Connect with us

ಸಿನೆಮಾ

J.P. Thuminad-ರಶ್ಮಿಕಾ ಜೊತೆ ಹಸೆಮಣೆ ಏರಿದ ‘ಸು ಫ್ರಮ್ ಸೋ’ ಖ್ಯಾತಿಯ ಜೆ.ಪಿ. ತುಮಿನಾಡ್..!

Published

on



Ad Widget

Ad Widget

Ad Widget

Ad Widget

ಸ್ಯಾಂಡಲ್‌ವುಡ್‌ನ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಸು ಪ್ರಮ್ ಸೋ’ ಮೂಲಕ ಸಂಚಲನ ಮೂಡಿಸಿದ್ದ ನಟ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ ಅವರು ಬುಧವಾರ (ಮೇ 6) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನ ಪಿಲಿಕುಳದಲ್ಲಿರುವ ಸ್ಕೌಟ್ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರು ‘ರಶ್ಮಿಕಾ’ ಅವರೊಂದಿಗೆ ಹೊಸ ಬಾಳಿನ ಪಯಣ ಆರಂಭಿಸಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ಸ್ಯಾಂಡಲ್‌ವುಡ್‌ನ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಸು ಪ್ರಮ್ ಸೋ’ ಮೂಲಕ ಸಂಚಲನ ಮೂಡಿಸಿದ್ದ ನಟ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ ಅವರು ಬುಧವಾರ (ಮೇ 6) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನ ಪಿಲಿಕುಳದಲ್ಲಿರುವ ಸ್ಕೌಟ್ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರು ‘ರಶ್ಮಿಕಾ’ ಅವರೊಂದಿಗೆ ಹೊಸ ಬಾಳಿನ ಪಯಣ ಆರಂಭಿಸಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ತಾರೆಯರ ಶುಭಾಶಯ:
ಈ ವಿವಾಹ ಮಹೋತ್ಸವದಲ್ಲಿ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ, ನಟಿ ಸಂಧ್ಯಾ ಅರಕೆರೆ, ನಿರ್ದೇಶಕ ಶ್ರೀನಿಧಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಮತ್ತು ತಂತ್ರಜ್ಞರು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

Ad Widget

Ad Widget <> Ad Widget

ದಾಖಲೆ ಬರೆದಿದ್ದ ‘ಸು ಪ್ರಮ್ ಸೋ’:
ರಂಗಭೂಮಿ ಹಿನ್ನೆಲೆಯಿಂದ ಬಂದ ಜೆ.ಪಿ. ತುಮಿನಾಡ್ ಅವರು ಕಥೆ ಬರೆದು ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸಿದ್ದ ‘ಸು ಪ್ರಮ್ ಸೋ’ ಚಿತ್ರವು 2025ರ ಸಾಲಿನ ಅತಿದೊಡ್ಡ ಯಶಸ್ವಿ ಚಿತ್ರಗಳಲ್ಲಿ ಒಂದಾಗಿತ್ತು. ಜುಲೈ 25, 2025 ರಂದು ಬಿಡುಗಡೆಯಾಗಿದ್ದ ಈ ಹಾಸ್ಯ ಪ್ರಧಾನ ಸಿನಿಮಾ, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಭೂತಪೂರ್ವ ಮೆಚ್ಚುಗೆ ಗಳಿಸಿತ್ತು.



Ad Widget

ಬಾಕ್ಸ್ ಆಫೀಸ್ ಧೂಳಿಪಟ:
ದೊಡ್ಡ ತಾರಾಗಣವಿಲ್ಲದಿದ್ದರೂ ಕೇವಲ ಕಥೆಯ ಬಲದಿಂದ ಈ ಚಿತ್ರವು 125 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು.

Ad Widget

Ad Widget

ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರಗಳ ಪಟ್ಟಿಯಲ್ಲಿ 7ನೇ ಸ್ಥಾನ ಹಾಗೂ 2025ರ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಪರಭಾಷೆಗಳಿಗೂ ಡಬ್ ಆಗಿ ಸೈ ಎನಿಸಿಕೊಂಡಿದ್ದ ಈ ಚಿತ್ರದ ಮೂಲಕ ಜೆ.ಪಿ. ತುಮಿನಾಡ್ ಅವರು ರಾಷ್ಟ್ರಮಟ್ಟದ ಗಮನ ಸೆಳೆದಿದ್ದರು.

ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡ ಬೆನ್ನಲ್ಲೇ ಈಗ ಜೆ.ಪಿ. ತುಮಿನಾಡ್ ಅವರು ವೈಯಕ್ತಿಕ ಜೀವನದ ಹೊಸ ಹಂತಕ್ಕೆ ಕಾಲಿಟ್ಟಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

Ad Widget

ಸಿನೆಮಾ

Rajinikanth-ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ತಲೈವಾ: ರಜಿನಿಕಾಂತ್ ನೋಡಲು ಮುಗಿಬಿದ್ದ ಅಭಿಮಾನಿಗಳು

Published

on



Ad Widget

Ad Widget

Ad Widget

Ad Widget

‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.

Ad Widget

Ad Widget

Ad Widget

Ad Widget

ಮೈಸೂರು: ‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮೈಸೂರಿನ ಸುತ್ತಮುತ್ತ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ರಜಿನಿಕಾಂತ್ ಅವರು ನಗರದಲ್ಲಿರುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ʻತಲೈವಾʼನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಶೂಟಿಂಗ್ ಸ್ಥಳಗಳು ಹಾಗೂ ಅವರು ಭೇಟಿ ನೀಡುವ ಪ್ರದೇಶಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.

Ad Widget

Ad Widget <> Ad Widget

ಚಾಮುಂಡೇಶ್ವರಿ ದೇವಾಲಯಕ್ಕೆ ರಜಿನಿಕಾಂತ್ ಭೇಟಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಅವರನ್ನು ನೋಡಲು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳನ್ನು ಕಂಡ ರಜಿನಿಕಾಂತ್ ಅವರು ಪ್ರೀತಿಯಿಂದ ಕೈಬೀಸಿ ಅಭಿಮಾನಿಗಳ ಖುಷಿಗೆ ಕಾರಣರಾದರು.



Ad Widget

ಇದಕ್ಕೂ ಮುನ್ನ ಮಂಗಳವಾರ (ಸೆ.29) ಸೋಮನಾಥಪುರದಲ್ಲಿ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಟ ವಿಷ್ಣುವರ್ಧನ್ ಅವರ ಕುಟುಂಬದ ಸದಸ್ಯರು ರಜಿನಿಕಾಂತ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ್ದು, ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

Ad Widget

Ad Widget

ಕರ್ನಾಟಕದಲ್ಲಿ ರಜಿನಿಕಾಂತ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರು ರಾಜ್ಯಕ್ಕೆ ಆಗಮಿಸಿದಾಗಲೆಲ್ಲ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯುತ್ತದೆ. ಇದೀಗ ಮೈಸೂರಿನಲ್ಲಿ ನಡೆಯುತ್ತಿರುವ ‘ಧರ್ಮನ್’ ಚಿತ್ರದ ಚಿತ್ರೀಕರಣದ ಹಿನ್ನೆಲೆಯಲ್ಲಿ ತಲೈವಾ ನಗರದಲ್ಲಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.

ರಜಿನಿಕಾಂತ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ಜೈಲರ್-2’ ಕೂಡ ಸದ್ಯ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಕನ್ನಡದ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ‘ಜೈಲರ್-2’ ಅಕ್ಟೋಬರ್ 15ರಂದು ತೆರೆಗೆ ಬರಲಿದೆ.

Ad Widget
Continue Reading

ಸಿನೆಮಾ

Bethlehem Family Unit-ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ಬರೆದ ‘ಬೆತ್ಲೆಹೆಮ್ ಕುಟುಂಬ ಯೂನಿಟ್’: ಅ.2ಕ್ಕೆ ಒಟಿಟಿ ಎಂಟ್ರಿ

Published

on



Ad Widget

Ad Widget

Ad Widget

Ad Widget

ಮಲಯಾಳಂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ (Bethlehem Kudumba Unit) ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಅ.2ರಿಂದ ಜಿಯೋಹಾಟ್‌ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

Ad Widget

Ad Widget

Ad Widget

Ad Widget

ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ (Bethlehem Kudumba Unit) ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಅ.2ರಿಂದ ಜಿಯೋಹಾಟ್‌ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಗಿರೀಶ್ ಎ.ಡಿ. ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 326 ಕೋಟಿ ರೂ. ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ನಿರ್ಮಿಸಿದೆ ಎಂದು ವರದಿಯಾಗಿದೆ.

Ad Widget

Ad Widget <> Ad Widget

ಇದಕ್ಕೂ ಮುನ್ನ ‘ಲೋಕಾ ಚಾಪ್ಟರ್ 1: ಚಂದ್ರ’ ಚಿತ್ರ 304 ಕೋಟಿ ರೂ. ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿತ್ತು. ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಈ ದಾಖಲೆಯನ್ನು ಹಿಂದಿಕ್ಕಿದೆ.



Ad Widget

ಚಿತ್ರವು ಕೇರಳದಲ್ಲಿ ಮೊದಲ ಬಾರಿಗೆ 150 ಕೋಟಿ ರೂ. ಗಳಿಕೆ ದಾಖಲಿಸಿದ ಮಲಯಾಳಂ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅತಿ ವೇಗವಾಗಿ 300 ಕೋಟಿ ರೂ. ಕ್ಲಬ್ ಸೇರಿದ ಚಿತ್ರ ಎಂಬ ದಾಖಲೆಗೂ ಪಾತ್ರವಾಗಿದೆ.

Ad Widget

Ad Widget

ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಬಂದ ಸಕಾರಾತ್ಮಕ ಪ್ರತಿಕ್ರಿಯೆ ಹಾಗೂ ಬಾಯಿ ಮಾತಿನ ಪ್ರಚಾರದಿಂದಾಗಿ ದಿನದಿಂದ ದಿನಕ್ಕೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಉತ್ತಮಗೊಂಡಿತ್ತು. ಇದೀಗ ಯಶಸ್ವಿ ಥಿಯೇಟರ್ ಪ್ರದರ್ಶನದ ಬಳಿಕ ಒಟಿಟಿಗೆ ಕಾಲಿಡುತ್ತಿದೆ.

ಅ. 2ರಿಂದ ಜಿಯೋಹಾಟ್‌ಸ್ಟಾರ್‌ನಲ್ಲಿ ಮಲಯಾಳಂ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ.

Ad Widget
Continue Reading

ಸಿನೆಮಾ

Hanuman Ansh-₹2 ಕೋಟಿ ಬಜೆಟ್ ಸಿನಿಮಾ ₹347 ಕೋಟಿ ಗಳಿಕೆ; ‘ಪೆದ್ದಿ’, ‘ಟಾಕ್ಸಿಕ್’ ದಾಖಲೆ ಹಿಂದಿಕ್ಕಿದ ‘ಹನುಮಾನ್ ಅಂಶ್ʼ

Published

on



Ad Widget

Ad Widget

Ad Widget

Ad Widget

ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ (Hanuman Ansh) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ. ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ ₹300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇದೀಗ ₹347 ಕೋಟಿಯ ಗಡಿ ದಾಟಿದೆ ಎಂದು ವರದಿಯಾಗಿದೆ.

Ad Widget

Ad Widget

Ad Widget

Ad Widget

ಮುಂಬಯಿ: ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ (Hanuman Ansh) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ.

Ad Widget

Ad Widget

Ad Widget alt="Ad Widget"/>

Ad Widget

ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ ₹300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇದೀಗ ₹347 ಕೋಟಿಯ ಗಡಿ ದಾಟಿದೆ ಎಂದು ವರದಿಯಾಗಿದೆ. ಸಿನಿಮಾ ಬಿಡುಗಡೆಯಾಗಿ 45 ದಿನಗಳು ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮುಂದುವರಿದಿರುವುದು ವಿಶೇಷವಾಗಿದೆ.

Ad Widget

Ad Widget <> Ad Widget

‘ಪೆದ್ದಿ’, ‘ಟಾಕ್ಸಿಕ್’ ದಾಖಲೆ ಹಿಂದಿಕ್ಕಿದ ಸಿನಿಮಾ
ಭಾನುವಾರ (ಸೆ.20) ‘ಹನುಮಾನ್ ಅಂಶ್’ ಭಾರತದಲ್ಲಿ ₹13.75 ಕೋಟಿ ಹಾಗೂ ವಿದೇಶದಲ್ಲಿ ₹1.50 ಕೋಟಿ ಗಳಿಕೆ ಮಾಡಿದೆ. ಇದರೊಂದಿಗೆ ಚಿತ್ರದ ಒಟ್ಟು ಜಾಗತಿಕ ಗಳಿಕೆ ₹347.05 ಕೋಟಿಗೆ ತಲುಪಿದೆ ಎಂದು ಸ್ಯಾಕ್‌ನಿಲ್ಕ್ ವರದಿ ಮಾಡಿದೆ.



Ad Widget

ಈ ಮೂಲಕ ರಾಮ್ ಚರಣ್ ಅಭಿನಯದ ‘ಪೆದ್ದಿ’ ಹಾಗೂ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಳ ವಿಶ್ವದಾದ್ಯಂತದ ಗಳಿಕೆಯನ್ನು ‘ಹನುಮಾನ್ ಅಂಶ್’ ಹಿಂದಿಕ್ಕಿದೆ.

Ad Widget

Ad Widget

‘ಪೆದ್ದಿ’ ₹341.90 ಕೋಟಿ ಹಾಗೂ ‘ಟಾಕ್ಸಿಕ್’ ₹341.99 ಕೋಟಿ ಗಳಿಕೆ ಮಾಡಿದ್ದರೆ, ‘ಹನುಮಾನ್ ಅಂಶ್’ ₹347.05 ಕೋಟಿ ಗಳಿಕೆಯೊಂದಿಗೆ ಈ ಎರಡೂ ಸಿನಿಮಾಗಳನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಂಗ್ಲಾ’ ಸಿನಿಮಾದ ಗಳಿಕೆಯನ್ನೂ ಹಿಂದಿಕ್ಕಿರುವ ‘ಹನುಮಾನ್ ಅಂಶ್’, ಈ ವರ್ಷದ ಹಿಂದಿ ಸಿನಿಮಾಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡ ಮೂರನೇ ಚಿತ್ರವಾಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.

ಇತರ ಭಾಷೆಯ ಸಿನಿಮಾಗಳನ್ನೂ ಹಿಂದಿಕ್ಕಿದ ‘ಹನುಮಾನ್ ಅಂಶ್’
ಕಳೆದ ವಾರದಲ್ಲಿಯೂ ಸಿನಿಮಾ ತನ್ನ ಗಳಿಕೆಯ ಓಟ ಮುಂದುವರಿಸಿದ್ದು, ‘ಜನಾ ನಾಯಕನ್’, ‘ಬೆತ್ತೆಹೇಮ್ ಕುಟುಂಬ ಯೂನಿಟ್’, ‘ಮಾನ ಶಂಕರ ವರಪ್ರಸಾದ್ ಗಾರು’ ಹಾಗೂ ‘ಕರುಪ್ಪು’ ಸೇರಿದಂತೆ ವಿವಿಧ ಚಿತ್ರರಂಗಗಳ ಪ್ರಮುಖ ಸಿನಿಮಾಗಳ ಜಾಗತಿಕ ಗಳಿಕೆಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.

ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಚಿತ್ರವು ‘ಮಹಾರಾಜ್ ಜಿ’ ಎಂದೇ ಜನಪ್ರಿಯರಾಗಿದ್ದ ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದೆ.

ಸ್ವಯಂಭೂ ಮೀಡಿಯಾ ನೆಟ್‌ವರ್ಕ್, ರಾಗಿಣಿ ಎಸ್., ನಮ್ರತಾ ಜಿ.ಎಸ್. ಹಾಗೂ ಅನುಪ್ರಿಯಾ ಎ. ನಗರ್ ನಿರ್ಮಿಸಿರುವ ಚಿತ್ರದಲ್ಲಿ ಚಂದನ್ ಕೆ. ಆನಂದ್ ಮತ್ತು ಶೋಭಿನವ್ ಸತ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಖಿಲ್ ದುಬೆ, ಉದಯಸಿಂಹ ರಜಪೂತ್, ಪೂರ್ಣಿಮಾ ತಿವಾರಿ ಹಾಗೂ ಮನೀಶ್ ಚೌಧರಿ ಸೇರಿದಂತೆ ಹಲವು ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading