಂತಿ, ಆರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.



Ad Widget

ಸಭೆಯಲ್ಲಿ ರಾಜ್ಯ ಕಂಬಳ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಗೂ ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

Ad Widget

Ad Widget

ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಮೈಸೂರಿನಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ವಿವಿಧ ಭಾಗಗಳಿಂದ ಕಂಬಳ ಕೋಣಗಳು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

Ad Widget
Continue Reading

ರಾಜಕೀಯ

U.T. Khader-₹86ರ ಔಷಧಕ್ಕೆ ₹4,528; ಆಸ್ಪತ್ರೆಗಳಲ್ಲಿ ದುಬಾರಿ ದರಕ್ಕೆ ಔಷಧಗಳ ಮಾರಾಟ – ಆಸ್ಪತ್ರೆಗಳಲ್ಲಿ ಲ್ಯಾಂಡಿಂಗ್ ಮತ್ತು ಮಾರಾಟ ದರ ಪಟ್ಟಿ ಪ್ರಕಟಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು : ಯು.ಟಿ ಖಾದರ್

Published

on



Ad Widget

Ad Widget

Ad Widget

Ad Widget

ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್‌ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್‌ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಬರೊಬ್ಬರಿ ಶೇ.5000 ರಷ್ಟು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಕಿ-ಅಂಶಗಳನ್ನು ಆರೋಗ್ಯ ಸಚಿವ ಯು.ಟಿ. ಖಾದರ್‌ ಬಿಚ್ಚಿಟ್ಟಿದ್ದಾರೆ

Ad Widget

Ad Widget <> Ad Widget

ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಅಧಿಕಾರಿಗಳು ವಿವಿಧ ಆಸ್ಪತ್ರೆಗಳಲ್ಲಿ ನಡೆಸಿದ ಪರಿಶೀಲನೆ ವೇಳೆ ಔಷಧಗಳನ್ನು ಲ್ಯಾಂಡಿಂಗ್ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



Ad Widget

ಪ್ರತಿ ಆಸ್ಪತ್ರೆ, ಫಾರ್ಮಾಸಿಗಳು ಔಷಧಗಳ ಲ್ಯಾಂಡಿಂಗ್ ದರ ಹಾಗೂ ಮಾರಾಟ ದರವನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ಬಹಿರಂಗ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು. ದರ ನಿಯಂತ್ರಿಸಲು ರಾಜ್ಯಕ್ಕೆ ಅಧಿಕಾರ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

Ad Widget

Ad Widget

ಅಜಗಜಾಂತರ ವ್ಯತ್ಯಾಸ (ರೂಗಳಲ್ಲಿ)
ಔಷಧ- ಲ್ಯಾಂಡಿಂಗ್ ದರ – ಎಂಆರ್‌ಪಿ

ಗುಫೋಲ್-86- 4,528
ಗುಫಿಸೈಕ್ಲೈನ್-50 ಇಂಜೆಕ್ಷನ್ – 160-7,110
ಟೆರ್ಲಿಟಿಸ್-118-4,416
ಟ್ಯಾಕ್ಸೋಕೇರ್-120 ಎಂಜಿ-1,000-21,617
ಕ್ಯಾನ್‌ಮ್ಯಾಬ್ 440 ಎಂಜಿ-6,600-57,457
ಬೆವಾಟಸ್ 400 ಎಂಜಿ-5,850-62,690
ಸೈಟ್ಯಾಕ್ಸ್ 100 (ಕ್ಯಾನ್ಸರ್ ಔಷಧ)-342-3,836
ನೆಬ್ಯುಲೈಸರ್ ಮಾಸ್ಕ್-44.50-950
ಐವಿಸೆಟ್-14.75-295
ಪಾಲಿಸೇಫಿಟಿ ಪಿಆರ್‌ಒ ಕ್ಯಾನುಲಾ-33.21-548

Ad Widget
Continue Reading

ಅಂತರ ರಾಜ್ಯ

Shivraj Singh Chauhan-ಕರ್ನಾಟಕ ಸೇರಿ 5 ರಾಜ್ಯಗಳು ಬರಪೀಡಿತವೆಂದು ಘೋಷಣೆ : ಅ.3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ ಭೇಟಿ – ಶಿವರಾಜ್ ಸಿಂಗ್ ಚೌಹಾಣ್

Published

on



Ad Widget

Ad Widget

Ad Widget

Ad Widget

ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಹೊಸದಿಲ್ಲಿಯಲ್ಲಿ ನಡೆದ ‘ರಬಿ (ಹಿಂಗಾರು ಬೆಳೆ) 2026-27’ ರಾಷ್ಟ್ರೀಯ ಕೃಷಿ ಸಮ್ಮೇಳನದ ವೇಳೆ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕೆಲವು ಭಾಗಗಳು ಹಾಗೂ ರಾಜಸ್ಥಾನದ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದರು.

Ad Widget

Ad Widget <> Ad Widget

ಕರ್ನಾಟಕ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ತಂಡವು ಅಕ್ಟೋಬರ್ 3ರಂದು ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಚೌಹಾಣ್ ತಿಳಿಸಿದರು.



Ad Widget

ದೇಶದ ಇತರ ಭಾಗಗಳಲ್ಲಿನ ಬರ ಪರಿಸ್ಥಿತಿಯನ್ನೂ ಶೀಘ್ರದಲ್ಲೇ ಪರಿಶೀಲಿಸಲಾಗುವುದು. ಬರಪೀಡಿತ ಪ್ರದೇಶಗಳಿಗೆ ತಾವು ವೈಯಕ್ತಿಕವಾಗಿ ಭೇಟಿ ನೀಡುವುದರ ಜೊತೆಗೆ, ಆಯಾ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವರು ಹೇಳಿದರು.

Ad Widget

Ad Widget

ರೈತರಿಗೆ ನೆರವಿನ ಭರವಸೆ
ಬರ ಪರಿಸ್ಥಿತಿಯ ನಡುವೆಯೂ ಕೃಷಿ ಚಟುವಟಿಕೆ ಮುಂದುವರಿಸುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಚೌಹಾಣ್ ಭರವಸೆ ನೀಡಿದರು. ಕೃಷಿಭೂಮಿ ಪಾಳು ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ತಕ್ಷಣದ ಉದ್ದೇಶವಾಗಿದೆ ಎಂದರು.

ನೀರಿನ ಲಭ್ಯತೆ ಹಾಗೂ ಮಣ್ಣಿನ ತೇವಾಂಶಕ್ಕೆ ಅನುಗುಣವಾಗಿ ಬೆಳೆ ಆಯ್ಕೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದ್ದು, ಕಡಿಮೆ ನೀರು ಅಗತ್ಯವಿರುವ ಬೆಳೆಗಳು ಹಾಗೂ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ತಳಿಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ.

ಶೇ.12.3ರಷ್ಟು ಮಳೆ ಕೊರತೆ
ಎಲ್‌ನೀನೊ ಪರಿಣಾಮ ಸೇರಿದಂತೆ ಹವಾಮಾನ ವೈಪರೀತ್ಯಗಳಿಂದಾಗಿ ದೇಶದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಮುಂಗಾರು ಋತುವಿನ ಅಂತ್ಯದ ವೇಳೆಗೆ ದೇಶದಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇ.12.3ರಷ್ಟು ಮಳೆ ಕಡಿಮೆಯಾಗಿದೆ ಎಂದು ಸಚಿವರು ತಿಳಿಸಿದರು.

ಮಳೆ ಕೊರತೆಯ ಪರಿಣಾಮ 2026-27ರ ಖಾರಿಫ್‌ ಬೆಳೆಗಳ ಒಟ್ಟು ಬಿತ್ತನೆ ಪ್ರದೇಶದಲ್ಲಿ ಸುಮಾರು ಶೇ.1ರಷ್ಟು ಇಳಿಕೆ ಕಂಡುಬಂದಿದೆ. ಭತ್ತದ ಬಿತ್ತನೆ ಪ್ರದೇಶದಲ್ಲಿ 16.32 ಲಕ್ಷ ಹೆಕ್ಟೇರ್‌ಗಳಷ್ಟು ಇಳಿಕೆಯಾಗಿದ್ದು, ಜೋಳ, ಸೋಯಾಬೀನ್ ಮತ್ತು ಹತ್ತಿ ಬೆಳೆಗಳ ವಿಸ್ತೀರ್ಣದಲ್ಲೂ ಕುಸಿತವಾಗಿದೆ.

ಇದಕ್ಕೆ ವಿರುದ್ಧವಾಗಿ ಉದ್ದು, ಬಾಜ್ರಾ, ಜೋಳ, ಎಳ್ಳು, ಸೂರ್ಯಕಾಂತಿ, ಹೆಸರು ಮತ್ತು ತೊಗರಿ ಸೇರಿದಂತೆ ಕೆಲವು ದ್ವಿದಳ ಧಾನ್ಯಗಳು ಹಾಗೂ ಸಿರಿಧಾನ್ಯಗಳ ಬಿತ್ತನೆ ಪ್ರದೇಶದಲ್ಲಿ ಏರಿಕೆ ಕಂಡುಬಂದಿದೆ.

ಕೇಂದ್ರ ಸರ್ಕಾರವು ರಬಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬೀಜಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದು, ಬರಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಯೋಜನೆ ರೂಪಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading